Tag: water crisis

  • ದೆಹಲಿಗೆ ಹೆಚ್ಚುವರಿ ನೀರು ಬಿಡುವಂತೆ ಹರಿಯಾಣ, ಹಿಮಾಚಲಪ್ರದೇಶಕ್ಕೆ ಸುಪ್ರೀಂ ಸೂಚನೆ

    ದೆಹಲಿಗೆ ಹೆಚ್ಚುವರಿ ನೀರು ಬಿಡುವಂತೆ ಹರಿಯಾಣ, ಹಿಮಾಚಲಪ್ರದೇಶಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಎದರಾಗಿರುವ ಹಿನ್ನೆಲೆಯಲ್ಲಿ 137 ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಎಂದು ಸುಪ್ರೀಂಕೋರ್ಟ್‌ (Supreme Court) ಹರಿಯಾಣ ಹಾಗೂ ಹಿಮಾಚಲ ಪ್ರದೇಶಕ್ಕೆ ನಿರ್ದೇಶನ ನೀಡಿದೆ.

    ದೆಹಲಿಯಲ್ಲಿ ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟಿನ ಕುರಿತು ದೆಹಲಿ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಅವರ ಪೀಠ, ಹಿಮಾಚಲ ಪ್ರದೇಶಕ್ಕೆ 137 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ.

    ಹಿಮಾಚಲ ಪ್ರದೇಶದಿಂದ (Himachal Pradesh) ಬಿಡುಗಡೆಯಾದ ಹೆಚ್ಚುವರಿ ನೀರನ್ನು ರಾಷ್ಟ್ರ ರಾಜಧಾನಿಗೆ ತಲುಪುವಂತೆ ನೋಡಿಕೊಳ್ಳುವಂತೆ ಪೀಠವು ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ದೆಹಲಿ ಸರ್ಕಾರವು ನೀರನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎಂದು ಸೂಚಿಸಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್

    ಜೂನ್ 7 ರಂದು ಹರಿಯಾಣಕ್ಕೆ (Haryana) ಪೂರ್ವ ಸೂಚನೆಯೊಂದಿಗೆ 137 ಕ್ಯೂಸೆಕ್ ಹೆಚ್ಚುವರಿ ನೀರನ್ನು ಹಿಮಾಚಲ ಪ್ರದೇಶವು ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿದೆ. ಅಲ್ಲದೇ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಬಳಿಕ ಜೂನ್ 10ಕ್ಕೆ ವಿಚಾರಣೆಯನ್ನು ಮುಂದೂಡಿತು.

  • ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

    ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

    ಬೊಗೋಟಾ: ಈ ಬಾರಿ ಬೇಸಿಗೆಗೆ ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಮಾತ್ರವಲ್ಲ ವಿಶ್ವದ ವಿವಿಧೆಡೆ ಮಹಾನಗರಗಳೂ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ.

    ಅದರಲ್ಲೂ ದಕ್ಷಿಣ ಅಮೆರಿಕದ (South America) ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ. ಜನರಿಗೆ ಆಶಾಕಿರಣದಂತಿದ್ದ ಜಲಾಶಯಗಳೇ ಬತ್ತಿಹೋಗುತ್ತಿವೆ. ಹಾಗಾಗಿ, ನೀರು ಮಿತವ್ಯಯಕ್ಕೆ ಅಲ್ಲಿನ ಮೇಯರ್, ಜನರಿಗೆ ವಿಚಿತ್ರ ಸಲಹೆಯೊಂದನ್ನ ನೀಡಿದ್ದಾರೆ. ಜನ ತಮ್ಮ ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡುವ ಮೂಲಕ ನೀರು ಉಳಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬೊಗೋಟಾ ಮೇಯ‌ರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು, ಸಂಗಾತಿಯಾದವರು ಜೋಡಿಯಾಗಿ ಸ್ನಾನ ಮಾಡುವ ಮೂಲಕ ನೀರು ಮಿತವ್ಯಯ ಬಳಕೆಯ ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾನುವಾರ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್‌ ಶೋ – ಎಷ್ಟು ಗಂಟೆಗೆ ಎಲ್ಲಿ ಮೋದಿ ಕಾರ್ಯಕ್ರಮ?

    ಜೋಡಿಯಾಗಿ ಸ್ನಾನ ಮಾಡಿ ಎಂದು ಕರೆ ನೀಡಿರುವ ಮೇಯರ್, ಒಂದು ವೇಳೆ ರಜಾ ದಿನಗಳಲ್ಲಿ ಮನೆಯಲ್ಲೇ ಇರುವುದಾದರೆ ಅಂದು ಸ್ನಾನ ಮಾಡಬೇಡಿ ಎಂದೂ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    1980ರ ಬಳಿಕ ಬೊಗೋಟಾ ನಗರದಲ್ಲಿ ಅಪಾರ ಪ್ರಮಾಣದ ಜಲಕ್ಷಾಮ ಎದುರಾಗುತ್ತಿದೆ. ಜಲಾಶಯದ ಮಟ್ಟ ಸಹಜ ಪ್ರಮಾಣಕ್ಕಿಂತ 17 ಪ್ರತಿಶತದಷ್ಟು ಕಡಿಮೆಯಾಗಿದೆ. ಹಾಗಾಗಿ ನೀರಿನ ಮಿತ ಬಳಕೆಗೆ ಜನರು ಮುಂದಾಗಬೇಕು. ಜನರಿಗೆ ಕುಡಿಯುವ ನೀರನ್ನು ಪೂರೈಸಲು ಬೇಕಾಗ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಕಳೆದ 50-60 ವರ್ಷಗಳಲ್ಲಿ ಇದೇ ಮೊದಲು – ತವರಿನಲ್ಲೇ ಬರಿದಾಗುತ್ತಿದೆ ಕಾವೇರಿಯ ಒಡಲು!

    ಕಳೆದ 50-60 ವರ್ಷಗಳಲ್ಲಿ ಇದೇ ಮೊದಲು – ತವರಿನಲ್ಲೇ ಬರಿದಾಗುತ್ತಿದೆ ಕಾವೇರಿಯ ಒಡಲು!

    – ಒಂದು ವಾರದಲ್ಲಿ ಮಳೆ ಬಾರದಿದ್ರೆ ಪರಿಸ್ಥಿತಿ ಮತ್ತಷ್ಟು ಭೀಕರತೆಗೆ ತಿರುಗುವ ಸಾಧ್ಯತೆ

    ಮಡಿಕೇರಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದೆ. ಈ ನಡುವೆ ಬೇಸಿಗೆಯ (Summer) ಬಿಸಿಯೂ ಹೆಚ್ಚಾಗುತ್ತಿದ್ದು, ಹನಿ ನೀರಿಗಾಗಿ ಪರಿ ತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ನಾಡಿನ ಜೀವನದಿ ಕಾವೇರಿಯ ಒಡಲೇ ಬತ್ತುತ್ತಿದ್ದು, ಕಾವೇರಿ ನೀರನ್ನೇ (Cauvery Water) ಆಶ್ರಯಿಸಿರುವ ಜಿಲ್ಲೆಗಳು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ. ಇನ್ನೊಂದು ವಾರದಲ್ಲಿ ಮಳೆಯಾಗದೇ ಇದ್ರೆ ಕಾವೇರಿ ತವರು ಜಿಲ್ಲೆಯ ಜನರ ಪರಿಸ್ಥಿತಿ ಊಹಿಸಲು ಅಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

    ಹೌದು. ಕೊಡಗಿನಲ್ಲಿ (Kodagu) ಹುಟ್ಟಿ 4 ಜಿಲ್ಲೆಗಳಲ್ಲಿ ಹರಿದು ನಾಡಿನ ಹಲವು ಜಿಲ್ಲೆಗಳಿಗೆ ಜೀವನಾಧಾರವಾಗಿರುವ ಕಾವೇರಿಯ ಒಡಲು ಇದೀಗ ಸಂಪೂರ್ಣವಾಗಿ ಬರಿದಾಗುತ್ತಿದೆ. ದಕ್ಷಿಣ ಕಾಶ್ಮೀರ ಎಂದೆನಿಸಿಕೊಂಡಿದ್ದ ಕೊಡಗಿನಲ್ಲಿ ವರ್ಷದ 4-5 ತಿಂಗಳು ನಿರಂತರ ಮಳೆ ಸುರಿಯುತ್ತದೆ. ಹಲವು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಗುತ್ತಿತ್ತು. ಬೇಸಿಗೆ ಬಂತೆಂದರೆ ನೀರು ಕಡಿಮೆಯಾಗೋದು ಕಾಮನ್ ಆಗಿತ್ತು. ಆದರೆ ಈ ಬಾರಿ ಕಳೆದ 50 ರಿಂದ 60 ವರ್ಷಗಳಲ್ಲೇ ನೋಡಿರದಷ್ಟು ಪ್ರಮಾಣದಲ್ಲಿ ಕಾವೇರಿ ನದಿ ಬತ್ತಿದೆ. ಇದನ್ನೂ ಓದಿ: ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿಗೊಳಿಸಿ ಚುನಾವಣಾ ಆಯೋಗ ಆದೇಶ!

    ಸಾಕಷ್ಟು ಕಡೆಗಳಲ್ಲಿ ಕಾವೇರಿ ನದಿಯಲ್ಲಿ ನೀರು ಅಲ್ಲಲ್ಲೇ ತಗ್ಗು ಪ್ರದೇಶಗಳಲ್ಲಿ ಮಾತ್ರವೇ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವುದು ಬಿಟ್ಟರೆ ಉಳಿದೆಡೆ ನದಿಯ ಒಡಲು ಬರಿದಾಗಿದ್ದು, ಕಲ್ಲುಬಂಡೆಗಳೇ ಕಾಣುತ್ತಿವೆ. ಹೀಗಾಗಿ ಕುಡಿಯಲು ಮತ್ತು ಕೃಷಿಗೆ ಕಾವೇರಿ ನೀರನ್ನೇ ಅವಲಂಬಿಸಿರುವ ರೈತರು ಸಮಸ್ಯೆಗೆ ಸಿಲುಕುವ ಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ವರುಣನ ಸಿಂಚನ- ಕಾಫಿ ಬೆಳೆಗಾರರಲ್ಲಿ ಮಂದಹಾಸ

    ಬೆಂಗಳೂರು ಮೈಸೂರು ಸೇರಿದಂತೆ ಬೇರೆ ಜಿಲ್ಲೆಯ ಮಾತಿರಲಿ, ಕಾವೇರಿ ತವರು ಕೊಡಗಿನಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಕೊಡಗಿನ ಕುಶಾಲನಗರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣುಸೂರು ಸೇರಿದಂತೆ ಹಲವು ಪಟ್ಟಣಗಳಲ್ಲಿ ಈಗಾಗಲೇ ಸ್ಥಳೀಯ ಆಡಳಿತಗಳು ಕಾವೇರಿ ನದಿಗೆ ಮರಳಿನ ಮೂಟೆಗಳಿಂದ ಕಟ್ಟೆಕಟ್ಟಿ ನೀರು ಸಂಗ್ರಹಿಸಿ ಪಟ್ಟಣಗಳಿಗೆ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುವುದಾದರೂ ಅದು ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಕಡಿಮೆಯಾಗುತಿತ್ತು. ಆದರೆ ಈ ಬಾರಿ ಮಾರ್ಚ್‌ ತಿಂಗಳ 2ನೇ ವಾರದಲ್ಲೇ ಕಾವೇರಿ ಒಡಲು ಬಹುತೇಕ ಬರಿದಾಗಿರುವುದರಿಂದ ಲಕ್ಷಾಂತರ ಜನರಲ್ಲಿ ಆತಂಕ ಮೂಡಿಸಿದೆ.

    ಈ ನಡುವೆ ಕುಶಾಲನಗರದ ಪುರಸಭೆ ಖಾಸಗಿ ಬೋರ್‌ವೆಲ್‌ ಇರುವವರ ಬಳಿ ನೀರು ಸಂಗ್ರಹಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲು ಮುಂದಾಗಿದೆ‌. ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್‌ – ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ

  • ರಾಯಚೂರು ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: 144 ಸೆಕ್ಷನ್ ಜಾರಿ ಮೂಲಕ ಕಾಲುವೆಗೆ ನೀರು

    ರಾಯಚೂರು ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: 144 ಸೆಕ್ಷನ್ ಜಾರಿ ಮೂಲಕ ಕಾಲುವೆಗೆ ನೀರು

    ರಾಯಚೂರು: ನಗರದ ಜನರಿಗೆ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ (Water Crisis) ಬಗೆಹರಿಸಲು ಜಿಲ್ಲಾಡಳಿತ 144 ಸೆಕ್ಷನ್ (Section 144) ಜಾರಿಗೊಳಿಸಿ ಟಿಎಲ್‍ಬಿಸಿ ಕಾಲುವೆಗೆ ನೀರು ಹರಿಸಲು ಮುಂದಾಗಿದೆ. ತುಂಗಭದ್ರಾ (Tungabhadra Eda Dande Kaluve) ಎಡದಂಡೆ ಕಾಲುವೆ ಪ್ರದೇಶದ ಸುತ್ತಮುತ್ತಲು 100 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ್ ಆದೇಶಿಸಿದ್ದಾರೆ.

    ನಗರದಲ್ಲಿ ಐದು ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜನ ನೀರಿಗಾಗಿ ಪರದಾಟ ನಡೆಸಿದ್ದಾರೆ. ಈ ಹಿನ್ನೆಲೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ನವಲಕಲ್ ಜಲಾಶಯಕ್ಕೆ ನೀರು ಹರಿಸಿ ಬಳಿಕ ರಾಂಪುರ ಕೆರೆ ಮೂಲಕ ರಾಯಚೂರು ನಗರಕ್ಕೆ ನೀರು ಹರಿಸಲು ಜಿಲ್ಲಾಡಳಿತ ಮುಂದಾಗಿದೆ.ಇದನ್ನೂ ಓದಿ: ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

    ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲಿ ಅಥವಾ ಪಂಪ್ ಸೆಟ್ ಹಾಗೂ ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನ ಸಂರ್ಪೂಣವಾಗಿ ನಿಷೇಧಿಸಲಾಗಿದೆ. ಜೂನ್ 17 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 27 ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯ ಪಠ್ಯಗಳಿಗೆ ಸರ್ಕಾರ ಕತ್ತರಿ- ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಠ್ಯಕ್ಕೆ ಬ್ರೇಕ್

  • ನೀರಿನ ಕೊರತೆಯಿಂದ ಶಾಲೆಗಳಿಗೆ ಬೀಗ ಹಾಕಿಲ್ಲ: ತಮಿಳುನಾಡಿನ ಸಿಎಂ

    ನೀರಿನ ಕೊರತೆಯಿಂದ ಶಾಲೆಗಳಿಗೆ ಬೀಗ ಹಾಕಿಲ್ಲ: ತಮಿಳುನಾಡಿನ ಸಿಎಂ

    ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗಿತ್ತು. ಆದರೆ ಸಿಎಂ ಎಡಪ್ಪಾಡಿ ಕೆ.ಪಳಿನಿಸ್ವಾಮಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಿನ ಕೊರತೆಯಿಂದ ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎನ್ನುವ ವರದಿ ಸುಳ್ಳು. ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಹೆಚ್ಚಿನ ನೀರು ಸಂಗ್ರಹಿಸುವ ಉದ್ದೇಶದಿಂದ ಮಲ್ಲಪೇರಿಯಾ ಅಣೆಕಟ್ಟು ಸಾಮಥ್ರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲಸ ಮಾಡುತ್ತಿದೆ. ಆದರೆ ಕೇರಳ ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮನವೊಲಿಸುವ ಯತ್ನ ನಡೆಸಿದ್ದೇವೆ ಎಂದು ಎಡಪ್ಪಾಡಿ ಕೆ.ಪಳಿನಿಸ್ವಾಮಿ ತಿಳಿಸಿದ್ದಾರೆ.

    ನಮ್ಮ ರಾಜ್ಯಕ್ಕೆ ನೀರುವ ಪೂರೈಕೆ ಮಾಡುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಧನ್ಯವಾದಗಳು. ಅವರಿಗೆ ಶೀಘ್ರವೇ ಪತ್ರ ಬರೆಯುತ್ತೇನೆ ಎಂದು ಹೇಳಿದರು.

    ನೀರಿನ ಸಮಸ್ಯೆಯಿಂದಾಗಿ ಚೆನ್ನೈನ ಓಲ್ಡ್ ಮಹಾಬಲಿಪುರಂ (ಓಎಂಆರ್) ಇಲಾಖೆಯ ಎಲ್ಲ ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕಳೆದ ವಾರ ಆದೇಶಿಸಿದ್ದವು.

    ಕಚೇರಿಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಾಗದ ಹಿನ್ನೆಲೆಯಲ್ಲಿ ಓಎಂಆರ್ ವ್ಯಾಪ್ತಿಯ ಬಹುತೇಕ ಕಂಪನಿಗಳು ಈ ನಿರ್ಧಾರಕ್ಕೆ ಬಂದಿದ್ದವು. ಕಳೆದ 200 ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗಿಲ್ಲ. ಹಾಗಾಗಿ ಮುಂದಿನ 100 ದಿನಗಳ ಕಾಲ ಮನೆಯಿಂದಲೇ ಎಲ್ಲ ಉದ್ಯೋಗಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು.

    ಓಎಂಆರ್ ವ್ಯಾಪ್ತಿಯಲ್ಲಿ ಸುಮಾರು 600 ಐಟಿ ಮತ್ತು ಐಟಿಎಸ್ ಫಾರ್ಮ್ ಗಳಿವೆ. ಇಲ್ಲಿಯ ಬಹುತೇಕ ಎಲ್ಲ ಕಂಪನಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಶೊಲಿಂಗನಲ್ಲೂರು ವ್ಯಾಪ್ತಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ನೀರು ತರಲು ಸೂಚಿಸಿತ್ತು.

    ಈ ಬಾರಿಯ ಬರಗಾಲ ಐಟಿ ಪಾರ್ಕ್ ನಲ್ಲಿರುವ ಕಂಪನಿಗಳ ಮೇಲೆ ಪ್ರಭಾವ ಬೀರಿದೆ. ಐಟಿ ಪಾರ್ಕ್ ನಲ್ಲಿಯ 46 ಕಂಪನಿಗಳಿಗೆ ಪ್ರತಿದಿನ ಸುಮಾರು 20 ಲಕ್ಷ ಲೀ. ನೀರಿನ ಅವಶ್ಯಕತೆ ಇದೆ. ಪಾರ್ಕ್ ನಲ್ಲಿಯ 17 ಕೊಳವೆ ಬಾವಿಗಳಿಂದ ನೀರು ತೆಗೆಯಲಾಗುತ್ತಿತ್ತು. ಕಳೆದ 200 ದಿನಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಕೇವಲ 10 ಲಕ್ಷ ಲೀಟರ್ ನೀರು ಸಿಗುತ್ತಿದೆ. ಉಳಿದ ನೀರನ್ನು ಟ್ಯಾಂಕರ್ ಮೂಲಕ ಹಾಕಿಸಿಕೊಳ್ಳಲಾಗುತ್ತಿದೆ. ಕೆಲ ಕಂಪನಿಗಳು ಕಟ್ಟಡದ ಗೋಡೆಯ ಮೇಲೆ ನೀರು ಉಳಿಸಿ ಜಾಗೃತಿಯ ಅಭಿಯಾನವನ್ನು ಸಹ ಕೈಗೊಂಡಿವೆ.

    ತಮಿಳಿನ `ಗೂರ್ಖಾ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ. ಜೀವಿಸಲು ನೀರು ಬೇಕು. ನೀರಿಗೆ ನಾವು ಬೆಲೆಕಟ್ಟಲು ಸಾಧ್ಯವಿಲ್ಲ. ಚೆನ್ನೈನಂತಹ ಮಹಾನಗರಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ದೇಶದ ಹಲವೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದಿದ್ದರು.

    ಮನೆಯಲ್ಲಿ ಇಂದು ನಾನು ಅರ್ಧ ಬಕೆಟ್ ನೀರಿಗಾಗಿ ಅರ್ಧ ಗಂಟೆ ಕಾಯುವಂತಾಯಿತು. ಕೊನೆಗೆ ಸ್ನಾನಕ್ಕೆ ನೀರಿಲ್ಲದಂತಾಯಿತು ಎಂದು ತಾವು ನೀರಿಗಾಗಿ ಎದುರಿಸಿದ ಪರಿಸ್ಥಿತಿಯನ್ನು ಎಸ್‍ಪಿಬಿ ಹಂಚಿಕೊಂಡಿದ್ದರು.

    ಇಂದು ಹನಿ ನೀರಿಗಾಗಿ ಅದೆಷ್ಟೋ ಜನರು ಪರದಾಡುತ್ತಿದ್ದಾರೆ. ಇಂದು ನೀರಿನ ಸಮಸ್ಯೆ ಕಾಡುತ್ತಿರುವುದಕ್ಕೆ ನಾವುಗಳೇ ಕಾರಣ. ನೀರನ್ನು ಸುಮ್ಮನೆ ಪೋಲು ಮಾಡುವುದನ್ನು ಬಿಡಿ. ನೀರನ್ನು ಉಳಿಸಲು ಕೆಲವು ಸರಳ ವಿಧಾನಗಳು ನಮ್ಮೆಲ್ಲರಿಗೂ ಗೊತ್ತಿರುತ್ತದೆ. ಆದರೆ ನಾವು ಅದನ್ನು ಪಾಲಿಸುವುದಿಲ್ಲ. ಪ್ರತಿದಿನ ನಾನಾ ರೀತಿಯ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು, ವಾರಕ್ಕೆ ಕೇವಲ ಎರಡು ಜೊತೆ ಬಟ್ಟೆ ಧರಿಸಿ. ಇದರಿಂದ ಬಟ್ಟೆ ತೊಳೆಯಲು ಖರ್ಚಾಗುವ ಅನಗತ್ಯ ನೀರು ಉಳಿಯುತ್ತದೆ. ನೀರನ್ನು ಮಿತವಾಗಿ ಬಳಿಸಿ ಎಂದು ಕಳವಳ ವ್ಯಕ್ತಪಡಿಸಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]