Tag: washing machine

  • ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ – ಮೈ ನಡುಗಿಸುವ ವಿಡಿಯೋ ವೈರಲ್‌

    ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ – ಮೈ ನಡುಗಿಸುವ ವಿಡಿಯೋ ವೈರಲ್‌

    ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಡ್ಡ ದೊಡ್ಡ ಕೃತ್ಯ ನಡೆಯುತ್ತಿರುವುದು ಸಹಜವಾಗಿಬಿಟ್ಟಿದೆ. ವಿದೇಶಗಳೂ ಇದರಿಂದ ಹೊರತಾಗಿಲ್ಲ. ಅಮೆರಿಕದ ಡಲ್ಲಾಸ್‌ ನಗರದಲ್ಲಿ (Dallas City) ನಡೆದಿರುವ ಘಟನೆಯೇ ಇದಕ್ಕೆ ನಿದರ್ಶನ.

    ಹೌದು. ಕೇವಲ ಕೆಟ್ಟುಹೋದ ವಾಷಿಂಗ್‌ ಮಿಷನ್‌ (Washing Machine) ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ಮೋಟೆಲ್‌ (US Motel) ಮ್ಯಾನೇಜರ್‌ನ ಶಿರಚ್ಛೇದ ಮಾಡಲಾಗಿದೆ. ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಅನ್ನೋದನ್ನ ಸೂಚಿಸುತ್ತೆ. ಅಂದ್ರೆ ಸರಳವಾದ ಬಜೆಟ್ ಸ್ನೇಹಿ ವಾಸ್ತವ್ಯಕ್ಕೆ ಯೋಗ್ಯವಾದ ಹೋಟೆಲ್‌ ಮಾದರಿಯ ಸ್ಥಳ.

    ಟೆಕ್ಸಾಸ್‌ನ (Texas) ಪ್ರಮುಖ ನಗರವಾದ ಡಲ್ಲಾಸ್‌ ಮೋಟೆಲ್‌ನಲ್ಲಿ ಸಹೋದ್ಯೋಗಿಯೇ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಘಟನೆಯ ನಂತರ ಸಹೋದ್ಯೋಗಿಯನ್ನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಇದನ್ನೂ ಓದಿ: ರೋಗಿ ಜೊತೆ ಸೆಕ್ಸ್ – ಕೆನಡಾದಲ್ಲಿ ಭಾರತ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

    ಮೋಟೆಲ್‌ನಲ್ಲಿ ಏನಾಯ್ತು?
    ಮೋಟೆಲ್‌ ಮ್ಯಾನೇಜರ್‌ ಆಗಿರುವ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50), 37 ವರ್ಷದ ತನ್ನ ಸಹೋದ್ಯೋಗಿ ಕೊಬೋಸ್ ಮಾರ್ಟಿನೆಜ್‌ ಮತ್ತು ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಕೆಟ್ಟುಹೋಗಿರುವ ವಾಷಿಂಗ್‌ ಮಿಷಿನ್‌ ಬಳಸದಂತೆ ಹೇಳಿದ್ದಾರೆ. ಅವರು ನೇರವಾಗಿ ಹೇಳದೇ ಮತ್ತೊಬ್ಬರಿಂದ ಅನುವಾದಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟಕ್ಕೇ ಅಸಮಾಧಾನಗೊಂಡ ಕೊಬೋಸ್ ಮಾರ್ಟಿನೆಜ್ ಅಸಮಾಧಾನಗೊಂಡಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

    ಅಸಮಾಧಾನಗೊಂದ ಕೊಬೋಸ್ ‌ಮಚ್ಚು ತೆಗೆದುಕೊಂಡು ನಾಗಮಲ್ಲಯ್ಯನಿಗೆ ಇರಿದಿದ್ದಾನೆ. ಆಗ ನಾಗಮಲ್ಲಯ್ಯ ಅಲ್ಲಿಂದ ತಪ್ಪಿಸಿಕೊಂಡು ಪಾರ್ಕಿಂಗ್‌ ಮುಂಭಾಗದಲ್ಲಿದ್ದ ಕಚೇರಿ ಕಡೆಗೆ ದೌಡುಕಿತ್ತಿದ್ದಾನೆ. ಈ ವೇಳೆ ಹೆಂಡತಿ ಮತ್ತು ಮಗ ಮಧ್ಯಪ್ರವೇಶಿಸಲು ಓಡಿಹೋಗಿದ್ದಾರೆ. ಆದ್ರೂ ಆತನ ಬೆನ್ನಟ್ಟಿದ್ದ ಕೊಬೋಸ್‌ ನಾಗಮಲ್ಲಯ್ಯನ ಪತ್ನಿ, ಮಗನ ಮುಂದೆಯೇ ಶಿರಚ್ಛೇದ ಮಾಡಿದ್ದಾನೆ. ಬಳಿಕ ಕತ್ತರಿಸಿದ ತಲೆಯನ್ನ ಕಸದ ತೊಟ್ಟಿಗೆ ಎಸೆದಿದ್ದಾನೆ. ಈ ವಿಡಿಯೋ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲೆಯನ್ನು ಕಸದ ತೊಟ್ಟಿಗೆ ಎಸೆದು ರಕ್ತ ಹರಿಯುತ್ತಿದ್ದ ಮಚ್ಚು ಹಿಡಿದು ಒಯ್ಯುವಾಗ ಆತನನ್ನ ಪೊಲೀಸರು ಬಂಧಿಸಿದ್ದಾರೆ.

    ನಾಗಮಲ್ಲಯ್ಯ ಅವರ ದುರಂತ ಸಾವಿಗೆ ಭಾರತೀಯ ಕಾನ್ಸುಲೇಟ್ ಸಂತಾಪ ಸೂಚಿಸಿದೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ. ಈ ಪ್ರಕರಣದ ಮೇಲೆ ಗಂಭೀರವಾಗಿ ನಿಗಾ ಇಡುತ್ತೇವೆ ಎಂದು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್‌

  • ವಾಷಿಂಗ್ ಮಿಷಿನ್‌ ಸರ್ವೀಸ್ ಹೆಸರಲ್ಲಿ ಗ್ರಾಹಕರಿಗೆ ವಂಚನೆ ಆರೋಪ – ಮೂವರು ವಶಕ್ಕೆ

    ವಾಷಿಂಗ್ ಮಿಷಿನ್‌ ಸರ್ವೀಸ್ ಹೆಸರಲ್ಲಿ ಗ್ರಾಹಕರಿಗೆ ವಂಚನೆ ಆರೋಪ – ಮೂವರು ವಶಕ್ಕೆ

    ಚಿಕ್ಕಬಳ್ಳಾಪುರ: ವಾಷಿಂಗ್ ಮಿಷಿನ್‌ (Washing Machine) ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ನಡೆದಿದೆ.

    ಏನಿದು ಪ್ರಕರಣ..?
    ವಿವೇಕಾನಂದ ಎಂಟರ್‌ಪ್ರೆಸಸ್ ಮಾಲೀಕ ಚರಣ್ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಫ್‌ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ ಮನೆಗೆ ಹೋಗುತ್ತಿದ್ದ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬ ಖದೀಮರು ನಾವೇ ಐಎಫ್‌ಬಿ ಕಂಪನಿ ಸೇವಾದಾರರು ಎಂದು ಗ್ರಾಹಕರ ಮನೆಗೆ ತರಳಿ ಯಂತ್ರದಲ್ಲಿರುವ ಅಸಲಿ ಯಂತ್ರಗಳನ್ನು ಕಳಸಿಕೊಂಡು ನಕಲಿ ಮತ್ತು ಕಳಪೆ ವಸ್ತುಗಳನ್ನು ಅದಕ್ಕೆ ಹಾಕಿ ಸಾವಿರಾರು ರೂಪಾಯಿ ಸೇವಾಶುಲ್ಕವಾಗಿ ಪಡೆದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.

    ಈ ಬಗ್ಗೆ ಕಳೆದ 2 ತಿಂಗಳಿಂದ ಪದೇ ಪದೇ ಗ್ರಾಹಕರಿಂದ ದೂರು ಬರುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಐಎಫ್‌ಬಿ ಕಂಪನಿ ಅಧಿಕೃತ ಸೇವಾದಾರ ಚರಣ್ ಖದೀಮರ ಹೆಡೆಮುರಿ ಕಟ್ಟಲು ತೀರ್ಮಾನಿಸಿ ಹೊಂಚುಹಾಕಿದ್ದು ಇವರು ಬೀಸಿದ ಬಲೆಗೆ ಅವರು ಬಿದ್ದಿದ್ದಾರೆ.

    ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಸಮೀಪದ ಮನೆಯೊಂದಕ್ಕೆ ಸೇವೆ ನೀಡುವ ನೆಪದಲ್ಲಿ ಬಂದಿದ್ದ ಖದೀಮರನ್ನು ವಿವೇಕಾನಂದ ಎಂಟರ್‌ಪ್ರೈಸಸ್‌ ಮಾಲೀಕ ಹಾಗೂ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರ ಚರಣ್ ಮತ್ತು ತಂಡ ದಿಢೀರ್ ದಾಳಿ ನಡೆಸಿ 5 ಮಂದಿಯ ಪೈಕಿ ಮೂವರನ್ನು ಪೊಲೀಸರಿಗೆ ಒಪ್ಪಿಸಿ ವಂಚಕರ ಬೃಹತ್ ಜಾಲ ಬೇಧಿಸಲು ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚರಣ್, ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಈ ತಂಡ ಕಳೆದ ಐದಾರು ತಿಂಗಳಿಂದ ಸುಮಾರು 400 ರಿಂದ 500 ಮಂದಿಗೆ ಟೋಪಿ ಹಾಕಿದ್ದಾರೆ. ಯಂತ್ರದ ಕ್ಲೀನಿಂಗ್ ಪೌಂಡರ್ ಬದಲಿಸುತ್ತೇವೆ ಎಂದು ಹೇಳಿ ಉಪ್ಪನ್ನು ತುಂಬಿದ್ದಾರೆ. ಇದರ ಬೆಲೆ 10 ರೂ. ಇದ್ದರೆ 300 ರೂ. ಬಿಲ್ ಮಾಡಿದ್ದಾರೆ. ನೀರಿನ ಫಿಲ್ಟರ್ ಒಂದಕ್ಕೆ ಕಂಪನಿಯಲ್ಲಿ 2,600 ರೂಪಾಯಿ ಇದ್ದರೆ ಇವರು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಕಂಪನಿ ವಸ್ತುಗಳನ್ನು ಲಪಟಾಯಿಸಿ ನಕಲು ವಸ್ತುಗಳನ್ನು ಹಾಕಿ ಯಂತ್ರಗಳು ಹಾಳಾಗುವಂತೆ ಮಾಡಿ ಗ್ರಾಹಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದ್ದಾರೆ. ವಂಚನೆಯೇ ಇವರ ಕಸುಬಾಗಿದ್ದು ಸುಮಾರು 500 ಮಂದಿ ಇರಬಹುದು ಎಂದು ಶಂಕಿಸಲಾಗಿದೆ. ಈಗ ಬಂಧನಕ್ಕೆ ಒಳಗಾಗಿರುವವರನ್ನು ಪೊಲೀಸರು ಬಾಯಿಬಿಡಿಸಿದರೆ ಇವರ ಮೋಸ ಬಯಲಿಗೆ ಬರಲಿದೆ ಎಂದು ತಿಳಿಸಿದರು. ಮೂವರನ್ನ ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ನಗರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

  • ವಾಷಿಂಗ್‌ ಮಷಿನ್‌ನಲ್ಲಿತ್ತು 2.54 ಕೋಟಿ ಹಣ – ಪರಿಶೀಲನೆ ವೇಳೆ ಇ.ಡಿ ಶಾಕ್‌!

    ವಾಷಿಂಗ್‌ ಮಷಿನ್‌ನಲ್ಲಿತ್ತು 2.54 ಕೋಟಿ ಹಣ – ಪರಿಶೀಲನೆ ವೇಳೆ ಇ.ಡಿ ಶಾಕ್‌!

    ನವದೆಹಲಿ: ವಾಷಿಂಗ್‌ ಮಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಕಂತೆ ಕಂತೆ ನೋಟುಗಳನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

    ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ಆರೋಪದಡಿಯಲ್ಲಿ ಹಲವೆಡೆ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ಹರಿಯಾಣದ ಕುರುಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: 2011ರಿಂದ ನಾವು ವೋಟ್‌ ಮಾಡಿಲ್ಲ: ಸಂದೇಶ್‌ಖಾಲಿ ಸಂತ್ರಸ್ತೆ, ಬಿಜೆಪಿ ಅಭ್ಯರ್ಥಿಗೆ ಮೋದಿ ಕರೆ

    ವಿವಿಧ ಕಂಪನಿಗಳ ಕಚೇರಿ ಮತ್ತು ಅವುಗಳ ನಿರ್ದೇಶಕರ ಮನೆಗಳ ಮೇಲೆ ಶೋಧ ನಡೆಸಲಾಯಿತು. ಕಂಪನಿಗಳ ಪಾಲುದಾರರಾದ ವಿಜಯ್ ಕುಮಾರ್ ಶುಕ್ಲಾ, ಸಂಜಯ್ ಗೋಸ್ವಾಮಿ, ಸಂದೀಪ್ ಗಾರ್ಗ್ ಮತ್ತು ವಿನೋದ್ ಕೇಡಿಯಾ ಸೇರಿದಂತೆ ಇತರರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ.

    ಸಿಂಗಾಪುರದ ಗ್ಯಾಲಕ್ಸಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಹಾರಿಜಾನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್‌ಗೆ 1,800 ಕೋಟಿ ರೂ. ಮೊತ್ತದ ಸಂಶಯಾಸ್ಪದ ಬಾಹ್ಯ ಹಣ ರವಾನೆ ಮಾಡಲಾಗಿದೆ ಎಂದು ಕೆಲ ಕಂಪನಿಗಳ ಮೇಲೆ ಆರೋಪ ಕೇಳಿಬಂದಿತ್ತು. ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಈ ಸಾಗರೋತ್ತರ ವಿನಿಮಯ ಘಟಕಗಳನ್ನು ಆಂಥೋನಿ ಡಿ ಸಿಲ್ವಾ ಎಂಬ ವ್ಯಕ್ತಿ ನಿರ್ವಹಿಸುತ್ತಾರೆ. ಕಾಪ್ರಿಕಾರ್ನಿಯನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್, ಲಕ್ಷ್ಮಿಟನ್ ಮ್ಯಾರಿಟೈಮ್ ಮತ್ತು ಅವರ ಸಹವರ್ತಿಗಳು ಬೋಗಸ್ ಸರಕು ಸೇವೆಗಳು ಮತ್ತು ಆಮದುಗಳ ನೆಪದಲ್ಲಿ ಸಿಂಗಾಪುರ ಮೂಲದ ಘಟಕಗಳಿಗೆ 1,800 ಕೋಟಿಗಳಷ್ಟು ಬಾಹ್ಯ ಹಣ ರವಾನೆ ಮಾಡಿದ್ದಾರೆ.

    ಶೋಧದ ವೇಳೆ ವಾಷಿಂಗ್ ಮಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಮೌಲ್ಯದ ಅಪರಿಚಿತ ನಗದು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ದಾಳಿಯ ಸಮಯದಲ್ಲಿ ಆರೋಪಿಗಳ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

  • ಕೋವಿಡ್‌ ಲಸಿಕೆ ಪಡೆಯಿರಿ… ಟಿವಿ, ವಾಷಿಂಗ್‌ ಮಷಿನ್‌, ರೆಫ್ರಿಜರೇಟರ್‌ ಬಹುಮಾನ ಗೆಲ್ಲಿ!

    ಕೋವಿಡ್‌ ಲಸಿಕೆ ಪಡೆಯಿರಿ… ಟಿವಿ, ವಾಷಿಂಗ್‌ ಮಷಿನ್‌, ರೆಫ್ರಿಜರೇಟರ್‌ ಬಹುಮಾನ ಗೆಲ್ಲಿ!

    ಮುಂಬೈ: ಕೋವಿಡ್‌ ನಾನಾ ರೂಪಾಂತರಗಳೊಂದಿಗೆ ಜಾಗತಿಕವಾಗಿ ಆತಂಕ ಮೂಡಿಸಿದೆ. ಕೋವಿಡ್‌ ವಿರುದ್ಧದ ಹೋರಾಟಕ್ಕೆ ಲಸಿಕೆ ಪಡೆಯುವಂತೆ ಸಾಕಷ್ಟು ಅರಿವು ಮೂಡಿಸಿದರು ಎಷ್ಟೋ ಮಂದಿ ಈವರೆಗೂ ಲಸಿಕೆ ಹಾಕಿಸಿಕೊಂಡಿಲ್ಲ. ಇದರಿಂದ ಬೇಸತ್ತಿರುವ ಮಹಾರಾಷ್ಟ್ರದ ಹಿಂಗೋಲಿ ಪುರಸಭೆ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದೆ.

    ಕೋವಿಡ್‌ ಲಸಿಕೆ ಹಾಕಿಸಿಕೊಂಡವರಿಗೆ ಎಲ್‌ಇಡಿ ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ಮೊದಲಾದ ಬಹುಮಾನಗಳನ್ನು ನೀಡಲು ಹಿಂಗೋಲಿ ನಗರಸಭೆ ನಿರ್ಧರಿಸಿದೆ. ಈ ರೀತಿಯ ಬಹುಮಾನಗಳನ್ನು ನೀಡಿದರೆ ಖಂಡಿತ ಜನರು ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ ತೋರಿಸುತ್ತಾರೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲು ಚಂದ್ರಾಪುರ್‌ ನಾಗರಿಕ ಸಂಸ್ಥೆಯು ಇದೇ ರೀತಿಯ ಬಹುಮಾನಗಳನ್ನು ಘೋಷಿಸಿತ್ತು. ಇದನ್ನೂ ಓದಿ: ವಿದ್ಯಾರ್ಥಿಗೆ ಸೋಂಕು – ಶಾಲೆಯ ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟ್

    ಹಿಂಗೋಲಿ ಜಿಲ್ಲೆಯಲ್ಲಿ ಈವರೆಗೆ ಶೇ. 70 ರಷ್ಟು ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಈ ಪೈಕಿ ಶೇ. 56 ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗ ವಿಶ್ವದಲ್ಲಿ ಕೊರೊನಾ ವೈರಸ್‌ ಹೊಸ ರೂಪಾಂತರ ಓಮಿಕ್ರಾನ್‌ ಭೀತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ಹಿಂಗೋಲಿ ಜಿಲ್ಲಾಧಿಕಾರಿ ಜಿತೇಂದ್ರ ಪಾಪಲ್ಕರ್‌ ಅವರು ಅಧಿಕಾರಿಗಳ ತುರ್ತು ಸಭೆ ಕರೆದು, ಜನರು ಲಸಿಕೆ ಪಡೆದುಕೊಳ್ಳುವಂತೆ ಉತ್ತೇಜಿಸಲು ಸೂಕ್ತ ಬಹುಮಾನ ನೀಡುವ ವಿಷಯವನ್ನು ಚರ್ಚಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

    ಈ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿ ಡಾ. ಅಜಯ್‌ ಕುರ್ವಾಡೆ ಅವರು, ಲಕ್ಕಿ ಡ್ರಾ ಆಯೋಜನೆಯ ಉಪಾಯ ಮಾಡಿದ್ದಾರೆ. ಡಿ.27ರಂದು ಲಕ್ಕಿ ಡ್ರಾ ನಡೆಯಲಿದ್ದು, ಡಿ.2ರಿಂದ 24ರ ನಡುವೆ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಟಿಕೆಟ್‌ ಸಿಗಲಿದೆ ಎಂದು ತಿಳಿಸಿದ್ದಾರೆ.

    ಹಿಂಗೋಲಿ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ ದೃಢಪಟ್ಟ 16,059 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 395 ಮಂದಿ ಮೃತಪಟ್ಟಿದ್ದಾರೆ. 15,659 ಮಂದಿ ಗುಣಮುಖರಾಗಿದ್ದಾರೆ.

  • ಕೊರೊನಾ ಭಯ- ನೋಟ್‍ಗಳನ್ನು ವಾಶಿಂಗ್ ಮಶೀನ್‍ಗೆ ಹಾಕಿದ್ರು

    ಕೊರೊನಾ ಭಯ- ನೋಟ್‍ಗಳನ್ನು ವಾಶಿಂಗ್ ಮಶೀನ್‍ಗೆ ಹಾಕಿದ್ರು

    – ನೋಟುಗಳೆಲ್ಲ ಹಾಳು, ಬದಲಾಯಿಸಲು ಬ್ಯಾಂಕ್ ನಕಾರ

    ಸಿಯೋಲ್: ಕೊರೊನಾ ಜನರನ್ನು ಯಾವ ಮಟ್ಟಿಗೆ ಭಯಪಡಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಸೋಂಕು ತಗುಲುವ ಭಯದಲ್ಲಿ ಇಲ್ಲೊಬ್ಬರು ನೋಟುಗಳನ್ನೇ ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ.

    ದಕ್ಷಿಣ ಕೋರಿಯಾದ ಸಿಯೋಲ್‍ನಲ್ಲಿ ವ್ಯಕ್ತಿಯೊಬ್ಬರು ಈ ರೀತಿ ಮಾಡಿದ್ದು, ಅವರು ಪುರುಷನೋ ಮಹಿಳೆಯೋ ಎಂಬುದು ತಿಳಿದು ಬಂದಿಲ್ಲ. ಕೊರೊನಾ ವೈರಸ್ ತಗುಲುವುದರಿಂದ ತಪ್ಪಿಸಿಕೊಳ್ಳಲು 50,000 ವೋನ್(3,137 ರೂಪಾಯಿ)ನ್ನು ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ ಎಂದು ವರದಿಯಾಗಿದೆ.

    ಕುಟುಂಬದವರು ನಿಧನರಾಗಿದ್ದಾಗ ಸಂಬಂಧಿಕರು ಹಾಗೂ ಸ್ನೇಹಿತರು ವ್ಯಕ್ತಿಗೆ ಈ 3,132 ರೂ. ಸಂತಾಪ ಹಣವಾಗಿ ನೀಡಿದ್ದಾರೆ. ಈ ಹಣ ನೀಡಿದವರಲ್ಲಿ ಯಾರಾದರೂ ಕೊರೊನಾ ಸೋಂಕಿತರು ಇದ್ದರೆ, ನನಗೂ ಕೊರೊನಾ ಸೋಂಕು ತಗುಲುತ್ತದೆ ಎಂದು ವಾಶಿಂಗ್ ಮಶೀನ್‍ಗೆ ಹಾಕಿ ತೊಳೆದಿದ್ದಾರೆ. ಆದರೆ ವಾಶಿಂಗ್ ಮಶೀನ್‍ನಲ್ಲಿ ಒಂದು ಬಾರಿ ಸ್ಪಿನ್ ಆಗುತ್ತಿದ್ದಂತೆ ನೋಡುಗಳು ಹಾನಿಯಾಗಿದ್ದು, ಉಪಯೋಗಕ್ಕೆ ಬರದಂತಾಗಿವೆ.

    ನಂತರ ವ್ಯಕ್ತಿ ನೋಟುಗಳನ್ನು ತೆಗೆದುಕೊಂಡು ಬ್ಯಾಂಕ್ ಆಫ್ ಕೋರಿಯಾಗೆ ತೆರಳಿದ್ದು, ನೋಟುಗಳು ತುಂಬಾ ಹಾನಿಯಾಗಿವೆ ಬೇರೆ ನೋಟುಗಳನ್ನು ಕೊಡಿ ಎಂದು ಕೇಳಿದ್ದಾರೆ. ಆದರೆ ಬ್ಯಾಂಕ್‍ನವರು ಹೊಸ ನೋಟುಗಳನ್ನು ಕೊಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಕಡೆಗೆ 507ರ ಅರ್ಧದಷ್ಟು ಹಣವನ್ನು ನೀಡಿದ್ದು, ವಾಶೀಂಗ್ ಮಶೀನ್‍ನಲ್ಲಿ ಹಾಕಿದ್ದರಿಂದ ನೋಟುಗಳು ಪೂರ್ತಿ ಹಾಳಾಗಿದ್ದವು. ಹೀಗಾಗಿ ಎಷ್ಟು ನಗದು ಇತ್ತು ಎಂದು ನಿಖರವಾಗಿ ತಿಳಿದಿಲ್ಲ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಹಣವನ್ನು ವಾಶಿಂಗ್ ಮಶೀನ್ ಹಾಗೂ ಶಾಖಕ್ಕೆ ಇಡಬೇಡಿ ಎಂದು ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ.

  • ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ಮೈಸೂರು: ಇತ್ತೀಚೆಗೆ ಹಾವುಗಳು ನೆಲೆ ಇಲ್ಲದೆ ಬೈಕ್, ಶೂಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಮೈಸೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಒಳಗೆಯೇ ನಾಗರಹಾವು ಕಾಣಿಸಿಕೊಂಡಿದೆ.

    ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮೆಷಿನ್ ಒಳಗೆ ಹಾವು ಸೇರಿಕೊಂಡಿದ್ದು, ಸ್ಟಾಲಿನ್ ಅವರ ಪತ್ನಿ, ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ ನಾಗರಹಾವು ವಾಷಿಂಗ್ ಮೆಷಿನ್‍ನಲ್ಲಿ ಕಾಣಿಸಿಕೊಂಡಿದೆ.

    ಮೆಷಿನ್ ಒಳಗೆ ಹಾವು ಕಂಡು ಗಾಬರಿಯಾದ ಮಹಿಳೆ ತಕ್ಷಣ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಪತಿ ಕೂಡಲೇ ಈ ವಿಷಯವನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಆಗಮಿಸಿದ ಸ್ನೇಕ್ ಶ್ಯಾಂ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

  • ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಚಿಕ್ಕಮಗಳೂರು: ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ್ದ ಹಾವಿನ ರಕ್ಷಣೆ ಮಾಡಿದ ಘಟನೆ ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಪ್ರದೀಪ್ ಎಂಬವರ ಮನೆಯೊಳಗಡೆ ಹಾವು ಸೇರಿದ್ದು, ಕೆರೆ ಹಾವು ಸುಮಾರು ಆರು ಅಡಿ ಉದ್ದವಿತ್ತು. ಹಾವು ದೊಡ್ಡ ಕಪ್ಪೆ ನುಂಗಿ ತೆವಳಲು ಆಗದೆ ವಾಷಿಂಗ್ ಮಷೀನ್ ಸೇರಿತ್ತು. ವಾಷಿಂಗ್ ಮಷೀನ್ ಬಳಿ ರಕ್ತ ನೋಡಿ ಮನೆಯವರು ಗಾಬರಿಗೊಂಡರು.

    ಮೊದಲು ಹಾವನ್ನು ನೋಡಿ ನಾಗರಹಾವೆಂದು ಮನೆಯವರು ಹೆದರಿಕೊಂಡರು. ವಾಷಿಂಗ್ ಮಷೀನ್ ಬಿಚ್ಚಿದ ಮೇಲೆ ಅದು ಕೆರೆ ಹಾವು ಎಂದು ತಿಳಿಯಿತು. ಬಳಿಕ ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನರೇಶ್ ಹಾವನ್ನು ರಕ್ಷಿಸಿದ್ದಾರೆ.

  • 15 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ವಾಷಿಂಗ್ ಮಷೀನ್ ನಲ್ಲಿ ಸಿಕ್ಕಿಬಿದ್ದ!

    15 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ವಾಷಿಂಗ್ ಮಷೀನ್ ನಲ್ಲಿ ಸಿಕ್ಕಿಬಿದ್ದ!

    ಮುಂಬೈ: ಒಂದು ಲಕ್ಷ ರೂ. ವಂಚನೆಯ ಪ್ರಕರಣದಲ್ಲಿ ಬಂಧಿಯಾಗಿ ನಂತರ ತಪ್ಪಿಸಿಕೊಂಡಿದ್ದ 54 ವರ್ಷದ ಆರೋಪಿಯನ್ನು ಬರೋಬ್ಬರಿ 15 ವರ್ಷಗಳ ನಂತರ ಸೋಮವಾರ ಮುಂಬೈಯ ಜುಹೂ ನಗರದಲ್ಲಿರುವ ಆತನ ಮನೆಯಲ್ಲಿ ಮತ್ತೆ ಬಂಧಿಸುವಲ್ಲಿ ಎರಡು ಪೊಲೀಸ್ ತಂಡ ಯಶಸ್ವಿಯಾಗಿದೆ.

    ಆರೋಪಿಯ ಪತ್ನಿಯು ಅಝಾದ್ ಮೈದಾನ್ ಮತ್ತು ಜುಹೂ ಪೊಲೀಸರ ಬಳಿ ಮನೆಯಲ್ಲಿ ಪತಿ ಇಲ್ಲವೆಂದು ಮೂರು ಗಂಟೆಗಳ ಕಾಲ ವಾದ ಮಂಡಿಸಿದ್ದಾಳೆ. ಆದರೂ ಆತ ಮನೆಯಲ್ಲೇ ಅವಿತು ಕುಳಿತಿರಬಹುದು ಎನ್ನುವ ಬಲವಾದ ಶಂಕೆ ಹಿನ್ನೆಲೆಯಲ್ಲಿ ಎಲ್ಲ ಕೊಠಡಿ, ವಸ್ತುಗಳನ್ನು ಜಾಲಾಡಿ ಕೊನೆಗೆ ವಾಷಿಂಗ್ ಮಷೀನ್ ನಲ್ಲಿ ಅವಿತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

    2002 ರಲ್ಲಿ ವಂಚನೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಜೊತೆಗೆ ಪೊಲೀಸ್ ಆಯುಕ್ತರು ಕೂಡ ಹಳೆಯ ಕೇಸ್‍ಗಳ ಆರೋಪಿಗಳನ್ನು ಬಂಧಿಸಬೇಕು ಎಂದು ಆದೇಶಿಸಿದ್ದರು. ಬಳಿಕ ನಾವು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ವಸಂತ್ ವಖಾರೆ ತಿಳಿಸಿದ್ದಾರೆ.

    ಪುಣೆಯಲ್ಲೂ 1 ಕೋಟಿ ರೂ. ವಂಚನೆ ಮಾಡಿದ ಆರೋಪ ಈತನ ಮೇಲಿದೆ. ಮುಂಬೈ ನಗರದಲ್ಲಿ 2002 ರಲ್ಲಿ ಮೂವರಿಗೆ ಬಿಎಡ್ ಕೋರ್ಸ್ ಗೆ ಪ್ರವೇಶ ಪಡೆಯಲು ಸಹಕರಿಸುತ್ತೇನೆ ಎಂದು ಹೇಳಿ ಒಂದು ಲಕ್ಷ ರೂ. ತೆಗೆದುಕೊಂಡು ವಂಚನೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಆರೋಪಿ ಪತ್ನಿ ಪೊಲೀಸರನ್ನು ಮೂರು ಗಂಟೆಯವರೆಗೆ ಬಿಡದೇ ನಂತರ ಹುಡುಕಲು ಅವಕಾಶ ಮಾಡಿಕೊಟ್ಟಿದ್ದಾಳೆ. ಬಳಿಕ ಪೊಲೀಸ್ ತಂಡ ಅಪಾರ್ಟ್ ಮೆಂಟ್ ಮೂರು ರೂಮ್‍ಗಳಲ್ಲೂ ಹುಡುಕಾಡಿದ್ದಾರೆ. ಎಲ್ಲೂ ಸಿಗದೇ ಇದ್ದಾಗ ಕೊನೆಗೆ ವಾಷಿಂಗ್ ಮಷೀನ್‍ನಲ್ಲಿ ಬಟ್ಟೆ ತೆಗೆಯುವಾಗ ಸಂದರ್ಭದಲ್ಲಿ ಆರೋಪಿ ಪತ್ತೆಯಾಗಿದ್ದಾನೆ.

    ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅವಕಾಶ ನೀಡದೇ ತಡೆದಿದ್ದಕ್ಕೆ ಆತನ ಪತ್ನಿಯ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದಾರೆ.

     

  • ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಹುಟ್ಟಿದ ಮಗು ಹೆಣ್ಣಾಯ್ತು ಅಂತ ವಾಷಿಂಗ್ ಮೆಷಿನ್ ಗೆ ತುರುಕಿ ಕೊಲೆಗೈದ್ಳು!

    ಗಾಜಿಯಾಬಾದ್: ಗಂಡು ಮಗುವಿನ ಆಸೆ ಹೊಂದಿದ್ದ 22 ವರ್ಷದ ಮಹಿಳೆಯೊಬ್ಬರಿಗೆ ಹುಟ್ಟಿದ್ದು ಹೆಣ್ಣು ಮಗು. ಇದರಿಂದ ಬೇಸತ್ತ ಮಹಿಳೆ ಆ ಮಗುವನ್ನು ತನ್ನ ಕೈಯ್ಯಾರೇ ಕ್ರೂರವಾಗಿ ಕೊಲೆಗೈದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಗಾಜಿಯಾಬಾದ್ ನ ಪಟ್ಲ ನಗರದಲ್ಲಿ ನಡೆದಿದ್ದು, ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ಆರತಿ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಗಂಡು ಮಗುವಿನ ಆಸೆ ಹೊಂದಿದ್ದ ಆರತಿಗೆ ಹೆಣ್ಣು ಮಗುವಾಗಿದ್ದರಿಂದ ನಿರಾಶೆಗೊಂಡು, ಆಕೆಯ ಮೇಲೆಯೇ ಆಕೆಗೆ ಸಿಟ್ಟು ಬಂದಿದ್ದರಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಹೀಗೆ ತನ್ನ ಮೇಲೆಯೇ ಸಿಟ್ಟುಗೊಂಡಿದ್ದ ಆಕೆ ಹೆಣ್ಣು ಮಗುವನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅಂತೆಯೇ ಭಾನುವಾರ ಮಗುವನ್ನು ದಿಂಬಿನಿಂದ ಮುಚ್ಚಿ ಬಳಿಕ ವಾಷಿಂಗ್ ಮೆಷಿನ್ ಗೆ ತುರುಕಿದ್ದಾಳೆ. ನಂತ್ರ ತನ್ನ ಮಗುವನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಆರತಿಯನ್ನು ಪ್ರಶ್ನಿಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಅಂತ ಅವರು ವಿವರಿಸಿದ್ದಾರೆ.

    ಗಂಡು ಮಗು ಬೇಕು ಅಂತಾ ನಾವು ಆಕೆಗೆ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ಬೇಕುಂತಲೇ ಮುದ್ದಾದ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಅಂತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.

  • ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

    ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

    – ತಾಯಿ ಅಂಗಡಿಗೆ ಹೋದಾಗ ದುರಂತ

    ನವದೆಹಲಿ: ಮೂರು ವರ್ಷ ವಯಸ್ಸಿನ ಅವಳಿ ಮಕ್ಕಳು ವಾಷಿಂಗ್ ಮಷೀನ್‍ನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.

    ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ರೇಖಾ ಎಂಬವರು ಮನೆಯಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮಿಷನ್‍ಗೆ ನೀರು ತುಂಬಿಸಿದ್ದರು. ಆದ್ರೆ ವಾಷಿಂಗ್ ಪೌಡರ್ ಖಾಲಿಯಾಗಿದ್ದು ನೋಡಿ ಇಬ್ಬರು ಮ್ಕಕಳಾದ ನಿಶಾಂತ್ ಮತ್ತು ನಕ್ಷ್ಯನನ್ನು ಮನೆಯಲ್ಲೇ ಬಿಟ್ಟು ವಾಷಿಂಗ್ ಪೌಡರ್ ತರಲು ಅಂಗಡಿಗೆ ಹೋಗಿದ್ದರು. ಈ ವೇಳೆ ವಾಷಿಂಗ್ ಮಷೀನ್ ಪಕ್ಕದಲ್ಲೇ ಇದ್ದ ಬಟ್ಟೆಯ ರಾಶಿಯ ಮೇಲೆ ಏರಿ ಮಕ್ಕಳು ವಾಷಿಂಗ್ ಮಷೀನ್ ಒಳಗೆ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

    5 ನಿಮಿಷದ ಬಳಿಕ ರೇಖಾ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಮಕ್ಕಳು ನಾಪತ್ತೆಯಾಗಿದ್ರು. 20 ನಿಮಿಷಗಳ ಬಳಿಕ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. ಮಕ್ಕಳ ತಂದೆ ರವೀಂದ್ರ ಕೂಡ ತಕ್ಷಣವೇ ಮನೆಗೆ ಬಂದು ಮಕ್ಕಳನ್ನು ಹುಡುಕಲು ಶುರು ಮಾಡಿದ್ರು. ಬಳಿಕ 12 ರಿಂದ 15 ಲೀಟರ್ ನೀರು ತುಂಬಿಸಲಾಗಿದ್ದ ವಾಷಿಂಗ್ ಮಷೀನ್‍ನಲ್ಲಿ ಮಕ್ಕಳು ಇದ್ದಿದ್ದು ಪತ್ತೆಯಾಗಿತ್ತು.

    ಕೂಡಲೇ ರವೀಂದ್ರ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ರು. ಆದ್ರೆ ಇದನ್ನು ನಂಬಲಾಗದೆ ರವೀಂದ್ರ ಮತ್ತೆ ಮಕ್ಕಳನ್ನ ಜೈಪುರ್ ಗೋಲ್ಡನ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲೂ ವೈದ್ಯರು ಮಕ್ಕಳು ಆಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.