Tag: watch

  • 20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ

    20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ

    ದಿಸ್ಪುರ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ದಿವಂಗತ ಡಿಯಾಗೊ ಮರಡೋನಾ ಅವರ ಕಳುವಾಗಿದ್ದ ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ಸಿಕ್ಕಿದೆ.

    ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್ ಅಸ್ಸಾಂ ಮೂಲದ ವ್ಯಕ್ತಿಯ ಬಳಿ ಇತ್ತು. ಈತ ದುಬೈನಿಂದ ಅಸ್ಸಾಂಗೆ ವಾಪಸ್ಸಾದಾಗ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ದುಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ನಮ್ಮ ಅಸ್ಸಾಂ ಪೊಲೀಸರು ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ ಫುಟ್ಬಾಲ್ ದಿಗ್ಗಜ ಮರಡೋನಾ ಬಳಸುತ್ತಿದ್ದ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

    ಫುಟ್ಬಾಲ್ ಕ್ರೀಡಾ ಜಗತ್ತಿನಲ್ಲಿ ಅರ್ಜೆಂಟೀನಾದ ಡಿಯಾಗೊ ಮರಡೋನಾ ಹೆಸರು ಸುಪ್ರಸಿದ್ಧ. ಇವರು 2020ರ ನವೆಂಬರ್‍ನಲ್ಲಿ ಹೃದಯಾಘಾತದಿಂದ ನಿಧನರಾದರು. ದುಬೈನ ಸಂಗ್ರಹಾಲಯದಲ್ಲಿ ಹಲವು ಪ್ರಮುಖ ವಸ್ತುಗಳೊಂದಿಗೆ ಇವರ ವಾಚ್ ಅನ್ನೂ ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?

    POLICE JEEP

    ಮರಡೋನಾ ಅವರ ವಾಚ್ ಅನ್ನು ವಾಜಿದ್ ಹುಸೇನ್ ಕಳ್ಳತನ ಮಾಡಿದ್ದ. ನಂತರ ಅದನ್ನು ದುಬೈನಿಂದ ಅಸ್ಸಾಂಗೆ ಸಾಗಿಸಲು ಯತ್ನಿಸಿದ್ದ. ಈ ಬಗ್ಗೆ ದುಬೈ ಪೊಲೀಸರು ಅಸ್ಸಾಂನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇಂದು ಬೆಳಗ್ಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ ಅವರು ತಿಳಿಸಿದ್ದಾರೆ.

  • ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

    ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

    ಮುಂಬೈ: ಭಾರತ ತಂಡದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧರಿಸಿದ್ದ ಒಂದು ವಾಚ್ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

    ಹೌದು. ಪಾಂಡ್ಯ ತಮ್ಮ ಲೈಫ್ ಅನ್ನು ರಾಯಲ್ ಆಗಿ ಲೀಡ್ ಮಾಡುತ್ತಿದ್ದಾರೆ. ಐಷಾರಾಮಿ ಮತ್ತು ಬ್ರಾಂಡೆಡ್ ವಸ್ತುಗಳ ಕಡೆ ಹೆಚ್ಚು ಒಲವನ್ನು ಹೊಂದಿರುವ ಪಾಂಡ್ಯ, ಇತ್ತೀಚೆಗೆ ಮುಂಬೈನ ಪ್ರಮುಖ ಬೀದಿಯೊಂದರಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದರು, ಅವರೊಂದಿಗೆ ಟಾಪ್-ಬಿಲ್ ಲ್ಯಾಂಬೋರ್ಗಿನಿ ಹುರಕಾನ್ ಇವಿಎಸ್, ಮರ್ಸಿಡಿಸ್ ಎಎಮ್‍ಜಿ ಜಿ63 ಬೆಲೆಬಾಳುವ ಕಾರುಗಳನ್ನು ಕೂಡ ಕಾಣಬಹುದಾಗಿದೆ. ಇದನ್ನೂ ಓದಿ: ನಿಮ್ಮ ಅಹಂಕಾರವನ್ನು ಮೊದಲು ಹದ್ದುಬಸ್ತಿನಲ್ಲಿಡಿ ಕೊಹ್ಲಿ ವಿರುದ್ಧ ಮನಿಂದರ್ ಸಿಂಗ್ ಕಿಡಿ

    ಪಾಂಡ್ಯ ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಧರಿಸಿರುವ ವಾಚ್ ಒಂದರ ಫೋಟೋ ಹಂಚಿಕೊಂಡಿದ್ದಾರೆ. ಈ ವಾಚ್ ತುಂಬಾ ದುಬಾರಿ ಬೆಲೆಯಾದ್ದಾಗಿದ್ದು, ಇದನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪಾಂಡ್ಯ ಕೈಯಲ್ಲಿದ್ದ ವಾಚ್, ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ-5711 ಕಂಪನಿಯದ್ದಾಗಿದ್ದು, ಇದರ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿಯಾಗಿದೆ. ಇದೀಗ ಈ ವಾಚ್‍ನ ಒಡೆಯನಾಗಿರುವ ಪಾಂಡ್ಯರ ಫೋಟೋಗಳು ವೈರಲ್ ಆಗುತ್ತಿದೆ.

    ಸದ್ಯ ಹಾರ್ದಿಕ್ ಪಾಂಡ್ಯ ಐಪಿಎಲ್ ಪಂದ್ಯಾಟಕ್ಕಾಗಿ, ಮುಂಬೈ ಇಂಡಿಯನ್ಸ್ ತಂಡದೊಂದಿಗೆ ದುಬೈಗೆ ತೆರಳಿದ್ದಾರೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್‍ಗಾಗಿ ಪಾಂಡ್ಯ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್

  • ಆಭರಣ ಪ್ರಿಯರಿಗೆ ಕೊರೊನಾ ಸಂಕಟ!

    ಆಭರಣ ಪ್ರಿಯರಿಗೆ ಕೊರೊನಾ ಸಂಕಟ!

    – ವಾಚ್, ಬೆಲ್ಟ್ ಕೂಡ ಡೇಂಜರ್

    ಬೆಂಗಳೂರು: ಆದಷ್ಟು ಕಡಿಮೆ ಒಡವೆ ವಸ್ತ್ರಗಳನ್ನು ಧರಿಸಿ. ಅಲ್ಲದೆ ವಾಚ್, ಬೆಲ್ಟ್ ಧರಿಸೋದನ್ನು ಕಡಿಮೆ ಮಾಡಿ. ನೀವು ಧರಿಸುವ ಬಟ್ಟೆಗಳು ಕೂಡ ಸಿಂಪಲ್ ಆಗಿರಲಿ. ವೈದ್ಯರು ಯಾವತ್ತೂ ಸೂಟ್ ಅಥವಾ ಏಪ್ರನ್ ನಲ್ಲೇ ಇರುತ್ತಿದ್ದೇವು. ಆದರೆ ಇದೀಗ ನಾವು ಕೂಡ ಕಡಿಮೆ ಬಟ್ಟೆ ಧರಿಸುತ್ತಿದ್ದೇವೆ ಎಂದು ತಜ್ಞ ವೈದ್ಯ ಡಾ. ಮನೋಹರ್ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಂಗುರ, ಓಲೆ, ಬಳೆ, ಸರ, ಕನ್ನಡಕ, ವಾಚ್ ಎಲ್ಲವೂ ಅಪಾಯಕಾರಿಯಾಗಿರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕೊರೊನಾ ಫೋಮೈಟ್ ಟ್ರಾನ್ಸ್ ಮೀಡರ್ ಇರುವುದರಿಂದ ಆಭರಣದಿಂದ ದೂರವಿರಿ. ಕೊರೊನಾ ರೋಗಿ ಕೆಮ್ಮಿದಾಗ, ಸೀನಿದಾಗ ಈ ವೈರಸ್ ಆಭರಣಗಳ ಮೇಲೆ ಹೆಚ್ಚು ಹೊತ್ತು ಜೀವಂತರವಾಗಿರುತ್ತದೆ. ನಂತರ ಆಭರಣ ಮುಟ್ಟಿದವರಿಗೆ ಅಪಾಯ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ದೇಶ-ವಿದೇಶಗಳಲ್ಲಿ ಆಭರಣಗಳನ್ನು ಹಾಕುವುದರಿಂದ ದೂರ ಉಳಿಯಲಾಗುತ್ತಿದೆ. ವೈರಸ್ ಕೊಲ್ಲಬೇಕಾ ದಯಮಾಡಿ ಆಭರಣಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.

  • ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    – ಎಲ್ಲ ವ್ಯಾಪಾರಿಗಳಿಗೂ ನೋ ಎಂಟ್ರಿ
    – ಬೇರೆ ಊರಲ್ಲಿರುವ ಗ್ರಾಮಸ್ಥರು ಅಲ್ಲೇ ಇರಿ, ಇಲ್ಲಿಗೆ ಬರಬೇಡಿ
    – ಅಲ್ಲೇ ಹಬ್ಬ ಮಾಡಿ ಎಂದ ಗ್ರಾಮಸ್ಥರು

    ಚಿಕ್ಕಮಗಳೂರು: ಕೊರೊನಾ ನಮ್ಮ ಊರಿಗೆ ಕಾಲಿಡೋದು ಬೇಡವೆಂದು ಗ್ರಾಮಸ್ಥರು ಆತಂಕದಿಂದ ಊರಿನ ದ್ವಾರಬಾಗಿಲಲ್ಲೇ ಕಾದು ಕೂತು ಗ್ರಾಮಕ್ಕೆ ಕಾಲಿಡುವ ವ್ಯಾಪಾರಿಗಳಿಗೆ ಗ್ರಾಮದ ಗಡಿಯಿಂದಲೇ ವಾಪಸ್ಸು ಕಳುಹಿಸುತ್ತಿದ್ದಾರೆ.

    ತಾಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖಂಡರ ತೀರ್ಮಾನದಂತೆ ನಾಲ್ಕೈದು ಜನ ಗ್ರಾಮದ ಮುಂಭಾಗದಲ್ಲಿರುವ ಹಳ್ಳಿಕಟ್ಟೆ ಮೇಲೆ ಕಾದು ಕೂತಿದ್ದಾರೆ. ಗ್ರಾಮಕ್ಕೆ ಯಾರೇ ಹೊಸಬರು ಕಾಲಿಟ್ಟರೂ ಅವರಿಗೆ ಕೊರೊನಾ ಬಗ್ಗೆ ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಐಸ್ ಕ್ರೀಂ ಮಾರುವವರು, ಪಾತ್ರೆ ವ್ಯಾಪಾರಿಗಳು, ಬಟ್ಟೆ, ಬಳೆ ಮಾರುವವರು ಸೇರಿದಂತೆ ಯಾರೊಬ್ಬರಿಗೂ ಗ್ರಾಮದೊಳಕ್ಕೆ ಬಿಡದಿರಲು ನಿರ್ಧರಿಸಿ ಕಾವಲು ಕಾಯುತ್ತಿದ್ದಾರೆ.

    ಊರಿನ ಪ್ರತಿಯೊಬ್ಬರೂ ಗ್ರಾಮ ಬಿಟ್ಟು ಹೊರಗೆ ಹೋಗದಂತೆ ತೀರ್ಮಾನಿಸಿದ್ದಾರೆ. ನಾವು ಕೂಡ ಸ್ಥಳೀಯವಾಗಿ ಗ್ರಾಮದೊಳಗೆ ಓಡಾಡುತ್ತಿದ್ದೇವೆ. ಗ್ರಾಮ ಬಿಟ್ಟು ಹೊರಗೆ ಹೋಗುವುದಿಲ್ಲ. ದಿನ ಬಳಕೆಗೆ ಎಷ್ಟು ವಸ್ತುಗಳು ಬೇಕೋ ಅಷ್ಟು ವಸ್ತುಗಳನ್ನು ನಿನ್ನೆ-ಮೊನ್ನೆಯೇ ಖರೀದಿಸಿ ತಂದಿದ್ದೇವೆ. ಹಬ್ಬವನ್ನೂ ಸರಳವಾಗಿ ಮಾಡಲು ಗ್ರಾಮಸ್ಥರೆಲ್ಲಾ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

    ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ನೀವು ಇಲ್ಲಿಗೆ ಬರೋದು ಬೇಡ. ಎಲ್ಲಿದ್ದೀರೋ ಅಲ್ಲೆ ಇರಿ, ಹಬ್ಬಕ್ಕೂ ಬರುವುದು ಬೇಡ. ಇಲ್ಲಿಗೆ ಬಂದು ವ್ಯವಸ್ಥೆ ಹಾಳುಮಾಡೋದು ಬೇಡ ಎಂದಿದ್ದಾರೆ.

    ಅಲ್ಲದೆ ಪಾಳಿ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಗ್ರಾಮವನ್ನ ಕಾಯುತ್ತಿದ್ದಾರೆ. ಪ್ರತಿ ಎರಡ್ಮೂರು ಗಂಟೆಗೊಮ್ಮೆ ಬದಲಾಗುತ್ತಿದ್ದು, ಎರಡ್ಮೂರು ಗಂಟೆ ಬಳಿಕ ಮತ್ತೊಂದು ಟೀಂ ಕಾಯುತ್ತದೆ. ಕೊರೊನಾ ವೈರಸ್ ಒಂದು ಹಂತಕ್ಕೆ ಬರುವವರೆಗೂ ಪ್ರತಿ ದಿನ ಗ್ರಾಮವನ್ನು ಕಾಯ್ತೀವಿ ಎಂದು ತಮ್ಮ ಗ್ರಾಮವನ್ನ ಕೊರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದಾರೆ.

  • ಸುದೀಪ್ ಕೊಟ್ಟ ಗಿಫ್ಟ್ ನೋಡಿ ಹರೀಶ್ ಕಣ್ಣೀರು

    ಸುದೀಪ್ ಕೊಟ್ಟ ಗಿಫ್ಟ್ ನೋಡಿ ಹರೀಶ್ ಕಣ್ಣೀರು

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಮುಕ್ತಾಯವಾಗಿದ್ದು, ಈ ಬಾರಿ ಬಿಗ್‍ಬಾಸ್ ಮನೆಯಲ್ಲಿದ್ದ ಅನೇಕರಿಗೆ ಕಿಚ್ಚ ಸುದೀಪ್ ಸ್ಪೆಷಲ್ ಉಡುಗೊರೆಯನ್ನು ಕೊಟ್ಟಿದ್ದಾರೆ. ಇದೀಗ ಬಿಗ್‍ಬಾಸ್ ಮುಗಿಯುತ್ತಿದ್ದಂತೆ ಹರೀಶ್ ರಾಜ್‍ಗೆ ಸುದೀಪ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.

    ಸುದೀಪ್ ಅವರು ಹರೀಶ್ ರಾಜ್ಗೆ ತಮ್ಮ ದುಬಾರಿ ವಾಚನ್ನು ಉಡುಗೊಡೆಯಾಗಿ ಕೊಟ್ಟಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿದ್ದಾಗ ಹರೀಶ್ ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಟ್ ಆಗುವ ಮೂಲಕ ರಾತ್ರೋರಾತ್ರಿ ಮನೆಯಿಂದ ಹೊರ ಬಂದಿದ್ದರು. ಅಂದು ಮನೆಯಿಂದ ಹೊರ ಬಂದವರು ಬಿಗ್‍ಬಾಸ್ ಫಿನಾಲೆಯಲ್ಲಿ ಸುದೀಪ್ ಜೊತೆ ವೇದಿಕೆ ಹಂಚಿಕೊಡಿದ್ದರು.

    ಬಿಗ್‍ಬಾಸ್ ಮನೆಯಲ್ಲಿದ್ದಾಗ ಹರೀಶ್ ಅವರು ಯುವಕರಿಗೆ ಪೈಪೋಟಿ ಕೊಟ್ಟು ಟಾಸ್ಕ್ ಗಳಲ್ಲಿ ಅದ್ಭುತವಾಗಿ ಆಟವಾಡಿದ್ದರು. ಅಲ್ಲದೇ ಮನೆಯಲ್ಲಿದ್ದಷ್ಟು ದಿನ ವೀಕ್ಷಕರಿಗೆ ತಮ್ಮ ನಟನೆ, ಮಿಮಿಕ್ರಿ ಮೂಲಕ ಮನರಂಜನೆ ನೀಡಿದ್ದರು. ಇದು ಸುದೀಪ್‍ಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ ಹರೀಶ್‍ಗೆ ತಾವು ಹಾಕಿಕೊಂಡಿದ್ದ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ…

    ಈ ಬಗ್ಗೆ ಮಾತನಾಡಿದ ಹರೀಶ್ ರಾಜ್, ಸುದೀಪ್ ಸರ್ ಹೇಳಿದ್ದಂತೆ ಬಿಗ್‍ಬಾಸ್ ಮುಗಿಯುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಪಾರ್ಟಿ ಮಾಡಿದ್ವಿ. ಈ ವೇಳೆ ಮಾತನಾಡಿದ ಸುದೀಪ್ ಸರ್, ಹರೀಶ್ ರಾಜ್ ಎಲ್ಲರನ್ನು ಮನರಂಜನೆ ನೀಡಿದ್ದಾರೆ. ಅವರಿಗೆ ನಾನು ಏನಾದರು ಕೊಡಬೇಕು ಎಂದು ಎಲ್ಲರ ಮುಂದೆ ಹೇಳಿದರು. ಅಲ್ಲದೇ ಮಾತು ಮುಗಿಯುವ ಮುನ್ನವೇ ತಮ್ಮ ಕೈಯಲ್ಲಿದ್ದ ದುಬಾರಿ ವಾಚನ್ನು ತೆಗೆದು ನನಗೆ ಹಾಕಿದರು ಎಂದರು.

    ಸುದೀಪ್ ಸರ್ ನನಗೆ ವಾಚ್ ಹಾಕಿದ ತಕ್ಷಣ ಎಮೋಷನಲ್ ಆದೆ. ಆ ಸಂದರ್ಭದಲ್ಲಿ ನಾನು ಏನು ಮಾತನಾಡಲು ಸಾಧ್ಯವಾಗಿಲ್ಲ. ಆಗ ಸುದೀಪ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದೆ ಎಂದು ಹರೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಶೈನ್ ಶೆಟ್ಟಿ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದು, ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

  • ಬುರ್ಖಾ ಧರಿಸಿ ವೈದ್ಯನ ಅವಾಂತರ-ಹುಡುಗಿಗಾಗಿ ವಾಚ್ ಖರೀದಿಗೆ ಬಂದು ತಗ್ಲಾಕೊಂಡ

    ಬುರ್ಖಾ ಧರಿಸಿ ವೈದ್ಯನ ಅವಾಂತರ-ಹುಡುಗಿಗಾಗಿ ವಾಚ್ ಖರೀದಿಗೆ ಬಂದು ತಗ್ಲಾಕೊಂಡ

    ಧಾರವಾಡ/ಹುಬ್ಬಳ್ಳಿ: ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ಗಿಫ್ಟ್ ಗಳನ್ನ ಕೊಡೋದನ್ನ ನೀವೂ ಕೇಳಿರತೀರಿ. ಆದರೆ ಹುಡುಗಿಯ ಮನವೊಲಿಸಲು ದುಬಾರಿ ಬೆಲೆಯ ವಾಚ್ ಖರೀದಿಸಲು ಬುರ್ಖಾ ಧರಿಸಿಕೊಂಡು ಬಂದ ವೈದ್ಯನೊಬ್ಬ ಪೊಲೀಸರ ಅತಿಥಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಶಿರಸಿ ಮೂಲದ ವೈದ್ಯ ವಸಂತರಾವ್ ಭಾನುವಾರ ಸಂಜೆ ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಗೆ ಬುರ್ಖಾ ಧರಿಸಿಕೊಂಡು ವಾಚ್ ಖರೀದಿಸಲು ಆಗಮಿಸಿದ್ದ. ಬುರ್ಖಾ ಧರಿಸಿಕೊಂಡು ಟೈಟಾನ್ ಕಂಪನಿಯ ವಾಚ್ ಶೋ ರೂಂನಲ್ಲಿ 20 ಸಾವಿರ ರೂಪಾಯಿಯ ಬೆಲೆ ಬಾಳುವ ವಾಚ್ ಖರೀದಿಸಲು ಮುಂದಾದ ವೇಳೆ ವೈದ್ಯನ ವರ್ತನೆಯಿಂದ ಅನುಮಾನಗೊಂಡ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ವೈದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೇ ವೈದ್ಯನ ವರ್ತನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸಹ ನಿರ್ಮಾಣವಾದ ಘಟನೆ ನಡೆಯಿತು.

    ಎಷ್ಟೆ ಪ್ರಯತ್ನ ಮಾಡಿದ್ರು ಯಾವ ಹುಡುಗಿಯೂ ವೈದ್ಯನನ್ನ ಮದುವೆಯಾಗಲು ಒಪ್ಪದ ಪರಿಣಾಮ ವೈದ್ಯ ವಸಂತರಾವ್ ಯಾರಾದ್ರು ಹುಡುಗಿಯೊಬ್ಬಳಿಗೆ ದುಬಾರಿ ಬೆಲೆಯ ವಾಚ್ ನೀಡಿ ಮನವೊಲಿಸಲು ಮುಂದಾಗಿದ್ದನಂತೆ. ಅದಕ್ಕಾಗಿಯೇ ದುಬಾರಿ ಬೆಲೆಯ ವಾಚ್ ಖರೀದಿಸಿದ್ದು ಯಾರಿಗೂ ಗೊತ್ತಾಗಬಾರದೆಂದು ಬುರ್ಖಾ ಧರಿಸಿಕೊಂಡು ಆಗಮಿಸಿದ್ದ ಅನ್ನೋ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.

    ಮದುವೆಯಾಗದ ಪರಿಣಾಮ ಕಳೆದ ಹಲವಾರು ವರ್ಷಗಳಿಂದ ಮಾನಸಿಕವಾಗಿ ನೊಂದಿರುವ ವೈದ್ಯ ವಸಂತರಾವ್ ಇದೀಗ ಬುರ್ಖಾ ಧರಿಸಿಕೊಂಡು ಬಂದು ವಾಚ್ ಖರೀದಿಸಲು ಮುಂದಾದ ವೇಳೆ ಪೊಲೀಸರ ಅತಿಥಿಯಾಗಿದ್ದಾನೆ. ವೈದ್ಯನನ್ನ ತೀವ್ರ ವಿಚಾರಣೆ ನಂತರ ವಸಂತರಾವ್ ಮಾನಸಿಕವಾಗಿ ನೊಂದಿರುವ ವಿಚಾರ ತಿಳಿದ ಬಳಿಕ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೆ ಶಹರ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ವರದಿಯಾಗಿದೆ.

  • ಸೂಟು ಬೂಟು ಧರಿಸಿ ಬರೋಬ್ಬರಿ 79 ಸಾವಿರದ ರಾಡೋ ವಾಚ್‍ ಕದ್ದ ಕಳ್ಳರು

    ಸೂಟು ಬೂಟು ಧರಿಸಿ ಬರೋಬ್ಬರಿ 79 ಸಾವಿರದ ರಾಡೋ ವಾಚ್‍ ಕದ್ದ ಕಳ್ಳರು

    ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಹೈಟೆಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸೂಟು ಬೂಟು ಧರಿಸಿಕೊಂಡು ಬಂದು ದುಬಾರಿ ಬೆಲೆಯ ವಾಚ್‍ಗಳನ್ನ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಬಂದು ರಾಡೋ ವಾಚುಗಳನ್ನ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಹುಬ್ಬಳ್ಳಿಯ ವೇಮರೆಡ್ಡಿ ಪಾಟೀಲ್ ಅವರ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಬರೋಬ್ಬರಿ 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್ ಅನ್ನು ಖದೀಮರು ಎಗರಿಸಿದ್ದಾರೆ.

    ಜನವರಿ 7 ರಂದು ರಾತ್ರಿ ಅಂಗಡಿಗೆ ಬಂದಿದ್ದ ಮಹಿಳೆ ಹಾಗೂ ಮೂವರು ಪುರುಷರ ಪೈಕಿ ಒಬ್ಬ ವ್ಯಕ್ತಿ `ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, `ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೊಬ್ಬ ಟೈಮೆಕ್ಸ್ ಕೌಂಟರ್ ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಏನೇನೊ ವಿಚಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ವಾಚ್ ಪ್ಯಾಕ್ ಚೆಕ್ ಮಾಡಿದಾಗ ಕಳವಾದ ವಿಷಯ ಗೊತ್ತಾಗಿದೆ.

    ಸಿಸಿಟಿವಿಯಲ್ಲಿ ಸೆರೆ:
    ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್‍ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಕಳ್ಳರ ಗ್ಯಾಂಗ್ ಮಾಲ್‍ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆಯಲ್ಲಿ ಓಡಾಡಿ ಮಾಲ್‍ನಿಂದ ಹೊರಹೋಗಿರುವ ದೃಶ್ಯಗಳೂ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಉದ್ಯಮಿಗಳ ವೇಷದಲ್ಲಿ ಮಾಲ್‍ಗೆ ಬಂದು ಕಳ್ಳತನ ಮಾಡಿರುವುದು ಅಂಗಡಿಗಳ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಅಂಗಡಿಯವರು ಪ್ರಾಮಾಣಿಕ ಗ್ರಾಹಕರನ್ನೂ ಅನುಮಾನದಿಂದ ನೋಡುವಂತಾಗಿದೆ. ಘಟನೆಯ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೈ ಪ್ರೊಫೈಲ್ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

  • SSLC, PUC ಪ್ರತಿಭಾ ಪುರಸ್ಕಾರ- ವಿದ್ಯಾರ್ಥಿಗಳಿಗೆ ಡಿಕೆಶಿ ಭಾವಚಿತ್ರದ ವಾಚ್ ವಿತರಣೆ

    SSLC, PUC ಪ್ರತಿಭಾ ಪುರಸ್ಕಾರ- ವಿದ್ಯಾರ್ಥಿಗಳಿಗೆ ಡಿಕೆಶಿ ಭಾವಚಿತ್ರದ ವಾಚ್ ವಿತರಣೆ

    ರಾಮನಗರ: ಜಿಲ್ಲೆಯ ಪ್ರತಿಭಾನ್ವಿತ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಾಧನಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಫ್ಟ್ ನೀಡಲಾಯಿತು. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭಾವಚಿತ್ರವನ್ನು ಮುದ್ರಿಸಿದ್ದ ವಾಚ್ ಗಳನ್ನು ಗಿಫ್ಟಾಗಿ ನೀಡುವ ಮೂಲಕ ಸರ್ಕಾರಿ ಕಾರ್ಯಕ್ರಮವನ್ನ ಡಿಕೆಶಿ ದುರುಪಯೋಗ ಪಡಿಸಿಕೊಂಡಿದ್ದಾರೆ.

    ಅಂದಹಾಗೇ ರಾಮನಗರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಪುರಸಭೆ ಸಹಯೋಗದೊಂದಿಗೆ ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದ ರಸ್ತೆ ಜಕ್ಕಸಂದ್ರದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಯ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.

    ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 500 ಮೌಲ್ಯದ ಗಿಫ್ಟ್, ಹಾಗೂ 1,000 ರೂಪಾಯಿಯ ಚೆಕ್ ಗಳನ್ನು ವಿತರಣೆ ಮಾಡಲಾಯಿತು. ಆದರೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ನೀಡಿದ್ದ ಗಿಫ್ಟ್ ನ ವಾಚ್ ಗಳಲ್ಲಿ ಡಿಕೆಶಿಯ ಭಾವಚಿತ್ರ ರಾರಾಜಿಸುತ್ತಿತ್ತು.

    ಕಾರ್ಯಕ್ರಮವನ್ನ ಸರ್ಕಾರಿ ಕಾರ್ಯಕ್ರಮವಾಗಿ ಏರ್ಪಡಿಸಲಾಗಿತ್ತು. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ಹೊತ್ತಿದ್ದರು. ಆದರೂ ಕೂಡ ಡಿಕೆಶಿ ಭಾವಚಿತ್ರದ ವಾಚ್ ಗಳು ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಈ ಬಗ್ಗೆ ರಾಮನಗರ ಡಿಡಿಪಿಐ ಅಧಿಕಾರಿಯನ್ನ ವಿಚಾರಿಸಿದರೆ ಇಲ್ಲ ನಾವು ಯಾವುದೇ ರೀತಿಯ, ಯಾರ ಭಾವಚಿತ್ರವಿರುವ ಗಿಫ್ಟ್ ನೀಡಿಲ್ಲ, ಅಲ್ಲದೇ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಯಾವ ರಾಜಕಾರಣಿಗಳ ಭಾವಚಿತ್ರದ ವಸ್ತುಗಳನ್ನು ನೀಡಿಲ್ಲ ಬೇಕಿದ್ರೆ ಪರಿಶೀಲನೆ ನಡೆಸಿ ಎಂದು ನುಣುಚಿಕೊಳ್ಳಲು ಯತ್ನಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ರವರು ತಮ್ಮ ಗಮನಕ್ಕೆ ಇದು ಬಂದಿಲ್ಲ, ವಾಚ್ ಗಳಲ್ಲಿ ಭಾವಚಿತ್ರವಿರುವ ಬಗ್ಗೆ ಮಾಹಿತಿ ಇಲ್ಲ ಈ ಬಗ್ಗೆ ಅಧಿಕಾರಿಗಳ ವಿಚಾರಣೆ ನಡೆಸಿ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ತಿಳಿಸಿದರು.

  • ವ್ಯಕ್ತಿ ಬಳಿ 27 ಆಪಲ್ ಫೋನ್, 300 ವಾಚ್‍ಗಳು ಪತ್ತೆ

    ವ್ಯಕ್ತಿ ಬಳಿ 27 ಆಪಲ್ ಫೋನ್, 300 ವಾಚ್‍ಗಳು ಪತ್ತೆ

    ನವದೆಹಲಿ: ಆಪಲ್ ಫೋನ್ ಮತ್ತು ವಾಚ್‍ಗಳನ್ನು ಅಕ್ರಮವಾಗಿ ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯಿಂದ 27 ಆಪಲ್ ಐ ಫೋನ್‍ಗಳು, ರೋಲೆಕ್ಸ್, ಡಿಯರ್, ಅರ್ಮಾನಿ, ಡಿಸೆಲ್ ಮತ್ತು ಟಾಮಿ ಹಿಲ್ಫಿಗರ್ (Rolex, Dior, Armani, Diesel and Tommy Hilfiger) ಸೇರಿದಂತೆ 300 ಐಷಾರಾಮಿ ಕೈಗಡಿಯಾರಗಳು ಪತ್ತೆಯಾಗಿವೆ. ಆರೋಪಿ ಸರಕುಗಳನ್ನು ಹಾಂಕಾಂಗ್‍ನಿಂದ ಕಳ್ಳಸಾಗಾಣೆ ಮಾಡಲು ಯತ್ನಿಸುತ್ತಿದ್ದನು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆತನ ಬಳಿ ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್‍ಗಳು ಕಂಡು ಬಂದಿದೆ. ತಕ್ಷಣ ಅಧಿಕಾರಿಗಳು ಆತನನ್ನು ಬಂಧಿಸಿ ಈ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

  • ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ಅವರಿಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಉಡುಗೊರೆಯಾಗಿ ಸಿಕ್ಕಿದೆ.

    ನಟ ಠಾಕೂರ್ ಅನೂಪ್ ಸಿಂಗ್ ಅವರು ದರ್ಶನ್ ಅವರಿಗೆ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ್ದಾರೆ. ದರ್ಶನ್ ಅವರು ಸ್ನೇಹಿತ ಅನೂಪ್ ಸಿಂಗ್ ಹಾಗೂ ಸುನೀಲ್ ಕುಮಾರ್ ದೇಸಾಯಿ ಆಹ್ವಾನಿಸಿದ್ದರಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.

    ಅನೂಪ್ ಸಿಂಗ್ ಅವರು ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಠಾಕೂರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರಾಗಿದ್ದರು. ‘ಉದ್ಘರ್ಷ’ ಸಿನಿಮಾದಲ್ಲಿ ಅನೂಪ್ ಸಿಂಗ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಠಾಕೂರ್ ತನ್ನ ಗೆಳೆಯ ದರ್ಶನ್‍ಗೆ ಒಂದು ಕೆಜಿ ತೂಕದ ವಾಚ್ ನೀಡಿದ್ದಾರೆ. ಆದರೆ ವಾಚಿನ ಬೆಲೆ ಮಾತ್ರ ತಿಳಿಸಲಿಲ್ಲ.

    ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಸಿನಿಮಾದಲ್ಲಿ ಅಭಿನಯಿಸಿ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವಿಚಾರದಲ್ಲಿ ಠಾಕೂರ್ ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಸಂತಸ ತಂದಿದೆ. ಸಿನಿಮಾದಲ್ಲಿ ಅಭಿನಯಿಸಿ ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ” ಎಂದು ದರ್ಶನ್ ಹೇಳಿದ್ದರು.

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬರುತ್ತಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv