Tag: Washington

  • ದತ್ತುಪುತ್ರಿಯೊಂದಿಗೆ ರಹಸ್ಯ ಮಗು ಹೊಂದಿದ್ದ 76 ವರ್ಷದ ಎಲಾನ್ ಮಸ್ಕ್ ತಂದೆ

    ದತ್ತುಪುತ್ರಿಯೊಂದಿಗೆ ರಹಸ್ಯ ಮಗು ಹೊಂದಿದ್ದ 76 ವರ್ಷದ ಎಲಾನ್ ಮಸ್ಕ್ ತಂದೆ

    ವಾಷಿಂಗ್ಟನ್: ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರ 76 ವರ್ಷದ ತಂದೆ ತನ್ನ ದತ್ತುಪುತ್ರಿಯೊಂದಿಗೆ ಮಗು ಹೊಂದಿದ್ದ ರಹಸ್ಯ ಇದೀಗ ಬಯಲಾಗಿದೆ.

    ಕಳೆದ ಮೂರು ವರ್ಷಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದು, 35 ವರ್ಷದ ದತ್ತುಪುತ್ರಿ ಜಾನಾ ಬೆಜುಡೆನ್‌ಹೌಟ್‌ನೊಂದಿಗೆ ರಹಸ್ಯವಾಗಿ 2ನೇ ಮಗು ಹೊಂದಿರುವ ಮಾಹಿತಿ ಬಹಿರಂಗವಾಗಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎರೋಲ್ ಮಸ್ಕ್ ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿ ರಕ್ಷಣೆಗೆ ಶಿಕ್ಷಣ ಇಲಾಖೆಯಿಂದ ವಿಶೇಷ ಅಭಿಯಾನ

    76 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಎಂಜಿನಿಯರ್ ಆಗಿರುವ ಮಸ್ಕ್, ನಾವು ಭೂಮಿಯ ಮೇಲಿರುವುದಕ್ಕೆ ಏಕೈಕ ಕಾರಣವೇ ಸಂತಾನೋತ್ಪತ್ತಿ ಮಾಡುವುದು ಎಂದಿದ್ದಾರೆ. ಜಾನಾ ಬೆಝುಯಿಡೆನ್‌ಹೌಟ್ ಎರೋಲ್ ಅವರ 2ನೇ ಪತ್ನಿ ಹೈಡೆ ಬೆಜುಡೆನ್ ಹೌಟ್ ಅವರ ಮಗಳು. 1979 ರಲ್ಲಿ ಎರೋಲ್ ಅವರ ತಾಯಿ ಮಾಯೆ ಹಾಲ್ಡೆಮನ್ ಮಸ್ಕ್ ಅವರೊಂದಿಗೆ ಬೇರ್ಪಟ್ಟ ನಂತರ ವಿವಾಹವಾದರು.

    ಎರೋಲ್ ಮತ್ತು ಹೈಡೆ ಒಟ್ಟಿಗೇ ಇಬ್ಬರು ಸ್ವಂತ ಮಕ್ಕಳನ್ನು ಹೊಂದಿದ್ದರು. ಆದರೆ ಅವರು ಜಾನಾ 4 ವರ್ಷ ವಯಸ್ಸಿನವರಾಗಿದ್ದಾಗ ಅವರು ದತ್ತು ಪೋಷಕರೆಂಬುದು ಗೊತ್ತಾಗಿದೆ. ಎರೋಲ್ ಮತ್ತು ಹೈಡ್ ಅಂತಿಮವಾಗಿ 18 ವರ್ಷಗಳ ನಂತರ ವಿಚ್ಛೇದನ ಪಡೆದರು. ಆದರೆ ಇದು ಪ್ರಾಯೋಗಿಕವಾಗಿಲ್ಲ. ನಾನು ಇನ್ನೂ ಸುತ್ತಮುತ್ತಲಿದ್ದರೆ ಅವಳು ನನ್ನೊಂದಿಗೆ ಹಿಂದಿರುಗಬಹುದೂ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: 8 ವರ್ಷಗಳಿಂದ ಲಿವಿಂಗ್ ರಿಲೇಷನ್, 14 ಬಾರಿ ಗರ್ಭಪಾತ – ಮಹಿಳೆ ಆತ್ಮಹತ್ಯೆ, ಟೆಕ್ಕಿ ವಿರುದ್ಧ FIR

    2017ರಲ್ಲಿ ಜನಾ ಅವರಿಗೆ ಮೊದಲ ಮಗುವಿನ ಗರ್ಭಧಾರಣೆ ಆಯಿತು. ಆದರೆ ಇದು ಇಡೀ ಮಸ್ಕ್ ಕುಡುಂಬವನ್ನೇ ಆಘಾತಗೊಳಿಸಿತು. ಎಲಾನ್ ಮಸ್ಕ್ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಎರೋಲ್ ಹೇಳಿಕೊಂಡಿದ್ದಾರೆ. ಈ ಕುರಿತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಮತ್ತೆ ಶೂಟೌಟ್ – ಪೊಲೀಸ್ ಸೇರಿದಂತೆ ಹಲವರಿಗೆ ಗಾಯ

    ಅಮೆರಿಕದಲ್ಲಿ ಮತ್ತೆ ಶೂಟೌಟ್ – ಪೊಲೀಸ್ ಸೇರಿದಂತೆ ಹಲವರಿಗೆ ಗಾಯ

    ವಾಷಿಂಗ್ಟನ್: ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿ ಗುಂಡಿನ ದಾಳಿಗಳು ಸುದ್ದಿಯಾಗುತ್ತಲೇ ಇದ್ದು ಸೋಮವಾರ ಮತ್ತೆ ಸದ್ದು ಕೇಳಿಬಂದಿದೆ.

    ಅಮೆರಿಕ ರಾಜಧಾನಿ ವಾಷಿಂಗ್ಟನ್‌ನ ಡಿಸಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಹಲವು ಜನರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

    ಯು ಸ್ಟ್ರೀಟ್‌ನ ಮೊಚೆಲ್ಲಾ ಸಂಗೀತ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಈ ಪ್ರದೇಶ ಶ್ವೇತಭವನದಿಂದ ಕೇವಲ 2 ಮೈಲಿ ದೂರವಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಘಟನೆ ನಡೆದ ಪ್ರದೇಶದಲ್ಲಿ ಜನರು ಓಡಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್

    ಅಮೆರಿಕದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿಗೆ ಕಡಿವಾಣ ಹಾಕಲು ಬಂದೂಕಿನ ಪರವಾನಗಿ ನೀಡುವ ವಯಸ್ಸಿನ ಮಿತಿಯನ್ನು ಹೆಚ್ಚಿಸಿದೆ. ಮಕ್ಕಳು ಹಾಗೂ ಕುಟುಂಬಗಳನ್ನು ರಕ್ಷಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಂದೂಕು ಕೊಳ್ಳುವವರ ವಯಸ್ಸಿನ ಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಇನ್ನೂ ಪತ್ತೆಯಾಗದ `ದಿ ಪಾರ್ಕ್’ ಡ್ರಗ್ ಮೂಲ – 40 ಫಾರಿನ್ ಮಾಡೆಲ್‍ಗಳಿಗೆ ಪೊಲೀಸ್ ನೋಟಿಸ್

    ಕಳೆದ ತಿಂಗಳ ಆರಂಭದಲ್ಲಿ ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 19 ಮಕ್ಕಳು ಸೇರಿದಂತೆ ಹಲವು ಜನ ಸಾವನ್ನಪ್ಪಿದ್ದರು.

    Live Tv

  • ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ವಾಷಿಂಗ್ಟನ್: ರಷ್ಯಾ ಸೈನಿಕರ ವಿರುದ್ಧ ಸ್ವಯಂಸೇವಕ ಹೋರಾಟಗಾರರಾಗಿ ಉಕ್ರೇನ್‍ಗೆ ಹೋಗಿದ್ದ ಇಬ್ಬರು ಯುಎಸ್ ಪ್ರಜೆಗಳು ಒಂದು ವಾರದಿಂದ ನಾಪತ್ತೆಯಾಗಿದ್ದಾರೆ.

    ಅಲಬಾಮಾದ ಟಸ್ಕಲೂಸಾದ ಅಲೆಕ್ಸಾಂಡರ್ ಡ್ರೂಕ್(39) ಮತ್ತು ಅಲಬಾಮಾದ ಹಾಟ್ರ್ಸೆಲ್ಲೆಯ ಆಂಡಿ ಹುಯ್ನ್(27) ನಾಪತ್ತೆಯಾಗಿರುವ ಯುಎಸ್ ಪ್ರಜೆಗಳು. ಇವರಿಬ್ಬರು ಜೂನ್ 8 ರಂದು ತಮ್ಮ ಕುಟುಂಬಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದು, ಇಲ್ಲಿವರೆಗೂ ಅವರ ಕುರಿತು ಯಾವುದೇ ಅಪ್ಡೇಟ್‍ಗಳು ತಿಳಿದುಬಂದಿಲ್ಲ. ಅಲ್ಲದೇ ಅವರು ಪೂರ್ವ ಉಕ್ರೇನ್‍ನ ಖಾರ್ಕಿವ್ ಪ್ರದೇಶದಿಂದ ಹಿಂತಿರುಗಿಲ್ಲ ಎಂಬುದು ಕುಟುಂಬಗಳಿಗೆ ತಿಳಿದುಬಂದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು 

    ಈ ಹಿನ್ನೆಲೆ ಯುಎಸ್ ಯೋಧರ ಕುಟುಂಬದವರು ಅವರಿಬ್ಬರನ್ನು ರಷ್ಯಾ ಸೇನೆ ಸೆರೆ ಹಿಡಿದಿದೆ ಎಂದು ಆರೋಪಿಸುತ್ತಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಅವರು, ಒಂದು ವೇಳೆ ರಷ್ಯಾದವರು ನಮ್ಮ ಪ್ರಜೆಗಳನ್ನು ಖೈದಿಗಳನ್ನಾಗಿ ಮಾಡಿಕೊಂಡಿದ್ರೆ, ನಾವು ಅವರನ್ನು ಮರಳಿ ಪಡೆಯಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

    ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಈ ಕುರಿತು ಮಾತನಾಡಿದ್ದು, ಈ ಕುರಿತು ಯಾವುದೇ ರೀತಿಯ ವರದಿಗಳು ಇಲ್ಲಿವರೆಗೂ ಸಿಕ್ಕಿಲ್ಲ. ಅವರ ಬಗ್ಗೆ ನಮಗೆ ದೃಢವಾಗಿ ಏನೂ ತಿಳಿದಿಲ್ಲ. ಆದರೆ ಅವರಿಬ್ಬರನ್ನು ಎಲ್ಲ ಕಡೆ ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ರಷ್ಯಾದ ರಕ್ಷಣಾ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಅಲ್ಲದೇ ರಷ್ಯಾದ ಅಧ್ಯಕ್ಷ ಪುಟಿನ್ ಫೆ.24 ರಂದು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶಿಸಿದ್ದರು. ನಂತರ ಅವರ ಸೇನೆ ಯಾರನ್ನು ಕೈದಿಗಳಾಗಿ ಮಾಡಿಕೊಂಡಿಲ್ಲ. ಒಂದು ವೇಳೆ ಅವರು ಕೈದಿಗಳಾಗಿ ತೆಗೆದುಕೊಂಡಿದ್ರೆ ಅದರಲ್ಲಿ ಯುಎಸ್ ಪ್ರಜೆಗಳೇ ಮೊದಲಿಗರು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಕಳೆದ ವಾರ, ಉಕ್ರೇನ್‍ಗಾಗಿ ಹೋರಾಡುತ್ತಿರುವಾಗ ಸಿಕ್ಕಿಬಿದ್ದ ಇಬ್ಬರು ಬ್ರಿಟಿಷ್ ನಾಗರಿಕರಿಗೆ ಪ್ರತ್ಯೇಕತಾವಾದಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

    Live Tv

  • ಇದಕ್ಕಿಂತ ಮೊದಲು ನಿಜವಾದ ಪ್ರೀತಿ ಅನುಭವಿಸಿಲ್ಲ – ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ

    ಇದಕ್ಕಿಂತ ಮೊದಲು ನಿಜವಾದ ಪ್ರೀತಿ ಅನುಭವಿಸಿಲ್ಲ – ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ

    ವಾಷಿಂಗ್ಟನ್: ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು, ಕಾರಿನಲ್ಲಿ ಸುತ್ತುವುದು ಎಲ್ಲ ಮನುಷ್ಯರಿಗೂ ಇರುವ ಸಾಮಾನ್ಯ ಆಸೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು. ಇದಕ್ಕಿಂತ ಮೊದಲು ನಾನು ನಿಜವಾದ ಪ್ರೀತಿಯನ್ನು ಅನುಭವಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಯುಎಸ್ ಅರ್ಕಾನಸ್ ಮೂಲದ ನಥಾನಿಯಲ್ ವ್ಯಕ್ತಿ ಕಾರಿನ ಜೊತೆ ಸಂಬಂಧ ಹೊಂದಿದ್ದಾನೆ. ಕಾರಿನ ದಾಸನಾಗಿರುವ ನಥಾನಿಯಲ್ ಅದರ ಜೊತೆಯೇ ಸಂಸಾರದ ಸುಖವನ್ನು ಅನುಭವಿಸುತ್ತಿದ್ದಾನೆ. ಏನಿದು ಇದು ನಿಜನಾ ಎಂದು ಹುಬ್ಬೇರಿಸುತ್ತೀರಾ. ಹೌದು ಇದು ನಿಜ. ಇದನ್ನೂ ಓದಿ:  ಕೆರೆಯಲ್ಲಿ ತೇಲಿಬಂದ ಸೂಟ್‍ಕೇಸ್ – ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

    ಡಾಕ್ಯುಮೆಂಟರಿಯಲ್ಲಿ ಪ್ರಸಾರ
    ‘ಮೈ ಸ್ಟ್ರೇಂಜ್ ಅಡಿಕ್ಷನ್’ ಟಿಎಲ್‍ಸಿ ಡಾಕ್ಯುಮೆಂಟರಿ ಸರಣಿಯ ಆಬ್ಬೆಕ್ಟೋಫಿಲಿಯಾ ಎಪಿಸೋಡ್‍ನಲ್ಲಿ ಈ ವಿಷಯವನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ನಥಾನಿಯಲ್ ತನ್ನ ಕಾರಿನ ಜೊತೆ ರೊಮ್ಯಾಂಟಕ್ ಸಂಬಂಧ ಹೊಂದಿರುವುದು ಪ್ರಸಾರವಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದೆ.

    ಆಬ್ಬೆಕ್ಟೋಫಿಲಿಯಾ ಎಂದರೆ ಇದರರ್ಥ ಜನರಿಗೆ ಯಾವ ವಸ್ತು ಜೊತೆ ಹೆಚ್ಚು ಭಾವನೆ ಹೊಂದಿರುತ್ತಾರೆ ಅಥವಾ ಲೈಂಗಿಕ ಸಂಬಂಧ ಹೊಂದಿರುವುದೇ ಆಗಿದೆ. ಅದೇ ರೀತಿ ನಥಾನಿಯಲ್ ಕೂಡ ತನ್ನ ಕಾರಿನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅನೇಕ ಜನರು ಈ ಗೀಳನ್ನು ಹೊಂದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ನಥಾನಿಯಲ್, 2005ರಲ್ಲಿ ಚೇಸ್‍ನನ್ನು(ಕಾರು) ಡೀಲರ್ ಬಳಿ ನೋಡಿದ ಮೇಲೆ ನೋಡಿದಾಗ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಬಳಿಕ ಅದನ್ನು ಖರೀದಿಸಿ ಬಳಸಲು ಆರಂಭಿಸಿದ ಸ್ವಲ್ಪದಿನಗಳಲ್ಲಿ ಪ್ರೀತಿ ಹೆಚ್ಚಾಗಿ ರೊಮ್ಯಾಂಟಿಕ್ ಸಂಬಂಧಕ್ಕೆ ತಿರುಗಿತು. ಕೆಲವೊಮ್ಮೆ ದೈಹಿಕ ಸಂಬಂಧ ಸಹ ನಮ್ಮಿಬ್ಬರ ನಡುವೆ ಇರಲಿದೆ. ನಾನು ನನ್ನ ಕಾರಿನ ಜೊತೆ ಗಾಢವಾದ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು 

    ಹಾಡನ್ನು ಹೇಳುತ್ತಾ ಸಂಭೋಗ
    ನಥಾನಿಯಲ್‍ಗೆ ಸಂಬಂಧಿಸಿದ ಡಾಕ್ಯುಮೆಂಟರಿಯಲ್ಲಿ 1998ರ ಸರಣಿಯ ಛವೆ ಮೊಂಟೆ ಕಾರ್ಲೋ ಕಾರಿನ ಜೊತೆ ನಥಾನಿಯಲ್ ಹೇಗೆ ಸಂಬಂಧ ಹೊಂದಿದ್ದ ಎಂದು ವಿವರಿಸಲಾಗಿದೆ. ತನ್ನ ಕಾರಿನ ಜೊತೆಗೆ ಟೆಲಿಪತಿ ಸಂವಹನ ಹೊಂದಿದ್ದ ಈತ, ಹಾಡನ್ನು ಹೇಳುತ್ತಾ ಅದರ ಜೊತೆಗೆ ಲೈಂಗಿಕ ಸಂಭೋಗ ನಡೆಸುತ್ತಿದ್ದ ಎಂಬುದನ್ನು ತಿಳಿಸಲಾಗಿದೆ.

  • ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ವಾಷಿಂಗ್ಟನ್: ಇದೇ ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮಾತನಾಡಲಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಸಿಬ್ಬಂದಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ. ಈ ಸಭೆಯನ್ನು ಗುರುವಾರ ನಿಗದಿಪಡಿಸಲಾಗಿದೆ. ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ನೇರವಾಗಿ ಮಾತನಾಡುತ್ತಾರೆ. ಟ್ವಿಟ್ಟರ್ ವಕ್ತಾರರು ಮಸ್ಕ್ ಅವರು ಈ ವಾರ ಕಂಪನಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

    ಟ್ವಿಟ್ಟರ್ ತಿಂಗಳ ಆರಂಭದಲ್ಲಿ ಮಸ್ಕ್, ನಾನು ಬಯಸಿದ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಡೇಟಾವನ್ನು ಒದಗಿಸಲು ವಿಫಲವಾದಲ್ಲಿ ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ರದ್ದು ಮಾಡುತ್ತೇನೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಉದ್ಯೋಗಿಗಳ ಜೊತೆಗಿನ ಮಾತುಕತೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

  • ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ – ದುಷ್ಕರ್ಮಿ ಗುಂಡಿಗೆ ಮೂವರು ಬಲಿ

    ವಾಷಿಂಗ್ಟನ್: ಅಮೇರಿಕಾದ ಉತ್ತರ ಮೇರಿಲ್ಯಾಂಡ್‍ನ ಕಾರ್ಖಾನೆಯೊಂದರಲ್ಲಿ ಬಂದೂಕುಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾಗ ಬಂದೂಕುಧಾರಿಯನ್ನು ತಕ್ಷಣಕ್ಕೆ ಗುರುತಿಸಲಾಗಲಿಲ್ಲ. ಆದರೆ ನಂತರ ಗುಂಡೇಟಿನಿಂದ ಗಾಯಗೊಂಡ ದುಷ್ಕರ್ಮಿ ಹಾಗೂ ಸೈನಿಕರೊಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಈ ಘಟನೆಯ ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ಬೆದರಿಕೆಗಳನ್ನು ಕೂಡ ಹಾಕಲಾಗಿರಲಿಲ್ಲ. ಸದ್ಯ ದಾಳಿ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಬಂದೂಕುಧಾರಿ ಸೈನಿಕರೊಬ್ಬರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

    crime

    ಈ ಕಾರ್ಖಾನೆಯು ಸುಮಾರು 100ಕ್ಕೂ ಹೆಚ್ಚು ದೇಶಗಳಿಗೆ ಕಾಂಕ್ರೀಟ್ ಉತ್ಪಾದನಾ ಸಾಧನಗಳನ್ನು ಪೂರೈಸುತ್ತದೆ. ಸದ್ಯ ಘಟನೆ ವೇಳೆ ಎಷ್ಟು ಮಂದಿ ಉದ್ಯೋಗಿಗಳಿದ್ದರು ಎಂಬ ಮಾಹಿತಿಯನ್ನು ಕಲೆಹಾಕುತ್ತಿದ್ದು, ಇದೀಗ ಈ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

  • ಜೂನ್ 21 ರಿಂದ 5 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ

    ಜೂನ್ 21 ರಿಂದ 5 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ

    ವಾಷಿಂಗ್ಟನ್: ವಿಶ್ವದಾದ್ಯಂತ ಕೋವಿಡ್ ಹೆಚ್ಚಳವಾಗುತ್ತಿದೆ. ಇದರಿಂದ ಆಯಾ ದೇಶಗಳು ಕೋವಿಡ್ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಹಾಗೂ ಐಸಿಯು ಘಟಕಗಳನ್ನು ಸಿದ್ಧಪಡಿಸಿವೆ.

    CHILDRENS COVID

    ಅಮೆರಿಕದಲ್ಲೂ ಕೆಲ ದಿನಗಳಿಂದ ಕೋವಿಡ್ ಕೇಸ್ ಹೆಚ್ಚಳವಾಗುತ್ತಿದ್ದು, ಮಕ್ಕಳ ಮೇಲೆ ನಿಗಾ ಇರಿಸಲಾಗಿದೆ. ಅದಕ್ಕಾಗಿ ಜೂನ್ 21 ರಿಂದ 5 ವರ್ಷದ ಮಳಿಗೂ ಕೊರೊನಾ ಲಸಿಕೆ ನೀಡಲು ಅಮೆರಿಕದ ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: 140 ಪ್ರಯಾಣಿಕರ ಜೀವ ಉಳಿಸಿ ತಾನೇ ಪ್ರಾಣ ಬಿಟ್ಟ ಹೈಸ್ಪೀಡ್ ಬುಲೆಟ್ ಟ್ರೈನ್ ಚಾಲಕ

    ಇದಕ್ಕಾಗಿ ಜೂನ್ 15ರಂದೇ ಸ್ವತಂತ್ರ ತಜ್ಞರ ಸಮಿತಿಯು ಮಕ್ಕಳ ದತ್ತಾಂಶವನ್ನು ಕಲೆ ಹಾಕಲು ಸಭೆ ನಡೆಸಲಿದೆ. ಇದನ್ನೂ ಓದಿ: ಸೇನೆಯಲ್ಲಿ 4 ವರ್ಷ ಮಾತ್ರ ಸೇವೆ – ಶೀಘ್ರವೇ ಅಗ್ನಿಪಥ್‌ಗೆ ಅನುಮೋದನೆ

    COVID HIKE

    ಈ ಕುರಿತು ಮಾಹಿತಿ ನೀಡಿರುವ ಶ್ವೇತಭವನದ ಕೋವಿಡ್ ಪ್ರತಿಕ್ರಿಯೆ ಸಂಯೋಜಕ ಡಾ.ಆಶಿಶ್ ಝಾ, ಬೈಡನ್ ನೇತೃತ್ವದ ಸರ್ಕಾರವು 10 ಮಿಲಿಯನ್ (ದಶಲಕ್ಷ) ನಷ್ಟು ಫಿಜರ್ ಮತ್ತು ಮೊಡೆರ್ನಾ ಲಸಿಕೆಗಳನ್ನು ರಾಜ್ಯಗಳ ಔಷಧಾಲಯಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಲಭ್ಯವಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದ ನಂತರ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • ಗುಂಡಿನ ದಾಳಿಗೆ 21 ಬಲಿ ಪ್ರಕರಣದ ಬೆನ್ನಲ್ಲೇ ರೈಫಲ್ ಹಿಡಿದು ಕಾಣಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ

    ಗುಂಡಿನ ದಾಳಿಗೆ 21 ಬಲಿ ಪ್ರಕರಣದ ಬೆನ್ನಲ್ಲೇ ರೈಫಲ್ ಹಿಡಿದು ಕಾಣಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ

    ವಾಷಿಂಗ್ಟನ್: ನಿನ್ನೆ ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿ ವಿದ್ಯಾರ್ಥಿ ಶೂಟೌಟ್ ನಡೆಸಿ ತಾನೂ ಮೃತಪಟ್ಟಿದ್ದ. ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಬಲಿ ಆಗಿದ್ದರು. ಇದು ನಡೆದ ಮಾರನೇ ದಿನವೇ ಅದೇ ಶಾಲೆಯ ಮುಂದೆ ಮತ್ತೊಬ್ಬ ವಿದ್ಯಾರ್ಥಿ ರೈಫಲ್‍ನೊಂದಿಗೆ ಕಾಣಿಸಿಕೊಂಡು ಭೀತಿ ಮೂಡಿಸಿದ ಘಟನೆ ನಡೆದಿದೆ.

    ರೈಫಲ್ ಹಿಡಿದು ನಿಂತಿದ್ದ ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ.

    ನಿನ್ನೆ ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಸಾಮೂಹಿಕ ಶೂಟೌಟ್ ನಡೆದಿತ್ತು. ಘಟನೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಶೂಟೌಟ್ ನಡೆಸಿದ ದಾಳಿಕೋರನನ್ನು ಪೋಲಿಸರು ಕೂಡ ಹತ್ಯೆಗೈದಿದ್ದರು. ಇದನ್ನೂ ಓದಿ: ಶೂಟೌಟ್‍ಗೂ ಮೊದಲೇ ಇನ್‍ಸ್ಟಾಗ್ರಾಮ್‍ನಲ್ಲಿ ಗನ್‍ಗಳ ಚಿತ್ರ ಪೋಸ್ಟ್ ಮಾಡಿದ್ದ ಆರೋಪಿ

    2012ರಲ್ಲಿ ಕನೆಕ್ಟಿಕಟ್‍ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಭೀಕರ ದಾಳಿ ಇದು ಎಂದು ಇಂಟರ್‍ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಈ ಹಿಂದೆ ಅಮೆರಿಕಾದಲ್ಲಿ ಬಂದೂಕುಧಾರಿಯೊಬ್ಬ ಚಿಕಾಗೋ ಪ್ರದೇಶದಲ್ಲಿ ದಾರಿಹೋಕರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಕೊಂದಿದ್ದ.

    ಉವಾಲ್ಡೆಯ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ಶೂಟರ್, ಸಾಲ್ವಡಾರ್ ರಾಮೋಸ್ (18) ಏರ್-15 ಬಂದೂಕನ್ನು ಬಳಸಿದ್ದಾನೆ ಎಂದು ಗವರ್ನರ್ ಗ್ರೆಗ್ ಅಬ್ಬೋಟ್ ತಿಳಿಸಿದ್ದಾರೆ.

  • ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ

    ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ

    ವಾಷಿಂಗ್ಟನ್: ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ಯುಎಸ್ ತಾಯಿಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರೆ.

    ಯುನೈಟೆಡ್ ಸ್ಟೇಟ್‌ನಲ್ಲಿ ಬೇಬಿ ಫಾರ್ಮುಲಾ ಕೊರತೆ ಹೆಚ್ಚಾಗುತ್ತಿದೆ. ಈ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಹಿನ್ನೆಲೆ ಯುಎಸ್ ಉತಾಹ್ ತಾಯಿಯು ತನ್ನ 118 ಲೀಟರ್‌ಗಿಂತಲೂ ಹೆಚ್ಚು ಎದೆ ಹಾಲನ್ನು ಅಗತ್ಯವಿರುವವರಿಗೆ ಮಾರಾಟ ಮಾಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಂಭ್ರಮದ ಮನೆ ಈಗ ಸ್ಮಶಾನ ಮೌನ – ಗೆಳೆಯ ಎಂದು ಕರೆ ಮಾಡಿ ಚಾಕು ಇರಿದ 

    US Mother Selling 118 Litres Of Her Breast Milk To Help Families Amid Baby Formula Shortage

    ಈ ಕುರಿತು ತಾಯಿ ಅಲಿಸ್ಸಾ ಚಿಟ್ಟಿ ಮಾತನಾಡಿದ್ದು, ಎದೆಹಾಲು ತುಂಬಿರುವ ಮೂರಕ್ಕಿಂತ ಹೆಚ್ಚು ಫ್ರೀಜ್‍ಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು. ನಾನು ಮನೆಯಿಂದ ಯಾವಾಗಲೂ ಹೊರಗೆ ಇರಲು ಬಯಸುತ್ತೇನೆ. ಇದರಿಂದ ಬೇರೆಯವರಿಗೆ ಸಹಾಯ ಮಾಡಬಹುದು ಎಂದು ತಿಳಿದುಕೊಂಡಿದ್ದೇನೆ. ನನ್ನ ಬಳಿ 3,000 ಔನ್ಸ್‌ಗಳಿವೆ ಎಂದು ನನಗೆ ತಿಳಿದಿದೆ ಎಂದರು.

    ಮೊದಲಿಗೆ, ಚಿಟ್ಟಿ ಹಾಲಿನ ಬ್ಯಾಂಕ್‍ಗೆ ದೇಣಿಗೆ ನೀಡಲು ಪ್ರಯತ್ನಿಸಿದರು. ಅವರ ಸುದೀರ್ಘ ಪ್ರಯತ್ನದಿಂದ ತಮ್ಮ ಎದೆಹಾಲಿನ ಬೆಲೆಯನ್ನು ಒಂದು ಔನ್ಸ್‌ ಗೆ 1 ಡಾಲರ್(77.48) ನಿಗದಿಪಡಿಸಿದರು. ಅಲ್ಲದೇ ದೇಶದಲ್ಲಿ ಬೇಬಿ ಫಾರ್ಮುಲಾ ಕೊರತೆಯ ಬಗ್ಗೆ ನಮ್ಮ ಮನೆಯವರಿಗೆ ತಿಳಿಸುವುದು ಮತ್ತು ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧ ನಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ಏನೂ ಪ್ರಯೋಜನವಿಲ್ಲ: ಬಿಜೆಪಿ

    ನನಗೆ ಗೊತ್ತು, ಬಹಳಷ್ಟು ತಾಯಂದಿರಿಗೆ ಹಾಲಿನ ತೊಂದರೆ ಇರುವುದರಿಂದ ಮಕ್ಕಳಿಗೆ ಯಾವುದೇ ನಿರ್ದಿಷ್ಟ ಪೋಷಕಾಂಶ ಸಿಗುವುದಿಲ್ಲ. ಇದು ಎಷ್ಟು ಕಷ್ಟವಾಗಬಹುದು ಎಂದು ನನಗೆ ತಿಳಿದಿದೆ. ಈ ಬಗ್ಗೆ ಯಾರಿಗೂ ತಿಳಿಯುವುದಿಲ್ಲ ಎಂದು ತಿಳಿಸಿದರು.

  • ಮದುವೆ ನಂತ್ರ ವಧು, ವರನ ಬೆಂಕಿ ಎಕ್ಸಿಟ್ – ವೀಡಿಯೋ ವೈರಲ್

    ಮದುವೆ ನಂತ್ರ ವಧು, ವರನ ಬೆಂಕಿ ಎಕ್ಸಿಟ್ – ವೀಡಿಯೋ ವೈರಲ್

    ವಾಷಿಂಗ್ಟನ್: ಪ್ರತಿಯೊಬ್ಬರೂ ತಮ್ಮ ಮದುವೆಯು ತಮ್ಮ ಜೀವನದಲ್ಲಿ ಮರೆಯಲಾಗದ ದಿನಗಳಂತಿರಬೇಕು ಅಂತ ಬಯಸುತ್ತಾರೆ. ಕೆಲವರು ತಮ್ಮ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅದ್ದೂರಿ ಪಾರ್ಟಿಗಳನ್ನು ನೀಡುವ ಮೂಲಕ ತಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ ದಂಪತಿ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯಲ್ಲಿ ಭಾರೀ ಸಾಹಸವೊಂದನ್ನುಗೈದು ನೆಟ್ಟಿಗರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದಾರೆ.

    ನವವಿವಾಹಿತ ದಂಪತಿ ಗೇಬ್ ಜೆಸ್ಸಾಪ್ ಮತ್ತು ಆಂಬಿರ್ ಬಾಂಬಿರ್ ದಂಪತಿ ತಮ್ಮ ಮದುವೆಯ ಆರತಕ್ಷತೆಯಿಂದ ನಿರ್ಗಮಿಸುವ ವೇಳೆ ಉದ್ದೇಶಪೂರ್ವಕವಾಗಿ ಕ್ಯಾಮೆರಾ ಮುಂದೆ ಬೆಂಕಿ ಹಚ್ಚಿಕೊಂಡು ತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ. ಇಬ್ಬರು ವೃತ್ತಿಪರ ಹಾಲಿವುಡ್ ಸೆಟ್‍ಗಳಲ್ಲಿ ಸ್ಟಂಟ್ ಕಲಾವಿದರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40

    ಈ ಕುರಿತು ವೀಡಿಯೋವನ್ನು ದಂಪತಿಯ ಛಾಯಾಗ್ರಾಹಕ ರಸ್ ಪೊವೆಲ್, ಅವರು ತಮ್ಮ ಇನ್‍ಸ್ಟಾಗ್ರಾಮ್ ಮತ್ತು ಟಿಕ್‍ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವಧುವು ಬೆಂಕಿ ಹೊತ್ತಿಕೊಂಡಿರುವ ಪುಷ್ಪಗುಚ್ಚವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು. ವಧು ಮತ್ತು ವರನ ಹಿಂಭಾಗದಲ್ಲಿ ಮೊದಲಿಗೆ ಪಟಾಕಿಗಳನ್ನು ಸಿಡಿಸಲಾಗುತ್ತದೆ. ನಂತರ ಇಬ್ಬರೂ ಬೆನ್ನಿಗೆ ಬೆಂಕಿ ಹಚ್ಚಿಕೊಂಡು, ಅತಿಥಿಗಳತ್ತ ಕೈ ಬೀಸುತ್ತಾ, ಓಡಲಾರಂಬಿಸುತ್ತಾರೆ. ಕೊನೆಗೆ ಇಬ್ಬರು ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ಇಬ್ಬರು ವ್ಯಕ್ತಿಗಳು ಬೆಂಕಿಯನ್ನು ನಂದಿಸುತ್ತಾರೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು