Tag: watchman

  • ಬೀದಿ ಶ್ವಾನಗಳಿಗೆ ಆಹಾರ ಹಾಕಿದ್ದಕ್ಕೆ ಮಹಿಳೆ ವಿರುದ್ಧ ವ್ಯಕ್ತಿ ಕಿಡಿ

    ಬೀದಿ ಶ್ವಾನಗಳಿಗೆ ಆಹಾರ ಹಾಕಿದ್ದಕ್ಕೆ ಮಹಿಳೆ ವಿರುದ್ಧ ವ್ಯಕ್ತಿ ಕಿಡಿ

    ಮುಂಬೈ: ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ ವ್ಯಕ್ತಿಯೋರ್ವ ಮಹಿಳೆ ವಿರುದ್ಧ ಕಿಡಿಕಾರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಟೆಡ್ ದಿ ಸ್ಟೋನರ್ ಎಂಬವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುಂಬೈನ ಬೊರಿವಾಲಿ ಪ್ರದೇಶದ ಯೋಗಿ ನಗರದಲ್ಲಿ ವ್ಯಕ್ತಿಯೋರ್ವ ಬೀದಿ ಬದಿಯ ಶ್ವಾನಗಳಿಗೆ ಆಹಾರ ನೀಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

    ವೀಡಿಯೋದಲ್ಲಿ ಮಹಿಳೆಯೊಬ್ಬಳು, ಬ್ಲೂ ಕಲರ್ ಟಿ-ಶರ್ಟ್ ಹಾಕಿರುವ ವ್ಯಕ್ತಿಗೆ ನೀವು ಮುಗ್ಧ ಪ್ರಾಣಿಗಳನ್ನು ಹೊಡೆಯುವ ಹಾಗೆ ಇಲ್ಲ ಎಂದು ತಿಳಿಸುತ್ತಾಳೆ. ಅದಕ್ಕೆ ವ್ಯಕ್ತಿ ನನಗೆ ಏನು ಮಾಡಬೇಕು ಎಂಬುದು ತಿಳಿದಿದೆ. ನಿನ್ನಿಂದ ಕಲಿಯುವ ಅಗತ್ಯವಿಲ್ಲ. ನನ್ನ ಜೊತೆ ಹಾಗೂ ನನ್ನ ವಾಚ್ ಮ್ಯಾನ್ ಜೊತೆ ನೀನು ಮಾತನಾಡಬೇಡ ಎಂದು ಹೇಳುತ್ತಾನೆ.

    ನಂತರ ಮಹಿಳೆ ವಾಚ್ ಮ್ಯಾನ್‍ಗೆ ಶ್ವಾನಗಳು ಅಸಹಾಯಕ ಅವುಗಳಿಗೆ ಹೊಡೆಯಬೇಡಿ ಎಂದಾಗ ವ್ಯಕ್ತಿ ಶ್ವಾನಗಳು ಅಸಹಾಯಕವೆಂದರೆ ನಿನ್ನ ಮನೆಗೆ ಕರೆದೊಯ್ದು, ನಿನಗೆ ಬೇಕಾದನ್ನು ಮಾಡು ಎಂದು ಹೇಳುತ್ತಾನೆ. ಬಳಿಕ ಮಹಿಳೆ ನಿಮ್ಮ ಮಕ್ಕಳಿಗೂ ನೀವು ಹೀಗೆ ಹೊಡೆಯುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಇದರಿಂದ ಕೋಪಗೊಂಡ ವ್ಯಕ್ತಿ, ನನ್ನ ಮಕ್ಕಳನ್ನು ಶ್ವಾನಕ್ಕೆ ಹೋಲಿಸಬೇಡ. ಶ್ವಾನಕ್ಕೂ ಮನುಷ್ಯರಿಗೂ ವ್ಯತ್ಯಾಸವಿದೆ. ಮಾತನಾಡುವಾಗ ನಿನ್ನ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಿಡಿಕಾರುತ್ತಾನೆ.

    ಈ ವೇಳೆ ಮಹಿಳೆ ನೀವು ಮಾಡುತ್ತಿರುವುದು ತಪ್ಪು ಎಂದು ಪ್ರತಿವಾದಿಸಿದಾಗ, ವ್ಯಕ್ತಿ ಮತ್ತಷ್ಟು ಆಕ್ರೋಶಗೊಂಡು ಮಹಿಳೆ ಸಮೀಪ ಬಂದು ನೀನು ಮಾಡುತ್ತಿರುವುದು ತಪ್ಪು. ಹೀಗೆ ಮಾತನಾಡುತ್ತಿದ್ದರೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳುತ್ತಾನೆ. ಬಳಿಕ ತನ್ನ ವಾಚ್ ಮ್ಯಾನ್‍ಗೆ ನನ್ನ ಕಟ್ಟಡದಲ್ಲಿ ಯಾವುದಾದರೂ ಶ್ವಾನ ಕಂಡರೆ ಅದನ್ನು ಕೋಲಿನಿಂದ ಹೊಡೆದು ಓಡಿಸದಿದ್ದರೆ, ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾನೆ.

     

    View this post on Instagram

     

    A post shared by Ted The Stoner (@tedthestoner)

    ಈ ವೀಡಿಯೋ ವೈರಲ್ ಆಗುತ್ತಿದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 980ಸಾವಿರ ವಿವ್ಸ್ ಪಡೆದುಕೊಂಡಿದೆ. ಪ್ರಾಣಿ ಪ್ರಿಯರು ವ್ಯಕ್ತಿ ವಿರುದ್ಧ ಕಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಿಎಸ್‍ವೈ ಮನೆಯಲ್ಲಿ ವಾಚ್‍ಮ್ಯಾನ್ ಕೆಲಸ ಖಾಲಿ ಇದೆ: ಸಿಟಿ ರವಿ

    ಬಿಎಸ್‍ವೈ ಮನೆಯಲ್ಲಿ ವಾಚ್‍ಮ್ಯಾನ್ ಕೆಲಸ ಖಾಲಿ ಇದೆ: ಸಿಟಿ ರವಿ

    – ಈಗಲೇ ಜಮೀರ್ ಡ್ರಗ್ಸ್ ಪೆಡ್ಲರ್ ಅಂತ ಹೇಳಲ್ಲ
    – ಜಮೀರ್ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ?

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಅವರ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ? ಬಿಎಸ್ ಯಡಿಯೂರಪ್ಪನವರು ಸಿಎಂ ಆದರೆ ಅವರ ಮನೆಯಲ್ಲಿ ವಾಚ್‍ಮ್ಯಾನ್ ಆಗುತ್ತೇನೆ ಎಂದಿದ್ದರು. ವಾಚ್‍ಮ್ಯಾನ್ ಕೆಲಸ ಖಾಲಿ ಇದೆ. ಯಾವಾಗ ಮಾಚ್‍ಮ್ಯಾನ್ ಆಗುತ್ತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಅವರು, ಜಮೀರ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಪವರ್ ಫುಲ್ ಆಗಿದ್ದು, ಬಿಎಸ್‍ವೈ ಅವರು ಸಿಎಂ ಆಗಿ 1 ವರ್ಷ ಆಗಿದೆ. ಆದ್ದರಿಂದ ಜನ ಜಮೀರ್ ಅವರನ್ನು ಯಾವಾಗ ವಾಚ್‍ಮ್ಯಾನ್ ಆಗ್ತಿಯಾ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ಆಸ್ತಿ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಆಸ್ತಿ ಹೇಗೆ ಬಂತು ಎಂದು ಜನರು ಈಗ ಪ್ರಶ್ನಿಸುತ್ತಿದ್ದಾರೆ. ಜಮೀರ್ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ? ಎಂದು ಹೇಳಿದರು. ಇದನ್ನೂ ಓದಿ: ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ

    ಜಮೀರ್ ಅವರು ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತೆ ಎಂದಿದ್ದಾರೆ. ಯಾವ ರೀತಿ ನೆಮ್ಮದಿ ಸಿಗುತ್ತೆ ಅಲ್ಲಿ ಎಂದು ಹೇಳಲಿ. ಈ ಬಗ್ಗೆ ಅವರು ಬೆಳಕು ಚೆಲ್ಲಬೇಕಿದೆ. ಅವರ ಪಾಸ್ ಪೋರ್ಟ್ ಪರಿಶೀಲನೆ ಮಾಡಿಸಬೇಕು. ಅದನ್ನು ಮುಚ್ಚಿಟ್ಟರೆ ಸಂಶಯದ ಸುಳಿಯೊಳಗೆ ಸಿಲುಕಿಕೊಳ್ಳುತ್ತೀರಿ ಎಂದು ಸಲಹೆ ಜಮೀರ್ ಅವರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

    ಆರೋಪಿ ಫಾಝಿಲ್ ಜೊತೆ ಸಿದ್ದರಾಮಯ್ಯ ಹಾಗೂ ಜಮೀರ್ ಇರುವ ಫೋಟೋ ಪ್ರದರ್ಶಿಸಿದ ಸಿ.ಟಿ ರವಿ ಅವರು, ಈ ಫೋಟೋ ಏನು ಹೇಳುತ್ತೆ? ಈ ಫೋಟೋ ಜನ್ಮ ಜನ್ಮಾಂತರದ ಸಂಬಂಧ ಅಂತ ಹೇಳುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಎಲ್ಲಾ ಫೋಟೋದಲ್ಲಿದ್ದಾರೆ. ಇದು ಬಹಳ ಆತ್ಮೀಯ ಸಂಬಂಧ ಅಂತ ಫೋಟೋದಲ್ಲಿನ ಮುಖಭಾವ ಹೇಳುತ್ತೆ. ಇದು ಯಾವುದೋ ಕುಟುಂಬದ ಕಾರ್ಯಕ್ರಮ. ಇದು ಅಪರಿಚಿತ ಜೊತೆ ತೆಗೆಸಿಕೊಂಡಿರುವ ಫೋಟೋ ಅಂತೂ ಅಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ನಾನು ಈಗಲೇ ಜಮೀರ್ ಅವರನ್ನು ಡ್ರಗ್ಸ್ ಪೆಡ್ಲರ್ ಅಂತ ಹೇಳಲ್ಲ. ಜಮೀರ್ ಅವರು ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳೊದು ಬೇಡ. ಕಳ್ಳನ ಹೆಂಡತಿ ಯಾವತ್ತಾದರೂ ಒಂದು ದಿನ ‘ಡ್ಯಾಷ್’ ಆಗಲೇಬೇಕು. ಫೋಟೋದಲ್ಲಿ ಎಲ್ಲರೂ ಒಂದೇ ರೀತಿಯ ಟೋಪಿ ಹಾಕಿಕೊಂಡಿದ್ದು, ಅವರು ಮಾತ್ರ ಟೋಪಿ ಹಾಕಿಕೊಂಡಿದ್ದಾರಾ ಅಥವಾ ಬೇರೆಯವರಿಗೂ ಹಾಕಿದ್ದಾರಾ ಎಂಬುವುದು ತಿಳಿಯಬೇಕಿದೆ ಎಂದು ಕಿಡಿಕಾರಿದರು.

  • ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಕುಟುಕಿದ ರಾಮದಾಸ್

    ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಕುಟುಕಿದ ರಾಮದಾಸ್

    ಮೈಸೂರು: ವಾಚ್‍ಮ್ಯಾನ್ ಆಗುತ್ತೇನೆ ಎಂದು ಆಗಲಿಲ್ಲ. ಇನ್ನೂ ಆಸ್ತಿ ಬರ್ದು ಕೊಡುತ್ತೀರಾ ಎಂದು ಬಿಜೆಪಿ ಶಾಸಕ ರಾಮದಾಸ್ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರನ್ನು ಕುಟುಕಿದ್ದಾರೆ.

    ಸದ್ಯ ರಾಜ್ಯದಲ್ಲಿ ಬೀರುಗಾಳಿಯಂತೆ ಬೀಸುತ್ತಿರುವ ಡ್ರಗ್ ಪ್ರಕರಣದಲ್ಲಿ ಜಮೀರ್ ಅವರು ಕೊಲಂಬೋಗೆ ಹೋಗಿ ಬಂದಿದ್ದಾರೆ ಎಂಬ ಆರೋಪ ಬಂದಿದೆ. ಈ ವಿಚಾರವಾಗಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್ ಅವರು, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ ನಾನು ನನ್ನೆಲ್ಲ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ರಾಮದಾಸ್, ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ನಾನು ವಾಚ್‍ಮ್ಯಾನ್ ಆಗುತ್ತೇನೆ ಎಂದು ಹೇಳಿ ವರ್ಷಗಳು ಉರುಳಿದವು. ಇನ್ನೂ ಅದರ ಕುರುಹು ಕಾಣುತ್ತಿಲ್ಲ. ಇನ್ನು ಸಂಜನಾ ಜೊತೆ ಕೊಲಂಬೋ ಹೋಗಿದ್ದು ಸಾಬೀತಾದರೆ ನೀವು ನಿಜಕ್ಕೂ ಆಸ್ತಿ ಬರೆದುಕೊಡುತ್ತೀರೆ ಜಮೀರ್ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಕಳೆದ ವಿಧಾನಸಭೆ ಚುನವಾಣೆ ವೇಳೆ ಬಿಜೆಪಿ ಪಕ್ಷ ಗೆದ್ದು ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ, ನಾನು ಒಂದು ದಿನ ವಾಚ್‍ಮ್ಯಾನ್ ಡ್ರೆಸ್ ಹಾಕಿಕೊಂಡು ಅವರ ಮನೆಯ ಬಳಿ ವಾಚ್‍ಮ್ಯಾನ್ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಯಡಿಯೂರಪ್ಪ ಸಿಎಂ ಅದರೂ ಕೂಡ ಜಮೀರ್ ಹೇಳಿದಂತೆ ನಡೆಯಲಿಲ್ಲ. ಈ ಅಂಶವನ್ನು ಇಟ್ಟುಕೊಂಡು ರಾಮದಾಸ್ ಈ ರೀತಿ ಟ್ವೀಟ್ ಮಾಡಿದ್ದಾರೆ.

  • ಅರಣ್ಯ ಇಲಾಖೆಯ ಕಚೇರಿಯಲ್ಲಿದ್ದ 25 ಕೆಜಿ ಶ್ರೀಗಂಧ ಕಳವು – ಕಾವಲುಗಾರನ ಶವ ಪತ್ತೆ

    ಅರಣ್ಯ ಇಲಾಖೆಯ ಕಚೇರಿಯಲ್ಲಿದ್ದ 25 ಕೆಜಿ ಶ್ರೀಗಂಧ ಕಳವು – ಕಾವಲುಗಾರನ ಶವ ಪತ್ತೆ

    ಶಿವಮೊಗ್ಗ: ಅರಣ್ಯ ಇಲಾಖೆ ಕಚೇರಿಯ ಬೀಗ ಒಡೆದು ಕಳ್ಳತನ ನಡೆದಿರುವ ಘಟನೆ ಜಿಲ್ಲೆಯ ಸಾಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದಿದೆ.

    ಕಚೇರಿಯ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕೆ.ಜಿ. ಶ್ರೀಗಂಧ ನಾಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಕಚೇರಿಯ ಕಾವಲುಗಾರ ನಾಗರಾಜ್ ನಾಪತ್ತೆಯಾಗಿದ್ದ. ಹೀಗಾಗಿ ಪೊಲೀಸರು ಅರಣ್ಯ ಸಿಬ್ಬಂದಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಾವಲುಗಾರ ನಾಗರಾಜ್ ಶವ ಸಾಗರ ತಾಲೂಕಿನ ಐಗಿನ್ ಬೈಲ್‍ನ ನೆದರವಳ್ಳಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.

    ಇದೀಗ ಈ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದ್ದು ಅರಣ್ಯ ಇಲಾಖೆಯಲ್ಲಿ ಶ್ರೀಗಂಧ ಕಳ್ಳತನ ನಡೆಸಿರುವ ಕಳ್ಳರು, ಶ್ರೀಗಂಧ ಕಳವು ಮಾಡಿ ಕಾವಲುಗಾರನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • 6ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಾಚ್‍ಮ್ಯಾನ್‍ನನ್ನು ಥಳಿಸಿ, ನಗ್ನ ಮೆರವಣಿಗೆ ಮಾಡಿದ್ರು

    6ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಾಚ್‍ಮ್ಯಾನ್‍ನನ್ನು ಥಳಿಸಿ, ನಗ್ನ ಮೆರವಣಿಗೆ ಮಾಡಿದ್ರು

    ಮುಂಬೈ: 6 ವರ್ಷದ ಬಾಲಕಿಗೆ ವಾಚ್‍ಮ್ಯಾನ್ ಓರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಆತನನ್ನು ಥಳಿಸಿ, ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ನ ವಸತಿ ಸಂಕೀರ್ಣವೊಂದರ ಬಳಿ ನಡೆದಿದೆ.

    ಭಾನುವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಆರು ಗಂಟೆಯ ಹೊತ್ತಿಗೆ, ಬಾಲಕಿ ಟ್ಯೂಷನ್ ಮುಗಿಸಿ ಮರಳುತ್ತಿದ್ದಾಗ 22 ವರ್ಷದ ವಾಚ್‍ಮ್ಯಾನ್ ಆಕೆಯನ್ನು ಸ್ಪರ್ಶಿಸಿ, ಅಸಭ್ಯವಾಗಿ ವರ್ತಿಸಿದ್ದನು. ಈ ಬಗ್ಗೆ ಬಾಲಕಿ ತನ್ನ ತಾಯಿಗೆ ತಿಳಿಸಿದ್ದರು. ಆಗ ತಾಯಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದರು.

    ವಾಚ್‍ಮ್ಯಾನ್ ಅಸಭ್ಯ ವರ್ತನೆ ಕುರಿತು ತಿಳಿದ ತಕ್ಷಣವೇ ಸಿಟ್ಟಿಗೆದ್ದ ಸಂಕೀರ್ಣದ ಮಹಿಳೆಯರೂ ಹಾಗೂ ಇತರೇ ನಿವಾಸಿಗಳು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ನಗ್ನಗೊಳಿಸಿ ಮೆರವಣಿಗೆಯನ್ನೂ ಕೂಡ ನಡೆಸಿದರು.

    ಸಾರ್ವಜನಿಕರ ಹಲ್ಲೆಯಿಂದಾಗಿ ಆರೋಪಿ ತೀವ್ರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹಾಗೂ ಐಪಿಸಿ ಸೆಕ್ಷನ್ 354 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದ್ರೆ ಹಲ್ಲೆಗೆ ಸಂಬಂಧಿಸಿ ಯಾರ ಮೇಲೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ವಾಚ್‍ಮ್ಯಾನ್ ಜೊತೆಗೆ 16ರ ಪೋರಿಯ ಸೆಕ್ಸ್-ನೋಡಿದ 8ರ ಹುಡ್ಗನ ಕೊಂದೇ ಬಿಟ್ಟಳು

    ಪಾಟ್ನಾ: ವಾಚ್‍ಮ್ಯಾನ್ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ನೋಡಿದ ಅಂತಾ 8 ವರ್ಷದ ಬಾಲಕನನ್ನು ಕೊಲೆ ಮಾಡಿದ್ದಾಗಿ, 16 ವರ್ಷದ ಬಾಲಕಿಯೊಬ್ಬಳು ಒಪ್ಪಿಕೊಂಡಿದ್ದಾಳೆ.

    ಜುಲೈ 9 ರಂದು ಬಿಹಾರದ ಪಾಟ್ನಾ ಜಿಲ್ಲೆಯ ಹಾಸ್ಟೆಲ್‍ವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಅಭಿಮನ್ಯು ಕೊಲೆಯಾದ ಬಾಲಕ. ಪ್ರಕರಣದ ಕುರಿತು ಬಾಲಕಿಯನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ, ಅಭಿಮನ್ಯು ತನ್ನ ಪುಸ್ತಕದ ಹಾಳೆ ಹರೆದಿದ್ದ, ಹೀಗಾಗಿ ಆತನನ್ನು ಜೋರಾಗಿ ದೂಡಿದಾಗ ಕೆಳಗೆ ಬಿದ್ದು ಮೃತಪಟ್ಟಿದ್ದ ಎಂದು ಕಥೆ ಹೇಳಿದ್ದಳು. ಪೊಲೀಸರು ಬಾಲಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.

    ಅಂದು ನಡೆದಿದ್ದು ಏನು..?
    ಅಭಿಮನ್ಯು ಹಾಗೂ ಕೊಲೆ ಮಾಡಿದ ಬಾಲಕಿ ಪಾಟ್ನಾ ಸಮೀಪದ ಫೂತುಹಾದನ ಸೆಫಾಲಿ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು. ಅಭಿಮನ್ಯು ಎಲ್‍ಕೆಜಿ ಹಾಗೂ ಬಾಲಕಿ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಒಂದೇ ಹಾಸ್ಟೆಲ್ ಹಾಗೂ ಒಂದೇ ರೂಮ್‍ನಲ್ಲಿ ಮತ್ತಿಬ್ಬರು ಬಾಲಕಿಯರೊಂದಿಗೆ ಇದ್ದರು. ಬಾಲಕಿ ವಾಚ್‍ಮ್ಯಾನ್ ಪಪ್ಪು ಎಂಬಾತನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆಯೂ ಪಪ್ಪು ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದನು.

    ಜುಲೈ 6 ರಂದು ರಾತ್ರಿ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಪಪ್ಪು ಒತ್ತಾಯಿಸಿದ್ದ. ಆದರೆ ಹಾಸ್ಟೆಲ್‍ನಲ್ಲಿ ಎಲ್ಲರೂ ಇದ್ದಾರೆ ನಾನು ಬರುವುದಿಲ್ಲ ಎಂದು ಬಾಲಕಿ ನಿರಾಕರಿಸಿದ್ದಕ್ಕೆ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದನು. ಹೀಗಾಗಿ ಶೌಚಾಲಯಕ್ಕೆ ಹೋದ ಬಾಲಕಿ ಪಪ್ಪು ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾಗ ರೂಮಿನಲ್ಲಿದ್ದ ಅಭಿಮನ್ಯು ನೋಡಿದ್ದನು.

    ತನ್ನ ಕೃತ್ಯವನ್ನು ಅಭಿಮನ್ಯು ಬಯಲು ಮಾಡುತ್ತಾನೆ ಎಂದು ಅರಿತ ಬಾಲಕಿ, ಜುಲೈ 8ರಂದು ಅಭಿಮನ್ಯುನ ಕುತ್ತಿಗೆಯನ್ನು 10 ನಿಮಿಷ ಗಟ್ಟಿಯಾಗಿ ಹಿಡಿದು ಕೊಲೆ ಮಾಡಿದ್ದಳು. ಅಲ್ಲದೆ ದೇಹವನ್ನು ಸಾಗಿಸಲು ಪ್ರಯತ್ನಿಸಿ ವಿಫಲವಾಗಿ, ಆತನ ಹಾಸಿಗೆಯಲ್ಲಿ ಮಲಗಿಸಿದ್ದಳು.

    ಪ್ರಕರಣ ಗೊತ್ತಾಗುತ್ತಿದ್ದಂತೆ ಹಾಸ್ಟೆಲ್‍ಗೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಟ್ಟು ಕತೆ ಹೇಳಿದ್ದಳು. ಕೊಲೆಯಾದ ದಿನದಿಂದ ಪಪ್ಪು ಕಾಣೆಯಾಗಿದ್ದರಿಂದ ಪೊಲೀಸರು ಬಾಲಕಿ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆಯ ನಂತರ, ತಾನು ಪಪ್ಪು ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ಅಭಿಮನ್ಯು ನೋಡಿದ್ದನು. ಅವನು ಎಲ್ಲಿ ನನ್ನ ಪೋಷಕರಿಗೆ ಹಾಗೂ ಇತರರಿಗೆ ಹೇಳುತ್ತಾನೆ ಎಂದು ಹೆದರಿ ಕೊಲೆ ಮಾಡಿದ್ದಾಗಿ ಬಾಲಕಿ ಸತ್ಯ ಒಪ್ಪಿಕೊಂಡಿದ್ದಾಳೆ.

    ಬಾಲಕಿ ನಡತೆ ಸರಿಯಿಲ್ಲ. ಪಪ್ಪು ಜೊತೆಗೆ ಎಲ್ಲಂದರಲ್ಲಿ ಓಡಾಡುತ್ತಾಳೆ ಎಂದು ಅಭಿಮನ್ಯು ನಮ್ಮ ಬಳಿ ದೂರು ನೀಡಿದ್ದ. ಹೀಗಾಗಿ ಬಾಲಕಿ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಯ ತಿಳಿಸಿದ್ದೇವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೃತ ಅಭಿಮನ್ಯು ಚಿಕ್ಕಪ್ಪ ಸಂತೋಷ್ ಸಿಂಗ್ ಆರೋಪಿಸಿದ್ದಾರೆ.

  • 7ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ 83 ವರ್ಷದ ವಾಚ್‍ಮ್ಯಾನ್‍ನಿಂದ ಅತ್ಯಾಚಾರ

    7ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ 83 ವರ್ಷದ ವಾಚ್‍ಮ್ಯಾನ್‍ನಿಂದ ಅತ್ಯಾಚಾರ

    ಹೈದರಾಬಾದ್: 7ನೇ ಕ್ಲಾಸ್ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ 83 ವರ್ಷದ ವೃದ್ಧನನ್ನು ಬುಧವಾರದಂದು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಇಲ್ಲಿನ ಕಾಪ್ರಾ ಪ್ರದೇಶದಲ್ಲಿ ಎರಡು ತಿಂಗಳ ಹಿಂದಷ್ಟೇ 6 ವರ್ಷದ ಬಾಲಕಿ ಮೇಲೆ 60 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಇದೇ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಶಾಲೆಯ ವಾಚ್‍ಮ್ಯಾನ್ ಆಗಿ ಕೆಲಸ ಮಾಡ್ತಿದ್ದ ವೃದ್ಧ ಸತ್ಯನಾರಾಯಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮಂಗಳವಾರದಂದು ಬಾಲಕಿ ಪೋಷಕರ ಬಳಿ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಕುಶೈಗುಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

     

    ಬಂಧಿತ ಆರೋಪಿ ಹಲವು ತಿಂಗಳಿನಿಂದ ಶಾಲಾ ಆವರಣದಲ್ಲಿ ಸಾಕಷ್ಟು ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ರೈಲ್ವೆ ಸೇವೆಯಿಂದ ನಿವೃತ್ತಿಗೊಂಡಿದ್ದ ವೃದ್ಧನನ್ನು ಕೆಲವು ವರ್ಷಗಳ ಹಿಂದಷ್ಟೇ ವಾಚ್‍ಮ್ಯಾನ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಪೊಲೀಸರು ಇತರೆ ದೂರುಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ವಾಚ್‍ಮ್ಯಾನ್ ನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಇತರೆ ದೂರುಗಳ ತನಿಖೆಯ ಭಾಗವಾಗಿ ಪೊಲೀಸರು 7 ಹುಡುಗಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಕಳಿಸಿದ್ದಾರೆ ಎಂದು ವರದಿಯಾಗಿದೆ.

    ಸೆಪ್ಟೆಂಬರ್‍ನಲ್ಲಿ ಇದೇ ಕಾಪ್ರಾದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರಿದ ನಂತರ 60 ವರ್ಷದ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು.

    ಸಿದ್ದಯ್ಯ ಎಂಬಾತ ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಾಲಕಿ ತೀವ್ರ ನೋವಿನಿಂದ ಅಳುತ್ತಾ ಮನೆಗೆ ಬಂದು ನಡೆದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಳು. ನಂತರ ಸ್ಥಳೀಯರು ವೃದ್ಧನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

  • ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಮಂಗಳೂರು: ಶೀಘ್ರವೇ ಮಂಗಳೂರು ಮೇಯರ್ ಕವಿತಾ ಸನಿಲ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.

    ಸಾಮಾನ್ಯ ಸಭೆ ಸೇರುತ್ತಿದ್ದಾಗಲೇ ಧಿಕ್ಕಾರ ಘೋಷಣೆ ಕೂಗುತ್ತ ಒಳನುಗ್ಗಿದ ಬಿಜೆಪಿ ಸದಸ್ಯರು, ಸಭೆಯಲ್ಲಿ ರಂಪಾಟ ನಡೆಸಿದ್ರು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು.

    ಕೆಲವರು ಕೈ-ಕೈ ಮಿಲಾಯಿಸಲು ಮುಂದಾದರು. ಆದರೆ ಬಿಜೆಪಿ ಸದಸ್ಯರು ಮೇಯರ್ ಮುಂದೆ ಧಿಕ್ಕಾರ ಕೂಗುತ್ತ ರಾಜಿನಾಮೆಗೆ ಒತ್ತಾಯಿಸಿದರು. ಮೇಯರ್ ಕವಿತಾ ಸನಿಲ್ ತನ್ನ ಬಿಜೈನಲ್ಲಿರುವ ಫ್ಲಾಟ್ ನಲ್ಲಿ ವಾಚ್ ಮ್ಯಾನ್ ಪತ್ನಿಗೆ ಹಲ್ಲೆ ನಡೆಸಿದ್ದಾರೆಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಬಳಿಕ ಮೇಯರ್ ತನ್ನ ಪ್ರಭಾವ ಬಳಸಿ ಬಡಪಾಯಿ ವಾಚ್ ಮ್ಯಾನ್ ಪತ್ನಿಯ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಈ ವಿಚಾರ ವಿವಾದಕ್ಕೆ ತಿರುಗಿದ್ದು ಬಿಜೆಪಿ ಸದಸ್ಯರು ಸಭೆಯಲ್ಲಿ ರಂಪ ನಡೆಸಿದ್ದಾರೆ. ಕೊನೆಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್ ಕಣ್ಣೀರು ಹಾಕಿದ್ರು. ತಾನು ಬಡ ಮಹಿಳೆಗೆ ಹಲ್ಲೆ ನಡೆಸಿಲ್ಲ. ಬೇಕಾದ್ರೆ ಕಟೀಲು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಬರಲಿ ಅಂತಾ ಸವಾಲು ಹಾಕಿದರು.

    https://www.youtube.com/watch?v=5stm9HG3J8s

     

  • 45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    ಸೂರತ್: 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಪೊಟ್ಟಣವನ್ನ ಮಾಲೀಕನಿಗೆ ಹಿಂದಿರುಗಿಸಿದ 15 ವರ್ಷದ ಬಾಲಕ ಹಾಗೂ ವಾಚ್‍ಮ್ಯಾನ್ ಆಗಿ ಕೆಲಸ ಮಾಡೋ ಆತನ ತಂದೆಗೆ ಸೂರತ್ ಡೈಮಂಡ್ ಅಸೋಸಿಯೇಷನ್(ಎಸ್‍ಡಿಎ) ಶನಿವಾರದಂದು ಸನ್ಮಾನ ಮಾಡಿದೆ.

    ಬಾಲಕ ವಿಶಾಲ್ ಉಪಾಧ್ಯಾಯ ಹಾಗೂ ಆತನ ತಂದೆ ಫುಲ್‍ಚಂದ್ ಅವರಿಗೆ ಸನ್ಮಾನ ಮಾಡಲಾಗಿದೆ. ಅಲ್ಲದೆ ವಿಶಾಲ್‍ನ ಪ್ರಾಮಾಣಿಕತೆಗೆ ಬಹುಮಾನವಾಗಿ ಆತನ ಒಂದು ವರ್ಷದ ಶಿಕ್ಷಣದ ಖರ್ಚನ್ನು ಭರಿಸುವುದಾಗಿ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳಿದ್ದಾರೆ.

    ವಜ್ರ ವ್ಯಾಪಾರಿ ಆಗಿರೋ ಮನ್‍ಸುಖ್‍ಭಾಯ್ ಸವಾಲಿಯಾ ಕಳೆದ ಭಾನುವಾರ ಸೇಫ್ ಲಾಕರ್‍ನಿಂದ ವಜ್ರದ ಪ್ಯಾಕೆಟ್‍ಗಳನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಒಂದು ಪ್ಯಾಕೆಟ್ ಕೆಳಗೆ ಬಿದ್ದುಹೋಗಿತ್ತು. ಅಲ್ಲೇ ಹತ್ತಿರದಲ್ಲಿ ಕ್ರಿಕೆಟ್ ಆಡ್ತಿದ್ದ ಬಾಲಕ ವಿಶಾಲ್ ಆ ಪ್ಯಾಕೆಟ್ ನೋಡಿದ್ದು, ಅದನ್ನು ತೆಗೆದುಕೊಂಡು ಮನೆಗೆ ಹೋಗಿ ತನ್ನ ತಂದೆಗೆ ಅದನ್ನು ತೋರಿಸಿದ್ದ ಎಂದು ನವಾಡಿಯಾ ಹೇಳಿದ್ರು.

    ಮರುದಿನ ಸೋಮವಾರ ಹಾಗೂ ಮಂಗಳವಾರ ರಜೆ ಇದ್ದಿದ್ದರಿಂದ ಡೈಮಂಡ್ ಮಾರುಕಟ್ಟೆ ಮುಚ್ಚಲಾಗಿತ್ತು. ಬುಧವಾರ ಅಸೋಸಿಯೇಷನ್ ತೆರೆದ ಕೂಡಲೇ ಫುಲ್‍ಚಂದ್ ವಜ್ರಗಳನ್ನ ಹಿಂದಿರುಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

    ಮತ್ತೊಂದು ಕಡೆ ಮನ್‍ಸುಖ್‍ಭಾಯ್ ವಜ್ರಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಆ ಪ್ರದೇಶದ ಸಿಸಿಟಿವಿ ಪರಿಶೀಲಿಸಿ ಏನಾದ್ರೂ ಸುಳಿವು ಸಿಗುತ್ತಾ ಎಂದು ನೋಡಿದ್ದರು. ಆದ್ರೆ ರಜೆಯಿದ್ದ ಕಾರಣ ಸೇಫ್ ಲಾಕರ್‍ನ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ.

    ಎಸ್‍ಡಿಎ ಕಚೇರಿ ತೆರೆದ ನಂತರ ಬಾಲಕ ಹಾಗೂ ಆತನ ತಂದೆ ವಜ್ರಗಳನ್ನ ಹಿಂದಿರುಗಿಸಿದ್ದು, ಬಳಿಕ ಅಸೋಸಿಯೇಷನ್‍ನವರು ಇದರ ಮಾಲೀಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿದ್ದರು. ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಬ್ರೋಕರ್ ಸಂಪರ್ಕ ಮಾಡಿ ಅವರು ಕಳೆದುಕೊಂಡಿದ್ದ ವಜ್ರಗಳನ್ನ ಹಿಂದಿರುಗಿಸಿದ್ರು ಎಂದು ನವಾಡಿಯಾ ಹೇಳಿದ್ದಾರೆ.

    ಇಡೀ ವಿಶ್ವದಲ್ಲೇ ಸೂರತ್ ಅತೀ ದೊಡ್ಡ ವಜ್ರ ಪಾಲಿಶಿಂಗ್ ಕೇಂದ್ರವಾಗಿದೆ.