Tag: Washington

  • ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ವಾಷಿಂಗ್ಟನ್: ಸಮುದ್ರ ಮತ್ತು ಭೂ-ಆಧಾರಿತ ಪ್ರದೇಶದ ಮೇಲೆ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಸೇನೆಯೂ ಉಕ್ರೇನ್ ಮೇಲೆ ದಾಳಿ ಮಾಡಿದೆ.

    ಬೆಲರೂಸಿಯನ್ ಕೌಂಟರ್‍ನ ಮೇಲ್ವಿಚಾರಣೆಯ ಕಾರ್ಯತಂತ್ರದ ಪರಮಾಣು ವ್ಯಾಯಾಮದ ಭಾಗವಾಗಿ ರಷ್ಯಾ ಇಂದು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಸಮುದ್ರ ಮತ್ತು ಭೂ-ಆಧಾರಿತ ಪ್ರದೇಶಗಳ ಮೇಲೆ ದಾಳಿ ಮಾಡಿತು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಕಿಂಜಾಲ್ ಮತ್ತು ಸಿರ್ಕಾನ್ ಹೈಪರ್ಸಾನಿಕ್ ಕ್ಷಿಪಣಿಗಳ ಉಡಾವಣೆಗಳು ಮತ್ತು ಹಲವಾರು ಇತರ ಶಸ್ತ್ರಾಸ್ತ್ರಗಳನ್ನು ಒಳಗೊಂಡು ಈ ದಾಳಿ ಮಾಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ನಡೆದಿದ್ದೇನು?
    ಪೂರ್ವ ಉಕ್ರೇನ್ ಡೊನೆಟ್ಕ್ಸ್‍ನ ಉತ್ತರದಲ್ಲಿ ಇಂದು ಬೆಳಗ್ಗೆ ಬಹುಸ್ಫೋಟ ಸಂಭವಿಸಿದೆ. ಈ ಸ್ಫೋಟಗಳ ಬಗ್ಗೆ ಸರಿಯಾಗಿ ಯಾವುದೇ ರೀತಿಯ ಮಾಹಿತಿಯಿಲ್ಲ. ಈ ಕುರಿತು ಪ್ರತ್ಯೇಕತಾವಾದಿ ಅಧಿಕಾರಿಗಳಿಂದ ಅಥವಾ ಕೈವ್‍ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೂರ್ವ ಉಕ್ರೇನ್‍ನಲ್ಲಿ ಇಂದು ಬೆಳಗ್ಗೆ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಿಂದ ಸೈನಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಮಿಲಿಟರಿ ತಿಳಿಸಿದೆ.

    Putin launches nuclear drills as U.S. says Russia poised to invade Ukraine | Reuters

    ಶನಿವಾರದಂದು ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್, ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಆರ್ಥಿಕವಾಗಿ ತುಂಬಾ ಪೆಟ್ಟು ಬೀಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ: ಬೈಡನ್

    ಮುಂಬರುವ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧರಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದರು. ಅಂದಾಜು 40% ರಿಂದ 50% ರಷ್ಟಿರುವ ರಷ್ಯಾದ ಪಡೆಗಳು ಉಕ್ರೇನಿಯನ್ ಗಡಿಯ ಸಮೀಪದಲ್ಲಿ ಇದ್ದಾರೆ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ: ಬೈಡನ್

    ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ: ಬೈಡನ್

    ವಾಷಿಂಗ್ಟನ್: ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ರಷ್ಯಾ ದಾಳಿ ಮಾಡಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆತಂಕ ವ್ಯಕ್ತಪಡಿಸಿದರು.

    ಬೈಡನ್ ಅವರು ಶ್ವೇತಭವನದಲ್ಲಿ ಈ ಕುರಿತು ಮಾತನಾಡಿದ್ದು, ನಮಗೆ ಬೆದರಿಕೆಯು ಹೆಚ್ಚಿದೆ. ಏಕೆಂದರೆ ಅವರು ತಮ್ಮ ಯಾವುದೇ ಸೈನ್ಯವನ್ನು ಹೊರಗೆ ಸ್ಥಳಾಂತರಿಸಿಲ್ಲ. ಅದರ ಬದಲು ನಮ್ಮ ರಾಷ್ಟ್ರದ ಒಳಗೆ ಇರಿಸಿದ್ದಾರೆ. ಅವರು ಸುಳ್ಳು ಧ್ವಜವನ್ನು ತೋರಿಸಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನು ನಂಬುದಕ್ಕೆ ನಮಗೆ ಬಲವಾದ ಕಾರಣವಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    Russia Attack On Ukraine Possible In "Next Several Days": Biden

    ನಮ್ಮಲ್ಲಿರುವ ಪ್ರತಿಯೊಂದು ಸೂಚನೆ ಮತ್ತು ಮಾಹಿತಿಗಳ ಪ್ರಕಾರ ರಷ್ಯಾವು ಉಕ್ರೇನ್‍ಗೆ ಹೋಗಲು, ಉಕ್ರೇನ್ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ದಾಳಿಯನ್ನು ಅವರು ಮುಂದಿನ ಕೆಲವು ದಿನಗಳಲ್ಲಿ ಮಾಡುತ್ತಾರೆ ಎಂಬುದು ನನ್ನ ಭಾವನೆ ಎಂದು ವಿವರಿಸಿದರು.

    Russia Attack On Ukraine Possible In Next Several Days US President Joe Biden

    ಎನ್‍ಎಟಿಒ ಗೆ ಸೇರ್ಪಡೆಗೊಳ್ಳುವ ದೀರ್ಘಾವಧಿಯ ಗುರಿಯೂ ಸೇರಿದಂತೆ, ದೇಶದ ಪಾಶ್ಚಿಮಾತ್ಯ-ಆಧಾರಿತ ನೀತಿಗಳನ್ನು ರದ್ದುಗೊಳಿಸುವ ಪ್ರಯತ್ನದ ಭಾಗವಾಗಿ ರಷ್ಯಾದ ಮಿಲಿಟರಿಯು ಉಕ್ರೇನ್‍ನ ಹೆಚ್ಚಿನ ಗಡಿಗಳನ್ನು ಸುತ್ತುವರೆದಿದೆ. ಇದರಲ್ಲಿ ‘ರಾಜತಾಂತ್ರಿಕ ಮಾರ್ಗ’ ಇದೆ ಎಂದು ಹೇಳಿದರು ಇದನ್ನೂ ಓದಿ:  ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಇಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಹ ಮಾತನಾಡಿದ್ದರು.

  • ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!

    ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆಯಾಗಿದೆ.

    ಮೇರಿಲ್ಯಾಂಡ್‍ನ ಚಾಲ್ರ್ಸ್ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹ ಪತ್ತೆಯಾಗಿದೆ. ಇಲ್ಲಿ ಅಚ್ಚರಿಯ ವಿಷಯವೆಂದರೆ, ಆ ಸ್ಥಳದಲ್ಲಿ 124 ವಿಷಕಾರಿ ಮತ್ತು ವಿಷರಹಿತ ಹಾವುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    A dead man has been found in a Maryland home surrounded by 100 snakes and a  14-foot python. – Bruneidarussalam News

    ಏನಿದು?
    ಕೌಂಟಿಯ ಪಾಂಫ್ರೆಟ್ ಪ್ರದೇಶದ ರಾಫೆಲ್ ಡ್ರೈವ್‍ನಲ್ಲಿ 49 ವರ್ಷದ ವ್ಯಕ್ತಿ ವಾಸವಾಗಿದ್ದರು. ಆತನನ್ನು ನೆರೆಮನೆಯವರು ಒಂದು ದಿನವೂ ಸಹ ನೋಡಿರಲಿಲ್ಲ. ಆದರೆ ಒಂದು ದಿನ ನೆರೆಮನೆಯವರು ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ಒಬ್ಬ ವ್ಯಕ್ತಿ ಪ್ರಜ್ಞಾಹೀನವಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶೀಲ್ದಾರ್ ಅರೆಸ್ಟ್

    Investigation Launched After Man Found Dead Surrounded By 124 Snakes -  Opera News

    ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮನೆ ಒಳಗೆ ಹೋದ ಅವರಿಗೆ ವ್ಯಕ್ತಿ ದೇಹ ಪತ್ತೆಯಾಗಿದೆ. ಆದರೆ ಆತನ ಸುತ್ತ ನೂರಕ್ಕೂ ಹೆಚ್ಚು ವಿಷಕಾರಿ ಹಾವುಗಳಿದ್ದುದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ ವೈದ್ಯರು ವ್ಯಕ್ತಿಯು ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಸಾವಿಗೆ ಕಾರಣ ತಿಳಿಯಲು ವೈದ್ಯರು ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಆದರೆ ಪ್ರಕರಣ ಕುರಿತು ಇನ್ನೂ ಯಾವುದೇ ಮಾಹಿತಿಗಳಿಲ್ಲ. ಪೊಲೀಸರು ಸಹ ಈ ಕುರಿತು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

    Chesterfield snake enthusiast found dead, had snake bite | Richmond Latest  News | richmond.com

    ಚಾಲ್ರ್ಸ್ ಕೌಂಟಿ ವಕ್ತಾರ ಜೆನ್ನಿಫರ್ ಹ್ಯಾರಿಸ್ ಈ ಕುರಿತು ಮಾತನಾಡಿದ್ದು, ವಿವಿಧ ಪ್ರಭೇದಗಳ 100 ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಮನೆಯ ಟ್ಯಾಂಕ್‍ಗಳಲ್ಲಿ ಇರುವುದು ಪತ್ತೆಯಾಗಿದೆ. ಹಾವುಗಳಲ್ಲಿ ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು ಸೇರಿವೆ. ಈ ಹಾವುಗಳನ್ನು ಪ್ರಾಣಿ ನಿಯಂತ್ರಣ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನನ್ನ 30 ವರ್ಷಗಳ ಅನುಭವದಲ್ಲಿ ಈ ರೀತಿಯ ಘಟನೆಯನ್ನು ನಾನು ಎಂದೂ ಎದುರಿಸಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ

    ಚಾಲ್ರ್ಸ್ ಕೌಂಟಿ ಅನಿಮಲ್ ಕಂಟ್ರೋಲ್ ಉತ್ತರ ಕೆರೊಲಿನಾ ಮತ್ತು ವರ್ಜೀನಿಯಾದ ಸರೀಸೃಪ ತಜ್ಞರ ಸಹಾಯದಿಂದ ಸರೀಸೃಪಗಳಿಗೆ ಸಂಬಂಧಿಸಿದ ರಕ್ಷಣಾ ಪ್ರಯತ್ನಗಳನ್ನು ಮಾಡಲಾಗಿದೆ. ಹಾವುಗಳನ್ನು ಸರಿಯಾದ ಜಾಗದಲ್ಲಿ ಇರಿಸಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

  • ‘ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂ’ನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್ ಇನ್ನಿಲ್ಲ

    ‘ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂ’ನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್ ಇನ್ನಿಲ್ಲ

    ವಾಷಿಂಗ್ಟನ್: ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್(74) ನಿಧನರಾಗಿದ್ದಾರೆ.

    ಮೈಕೆಲ್ ಲೀ ಅಡೆ ಎಂದು ಫೇಮಸ್ ಆಗಿರುವ ಮೀಟ್ ಲೋಫ್ ಅವರು ಆರು ದಶಕಗಳ ಕಾಲ ಅಮೇರಿಕನ್ ಸಂಗೀತ ಮತ್ತು ನಟಯನ್ನೇ ಉಸಿರಾಗಿಸಿಕೊಂಡಿದ್ದರು. ಜಗತ್ತಿನಾದ್ಯಂತ 100 ಮಿಲಿಯನ್‍ಗಿಂತಲೂ ಹೆಚ್ಚು ಆಲ್ಬಂಗಳನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ

    ಮೀಟ್ ಲೋಫ್ ಅವರ ಹಿಟ್‍ಗಳಲ್ಲಿ “ಬ್ಯಾಟ್ ಆಫ್ ಹೆಲ್” ನಿಂದ ಸುಮಾರು 10-ನಿಮಿಷದ ಶೀರ್ಷಿಕೆ ಗೀತೆ, ಅದೇ ಆಲ್ಬಂನಿಂದ ಪ್ಯಾರಡೈಸ್ ಬೈ ದಿ ಡ್ಯಾಶ್‍ಬೋರ್ಡ್ ಲೈಟ್ ಮತ್ತು ಐ ಡ್ ಡು ಎನಿಥಿಂಗ್ ಫಾರ್ ಲವ್ (ಆದರೆ ಅದನ್ನು ನಾನು ಮಾಡುವುದಿಲ್ಲ), 1993 ಆಲ್ಬಮ್ “ಬ್ಯಾಟ್ ಔಟ್ ಆಫ್ ಹೆಲ್, ಬ್ಯಾಕ್ ಇನ್ ಟೂ ಹೆಲ್ ಬಹಳ ಖ್ಯಾತಿ ಪಡೆದಿದೆ.

    Meat Loaf

    ಅವರ ಹೃದಯ ನಿಮ್ಮ ಆತ್ಮದಲ್ಲಿ ಸದಾ ಎಂದೆಂದಿಗೂ ರಾಕಿಂಗ್ ಆಗಿರುತ್ತದೆ ಅದನ್ನು ನಿಲ್ಲಿಸಬೇಡಿ. ಮೀಟ್ ಲೋಫ್ ಅವರು ನಿಧನದ ಸುದ್ದಿಯನ್ನು ಘೋಷಿಸಲು ನಮ್ಮ ಹೃದಯಕ್ಕೆ ಆಘಾತವಾಗುತ್ತಿದೆ ಎಂದು ಅವರ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

  • ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ವಾಷಿಂಗ್ಟನ್: ತಪ್ಪಾಗಿ ಭಾವಿಸಿ 16 ವರ್ಷದ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಓಹಿಯೋದಲ್ಲಿ ನಡೆದಿದೆ.

    ಓಹಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ 16 ವರ್ಷದ ಮಗಳು ಜಾನೆ ಹೇರ್‍ಸ್ಟನ್ ಅನುಮತಿ ಇಲ್ಲದೇ ಮನೆಗೆ ನುಗ್ಗಿದಳು ಎಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅದು ತನ್ನ ಮಗಳು ಎಂದು ತಿಳಿದು ತಂದೆ ಫುಲ್ ಶಾಕ್ ಆಗಿದ್ದಾರೆ. ತಕ್ಷಣ ಜಾನೆ ಹೇರ್‍ಸ್ಟನ್ ತಾಯಿ ತುರ್ತು ಸೇವೆಗೆ ಕರೆ ಮಾಡಿದ್ದಾಳೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಸ್ಥಳಕ್ಕೆ ಬಂದ ಆಂಬುಲೆನ್ಸ್ ಮೂಲಕ ಹೇರ್‍ಸ್ಟನ್‍ಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

    ಮಗಳು ಮೃತಪಟ್ಟಿರುವ ಸುದ್ದಿ ತಿಳಿದ ತಕ್ಷಣ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ವರದಿಗಳ ಪ್ರಕಾರ, ಹೇರ್‍ಸ್ಟನ್ ತಮ್ಮ ಮನೆಗೆ ಹೋಗಿದ್ದಾಳೆ. ಈ ವೇಳೆ ಯಾರೋ ಅನುಮತಿ ಇಲ್ಲದೇ ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ತಪ್ಪು ಭಾವಿಸಿದ ತಂದೆ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಇದು ನಮ್ಮ ಮಗಳೇ ಎಂದು ಅರಿತ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದೇ ಹೇರ್‍ಸ್ಟನ್ ಮೃತ ಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!

    ಈ ವರ್ಷ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ದಾಳಿಯಿಂದ ಹಲವು ಜನರು ಮೃತಪಟ್ಟಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಂದೂಕು ಹಿಂಸಾಚಾರ ತೀವ್ರವಾಗಿ ಏರಿದೆ. ಹೀಗಾಗಿ ಬಂದೂಕು ಹೊಂದುವ ಹಕ್ಕುಗಳು ಬೇಕಾ ಎಂಬ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.

  • ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!

    ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!

    ವಾಷಿಂಗ್ಟನ್: ಬುದ್ಧಿ ಚುರುಕಾಗುತ್ತದೆ ಎಂದು ಭಾವಿಸಿ 70 ವರ್ಷದ ವೃದ್ಧನ ಹತ್ಯೆಗೈದು ಆತನ ಮೆದುಳು ಮತ್ತು ಅಂಗಾಂಗಗಳನ್ನು ವ್ಯಕ್ತಿಯೋರ್ವ ಸೇವಿಸುವ ಮೂಲಕ ನರಭಕ್ಷಕನಂತೆ ವಿಕೃತ ಮೆರೆದಿರುವ ಘಟನೆ ಯುರೋಪ್‍ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಡೇವಿಡ್ ಫ್ಲಾಗೆಟ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜೇಮ್ಸ್ ಡೇವಿಡ್ ರಸ್ಸೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೇಮ್ಸ್ ಡೇವಿಡ್ ರಸ್ಸೆಲ್ ಮನೆಯ ಆವರಣದಲ್ಲಿರುವ ವಾಹನದಲ್ಲಿ ಡೇವಿಡ್ ಫ್ಲಾಗೆಟ್ ಶವ ಪತ್ತೆಯಾಗಿದೆ. ಆತನ ಕೈ, ಕಾಲುಗಳನ್ನು ಟೇಪಿನಿಂದ ಕಟ್ಟಲಾಗಿದೆ. ಅಲ್ಲದೆ ಆತನ ದೇಹದ ಹಲವಾರು ಭಾಗಗಳು ನಾಪತ್ತೆಯಾಗಿದೆ.

    ಮೊದಲಿಗೆ ಪೊಲೀಸರೊಂದಿಗೆ ವಾದ ಮಾಡಿದ ಜೇಮ್ಸ್ ಡೇವಿಡ್ ರಸ್ಸೆಲ್ ನಂತರ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಆರೋಪಿ ಮನೆಯನ್ನು ಪರಿಶೀಲಿಸುವ ವೇಳೆ ಮೈಕ್ರೋವೇವ್, ಬೌಲ್, ಡಫಲ್ ಬ್ಯಾಗ್ ಮತ್ತು ಚಾಕುವಿನ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಇದನ್ನೂ ಓದಿ:  ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

    ಈ ಕೃತ್ಯ ಕುರಿತಂತೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ, ಇದು ನಮ್ಮ ಆತ್ಮ ಸಾಕ್ಷಿಗೆ ದಕ್ಕೆಯನ್ನುಂಟು ಮಾಡಿದೆ. ರಸ್ಸೆಲ್‍ನ ಈ ವಿಕೃತ ಕೃತ್ಯ ಇಡಾಹೊ ರಾಜ್ಯದಲ್ಲಿಯೇ ಮೊದಲನೆಯದಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.

    ಆರೋಪಿ ರಸ್ಸೆಲ್ ವೃದ್ಧನ ಮಾಂಸವನ್ನು ತಿನ್ನುವುದರಿಂದ ತನ್ನ ಬುದ್ಧಿಯನ್ನು ಚುರುಕುಗೊಳಿಸಬಹುದು ಎಂದು ಭಾವಿಸಿ ಈ ಭಯಾನಕ ಕೃತ್ಯವೆಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

  • ಖಾಸಗಿ ಜೆಟ್ ಪತನಗೊಂಡು 9 ಮಂದಿ ದುರ್ಮರಣ

    ಖಾಸಗಿ ಜೆಟ್ ಪತನಗೊಂಡು 9 ಮಂದಿ ದುರ್ಮರಣ

    ವಾಷಿಂಗ್ಟನ್: ತುರ್ತು ಲ್ಯಾಂಡಿಗ್ ಸಮಯದಲ್ಲಿ ಖಾಸಗಿ ಜೆಟ್ ಪತನಗೊಂಡ ಘಟನೆ ಸ್ಯಾಂಟೋ ಡೋಮಿಂಗೋದಲ್ಲಿರುವ ಲಾಸ್ ಅಮೆರಿಕಾಸ್ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ.

    ವಿಮಾನ ದುರಂತ ವಿಷಾದಕರ. ಈ ಅಪಘಾತದಲ್ಲಿ ವಿಮಾನದೊಳಗೆ ಇದ್ದಂತಹ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 9 ಜನ ಮೃತಪಟ್ಟಿದ್ದಾರೆ ಎಂದು ಹೆಲಿಡೋಸ ಏವಿಯೇಷನ್ ಗ್ರೂಪ್ ವಿಮಾನಯಾನ ಸಂಸ್ಥೆಯು ತಿಳಿಸಿದೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!

    ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಪ್ಲೋರಿಡಾಗೆ ಹೊರಟ ವಿಮಾನವು ಟೇಕ್ ಆಫ್ ಆದ 15 ನಿಮಿಷದಲ್ಲೇ ತುರ್ತು ಲ್ಯಾಂಡಿಂಗ್ ವೇಳೆಯಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೃತರ ಕುರಿತು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇದನ್ನೂ ಓದಿ: ಸಚಿವರ ಪುತ್ರನ ಆರತಕ್ಷತೆಯಲ್ಲಿ ಬಂದೂಕಿನಿಂದ ಗುಂಡು ಸಿಡಿಸಿ ಸಂಭ್ರಮ

  • ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ

    ವಾಷಿಂಗ್ಟನ್: 2012 ರಲ್ಲಿ ತಾಲಿಬಾನ್ ದಾಳಿಯಿಂದ ಬದುಕುಳಿದ ಮಾನವ ಹಕ್ಕುಗಳ ವಕೀಲೆ ಮಲಾಲಾ ಯೂಸುಫ್ ಝಾಯಿ ಅವರು ವಾಷಿಂಗ್ಟನ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ಹುಡುಗಿಯರು ಮತ್ತು ಮಹಿಳೆಯರಿಗೆ ಯುಎಸ್ ಬೆಂಬಲ ನೀಡುವಂತೆ ವಾದಿಸಿದರು.

    ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆ ಸೇರಿ ಅಫ್ಘಾನ್ ಹುಡುಗಿಯರು ಶಾಲೆಗಳಿಗೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿ ನೀಡುವಂತೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಲಾಲಾ ಅವರು ಯುಎಸ್ ವಿದೇಶಾಂಗ ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

    Afghanistan school

    ಮಲಾಲಾ ಅಫ್ಘಾನ್ ಹುಡುಗಿಯರಿಗೆ ಆಗುತ್ತಿರುವ ಅನ್ಯಾಯ ಕುರಿತು ವಿದೇಶಾಂಗ ಕಾರ್ಯದರ್ಶಿಗೆ ವಿವರಿಸುತ್ತ, ಅಫ್ಘಾನಿಸ್ತಾನ ಈಗ ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವಿಲ್ಲದ ಏಕೈಕ ದೇಶವಾಗಿದೆ. ಹುಡುಗಿಯರು ಶಿಕ್ಷಣ ಕಲಿಯುವುದನ್ನೆ ಅವರು ನಿಷೇಧಿಸಲಾಗಿದೆ ಎಂದು ಅಫ್ಘಾನ್ ಹುಡುಗಿಯವರ ದುಃಖವನ್ನು ತಿಳಿಸಿದರು. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

    ಅಲ್ಲದೇ ಈ ಕುರಿತು 15 ವರ್ಷದ ಸೊಟೊಡಾಹ್ ಎನ್ನುವ ಅಫ್ಘಾನ್ ಹುಡುಗಿ, ಎಲ್ಲ ಹುಡುಗಿಯರು ಸುರಕ್ಷಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಜಗತ್ತನ್ನು ನಾವು ನೋಡಲು ಬಯಸುತ್ತೇವೆ ಎಂದು ಅಧ್ಯಕ್ಷ ಜೋ ಬಿಡೆನ್ ಅವರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದು, ಸಭೆಯಲ್ಲಿ ಆ ಪತ್ರ ಕುರಿತು ಮಲಾಲಾ ಅವರು ಪ್ರಸ್ತುತಪಡಿಸಿದರು.

    ಸೊಟೊಡಾಹ್ ತನ್ನ ಪತ್ರದಲ್ಲಿ, ಹೆಚ್ಚು ಕಾಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಹುಡುಗಿಯರಿಗೆ ಮುಚ್ಚಲ್ಪಟ್ಟಿದ್ದು, ಇದು ಅವರ ಭವಿಷ್ಯಕ್ಕೆ ಮಾರಕವಾಗಿರುತ್ತೆ. ಬಾಲಕಿಯರ ಶಿಕ್ಷಣವು ಶಾಂತಿ ಮತ್ತು ಭದ್ರತೆಯನ್ನು ತರಲು ಪ್ರಬಲ ಸಾಧನವಾಗಿದೆ ಎಂದು ಆ ಹುಡುಗಿ ಬರೆದಿರುವ ಪತ್ರದ ಸಾರವನ್ನು ಮಲಾಲಾ ವಿವರಿಸಿದರು.

    ಹೆಣ್ಣುಮಕ್ಕಳು ಕಲಿಯದಿದ್ದರೆ, ಅಫ್ಘಾನಿಸ್ತಾನವೂ ಸಹ ಬಳಲುತ್ತದೆ. ಅವಳ ಕೆಲಸದಿಂದ, ಅವರ ಪ್ರಯತ್ನಗಳಿಂದ, ನಿಜವಾದ ಬದಲಾವಣೆಯನ್ನು ಮಾಡಲು ಸಾಧ್ಯ ಎಂದು ವಾದಿಸಿದರು. ಇದನ್ನೂ ಓದಿ: ಸೈಬರ್ ವಂಚನೆ ಮಾಡಿದ್ದ ಇಬ್ಬರ ಬಂಧನ

    ತಾಲಿಬಾನ್ ಅಧಿಕಾರವನ್ನು ಸ್ವೀಕರಿಸಿದ ನಂತರ ಅಫ್ಘಾನಿಸ್ತಾನದ ಮಾಧ್ಯಮಿಕ ಶಾಲೆಗಳು ಪುನಃ ತೆರೆಯಲ್ಪಟ್ಟಿದ್ದು, ಪುರುಷರಿಗೆ ಮಾತ್ರ ಕಲಿಸಲು ಅನುಮತಿ ಇದೆ. ಯುನೈಟೆಡ್ ಸ್ಟೇಟ್ಸ್, ಯುಎನ್ ಜೊತೆಗೂಡಿ ಹುಡುಗಿಯರ ಶಿಕ್ಷಣಕ್ಕೆ ಸಾಧ್ಯವಾದಷ್ಟು ಬೇಗ ಹಿಂದಿರುಗಲು ಅನುಮತಿಸುವುದನ್ನು ನೀಡುವಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಭಾವಿಸುತ್ತೇವೆ ಎಂದು ಮಲಾಲಾ ಅವರು ಕಾರ್ಯದರ್ಶಿಯೊಂದಿಗಿನ ಖಾಸಗಿ ಸಭೆಯಲ್ಲಿ ಗಮನಕ್ಕೆ ತಂದರು.

  • ಭಾರತೀಯ ಮೂಲದ ಗಣಿತಜ್ಞನಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ

    ಭಾರತೀಯ ಮೂಲದ ಗಣಿತಜ್ಞನಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ

    ವಾಷಿಂಗ್ಟನ್: ಬಕ್ರ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಖ್ಯಾತ ಪ್ರೊಫೆಸರ್ ಆದ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ್ ಅವರು ಸಿಪ್ರಿಯನ್ ಫೊಯಾಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿ(ಎಎಂಎಸ್) ನಿಂದ ಆಪರೇಟರ್ ಥಿಯರಿಯಲ್ಲಿನ ಉದ್ಘಾಟನಾ ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯನ್ನು ನೀಡಿತ್ತಿದ್ದು, ಈ ಪುರಸ್ಕಾರಕ್ಕೆ ನಿಖಿಲ್ ಅವರನ್ನು ಸೇರಿ ಅವರ ಸಹೋದ್ಯೋಗಿಗಳಾದ ಆಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಎನ್ನುವ ಇತರ ಇಬ್ಬರು ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.

    ಆಡಮ್ ಮಾರ್ಕಸ್ ಸ್ವಿಟ್ಜರ್ಲೆಂಡ್‍ನ ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸಾನ್ನೆ(ಇಪಿಎಫ್‍ಎಲ್) ನಲ್ಲಿ ಸಂಯೋಜಿತ ವಿಶ್ಲೇಷಣೆಯ ಅಧ್ಯಕ್ಷರಾಗಿದ್ದಾರೆ. ಡೇನಿಯಲ್ ಸ್ಪೀಲ್‍ಮ್ಯಾನ್ ಕಂಪ್ಯೂಟರ್ ಸೈನ್ಸ್‍ನ ಸ್ಟರ್ಲಿಂಗ್ ಪ್ರೊಫೆಸರ್, ಅಂಕಿಅಂಶ ಮತ್ತು ಡೇಟಾ ವಿಜ್ಞಾನದ ಪ್ರಾಧ್ಯಾಪಕ ಮತ್ತು ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

    ಮ್ಯಾಟ್ರಿಕ್ಸ್‍ಗಳ ವಿಶಿಷ್ಟವಾದ ಬಹುಪದವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬ ವಿಧಾನಗಳನ್ನು ಪರಿಚಯಿಸಿದ ಮತ್ತು ಅಭಿವೃದ್ಧಿಪಡಿಸಿದ ಹಿನ್ನೆಲೆ ಈ ಮೂವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

    ಬ್ಯಾಟ್ಸನ್‍ನ ಸಹಯೋಗದೊಂದಿಗೆ ಇವರು ಪುನರಾವರ್ತಿತ ಸ್ಪಾರ್ಸಿಫಿಕೇಶನ್ ವಿಧಾನ ಮತ್ತು ಬಹುಪದೋಕ್ತಿಗಳನ್ನು ಇಂಟರ್ಲೇಸಿಂಗ್ ಮಾಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು, ಈ ಇನೋವೇಷನ್ ನಿಂದ ಮ್ಯಾಕ್ಸ್ ನಲ್ಲಿ ಎದುರಾಗುವ ಕಠಿಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಲು ಸಹಾಯ ಮಾಡುತ್ತದೆ.

    ಈ ಕುರಿತು ಮಾತನಾಡಿದ ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿ, ಈ ಆಲೋಚನೆಗಳು ಅನೇಕ ಅಪ್ಲಿಕೇಶನ್‍ಗಳೊಂದಿಗೆ ಪ್ರಬಲ ಟೂಲ್‍ಕಿಟ್ ಅನ್ನು ಒದಗಿಸಿವೆ. ಮುಖ್ಯವಾಗಿ ಈ ಮೂವರು ಕಂಡು ಹಿಡಿದ ಇನೋವೇಷನ್ ನಲ್ಲಿ ಇಂಟರ್‍ಲೇಸಿಂಗ್ ಫ್ಯಾಮಿಲಿ II : ಮಿಶ್ರ ವಿಶಿಷ್ಟವಾದ ಬಹುಪದಗಳು ಮತ್ತು ಕ್ಯಾಡಿಸನ್-ಸಿಂಗರ್ ಸಮಸ್ಯೆ(ಆನಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್, 2015)ಗಳಿಗೆ ಸುಲಭದಲ್ಲಿ ಪರಿಹಾರ ಸಿಗುತ್ತೆ. ಅದು ಅಲ್ಲದೇ ‘ಪೇವಿಂಗ್ ಸಮಸ್ಯೆಯನ್ನು’ ಪರಿಹರಿಸುತ್ತದೆ ಎಂದು ಹೇಳಿದೆ.

    ಈ ಕುರಿತು ಮಾತನಾಡಿದ ಮೂವರು, ಕ್ಯಾಡಿಸನ್-ಸಿಂಗರ್ ಸಮಸ್ಯೆಯ ಪರಿಹಾರಕ್ಕೆ ಕೊಡುಗೆ ನೀಡಿದ ಅನೇಕ ಜನರ ಪರವಾಗಿ ಪುರಸ್ಕಾರವನ್ನು ಸ್ವೀಕರಿಸಲು ಬಯಸುತ್ತೇವೆ. ನಾವು ಕಂಡುಹಿಡಿದ ಈ ಇನೋವೇಷನ್ ಅಮೇಜಾನ್ ಸ್ಟೂರಿಯ ಕೊನೆಯ ಅಧ್ಯಾಯವಾಗಿದೆ. ಈ ಇನೋವೇಷನ್ ಕಠಿಣ ಸಮಸ್ಯೆಯನ್ನು ಪರಿಹಾರಿಸಲು ಸಹಾಯ ಮಾಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

    ಈ ಪ್ರಶಸ್ತಿಯನ್ನು ನಿಖಿಲ್ ಶ್ರೀವಾಸ್ತವ್ ಮತ್ತು ಅವರ ಇತರ ಸಹೋದ್ಯೋಗಿಗಳಿಗೆ ಮುಂದಿನ ವರ್ಷ ಜನವರಿ 5 ರಂದು ನೀಡಲಾಗುತ್ತದೆ. ಅದು ಅಲ್ಲದೇ ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯು ನಿಖಿಲ್ ಶ್ರೀವಾಸ್ತವ್ ಅವರು ಗೆದ್ದ ಮೂರನೇ ಪ್ರಮುಖ ಬಹುಮಾನದಲ್ಲಿ ಒಂದಾಗಿದೆ. ಈ ಹಿಂದೆ ಅವರು ಜಂಟಿಯಾಗಿ 2014 ರಲ್ಲಿ ಜಾರ್ಜ್ ಪಾಲಿಯಾ ಪ್ರಶಸ್ತಿಯನ್ನು, 2021 ರಲ್ಲಿಯೂ ಬಹುಮಾನವನ್ನು ಗೆದ್ದಿದ್ದರು.

  • ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ವಾಷಿಂಗ್ಟನ್/ಚಿಕ್ಕೋಡಿ: ಇತ್ತೀಚಿಗೆ ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು.

    ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಮಗಳಾದ ಡಾ.ಮನಾಲಿ ಮತ್ತು ಅಂಕಿತ್ ಅವರ ಮದುವೆಯ ಸಮಾರಂಭದಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ಇದನ್ನೂ ಓದಿ:  ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ: ಡಾ. ಕೆ. ಸುಧಾಕರ್

    ಕುಶಲೋಪರಿಯಾಗಿ ಟ್ರಂಪ್ ಅವರೊಂದಿಗೆ ಮಾತನಾಡಿದ ಕೋರೆ ಅವರು, ಪ್ರಸ್ತುತ ಜಾಗತಿಕ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಕುರಿತು ವಿಚಾರಗಳನ್ನು ಹಂಚಿಕೊಂಡರು. ಟ್ರಂಪ್ ಭೇಟಿಗೆ ಕೋರೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರವಿಶಂಕರ್ ಭೂಪಲಾಪೂರ್ ಅವರು ಜೊತೆಗಿದ್ದರು.