Tag: Warning

  • ನನ್ನನ್ನು ಮಿಲ್ಕಿ ಬ್ಯೂಟಿಯೆಂದು ಕರೀಬೇಡಿ- ತಮನ್ನಾ ಖಡಕ್ ವಾರ್ನಿಂಗ್

    ನನ್ನನ್ನು ಮಿಲ್ಕಿ ಬ್ಯೂಟಿಯೆಂದು ಕರೀಬೇಡಿ- ತಮನ್ನಾ ಖಡಕ್ ವಾರ್ನಿಂಗ್

    ಹೈದರಾಬಾದ್: ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ ಈಗ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

    ತಮನ್ನಾ ಅವರು ಬೆಳ್ಳಗಿದ್ದಾರೆ. ಅಲ್ಲದೇ ಅವರ ಚರ್ಮ ಹಾಲಿನ ಬಣ್ಣ ಹೊಂದಿದ್ದು, ಎಲ್ಲರು ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತಮನ್ನಾ ಬಹುಭಾಷಾ ನಟಿಯಾಗಿದ್ದು, ಎಲ್ಲ ಚಿತ್ರರಂಗದಲ್ಲೂ ಅವರನ್ನು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ.

    ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ “ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ. ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ. ನನ್ನ ಸ್ಕಿನ್ ಕಲರ್ ಆಧಾರದ ಮೇಲೆ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಈ ರೀತಿ ಬಣ್ಣದ ಆಧಾರದ ಮೇಲೆ ಯಾರನ್ನು ಅಳೆಯಬಾರದು. ಚಿತ್ರರಂಗದಲ್ಲಿ ಈಗ ಇದು ಜಾಸ್ತಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ” ಎಂದರು.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದಲ್ಲಿ ತಮನ್ನಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. `ಪರೋಪಕಾರಿ’ ಕನ್ನಡ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು’ ಐಟಂ ಸಾಂಗನ್ನು ರಿಮಿಕ್ಸ್ ಮಾಡಲಾಗಿರುವ ಹಾಡು ಇದಾಗಿದ್ದು, ಇದೀಗ `ಕೆಜಿಎಫ್’ ಚಿತ್ರಕ್ಕಾಗಿ ರವಿ ಬಸ್ರೂರ್ ರೀ-ಕ್ರಿಯೇಟ್ ಮಾಡಿದ್ದಾರೆ.

    ಹಿಂದಿನ ಹಾಡಿಗೆ ಎಲ್.ಆರ್ ಈಶ್ವರಿ ಧ್ವನಿಯಾಗಿದ್ದರು. ಇದೀಗ ಐರಾ ಉಡುಪಿ ಹಿನ್ನಲೆ ಗಾಯನದಲ್ಲಿ ಹೊಸ ಜೋಕೆ ರಿಮಿಕ್ಸ್ ಹಾಡು ಮೂಡಿ ಬಂದಿದೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಹಾಡನ್ನು ರಿಲೀಸ್ ಮಾಡಿದೆ. ಕೆಜಿಎಫ್ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೇಸ್‍ಬುಕ್‍ ಲೈವ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ

    ಫೇಸ್‍ಬುಕ್‍ ಲೈವ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ

    ಮೈಸೂರು: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಅವಾಚ್ಯವಾಗಿ ಕಮೆಂಟ್ ಮಾಡುವವರಿಗೆ ಸಂಸದ ಪ್ರತಾಪ್ ಸಿಂಹ ಅವರು ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಫೇಸ್ ಬುಕ್ ಲೈವ್ ನಲ್ಲೆ ಮಾತನಾಡಿದ ಪ್ರತಾಪ್ ಸಿಂಹ, ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡೋದು ಸರಿಯಲ್ಲ. ನನಗೂ ಎಲ್ಲಾ ಭಾಷೆಯಲ್ಲೂ ಬೈಯೋಕೆ ಬರುತ್ತೆ ಎಂದು ಎಚ್ಚರಿಸಿದ್ದಾರೆ.

    ಲೈವ್ ನಲ್ಲಿ ಏನ್ ಹೇಳಿದ್ದಾರೆ?:
    `ಬಾಯಿ ಬಂದ ಹಾಗೆ ಕಮೆಂಟ್ ಮಾಡೋದು ಸರಿಯಲ್ಲ. ನನಗೂ ಎಲ್ಲಾ ಭಾಷೆಯಲ್ಲೂ ಬೈಯೋಕೆ ಬರುತ್ತೆ. ಉತ್ತರ ಕರ್ನಾಟಕ, ತುಳು ಭಾಷೆಯಲ್ಲೂ ನಾನು ಮಾತಾಡುತ್ತೇನೆ. ಆದರೆ ನನಗೆ ನಿಮ್ಮ ಸಂಸ್ಕೃತಿ ಇಲ್ಲ. ಎಲ್ಲರಿಗೂ ಒಂದೊಂದು ಪಕ್ಷ ಇರುತ್ತೆ. ಹಾಗಂತ ಬಾಯಿಗೆ ಬಂದ ಹಾಗೇ ಇನ್ನೊಬ್ಬರನ್ನು ಟೀಕಿಸಬಾರದು. ನೀವು ಮಾತಾಡುವ ಭಾಷೆಯನ್ನ ನನಗೆ ಮಾತನಾಡಕ್ಕೆ ಬರುತ್ತೆ. ಆದರೆ ಅದು ಅಸಹ್ಯ ಆಗುತ್ತೆ. ಟೀಕೆ ಮಾಡಿ ಮಾತಾಡಬಾರದು ಅಂತಲ್ಲ. ಒಳ್ಳೆಯ ಭಾಷೆಯಲ್ಲಿ ಟೀಕೆ ಮಾಡಿ” ಎಂದು ಎಚ್ಚರಿಕೆ ನೀಡಿದ್ದಾರೆ.

    “ಕೊಡಗು ಕೊಚ್ಚಿ ಹೋಗುತ್ತಿದೆ, ಪ್ರತಾಪ್ ಸಿಂಹ ಎಲ್ಲಿ ಅಂತೀರಲ್ಲ. ನಾನು ಮಳೆ ಪ್ರಾರಂಭವಾದಗಿನಿಂದಲೂ ಕೊಡಗಿನಲ್ಲೇ ಇದ್ದೇನೆ. ನಾನು ಹಾಗೂ ನನ್ನ ಕಾರ್ಯಕರ್ತರು ಅವರ ನೆರವಿಗೆ ಧಾವಿಸಿದ್ದೇವೆ. ಮೊದಲು ನಾವೇ ಅಲ್ಲಿ ಪರಿಹಾರ ಕೇಂದ್ರ ತೆರೆದಿದ್ದು. ಈಗಲೂ ನಾವು ಇಲ್ಲೇ ಇದ್ದು ಅವರ ಬೆಂಬಲಕ್ಕೆ ನಿಂತಿದ್ದೇವೆ. ಇನ್ನಾದರೂ ಅವಾಚ್ಯ ಶಬ್ಧ ಬಳಕೆ ಮಾಡದೇ ಒಳ್ಳೆಯ ಶಬ್ಧಗಳಿಂದ ಟೀಕೆ ಮಾಡಿ. ನನಗೂ ಆ ರೀತಿ ಮಾತಾಡೋಕೆ ಬರುತ್ತೆ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

  • ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ- ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ- ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಶಿವಮೊಗ್ಗ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ನದಿಗಳು- ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಶಿಥಿಲಾವಸ್ಥೆಯಲ್ಲಿರುವ ಮನೆ, ಕಟ್ಟಡಗಳಲ್ಲಿರುವ ವಾಸ್ತವ್ಯ ಸ್ಥಳಾಂತರಿಸಬೇಕು. ಕಾಲುಹಾದಿ, ಕಾಲು ಸಂಕ, ಹರಿಯುವ ನೀರಿನ ಬದಿಗಳಲ್ಲಿ ನಡೆಯುವ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ಮಕ್ಕಳನ್ನು ಅಂತಹ ಸ್ಥಳಗಳಿಗೆ ಒಬ್ಬಂಟಿಯಾಗಿ ಕಳುಹಿಸಬಾರದು. ಅತಿ ಹೆಚ್ಚು ಮಳೆಯಾಗುತ್ತಿರುವ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಆದಷ್ಟು ಮನೆಯೊಳಗೆ ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

    ಜಿಲ್ಲೆಯ ನದಿಗಳಾದ ತುಂಗ-ಭದ್ರಾ, ಮಾಲತಿ, ಶರಾವತಿ ನದಿಗಳಲ್ಲಿ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ತೀರ್ಥಹಳ್ಳಿಯ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದೆ. ಇದೇ ಮಳೆ ಪ್ರಮಾಣ ಮುಂದುವರೆದಲ್ಲಿ ತೀವ್ರ ಹಾನಿ ಸಾಧ್ಯತೆ ಹೆಚ್ಚಾಗಿದೆ.

  • ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ 2 ಸೇತುವೆ ಮುಳುಗಡೆ – ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಪ್ರವಾಹದ ಎಚ್ಚರಿಕೆ

    ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ 2 ಸೇತುವೆ ಮುಳುಗಡೆ – ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಪ್ರವಾಹದ ಎಚ್ಚರಿಕೆ

    ಬೆಳಗಾವಿ: ಮಹರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಪ್ರಮುಖ ಎರಡು ಸೇತುವೆಗಳು ಮುಳುಗಡೆಯಾಗಿದೆ.

    ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ – ಕಲ್ಲೋಳ ಹಾಗೂ ಮಾಲಿಕವಾಡ – ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಜಲಾವೃತಗೊಂಡಿವೆ. ಸೇತುವೆಗಳು ಜಲಾವೃತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

    ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಕ್ಷಣದಿಂದ ಕ್ಷಣಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಸದ್ಯ 90 ಸಾವಿರ ಕ್ಯೂಸೆಕ್ ಗೆ ಒಳ ಹರಿವು ಕೃಷ್ಣಾ ನದಿಯಲ್ಲಿ ಕಂಡು ಬಂದಿದ್ದು, ನದಿ ತೀರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದ್ದು, ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ನದಿ ತೀರದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನಿಯೋಜನೆ ಮಾಡಿದೆ.

    ಚಿಕ್ಕೋಡಿ ತಾಲೂಕು ಅಧಿಕಾರಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ತಾಲೂಕಿನ ಕೆಲವು ಸೇತುವೆಗಳು ಮುಳುಗಡೆಯಾಗಿದ್ದು, ಸದ್ಯ 90 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ದೋಣಿ ಮೂಲಕ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.

  • 25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಟ್ಟಣ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಇಂದು ಬೆಳಗ್ಗೆ ನೆಲಮಂಗಲ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆಸಿ, ಸಿಪಿಐ ಶಿವಣ್ಣ ಹಾಗೂ ಪಿಎಸ್‍ಐ ಮಂಜುನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದಿನೇ ದಿನೇ ನೆಲಮಂಗಲ ಪಟ್ಟಣ ಬೆಳೆಯುತ್ತಿದ್ದು, ಅಪರಾಧಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆ  ನೀಡಿದ್ದಾರೆ.

    ಅಷ್ಟೇ ಅಲ್ಲದೇ ಹಿಂದಿನ ಪೊಲೀಸ್ ಪರೇಡ್‍ಗೆ ಆಗಮಿಸದವರಿಗೆ ವಾರ್ನಿಂಗ್ ನೀಡಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ – ಖಡಕ್ ಎಚ್ಚರಿಕೆ ಕೊಟ್ಟ ಹುಬ್ಬಳ್ಳಿ ಪೊಲೀಸರು

    ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ – ಖಡಕ್ ಎಚ್ಚರಿಕೆ ಕೊಟ್ಟ ಹುಬ್ಬಳ್ಳಿ ಪೊಲೀಸರು

    ಹುಬ್ಬಳ್ಳಿ: ಇಂದು ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಮಾರಕಾಸ್ತ್ರಗಳಿಂದ ಬರ್ತ್ ಡೇ ಆಚರಣೆ ವೇಳೆ ಕೇಕ್ ಕಟ್ ಮಾಡುವುದು ಒಂದು ಟ್ರೆಂಡ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಗರದ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಕೆಟ್ಟ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಲ್ವಾರ್ ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

    ಡಿಸಿಪಿಗಳಾದ ರೇಣುಕಾ ಸುಕುಮಾರ, ನ್ಯಾಮಗೌಡರ, ಎಸಿಪಿಗಳಾದ ಹೆಚ್.ಕೆ. ಪಠಾಣ್ ಹಾಗೂ ಎನ್.ಬಿ.ಸಕ್ರಿ ಸಾಥ್ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ರೌಡಿಶೀಟರ್ ಗಳ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಕೇಶ್ವಾಪೂರ, ಆರ್‍ಜಿಎಸ್ ಬಡಾವಣೆ, ಹೊಸೂರು, ಸೆಟ್ಲಮೆಂಟ್, ಸೇರಿದಂತೆ ಅನೇಕ ಕಡೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಓರ್ವ ರೌಡಿಶೀಟರ್ ಮನೆಯಲ್ಲಿ ಎರಡು ತಲ್ವಾರ್ ಪತ್ತೆಯಾಗಿದೆ. ಬಳಿಕ ಈ ಸಂಬಂಧ ಇಬ್ಬರು ರೌಡಿಗಳನ್ನು ಬಂಧಿಸಿದ್ದು, ಪತ್ತೆಯಾದ ತಲ್ವಾರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಮತ್ತೆ ಈ ರೀತಿ ಮಾಡಿದರೆ ಸೂಕ್ತ ಕ್ರಮತೆಗೆದುಕೊಳ್ಳುವುದಾಗಿ ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

    ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಏಕಾಏಕಿ ಗರಂ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಯಶ್ ಗಡ್ಡ ಬಿಟ್ಟಿದ್ದು, ಅದ್ದನ್ನು ತೆಗೆಯುವಂತೆ ಅಂಬರೀಶ್ ಯಶ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಈಗ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಷ್‍ಗೆ ಬೇಜಾರಾಗಿದ್ದು, ಹೀಗಾಗಿ ಹೋದಲ್ಲಿ ಬಂದಲ್ಲಿ ರಾಜಾಹುಲಿಗೆ ಗಡ್ಡ ತೆಗೆಯುವಂತೆ ವಾರ್ನ್ ಮಾಡುತ್ತಿದ್ದಾರೆ.

    ಯಶ್ ಅವರಿಗೂ ಕೂಡ ಗಡ್ಡಮೀಸೆ ಬಿಟ್ಟುಕೊಂಡು ಓಡಾಡೋಕೆ ಇಷ್ಟವಿಲ್ಲ. ಆದರೆ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಯದ ಕಾರಣ ಯಶ್ ಗಡ್ಡ ತೆಗೆಯುವಂತಿಲ್ಲ. ಮತ್ತೊಂದು ವಿಶೇಷವೆನೆಂದರೆ ಇನ್ನೂ ಒಂದು ತಿಂಗಳು ನಾನು ಗಡ್ಡಕ್ಕೆ ಕತ್ತರಿ ಹಾಕುವ ಹಾಗಿಲ್ಲ ಎಂದು ಸ್ವತಃ ಯಶ್ ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

    ಇನ್ನೂ ಒಂದು ತಿಂಗಳು ರಾಕಿಂಗ್ ಸ್ಟಾರ್ ಯಶ್ ಅವರನ್ನು ಗಡ್ಡದಲ್ಲಿ ನೋಡಬಹುದು. ಆಮೇಲೆ ಕ್ಲೀನ್ ಶೇವ್ ಲುಕ್‍ನಲ್ಲಿ ಯಶ್ ಎಲ್ಲರ ಮುಂದೆ ಹಾಜರಾಗಲಿದ್ದಾರೆ. ಆದಷ್ಟು ಬೇಗ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಸಿ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.