Tag: water problem

  • ಗದಗ | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

    ಗದಗ | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಗರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

    – ಖಾಲಿ ಕೊಡಗಳನ್ನು ಹಿಡಿದು ನಗರಸಭೆ ಎದುರು ಪ್ರತಿಭಟನೆ

    ಗದಗ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗನಲ್ಲಿ (Gadag) ನಡೆದಿದೆ.

    ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ನಗರಸಭೆ ಕಚೇರಿವರೆಗೆ ಖಾಲಿ ಕೊಡ ಹಿಡಿದು ಪ್ರತಿಭಟನಾ ರ‍್ಯಾಲಿ ನಡೆಯಿತು. ಬಳಿಕ ಪ್ರತಿಭಟನಾಕಾರರು ನಗರಸಭೆ ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಇದನ್ನೂ ಓದಿ: ಇ-ಖಾತೆದಾರರಿಗೆ ಬಿಗ್ ಶಾಕ್ – ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಗೇಟ್‌ಗೆ ಬೀಗ ಹಾಕಿ, ಮುಂದೆ ಬ್ಯಾರಿಕೇಡ್ ಇಟ್ಟು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಸ್ಥಳದಲ್ಲಿ 3 ಜನ ಡಿವೈಎಸ್ಪಿ, 4 ಜನ ಸಿಪಿಐ, 10 ಜನ ಪಿಎಸ್‌ಐ, 15 ಎಎಸ್‌ಐ ಸೇರಿದಂತೆ ನೂರಾರು ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿಭಟನಾಕಾರರು ಒಳಹೋಗದಂತೆ ಪೊಲೀಸರು ತಡೆದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

    ನಂತರ ನಗರಸಭೆ ಕಚೇರಿ ಗೇಟ್ ಮುಂದೆ ಖಾಲಿ ಕೊಡಗಳೊಂದಿಗೆ ಕುಳಿತು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಹಾಗೂ ಸಂಬಂಧಿಸಿ ಅಧಿಕಾರಿಗಳು ಆಗಮಿಸಿ ಪರಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಇದನ್ನೂ ಓದಿ: ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ

    ಕಳೆದ 50 ವರ್ಷಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಮುಂದುವರಿದಿದ್ದು, ನಗರಸಭೆ ಸದಸ್ಯರು ವಾರ್ಡಿನ ಸಾರ್ವಜನಿಕರಿಂದ ನಿತ್ಯ ಪೇಚಾಟ ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಿ ಚರ್ಚಿಸೋಣ. 5 ಜನ ಮುಖಂಡರು ಸಭೆಗೆ ಬನ್ನಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು. ಇದಕ್ಕೆ ಪ್ರತಿಭಟನಾಕಾರರು 5 ಜನ ಆಗುವುದಿಲ್ಲ, ಎಲ್ಲ ಸದಸ್ಯರನ್ನು ಸಭೆ ಕರೆಯಿರಿ ಎಂದು ಪಟ್ಟುಹಿಡಿದರು.

    ಕಳೆದ 50 ವರ್ಷದಿಂದ ಅವಳಿ ನಗರಕ್ಕೆ ನೀರು ಪೂರೈಕೆ ಆಗುತ್ತಿಲ್ಲ. ಮಳೆಗಾಲದಲ್ಲೂ ನೀರು ಪೂರೈಕೆ ಮಾಡದ ಶಾಸಕರು, ಸಚಿವರು ನಮಗೆ ಬೇಡ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್, ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

  • ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ: ಶರಣಪ್ರಕಾಶ್ ಪಾಟೀಲ್

    ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ: ಶರಣಪ್ರಕಾಶ್ ಪಾಟೀಲ್

    ಕಲಬುರಗಿ: ಬೇಸಿಗೆ ಆರಂಭವಾದ್ದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanaparakash Patil) ತಾಲೂಕಿನ ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಸೇಡಂ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ `ಟಾಸ್ಕ್ ಪೋರ್ಸ್’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್ ಮಟ್ಟದಲ್ಲಿ ಪಿಡಿಓಗಳು ಬೋರ್‌ವೆಲ್‌ಗಳು ಹಾಗೂ ಜಲ ಮೂಲಗಳನ್ನು ಪರೀಕ್ಷಿಸಿ ಕ್ರಮಕೈಗೊಂಡು ವರದಿ ಸಲ್ಲಿಸಬೇಕು. ಹೆಚ್ಚು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಶಾಶ್ವತ ಬೋರ್‌ವೆಲ್ ಕೊರೆಸಿ, ಇತರೆ ಬೋರ್‌ವೆಲ್‌ಗಳನ್ನು ಫ್ಲಶಿಂಗ್ ಮಾಡಿಸಿ ಜನರ ಅನುಕೂಲಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ಯು ಡಿಜಿಟಲ್ ಐದನೇ ವರ್ಷದ ವಾರ್ಷಿಕೋತ್ಸವ

    ಸೇಡಂ ತಾಲೂಕಿನಲ್ಲಿ ನೀರಿನ ಪೂರೈಕೆಯಲ್ಲಿ ಎಲ್ಲಿಯೂ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿ, ಅನುದಾನದ ಬಳಕೆಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡಿ ಎಂದರು. ಇದನ್ನೂ ಓದಿ: ನಮ್ಮ ಪಕ್ಷದ ಗಾಡಿ ಫುಲ್ ಇದೆ: ಸತೀಶ್‌ ಜಾರಕಿಹೊಳಿ

    ಪಿಡಿಓಗಳು ಗ್ರಾಮಗಳಿಗೆ ಭೇಟಿ ನೀಡಿ ಒಂದು ವಾರದಲ್ಲಿ ನನಗೆ ವರದಿ ಸಲ್ಲಿಸಬೇಕು. ಹೆಚ್ಚು ಬಿಸಿಲಿದೆ ಎಂದು ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿ ವರದಿ ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ನಿಷೇಧ – ಸಿಸಿಪಿಎ ಮಾರ್ಗಸೂಚಿ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

    ಸಭೆಯಲ್ಲಿ ತಹಶೀಲ್ದಾರ್ ಶ್ರೇಯಾಂಕ್ ಪಾಟೀಲ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಓಗಳು ಉಪಸ್ಥಿತರಿದ್ದರು.

  • ಮಂಗಳೂರಿನಲ್ಲಿ ಜಲಸಿರಿ ಕಾಮಗಾರಿ ಕಿರಿಕಿರಿ – ನಗರದಲ್ಲಿ ಕೊಳವೆ ಅಳವಡಿಸಲು ಅಲ್ಲಲ್ಲಿ ರಸ್ತೆ ಅಗೆತ

    ಮಂಗಳೂರಿನಲ್ಲಿ ಜಲಸಿರಿ ಕಾಮಗಾರಿ ಕಿರಿಕಿರಿ – ನಗರದಲ್ಲಿ ಕೊಳವೆ ಅಳವಡಿಸಲು ಅಲ್ಲಲ್ಲಿ ರಸ್ತೆ ಅಗೆತ

    ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ (Mangaluru) ದಿನದ 24 ಗಂಟೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಸಿರಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಯೋಜನೆಯ ಅವ್ಯವಸ್ಥೆಯಿಂದಾಗಿ ಮಂಗಳೂರು ನಗರಕ್ಕೆ ಜಲಸಿರಿ ಶಾಪವಾಗಿ ಪರಿಣಮಿಸಿದೆ. ಕಾಮಗಾರಿ ಆರಂಭವಾಗಿ ಐದು ವರ್ಷವಾದರೂ ಒಂದೇ ಒಂದು ವಾರ್ಡ್ಗೂ ನೀರು ಪೂರೈಕೆ ಮಾಡದ ಗುತ್ತಿಗೆದಾರ ಸಂಸ್ಥೆ ರಸ್ತೆ ಅಗೆಯುವುದರಲ್ಲೇ ಬ್ಯುಸಿಯಾಗಿದ್ದು, ಆಡಳಿತ ವ್ಯವಸ್ಥೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

    ದಿನದ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶಕ್ಕೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯನ್ನು ಕೇಂದ್ರ, ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ 2019ರಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಯೋಜನೆ ಜಾರಿಯಾಗಿ ಐದು ವರ್ಷವಾದರೂ ಇನ್ನು ಸಹ ಕಾಮಗಾರಿ ಪೂರ್ತಿಯಾಗಿಲ್ಲ. ಇದರ ಜೊತೆ ನಗರದ ಅಲ್ಲಲ್ಲಿ ರಸ್ತೆ ಅಗೆದು, ಸರಿಯಾಗಿ ಮುಚ್ಚದೇ ಅರ್ಧಕ್ಕೆ ಹೋಗುತ್ತಿರುವುದರಿಂದ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ಇದನ್ನೂ ಓದಿ: ಪಾರ್ಕ್‌ನಲ್ಲಿ ದುಪಟ್ಟಾದಿಂದ ನೇಣು ಬಿಗಿದು ಎಂಜಿನಿಯರ್‌ ಆತ್ಮಹತ್ಯೆ

    ಮಂಗಳೂರಿನಲ್ಲಿ ಹೊಸದಾದ ಕಾಂಕ್ರಿಟ್ ರಸ್ತೆಯನ್ನು ಮರುದಿನ ಅಗೆದರೂ ಸಹ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ ಎಂಬಂತಾಗಿದೆ. ಎರಡೆರಡು ಸಾರಿ ಕಾಮಗಾರಿಯ ಗಡುವನ್ನು ವಿಸ್ತರಣೆ ಮಾಡಿದರೂ ಸಹ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈವರೆಗೂ ಒಂದೇ ಒಂದು ವಾರ್ಡ್ಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡೋದಕ್ಕೆ ಗುತ್ತಿಗೆದಾರ ಸಂಸ್ಥೆಗೆ ಸಾಧ್ಯವಾಗಿಲ್ಲ. ಹೀಗಾಗಿ ಜನ ಆಡಳಿತ ವ್ಯವಸ್ಥೆಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 792.4 ಕೋಟಿ ವೆಚ್ಚದಲ್ಲಿ ಈ ಯೋಜನೆ ನಡೆಯುತ್ತಿದೆ. ಕಾಮಗಾರಿಯ ಗುತ್ತಿಗೆಯನ್ನು ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಹಿಸಿಕೊಂಡಿದ್ದು, ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ವಹಿಸಿದೆ. ಆದರೆ, ಇಲ್ಲಿ ಕಾಮಗಾರಿ ವಹಿಸಿಕೊಂಡಿರುವ ಸಂಸ್ಥೆಯೇ ಬ್ಲ್ಯಾಕ್ ಲಿಸ್ಟ್ನಲ್ಲಿದೆ. ಇನ್ನು ಯೋಜನೆ ಹಳ್ಳ ಹಿಡಿದಿರುವುದಕ್ಕೆ ನಗರದ ಮೇರಿಹಿಲ್‌ನಲ್ಲಿ ರಸ್ತೆ ಬದಿ ಇಟ್ಟಿರುವ ಬೃಹತ್ತಾದ ಕೊಳವೆಗಳೆ ಸಾಕ್ಷಿಯಂತಿದೆ. ಪೈಪ್‌ಗಳ ಡಂಪ್ ಮಾಡಿರುವ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದೆ. ಇದನ್ನೂ ಓದಿ: Tumkur | `ಬೆಳಕು’ ಪ್ರಸಾರವಾದ 26 ದಿನದಲ್ಲೇ ಇಂಪ್ಯಾಕ್ಟ್ – ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ!

    ಮುಖ್ಯ ಕೊಳವೆ ಅಳವಡಿಕೆ 54.16 ಕಿಲೋಮೀಟರ್‌ನಲ್ಲಿ ಆಗಬೇಕಾಗಿದ್ದು, ಇಲ್ಲಿ 12.26 ಕಿ.ಮೀ ಮಾತ್ರ ಪೂರ್ಣಗೊಳಿಸಲಾಗಿದೆ. ಇದರ ಜೊತೆ ಮನೆ ಮನೆಗೆ ನೀರು ವಿತರಣಾ ಜಾಲದ ಕೊಳವೆ ಅಳವಡಿಕೆ 1,288 ಕಿಲೋಮೀಟರ್‌ನಲ್ಲಿ ಆಗಬೇಕಾಗಿದ್ದು, ಕೇವಲ 740 ಕಿ.ಮೀ. ಮಾತ್ರ ಅಳವಡಿಕೆಯಾಗಿದೆ. ಇದರ ಜೊತೆ ಮೇಲ್ಮಟ್ಟದ ಜಲಸಂಗ್ರಹಗಾರ, ನೆಲಮಟ್ಟದ ಜಲಸಂಗ್ರಹಗಾರ, ಪಂಪ್ ಹೌಸ್, ನೀರು ಶುದ್ಧೀಕರಣ ಘಟಕಗಳ ಕಾಮಗಾರಿಯು ಪೆಂಡಿಂಗ್ ಇದೆ.

    ಪ್ರತಿ ವಾರ್ಡ್ನಲ್ಲಿಯೂ ಯೋಜನೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದು, ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಸಹ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ದಿನದಲ್ಲಿ 24 ಗಂಟೆ ಬೇಡ ಕನಿಷ್ಟ 3 ಗಂಟೆ ಆದರೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜಲಸಿರಿ ಯೋಜನೆಯ ಸಾಕಷ್ಟು ಅಧ್ವಾನಗಳಿಂದ ಜನರು, ಜನಪ್ರತಿನಿಧಿಗಳು ರೋಸಿ ಹೋಗಿರೊದಂತು ಸುಳ್ಳಲ್ಲ.

  • ಗೆಳೆಯನಿಗೆ ಮದ್ವೆಯಾಗಲು ಹೆಣ್ಣು ಸಿಗ್ತಿಲ್ಲ- ನೀರಿನ ಸಮಸ್ಯೆ ಬಗೆಹರಿಸುವಂತೆ ರಾಗಾಗೆ ಮನವಿ

    ಗೆಳೆಯನಿಗೆ ಮದ್ವೆಯಾಗಲು ಹೆಣ್ಣು ಸಿಗ್ತಿಲ್ಲ- ನೀರಿನ ಸಮಸ್ಯೆ ಬಗೆಹರಿಸುವಂತೆ ರಾಗಾಗೆ ಮನವಿ

    ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದಂತೆಯೇ ಸಿಲಿಕಾನ್‌ ಸಿಟಿಯಲ್ಲಿ ನೀರಿನ ಸಮಸ್ಯೆ (Bengaluru Water Crisis) ಕಾಡುತ್ತಿದೆ. ಇದೀಗ ಈ ಸಮಸ್ಯೆ ಜೊತೆ ಇನ್ನೊಂದು ಸಮಸ್ಯೆ ಯುವಕರನ್ನು ಕಾಡುತ್ತಿದೆ.

    ಹೌದು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಜನ ಬಳಲುತ್ತಿದ್ದರೆ, ಇತ್ತ ಈ ಸಮಸ್ಯೆಯಿಂದಾಗಿ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಂತ ನರೇಂದ್ರ ಎಂಬವರು ತನ್ನ ಗೆಳೆಯನ ಪರಿಸ್ಥಿತಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

    ಈ ಸಂಬಂಧ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ವ್ಯಕ್ತಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಐಟಿ ಉದ್ಯೋಗದಲ್ಲಿ ಇರುವ ತನ್ನ ಗೆಳೆಯನಿಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ರಾಹುಲ್‌ ಗಾಂಧಿಯವರೇ ದಯವಿಟ್ಟು ನೀರಿನ ಸಮಸ್ಯೆ ಬಗೆಹರಿಸಿ. ಈ ಮೂಲಕ ಗೆಳೆಯನಿಗೆ ಮದುವೆಯಾಗಲು ಹುಡುಗಿ ಸಿಗುವಂತೆ ಮಾಡಿ ಎಂದು ರಾಗಾಗೆ ಟ್ಯಾಗ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಎಕ್ಸ್‌ನಲ್ಲಿ ಬರೆದುಕೊಂಡಿದ್ದೇನು..?: ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ, ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಸ್ನೇಹಿತನೊಬ್ಬ ತನ್ನ ಸದ್ಯದ ಪರಿಸ್ಥಿತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಾನೆ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಅವರಿಗೆ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಹುಡುಗಿಯರು ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ನನ್ನ ಮುಂದೆ ಬೇಸರ ವ್ಯಕ್ತಪಡಿಸಿದ್ದಾನೆ. ಇದನ್ನೂ ಓದಿ: ಜಲಮಂಡಳಿಯಿಂದ ನೀರಿನ ಕೊರತೆಯಿರುವ ಪ್ರದೇಶಗಳ ಪಟ್ಟಿ ರಿಲೀಸ್

    ಒಟ್ಟಿನಲ್ಲಿ ಈ ಬಾರಿ ಸಿಲಿಕಾನ್‌ ಸಿಟಿ ಮಂದಿಗೆ ನೀರಿನ ಬಿಸಿ ತಾಗಿದೆ. ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ತಾ ಇದೆ. ಹನಿ ಹನಿ ನೀರಿಗೂ ಜನ ಪರದಾಡ್ತಿದ್ದಾರೆ. ನೀರು ಪೂರೈಕೆ ಮಾಡೋದ್ರಲ್ಲಿ ಸರ್ಕಾರ ಮತ್ತು ಜಲಮಂಡಳಿ ಸತತ ಪ್ರಯತ್ನ ಮಾಡ್ತಾ ಇದೆ. ಈ ಮಧ್ಯೆ ಜಲಮಂಡಳಿ ಬೆಂಗಳೂರಿನಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳ ಸರ್ವೆ ಮಾಡಿದೆ. ಪ್ರಮುಖವಾಗಿ 257 ಏರಿಯಾಗಳಲ್ಲಿ ನೀರಿನ ಕೊರತೆ ಇರೋದು ಗೊತ್ತಾಗಿದೆ. ಬೋರ್ ವೆಲ್‌ಗಳು ಬತ್ತಿ ಹೋಗಿದ್ದು, ಅಂತರ್ಜಲದ ಮಟ್ಟ ಕುಸಿದಿರೋದು ನೀರಿನ ಸಮಸ್ಯೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

  • ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

    ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಕುರಿತು ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವುದಾಗಿ ಸಂಸದ ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.

    ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತೇಜಸ್ವಿಸೂರ್ಯ (Tejasvi Surya) ಜಲಮಂಡಳಿ ಛೇರ್ಮನ್ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ನೀರಿನ ಅಭಾವ ಬರುತ್ತೆ ಅಂತಾ ಗೊತ್ತಿದ್ರೂ ಕ್ರಮ ಕೈಗೊಳ್ಳಲಿಲ್ಲ. ಈಗ ಟ್ಯಾಂಕರ್ ಗಳನ್ನ ಸುಪರ್ದಿಗೆ ತಗೋತಿವೆ ಅಂತಾರೆ. ಆದರೆ ಬರೀ ಸಭೆಗಳಿಂದ ಮಾಧ್ಯಮ ಹೇಳಿಕೆಯಿಂದ ಸಮಸ್ಯೆ ಬಗೆಹರಿಯಲ್ಲ. ಇನ್ನೊಂದು ವಾರದೊಳಗೆ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡ್ತೀವೆ. ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರತಿಭಟಿಸುತ್ತೇವೆ ಎಂದರು.

    ನೀರಿನ ಸಮಸ್ಯೆಗೆ (Water Problem In Bengaluru) ಶಾಶ್ವತ ಪರಿಹಾರ ಏನು ಅನ್ನೋದನ್ನು ಹೇಳಬೇಕು. ಸರ್ಕಾರ ನೀರಿನ ಸಮಸ್ಯೆಗೆ ಏನ್ ಮಾಡ್ತಿದೆ ಅಂತಾ ಜನರಿಗೆ ತಿಳಿಸಬೇಕು. ಇಲ್ಲದಿದ್ರೆ ಪ್ರತಿಭಟನೆ ನಡೆಸಿ ಸರ್ಕಾರವನ್ನ ಎಚ್ಚರಿಸುತ್ತೇವೆ. ವಾಣಿಜ್ಯ ಉದ್ದೇಶಕ್ಕೆ ಟ್ರೀಟೆಡ್ ವಾಟರ್ ಕೊಡಲಿ. ಅಪಾರ್ಟ್ ಮೆಂಟ್ ಗಳನ್ನೇ ಗಮನಿಸೋದು ಬಿಟ್ಟು ಜನರಿಗೆ ನೀರು ಕೊಡಲಿ. ಬಿಬಿಎಂಪಿಯಿಂದ ಟ್ಯಾಂಕರ್ ಕೊಡ್ತೀವೆ ಅಂದಿದ್ರು. ಇದುವರೆಗೂ ಒಂದು ಏರಿಯಾಗೂ ಒಂದು ಹನಿ ನೀರು ಕೊಟ್ಟಿಲ್ಲ. ಟ್ಯಾಂಕರ್ ಗಳನ್ನ ವಶಕ್ಕೆ ಪಡೆದ್ರೆ ಜನರಿಗೆ ಸಮಸ್ಯೆಯಾಗುತ್ತೆ. ಸರ್ಕಾರ ಪರಿಹಾರ ಕೊಡೋ ಬದಲು ಸಮಸ್ಯೆ ಸೃಷ್ಟಿಸುತ್ತಿದೆ. ಸರ್ಕಾರದ ವಿರುದ್ಧ ಸಂಸದರು ಕಿಡಿಕಾರಿದ್ದಾರೆ.

    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ಫ್ರೀಹ್ಯಾಂಡ್ ಕೊಟ್ಟು ಪೊಲೀಸ್ರಿಗೆ ತನಿಖೆಗೆ ಅವಕಾಶ ಕೊಡಬೇಕು. ಆರೋಪಿಗಳ ಪರವಾಗಿ ವಕೀಲರಾಗಿ ಕಾಂಗ್ರೆಸ್ ಪಾರ್ಟಿಯವರು ಯಾಕೆ ಬರುತ್ತಾರೆ. ಪಾಕ್ ಪರ ಘೋಷಣೆ ಕೇಸ್‍ನಲ್ಲಿ ಕಾಂಗ್ರೆಸ್‍ನವರು ಮಾಧ್ಯಮದವರ ಮೇಲೆ ಗೂಬೆಕೂರಿಸಿದ್ರು. ಬಾಂಬ್ ಬ್ಲಾಸ್ಟ್ ಕೇಸ್‍ನಲ್ಲಿ ರೈವರ್ರಿ ಅಂತಾ ಹೇಳಿದ್ರು. ಇದು ಏನ್ ಸಿನಿಮಾ ಕಥೆನಾ..?. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದರು ಸಿಡಿಮಿಡಿಗೊಂಡರು.  ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ

    ಸರ್ಕಾರ ಯಾಕೆ ಇಂತಹ ಘಟನೆಗಳಿಗೆ ವಕೀಲರಂತಾಗ್ತಿದೆ. ತನಿಖೆಗೆ ಮೊದಲೇ ಯಾಕೆ ಪರ ವಹಿಸಿಕೊಂಡು ಮಾತಾಡ್ತಿದೆ. ಪಾಕಿಸ್ತಾನ್ ಜಿಂದಾಬಾದ್ ಅಂದಾಗಲೂ ಸಮರ್ಥನೆ ಮಾಡಿಕೊಂಡರು. ಬಾಂಬ್ ಬ್ಲಾಸ್ಟ್ ಗೂ ಬೇರೆ ಬೇರೆ ಹೇಳಿಕೆ ಕೊಟ್ಟರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತನಿಖೆಗೆ ಪೆÇಲೀಸರಿಗೆ ಫ್ರೀ ಹ್ಯಾಂಡ್ ಕೊಡಲಿ. ಅದು ಬಿಟ್ಟು ವ್ಯಾಪಾರದ ದ್ವೇಷ ಅಂತಾ ಕತೆ ಹೇಳಬಾರದು. ಸರ್ಕಾರ ಯಾಕೆ ಇಂತ ಘಟನೆಗೆ ಸಮರ್ಥನೆ ಕೊಡುತ್ತೆ ಗೊತ್ತಿಲ್ಲ. ಎನ್‍ಐಎ ಸದ್ಯ ಸಾರ್ವಜನಿಕರ ಸಹಾಯ ಕೇಳಿದೆ. ಜನರು ಸುಳಿವು ಸಿಕ್ಕರೇ ಸಹಕರಿಸಬೇಕಿರೋದು ಕರ್ತವ್ಯ. ಇಂತ ಘಟನೆಗಳ ಬಗ್ಗೆ ಕೂಲಂಕುಶ ತನಿಖೆಯಾಗಲಿ ಎಂದು ಆಗ್ರಹಿಸಿದರು.

  • ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

    ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಸಮಿತಿ ರಚನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂ ಆಯುಕ್ತರು, ಬಿಬಿಎಂಪಿ ಹಾಗೂ BWSSB ಸಹಯೋಗದಲ್ಲಿ ಕೆಲಸ ಮಾಡಲಿದೆ. ಬಿಬಿಎಂಪಿಯಿಂದ ನೀರಿನ ಸರಬರಾಜಿಗಾಗಿ 131 ಕೋಟಿ ಹಣ ಖರ್ಚು ಮಾಡಲಾಗುವುದು. ಆರ್ ಆರ್ ನಗರ, ಮಹದೇವಪುರದಲ್ಲಿ ಹೆಚ್ಚಿನ ಸಮಸ್ಯೆಯಾಗಿವೆ. ಆರ್ ಆರ್ ನಗರದ 25 ಕಡೆ ನೀರಿನ ಸಮಸ್ಯೆಯಾಗಿದೆ ಎಂದರು.

    1477 ದಶಲಕ್ಷ ಲೀಟರ್ ನೀರು (Water Problem In Bengaluru) ಈಗ ಲಭ್ಯತೆಯಿದೆ. ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ನೀರನ್ನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತೆ. ಹೀಗಾಗಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಯಲು ನಿರ್ಧಾರ ಮಾಡಲಾಗಿದೆ. ಜಲಮಂಡಳಿ ಬೋರ್ ಕೊರೆಯುವ ಕೆಲಸ ಮಾಡಲಾಗುತ್ತೆ. ಬಿಬಿಎಂಪಿ ಇದಕ್ಕೆ ದುಡ್ಡನ್ನ ವ್ಯಯಿಸಲಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ನೀರು ಒದಗಿಸಲಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ಗ್ರಾಮಸ್ಥ!

    1450 ಎಂಎಲ್ ಡಿ ನೀರಿನ ಕ್ಯಾಪಸಿಟಿ ಇದೆ. ನೀರಿನ ಸಾಮರ್ಥ್ಯ ಸದ್ಯ ಇದೆ. 110 ಹಳ್ಳಿಗಳಿಗೆ ಏಪ್ರಿಲ್ ಕಡೆಯಲ್ಲಿ ಕಾವೇರಿ ನೀರು (Cauvery Water) ಕೊಡಲಾಗುತ್ತದೆ. ಬಿಬಿಎಂಪಿ ಕಡೆಯಿಂದ ಹಣ ಟ್ರಾನ್ಸ್ ಫರ್ ಆಗುತ್ತದೆ. ಒಟ್ಟು 58 ಕಡೆಗಳಲ್ಲಿ ಸಾಕಷ್ಟು ಸಮಸ್ಯೆ ಕಂಡು ಬಂದಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಬೇಸಿಗೆಯಲ್ಲಿ ನೀರಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಸಿಎಸ್ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಬಿಬಿಎಂಪಿ ಹಾಗೂ ಜಲಮಂಡಳಿ ಕಡೆಯಿಂದ ಹಲವು ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

    ಇದೇ ವೇಳೆ ಖಾಸಗಿ ಟ್ಯಾಂಕರ್ ಹಾವಳಿ ಕುರಿತು ಪ್ರತಿಕ್ರಿಯಿಸಿ ಅವರು, ಖಾಸಗಿ ಟ್ಯಾಂಕರ್ ದರ ನಿಗದಿಯಿಲ್ಲ. ಬಿಡಬ್ಲ್ಯೂಎಸ್‍ಎಸ್‍ಬಿ ಹಾಗೂ ಬಿಬಿಎಂಪಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತೆ ಎಂದು ತಿಳಿಸಿದರು.

  • ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

    ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

    – ಪಬ್ಲಿಕ್ ಟಿವಿಯಲ್ಲಿ ಬಿಗ್ ಎಕ್ಸ್‌ಪೋಸ್‌

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕುಡಿಯುವ ನೀರು (Drinking Water) ಬೇಕಾದ್ರೇ ಜೇಬು ತುಂಬಾ ಕಾಸಿರಬೇಕು ಅನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದು, ಕಾವೇರಿ ಬರಿದಾಗುತ್ತಿದೆ. ಇದರಿಂದ ಬೆಂಗಳೂರಿನಲ್ಲಿ (Bengaluru) ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನ ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

    ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾದ ಬೆನ್ನಲ್ಲೇ ಟ್ಯಾಂಕರ್ ನೀರಿಗೆ (Tanker Water) ಬೇಡಿಕೆ ಹೆಚ್ಚಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಎರಡು, ಮೂರು ಪಟ್ಟು ಹೆಚ್ಚು ದರ ಕೇಳಿದ್ರೂ, ನೀರನ್ನು ಖರೀದಿಸಬೇಕಾಗಿದೆ. ಪ್ರಶ್ನೆ ಮಾಡಿದ್ರೆ ಬೇಕಾದ್ರೆ ತೆಗೆದುಕೊಳ್ಳಿ, ಇಲ್ಲವಾದ್ರೆ ಬಿಡಿ ಅಂತಾ ಮುಖಕ್ಕೆ ಹೊಡೆದಂತೆ ಹೇಳ್ತಾರೆ. ಅದರಲ್ಲೂ ಲಗ್ಗೆರೆ ಬ್ರಿಡ್ಜ್, ನವರಂಗ್, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯಗಳಲ್ಲಿ ವಾಟರ್‌ ಟ್ಯಾಂಕರ್‌ ಮಾಲೀಕರು ಹೇಳಿದಷ್ಟೇ ದರ ಕೊಡಬೇಕಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಮಾಡಿದ ರಿಯಾಲಿಟಿ ಚೆಕ್ ಇಲ್ಲಿದೆ.

    ಲಗ್ಗೆರೆ ಬ್ರಿಡ್ಜ್‌ ಸಮೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಟರ್‌ ಟ್ಯಾಂಕ್‌ ಮಾಲೀಕರು ಪ್ರತಿ 6,000 ಲೀಟರ್‌ ಟ್ಯಾಂಕರ್‌ ನೀರಿಗೆ 1,500 ರೂ.ಗೆ ಡಿಮ್ಯಾಂಡ್‌ ಮಾಡ್ತಿದ್ದಾರೆ. ಸ್ವಲ್ಪ ಕಡಿಮೆ ಮಾಡಕೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದ್ರೆ, ಮತ್ತೊಂದು ಕಡೆ 3 ಸಾವಿರ ರೂಪಾಯಿ ಕೊಡ್ತಾರೆ, ಬೇಕಿದ್ದರೆ ತಗೊಳ್ಳಿ ಎಂದು ಹೇಳಿಹೋಗ್ತಾರೆ. ಇದನ್ನೂ ಓದಿ: ಇಂದು ರೈತರಿಂದ ʻದೆಹಲಿ ಚಲೋʼ – ಗಡಿಯಲ್ಲಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಅದೇ ರೀತಿ ನವರಂಗ್‌, ದಾಸರಹಳ್ಳಿ, ಹೊಸಕೆರೆಹಳ್ಳಿ, ಮೂಡಲಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,000 ಲೀಟರ್‌ ಟ್ಯಾಂಕರ್‌ ನೀರಿಗೆ 700 ರೂಪಾಯಿಗಿಂತ ಕಡಿಮೆಯಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಅತ್ತ ಹಣಕೊಟ್ಟು ಖರೀದಿಸಲಾಗದೇ, ಇತ್ತ ಕಾವೇರಿ ನೀರೂ ಸರಿಯಾಗಿ ಸಿಗದೇ ಪರದಾಡುವಂತಾಗಿದೆ.

    ಸರ್ಕಾರ ಈ ರೀತಿ ಬೇಕಾಬಿಟ್ಟಿ ದರ ನಿಗದಿ ಮಾಡೋದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ  

  • ಬರಿದಾಗುತ್ತಿದೆ ಜಕ್ಕಲಮಡಗು ಜಲಾಶಯ – ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಸಮಸ್ಯೆ

    ಬರಿದಾಗುತ್ತಿದೆ ಜಕ್ಕಲಮಡಗು ಜಲಾಶಯ – ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಸಮಸ್ಯೆ

    ಚಿಕ್ಕಬಳ್ಳಾಪುರ: ಅವಳಿ ನಗರಗಳಾದ ಚಿಕ್ಕಬಳ್ಳಾಪುರ (Chikkaballapura) ಮತ್ತು ದೊಡ್ಡಬಳ್ಳಾಪುರ (Doddaballapura) ಜನರಿಗೆ ಕುಡಿಯುವ ನೀರು ಪೂರೈಸುವ ಏಕೈಕ ಜಲಾಶಯ ಜಕ್ಕಲಮಡಗು (Jakkalamadagu) ಜಲಾಶಯ. ಕಳೆದ ವರ್ಷ ಒಂದಲ್ಲ ಎರಡಲ್ಲ ಮೂರು ಬಾರಿ ಕೋಡಿ ಹರಿದಿದ್ದ ಜಲಾಶಯ ಈ ಬಾರಿ ಒಮ್ಮೆಯೂ ಕೋಡಿ ಹರಿದಿಲ್ಲ.

    ಬರಗಾಲದ ಬೆನ್ನಲ್ಲೇ ಜಲಾಶಯದ ನೀರು ಸಹ ಬತ್ತಿ ಹೋಗುತ್ತಿದ್ದು, ಎರಡು ನಗರಗಳ ಜನರಿಗೆ ಈಗಲೇ ಆತಂಕ ಶುರುವಾಗಿದೆ. ಮುಂದೆ ಕುಡಿಯುವ ನೀರಿಗೆ ಏನು ಮಾಡೋದು ಅನ್ನೋ ಚಿಂತೆ ಈಗಲೇ ಕಾಡೋಕೆ ಶುರುವಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿಗೆ ಜಕ್ಕಲಮಡಗು ಜಲಾಶಯವೇ ಕಾವೇರಿ. ಎರಡು ನಗರಗಳ ಲಕ್ಷಾಂತರ ಮಂದಿಗೆ ಕುಡಿಯುವ ನೀರು (Drinking Water) ಕೊಡುವ ಏಕೈಕ ಜಲಾಶಯವಿದು. ಇದನ್ನೂ ಓದಿ: ಅಕ್ರಮ ಹಣ ಪತ್ತೆ ಪ್ರಕರಣ ಸಿಬಿಐಗೆ ವಹಿಸಲಿ: ಅಶ್ವಥ್ ನಾರಾಯಣ್

    ಕಳೆದ 3 ವರ್ಷಗಳಿಂದ ಮೈದುಂಬಿ ಕೋಡಿ ಹರಿಯುತ್ತಿದ್ದ ಈ ಜಲಾಶಯ ಈ ಬಾರಿ ಕೋಡಿ ಹರಿದಿಲ್ಲ. ಹೀಗಾಗಿ ಜಕ್ಕಲಮಡಗು ಜಲಾಶದಯಲ್ಲಿ ಕಳೆದ ಬಾರಿ ಸಂಗ್ರಹವಾಗಿದ್ದ ನೀರನ್ನು ಈ ಬಾರಿಯೂ ಬಳಸಲಾಗುತ್ತಿದೆ. ಈಗಾಗಲೇ ಜಲಾಶಯದ 60% ರಷ್ಟು ಪ್ರಮಾಣದ ನೀರು ಖಾಲಿಯಾಗಿದ್ದು, ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಜನರೇ ದಯಮಾಡಿ ನೀರನ್ನು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು: ಜಿಟಿ ದೇವೇಗೌಡ

    ಜಕ್ಕಲಮಡಗು ಜಲಾಶಯದಿಂದ 60% ರಷ್ಟು ಭಾಗದ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹಾಗೂ 40%ರಷ್ಟು ಭಾಗದ ನೀರನ್ನು ದೊಡ್ಡಬಳ್ಳಾಪುರಕ್ಕೆ ಪೂರೈಸಲಾಗುತ್ತದೆ. ಆದರೆ ಈಗ ನೀರು ಕಡಿಮೆಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ದೊಡ್ಡಬಳ್ಳಾಪುರ ನಗರದ ಜನತೆಗೆ ನೀರು ಪೂರೈಸಲಾಗುತ್ತಿದೆ. ಇದರಿಂದ ಜನರಿಗೆ ಈಗಲೇ ನೀರಿನ ಅಭಾವ ಶುರುವಾಗಿದೆ. ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

    ಈಗಾಗಲೇ ಮಳೆಗಾಲ ಮುಗಿದು ಹೋಗಿದ್ದು, ಇನ್ನೂ ಮಳೆ ಬಂದು ಜಲಾಶಯ ತುಂಬೋದು ಅಷ್ಟಕಷ್ಟೇ. ಮತ್ತೊಂದೆಡೆ ಚಳಿಗಾಲ ಆರಂಭವಾಗಿದ್ದು, ಬೇಸಿಗೆ ಕಾಲ ಬರುವ ಮುನ್ನವೇ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಮುಂದೆ ಏನು ಅನ್ನೋ ಚಿಂತೆ ಅಧಿಕಾರಿಗಳನ್ನು ಕಾಡೋಕೆ ಶುರುವಾಗಿದೆ. ಇದನ್ನೂ ಓದಿ: ಲಘು ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ – ಆಸ್ಪತ್ರೆಗೆ ಬರಬೇಡಿ ಎಂದ ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 5 ವರ್ಷ ನಗರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹೇರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತಮನಾಡಿದ ಅವರು, ಅಪಾರ್ಟ್‌ಮೆಂಟ್‌ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿರುವ ಬಗ್ಗೆ ತಿಳಿಸಿದರು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಪಾರ್ಟ್‌ಮೆಂಟ್‌ ಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆಯಾಗುತ್ತಿದ್ದು, ಅಪಾರ್ಟ್‍ಮೆಂಟ್‍ ಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟವಾಗುತ್ತಿದೆ. ನಗರದಲ್ಲಿ ಇರುವ ನೀರಿನ ಕೊರತೆಯಿಂದ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

    ಇಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವ ಮುನ್ನ ಸಾರಿಗೆ ನೌಕರರ ಮುಖಂಡರು ಸರ್ಕಾರಕ್ಕೆ ಬೇಡಿಕೆಗಳ ಈಡೇರಿಕೆಗೆ ಡಿಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸದಾಶಿವನಗರದ ಡಿಸಿಎಂ ಗೃಹಕಚೇರಿಗೆ ಆಗಮಿಸಿದ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ನಿಯೋಗದಿಂದ ಡಿಸಿಎಂಗೆ ಮನವಿ ಸಲ್ಲಿಸಲಾಗಿದೆ.

    ಸಾರಿಗೆ ನೌಕರರ ಮನವಿ ಸ್ವೀಕಾರ ಬಳಿಕ ಡಿಸಿಎಂ ಅವರು ಮಾತನಾಡಿ,  ಕೆಎಸ್ಆರ್‌ಟಿಸಿ  ವರ್ಕರ್ಸ್ ಫೆಡರೇಷನ್ ಅವರು ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಯನ್ನು ಸಿಎಂ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಸಾರಿಗೆ ಸಚಿವರ ವಿರುದ್ಧವೂ ಮುಖಂಡರು ಆರೋಪ ಮಾಡಿದ್ದಾರೆ. ಅದನ್ನೂ ಕೂಡ ಸಿಎಂ ಗಮನಕ್ಕೆ ತರುತ್ತೇನೆ. ಕೆಎಸ್‍ಆರ್‍ಟಿಸಿಗೆ ನಷ್ಟ ಆಗದಂತೆ ಸಾರಿಗೆ ಅನುಕೂಲ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಸ್ಟೀಲ್ ಫ್ಲೈಓವರ್ ಮಾಡಲ್ಲ ಎಂದು ಸರ್ಕಾರದಿಂದ ಹೈಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, 2016 ರಲ್ಲೇ ಸರ್ಕಾರ ಈ ಯೋಜನೆ ನಿಲ್ಲಿಸುವ ತೀರ್ಮಾನ ಮಾಡಿತ್ತು. ಅದಾದ ಮೇಲೆ ನಾನು ಮತ್ತೆ ಪ್ರಸ್ತಾಪ ಮಾಡಿದ್ದೆ. ಸ್ಟೀಲ್ ಫ್ಲೈಓವರ್ ಬೇಡವಾದರೆ ಬೇರೆ ಪರ್ಯಾಯ ಮಾರ್ಗ ಬೇಕಲ್ಲ? ಸ್ಟೀಲ್ ಫ್ಲೈಓವರ್ ಬದಲು ಎಲಿವೇಟೆಡ್ ರಸ್ತೆ ಮಾಡುವ ಪ್ರಸ್ತಾಪವೂ ಇದೆ. ಈ ಕುರಿತು ಪರಿಶೀಲನೆ ನಡಿಯುತ್ತಿದೆ. ಪರಿಶೀಲಿಸಿ ಸಮಗ್ರ ಯೋಜನಾ ವರದಿ(ಡಿಪಿಆರ್) ಮಾಡುವ ಬಗ್ಗೆ ತೀರ್ಮಾನ ತೆಗೆಕೊಳ್ಳುತ್ತೇವೆ. ಎಲಿವೇಟೆಡ್ ರಸ್ತೆಗೂ ವಿರೋಧ ಇದೆ. ಆದರೆ ಸರ್ಕಾರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಬೇಕಲ್ಲ? ಜನರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಸೋಲಿಗೆ ಮೈತ್ರಿ ಕಾರಣವೆಂದು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್‍ಗೆ ಪರಾಜಿತ ಅಭ್ಯರ್ಥಿಗಳ ದೂರು ನೀಡಿರುವ ವಿಚಾರವಾಗಿ ಮಾತನಾಡಿ, ಸೋತ ಅಭ್ಯರ್ಥಿಗಳು ವೇಣುಗೋಪಾಲ್ ಅವರ ಮುಂದೆ ಹಲವು ಕಾರಣಗಳನ್ನು ಹೇಳಿದ್ದಾರೆ. ಸೋಲಿಗೆ ಮೈತ್ರಿಯೂ ಕಾರಣ ಎಂದು ಕೆಲವರು ಅಂದಿದ್ದಾರೆ. ವೇಣುಗೋಪಾಲ್ ಅವರು ಸೋತವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದಾರೆ. ಈ ವಿಚಾರ ವರಿಷ್ಠರ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ನಂತರ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಬರಲು ಸಾಧ್ಯವಿಲ್ಲ. ಕೆಲವರು ಅಂತಹ ಹೇಳಿಕೆಗಳನ್ನು ಕೊಡುತ್ತಾರೆ, ಅದೆಲ್ಲ ಸ್ವಾಭಾವಿಕ. ಆದರೆ ಎರಡೂ ಪಕ್ಷಗಳೂ ಸರ್ಕಾರವನ್ನು ಉತ್ತಮವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಮಧ್ಯಂತರ ಚುನಾವಣೆ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ನಡಿಯುತ್ತಿಲ್ಲ. ವೈಯಕ್ತಿಕ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದು ಸ್ಪಷ್ಟಪಡಿಸಿದರು.

    ಕೊನೆಗೆ ಅಗತ್ಯ ಇದ್ದರೆ ನಾನು ಸಹ ಗ್ರಾಮವಾಸ್ತವ್ಯ ಮಾಡುತ್ತೇನೆ. ನಗರದಲ್ಲೂ ಕೊಳಚೆ ಪ್ರದೇಶಗಳಲ್ಲಿ ವಾಸ್ತವ್ಯ ಮಾಡೋಣ ಅದಕ್ಕೇನು? ಜನರ ಸಮಸ್ಯೆ ಎಲ್ಲಿದೆ ಅಲ್ಲಿ ಹೋಗಿ ಬಗೆಹರಿಸುವ ಕೆಲಸ ಮಾಡುತ್ತೇವೆ. ನಾನು ಈಗಾಗಲೇ ಜನಸ್ಪಂದನ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ ಎಂದರು.

  • ಎಷ್ಟಾದರೂ ಖರ್ಚು ಮಾಡಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ- ಅಧಿಕಾರಿಗಳಿಗೆ ದೇಶಪಾಂಡೆ ಎಚ್ಚರಿಕೆ

    ಎಷ್ಟಾದರೂ ಖರ್ಚು ಮಾಡಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ- ಅಧಿಕಾರಿಗಳಿಗೆ ದೇಶಪಾಂಡೆ ಎಚ್ಚರಿಕೆ

    -ತಪ್ಪು ಮಾಹಿತಿ ನೀಡಿದ್ದ ಅಧಿಕಾರಿಗೆ ಖಡಕ್ ವಾರ್ನಿಂಗ್

    ಚಾಮರಾಜನಗರ: ಎಷ್ಟು ಹಣ ಬೇಕದರೂ ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಜನರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರು ಬರ ಪರಿಶೀಲನಾ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿನ ಕೊಳವೆಬಾವಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರವಿಕುಮಾರ್ ಗೆ ದೇಶಪಾಂಡೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆಯ ಮುಂಭಾಗಕ್ಕೆ ಕರೆಸಿ ಅಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. 4 ಸಾವಿರ ಕೊಳವೆ ಬಾವಿ ಇವೆ, 6 ಸಾವಿರ ಚಾಲ್ತಿಯಲ್ಲಿ ಇವೆ ಎಂದು ತಪ್ಪು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದರು. ಹೀಗಾಗಿ ಬರದ ನಡುವೆ ನೀರಿಗಾಗಿ ಜನ ಪರಿತಪಿಸುತ್ತಿರುವಾಗ ತಪ್ಪು ಮಾಹಿತಿ ನೀಡಿದಕ್ಕೆ ಸಚಿವರು ಗರಂ ಆಗಿ ಅಧಿಕಾರಿಗೆ ಎಚ್ಚರಿಗೆ ನೀಡಿದರು.

    ಯಾವುದೇ ಕಾರಣಕ್ಕೂ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಎಷ್ಟು ಹಣ ಬೇಕದರೂ ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಜನರು ಗುಳೇ ಹೋಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ದೇಶಪಾಂಡೆ ಅವರು ಸೂಚಿಸಿದರು.

    ನಾವು ಕೇಳಿದರೆ ತುಂಬ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳುತ್ತೀರಾ ಆದ್ರೆ ಕಂದಾಯ ಸಚಿವರ ಮುಂದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತೀರಾ ಎಂದು ಹನೂರು ಶಾಸಕ ನರೇಂದ್ರ ಕೂಡ ಅಧಿಕಾರಿಯ ತರಾಟೆ ತೆಗೆದುಕೊಂಡರು.

    ಅಷ್ಟೇ ಅಲ್ಲದೆ ಜುಲೈನಲ್ಲಿ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಮುಂದಿನ ತಿಂಗಳು ಮೋಡ ಬಿತ್ತನೆ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರಗಳನ್ನಾಗಿ ಮಾಡಲಾಗಿದೆ. ಟೆಕ್ನಿಕಲ್ ಟೀಮ್ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂದು ತೀರ್ಮಾನ ಮಾಡುತ್ತದೆ. ಚಾಮರಾಜನಗರದಲ್ಲೂ ಮೋಡ ಬಿತ್ತನೆ ಮಾಡಲು ಅವಕಾಶವಿದೆ. ಇದಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]