Tag: Washington

  • ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಕನ್ನಡತಿ – ಸ್ವಾತಿ ಹಣೆಯಲ್ಲಿದ್ದ ಬಿಂದಿಗೆ ನೆಟ್ಟಿಗರು ಫಿದಾ

    ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಕನ್ನಡತಿ – ಸ್ವಾತಿ ಹಣೆಯಲ್ಲಿದ್ದ ಬಿಂದಿಗೆ ನೆಟ್ಟಿಗರು ಫಿದಾ

    ವಾಷಿಂಗ್ಟನ್: ನಾಸಾದ ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಮಹಿಳೆ ಭಾರತೀಯ ಮೂಲದವರಾಗಿದ್ದಾರೆ. ಇದೀಗ ಇವರು ಹಣೆಗೆ ಬಿಂದಿ ಇಟ್ಟಿರುವ ದೇಸಿ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಕಂಟ್ರೋಲ್ ರೂಂನಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಸ್ವಾತಿ ಕಪ್ಪು ಬಣ್ಣದ ಬಿಂದಿ ಧರಿಸಿದ್ದರು. ಇದು ಅನೇಕ ಭಾರತೀಯರ ಖುಷಿಗೆ ಕಾರಣವಾಗಿದೆ. ಅಮೆರಿಕದಲ್ಲೇ ಇರಲಿ, ಎಷ್ಟೇ ದೊಡ್ಡ ವಿಜ್ಞಾನಿಯೇ ಆಗಿರಲಿ ಸ್ವಾತಿ ತಾನು ಭಾರತಿಯೇ, ಭಾರತದ ಸಂಸ್ಕøತಿ ಹೊಂದಿದವಳು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಗಣ್ಯರು ಕೂಡ ಮುಖದ ಮೇಲಿನ ತೇಜಸ್ಸಿನ ಬಿಂದಿಗೆ ಶಹಬ್ಬಾಸ್ ಎಂದಿದ್ದಾರೆ. ನಾಸಾ ಶೇರ್ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನಾಸಾ ಕಳುಹಿಸಿದ ಪರ್ಸೀವರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ಈ ರೋವರ್ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವಾ ಎಂಬ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಲಿದೆ. ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಸ್ವಾತಿ ಮೋಹನ್ ಬೆಂಗಳೂರು ಮೂಲದವರಾಗಿದ್ದಾರೆ. ಡಾ. ಸ್ವಾತಿ ಮೋಹನ್ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ನಾಸಾದಲ್ಲಿ ‘ಜಿಎನ್ ಅಂಡ್ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು.

    ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕ, ಭಾರತದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರೋವರ್ ಯಶಸ್ಸಿನಿಂದ ಫುಲ್ ಖುಷ್ ಆಗಿರುವ ನಾಸಾ, ಕಂಟ್ರೋಲ್ ರೂಂನಲ್ಲಿದ್ದ ಸಿಬ್ಬಂದಿ ಪ್ರತಿಕ್ರಿಯೆಯ ವೀಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಇವುಗಳಲ್ಲಿ ಸ್ವಾತಿ ಮೋಹನ್ ಹಣೆ ಮೇಲೆ ಇಟ್ಟಿದ್ದ ಬಿಂದಿ ಹೈಲೈಟ್ ಆಗಿದೆ.

  • ಆಸ್ಪತ್ರೆ ಸಿಬ್ಬಂದಿಯ 80 ಕಾರ್ ಸ್ಚಚ್ಛಗೊಳಿಸಿದ 10ರ ಪೋರ

    ಆಸ್ಪತ್ರೆ ಸಿಬ್ಬಂದಿಯ 80 ಕಾರ್ ಸ್ಚಚ್ಛಗೊಳಿಸಿದ 10ರ ಪೋರ

    ವಾಷಿಂಗ್ಟನ್: 10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತರೊಬ್ಬರು ಆಸ್ಪತ್ರೆ ಸಿಬ್ಬಂದಿಯ 80 ಕಾರುಗಳ ಮೇಲೆ ಬಿದ್ದಿದ್ದ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶವಿತ್ತು. ಆದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಯಾವುದೇ ರೀತಿಯ ವರ್ಕ್ ಫ್ರಮ್ ಹೋಮ್ ಇರಲಿಲ್ಲ. ಹಾಗಾಗಿ ಅವರಿಗಾಗಿ ಏನಾದರೂ ಮಾಡಬೇಕೆಂದು ತೀರ್ಮಾನಿಸಿದ್ದರು.

    ಫೆಬ್ರವರಿ 1 ರಂದು ಕ್ರಿಶ್ಚಿಯನ್ ಸ್ಟೋನ್(10) ಮತ್ತು ಅಬ್ಬೆ ಮೀಕರ್(29) ಎಂಬವರು ವೆಸ್ಟರ್ಲಿ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶಕ್ಕೆ ತಲುಪಿ ಆಸ್ಪತ್ರೆ ಸಿಬ್ಬಂದಿ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸಿದ್ದಾರೆ.

    ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ತಮಗಾಗಿ ನಿರಂತರವಾಗಿ ಕೆಲಸ ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳಿಗೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಭಾವಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಕಾರನ್ನು ಸ್ಟಾರ್ಟ್ ಮಾಡಲು ಬಂದಾಗ ಕಾರುಗಳನ್ನು ಸ್ವಚ್ಛಗೊಳಿಸುವ ಮೂಲಕ ಸಹಾಯ ಮಾಡಿದ್ದಾರೆ.

    ಪ್ರತಿ ದಿನ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ಸಾಂಕ್ರಾಮಿಕ ರೋಗದ ಜೊತೆ ಹೋರಾಡಿ ಮನೆಗೆ ಹಿಂದಿರುಗಲು ಹಿಮದಿಂದ ಕಷ್ಟ ಪಡುತ್ತಾರೆ. ಹಾಗಾಗಿ ಅವರ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ನಾವು ಅವರಿಗೆ ಮನೆಗೆ ಹೋಗಲು ಸುಲಭವಾಗುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಶಿಫ್ಟ್ ಮುಗಿಸಿಕೊಂಡು ಕಾರಿನ ಬಳಿ ಬಂದು ನೋಡಿದ ಅನೇಕ ಆರೋಗ್ಯ ಸಿಬ್ಬಂದಿ ಕಾರು ಸ್ವಚ್ಛಗೊಂಡಿರುವುದನ್ನು ಕಂಡು ಆಶ್ಚರ್ಯಗೊಂಡರು. ನಮ್ಮ ಈ ಪ್ರಯತ್ನಕ್ಕೆ ಆಸ್ಪತ್ರೆ ಸಿಬ್ಬಂದಿ ಧನ್ಯವಾದ ತಿಳಿಸಿದರು ಎಂದು ಸ್ಟೋನ್, ಮೇಕರ್ ಹೇಳಿದ್ದಾರೆ.

  • 175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ  ರ‍್ಯಾಪರ್

    175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ ರ‍್ಯಾಪರ್

    ವಾಷಿಂಗ್ಟನ್: 175 ಕೋಟಿ ರೂಪಾಯಿ ಬೆಲೆಬಾಳುವ ವಜ್ರವನ್ನು ಅಮೆರಿಕ  ರ‍್ಯಾಪರ್ ಹಣೆಯಲ್ಲಿ ಫಿಕ್ಸ್ ಮಾಡಿಸಿಕೊಂಡಿದ್ದಾನೆ

    ಅಮೆರಿಕಾದ ಪ್ರಸಿದ್ಧ  ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಈ ರೀತಿಯ ವಿಚಿತ್ರ ಕೆಲಸವನ್ನು ಮಾಡಿದ್ದಾನೆ. ಮಹಿಳೆಯರು ಸಿಂಧೂರವನ್ನು ಹಾಕುವಂತೆ ಈತ ತನ್ನ ಹಣೆಯಲ್ಲಿ 175 ಕೋಟಿ ಬೆಲೆಬಾಳುವ ವಜ್ರವನ್ನು ಫಿಕ್ಸ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ.

    ಹಣೆಯ ಮೇಲೆ ವಜ್ರವನ್ನು ಜೋಡಿಸಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆ. ಇದಕ್ಕಾಗಿ ಮೂರು ವರ್ಷಗಳಿಂದ ಹಣವನ್ನು ಕೂಡಿಟ್ಟಿದ್ದೆ. ಒಂದು ವಜ್ರಕ್ಕೆ ಇಷ್ಟೊಂದು ಬೆಲೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ದುಬಾರಿಯಾದ ಕಾರುಗಳಿಗೆ ಇಷ್ಟೊಂದು ಬೆಲೆ ತೆತ್ತಿರಲಿಲ್ಲ. ಇದೇ ಕೊನೆ ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂದು ಸ್ವತಃ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಹೇಳಿದ್ದಾನೆ.

    ಹಣೆ ಮತ್ತು ಕೈಯಲ್ಲಿ ವಜ್ರದ ಆಭರಣಗಳನ್ನು ತೊಟ್ಟಿರುವ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿದೆ.

  • ರೋಗ ವಾಸಿಯಾಗಲಿಲ್ಲವೆಂದು  ಡಾಕ್ಟರ್‌ಗೆ  ಗುಂಡು ಹಾರಿಸಿದ ಕ್ಯಾನ್ಸರ್ ಪೀಡಿತ ವೈದ್ಯೆ!

    ರೋಗ ವಾಸಿಯಾಗಲಿಲ್ಲವೆಂದು ಡಾಕ್ಟರ್‌ಗೆ ಗುಂಡು ಹಾರಿಸಿದ ಕ್ಯಾನ್ಸರ್ ಪೀಡಿತ ವೈದ್ಯೆ!

    ವಾಷಿಂಗ್ಟನ್: ಕ್ಯಾನ್ಸರ್ ರೋಗಿಯೊಬ್ಬರು ನನಗೆ ಈ ಖಾಯಿಲೆ ವಾಸಿಯಾಗುವುದಿಲ್ಲ ಎಂದು ಮನನೊಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಗುಂಡು ಹಾರಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಮೃತ ಡಾಕ್ಟರ್‍ನನ್ನು ಭರತ್ ನರುಮಂಚಿ ಎಂದು ಗುರುತಿಸಲಾಗಿದೆ. ಕ್ಯಾನ್ಸರ್ ರೋಗಿ ಕೂಡ ಒಬ್ಬ ಶಿಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ತನಗೆ ರೋಗ ವಾಸಿಯಾಗುವುದಿಲ್ಲ ಎಂದು ಮನನೊಂದು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.

    ಭಾರತ ಮೂಲದ 43 ವರ್ಷದ ವೈದ್ಯೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಕೆಲವೇ ದಿನಗಳ ಕಾಲ ಮಾತ್ರ ಬದುಕಲಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ. ಈ ವಿಚಾರ ವೈದ್ಯೆಯ ಗಮನಕ್ಕೆ ಬಂದಿದ್ದು, ಖಿನ್ನತೆಗೆ ಜಾರಿದ್ದರು. ನನ್ನ ಕ್ಯಾನ್ಸರ್ ರೋಗ ವಾಸಿಯಾಗುವುದಿಲ್ಲ, ನಾನು ಸಾಯುತ್ತೇನೆ ಎಂದು ವೈದ್ಯರ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಕ್ಯಾನ್ಸರ್ ಪೀಡಿತ ಪುತ್ರಿಗೆ ಧೈರ್ಯ ತುಂಬಲು ಕೇಶ ಮುಂಡನ ಮಾಡಿಕೊಂಡ ತಾಯಿ

    ಕ್ಯಾನ್ಸರ್ ಪೀಡಿತ ಪುತ್ರಿಗೆ ಧೈರ್ಯ ತುಂಬಲು ಕೇಶ ಮುಂಡನ ಮಾಡಿಕೊಂಡ ತಾಯಿ

    ವಾಷಿಂಗ್ಟನ್: ಕ್ಯಾನ್ಸರ್ ಪೀಡಿತ ಪುತ್ರಿಗೆ ಧೈರ್ಯ ತುಂಬಲು ತಾಯಿ ತಾನೂ ಕೇಶ ಮುಂಡನ ಮಾಡಿಕೊಂಡಿರುವ ಭಾವನಾತ್ಮಕವಾದ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಜಗತ್ತಿನಲ್ಲಿ ಅಮ್ಮನ ಪ್ರೀತಿಗೆ ಬೇರೆ ಯಾವ ಯಾವ ಪ್ರೀತಿಯೂ ಸಮಾನವಾಗಲೂ ಸಾಧ್ಯವಿಲ್ಲ. ತಾಯಿಯ ವಾತ್ಸಲ್ಯ ಮತ್ತು ಮತ್ತು ಮಮತೆಗೆ ಸಾಕ್ಷಿಯಾಗಿದೆ ಎಂದು ಈ ವೀಡಿಯೋ ನೋಡಿದವರು ಹೇಳುತ್ತಿದ್ದಾರೆ. ಅಲ್ಲದೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ವೀಡಿಯೋದಲ್ಲಿ ಏನಿದೆ?
    ಕ್ಯಾನ್ಸರ್ ಪೀಡಿತ ಪುತ್ರಿಗೆ ತಾಯಿಯೊಬ್ಬರು ಧೈರ್ಯವನ್ನು ತಂಬುತ್ತಿರುವುದು ಭಾವನಾತ್ಮಕವಾಗಿದೆ. ಕಿಮೋಥೆರಪಿಗಾಗಿ ಕೂದಲು ತೆಗೆಯಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಚಿಕಿತ್ಸೆ ವೇಳೆ ತಲೆಕೂದಲು ಉದುರಿ ಹೋಗುತ್ತದೆ. ಹೀಗಾಗಿ ಮಹಿಳೆ ತನ್ನ ಪುತ್ರಿಗೆ ಆತ್ಮಸ್ಥೈರ್ಯವನ್ನು ತುಂಬಲು ನಿನ್ನ ಕಷ್ಟದಲ್ಲಿ ನಾನಿದ್ದೇನೆ ನಿನ್ನೊಂದಿಗೆ ಎಂದು ಧೈರ್ಯವನ್ನು ತುಂಬಲು ತನ್ನ ತಲೆ ಕೂದಲನ್ನು ಕೂಡ ತೆಗೆದಿದ್ದಾರೆ. ತಾಯಿ ತನ್ನ ತಲೆಕೂದಲನ್ನು ತೆಗೆಯುತ್ತಿರುವುದನ್ನು ಕಂಡ ಮಗಳು ಕಣ್ಣೀರು ಹಾಕುತ್ತಿದ್ದಾಳೆ.

    ಈ ವೀಡಿಯೋವನ್ನು ಅಮೆರಿಕದ ಮಾಜಿ ಆಟಗಾರ ರೆಕ್ಸ್ ಚಾಪ್ಮನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾಯಿ-ಮಗಳ ಭಾವನಾತ್ಮಕವಾದ ಈ ವೀಡಿಯೋಗೆ ಜನರು ಮೆಚ್ಚಿ ತಾಯಿಯ ಮಮತೆಯನ್ನು ಕಂಡು ಕೊಂಡಾಡುತ್ತಿದ್ದಾರೆ.

  • ಇಸ್ರೋ ವಿಶ್ವದಾಖಲೆ ಮುರಿದ ಸ್ಪೇಸ್ ಎಕ್ಸ್ – ಕಡಿಮೆ ಬೆಲೆಯಲ್ಲಿ ಉಪಗ್ರಹ ಉಡಾವಣೆ

    ಇಸ್ರೋ ವಿಶ್ವದಾಖಲೆ ಮುರಿದ ಸ್ಪೇಸ್ ಎಕ್ಸ್ – ಕಡಿಮೆ ಬೆಲೆಯಲ್ಲಿ ಉಪಗ್ರಹ ಉಡಾವಣೆ

    ವಾಷಿಂಗ್ಟನ್: ಎಲೆಕ್ಟ್ರಿಕಲ್ ಕಾರು ತಯಾರಕಾ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಏಕಕಾಲಕ್ಕೆ 143 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದಾಖಲೆ ಮಾಡಿದೆ.

    2017ರಲ್ಲಿ ಭಾರತದ ಇಸ್ರೋ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಸ್ಪೇಸ್ ಎಕ್ಸ್ ಸಂಸ್ಥೆ 143 ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.

    ಟ್ರಾನ್ಸ್‍ಪೋರ್ಟರ್ 1 ಹಸರಿನ ಯೋಜನೆಯ ಮೂಲಕ ಭಾರತದ ಕಾಲಮಾನ ರಾತ್ರಿ 8.31 ಸುಮಾರಿಗೆ ಅಮೆರಿಕದ ಫ್ಲೋರಿಡಾ ಕೇಪ್ ಕಾನಾವರೆಲ್‍ನಿಂದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಫಾಲ್ಕನ್ 9 ರಾಕೆಟ್ ಉಪಗ್ರಹಗಳನ್ನು ಹೊತ್ತುಕೊಂಡು ನಭಕ್ಕೆ ಹಾರಿತು.

    ವಾಣಿಜ್ಯ ಹಾಗೂ ಸರ್ಕಾರದ ಕ್ಯೂಬ್‍ಸ್ಯಾಟ್‍ಲೈಟ್, 10 ಸ್ಟಾರ್‍ಲಿಂಕ್ ಸ್ಯಾಟಲೈಟ್‍ಗಳನ್ನು ಸ್ಪೇಸ್ ಎಕ್ಸ್ ಹಾರಿಸಿದೆ. ಈ ಮೂಲಕ ಪ್ರತಿ ಕೆಜಿಗೆ 15,000 ಡಾಲರ್(ಅಂದಾಜು 10.93 ಲಕ್ಷ ರೂ.) ವಿಧಿಸುವ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ನಡೆದ ಉಪಗ್ರಹಗಳ ಉಡಾವಣೆ ಎಂಬ ಹೆಸರು ಗಳಿಸಿತು.

    2021ರ ವೇಳೆಗೆ ವಿಶ್ವಕ್ಕೆ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ ನೀಡುವ ಯೋಜನೆಯನ್ನು ಸ್ಪೇಸ್ ಎಕ್ಸ್ ಹಾಕಿಕೊಂಡಿದೆ. ಈ ಯೋಜನೆಗೆ ಪೂರಕವಾಗಿ ಉಪಗ್ರಹವನ್ನು ಹಾರಿಸಿದೆ.

  • ಅಮೆರಿಕದ ಅಧ್ಯಕ್ಷರಿಗೆ ಭಾರತೀಯರಿಂದ ಸಾಂಪ್ರದಾಯಿಕ ಸ್ವಾಗತ

    ಅಮೆರಿಕದ ಅಧ್ಯಕ್ಷರಿಗೆ ಭಾರತೀಯರಿಂದ ಸಾಂಪ್ರದಾಯಿಕ ಸ್ವಾಗತ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಲಿರುವ ಜೋ ಬೈಡನ್ ಅವರಿಗೆ ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕವಾಗಿ ರಂಗೋಲಿ ಮೂಲಕವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.

    ಅಮೆರಿಕಾದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಮುಗಿಯುತ್ತಿದೆ. 46ನೇ ಅಧ್ಯಕ್ಷರಾಗುತ್ತಿರುವ ಜೋ ಬೈಡೆನ್ ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ವೇಳೆ ಸುಮಾರು 1800ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಜೋ ಬೈಡನ್ ಸ್ವಾಗತಕ್ಕೆ ರಂಗೋಲಿ ಬಿಡಿಸುತ್ತಿದ್ದಾರೆ. ರಂಗೋಲಿ ಬಿಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು, ಜನಸಾಮಾನ್ಯರು, ಕಲಾವಿದರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

    ಭಾರತೀಯರು ಆರೋಗ್ಯ ಮತ್ತು ಸಮೃದ್ಧಿಗಾಗಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಾರೆ. ಜೋ ಬೈಡೆನ್ ಅಧಿಕಾರವಧಿ ಹೀಗೆ ಸಮೃದ್ಧವಾಗಿರಲಿ ಹಾಗೂ ವೈವಿಧ್ಯಮಯ ಸಂಸ್ಕ್ರತಿಗೆ ಪೂರಕವಾಗಿ ಆಡಳಿತ ನಿರ್ವಹಿಸಲಿ ಎಂದು ರಂಗೋಲಿ ಸ್ವಾಗತಕ್ಕೆ ಸಿದ್ಧಪಡಿಸಲಾಗುತ್ತಿದೆ. ಅಮೆರಿಕಾದ ಪೊಲೀಸರು ಕ್ಯಾಪಿಟಲ್ ಕಟ್ಟಡದ ಸುತ್ತ ರಂಗೋಲಿ ಚಿತ್ರ ಬಿಡಿಸಲು ಅನುಮತಿ ನೀಡಿದ್ದಾರೆ.

  • ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿಯೂ ಕಸ

    ವಾಷಿಂಗ್ಟನ್: ತಜ್ಞರು ನಡೆಸಿದ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಬಾಹ್ಯಕಾಶದಲ್ಲಿ 6 ಸಾವಿರ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂಬ ಸತ್ಯ ಹೊರಬಿದ್ದಿದೆ.

    ವಿಜ್ಞಾನಿಗಳು ಎಲ್ಲಾ ಉಪಗ್ರಹಗಳ ಕುರಿತಂತೆ ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗಾಗಲೇ ಮಾನವರು ಹಾರಿಬಿಟ್ಟ ಬಾಹ್ಯಕಾಶ ಕುರಿತಂತೆ ಇತ್ತೀಚೆಗೆ ತಜ್ಞರು ನಡೆಸಿದ ಅಧ್ಯಯನದಲ್ಲಿ ಸಂಶೋಧನಾ ಸಾಧನಗಳು, ಉಪಗ್ರಹಗಳು, ನಿಷ್ಕ್ರಿಯಗೊಂಡ ಉಪಗ್ರಹ ಪಳೆಯುವಿಕೆ ಸೇರಿ 6 ಸಾವಿರ ಟನ್ ತ್ಯಾಜ್ಯ ಬಾಹ್ಯಾಕಾಶದಲ್ಲಿ ಸಂಗ್ರಹವಾಗಿದೆ. ಅಂದರೆ ಬಾಹ್ಯಕಾಶದಲ್ಲಿ ಅಂದಾಜಿನ ಪ್ರಕಾರ 12.8 ಕೋಟಿ ತುಣುಕುಗಳು ಸೇರಿಕೊಂಡಿದ್ದು ಅದರಲ್ಲಿ 1 ಮಿ.ಮೀಟರ್ ನಿಂದ 10 ಸೆಂ.ಮೀ ಗಾತ್ರದ ಅವಶೇಷಗಳು ಸೇರಿಕೊಂಡಿದೆ.

    ಈ ಕುರಿತಂತೆ 2018ರಲ್ಲಿ ನಾಸಾ ನಡೆಸಿದ ಅಧ್ಯನಯನ ಪ್ರಕಾರ ಅಂದಾಜು 5 ಲಕ್ಷಕ್ಕೂ ಅಧಿಕ ನಿಷ್ಕ್ರಿಯ ಉಪಗ್ರಹ ಅವಶೇಷ ಬಾಹ್ಯಕಾಶದಲ್ಲಿ ಭೂಮಿಯನ್ನು ಸುತ್ತುತ್ತಿದ್ದು, ಇಲ್ಲಿಯವರೆಗೂ ಅವಶೇಷಗಳಿಂದ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಮೂಲಗಳು ತಿಳಿಸಿದೆ. ಆದರೆ ಉಪಗ್ರವೊಂದು 2015ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪ್ಪಳಿಸುವ ಅಪಾಯದ ಸವಾಲು ಎದುರಾಗಿತ್ತು. ಆದ್ರೆ ಅದೃಷ್ಟವಶತ್ ಅಂತಹ ಯಾವುದೇ ಘಟನೆ ಸಂಭವಿಸಲಿಲ್ಲ. ಮುಂದೆ ಹೆಚ್ಚಿನ ಉಪಗ್ರಹಗಳ ಉಡಾವಣೆ ಮಾಡುವ ಯೋಜನೆಯನ್ನು ವಿಜ್ಞಾನಿಗಳು ಹೊಂದಿದ್ದು, ಭವಿಷ್ಯದಲ್ಲಿ ಯಾವುದೇ ಉಪಗ್ರಹಗಳು ಅಪ್ಪಳಿಸುವ ಸಾಧ್ಯತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹಲವು ವರ್ಷಗಳಿಂದ ಇದ್ದ ತ್ಯಾಜ್ಯಗಳು ಇದೀಗ ಆಯುಷ್ಯ ಕಳೆದುಕೊಂಡು ಅವಸಾನ ಹೊಂದಲಿದೆ. ಹೀಗಾಗಿ ಇದಕ್ಕೆಲ್ಲಾ ಪರಿಹಾರ ವಿಶ್ವದ ನಂ1 ಉದ್ಯಮಿ ಎಲಾನ್ ಮಾಸ್ಕ್ ಕಾರಣ ಈ ಹಿಂದೆ 2018ರಲ್ಲಿ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಬಾಹ್ಯಕಾಶ ನಿಲ್ದಾಣಕ್ಕೆ ಫಾಲ್ಕನ್-9 ರಾಕೆಟ್ ನನ್ನು ಪ್ರಾಯೋಗಿಕವಾಗಿ ಸೇಸ್ ಸ್ವೀಪರ್ ಬಳಸುವ ಮೂಲಕ ತ್ಯಾಜ್ಯ ಸಂಗ್ರಹಿಸಲು ಸಾಹಾಯ ಮಾಡಿತ್ತು. ಮತ್ತೆ ಇದೀಗ ಬಾಹ್ಯಕಾಶದಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಲು ಈ ಸಂಸ್ಥೆಯ ಸಹಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

  • ಪ್ರತಿದಿನ ನಾಯಿ ಮೂತ್ರ ಕುಡಿಯುವ ಮಹಿಳೆ

    ಪ್ರತಿದಿನ ನಾಯಿ ಮೂತ್ರ ಕುಡಿಯುವ ಮಹಿಳೆ

    ವಾಷಿಂಗ್ಟನ್: ಪ್ರಪಂಚದಲ್ಲಿ ಎಲ್ಲಾ ಪುರುಷರು ಮತ್ತು ಮಹಿಳೆಯರು ತ್ವಚೆಯ ಕಾಂತಿಗೋಸ್ಕರ ಹಲವಾರು ರೀತಿಯ ಕ್ರೀಮ್ಸ್, ಸೋಪು, ಮನೆಮದ್ದುಗಳನ್ನು, ಆಯುರ್ವೇದ ಔಷಧಿ, ಟಿಪ್ಸ್‍ಗಳನ್ನು ಬಳಸುತ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಶ್ವಾನದ ಮೂತ್ರ ಸೇವಿಸುವುದರ ಮೂಲಕ ವಿಭಿನ್ನ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ನಾಯಿಯನ್ನು ನಿಯತ್ತಿನ ಪ್ರಾಣಿ ಎಂದೇ ಕರೆಯುತ್ತಾರೆ. ಗೂಗಲ್‍ನಲ್ಲಿ ಹುಡುಕಿದರೂ ಕೂಡ ಶ್ವಾನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ತೋರಿಸುತ್ತದೆ. ಈ ಮುಗ್ಧ ಪ್ರಾಣಿ ಶ್ವಾನವನ್ನು ಯುನೈಟೆಡ್ ಸ್ಟೇಟ್‍ನ ಮನೆಗಳಲ್ಲಿ ಕುಟುಂಬ ಸದಸ್ಯರಲ್ಲಿ ಒಂದು ಪರಿಗಣಿಸಲಾಗುತ್ತದೆ.

    ಯುಎಸ್‍ನ ಲೀನಾ ತನ್ನ ತ್ವಚೆಯ ಕಾಂತಿಯನ್ನು ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿದ ಲೀನಾ, ನಾನು ಪ್ರತಿ ದಿನ ನಾಯಿಯ ಮೂತ್ರವನ್ನು ಕುಡಿಯುತ್ತಿದ್ದೆ, ಇದರಿಂದ ನನ್ನ ಮುಖದಲ್ಲಿದ್ದ ಮೊಡವೆಗಳು ಒಂದು ವಾರದಲ್ಲಿ ಮಾಯಾವಾಯಿತು ಮತ್ತು ನಾಯಿಯ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿದೆ ಎಂದು ತಿಳಿಸಿದ್ದಾಳೆ.

    ಅಲ್ಲದೆ ನಾಯಿಯ ಮೂತ್ರವನ್ನು ಕುಡಿಯುವುದರಿಂದ ಕ್ಯಾನ್ಸರ್ ಪರಿಣಾಮವನ್ನು ಸಹ ತಪ್ಪಿಸಬಹುದು. ನಾಯಿ ಮೂತ್ರವು ಹಲವು ರೋಗಗಳಿಗೆ ಮದ್ದು ಎಂದರು ತಪ್ಪಾಗಲಾರದು ಎಂದು ಹೇಳಿದ್ದಾಳೆ.

    ಮೊದಲನೇ ಬಾರಿ ಶ್ವಾನದ ಮೂತ್ರ ಕುಡಿದಾಗ ನನಗೆ ಬಹಳ ವಿಚಿತ್ರವಾಗಿ ಅನಿಸಿತು. ಆದ್ರೆ ಎಷ್ಟೋ ತಿಂಗಳಿನಿಂದ ಇದ್ದ ಮುಖದ ಮೇಲಿನ ಮೊಡವೆಗಳು ನಾಯಿ ಮೂತ್ರ ಕುಡಿದ ಒಂದು ವಾರದಲ್ಲಿ ಹೋದವು ಮತ್ತು ಮೊಡವೆಯ ಕಲೆಗಳು ಕೂಡ ಹೋಗಿ ತ್ವಚೆಯ ಕಾಂತಿಯು ಹೆಚ್ಚಾಯಿತು ಎಂದು ಹೇಳಿದಳು.

    ಲೀನಾ ಮೂತ್ರ ಸೇವಿಸಿದ ನಂತರ ಈ ವಿಚಾರ ಇದೀಗ ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ.