Tag: wastage

  • ರಾಜ್ಯಕ್ಕೆ ಎಂಟ್ರಿಯಾಗ್ತಿದೆ ಕೇರಳ ತ್ಯಾಜ್ಯ – ವಾಹನಗಳನ್ನು ಹಿಡಿದ ಗಡಿಜಿಲ್ಲೆಯ ಜನರು

    ರಾಜ್ಯಕ್ಕೆ ಎಂಟ್ರಿಯಾಗ್ತಿದೆ ಕೇರಳ ತ್ಯಾಜ್ಯ – ವಾಹನಗಳನ್ನು ಹಿಡಿದ ಗಡಿಜಿಲ್ಲೆಯ ಜನರು

    -ತ್ಯಾಜ್ಯ ಹೊತ್ತು ತಂದ ಐದು ಲಾರಿ ಸೀಜ್, ಐವರ ವಿರುದ್ಧ ಎಫ್‌ಐಆರ್

    ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರಕ್ಕೆ (Chamarajangar) ಮತ್ತೇ ಮತ್ತೇ ಕೇರಳದಿಂದ ಕಸ ಬರುತ್ತಿದೆ. ಜಿಲ್ಲೆಯ ಗುಂಡ್ಲುಪೇಟೆ ಕೇರಳದ ತ್ಯಾಜ್ಯ ಸುರಿಯುವ ಕಸದ ತೊಟ್ಟಿಯಾಗಿದೆ.

    ಕೇರಳಿಗರು ತಮ್ಮ ರಾಜ್ಯದಿಂದ ನಾನಾ ರೀತೀಯ ತ್ಯಾಜ್ಯವನ್ನು ಗುಂಡ್ಲುಪೇಟೆ ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುತ್ತಿದ್ದು, ಜಿಲ್ಲಾಡಳಿತ ಮೌನವಹಿಸಿದೆ. ಹೀಗೆ ನಿತ್ಯ ಇಲ್ಲಿಗೆ ಬಂದು ತ್ಯಾಜ್ಯ ಸುರಿದು ಹೋಗುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ.ಇದನ್ನೂ ಓದಿ: ಎಡನೀರು ಮಠದ ಶ್ರೀಗಳ ಕಾರಿನ ಮೇಲೆ ಅನ್ಯ ಕೋಮಿನ ಯುವಕರಿಂದ ದಾಳಿ

    ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಕೇರಳದಿಂದ ಮೆಡಿಕಲ್ ವೇಸ್ಟ್, ಚಪ್ಪಲಿ, ಮಾಂಸ, ಕೊಳೆತ ತರಕಾರಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತಂದು ಗಡಿಭಾಗದ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುವುದು ಅಥವಾ ಗುಂಡ್ಲುಪೇಟೆ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕ ಗಡಿಭಾಗದ ಚೆಕ್‌ಪೋಸ್ಟ್ನಲ್ಲಿ ಯಾವುದೇ ತಪಾಸಣೆ ನಡೆಯದೆ ಕೇವಲ ಗ್ರೀನ್ ಟ್ಯಾಕ್ಸ್ ವಸೂಲಿಗಷ್ಟೇ ಸೀಮಿತವಾಗಿದೆ.

    ನೆರೆಯ ಕೇರಳಿಗರು ಎಗ್ಗಿಲ್ಲದೇ ಚೆಕ್‌ಪೋಸ್ಟ್ ದಾಟಿ ಲಾರಿ ಮತ್ತು ಟೆಂಪೋಗಳಲ್ಲಿ ಕರ್ನಾಟಕಕ್ಕೆ ಕಸ ಸಾಗಣೆ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್ನಲ್ಲಿರುವ ಪೊಲೀಸ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವು ಇದೆ.

    ಇನ್ನೂ ಕೇರಳದಿಂದ ಕರ್ನಾಟಕಕ್ಕೆ ಕಸ ನಿರಂತರವಾಗಿ ಸಾಗಣೆಯಾಗುತ್ತಿದ್ದರೂ ಕೂಡ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇದರಿಂದ ಬೇಸತ್ತ ಕನ್ನಡಪರ ಸಂಘಟನೆಗಳು ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದ 5 ಲಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೇರಳದ ಐವರು ಲಾರಿ ಚಾಲಕರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

    ಚೆಕ್‌ಪೋಸ್ಟ್ನಲ್ಲಿ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸುವ ಕೆಲಸಕ್ಕೆ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಮುಂದಾಗಬೇಕಿದೆ. ಇದರ ಜೊತೆಗೆ ಕೇರಳ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿ ತ್ಯಾಜ್ಯ ಸಾಗಾಣಿಕೆಗೆ ಕಡಿವಾಣ ಹಾಕಬೇಕಿದೆ.ಇದನ್ನೂ ಓದಿ: ಅಥಣಿ | ಅಂತರರಾಜ್ಯ ಕಳ್ಳರ ಸೆರೆ : 40 ಲಕ್ಷ ರೂ. ಚಿನ್ನಾಭರಣ ವಶಕ್ಕೆ

  • ಅಂಬುಲೆನ್ಸ್‌ನಲ್ಲಿ ಗುಜರಿ ವಸ್ತುಗಳ ಸಾಗಾಟ

    ಅಂಬುಲೆನ್ಸ್‌ನಲ್ಲಿ ಗುಜರಿ ವಸ್ತುಗಳ ಸಾಗಾಟ

    ಬೆಂಗಳೂರು: ಯಾರೂ ಹಿಡಿಯುವುದಿಲ್ಲ, ಪರಿಶೀಲನೆ ನಡೆಸುವುದಿಲ್ಲ ಎಂದು ಕಳ್ಳತನ ಮಾಡಿದ್ದ ಗುಜರಿ ವಸ್ತುಗಳನ್ನು ಅಂಬುಲೆನ್ಸ್ ನಲ್ಲಿ ಸಾಗಾಟ ಮಾಡುತ್ತಿದ್ದರು.

    ಶಿವಾಜಿ ನಗರದ ರೆಸಲ್ ಮಾರ್ಕೆಟ್‍ನಲ್ಲಿ ಸತೀಶ್, ಮಹೇಶ್ ಗುಜರಿ ಸಾಮಾನುಗಳನ್ನು ಹರ್ಷಿಣಿ ಹೆಸರಿನ ಅಂಬುಲೆನ್ಸ್ ಮೂಲಕ ಸಾಗಾಟ ಮಾಡುತ್ತಿದ್ದರು. ವಾಹನಗಳ ಟೈರ್, ಟ್ಯೂಬ್ ಸೇರಿದಂತೆ ಹಲವು ಗುಜರಿ ವಸ್ತುಗಳನ್ನು ಖದೀಮರು ಅಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಅನುಮಾನ ಬಂದು ಪೊಲೀಸರು ಅಂಬುಲೆನ್ಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗುಜರಿ ಸಾಮಾನು ಸಾಗಿಸುತ್ತಿದ್ದ ರಹಸ್ಯ ಬಯಲಾಗಿದೆ.

    ಆರೋಪಿಗಳನ್ನು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

  • ಅವಧಿಗೂ ಮುನ್ನವೇ ಭರ್ತಿ- ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

    ಅವಧಿಗೂ ಮುನ್ನವೇ ಭರ್ತಿ- ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

    ಬೆಂಗಳೂರು: ನಗರದ ಹಲವೆಡೆ ಕಸದ ರಾಶಿ ಬಿದ್ದಿದೆ. ಇದು ಕಸ ವಿಲೇವಾರಿ ಮಾಡಲು ಇದ್ದ ಏಕೈಕ ಕ್ವಾರಿ ಮಿಟಗಾನಹಳ್ಳಿ ಕಸದ ಪಿಟ್ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಇದರಿಂದ ಬುಧವಾರ ನಗರದಿಂದ ಕಸ ತುಂಬಿಸಿ ಹೊರಟಿದ್ದ ಕಾಂಪ್ಯಾಕ್ಟರ್ ಗಳ ಕಸ ವಿಲೇವಾರಿಯಾಗದೆ ಕ್ವಾರಿ ಬಳಿ ಸಾಲು ಗಟ್ಟಿ ನಿಂತಿದೆ.

    ಇಂದು ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮಿಟಗಾನಹಳ್ಳಿ ಕ್ವಾರಿ ಪಕ್ಕದಲ್ಲೇ ಮತ್ತೊಂದು ಗುಂಡಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಮಧ್ಯಾಹ್ನದ ಬಳಿಕ ಆ ಕ್ವಾರಿ ಕಸ ಸುರಿಯಲು ಸಿದ್ಧವಾಗುತ್ತದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಈ ತಾತ್ಕಾಲಿಕ ಕ್ವಾರಿ ಸಹ ಮೂವತ್ತು ದಿನಕ್ಕೆ ಭರ್ತಿಯಾಗಲಿದೆ. ಈಗಾಗಲೇ ಪಾಲಿಕೆ ಕರೆದಿರುವ ಮಿಟಗಾನಹಳ್ಳಿ ಭೂಭರ್ತಿ ಕೇಂದ್ರದ ವೈಜ್ಞಾನಿಕ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದುಪಡಿಸಿದೆ. ಹೀಗಾಗಿ ಸರ್ಕಾರ ಸೂಚಿಸಿದಂತೆ ಅಗತ್ಯ ಬಿದ್ದರೆ ಮರುಟೆಂಡರ್ ಕರೆಯುವುದಾಗಿ ರಂದೀಪ್ ತಿಳಿಸಿದರು.

    ಬಿಬಿಎಂಪಿ ಕರೆದಿದ್ದ ಟೆಂಡರನ್ನು ನಗರಾಭಿವೃದ್ಧಿ ಇಲಾಖೆ ರದ್ದು ಮಾಡಿರುವ ಕಾರಣ ನಗರದಲ್ಲಿ ಕಸ ಸಮಸ್ಯೆ ಬಿಗಡಾಯಿಸಿದೆ. ಇಂದು ಅನೇಕ ಕಡೆಗಳಲ್ಲಿ ಕಸ ವಿಲೇವಾರಿಯಾಗದೆ ಹಾಗೇ ಉಳಿದಿವೆ. ಸರ್ಕಾರ ಆದಷ್ಟು ಬೇಗ ಕ್ರಮಕೈಗೊಳ್ಳದಿದ್ದರೆ ಕಸದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಾಗಿದೆ.

  • ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಅರಿವು ಮೂಡಿಸಿದ ಧಾರವಾಡ ಕಿರಾಣಿ ಮತ್ತು ಕಾಯಿಪಲ್ಲೆ ವರ್ತಕರ ಸಂಘ, ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದೆ.

    ಧಾರವಾಡ ನಗರದ ಸೂಪರ್ ಮಾರುಕಟ್ಟೆ ಯಾವತ್ತೂ ಕಸದಿಂದ ತುಂಬಿರುತ್ತೆ ಇದರ ಅರಿವನ್ನ ಮೂಡಿಸಲು ವರ್ತಕರ ಸಂಘದ ಸದಸ್ಯರು ಮಾರುಕಟ್ಟೆಗೆ ಕಾಯಿಪಲ್ಲೆ ವ್ಯಾಪಾರಿಗಳಿಗೆ ಒಂದೊಂದು ಗುಲಾಬಿ ಹೂವನ್ನ ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದ್ದಾರೆ.

    ಬೀದಿ ಬದಿ ವ್ಯಾಪಾರ ಮುಗಿದ ನಂತರ ಉಳಿದ ಕಾಯಿಪಲ್ಲೆ ಜಾಗದಲ್ಲೇ ಬಿಟ್ಟು ಹೋಗುತ್ತಿದ್ದ ವ್ಯಾಪಾರಿಗಳಿಗೆ, ಕಸ ಬುಟ್ಟಿಗೆ ಅದನ್ನ ಹಾಕಬೇಕು ಎಂದು ಅರಿವು ಮೂಡಿಸಲಾಯಿತು. ಅಷ್ಟೇ ಅಲ್ಲದೇ ಸಂಘದಿಂದ ಪ್ರತಿ ದಿನ ಇದರ ಬಗ್ಗೆ ನಿಗಾವಹಿಸಲು ಜನರನ್ನು ಕೂಡಾ ವರ್ತಕರ ಸಂಘದಿಂದಲೇ ನೇಮಿಸಲಾಗುವುದು ಎಂದು ತಿಳಿಸಿದರು.

     

  • ತ್ಯಾಜ್ಯ ವಿಲೇವಾರಿಗೆ ಸುವ್ಯವಸ್ಥಿತ ಯಂತ್ರ ಸಂಶೋಧಿಸಿದ ಮಂಗಳೂರಿನ ಈ ಪಬ್ಲಿಕ್ ಹೀರೋ

    ತ್ಯಾಜ್ಯ ವಿಲೇವಾರಿಗೆ ಸುವ್ಯವಸ್ಥಿತ ಯಂತ್ರ ಸಂಶೋಧಿಸಿದ ಮಂಗಳೂರಿನ ಈ ಪಬ್ಲಿಕ್ ಹೀರೋ

    ಮಂಗಳೂರು: ದೇಶದ ಅತೀ ದೊಡ್ಡ ಸಮಸ್ಯೆಯಾಗಿ ಕಾಡ್ತಿರೋದು ತ್ಯಾಜ್ಯವಿಲೇವಾರಿ. ಅದಕ್ಕಾಗಿಯೇ ಸ್ವಚ್ಛ ಭಾರತದಂತಹ ಅಭಿಯಾನ ನಡೀತಿದೆ. ಇದನ್ನ ಸೂಕ್ಷ್ಮವಾಗಿ ಗಮನಿಸಿರೋ ಮಂಗಳೂರಿನ ಈ ನಮ್ಮ ಪಬ್ಲಿಕ್ ಹೀರೋ ಬ್ರಿಲಿಯಂಟ್ ಐಡಿಯಾ ಮಾಡಿದ್ದಾರೆ.

    ಮಂಗಳೂರಿನ ಸುರತ್ಕಲ್ ಸಮೀಪದ ಮಂಗಳಪೇಟೆ ನಿವಾಸಿ ಸನತ್ ರಾಜ್ ಭಂಡಾರಿ ಸದ್ಯ ಮೂಡಬಿದ್ರೆಯ ಎಸ್‍ಎನ್‍ಎಂಪಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

    ಸನತ್ ತ್ಯಾಜ್ಯ ವಿಲೇವಾರಿಯ ವಿಶೇಷ ಯಂತ್ರವೊಂದನ್ನು ಕಂಡು ಹಿಡಿದಿದ್ದಾರೆ. ಈ ಯಂತ್ರದಲ್ಲಿ ಮಾಮೂಲಿ ತ್ಯಾಜ್ಯ ಹಾಗೂ ಪಾಸ್ಟಿಕ್ ತ್ಯಾಜ್ಯ ಪ್ರತ್ಯೇಕವಾಗುತ್ತದೆ. ತ್ಯಾಜ್ಯ ಸಂಗ್ರಹಿಸುವಾಗ ಧೂಳು ಹಾರದಂತೆ ನೀರು ಚಿಮುಕಿಸುವ ವ್ಯವಸ್ಥೆ, ಕಳೆ ಕೀಳಲು ಗ್ರಾಸ್‍ಕಟ್ಟರ್ ಇದೆ. ನಿಂತಲ್ಲೇ ಇದು ಹೇಗೆ ಬೇಕಾದರೂ ತಿರುಗಬಲ್ಲದಾಗಿದ್ದು, ಎಲ್ಲಾ ರೀತಿಯ ರಸ್ತೆಯಲ್ಲಿ ಸಂಚರಿಸುತ್ತದೆ.

    ಮಾನವ ರಹಿತ, ಸೋಲಾರ್ ಚಾಲಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾಡಬೇಕೆಂದು ನಿರ್ಧರಿಸಿ ಸುಮಾರು ಒಂದು ವರ್ಷದಿಂದ ಪ್ಲಾಸ್ಟಿಕ್ ಡಿಸ್ಪೋಸಲ್ ಮೆಷಿನ್ ಆಂಡ್ ಮಲ್ಟಿ ಟೂಲ್ಸ್ ಅನ್ನುವ ಹೊಸ ತ್ಯಾಜ್ಯ ವಿಲೇವಾರಿ ಯಂತ್ರದ ವಿನ್ಯಾಸವನ್ನು ಸಂಶೋಧಿಸಿದ್ದಾರೆ.

    ಇದೀಗ ಮಾದರಿಯಾಗಿದ್ದ ಪೂರ್ಣ ಪ್ರಮಾಣದ ವಾಹನ ನಿರ್ಮಾಣಕ್ಕೆ ಒಂದೂವರೆ ಲಕ್ಷ ಖರ್ಚಾಗಲಿದೆ ಅಂತ ಸನತ್ ಹೇಳ್ತಿದ್ದಾರೆ. ಅಂದಹಾಗೆ ಸನತ್ ಯೋಜನೆಗೆ ರಾಜ್ಯ ಸರ್ಕಾರ ಅಭಯಹಸ್ತ ಚಾಚಿದ್ರೆ ಸನತ್ ಕನಸು ನನಸಾಗುತ್ತೆ. ಜೊತೆಗೆ ಕಸ ವಿಲೇವಾರಿಗೆ ಸ್ವದೇಶಿ ತಂತ್ರಜ್ಞಾನವೇ ಸಿಕ್ಕಂತಾಗಲಿದೆ.

    https://www.youtube.com/watch?v=MazUOMLO1qQ