ವಾಷಿಂಗ್ಟನ್: ಕ್ರಿಸ್‍ಮಸ್ ಮೆರವಣಿಗೆ ಮಾಡುತ್ತಿದ್ದ ವಾಹನವನ್ನು ಚಾಲಕ ವೇಗವಾಗಿ ಚಲಾಯಿಸಿದ ಪರಿಣಾಮ 20 ಜನರು ತೀವ್ರಗಾಯಗೊಂಡಿರುವ ಘಟನೆ ವಿಸ್ಕಾನ್ಸಿನ್ ನಲ್ಲಿ ನಡೆದಿದೆ.
ವೌಕೇಶ ಪೊಲೀಸ್ ಮುಖ್ಯಸ್ಥ ಡಾನ್ ಥಾಂಪ್ಸನ್ ಭಾನುವಾರ ಸಂಜೆ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ವಿಸ್ಕಾನ್ಸಿನ್‍ನ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಈ ಪಟ್ಟಣದಲ್ಲಿ ಸಂಜೆ 4:39ಗೆ ಕ್ರಿಸ್ಮಸ್ ಮೆರವಣಿಗೆ ನಡೆಯುತ್ತಿದ್ದು, ಚಾಲಕನ ಬೇಜಾವಾಬ್ದಾರಿತನದಿಂದ ಈ ಘಟನೆ ನಡೆದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ
ಘಟನೆಗೆ ಕಾರಣವಾದ ವಾಹನವನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು, ತನಿಖಾಧಿಕಾರಿಗಳು ಚಾಲಕನನ್ನು ಹುಡುಕುತ್ತಿದ್ದಾರೆ. ಪ್ರಸ್ತುತ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದರು.
ವೌಕೇಶ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಸ್ಥಳೀಯ ಮತ್ತು ರಾಜ್ಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ವಾಷಿಂಗ್ಟನ್: ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಲ್ಲ. ಇತರ ಹಲವು ದೇಶಗಳಲ್ಲಿಯೂ ಅಷ್ಟೇ ಜನಪ್ರಿಯವಾಗಿವೆ. ವಾಷಿಂಗ್ಟನ್ ನಲ್ಲಿ ಕುಟುಂಬವೊಂದು ನಮ್ಮ ಭಾರತೀಯ ಹಾಡಿಗೆ ಹೆಜ್ಜೆ ಹಾಕಿದ್ದು, ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿದೇಶದಲ್ಲಿ ತಂದೆ ಮತ್ತು ಮಕ್ಕಳು ನಮ್ಮ ಭಾರತ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ದೇಸಿ ಉಡುಪಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿ ಮಿಂಚಿದ್ದಾರೆ. ಬಾಲಿವುಡ್ ಹಾಡುಗಳ ಅಭಿಮಾನಿಗಳಲ್ಲಿ ಒಬ್ಬರು ವಾಷಿಂಗ್ಟನ್ ಮೂಲದ ರಿಕಿ ಎಲ್ ಪಾಂಡ್, ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ನಿತ್ಯವೂ ಬಾಲಿವುಡ್ ಸಾಂಗ್ ಗೆ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ರಿಕಿ ತನ್ನ ಮಗ ಮತ್ತು ಮಗಳ ಜೊತೆಯಲ್ಲಿ ನವರಾತ್ರಿಯ ವಿಶೇಷಕ್ಕೆ ಒಂದು ವೀಡಿಯೋವನ್ನ ಮಾಡಿದ್ದು, ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬಟ್ಟೆ ಒಗೆಯುವುದನ್ನು ಹೇಳಿಕೊಡುತ್ತೆ ಚಿಂಪಾಂಜಿ- ವೀಡಿಯೋ ವೈರಲ್
ಈ ವೀಡಿಯೋದಲ್ಲಿ ರಿಕಿ ಪಾಂಡ್, ನೀಲಿ ಶೇರ್ವಾನಿ ಧರಿಸಿದ್ದು, ಫುಲ್ ಕಾನ್ಫಿಡೆಂಟ್ ಆಗಿ ನೃತ್ಯ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು. ನಂತರ ಅವರ ಮಗ ಕಂದು ಬಣ್ಣದ ಬಟ್ಟೆಯನ್ನು ಹಾಕಿಕೊಂಡಿದ್ದು, ಅವರ ಮಗಳು ಕಪ್ಪು ಮತ್ತು ಕಂದು ಬಣ್ಣದ ಉಡುಪಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
ಆಯುಷ್ ಶರ್ಮಾ ಮತ್ತು ವಾರಿನಾ ಹುಸೇನ್ ಅಭಿನಯದ 2018 ರ ‘ಲವ್‍ಯಾತ್ರಿ’ ಚಿತ್ರದ ‘ಚೋಗದಾ’ ಹಾಡಿಗೆ ರಿಕಿ ಮತ್ತು ಅವರ ಮಕ್ಕಳು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಹಾಡನ್ನು ದರ್ಶನ್ ರಾವಲ್ ಹಾಡಿದ್ದಾರೆ.
ಈ ವೀಡಿಯೋ ಪೋಸ್ಟ್ ಮಾಡಿದ ರಿಕಿ, ‘ಚೋಗದಾ’.. ಯಾವುದೇ ಹಾಡಿನ ಸಲಹೆಗಳಿಗಾಗಿ, ಫಾರ್ಮ್ ಅನ್ನು ಭರ್ತಿ ಮಾಡಿ. ನನ್ನ ಬಯೋದಲ್ಲಿ ಲಿಂಕ್ ಮಾಡಿ ಎಂದು ಬರೆದಿದ್ದಾರೆ. ಅಮೆರಿಕದ ವಾಷಿಂಗ್ಟನ್‍ನ ನಿವಾಸಿಯಾದ ರಿಕಿ ಪಾಂಡ್ ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷದ 54 ಸಾವಿರ ಫಾಲೋವರ್‍ಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್
ಈ ವೀಡಿಯೋ ನೋಡಿದ ವೀಕ್ಷಕರು ‘ನೃತ್ಯ ಮಾಡಲು ನನ್ನ ನೆಚ್ಚಿನ ಹಾಡುಗಳಲ್ಲಿ ಇದು ಒಂದು’, ಇನ್ನೊಬ್ಬರು ‘ಸೂಪರ್, ನವರಾತ್ರಿಯ ಹಬ್ಬದ ಸಮಯಕ್ಕೆ ಸರಿಯಾಗಿದೆ’, ‘ನೈಸ್’, ‘ಅದ್ಭುತ’, ‘ಮನಸ್ಸಿಗೆ ಮುದ ನೀಡುತ್ತೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.
ಮೊದಲು 2020ರಲ್ಲಿ ಹೃತಿಕ್ ರೋಷನ್ ಅವರ ‘ಲಾಲಿಪಾಪ್ ಲಗೆಲು’ ಹಾಡಿನ ಜೊತೆ ರಿಕಿ ತನ್ನ ಮಗಳೊಂದಿಗೆ ನೃತ್ಯ ಮಾಡಿದ್ದು, ಆ ವೀಡಿಯೋ ಸಹ ಸಖತ್ ವೈರಲ್ ಆಗಿತ್ತು. ನಂತರ ಅವರು ಅನೇಕ ಬಾಲಿವುಡ್ ಹಾಡುಗಳಾದ ಓ ಬೀಟಾ ಜಿ, ಮಲ್ಹಾರಿ, ಲಂಡನ್ ತುಮಕ್ಡಾ, ದಮ್ ಡುಮಾ ದಮ್, ಚಮ್ಮಕ್ ಚಲ್ಲೊ ಮತ್ತು ಬಚ್‍ಪನ್ ಕಾ ಪ್ಯಾರ್ ಸಾಂಗ್ ಗೆ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ
ಸದ್ಯ ಸ್ಥಳೀಯ ಅಧಿಕಾರಿಗಳೊಂದಿಗೆ ರೈಲು ನಿರ್ವಾಹಕ ಅಮ್ಟ್ರಾಕ್ ಗಾಯಗೊಂಡ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ರೈಲಿನಲ್ಲಿ ಸುಮಾರು 147 ಮಂದಿ ಪ್ರಯಾಣಿಕರು ಹಾಗೂ 13 ಸಿಬ್ಬಂದಿ ಇದ್ದರು ಎನ್ನಲಾಗುತ್ತಿದೆ.
ಉತ್ತರ ಮೊಂಟಾನಾದ ಜೋಪ್ಲಿನ್ ಬಳಿ ಸಂಜೆ 4 ಗಂಟೆಗೆ ರೈಲು ಹಳಿ ತಪ್ಪಿದ್ದು, ಘಟನೆ ಕುರಿತ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಘಟನಾ ಸ್ಥಳದಲ್ಲಿ ಲಗೇಜ್‍ಗಳು ಚೆಲ್ಲಾಪಿಲ್ಲಿಯಾಗಿದೆ ಮತ್ತು ಹಲವಾರು ರೈಲಿನ ಬೋಗಿಗಳು ಹಳಿಯಿಂದ ಪಕ್ಕಕ್ಕೆ ಸರಿದಿರುವುದನ್ನು ನೋಡಬಹುದಾಗಿದೆ.
ವಾಷಿಂಗ್ಟನ್: 72 ವರ್ಷದ ಬ್ರಿಟಿಷ್ ವ್ಯಕ್ತಿಯೊಬ್ಬರು 305 ದಿನಗಳಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅಂದರೆ ಸುಮಾರು 10 ತಿಂಗಳ ಕಾಲ ಸತತವಾಗಿ ಸೋಂಕು ಹೊಂದಿರುವ ಈ ಪ್ರಕರಣ ಇದಾಗಿದೆ.
ಬ್ರಿಸ್ಟಲ್‍ನ ಡೇವ್ ಸ್ಮಿತ್ ಸೋಂಕಿಗೆ ಒಳಗಾಗಿರುವ ವ್ಯಕ್ತಿ. 2020ರಲ್ಲಿ ಕೊರೊನಾ ಮೊದಲನೇ ಅಲೆ ಆರಂಭವಾದಾಗ ಡೇವ್ ಸ್ಮಿತ್‍ರವರಿಗೆ ಕೊರೊನಾ ದೃಢಪಟ್ಟಿತ್ತು. ಈವರೆಗೂ 10 ತಿಂಗಳಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ 43 ಬಾರಿ ಸೋಂಕಿಗೆ ಒಳಗಾಗಿದ್ದಾರೆ ಮತ್ತು 7 ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತಂತೆ ಡೇವ್ ಸ್ಮಿತ್‍ರವರು, ನನ್ನ ಆರೋಗ್ಯ ಕೆಟ್ಟಗಾಲೆಲ್ಲಾ ನಾನು ಸಾವಿನ ಅಂಚಿಗೆ ಹೋಗಿ ತಲುಪುತ್ತಿದ್ದೆ. ನನ್ನ ಪತ್ನಿ ಐದು ಬಾರಿ ನನ್ನ ಅಂತ್ಯಕ್ರಿಯೆಗೆ ವ್ಯವಸ್ಥೆಗೊಳಿಸಿದ್ದರು. 2019ರಲ್ಲಿ ಲ್ಯುಕೇಮಿಯಾದಿಂದ ಗುಣವಾಗುತ್ತಿದ್ದಂತೆಯೇ, ಮಾರ್ಚ್ 2020ರಲ್ಲಿ ನನಗೆ ಕೊರೊನಾ ವೈರಸ್ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಆದರೂ ಏಪ್ರಿಲ್‍ವರೆಗೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದರಿಂದ ಕೊನೆಗೆ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದೆ.
ನಾನು ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿದ್ದು, ವಾಸನೆ ಹಾಗೂ ರುಚಿ ಕಂಡು ಹಿಡಿಯುವ ಪ್ರಜ್ಞೆಯನ್ನು ಕಳೆದುಕೊಂಡೆ, ನಂತರ ಮತ್ತೆ ಅದೆಲ್ಲವೂ ಹಿಂದಿರುಗಲಿಲ್ಲ. ಅಲ್ಲದೇ ಅನಾರೋಗ್ಯದಿಂದ 117 ಕೆಜಿ ತೂಕ ಇದ್ದ ನಾನು 63 ಕೆಜಿಗೆ ಇಳಿದೆ.
ಇನ್ನೇನು ನಾನು ಪ್ರಾಣಕಳೆದುಕೊಂಡು ಕುಟುಂಬದಿಂದ ದೂರವಾಗುತ್ತೇನೆ ಎಂದು ಕೊಂಡಾಗ ಯುಎಸ್ ಕಂಪನಿಯ ಆಂಟಿ-ವೈರಲ್ ಔಷಧಿಯನ್ನು ಚಿಕಿತ್ಸೆಯಾಗಿ ನೀಡಲಾಯಿತು. ಆಗ ನನ್ನ ಆರೋಗ್ಯ ತಕ್ಷಣಕ್ಕೆ ಸುಧಾರಿಸಲಿಲ್ಲ. ಆದರೆ ಕೆಲವು ವಾರಗಳ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿತು ಎಂದಿದ್ದಾರೆ. ಈ ಔಷಧಿಯನ್ನು ಪಡೆದ ನಲವತ್ತೈದು ದಿನಗಳ ನಂತರ ಡೇವ್ ಸ್ಮಿತ್‍ರವರಿಗೆ ಕೊರೊನಾ ನೆಗಟಿವ್ ಬಂದಿತು. ಇದನ್ನೂ ಓದಿ: ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಹಾಲ್, ರೆಸಾರ್ಟ್ ಆರಂಭಕ್ಕೆ ಗ್ರೀನ್ ಸಿಗ್ನಲ್
ವಾಷಿಂಗ್ಟನ್: ಭಾರತದಿಂದ ಯೆಸ್‍ಗೆ ಪ್ರಯಾಣಿಸಿದ ಪ್ರಯಾಣಿಕನ ಲಗೇಜ್ ಬ್ಯಾಗ್‍ನಲ್ಲಿ ಹಸುವಿನ ಸೆಗಣಿ ಪತ್ತೆಯಾಗಿದೆ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಹಸುವಿನ ಸಗಣಿಯನ್ನು ಯುಎಸ್‍ನಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ ಎನ್ನಲಾಗುತ್ತದೆ . ಆದರೆ ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ ತಲುಪಿದ ನಂತರ ಸಿಬಿಪಿ ಕೃಷಿ ತಜ್ಞರು ಸೂಟ್ ಕೇಸ್‍ನಲ್ಲಿ ಎರಡು ಹಸುವಿನ ಸಗಣಿ ಉಂಡೆಯನ್ನು ಕಂಡುಕೊಂಡಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಸೋಮವಾರ ತಿಳಿಸಿದೆ.
ಕಾಲುಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ. ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆಯ ಕೃಷಿ ಸಂರಕ್ಷಣಾ ಕಾರ್ಯಾಚರಣೆಯ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಬಾಲ್ಟಿಮೋರ್ ಫೀಲ್ಡ್ ಆಫೀಸ್ ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.
ಹಸುವಿನ ಸಗಣಿ ವಿಶ್ವದ ಕೆಲವು ಭಾಗಗಳಲ್ಲಿ ಪ್ರಮುಖ ಶಕ್ತಿ ಮತ್ತು ಅಡುಗೆ ಮೂಲವಾಗಿದೆ ಎಂದು ತಿಳಿದಿದ್ದರೂ ಹಸುವಿನ ಚರ್ಮವನ್ನು ಡಿಟಾಕ್ಸಿಫೈಯರ್, ಆಂಟಿಮೈಕ್ರೊಬಿಯಲ್ ಮತ್ತು ರಸಗೊಬ್ಬರವಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ಪ್ರಯೋಜನಗಳ ಹೊರತಾಗಿಯೂ, ಕಾಲುಬಾಯಿ ರೋಗದ ಸಂಭಾವ್ಯ ಕಾರಣಗಳಿಂದಾಗಿ ಗೋವಿನ ಸಗಣಿ ನಿಷೇಧಿಸಲಾಗಿದೆ ಎಂದು ಸಿಬಿಪಿ ಹೇಳಿದೆ.
ಯು.ಎಸ್. ಕೃಷಿ ಇಲಾಖೆಯ ಪ್ರಕಾರ, ಕಾಲುಬಾಯಿ ರೋಗವು ವಿಶ್ವಾದ್ಯಂತದ ಜಾನುವಾರುಗಳಿಗೆ ತೊಂದರೆ ತರುವ ರೋಗವಾಗಿದ್ದು ಇದು ವ್ಯಾಪಕವಾಗಿ ಮತ್ತು ವೇಗವಾಗಿ ಹರಡಬಹುದು ಮತ್ತು ಜಾನುವಾರುಗಳ ಸಂಖ್ಯೆಗೆ ಗಮನಾರ್ಹ ನಷ್ಟವನ್ನು ತರಬಲ್ಲದು. 1929ರಿಂದ ಯುಎಸ್ ಕಾಲುಬಾಯಿ ರೋಗದಿಂದ ಮುಕ್ತವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಾಷಿಂಗ್ಟನ್: ಅಟ್ಲಾಂಟಾಕ್ಕೆ ತೆರಳಲು ಏರ್ ಫೋರ್ಸ್ ಒನ್ ವಿಮಾನ ಏರುವ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲಿನಲ್ಲಿ ಮೂರು ಬಾರಿ ಎಡವಿದ ಘಟನೆ ಶುಕ್ರವಾರ ನಡೆದಿದೆ.
ವಿಮಾನದ ಮೆಟ್ಟಿಲೇರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮುಗ್ಗರಿಸಿರುವ ವೀಡಿಯೋ ಇದೀಗ ವೈರಲ್ ಆಗಿದೆ. ತೀವ್ರವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಆಯ ತಪ್ಪಿದ ಜೋ ಬೈಡನ್, ಆಸರೆಗಾಗಿ ಮೆಟ್ಟಿಲಿನ ಬದಿಯ ಕಂಬಿಗಳನ್ನು ಹಿಡಿದುಕೊಂಡಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಮೊದಲ ಬಾರಿ ಎಡವಿದಾಗ ಹೇಗೋ ಮೇಲೆ ಎದ್ದು ಮುಂದೆ ಹೋಗಿದ್ದಾರೆ. ಮತ್ತೊಂದು ಹೆಜ್ಜೆ ಇರಿಸಿದಾಗ ಎರಡು ಬಾರಿ ಸತತವಾಗಿ ಮುಗ್ಗರಿಸಿದ್ದಾರೆ. ಅದೃಷ್ಟವಶಾತ್ ಮೆಟ್ಟಿಲಿನಿಂದ ಜಾರಿ ಅವಘಡ ಸಂಭವಿಸಿಲ್ಲ. ಮೂರನೇ ಬಾರಿ ಮುಗ್ಗರಿಸಿದಾಗ ಮೆಟ್ಟಿಲಿನ ಮೇಲೆ ಬೀಳುವಂತಾಗಿತ್ತು. ಬಳಿಕ ಎರಡೂ ಕಡೆಯ ಕಂಬಿಗಳನ್ನು ಹಿಡಿದು ಮೇಲೆ ಎದ್ದು ಮುಂದೆ ಹೋಗಿದ್ದಾರೆ.
WATCH: Biden falls three times trying to climb the stairs to board Air Force One pic.twitter.com/IfDUjLPQB4
ಗಾಳಿ ಜೋರಾಗಿ ಬೀಸುತ್ತಿತ್ತು. ನಾನೂ ಕೂಡ ಮೆಟ್ಟಿಲು ಏರುವಾಗ ಹೆಚ್ಚೂ ಕಡಿಮೆ ಬಿದ್ದೇಬಿಟ್ಟಿದ್ದೆ. ಬೈಡನ್ ಅವರು ಶೇ.100ರಷ್ಟು ಆರಾಮಾಗಿ ಇದ್ದಾರೆ. ಯಾವ ಸಮಸ್ಯೆಯೂ ಆಗಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್ ಪೀರ್ರೆ ತಿಳಿಸಿದ್ದಾರೆ.
ಪಾರ್ಲರ್‍ವೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಕುರಿತಾಗಿ ಏಷ್ಯನ್-ಅಮೆರಿಕನ್ ಸಮುದಾಯವನ್ನು ಮುಂಡರನ್ನು ಭೇಟಿ ಮಾಡಿ ಚರ್ಚಿಸಲು ಬೈಡನ್ ಹೊರಟಿದ್ದರು. ಅಂಟ್ಲಾಟಿಕಾಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋ ಬೈಡನ್ ಆರೋಗ್ಯವಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ವಾಷಿಂಗ್ಟನ್: ಬೀಚ್‍ನಲ್ಲಿ 41 ಕೆ.ಜಿ ತೂಕದ ಲೋಹದ ಚೆಂಡು ಬಹಮಾಸ್ ಕಡಲ ತೀರದಲ್ಲಿ ಪತ್ತೆಯಾಗಿದೆ.
ಬ್ರಿಟನ್ ಮೂಲದ ಮಹಿಳೆ ಮನೋನ್ ಕ್ಲಾರ್ಕ್ ಸಮುದ್ರ ದಡದಲ್ಲಿ ಬಿದ್ದಿದ್ದ ಲೋಹದ ಚೆಂಡನ್ನು ನೋಡಿ ಮರಳಿನಿಂದ ಹೊರಗೆ ತೆಗೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ 41 ಕೆ.ಜಿ ತೂಕ ಇರುವುದರಿಂದ ಒಬ್ಬರ ಕೈಯಲ್ಲಿ ತೆಗೆಯಲು ಸಾಧ್ಯವಾಗಿಲ್ಲ ಎಂದು ಒಂದು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಚೆಂಡಿನ ಮೇಲೆ ರಷ್ಯನ್ ಭಾಷೆಯಲ್ಲಿ ಬರೆದಿರುವ ಬರಹವಿದೆ. ಈ ಚೆಂಡು ಬರೋಬ್ಬರಿ 41 ಕೆ.ಜಿ ತೂಕವನ್ನು ಹೊಂದಿದೆ. ಈ ಲೋಹದ ಚೆಂಡು ಇಲ್ಲಿ ಹೇಗೆ ಬಂತು ಎಂಬ ಕುರಿತಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಇದು ಯಾವುದೋ ರಾಕೆಟ್‍ನ ಹೈಡ್ರಾಜೈನ್ ಪ್ರೊಪೆಲ್ಲಂಟ್ ಟ್ಯಾಂಕ್‍ನದ್ದಾಗಿರಬಹುದು ಎಂದು ಶೇ.99ರಷ್ಟು ಗ್ಯಾರಂಟಿ ಇದೆ ಎಂದು ಗಗನಯಾತ್ರಿಯೊಬ್ಬರು ಹೇಳಿದ್ದಾರೆ. 41 ಕೆ.ಜಿ ತೂಕದ ಲೋಹದ ಚೆಂಡಿನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ವಾಷಿಂಗ್ಟನ್: ತ್ರಿವಳಿ ಕೊಲೆ ಮಾಡಿದ ವ್ಯಕ್ತಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.
ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದ್ದು, ಆರೋಪಿ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆರೋಪಿ ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಆಲೂಗಡ್ಡೆಯೊಂದಿಗೆ ಬೇಯಿಸಿ, ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಅವರ ಪತ್ನಿಗೆ ಉಣಬಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆರೋಪಿ ತನ್ನ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಪುತ್ರಿಯನ್ನು ಮನೆಯಲ್ಲಿ ಕೊಂದಿದ್ದಾನೆ. ಅಲ್ಲದೆ ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.
ಸುಮಾರು 20 ವರ್ಷದಿಂದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಆರೋಪಿಯನ್ನು ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್, ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದರು. ಆರೋಪಿ ಬಿಡುಗಡೆ ನಂತರ ಈ ಘಟನೆ ಸಂಭವಿಸಿದೆ.
ಅಮೆರಿಕಾದ ಲಾಸ್ ಏಂಜಲಿಸ್ ಹೊರವಲಯದಲ್ಲಿ ನಡೆದ ಗಂಭೀರ ಅಪಘಾತದಲ್ಲಿ ವುಡ್ಸ್ ಕಾಲುಗಳು ಮುರಿದಿವೆ ಹಾಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಜನಕ ಸ್ಥಿತಿಯಲ್ಲಿ ವುಡ್ಸ್ ಇದ್ದಾರೆ ಎಂದು ತಿಳಿದು ಬಂದಿದೆ.
ಟೈಗರ್ ವುಡ್ಸ್ ಒಬ್ಬರೇ ಕಾರು ಚಲಾಯಿಸಿಕೊಂಡು ವೇಗವಾಗಿ ಪಾಲೊಸ್ ವರ್ಡಿಸ್ ಪ್ರದೇಶದಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಬೆಟ್ಟದ ಪ್ರದೇಶದಲ್ಲಿ ಕಾರು ಉರುಳಿ ಕಂದಕಕ್ಕೆ ಬಿದ್ದಿದೆ. ಈ ವೇಳೆ ಕಾರಿನಲ್ಲಿ ಟೈಗರ್ ವುಡ್ಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಕಾರು ಅಪಘಾತವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವುಡ್ಸ್ ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ವುಡ್ಸ್‌ಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ವಾಷಿಂಗ್ಟನ್: ವಿಮಾನವೊಂದು ಹಾರಾಡುತ್ತಿರುವಾಗಲೇ ಇಂಜಿನ್ ಹೊತ್ತಿ ಉರಿದ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯುನೈಟೆಡ್ ಏರ್ ಲೈನ್ಸ್ ವಿಮಾನವು 231 ಮಂದಿ ಪ್ರಯಾಣಿಕರು ಮತ್ತು 10 ಜನ ಸಿಬ್ಬಂದಿಗಳೊಂದಿಗೆ ಡೆನ್ವರ್ ನಿಂದ ಹೊನಲುಲುಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಏಕಾಏಕಿ ವಿಮಾನದ ಇಂಜಿನ್‍ನಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
ವಿಮಾನದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು, ನಡುಗಲು ಪ್ರಾರಂಭಿಸಿದಾಗ ತಕ್ಷಣ ಫೈಲಟ್ ತುರ್ತು ಭೂಸ್ಪರ್ಶ ಮಾಡಿ 241 ಜನರ ಪ್ರಾಣವನ್ನು ರಕ್ಷಿಸಿದ್ದಾರೆ.
ಡೆನ್ವರ್ ನಿಂದ ಹೊನಲುಲುಗೆ ಹೊರಟಿದ್ದ ವಿಮಾನ ಯುಎ 328 ಏಫ್‍ನಲ್ಲಿ ಕಾಣಿಸಿಕೊಂಡ ಇಂಜಿನ್ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಸಾವುನೋವುಗಳು ಸಂಭವಿಸದೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನದ ಆಡಳಿತ ಮಂಡಳಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.
ವಿಮಾನದ ಇಂಜಿನ್ ಹೊತ್ತಿ ಉರಿದ ಪರಿಣಾಮವಾಗಿ ಬಿಡಿಭಾಗಗಳು ಕಟ್ಟಡಗಳ ಮಧ್ಯೆ, ಮತ್ತು ಮೈದಾನಕ್ಕೆ ಬಿದ್ದಿದೆ. ವಿಮಾನದಲ್ಲಿ ಕಾಣಿಸಿಕೊಂಡ ದೋಷವನ್ನು ಪರೀಕ್ಷಿಸಲು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ತಯಾರಿ ನಡೆಸಿದೆ.