Tag: watch

  • ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ಎಸ್‌ಎಂ ಕೃಷ್ಣ ಅವರು ತಿರುಪತಿ ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿದ್ದೇ ತಡ ಅದು ಅವರ ಜೀವನದಲ್ಲಿ ಒಂದು ವಿಶೇಷ ಬೆಳವಣಿಗೆಗೆ ನಾಂದಿ ಹಾಡಿತ್ತು. ಈ ಮೂಲಕ ಕೇಂದ್ರ ಸಚಿವರಾಗುವ ಸುದ್ದಿ ಸಿಕ್ಕಿತ್ತು.

    ಹೌದು, 1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅವರ ವಾಚು ಕೈಯಿಂದ ಕಳಚಿ ಬಿತ್ತು. ಇದನ್ನು ದೇವಾಲಯದ ಅರ್ಚಕರು ಗಮನಿಸಿ, ಕೃಷ್ಣರ ಸ್ನೇಹಿತರಾಗಿದ್ದ ಸಿಂಗಾರಿಗೌಡರಿಗೆ ಕಳಚಿದ ವಾಚ್‌ನ್ನು ಹುಂಡಿಗೆ ಹಾಕಿಸಿ ಎಂದು ಹೇಳಿದರು.ಇದನ್ನೂ ಓದಿ: ದಿನ ಭವಿಷ್ಯ 11-12-2024

    ಅದಾದ ಬಳಿಕ ಮತ್ತೆ ಅವರ ಪತ್ನಿ ಪ್ರೇಮಾ ಅವರ ಜೊತೆ ತಿರುಪತಿ ಹೋಗಿದ್ದರು. ಆಗ ತಮ್ಮ ವಾಚ್‌ನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಬಂದಿದ್ದರು. ಅಂದು ಮರಳಿ ಬೆಂಗಳೂರಿಗೆ ಬಂದು, ಮತ್ತೆ ಸಂಜೆ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ಟೆನಿಸ್ ಕ್ಲಬ್‌ಗೆ ತೆರಳಿ ಆಡುತ್ತಿದ್ದರು. ಆ ದಿನ ರಾತ್ರಿ ದೆಹಲಿ ಬರುವಂತೆ ತುರ್ತು ಕರೆ ಬಂದಿದೆ.

    ದೆಹಲಿಗೆ ತೆರಳಿದ ಎಸ್‌ಎಂ ಕೃಷ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಭೇಟಿಯಾದರು. ಆಗ ಪ್ರಧಾನಿಯವರು ಕೃಷ್ಣ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಸುದ್ದಿ ಸಿಕ್ಕಿತ್ತು. ಬಳಿಕ ಪ್ರಮಾಣವಚನ ಸ್ವೀಕಾರ ಮಾಡಿ ಕೇಂದ್ರ ಸಚಿವರೂ ಆದರು. ಇದು ಅವರ ಜೀವನದಲ್ಲಾದ ವಿಶೇಷ ಬೆಳವಣಿಗೆ. ತಿರುಪತಿ ದೇವರ ಸನ್ನಿಧಿಯಲ್ಲಿ ಮಾತ್ರ ಇಂತಹ ಪವಾಡ ನಡೆಯಲು ಸಾಧ್ಯ ಎಂದು ಎಸ್‌ಎಂಕೆ ನಂಬಿದ್ದರು. ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅದನ್ನು ಬಹಿರಂಗವಾಗಿ ಎಲ್ಲಿಯೂ ತೋರಿಸಿಕೊಡುತ್ತಿರಲಿಲ್ಲ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 11-12-2024

  • ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಗಾಂಧೀನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ ವೈಭವದ ಆಚರಣೆ ಮನೆ ಮಾಡಿದ. ಈ ನಡುವೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ( Meta CEO Mark Zuckerberg) ಮತ್ತು ಪತ್ನಿ ಪ್ರಿಸ್ಸಿಲ್ಲಾ ಚಾನ್ (Priscilla Chan) ಅವರು ಅನಂತ್ ಅಂಬಾನಿಯ ದುಬಾರಿ ಬೆಲೆಯ ವಾಚ್ ಬಗ್ಗೆ ವಿಚಾರಿಸಿರುವುದು ಅತಿಥಿಗಳ ಗಮನವನ್ನು ಸೆಳೆದಿದೆ.

    ಹೌದು. ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಜೊತೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಅವರ ಕೈಯಲ್ಲಿರುವ ದುಬಾರಿ ವಾಚ್‌ (Watch) ನೋಡಿ ಮಾರುಹೋಗಿದ್ದಾರೆ. ಇದನ್ನೂ ಓದಿ: ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವೀಡಿಯೋದಲ್ಲಿ ಏನಿದೆ..?: ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ವರ ಅನಂತ್ ಅವರು ನಿಂತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜುಕರ್‌ ಬರ್ಗ್‌ ಅವರ ಪತ್ನಿಯ ಕಣ್ಣಿಗೆ ಅನಂತ್‌ ಅವರ ವಾಚ್‌ ಬಿದ್ದಿದೆ. ಅಲ್ಲದೆ ಅವರಿಗೆ ತುಂಬಾ ಇಷ್ಟವಾಗುತ್ತೆ. ಹೀಗಾಗಿ ಅವರು ವಾಚ್‌ ತುಂಬಾ ಅದ್ಭುತವಾಗಿದೆ ಎಂದು ಹೇಳುತ್ತಾರೆ. ಈ ವೇಳೆ ಜುಕರ್‌ ಬರ್ಗ್‌ ಅವರು.. ಹೌದು. ತುಂಬಾ ಚೆನ್ನಾಗಿದೆ. ನಾನು ಈಗಾಗಲೇ ಅವರಿಗೆ ಹೇಳಿದೆ ಎನ್ನುತ್ತಾರೆ. ಈ ವೇಳೆ ಪ್ರಿಸಿಲ್ಲಾ, ಈ ವಾಚ್​​ ಅನ್ನು ಯಾವ ಕಂಪನಿ ತಯಾರಿಸಿದೆ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನಂತ್, ರಿಶಾರ್​ ಮಿಲ್ ಕಂಪನಿ ಎಂದು ಹೇಳಿದ್ದಾರೆ.

    ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಅವರ ಮನಸ್ಸು ಬದಲಾಗಿದೆ. ಹೀಗಾಗಿ ಮಾತು ಮುಂದವರಿಸಿದ ಅವರು, ನಿಮಗೆ ಗೊತ್ತಾ ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಅಲ್ಲದೆ ಹಲವಾರು ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ.

    ವಾಚ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ: ರಿಶಾರ್​ ಮಿಲ್ (Richard Mille) ಅತ್ಯಂತ ದುಬಾರಿ ವಾಚ್​​ಗಳನ್ನು ತಯಾರಿಸುತ್ತದೆ. ಇದು ಸ್ವಿಜರ್​ಲೆಂಡ್​ನ ಕಂಪನಿ ಆಗಿದೆ. ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ಬೆಲೆ ಬರೋಬ್ಬರಿ 14 ಕೋಟಿ ರೂಪಾಯಿ ಎನ್ನಲಾಗಿದೆ.

  • ಬೆಲೆ ಬಾಳುವ ವಾಚ್‍ಗಾಗಿ ಯುವಕನ ಬರ್ಬರ ಹತ್ಯೆ

    ಬೆಲೆ ಬಾಳುವ ವಾಚ್‍ಗಾಗಿ ಯುವಕನ ಬರ್ಬರ ಹತ್ಯೆ

    ಹುಬ್ಬಳ್ಳಿ: ಬೆಲೆ ಬಾಳುವ ವಾಚ್‍ಗಾಗಿ ಯುವಕನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ (Hubballi) ನಗರದ ಬೆಂಗೇರಿಯಲ್ಲಿ ನಡೆದಿದೆ.

    ಮನೋಜ್ ಪಾರ್ಕ್ ನಿವಾಸಿ ಅಸ್ಲಂ ಮಕಂದರ್ (30) ಹತ್ಯೆಯಾದ ಯುವಕ. ಮಂಜುನಾಥ್ ಜೋನಲ್ಲಿ ಎಂಬಾತನಿಂದ ಈ ಹತ್ಯೆಯಾಗಿದ್ದು, ಹಲ್ಲೆನಡೆಸಿ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಅಸ್ಲಂನನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

    ಕೊಲೆಯಾದ ಕೆಲವೇ ಹೊತ್ತಿನಲ್ಲಿ ಆರೋಪಿ ಮಂಜುನಾಥನ ಬಂಧನವಾಗಿದ್ದು, ಮೃತ ಅಸ್ಲಾಂ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಧಿತ ತಹಶೀಲ್ದಾರ್‌ ಅಜಿತ್‌ ರೈ ವಾಚ್‌ ಕಲೆಕ್ಷನ್‌ ನೋಡಿ ದಂಗಾದ ಲೋಕಾ ಅಧಿಕಾರಿಗಳು

    ಬಂಧಿತ ತಹಶೀಲ್ದಾರ್‌ ಅಜಿತ್‌ ರೈ ವಾಚ್‌ ಕಲೆಕ್ಷನ್‌ ನೋಡಿ ದಂಗಾದ ಲೋಕಾ ಅಧಿಕಾರಿಗಳು

    ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ (Disproportionate Assets) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಆರ್‌ಪುರಂ ತಹಶೀಲ್ದಾರ್‌ (KR Puram Tahsildar) ಅಜಿತ್‌ ರೈ (Ajit Rai) ಮನೆಯಲ್ಲಿರುವ ವಾಚ್‌ಗಳನ್ನು (Watch) ನೋಡಿ ಲೋಕಾಯುಕ್ತ ಅಧಿಕಾರಿಗಳೇ (Lokayukta Officials) ದಂಗಾಗಿದ್ದಾರೆ.

    ಅಜಿತ್ ರೈ ಬಳಿ ಮೂರು Rado ವಾಚ್‌ ಪತ್ತೆಯಾಗಿದೆ. ಈ ಮೂರು ವಾಚ್ ಗಳ ಬೆಲೆ 5 ಲಕ್ಷ ರೂ.ಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ ವಾಚ್ ಗಳ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.

    ತಪಾಸಣೆಯ ಬೇಳೆ ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೇಟ್ ರಿವೀಲ್ ಆಗಿದೆ. ASR ಹೆಸರಿನಲ್ಲಿ ಅಜಿತ್ ರೈ ಅಫಿಶಿಯಲ್ ಲೋಗೋ ತಯಾರಿಸಿದ್ದರು. ಎಎಸ್‌ಆರ್‌ ಎಂದರೆ ಅಜಿತ್‌ ಸೌಮ್ಯಾ ರೈ. ತನ್ನ ಹೆಸರಿನ ಜೊತೆ ಪತ್ನಿ ಸೌಮ್ಯ ಹೆಸರನ್ನು ಸೇರಿಸಿ ಅಜಿತ್ ರೈ ಲೋಗೋ ವಿನ್ಯಾಸ ಮಾಡಿದ್ದರು.

    ತನ್ನ ಬೈಕ್, ಕಾರ್ ಹಾಗೂ ಇತರೇ ವಸ್ತುಗಳಿಗೆ ವಿಶೇಷವಾಗಿ ಅಜಿತ್‌ ರೈ ಲೋಗೋ ಡಿಸೈನ್ ಮಾಡಿ ಅಂಟಿಸುತ್ತಿದ್ದರು. ಆಡಿ, ಬೆನ್ಜ್ ಕಾರುಗಳ ಲೋಗೋ ಮಾದರಿಯಲ್ಲಿ ವಿನ್ಯಾಸ ಮಾಡಿದ್ದನ್ನು ನೋಡಿ ಲೋಕಾ ಅಧಿಕಾರಿಗಳು ಶಾಕ್‌ ಆಗಿದ್ದಾರೆ.  ಇದನ್ನೂ ಓದಿ: ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ: ಪರಮೇಶ್ವರ್

    ಏನು ಪತ್ತೆಯಾಗಿದೆ?
    * ಸಹಕಾರನಗರದಲ್ಲಿ 50 ಲಕ್ಷದ ಲೀಸ್‍ನ ಮನೆಯಲ್ಲಿ ವಾಸ
    * ಗೆಳೆಯ ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿ 96 ಎಕರೆಯ ರೇಸ್ ಕ್ಲಬ್
    * ಸೋದರ ಅಶೀತ್ ರೈ ಹೆಸರಲ್ಲಿ ಬೇನಾಮಿ ಆಸ್ತಿ
    * ದೇವನಹಳ್ಳಿಯ ಮತ್ತೊಂದು ಕಡೆ 44 ಎಕರೆಯ ಫಾರ್ಮ್ ಹೌಸ್
    * ದೊಡ್ಡ ದೊಡ್ಡ ಕಂಪನಿಗಳಿಗೆ ಜಮೀನು ಕೊಡಿಸಿ ದುಡ್ಡು ಮಾಡ್ತಿದ್ದ ಅಜಿತ್ ರೈ
    * ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರದಲ್ಲಿ ನೂರಾರು ಎಕರೆ ಜಮೀನು ಇರಬಹುದು ಎಂಬ ಶಂಕೆ
    * ನೂರಾರು ಎಕರೆ ಜಮೀನು ಮೌಲ್ಯ 1000ಕೋಟಿಗೂ ಹೆಚ್ಚು ಎಂಬ ಅಂದಾಜು
    * 1368 ಸೀರಿಸ್‍ನ ಐಷಾರಾಮಿ ಕಾರುಗಳು, ಬೈಕ್‍ಗಳು
    * 4 ಫಾರ್ಚೂನರ್, 4 ಥಾರ್, 3 ಐಷಾರಾಮಿ ಬೈಕ್
    * ಅಜಿತ್ ರೈ ಬಳಿಯ ವಾಹನಗಳ ಮೌಲ್ಯ ಐದು ಕೋಟಿ

  • ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

    ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

    ಬೆಂಗಳೂರು: ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಸಿದ್ದರಾಮಯ್ಯನವರಿಗೆ (Siddarmaiah) ಪತ್ನಿ ವಾಚ್‌(Watch) ಒಂದನ್ನು ಉಡುಗೊರೆಯಾಗಿ (Gift) ನೀಡಿದ್ದಾರೆ.

    ಭಾನುವಾರ ಕಾಂಗ್ರೆಸ್ ನೂತನ ಕಟ್ಟಡ ಇಂದಿರಾ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆಯಲ್ಲಿ ಸಿದ್ದರಾಮಯ್ಯ ಬಲಗಡೆ ಡಿಕೆ ಶಿವಕುಮಾರ್‌ (Shivakumar), ಎಡಗಡೆ ಎಂಬಿ ಪಾಟೀಲ್‌ (MB Patil) ಕುಳಿತ್ತಿದ್ದರು.

    ಸಚಿವ ಎಂಬಿ ಪಾಟೀಲ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಳಿ ಹೊಸ ವಾಚ್‌ ಬಗ್ಗೆ ಕೇಳಿದ್ದಾರೆ. ಈ ವೇಳೆ ಈ ವೇಳೆ ಪತ್ನಿ ಪಾರ್ವತಿ Rado ವಾಚ್ ಗಿಫ್ಟ್ ನೀಡಿದ ವಿಚಾರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

     

    ವಿವಾದಕ್ಕೆ ಕಾರಣವಾಗಿತ್ತು  ವಾಚ್‌:
    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಹುಬ್ಲೋಟ್ ವಾಚ್ ಗಿಫ್ಟ್ ಪ್ರಕರಣ ಭಾರೀ ಸದ್ದು ಮಾಡಿತ್ತು. ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

     

    ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡಿ  ಟೀಕೆ ಮಾಡುತ್ತಿದ್ದರು.

  • ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್

    ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್

    ತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್  (Yogi Adityanath)ಇಂದು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನಾನು ನನ್ನ ಸಚಿವ ಸಹೋದ್ಯೋಗಿಗಳ ಜೊತೆ ಸಿನಿಮಾ ನೋಡಿದೆ. ದಿ ಕೇರಳ ಸ್ಟೋರಿ ಚಿತ್ರ ತಂಡಕ್ಕೆ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾ ದಿ ಕೇರಳ ಸ್ಟೋರಿ ಸಿನಿಮಾ ಟೀಮ್ ಯೋಗಿ ಆದಿತ್ಯ ನಾಥ್ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿತ್ತು. ಉತ್ತರ ಪ್ರದೇಶದಲ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಿದ್ದರಿಂದ ಇಡೀ ಟೀಮ್ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತ್ತು. ಇದೇ ಸಂದರ್ಭದಲ್ಲಿ ಚಿತ್ರತಂಡಕ್ಕೆ ಗಿಫ್ಟ್ ನೀಡಿ ಅಭಿನಂದಿಸಿದ್ದ ಸಿಎಂ, ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದರು. ಮಾತುಕೊಟ್ಟಂತೆ ಇಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸಿನಲ್ಲಿ ದಾಖಲೆ ಕಲೆಕ್ಷನ್ ಕಲೆ ಹಾಕುತ್ತಿದೆ. ರಿಲೀಸ್ ಆದ 7 ದಿನಕ್ಕೆ ಬರೋಬ್ಬರಿ 80 ಕೋಟಿ ರೂಪಾಯಿ ಬಾಚುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ. ಈ ಪ್ರಮಾಣದಲ್ಲಿ ದಿ ಕೇರಳ ಸ್ಟೋರಿ ಗೆಲ್ಲುತ್ತಿದ್ದಂತೆಯೇ ಅದಾ ಶರ್ಮಾಗೆ ಭರ್ಜರಿ ಆಫರ್ಸ್ ಬರುತ್ತಿವೆ. ಅಲ್ಲದೇ, ಅನೇಕ ಸಂಘಟನೆಗಳು ಸಿನಿಮಾವನ್ನು ಉಚಿತವಾಗಿ ತೋರಿಸುವ ಮೂಲಕ ಬಾಕ್ಸ್ ಆಫೀಸಿಗೆ ಆದಾಯ ಹರಿದು ಬರುವಂತೆ ಮಾಡುತ್ತಿದ್ದಾರೆ.

    ಎರಡು ರಾಜ್ಯಗಳಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಐದೇ ದಿನಕ್ಕೆ ಐವತ್ತು ಕೋಟಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಮಾಡಿದ್ದಾರೆ. ಆದರೆ, ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವೇ ಬೇರೆ ಇದೆ. ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಐವತ್ತು ಕೋಟಿ ರೂಪಾಯಿ ಗಳಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

    ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಮಂಗಳವಾರ 11.14 ಕೋಟಿ ರೂ. ಬುಧವಾರ 12 ಕೋಟಿ ರೂ. ಶುಕ್ರವಾರ ಕೂಡ ಅಂದಾಜು 12 ಕೋಟಿ ರೂಪಾಯಿ  ಸೇರಿ ಭಾರತದಲ್ಲೇ ಏಳು ದಿನಕ್ಕೆ 80.86 ಕೋಟಿ ಗಳಿಕೆ ಮಾಡಿದೆ.

  • ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

    ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ!

    ಬೆಂಗಳೂರು: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಆರ್.ಟಿ.ನಗರದ ವಜೀರ್ ಅಹಮದ್ ಮೇಲೆ ಈ ಆರೋಪ ಕೇಳಿಬಂದಿದೆ. ರ್ಯಾಡೋ ವಾಚ್ (Rado Watch) ತಂದಿಲ್ಲ ಅಂತ ವಜೀರ್ ತನ್ನ ಪತ್ನಿ ಮುಖಕ್ಕೆ ಡೆಡ್ಲಿ ಪಂಚ್ ಕೊಟ್ಟಿದ್ದಾನೆ. ಪತ್ನಿ ಮುಖಕ್ಕೆ ಕೈಯ್ಯಿಂದ ಗುದ್ದಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್‌ ನುಗ್ಗಿಸಿದ ಲೇಡಿ ಪೊಲೀಸ್‌

    ಕಳೆದ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯನ್ನು ವಜೀರ್ ಮದುವೆಯಾಗಿದ್ದನು. ದುಬೈನಲ್ಲಿ ಕೆಲಸಕ್ಕೆ ಸೇರುತ್ತೇನೆ ಎಂದು ವಂಚಿಸಿ ಮದುವೆಯಾಗಿದ್ದ. ಆದರೆ ಮದುವೆ ನಂತರ ಯಾವುದೇ ಕೆಲಸಕ್ಕೆ ಸೇರಿಕೊಂಡಿಲ್ಲ. ಈ ಮಧ್ಯೆ ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆ (Dowry) ಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ಪತಿ ನನಗೆ ತಿಳಿಯದೇ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಸದ್ಯ ಸಂತ್ರಸ್ತೆಯಿಂದ ಪತಿ ವಜೀರ್ ಹಾಗೂ ಕುಟುಂಬಸ್ಥರ ವಿರುದ್ಧ ಆರ್.ಟಿ.ನಗರ ಠಾಣೆ (R T Nagar Police Station) ಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಐಪಿಸಿ 498ಎ (ವರದಕ್ಷಿಣೆ ಕಿರುಕುಳ) 506 (ಜೀವ ಬೆದರಿಕೆ) 323 (ಮಾರಣಾಂತಿಕ ಹಲ್ಲೆ)ಯಡಿ ಪ್ರಕರಣ ದಾಖಲಿಸಲಾಗಿದೆ.

  • ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ಯೂತ್‌ಫುಲ್ ಲೈಫ್‌ನಲ್ಲಿ ಕಲರ್‌ಫುಲ್ ವಾಚ್‌ಗಳ ಕಾರುಬಾರು

    ತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಲುಕ್ ನೀಡುವ ವಾಚ್‌ಗಳಿಗಿಂತ ಸ್ಮಾರ್ಟ್ ವಾಚ್‌ಗಳು ಹೆಚ್ಚು ಟ್ರೆಂಡಿಯಾಗಿವೆ. ಇವು ನೂತನ ತಂತ್ರಜ್ಞಾನಗಳೊಂದಿಗೆ ವಿಶಿಷ್ಟ ರೂಪದಲ್ಲಿ ಕೆಲಸ ನಿರ್ವಹಿಸುತ್ತಿವೆ. ಅದಕ್ಕಾಗಿಯೇ ಉತ್ತಮ ಗುಣಮಟ್ಟ ಹಾಗೂ ದೀರ್ಘಕಾಲ ಬಾಳಿಕೆ ಬರುವ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರೆಯುತ್ತಿವೆ.

    ಬ್ಲೂಟೂತ್ ಕನೆಕ್ಟ್ ಸ್ಮಾರ್ಟ್ ವಾಚ್, ಮೆಟಲ್ ಬಾಡಿ ವಾಚ್, ಡಿಜಿಟಲ್ ವಾಚ್, ಚೈನ್ ವಾಚ್ ಹೀಗೆ ವಿವಿಧ ಬಗೆಯ ವಾಚ್‌ಗಳು ಯುವ ಸಮೂಹದ ಅಚ್ಚುಮೆಚ್ಚಾಗಿವೆ. ಅವುಗಳ ವೈಶಿಷ್ಟ್ಯ ಹೇಗಿದೆ ಎಂಬುದನ್ನಿಲ್ಲಿ ನೋಡಿ…‌ ಇದನ್ನೂ ಓದಿ: ಕಪಲ್ ರಿಂಗ್ ಉಡುಗೊರೆ ನೀಡಿ ವ್ಯಾಲೆಂಟೈನ್ಸ್ ಡೇ ಆಚರಿಸಿ

    ಬ್ಲೂಟೂತ್ ಸ್ಮಾರ್ಟ್ ವಾಚ್:
    ಇದು ಮೊಬೈಲ್ ಬ್ಲೂಟೂತ್ ಸಂಪರ್ಕದೊಂದಿಗೆ ಕೆಲಸ ನಿರ್ವಹಿಸುವ ಸ್ಮಾರ್ಟ್ ವಾಚ್. ಈ ವಾಚ್ ಕಪ್ಪು, ಬಿಳಿ ಶೈನ್ ಹಾಗೂ ಬ್ರೌನ್ ಬಣ್ಣಗಳಲ್ಲಿ ಇರುತ್ತದೆ. ಯುವಕ, ಯುವತಿಯರ ಕೈಗೆ ಇದು ಆಕರ್ಷಕ ಪ್ರೀಮಿಯಂ ನೋಟವನ್ನು ನೀಡುತ್ತದೆ.

    ವಾಟರ್‌ಪ್ರೂಫ್ ವಾಚ್
    ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ಟ್ರ‍್ಯಾಕ್ ಮಾಡುವುದಕ್ಕೂ ಈ ವಾಚ್ ಉಪಯೋಗ ಆಗಲಿದೆ. ಉತ್ತಮ ವೈಶಿಷ್ಟ್ಯ ಹೊಂದಿದ್ದು, ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹಾಗೂ ನಾವು ನಡೆಯುವ ಹೆಜ್ಜೆಗಳನ್ನೂ ಮಾನಿಟರ್ ಮಾಡುತ್ತದೆ.

    ಮೆಟಲ್ ಬಾಡಿ ವಾಚ್:
    ಈ ವಾಚ್ ಮೆಟಲ್ ಬಾಡಿ ಮತ್ತು ಲೆದರ್ ಸ್ಟ್ರಾಪ್, ಫುಲ್ ಟಚ್ ಹೊಂದಿರುತ್ತವೆ. ಇದು ಇಂದಿನ ಟ್ರೆಂಡಿಯೊಂದಿಗೆ ಸಾಂಪ್ರದಾಯಿಕ ಉಡುಗೆಗಳಿಗೂ ಹೊಸ ಲುಕ್ ಕೊಡುತ್ತೆ. ಇದನ್ನೂ ಓದಿ: ಕಲರ್‌ಫುಲ್ ಸೀರೆಗೆ ಮ್ಯಾಚಿಂಗ್ ಮಿಂಚಿಂಗ್ – ಬೊಂಬಾಟ್ ಬ್ಲೌಸ್‍ಗಳ ಸ್ಲೀವ್ಸ್ ಡಿಸೈನ್

    ಡಿಜಿಟಲ್ ವಾಚ್:
    ವಿದ್ಯುತ್ ಮೀಟರ್ ನಂತೆಯೇ ನಿಮಿಷ, ಸೆಕೆಂಡುಗಳು ಹಾಗೂ ಗಂಟೆ ಸಮಯವನ್ನೂ ತೋರಿಸುವ ಈ ಡಿಜಿಟಲ್ ವಾಚ್ ಹೆಚ್ಚು ಯೂತ್‌ಫುಲ್ ಆಗಿದೆ. ಜೊತೆಗೆ ಕಲರ್ ಫ್ಲ್ಯಾಶ್‌ ಸಹ ಹೊಂದಿದ್ದು, ಅಲಾರಂ ಸೆಟ್ಟಿಂಗ್ಸ್ ಸಹ ಇರುತ್ತದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ಯುವಜನರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

    ಡ್ರೆಸ್‌ವಾಚ್
    ಸೂಟ್ ಡ್ರೆಸ್‌ಗಳಿಗೆ ಪಕ್ಕಾ ಲುಕ್ ನೀಡುವ ವಾಚ್. ನೀವು ಯಾವುದೇ ಸೂಟ್ ಧರಿಸಿದ್ರೂ ಅದರ ಔಟ್‌ಲುಕ್ ಫಿಟ್ ಆಗಿ ಕಾಣಬೇಕು ಅಂದ್ರೆ ಈ ರೀತಿಯ ವಾಚ್ ಧರಿಸಲೇ ಬೇಕು. ಆದರೆ ಟ್ರೆಂಟ್ ಬಯಸುವವರು ಇದನ್ನ ಹೆಚ್ಚು ಇಷ್ಟಪಡಲ್ಲ.

    Live Tv
    [brid partner=56869869 player=32851 video=960834 autoplay=true]

  • ಗುರುವಾರದಿಂದ CET ಪರೀಕ್ಷೆ- ಹಿಜಬ್, ವಾಚ್ ನಿಷೇಧ, ಮಾಸ್ಕ್, ಹಾಫ್ ಶರ್ಟ್ ಕಡ್ಡಾಯ

    ಗುರುವಾರದಿಂದ CET ಪರೀಕ್ಷೆ- ಹಿಜಬ್, ವಾಚ್ ನಿಷೇಧ, ಮಾಸ್ಕ್, ಹಾಫ್ ಶರ್ಟ್ ಕಡ್ಡಾಯ

    ಬೆಂಗಳೂರು: ನಾಳೆಯಿಂದ ಸಿಇಟಿ ಪರೀಕ್ಷೆ ಪ್ರಾರಂಭವಾಗಲಿದೆ. ಪರೀಕ್ಷೆಗೆ ಕೆಇಎ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನೀಟ್ ಮಾದರಿಯಲ್ಲಿ ಕಠಿಣ ಮಾರ್ಗಸೂಚಿಗಳನ್ನ ಜಾರಿ ಮಾಡ್ತಿದೆ. ಇಡೀ ಪರೀಕ್ಷಾ ವ್ಯವಸ್ಥೆ ವೀಡಿಯೋ ಚಿತ್ರೀಕರಣವಾಗಲಿದೆ.

    ನಾಳೆಯಿಂದ 3 ದಿನಗಳ ಕಾಲ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಬಾರಿ 2,16,525 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ರಾಜ್ಯದ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರಿನ 87 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

    ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, 1708 ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಇವರಿಗೆ ಗಡಿಭಾಗದ ಜಿಲ್ಲೆಗಳಾದ ಬೆಂಗಳೂರು, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ, ಮಂಗಳೂರಿನಲ್ಲಿ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗೆ 486 ವೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, 972 ವಿಶೇಷ ತಪಾಸಣೆ ದಳ ಸೇರಿ 20 ಸಾವಿರ ಅಧಿಕಾರಿಗಳು ಪರೀಕ್ಷಾ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಇದನ್ನೂ ಓದಿ: ಹಿಂದಿ ಭಾಷೆ ಬರುವ ಶಾಲಾ, ಕಾಲೇಜು ಮಕ್ಕಳಿಗಷ್ಟೇ ಪ್ರವಾಸ ಭಾಗ್ಯ- ಶಿಕ್ಷಣ ಇಲಾಖೆ ಆದೇಶ

    ಸಿಇಟಿ ಪರೀಕ್ಷೆಗೆ ನೀಟ್ ಮಾದರಿಯ ನಿಯಮ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ನಿಷೇಧ ಮಾಡಲಾಗಿದೆ. ತಲೆ ಮತ್ತು ಕಿವಿ ಮುಚ್ಚಿಕೊಳ್ಳುವ ವಸ್ತ್ರ ಧರಿಸಬಾರದು. ವಿದ್ಯಾರ್ಥಿಗಳು ಆಫ್ ಶರ್ಟ್ ಮಾತ್ರ ಹಾಕಬೇಕು. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ ಮಾಡಲಾಗಿದೆ. ಕೈ ಗಡಿಯಾರವನ್ನು ಪರೀಕ್ಷಾ ಕೇಂದ್ರಕ್ಕೆ ನಿಷೇಧ ಮಾಡಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. 70% ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಎಲ್ಲಿ ಸಿಸಿ ಟಿವಿ ಇರೋದಿಲ್ಲವೋ ಅಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಖಜಾನೆಯಿಂದ ಪರೀಕ್ಷಾ ಕೇಂದ್ರದವರೆಗೂ ವೀಡಿಯೋ ಚಿತ್ರೀಕರಣಕ್ಕೆ ನಿರ್ಧಾರ ಮಾಡಲಾಗಿದೆ.

    ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ಇರಲಿದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ಜೊತೆ ಆಧಾರ್ ಕಾರ್ಡ್, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದಾದರೂ ಒಂದು ಸೂಕ್ತ ಗುರುತಿನ ಪತ್ರ ವಿದ್ಯಾರ್ಥಿಗಳು ತರಬೇಕು. ಪರೀಕ್ಷೆಯ ಮೊದಲ ದಿನವಾದ ನಾಳೆ ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳು ನಡೆಯಲಿದ್ದು, ಜೂನ್ 17 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಗಳು ನಡೆಯಲಿವೆ.

    Live Tv

  • ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ತಿರುವನಂತಪುರಂ: ಆನ್‍ಲೈನ್‍ನಲ್ಲಿ ಬುಕ್ ಮಾಡಿರುವ ವಸ್ತುಗಳ ಬದಲಾಗಿ ಬೇರೆ ವಸ್ತುಗಳ ಬಂದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಇಲ್ಲೊಬ್ಬರು ವಾಚ್ ಬುಕ್ ಮಾಡಿದರೆ ಬಂದಿದ್ದು ಮಾತ್ರ ಕಾಂಡೋಮ್ ಆಗಿದೆ.

    ಕೇರಳದ ಎರ್ನಾಕುಲಂನ ಥಟ್ಟಂಪಾಡಿ ನಿವಾಸಿ ಅನಿಲ್ ಕುಮಾರ್ ಅವರು 2,200 ಬೆಲೆ ಬಾಳುವ ವಾಚ್‍ನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದಾರೆ. ಡೆಲಿವರಿ ಬಾಯ್ ವಾಚ್ ಕೊಟ್ಟಿದ್ದಾನೆ. ವಾಚ್ ಬಂದಿರುವ ಖುಷಿಯಲ್ಲಿ ಅನಿಲ್ ತಕ್ಷಣ ಅಲ್ಲೇ ಬಾಕ್ಸ್ ಓಪನ್ ಮಾಡಿ ನೋಡಿದ್ದಾರೆ. ಇದನ್ನೂ ಓದಿಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಆದರೆ ಕಾಂಡೋಮ್ ಜೊತೆಗೆ ಕೆಲವು ವಸ್ತುಗಳು ಬಾಕ್ಸ್‌ನಲ್ಲಿ ಇರುವುದನ್ನು ನೋಡಿ ಶಾಕ್ ಆಗಿದ್ದಾರೆ. ತಕ್ಷಣ ಡೆಲಿವರಿ ಏಜೆಂಟ್‍ಗಳನ್ನು ಮನೆಯ ಆವರಣದಲ್ಲೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇದು ಕಂಪನಿ ಮಾಡಿರುವ ಎಡವಟ್ಟಾ? ಸಂಚು ರೂಪಿಸಿರುವುದಾ? ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ವಾಚ್ ಡೆಲಿವರಿ ಕೊಡಲು ಬಂದಿದ್ದ ಇಬ್ಬರು ಪೊಲೀಸರ ವಶದಲ್ಲಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ