ಬೆಂಗಳೂರು: ಜಲಮಂಡಳಿಯ ದುಬಾರಿ ವಾಟರ್ ಬಿಲ್ (Water Bill) ನೋಡಿ ಜನ ಶಾಕ್ ಆಗಿದ್ದಾರೆ. ಎರಡ್ಮೂರು ಪಟ್ಟು ಹೆಚ್ಚು ಬಿಲ್ ಬಂದಿದ್ದಕ್ಕೆ, ನಾವು ಬಿಲ್ ಕಟ್ಟೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ಬೆಂಗಳೂರು (Bengaluru) ಜಲಮಂಡಳಿಯ ವಾಟರ್ ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಬಸವನಗುಡಿ ವಿಧಾನಸಭಾ ಕ್ಷೇತ್ರದ ಶ್ರಿನಗರದ 11ನೇ ಮುಖ್ಯರಸ್ತೆಯ ನಿವಾಸಿಗಳಿಗೆ ಎರಡ್ಮೂರು ಪಟ್ಟು ವಾಟರ್ ಬಿಲ್ ಬಂದಿದೆ. ಏಕಾಏಕಿ ಹೆಚ್ಚುವರಿ ಬಿಲ್ ಬರೋಕೆ ಕಾರಣ ಏನು ಅಂತ ಜಲಮಂಡಳಿ ಅಧಿಕಾರಿಗಳು ಕೂಡ ಹೇಳ್ತಿಲ್ಲ. ನಾವು ಯಾವ್ದೇ ಕಾರಣಕ್ಕೆ ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಇನ್ನು ಶ್ರೀನಗರದ 11ನೇ ಕ್ರಾಸ್‌ನ ಹಲವು ಮನೆಗಳಿಗೆ ವಾಟರ್ ಬಿಲ್ ಕೊಟ್ಟಿಲ್ಲ. ಜಲಮಂಡಳಿಯ ಸಿಬ್ಬಂದಿಗಳನ್ನೂ ಸರ್ವೆ ಕಾರ್ಯಕ್ಕೆ ಬಳಸಿಕೊಂಡಿದ್ದರಿಂದ ಬಿಲ್ ನೀಡಿಲ್ಲ. ಎರಡು ತಿಂಗಳ ಬಿಲ್ ಕಟ್ಟುವಂತೆ ಅಧಿಕಾರಿಗಳು ಜನರಿಗೆ ಏಕಾಏಕಿ ವಾಟ್ಸಪ್‌ಗೆ ಮೆಸೆಜ್ ಕಳಿಸಿದ್ದಾರೆ. ಈ ವೇಳೆ ಎರಡ್ಮೂರು ಪಟ್ಟು ಬಿಲ್ ಹೆಚ್ಚಳ ಆಗಿದ್ದು ಗೊತ್ತಾಗಿದೆ. ಎರಡು ತಿಂಗಳ ಹಿಂದೆ ಆರು ನೂರು, ಏಳು ನೂರು ಬರ್ತಿದ್ದ ಬಿಲ್, ಈ ತಿಂಗಳು 2 ಸಾವಿರಿಂದ ನಾಲ್ಕು ಸಾವಿರ ಬಿಲ್ ಬಂದಿದೆ.
ಬಿಲ್ ನೀಡಲು ಜಲಮಂಡಳಿ ದಿನಾಂಕವನ್ನ ನಿಗದಿ ಮಾಡಲಾಗಿರುತ್ತೆ. ಆ ದಿನಾಂಕ ಮುಗಿದ ಬಳಿಕ ಸಿಬ್ಬಂದಿ ಬಿಲ್ ಕೊಡ್ತಿದ್ದಾರೆ. ಇದರಿಂದ ಗ್ರಾಹಕರು ಬಳಸಿದ ನೀರಿನ ಪ್ರಮಾಣಕ್ಕಿಂತ, ಮತ್ತೊಂದು ಸ್ಲ್ಯಾಬ್‌ಗೆ ಆಡ್ ಆಗ್ತಿದೆ. ಈ ಟೆಕ್ನಿಕಲ್ ಸಮಸ್ಯೆಯಿಂದಲೂ ಬಿಲ್ ಹೆಚ್ಚು ಬರುತ್ತಿದೆ ಎನ್ನಲಾಗ್ತಿದೆ. ಇನ್ನೂ ಕೆಲ ಮನೆಗಳಿಗೆ ಹೊಸ ಮೀಟರ್ ಗಳನ್ನ ಒತ್ತಾಯ ಪೂರ್ವಕವಾಗಿ ಅಳವಡಿಸಲಾಗಿದೆಯಂತೆ. ಅದೇನೆ ಇರಲಿ ಹೆಚ್ಚುವರಿ ಬಿಲ್ ಬರೋದಕ್ಕೆ ಕಾರಣ ಏನು ಅಂತ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.


















