Tag: water bottle

  • ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ – ರೆಸ್ಟೋರೆಂಟ್‌ಗೆ 8 ಸಾವಿರ ದಂಡ

    ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ – ರೆಸ್ಟೋರೆಂಟ್‌ಗೆ 8 ಸಾವಿರ ದಂಡ

    ಭೋಪಾಲ್‌:  ಕುಡಿಯುವ ನೀರಿನ ಬಾಟಲಿಗೆ (Water Bottle) 1 ರೂ. ಜಿಎಸ್‌ಟಿ (GST) ವಿಧಿಸಿದ್ದಕ್ಕೆ ಮಧ್ಯಪ್ರದೇಶದ ಗ್ರಾಹಕ ನ್ಯಾಯಾಲಯ (Consumer Court) ರೆಸ್ಟೋರೆಂಟ್‌ ಒಂದಕ್ಕೆ 8 ಸಾವಿರ ರೂ. ದಂಡ ವಿಧಿಸಿದೆ.

    ಏನಿದು ಕೇಸ್‌?
    ದೂರುದಾರರಾದ ಐಶ್ವರ್ಯಾ ಅವರು 2021ರಲ್ಲಿ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಊಟಕ್ಕೆ ಎಂದು ತೆರಳಿದ್ದರು. ಊಟದ ವೇಳೆ ಕುಡಿಯುವ ನೀರಿನ ಬಾಟಲ್‌ ಆರ್ಡರ್‌ ಮಾಡಿದ್ದರು.

    ಊಟದ ಬಳಿಕ ರೆಸ್ಟೋರೆಂಟ್‌ ನೀರಿನ ಬಾಟಲ್ ಮೇಲೂ ಜಿಎಸ್‌ಟಿ ಹಾಕಿತ್ತು. ನೀರಿನ ಬಾಟಲಿಗೆ ಎಂಆರ್‌ಪಿ ದರ 20 ರೂ.ನಿಗದಿಯಾಗಿದ್ದರೆ ರೆಸ್ಟೋರೆಂಟ್‌ 1 ರೂ. ಜಿಎಸ್‌ಟಿ ಸೇರಿಸಿ 29 ರೂ. ದರ ವಿಧಿಸಿತ್ತು. ಹೆಚ್ಚುವರಿಯಾಗಿ 9 ರೂ. ಯಾಕೆ ಪಾವತಿಸಬೇಕು ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರೆಸ್ಟೋರೆಂಟ್‌ ಸಿಬ್ಬಂದಿ ಯಾವುದೇ ಸರಿಯಾದ ಕಾರಣ ನೀಡದೇ ಬಿಲ್ಲಿಂಗ್ ಕಾನೂನುಬದ್ಧವಾಗಿದೆ ಎಂದು ಹೇಳಿ ಮರುಪಾವತಿ ಮಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    court order law

    ನೀರಿನ ಬಾಟಲಿಗೆ ಎಂಆರ್‌ಪಿಗಿಂತಲೂ ಹೆಚ್ಚಿನ ದರವನ್ನು ವಿಧಿಸಿದ ರೆಸ್ಟೋರೆಂಟ್‌ ನಿರ್ಧಾರವನ್ನು ಐಶ್ವರ್ಯಾ ಅವರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ರೆಸ್ಟೋರೆಂಟ್‌ ಪರ ವಕೀಲರು, ಆಸನ, ಎಸಿ ಮತ್ತು ಟೇಬಲ್‌ ಮೇಲಿನ ಸೇವೆಯಂತಹ ಹೆಚ್ಚುವರಿ ಸೇವೆಗಳನ್ನು ನೀಡಿದ್ದಕ್ಕೆ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸುವುದು ಸಮರ್ಥನೀಯ ಎಂದು ವಾದಿಸಿದ್ದರು.

    ಕೋರ್ಟ್‌ ರೆಸ್ಟೋರೆಂಟ್‌ ವಾದವನ್ನು ತಿರಸ್ಕರಿಸಿತು. ಬಾಟಲಿ ನೀರಿಗೆ ಜಿಎಸ್‌ಟಿಯನ್ನು ಈಗಾಗಲೇ ಎಂಆರ್‌ಪಿಯಲ್ಲಿ ಸೇರಿಸಲಾಗಿದೆ ಎಂದು ತೀರ್ಪು ನೀಡಿತು. ಜಿಎಸ್‌ಟಿಯಾಗಿ ವಿಧಿಸಲಾದ 1 ರೂ.ಗಳನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗೆ ಆದೇಶಿಸಿತು. ಇದನ್ನೂ ಓದಿ: Jaffar Express Hijack – ವೀಡಿಯೋ ರಿಲೀಸ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

    ಮಾನಸಿಕ ಯಾತನೆ ಮತ್ತು ಸೇವೆಯ ಕೊರತೆಗಾಗಿ 5,000 ರೂ., ಕಾನೂನು ವೆಚ್ಚಗಳಿಗಾಗಿ 3,000 ರೂ. ಸೇರಿದಂತೆ ಒಟ್ಟು 8,000 ರೂ.ಗಳನ್ನು ಗ್ರಾಹಕರಿಗೆ ಪಾವತಿಸುವಂತೆ ಕೋರ್ಟ್‌ ರೆಸ್ಟೋರೆಂಟ್‌ಗೆ ಸೂಚಿಸಿತು.

  • ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

    ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

    ಬೆಂಗಳೂರು: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು (Plastic Water Bottles) ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ (Eshwar Khandre), ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.

    ತತ್ಸಂಬಂಧ ನಿಯಮ ರೂಪಿಸಲು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಆದಾಗ್ಯೂ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    ಮೊದಲಿಗೆ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿಗೆ (Mineral Water Bottles) ಕಡಿವಾಣ ಹಾಕಬೇಕಾಗಿದೆ. ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ/ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಉತ್ಪಾದಕರ ವಿಸ್ತರಿತ ಜವಾಬ್ದಾರಿಯಂತೆ ಯಾವುದೇ ಉತ್ಪನ್ನವನ್ನು ತಯಾರಿಸುವವರು, ತಮ್ಮ ಉತ್ಪನ್ನಗಳಿಂದ ಪರಿಸರ ಮೇಲಾಗುವ ಪರಿಣಾಮಗಳನ್ನು ಉತ್ಪನ್ನವು ಗ್ರಾಹಕರ ಕೈಸೇರಿದ ನಂತರವೂ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಮರು ಖರೀದಿ ಮಾಡಿ ವಿಲೇವಾರಿ ಮಾಡಿದಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಬಹುದು ಎಂಬುದು ಈಶ್ವರ ಖಂಡ್ರೆ ಅವರ ಅಭಿಮತವಾಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

  • ಹಂಪಿ ಉತ್ಸವ: ಗಾಯಕ ಕೈಲಾಶ್‌ ಕೇರ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು

    ಹಂಪಿ ಉತ್ಸವ: ಗಾಯಕ ಕೈಲಾಶ್‌ ಕೇರ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು

    ವಿಜಯನಗರ: ಐತಿಹಾಸಿಕ ಹಂಪಿ ಉತ್ಸವ (Hampi Utsav) ಸಮಾರೋಪ ಸಮಾರಂಭದ ವೇಳೆ ಪದ್ಮಶ್ರೀ ಪುರಸ್ಕೃತ  ಗಾಯಕ ಕೈಲಾಶ್‌ ಕೇರ್ (Kailash Kher) ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ.

    ಕನ್ನಡ ಹಾಡು (Kannada Song) ಹಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿನಿಂದ ಪ್ರೇಕ್ಷಕರ ಗ್ಯಾಲರಿಯಿಂದ ನೀರಿನ ಬಾಟಲಿ (Water Bottle) ಎಸೆದು ಅಪಮಾನ ಮಾಡಿದ್ದಾರೆ.

    ಹಂಪಿ ಉತ್ಸವ ಸಮಾರೋಪ ಸಮಾರಂಭ ನಡೆಯುತ್ತಿದ್ದ ಗಾಯತ್ರಿ ಪೀಠದ ವೇದಿಕೆಯಲ್ಲಿ ಈ ಘಟನೆ ನಡೆದಿದೆ. ಬಾಟಲಿ ಎಸೆದ ಬಳಿಕವೂ ಕೈಲಾಶ್‌ ಕೇರ್ ಗಾಯನ ಮುಂದುವರಿಸಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ  ಹೋಟೆಲ್ ಮಾಲೀಕ

    5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ ಹೋಟೆಲ್ ಮಾಲೀಕ

    ಹೈದರಾಬಾದ್: ಹೋಟೆಲ್ ಮಾಲೀಕನೊಬ್ಬ 5 ರೂಪಾಯಿಗೆ ಗ್ರಾಹಕನ ಜೊತೆಗೆ ಗಲಾಟೆ ಮಾಡಿ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯ, ಹೈದರಾಬಾದ್‍ನ ತಿಲಕ್ ನಗರದ ಹೋಟೆಲ್‍ಗೆ ದಂಡ ವಿಧಿಸಿದೆ.

    ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ವಂಶಿ ತನ್ನ ಸ್ನೇಹಿತರ ಜೊತೆಗೆ ಬಿರಿಯಾನಿ ಹೌಸ್‍ವೊಂದಕ್ಕೆ ಹೋಗಿದ್ದರು. ಊಟ ಮಾಡಿದ ಬಳಿಕ ಜಿಎಸ್‍ಟಿ ಎಲ್ಲಾ ಸೇರಿ 1,127 ರೂಪಾಯಿ ಬಿಲ್ ಆಗಿದೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5 ರೂಪಾಯಿ ಬಿಲ್ ಮಾಡಿದ ವಿಚಾರ ತಿಳಿದ ವಂಶಿ ಹೋಟೆಲ್ ಮಾಲೀಕರಿಗೆ ಪ್ರಶ್ನೆ ಮಾಡಿದ್ದಾಳೆ. ಆಗ ದೊಡ್ಡ ಜಗಳವೇ ಆಗಿದೆ.

    MONEY

    ನಂತರ ವಂಶಿ, ಹೋಟೆಲ್ ಮ್ಯಾನೇಜ್‍ಮೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5.50 ರೂಪಾಯಿ ವಿಧಿಸಿದ್ದಲ್ಲದೆ, ಎಲ್ಲರೆದುರು ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಇದಾದ ಬಳಿಕ ಜಿಲ್ಲಾ ಗ್ರಾಹಕ ಆಯೋಗದ 2ನೇ ಪೀಠದ ಮುಖ್ಯಸ್ಥ ವಕ್ಕಂತಿ ನರಸಿಂಹ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಹೋಟೆಲ್ ಸಿಬ್ಬಂದಿ ಅಶ್ಲೀಲ ಪದ ಬಳಸಿ ನಿಂದಿಸಿ, ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲವಾಗಿರುವುದು ಮತ್ತು ಹೆಚ್ಚುವರಿ 5.50 ರೂಪಾಯಿ ಬಿಲ್ ಮಾಡಿರುವುದು ಸಾಬೀತಾಗಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

    ಹೆಚ್ಚುವರಿ 5.50 ರೂಪಾಯಿಗೆ ಶೇ.10 ರಷ್ಟು ಬಡ್ಡಿ ಸೇರಿಸಿ 5000 ರೂಪಾಯಿಯನ್ನು ಗ್ರಾಹಕ ವಂಶಿಗೆ ನೀಡಬೇಕು. ಜಿಲ್ಲಾ ಗ್ರಾಹಕ ರಕ್ಷಣಾ ಮಂಡಳಿಯ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ 50 ಸಾವಿರ ರೂಪಾಯಿ ದಂಡವನ್ನು 45 ದಿನದ ಒಳಗೆ ಕಟ್ಟಬೇಕು. ಮತ್ತೊಮ್ಮೆ ಈ ತಪ್ಪು ಮಾಡದಂತೆ ನ್ಯಾಯಾಲಯ ಆದೇಶಿದೆ.

  • ಆಡಿ ಕಾರು ಅಪಘಾತ – ನೀರಿನ ಬಾಟಲ್‍ನಿಂದ 7 ಮಂದಿ ಸಾವು?

    ಆಡಿ ಕಾರು ಅಪಘಾತ – ನೀರಿನ ಬಾಟಲ್‍ನಿಂದ 7 ಮಂದಿ ಸಾವು?

    ಬೆಂಗಳೂರು: ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ಕಾರು ಅಪಘಾತಕ್ಕೆ ನೀರಿನ ಬಾಟಲ್ ಸಹ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬಂದಿದೆ.

    ಹೌದು. ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಗಳ ಪಟ್ಟಿಗೆ ಈ ಅಪಘಾತ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

     

    ಒಂದು ತಂಡ 7 ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಎಲ್ಲೆಲ್ಲಿಗೆ ಹೋಗಿದ್ದರು? ಏನು ಮಾಡಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದರೆ ಇನ್ನೊಂದು ತಂಡ ಆಡಿ ಕಾರು ಇಷ್ಟೊಂದು ವೇಗವಾಗಿ ಹೋಗಲು ಕಾರಿನಲ್ಲೇ ಯಾವುದಾದರೂ ತಾಂತ್ರಿಕ ದೋಷ ಇತ್ತೆ ಎಂಬುದರ ಬಗ್ಗೆ ತನಿಖೆ ಆರಂಭಿಸಿದೆ.

    ಈ ತನಿಖೆಯ ವೇಳೆ ನೀರಿನ ಬಾಟಲ್ ಸಿಕ್ಕಿದೆ. ನೀರಿನ ಬಾಟಲ್ ಕಾರಿನಲ್ಲಿ ಇರುವುದು ಸಾಮಾನ್ಯ. ಆದರೆ ಇಲ್ಲಿ ನೀರಿನ ಬಾಟಲ್ ಈ ಎಲ್ಲಿ ಸಿಕ್ಕಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ ವಾಟರ್ ಬಾಟಲ್ ಬಿದ್ದಿತ್ತು. ಇದರಿಂದಾಗಿ ಓವರ್ ಸ್ಪೀಡ್‍ನಲ್ಲಿದ್ದ ಕಾರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಇದ್ದಿರಬಹುದು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು

    ನೀರಿನ ಬಾಟಲ್ ಪೂರ್ಣವಾಗಿ ಭರ್ತಿಯಾಗಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದೇ ಇರುವುದಿಲ್ಲ. ಹೀಗಾಗಿ ಆಡಿ ಕಾರು ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿದ ವೇಗದಲ್ಲಿ ಸಂಚರಿಸಿ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯಿದೆ.

    ನೀರಿನ ಬಾಟಲ್ ಮೊದಲೇ ಕೆಳಗೆ ಬಿದ್ದಿತ್ತಾ ಅಥವಾ ಅಪಘಾತದ ರಭಸಕ್ಕೆ ಬಿದ್ದಿದ್ಯಾ ಎನ್ನುವುದು ಗೊತ್ತಿಲ್ಲ. ಆದರೆ ಬ್ರೇಕ್ ಅಡಿಯಲ್ಲೇ ಬಾಟಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮೊದಲೇ ಬಿದ್ದಿರಬಹುದು ಎನ್ನುವುದು ಪೊಲೀಸರ ಅನುಮಾನ. ಇದನ್ನೂ ಓದಿ : ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

  • ಕರ್ತವ್ಯನಿರತ ಪೊಲೀಸರಿಗೆ ಬಿರಿಯಾನಿ ಊಟ ನೀಡಿದ ಕಾಫಿನಾಡ ಯುವಕರು

    ಕರ್ತವ್ಯನಿರತ ಪೊಲೀಸರಿಗೆ ಬಿರಿಯಾನಿ ಊಟ ನೀಡಿದ ಕಾಫಿನಾಡ ಯುವಕರು

    ಚಿಕ್ಕಮಗಳೂರು: ಇಡೀ ದಿನ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವುದರ ಜೊತೆ ಕೊರೊನಾ ನಿಯಂತ್ರಣಕ್ಕೆ ಜನರನ್ನು ಗುಂಪು ಸೇರದಂತೆ ರಸ್ತೆ ಕಾಯುವ ಪೊಲೀಸರಿಗೆ ಕಾಫಿನಾಡಿನ ಯುವಕರು ಇಂದು ಮಧ್ಯಾಹ್ನ ಬಿರಿಯಾನಿ ಊಟ ನೀಡಿದ್ದಾರೆ.

    ಚಿಕ್ಕಮಗಳೂರು ನಗರದ ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಅವರ ಸ್ನೇಹಿತರು ವೆಜ್ ಬಿರಿಯಾನಿ ಹಾಗೂ ಚಿಕನ್ ಬಿರಿಯಾನಿ ಎರಡೂ ಊಟವನ್ನ ತಯಾರಿಸಿಕೊಂಡು ಎಲ್ಲಾ ಪೊಲೀಸರಿಗೂ ವಿತರಿಸಿದ್ದಾರೆ. ನಗರದ ಮುಖ್ಯ ಸರ್ಕಲ್, ಪೊಲೀಸ್ ಠಾಣೆ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಡ್ಯೂಟಿ ಮಾಡುವ 18 ಸರ್ಕಲ್‍ಗಳಿಗೂ ಹೋಗಿ ಊಟ ಹಾಗೂ ನೀರಿನ ಬಾಟಲಿ ನೀಡಿದ್ದಾರೆ.

    ಕೊರೊನಾ ಮೊದಲ ಅಲೆಯಲ್ಲೂ ಕೂಡ ಇದೇ ತಂಡ ಆಗಲೂ ಪೊಲೀಸರಿಗೆ ಮಧ್ಯಾಹ್ನದ ಊಟವಾಗಿ ಬಿರಿಯಾನಿ ನೀಡಿದ್ದರು. ಇದೇ ವೇಳೆ, ಕೇವಲ ಪೊಲೀಸರಿಗಷ್ಟೇ ಅಲ್ಲದೆ ನಗರದಲ್ಲಿ ಠಾಣೆಯಿಂದ ಠಾಣೆಗೆ ಸಂಚರಿಸುತ್ತಿರುವಾಗ ದಾರಿಯುದ್ಧಕ್ಕೂ ಸಿಕ್ಕ ಜನಸಾಮಾನ್ಯರು, ನಿರ್ಗತಿಕರು, ನಿರಾಶ್ರಿತರಿಗೂ ಬಿರಿಯಾನಿ ಹಾಗೂ ನೀರಿನ ಬಾಟಲಿ ನೀಡಿದ್ದಾರೆ. ಜೊತೆಗೆ ಇದೇ ಯುವಕರ ತಂಡ ಕೆಲ ಬಡವರಿಗೆ ಆಹಾರ ಸಾಮಾಗ್ರಿಯ ಕಿಟ್ ಕೂಡ ಹಂಚಿದ್ದಾರೆ.

    ಪೊಲೀಸರು ಗೂಂಡಾಗಳಲ್ಲ. ಹೊಡೆಯುತ್ತಾರೆ ಎಂದು ಹೇಳೋದು ತಪ್ಪು. ಅವರು ಹೊಡೆಯುವು ನಮ್ಮ ಜೀವ ಉಳಿಸಲು. ಜನಸಾಮಾನ್ಯರು ಬೇಕಾಬಿಟ್ಟಿ ಓಡಾಡಬಾರದು. ಸರ್ಕಾರ ಹಾಗೂ ಪೊಲೀಸರಿಗೆ ಸಹಕಾರ ಕೊಡಬೇಕು. ಪೊಲೀಸರು ಇಡೀ ದಿನ ಬಿಸಿಲಲ್ಲಿ ನಿಂತು ನಮ್ಮನ್ನ ಕಾಯುತ್ತಾರೆ. ಅವರು ಹೊಡೆಯುವುದು ಕೂಡ ನಮ್ಮ ಒಳ್ಳೆದಕ್ಕೆ ಅವರೊಂದಿಗೆ ಸಹಕರಿಸುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.

    ಇಂತಹಾ ಕಾಲದಲ್ಲ ಒಬ್ಬರು ಒಬ್ಬರಿಗೆ ಸಹಾಯ ಮಾಡಬೇಕು. ನಾವು ಮಾನವೀಯತೆಯಿಂದ ಈ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನ ನೋಡಿ ಮತ್ತಷ್ಟು ಜನ ಬಡವರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಉದ್ದೇಶ ಎನ್ನುವುದು ಯುವಕರ ಅಭಿಪ್ರಾಯ.

  • ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಮಡಿಕೇರಿ: ಸರ್ಕಾರಿ ಶಿಕ್ಷಕರೊಬ್ಬರು ಕೇವಲ ವೃತ್ತಿಗೆ ಸೀಮಿತವಾಗದೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ಮರುಬಳಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪರಿಸರ ಪ್ರೇಮಿಯಾಗಿ ಇತರರಿಗೆ ಮಾದರಿ ಆಗಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಸರ್ಕಾರಿ ಶಿಕ್ಷಕರಾಗಿ ಪರಿಸರ ಕಾಳಜಿ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಕ್ಯಾನ್‍ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.

    ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ. ಅಲ್ಲದೇ ಸಾಮಾನ್ಯ ಹೂ ಕುಂಡಗಳಿಗಿಂತಲೂ ಇವು ಬಾಳಿಕೆಯಿಂದ ಕೂಡಿವೆ. ಕ್ಯಾನ್‍ಗಳನ್ನು ನೆಲದಲ್ಲಿಡುವ ಕುಂಡಗಳಾಗಿ ಮಾತ್ರವಲ್ಲದೇ ಹ್ಯಾಂಗಿಂಗ್ ಪಾಟ್‍ಗಳು, ಗೋಡೆ ಮತ್ತು ಕಂಬಗಳಿಗೆ ವಾಲ್ ಪಾಟ್‍ಗಳನ್ನಾಗಿಯೂ ಬಳಸಬಹುದು.

    ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್‍ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳ ಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ವಿನ್ಯಾಸ ಮಾಡಲಾಗಿದೆ.

  • ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

    ನವದೆಹಲಿ: 11 ವರ್ಷದ ಬಾಲಕಿಯೊಬ್ಬಳು ಶಾಲೆಯಲ್ಲಿ ಗೆಳತಿ ತಂದಿದ್ದ ಬಾಟಲ್‍ನಲ್ಲಿ ನೀರು ಕುಡಿದು ಸಾವನ್ನಪ್ಪಿದ್ದು, ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

    ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರದಂದು ವಿದ್ಯಾರ್ಥಿನಿಯೊಬ್ಬಳು ಗೊತ್ತಿಲ್ಲದೆ ಆ್ಯಸಿಡ್ ಮಿಶ್ರಿತ ನೀರು ತುಂಬಿದ್ದ ಬಾಟಲಿಯನ್ನು ಶಾಲೆಗೆ ತಂದಿದ್ದಳು. ಮಧ್ಯಾಹ್ನ ಊಟಕ್ಕೆ ಸಮಯದಲ್ಲಿ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಕೂತು ಊಟ ಮಾಡುತ್ತಿದ್ದಳು. ಈ ವೇಳೆ ಆಕೆಯ ಗೆಳತಿಯೊಬ್ಬಳು ಈ ಆ್ಯಸಿಡ್ ಮಿಶ್ರಿತ ನೀರನ್ನು ಕುಡಿದಿದ್ದಾಳೆ. ಬಳಿಕ ಒದ್ದಾಡುತ್ತ ನೆಲಕ್ಕೆ ಬಿದ್ದಿದ್ದಾಳೆ.

    ತಕ್ಷಣ ಬಾಲಕಿಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಸದ್ಯ ಬಾಲಕಿ ಕುಡಿದ ನೀರಿನ ಬಾಟಲಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದು, ನೀರಿನಲ್ಲಿ ಯಾವ ಆ್ಯಸಿಡ್ ಅಂಶವಿತ್ತು ಎಂದು ನಿಖರ ಮಾಹಿತಿ ಲ್ಯಾಬ್ ರಿಪೋರ್ಟ್ ಬಂದ ಮೇಲೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ

    ಹೈದರಾಬಾದ್: ನೀರಿನ ಬಾಟಲಿಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ ಹೈದರಾಬಾದ್ ಗ್ರಾಹಕರ ವೇದಿಕೆ ಇಲ್ಲಿನ ಬಂಜಾರಾ ಹಿಲ್ಸ್ ನ ಜಿವಿಕೆ ಮಾಲ್‍ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ ದೂರುದಾರರಿಗೆ 1 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.

    ವಿಜಯ್ ಗೋಪಾಲ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿದೆ. ನನ್ನ ಸ್ವಂತ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಹಾಗೆ ಒಂದು ನೀರಿನ ಬಾಟಲಿಗೆ ಮಲ್ಟಿಪ್ಲೆಕ್ಸ್ ನೊಳಗೆ 50 ರೂ. ತೆಗೆದುಕೊಂಡ್ರು. ಇದೇ ಬಾಟಲಿಗೆ ಹೊರಗಡೆ 20 ರೂ. ಎಂಆರ್‍ಪಿ ಇದೆ ಎಂದು ವಿಜಯ್ ಗ್ರಾಹಕರ ವೇದಿಕೆಗೆ ತಿಳಿಸಿದ್ದರು. ಕಳೆದ ಜೂನ್‍ನಲ್ಲಿ ವಿಜಯ್ ಮಲ್ಟಿಪ್ಲೆಕ್ಸ್ ಗೆ ಭೇಟಿ ನೀಡಿದ್ದು , ಮಾಲ್‍ಗಳು ಗ್ರಾಹಕರಿಂದ ಹೆಚ್ಚಿನ ಹಣ ಪಡೆದು ಜನರನ್ನ ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದರು.

    ಒಂದೇ ಬಾಟಲಿಗೆ ಎರಡು ಎಂಆರ್‍ಪಿ ಇರಬಾರದು ಎಂಬುದನ್ನು ಸ್ಪಷ್ಟಪಡಿಸಿರುವ ಗ್ರಾಹಕರ ವೇದಿಕೆ, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸದಂತೆ ಐನಾಕ್ಸ್ ಗೆ ಸೂಚಿಸಿದೆ. ಅಲ್ಲದೆ ಗ್ರಾಹಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಥಿಯೇಟರ್ ನಿರ್ವಾಹಕರಿಗೆ ಹೇಳಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳಷ್ಟೆ ಹೈದರಾಬಾದ್‍ನ ಶಾಹ್ ಗೌಸ್ ರೆಸ್ಟೊರೆಂಟ್‍ನಲ್ಲಿ ತಂಪು ಪಾನೀಯಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸ್ವೀಕರಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ ಫೆಬ್ರವರಿಯಲ್ಲಿ ಇಲ್ಲಿನ ಬಂಜಾರಾ ಹಿಲ್ಸ್ ನ ಸಾರ್ವಿ ಹೋಟೆಲ್‍ನಲ್ಲಿ 20 ರೂ. ಎಂಆರ್‍ಪಿ ಇದ್ದ ನೀರಿನ ಬಾಟಲಿಗೆ 40 ರೂ. ಸ್ವೀಕರಿಸಿದ್ದಕ್ಕೆ ಹೋಟೆಲ್‍ನವರಿಗೆ 20 ಸಾವಿರ ರೂ ದಂಡ ವಿಧಿಸಲಾಗಿತ್ತು ಎಂದು ವರದಿಯಾಗಿದೆ.

    ವಿಜಯ್ ಗೋಪಾಲ್ ಈ ಹಿಂದೆ ಹೈದರಾಬಾದ್‍ನ ಕಾಚಿಗುಡದಲ್ಲಿ ವೆಂಕಟರಮಣ ಥಿಯೇಟರ್ ಹಾಗೂ ತಾರಕರಾಮ ಥಿಯೇಟರ್‍ನಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಆಹಾರ ಮಾರಾಟ ಮಾಡಿದ್ದಕ್ಕೆ ದೂರು ದಾಖಲಿಸಿದ್ದರು.