Tag: Wasim Akram

  • ಟೀಂ ಇಂಡಿಯಾ ಗೆಲ್ಲುವ ಫೇವರೆಟ್‌ – ಭಾರತ ತಂಡವನ್ನ ಹೊಗಳಿದ ಪಾಕ್‌ ಕ್ರಿಕೆಟ್‌ ಕೋಚ್‌

    ಟೀಂ ಇಂಡಿಯಾ ಗೆಲ್ಲುವ ಫೇವರೆಟ್‌ – ಭಾರತ ತಂಡವನ್ನ ಹೊಗಳಿದ ಪಾಕ್‌ ಕ್ರಿಕೆಟ್‌ ಕೋಚ್‌

    – ಭಾರತ-ಪಾಕ್‌ ಮತ್ತೆ ಟೆಸ್ಟ್‌ ಸರಣಿ ಆರಂಭಿಸಲಿ

    ಇಸ್ಲಾಮಾಬಾದ್:‌ ಭಾರತ ಮತ್ತು ಪಾಕಿಸ್ತಾನ (India – Pakistan) ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲುವ ಫೆವರೆಟ್‌ ಆಗಿದೆ. ಆದ್ರೆ ಆ ಸಂರ್ಭದಲ್ಲಿ ಯಾರು ಒತ್ತಡವನ್ನು ನಿಭಾಯಿಸಬಲ್ಲದೋ ಆ ತಂಡ ವಿಜಯಶಾಲಿಯಾಗಲಿದೆ ಎಂದು ಪಾಕಿಸ್ತಾನದ ತಂಡದ ಕ್ರಿಕೆಟ್‌ ಕೋಚ್‌ ವಾಸಿಮ್ ಅಕ್ರಮ್ (Wasim Akram) ಹೇಳಿದ್ದಾರೆ.

    ಬಹುನಿರೀಕ್ಷಿತ ಏಷ್ಯಾಕಪ್‌ (Asia Cup 2025) ಟೂರ್ನಿ ಸೆಪ್ಟೆಂಬರ್‌ 9 ರಿಂದ ಪ್ರಾರಂಭವಾಗಲಿದ್ದು, ಸೆ.10 ರಂದು ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ಹೈವೋಲ್ಟೇಜ್‌ ಪಂದ್ಯವಾದ ಇಂಡೋ ಪಾಕ್‌ ಕದನ ಸೆ.14ರಂದು ನಡೆಯಲಿದ್ದು, ಈ ಕುರಿತು ವಾಸಿಂ ಅಕ್ರಮ್‌ ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಪ್ರಸಕ್ತ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರೋಮಾಂಚನಕಾರಿಯಾಗಿ ಇರಲಿದೆ. ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ ಅನ್ನಿಸುತ್ತೆ ಎಂದಿದ್ದಾರೆ. ಇದನ್ನೂ ಓದಿ: ಕೊಹ್ಲಿಯಿಂದ ಫೋಟೋಗೆ ಲೈಕ್ ಗಿಟ್ಟಿಸಿಕೊಂಡ ಹಾಲ್ಗೆನ್ನೆ ಬ್ಯೂಟಿಯ ಫಸ್ಟ್ ರಿಯಾಕ್ಷನ್

    ಭಾರತ-ಪಾಕ್‌ ಪಂದ್ಯ ಇತರ ಎಲ್ಲಾ ಪಂದ್ಯಗಳಂತಲ್ಲ, ಅತ್ಯಂತ ರೋಮಾಂಚನಕಾರಿಯಾಗಿರುತ್ತೆ, ಹೆಚ್ಚು ಮನರಂಜನೆಯನ್ನೂ ನೀಡುತ್ತೆ. ಈ ಪಂದ್ಯದಲ್ಲಿ ಆಟಗಾರರು ಕ್ರೀಡಾ ಮನೋಭಾವ ತೋರಿಸಬೇಕು. ಜೊತೆಗೆ ಅಭಿಮಾನಿಗಳು ಶಿಸ್ತಿನಿಂದ ವರ್ತಿಸಬೇಕು ಎಂದರಲ್ಲದೇ, ಇತ್ತೀಚೆಗೆ ಭಾರತ ತಂಡ ಉತ್ತಮ ಫಾರ್ಮ್‌ನಲ್ಲಿದೆ, ಗೆಲ್ಲುವ ಫೇವರೆಟ್‌ ಕೂಡ ಆಗಿದೆ. ಆದ್ರೆ ಪಂದ್ಯದ ದಿನದಂದು ಒತ್ತಡವನ್ನು ನಿಭಾಯಿಸಿದ ತಂಡವು ಗೆಲ್ಲಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ಗೆ ಗುಡ್‌ಬೈ ಹೇಳಿದ ಅಶ್ವಿನ್‌

    Ind vs Pak 2

    ಮತ್ತೆ ಟೆಸ್ಟ್‌ ಸರಣಿ ಆಡಲಿ
    ಮುಂದುವರಿದು ಮಾತನಾಡಿದ ವಾಸಿಮ್‌, ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಎದುರಾಗುವ ಸಾಧ್ಯತೆಯಿದೆ. ಇದು ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಹಬ್ಬವಾಗಲಿದೆ. ಇದಲ್ಲದೇ ಉಭತ ತಂಡಗಳು ಮತ್ತೆ ಟೆಸ್ಟ್‌ ಸರಣಿಯನ್ನು ಪುನರಾರಂಭಿಸಲಿ ಅನ್ನೋದು ನನ್ನ ಆಶಯ.

  • ಇಂಗ್ಲೆಂಡ್‌ ವಿರುದ್ಧ ಆರ್ಭಟ – ಸಿಕ್ಸರ್‌ನಿಂದಲೇ ಪಾಕ್‌ ದಿಗ್ಗಜನ ದಾಖಲೆ ಸರಿಗಟ್ಟಿದ ಯಶಸ್ವಿ!

    ಇಂಗ್ಲೆಂಡ್‌ ವಿರುದ್ಧ ಆರ್ಭಟ – ಸಿಕ್ಸರ್‌ನಿಂದಲೇ ಪಾಕ್‌ ದಿಗ್ಗಜನ ದಾಖಲೆ ಸರಿಗಟ್ಟಿದ ಯಶಸ್ವಿ!

    ರಾಜ್‌ಕೋಟ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಕ್‌ ಟು ಬ್ಯಾಕ್‌ ಶತಕ ಸಿಡಿಸುವ ಜೊತೆಗೆ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ.

    ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ 2ನೇ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್‌ ದ್ವಿಶತಕ ಸಿಡಿಸಿದ ಜೈಸ್ವಾಲ್‌ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ 2ನೇ ಆಟಗಾರ ಹಾಗೂ ಟೀಂ ಇಂಡಿಯಾದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಆಂಗ್ಲರನ್ನು ಹುರಿದು ಮುಕ್ಕಿದ ಭಾರತ; ಟಾಪ್‌-10 ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ ಎಷ್ಟನೇ ಸ್ಥಾನ?

    ಒಂದೇ ಇನ್ನಿಂಗ್ಸ್‌ನಲ್ಲಿ ಒಟ್ಟು 12 ಸಿಕ್ಸರ್‌ ಸಿಡಿಸುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. 1996ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕ್‌ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ 12 ಸಿಕ್ಸರ್‌ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಅಲ್ಲದೇ ಈ ಹಿಂದೆ ಮಯಾಂಕ್ ಅಗರ್ವಾಲ್ ಮತ್ತು ನವಜೋತ್ ಸಿಂಗ್ ಸಿಧು ಅವರ ಹೆಸರಲ್ಲಿದ್ದ 8 ಸಿಕ್ಸರ್‌ಗಳ ಜಂಟಿ ದಾಖಲೆಯನ್ನೂ ನುಚ್ಚುನೂರು ಮಾಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!

    ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ ಮೊದಲ ಭಾರತೀಯ:
    ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ, ಇರಾನಿ ಕಪ್‌ ಟೂರ್ನಿಗಳಲ್ಲಿ ದ್ವಿಶತಕ ಸಿಡಿಸಿದ್ದ 22 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ದ್ವಿಶತಕಗಳ ಖಾತೆ ತೆರೆದಿದ್ದಾರೆ. ಅಲ್ಲದೇ ವಿನೋದ್‌ ಕಾಂಬ್ಳಿ, ವಿರಾಟ್‌ ಕೊಹ್ಲಿ ನಂತರ ಬ್ಯಾಕ್‌ ಟು ಬ್ಯಾಕ್‌ ದ್ವಿಶತಕ ಸಿಡಿಸಿದ 3ನೇ ಭಾರತೀಯ ಮತ್ತು ಇಂಗ್ಲೆಂಡ್‌ ವಿರುದ್ಧ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಯನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಜೈಸ್ವಾಲ್‌, ಜಡೇಜಾ ಶೈನ್‌; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್‌ ಗೆಲುವು – ಟೆಸ್ಟ್‌ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ

    ಸರ್ಫರಾಝ್‌ ಖಾನ್‌ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ
    ಮೊದಲ ಇನಿಂಗ್ಸ್‌ನಲ್ಲೂ ಬಿರುಸಿನ 61 ರನ್‌ ಬಾರಿಸಿ ರನ್‌ಔಟ್‌ಗೆ ತುತ್ತಾಗಿದ್ದ ಸರ್ಫರಾಝ್‌ ಖಾನ್‌ ತಮ್ಮ ಪದಾರ್ಪಣೆಯ ಟೆಸ್ಟ್‌ ಪಂದ್ಯವನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿಕೊಂಡು. 2ನೇ ಇನಿಂಗ್ಸ್‌ನಲ್ಲೂ ಹೊಡಿ-ಬಡಿ ಆಟವಾಡಿದ್ದಾರೆ. ಎದುರಿಸಿದ 72 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್‌ ಸಿಡಿಸಿ ಮಿಂಚಿದ್ದಾರೆ.

  • ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

    ಇಸ್ಲಾಮಾಬಾದ್‌: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಐಪಿಎಲ್‌ನಿಂದಾಗಿ ಪ್ರೇರಿತಗೊಂಡ ವಿದೇಶಿ ಕ್ರಿಕೆಟ್‌ ಮಂಡಳಿಗಳು ತಮ್ಮ ದೇಶಗಳಲ್ಲೂ ಟಿ20 ಲೀಗ್‌ಗಳನ್ನ ಆಯೋಜಿಸಲು ಪ್ರಾರಂಭಿಸಿವೆ. ಆದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌ (Wasim Akram) ತನ್ನ ದೇಶದ ಸೂಪರ್‌ ಲೀಗ್‌ಗಿಂತಲೂ ಭಾರತದ ಐಪಿಎಲ್‌ ದೊಡ್ಡದು ಎಂದು ಬಣ್ಣಿಸಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್‌, ಪಾಕಿಸ್ತಾನದ ಸೂಪರ್‌ ಲೀಗ್‌ (Pakistan Super League) ಗಿಂತ ಐಪಿಎಲ್‌ ದೊಡ್ಡದು. ನಾನು ಐಪಿಎಲ್‌ ಹಾಗೂ ಪಿಎಸ್‌ಎಲ್‌ನಲ್ಲಿ ಕೆಲಸ ಮಾಡಿದ್ದೇನೆ. ಎರಡನ್ನ ಹೋಲಿಸೋದಕ್ಕೇ ಸಾಧ್ಯವಿಲ್ಲ, ಏಕೆಂದರೆ ಐಪಿಎಲ್‌ ತುಂಬಾ ದೊಡ್ಡ ಕ್ರೀಡೆ. ಆದ್ರೆ ಪಾಕಿಸ್ತಾನದ ಸೂಪರ್‌ ಲೀಗ್‌ ಅನ್ನು ಮಿನಿ ಐಪಿಎಲ್‌ ಎಂದು ಕರೆಯಬಹುದು, ಪಾಕ್‌ಗೆ ಅದೇ ದೊಡ್ಡದು ಎಂದಿದ್ದಾರೆ.

    ವಿಶ್ವದ ದುಬಾರಿ ಕ್ರೀಡೆ:
    2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಿದ್ದಾರೆ. ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಗಳಿಗೆ ಸೇರಲು ಇದು ಉತ್ತಮ ವೇದಿಕೆಯೂ ಆಗಿದೆ.

    IPL

    ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌:
    ಪ್ರತಿಷ್ಠಿತ ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್‌ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 2024ರ ಐಪಿಎಲ್‌ ಟೂರ್ನಿಗೂ ಸಾಕಷ್ಟು ಹಣ ಹೂಡಿಕೆ ಮಾಡಿರುವುದಾಗಿ ಪ್ರಮುಖ ಮೂಲಗಳು ತಿಳಿಸಿವೆ.

    2024ರ ಐಪಿಎಲ್‌ಗೆ ಭಾರೀ ಸಿದ್ಧತೆ:
    2024ರ ಐಪಿಎಲ್‌ ಟೂರ್ನಿಯೂ ಮಾರ್ಚ್‌ ತಿಂಗಳಿನಿಂದ, ಮೇ ಅಂತ್ಯದ ವರೆಗೆ ನಡೆಯುವ ಸಾಧ್ಯತೆಗಳಿವೆ. 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ನೋಡಿಕೊಂಡು ಐಪಿಎಲ್‌ ಟೂರ್ನಿಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ. ಇನ್ನೂ 2024ರ ಐಪಿಎಲ್‌ಗೆ ಆಸೀಸ್‌ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿದ್ದಾರೆ. ಮತ್ತೊಬ್ಬ ಆಸೀಸ್‌ ಆಲ್‌ರೌಂಡರ್‌ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಾಗಿದ್ದು, ಐಪಿಎಲ್‌ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

  • ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ: ವಾಸಿಂ ಅಕ್ರಂ

    ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ: ವಾಸಿಂ ಅಕ್ರಂ

    ಇಸ್ಲಾಮಾಬಾದ್‌: ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ನಡೆಯಲಿರುವ ಏಕದಿನ ವಿಶ್ವಕಪ್‌ (ICC ODI World Cup) ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕಿಸ್ತಾನ (Pakistan) ಕ್ರಿಕೆಟ್‌ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಪಾಕ್‌ ತಂಡದ ಪರ ಬ್ಯಾಟಿಂಗ್‌ ಮಾಡಿರುವ ಮಾಜಿ ನಾಯಕ ವಾಸಿಂ ಅಕ್ರಂ, ಪಾಕಿಸ್ತಾನ 2ನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 1992ರಲ್ಲಿ ಇಮ್ರಾನ್‌ ಖಾನ್‌ (Imran Khan) ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಮೊದಲಬಾರಿಗೆ ವಿಶ್ವಕಪ್‌ ಕಿರೀಟ ಧರಿಸಿತ್ತು.

    ಈ ಕುರಿತು ಮಾತನಾಡಿರುವ ಅವರು, ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ ನಾವು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ನಾವು ಉತ್ತಮ ತಂಡ ಹೊಂದಿದ್ದೇವೆ. ಆಧುನಿಕ ಕ್ರಿಕೆಟ್‌ ಯುಗದಲ್ಲಿ ಬಾಬರ್‌ ಆಜಂ (Babar Azam) ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್‌ ಅವರು ಪಾಕ್‌ ತಂಡವನ್ನ ಮುನ್ನಡೆಸುತ್ತಿದ್ದಾರೆ. ಭಾರತದಲ್ಲಿ ಎಲ್ಲ ರೀತಿಯ ಪರಿಸ್ಥಿತಿಗಳಲ್ಲೂ ಅವರು ಆಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ Vs ಐರ್ಲೆಂಡ್‌ T20 ಸರಣಿಗೆ ವೇಳಾಪಟ್ಟಿ ಪ್ರಕಟ – ಇಲ್ಲಿದೆ ಡಿಟೇಲ್ಸ್‌

    2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ 9 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಸೆಮಿಸ್‌ಗೆ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಆ ನಂತರದಲ್ಲೂ ಬಾಬರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಇಂತಹ ಸ್ಫೂರ್ತಿದಾಯಕ ನಾಯಕ ವಿಶ್ವಕಪ್‌ನಲ್ಲಿ ಇನ್ನಷ್ಟು ಬ್ಯಾಟಿಂಗ್‌ ಫಾರ್ಮ್‌ಗೆ ಮರಳುವುದರಲ್ಲಿ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೇ, ಬಾಬರ್‌ ನಮ್ಮ ತಂಡದಲ್ಲಿರುವ ಅತ್ಯುತ್ತಮ ಆಟಗಾರ. ಇಡೀ ದೇಶ ಅವರನ್ನ ಅನುಸರಿಸುತ್ತದೆ. ಅವರು ತಮ್ಮ ತಂಡವನ್ನು ಕ್ರೀಡಾಂಗಣಕ್ಕೆ ಕರೆದೊಯ್ಯುತ್ತಾರೆ. ಅದು ಟಿ20, ಏಕದಿನ, ಟೆಸ್ಟ್‌ ಕ್ರಿಕೆಟ್‌ ಯಾವುದೇ ಆಗಿರಲಿ ಅವರು ಯಶಸ್ವಿಯಾಗಿ ತಂಡವನ್ನ ಮುನ್ನಡೆಸುತ್ತಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ಈ ನಡುವೆ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ಭಾಗವಹಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪಾಕಿಸ್ತಾನಕ್ಕೆ ನೆನಪಿಸಿದೆ.

    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಧೋನಿ ಕ್ಯಾಪ್ಟನ್‌ ಆಗಿದ್ದಿದ್ದರೆ RCB ಮೂರು ಬಾರಿ ಕಪ್‌ ಗೆಲ್ಲುತ್ತಿತ್ತು ಎಂದ ಪಾಕ್‌ ಮಾಜಿ ಕ್ರಿಕೆಟಿಗ

    ಮುಂಬೈ: ಎಂ.ಎಸ್‌ ಧೋನಿ (MS Dhoni) ಆರ್‌ಸಿಬಿ (RCB) ಕ್ಯಾಪ್ಟನ್‌ ಆಗಿದ್ದಿದ್ದರೆ ಆರ್‌ಸಿಬಿ ತಂಡ ಮೂರು ಬಾರಿ ಐಪಿಎಲ್‌ ಕಪ್‌ (Indian Premier League Title) ಗೆಲ್ಲುತ್ತಿತ್ತು ಎಂದು ಪಾಕಿಸ್ತಾನ (Pakistan) ಕ್ರಿಕೆಟ್‌ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್‌ ಅಭಿಪ್ರಾಯಪಟ್ಟಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್‌ ಆರಂಭಗೊಂಡಾಗಿನಿಂದಲೂ ಆರ್‌ಸಿಬಿ ಈವರೆಗೆ ಒಮ್ಮೆಯೂ ಕಪ್‌ ಗೆದ್ದಿಲ್ಲ. 2009ರಲ್ಲಿ ಡೆಕ್ಕನ್‌ ಚಾರ್ಜಸ್‌, 2011ರಲ್ಲಿ ಚೆನ್ನೈಸೂಪರ್‌ ಕಿಂಗ್ಸ್‌ (CSK) ಹಾಗೂ 2016ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತು ಕಪ್‌ ಗೆಲ್ಲುವ ಅವಕಾಶ ಕಳೆದುಕೊಂಡಿತು. ಆದ್ರೆ ಧೋನಿ ಆರ್‌ಸಿಬಿ ನಾಯಕನಾಗಿ ಇರುತ್ತಿದ್ದರೆ ಮೂರು ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುತ್ತಿತ್ತು ಎಂದು ವಾಸಿಂ ಅಕ್ರಮ್‌ (Wasim Akram) ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

    ಆರ್‌ಸಿಬಿ ತಂಡಕ್ಕೆ ಅಷ್ಟೊಂದು ಸಪೋರ್ಟ್‌ ಇದೆ. ವಿಶ್ವದ ಅಗ್ರ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಟೀಂ ನಲ್ಲಿ ಇದ್ದಾರೆ. ಆದರೂ ಈವರೆಗೆ ಕಪ್‌ ಗೆಲ್ಲೂಕೆ ಸಾಧ್ಯವಾಗಿಲ್ಲದೇ ಇರೋದು ದುರದೃಷ್ಟಕರ ಎಂದಿದ್ದಾರೆ. ಇದನ್ನೂ ಓದಿ: IPL 2023: RCB ನನ್ನ ಹೆಮ್ಮೆಯ ತಂಡ – ಇಂದಲ್ಲ ನಾಳೆ ಕಪ್‌ ನಮ್ದೆ ಎಂದ ಸಿದ್ದರಾಮಯ್ಯ

    ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಮುಂಬೈ, ಪಂಬಾಜ್‌ ಕಿಂಗ್ಸ್‌ ಸಹ 10 ಅಂಕಗಳೊಂದಿಗೆ ಕ್ರಮವಾಗಿ 6, 7ನೇ ಸ್ಥಾನದಲ್ಲಿದೆ. ಆದ್ರೆ ಬ್ಯಾಟಿಂಗ್‌ ಪಡೆಯ ಸಮಸ್ಯೆ ಎದುರಿಸುತ್ತಿರುವ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸಲು ಕನಿಷ್ಠ 4ರಲ್ಲಿ 3 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ. ಈಗಾಗಲೇ 11ರಲ್ಲಿ 8 ಪಂದ್ಯ ಗೆದ್ದಿರುವ ಗುಜರಾತ್‌ ಟೈಟಾನ್ಸ್‌ ಬಹುತೇಕ ಪ್ಲೆ ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಸಿಎಸ್‌ಕೆ 6ರಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ.

  • ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಮೆಲ್ಬರ್ನ್: ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್ ಕದನದಲ್ಲಿ ಭಾರತ (India) ಹೀನಾಯವಾಗಿ ಸೋತು ಎರಡು ದಿನ ಕಳೆದರೂ ಅಭಿಮಾನಿಗಳಿಗೆ ಮಾತ್ರ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ.

    ಟೀಂ ಇಂಡಿಯಾ (Team India) ಎದುರಾಳಿಗಳಿಗಳು ಭಾರತದ ಸೋಲನ್ನು ಸಂಭ್ರಮಿಸುತ್ತಿದ್ದರೆ, ತಜ್ಞರು ಇದಕ್ಕೆ ಕಾರಣಗಳನ್ನು ಹುಡುಕಿದ್ದಾರೆ. ಈ ನಡುವೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಗರು (Cricketer) ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಅದರಲ್ಲಿ ಐಪಿಎಲ್ (IPL) ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ

    ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಶೋಯೆಬ್ ಮಲಿಕ್ (Shoaib Malik), ವಕಾರ್ ಯೂನಿಸ್ ಮೊದಲಾದವರು ಟೀಂ ಇಂಡಿಯಾ ಸೆಮಿಫೈನಲ್ ಸೋಲಿಗೆ ಕಾರಣಗಳನ್ನ ವಿಶ್ಲೇಷಣೆ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲೇ ಟೀಂ ಇಂಡಿಯಾ ಕೊನೆಯದಾಗಿ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಮರು ವರ್ಷದಲ್ಲಿ ಅಂದರೆ 2008 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಯಿತು. ಅಂದಿನಿಂದಲೂ ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. 2011ರಲ್ಲಿ ಮಾತ್ರ ಏಕದಿನ ವಿಶ್ವಕಪ್ ಗೆದ್ದಿತು. ಆಗ ಎಂ.ಎಸ್‌.ಧೋನಿ (MS Dhoni) ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿದ್ದರು ಎಂದು ಹೇಳಿದ್ದಾರೆ.

    ಭಾರತ ಮತ್ತು ಇತರ ತಂಡಗಳ ನಡುವೆ ದೊಡ್ಡ ವ್ಯತ್ಯಾಸವೆಂದರೆ ಅದು ಐಪಿಎಲ್ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಐಪಿಎಲ್ ಆರಂಭವಾದ ನಂತರ ಟಿಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಇದೇ ಸಂದರ್ಭದಲ್ಲಿ ಐಪಿಎಲ್ ಜೊತೆಗೆ ಹೆಚ್ಚುವರಿ ಫ್ಯಾಂಚೈಸಿ ಲೀಗ್ ಆಡುವುದು ಭಾರತಕ್ಕೆ ಸಹಾಯ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶೋಯೆಬ್ ಮಲ್ಲಿಕ್, ಖಂಡಿತಾ ಹೌದು. ಯುವ ಆಟಗಾರರಿಗೆ ಮಾನ್ಯತೆ ಪಡೆಯಲು ಐಪಿಎಲ್ ಒಂದು ದೊಡ್ಡ ವೇದಿಕೆ. ಈ ಲೀಗ್‌ಗಳು ಆಟಗಾರರಿಗೆ ಪರಿಸ್ಥಿತಿಗಳನ್ನು ಹೆಚ್ಚು ನಿಖರವಾಗಿ ನಿರ್ಣಯಿಸಲು ಸಹಾಯ ಮಾಡುತ್ತವೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ವ್ಯತ್ಯಾಗಳ ಬಗ್ಗೆ ತಿಳಿಸುತ್ತದೆ. ಹೆಚ್ಚುವರಿ ಜವಾಬ್ದಾರಿಗಳು, ನಿಮ್ಮ ಪ್ರದರ್ಶನ ಹೇಗಿರಬೇಕು ಅನ್ನೋ ಮಾರ್ಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಿಶ್ವವಿಖ್ಯಾತಿ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಾರೆ. ಈ ಎಲ್ಲ ಪಾಠಗಳು ಐಪಿಎಲ್ ಕಲಿಸುತ್ತದೆ ಎಂದು ಮಲಿಕ್ ಸಲಹೆ ನೀಡಿದ್ದಾರೆ.

    2008ರಲ್ಲಿ ಐಪಿಎಲ್ ಆರಂಭವಾಯಿತು. ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಬಹುಪಾಲು ತಂಡಗಳಿಗೆ ಟೀಂ ಇಂಡಿಯಾ ಆಟಗಾರರೇ ನಾಯಕರಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ

    ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ

    ಇಸ್ಲಾಮಾಬಾದ್: ವಿಶ್ವದ ಬಹುತೇಕ ಕ್ರಿಕೆಟ್ ತಂಡಗಳು ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದರೆ ಪಾಕಿಸ್ತಾನ ಆಟಗಾರರು ಮಾತ್ರ ಬಿರಿಯಾನಿ ಸವಿಯುತ್ತಾ ಕುಳಿತಿರುವ ಬಗ್ಗೆ ಮಾಜಿ ಬೌಲರ್ ವಾಸೀಂ ಅಕ್ರಂ ಕ್ರಿಕೆಟಿಗರ ವಿರುದ್ಧ ಗರಂ ಆಗಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಟಗಾರರ ಫಿಟ್ನೆಸ್ ಬಹು ಮುಖ್ಯವಾಗಿದ್ದು, ಇಂದಿಗೂ ಕೂಡ ಪಾಕ್ ತನ್ನ ಆಟಗಾರರಿಗೆ ಊಟದಲ್ಲಿ ಬಿರಿಯಾನಿ ನೀಡುತ್ತಿದೆ. ಬಿರಿಯಾನಿ ತಿನ್ನುತ್ತಾ ಕುಳಿತುಕೊಂಡರೆ ಚಾಂಪಿಯನ್ ತಂಡಗಳ ವಿರುದ್ಧ ಗೆಲುವು ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.

    ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಫಿಟ್ನೆಸ್ ಕುರಿತು ಹಲವು ಆಟಗಾರರು ವಿಮರ್ಶೆ ಮಾಡಿ ಕಿಡಿಕಾರಿದ್ದರು. ಈಗ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಪಾಕ್ ಕ್ರಿಕೆಟ್ ತಂಡ ಕುರಿತು ಅಕ್ರಂ ಕಿಡಿಕಾರಿದ್ದಾರೆ.

    ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ತರಬೇತಿಗೆ ಕ್ಯಾಂಪ್ ನಡೆಸಿದ್ದು, 23 ಆಟಗಾರರಿಗೆ ತರಬೇತಿ ನೀಡುತ್ತಿದೆ. ಆದರೆ ಇದೇ ವೇಳೆ ಅವರಿಗೆ ಪೂರೈಕೆ ಮಾಡುತ್ತಿದ್ದ ಊಟ ಮೆನುವಿನಲ್ಲಿ ಬಿರಿಯಾನಿ ನೀಡಿದೆ. ಉಳಿದಂತೆ ಏಪ್ರಿಲ್ 18 ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಶ್ವಕಪ್ ಗೆ ತಂಡವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

    https://twitter.com/Saj_PakPassion/status/1114932167493259264

  • ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಅಕ್ರಂ ಲೈಂಗಿಕ ಜೀವನದ ಬಗ್ಗೆ ಪುಸ್ತಕ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ!

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೇಹಮ್ ಖಾನ್ ಅವರಿಗೆ ಮಾಜಿ ನಾಯಕ ವಾಸೀಂ ಅಕ್ರಂ ನೋಟಿಸ್ ಜಾರಿ ಮಾಡಿದ್ದಾರೆ.

    ರೇಹಮ್ ಖಾನ್ ತಮ್ಮ ಮುಂಬರುವ ಪುಸ್ತಕದಲ್ಲಿ ಹಲವು ಪಾಕಿಸ್ತಾನಿ ಪ್ರಮುಖರ ಲೈಂಗಿಕ ಜೀವನ ಕುರಿತಂತೆ ವಿವಾದಾತ್ಮಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ರೇಹಮ್ ಖಾನ್ ಪುಸ್ತಕದ ಕೆಲ ಪುಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪುಟಗಳಲ್ಲಿ ವಾಸೀಂ ಅಕ್ರಂರ ಮಾಜಿ ಮೊದಲ ಪತ್ನಿಯ ಕುರಿತು ವಿವಾದತ್ಮಾಕ ಮಾಹಿತಿ ನೀಡಿದ್ದಾರೆ.

    ವೈರಲ್ ಆಗಿರುವ ಪುಸ್ತಕದ 402 ಹಾಗೂ 572 ಪುಟಗಳು ವಿವಾದಕ್ಕೆ ಕಾರಣವಾಗಿದ್ದು, ಇದರಲ್ಲಿ ವಾಸೀಂ ಅಕ್ರಂ ತಮ್ಮ ಪತ್ನಿಯನ್ನು ಕಾಮ ತೃಷೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಪತ್ನಿಯೊಂದಿಗೆ ಸ್ವತಃ ತನ್ನ ಕಣ್ಣೆದುರೇ ಲೈಂಗಿಕ ಸಂಬಂಧ ಹೊಂದಲು ಕಪ್ಪು ವರ್ಣಿಯನನ್ನು ನೇಮಿಸಿದ್ದ ಎಂದು ನಮೂದಿಸಿದ್ದಾರೆ. ಅಲ್ಲದೇ ಆಕ್ರಂ ಹಲವು ಗಣ್ಯರ ಜೊತೆ ಅಕ್ರಮ ಲೈಂಗಿಕ ಸಂಕರ್ಪ ಹೊಂದಿದ್ದ ಎಂದು ಉಲ್ಲೇಖಿಸಿದ್ದಾರೆ.

    ಸದ್ಯ ಈ ಕುರಿತು ವಸೀಂ ಅಕ್ರಂ ವೆಸ್ಟ್ ಲಂಡನ್ ನ್ಯಾಯಾಲಯದಿಂದ ರೇಹಮ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇದೇ ಪುಸ್ತದಲ್ಲಿ ಮೂವರು ನಾಯಕರ ಖಾಸಗಿ ಲೈಂಗಿಕ ಜೀವನದ ಕುರಿತು ಉಲ್ಲೇಖಿಸಿದ್ದು, ಅವರು ಸಹ ನೋಟಿಸ್ ನೀಡಿದ್ದಾರೆ.

    ಸದ್ಯ ಜಾರಿಗೆ ಆಗಿರುವ ನೋಟಿಸ್ ನಲ್ಲಿ ವಾಸೀಂ ಅಕ್ರಂ ಒಬ್ಬ ಅಂತರಾಷ್ಟ್ರೀಯ ಕ್ರೀಡಾಪಟು. ಶ್ರೇಷ್ಠ ಕ್ರಿಕೆಟರ್ ಗಳಿಂದ ಗುರುತಿಸಲ್ಪಡುವ ವ್ಯಕ್ತಿ. ಒಬ್ಬ ಸಾಮಾಜಿಕ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಈ ರೀತಿಯ ಆಧಾರ ರಹಿತ ಆರೋಪ ಮಾಡಲಾಗಿದೆ. ಅಲ್ಲದೇ ಮೃತ ವಾಸೀಂ ಅವರ ಪತ್ನಿ ಗೌರವ ಮೇಲೆ ಪರಿಣಾಮ ಬೀರಲಿದೆ ಎಂದು ಉಲ್ಲೇಖಿಸಲಾಗಿದೆ.

    ಸದ್ಯ ರೇಹಮ್ ರ ಈ ಹೇಳಿಕೆ ಪಾಕಿಸ್ಥಾನದ ರಾಜಕೀಯದಲ್ಲೂ ಸಾಕಷ್ಟು ತಲ್ಲಣ ಮೂಡಿಸಿದ್ದು, ಪುಸ್ತಕದ ಭಾಗಗಳು ಈಗ ಅಂತರ್ಜಾಲದಲ್ಲಿ ಲೀಕ್ ಆಗಿದ್ದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ

    ಲೇಖಕಿ ರೇಹಮ್ ಖಾನ್ ಇಮ್ರಾನ್ ಖಾನ್ ಮಾಜಿ ಪತ್ನಿಯಾಗಿದ್ದು, ಜನವರಿ 2015 ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ 15 ದಿನಗಳಲ್ಲಿ ಅಂದರೆ 2015 ಅಕ್ಟೋಬರ್ ನಲ್ಲಿ ಇವರ ಇಬ್ಬರ ನಡುವಿನ ದಾಂಪತ್ಯ ಜೀವನ ಮುರಿದು ಬಿದ್ದಿತ್ತು. ಇನ್ನು ವಾಸೀಂ ಬುಶ್ರಾ ಮನೇಕಾ ಅವರೊಂದಗೆ ಎರಡನೇ ಮದುವೆಯಾಗಿದ್ದರು. ಇದಕ್ಕೂ ಮೊದಲು 1995 ರಲ್ಲಿ ಜೆಮಿಮಾ ಗೋಲ್ಡ್ ಸ್ಮಿತ್ ಅವರೊಂದಿಗೆ ವಿವಾಹವಾಗಿ 9 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು.