Tag: water heater

  • ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ಬೆಂಗಳೂರು: ವಾಟರ್ ಹೀಟರ್‌ನಿಂದಾಗಿ (Water Heater) ವಿದ್ಯುತ್ ಶಾಕ್ (Current Shock) ತಗುಲಿ ತಾಯಿ (Mother) ಹಾಗೂ ಮಗು (Child) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ತಾಯಿ ಜ್ಯೋತಿ ಹಾಗೂ ಆಕೆಯ 4 ವರ್ಷದ ಮಗು ಜಯಾನಂದ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟವರು. ರಾಯಚೂರು ಮೂಲದ ಜ್ಯೋತಿ ತನ್ನ ಗಂಡ ಹಾಗೂ ಮಗನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನೆಲೆಸಿದ್ದರು. ಆಕೆ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದನ್ನೂ ಓದಿ: ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ

    ಭಾನುವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ಬಾಲಕ ಜಯಾನಂದ್‌ಗೆ ಕರೆಂಟ್ ಶಾಕ್ ತಗುಲಿತ್ತು. ಮಗುವಿಗೆ ಶಾಕ್ ತಗುಲಿ ಒದ್ದಾಡುತ್ತಿರುವುದನ್ನು ಕಂಡ ಜ್ಯೋತಿ ಆತನನ್ನು ಕಾಪಾಡಲು ಮುಂದಾದಾಗ ಆಕೆಗೂ ಕರೆಂಟ್ ಶಾಕ್ ತಗುಲಿದೆ. ಇದರಿಂದ ತಾಯಿ ಹಾಗೂ ಮಗು ಇಬ್ಬರೂ ದಾರುಣವಾಗಿ ಅಂತ್ಯ ಕಂಡಿದ್ದಾರೆ.

    ಭಾನುವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಕುಟುಂಬ ಕೆಲ ದಿನಗಳ ಹಿಂದಷ್ಟೇ ರಾಯಚೂರಿನಿಂದ ಬೆಂಗಳೂರಿಗೆ ಬಂದಿತ್ತು. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

  • ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬೆಂಗಳೂರು: ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಓಲ್ಡ್ ಟೌನ್‍ನಲ್ಲಿ ನಡೆದಿದೆ.

    ನಾಲ್ಕು ವರ್ಷದ ಶೇಷಾದ್ರಿ ಸಾವನ್ನಪ್ಪಿದ ಮಗು. ಮನೆಯಲ್ಲಿ ಬೆಳಗ್ಗೆ ನೀರು ಕಾಯಿಸೋದಕ್ಕೆ ತಾಯಿ ಬಕೆಟ್‍ನಲ್ಲಿ ಹೀಟರ್ ಹಾಕಿಟ್ಟಿದ್ದರು. ನೀರು ಕಾಯಿಸೋಕೆ ಇಟ್ಟು ಆಕೆ ಹೊರಗಡೆ ತೆರಳಿದ್ದ ವೇಳೆ ಆಟವಾಡುತ್ತಾ ಮಗು ಬಕೆಟ್ ಒಳಗೆ ಬಿದ್ದು ಸಾವನ್ನಪ್ಪಿದೆ.

    ಘಟನೆ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ ವಾರ ಮಂಡ್ಯದಲ್ಲಿ ಪೋಷಕರು ಅರಿವಿಲ್ಲದೆ ಅವಧಿ ಮುಗಿದ ಔಷಧಿಯನ್ನ ಮಗುವಿಗೆ ನೀಡಿದ್ದರಿಂದ ಎರಡು ವರ್ಷದ ಮಗು ಸಾವನ್ನಪ್ಪಿತ್ತು.

    ಇದನ್ನೂ ಓದಿ:ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

  • ವಾಟರ್ ಹೀಟರ್ ಬಕೆಟ್ ಮೇಲೆ ಬಿದ್ದು ಗಾಯಗೊಂಡ ಯುವಕ

    ಚಿಕ್ಕಬಳ್ಳಾಪುರ: ಬಿಸಿ ನೀರು ಕಾಯಿಸಲು ಹಾಕಿದ್ದ ವಾಟರ್ ಹೀಟರ್ ಬಕೆಟ್ ಮೇಲೆ ಬಿದ್ದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ನಡೆದಿದೆ.

    16 ವರ್ಷದ ಮಧುಸೂಧನ್ ಗಾಯಗೊಂಡಿರುವ ಯುವಕ. ಮಧುಸೂಧನ್ ಆಕಸ್ಮಿಕವಾಗಿ ವಾಟರ್ ಹೀಟರ್ ಬಕೆಟ್ ಮೇಲೆ ಬಿದ್ದ ಪರಿಣಾಮ ಕೈ ಸೇರಿದಂತೆ ದೇಹದ ಹಲವು ಭಾಗಗಳಿಗೆ ಬಿಸಿ ನೀರು ಹಾಗೂ ವಿದ್ಯುತ್ ಶಾಕ್ ತಗುಲಿ ಗಂಭೀರವಾದ ಗಾಯಗಳಾಗಿವೆ.

    ಗಾಯಾಳುವನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ.