Tag: Warning

  • ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    – ಅಡ್ಡದಾರಿ ಬಿಟ್ಟು ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳಿ

    ಚಿತ್ರದುರ್ಗ: ಕೋಟೆನಾಡಿನಲ್ಲಿ ನಡೆಯುತಿದ್ದ ಮರಳು ದಂಧೆ, ಓಸಿ, ಮಟ್ಕಾ ಹಾಗೂ ಜೂಜುಕೋರರ ಸಿಂಹ ಸ್ವಪ್ನ ಎನಿಸಿದ್ದ ಎಸ್‍ಪಿ ಡಾ. ಅರುಣ್ ವರ್ಗಾವಣೆಯಾಗುತ್ತಿದ್ದಂತೆ ದಂಧೆಕೋರರು ಹಾಗೂ ರೌಡಿಶೀಟರ್‌ಗಳು ಫುಲ್ ರಿಲಾಕ್ಸ್ ಮೂಡ್‍ನಲ್ಲಿದ್ದರು. ಇದೀಗ ಕೋಟೆನಾಡಿನ ಲೇಡಿ ಸಿಂಗಂ ರಾಧಿಕಾ ಅವರ ಚಳಿ ಬಿಡಿಸಿದ್ದಾರೆ.

    ಕಳೆದ ಒಂದು ವಾರದ ಹಿಂದೆಯಷ್ಟೇ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿರುವ ಚಿತ್ರದುರ್ಗದ ನೂತನ ಎಸ್‍ಪಿ ರಾಧಿಕಾ ಅವರು ಇಂದು ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಈ ವೇಳೆ ರೌಡಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಸರಿ ದಾರಿಯಲ್ಲಿ ನಡೆದರೆ ಸರಿ, ಇಲ್ಲಾಂದ್ರೆ ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಖಡಕ್ ವಾರ್ನ್ ಕೊಟ್ಟಿದ್ದಾರೆ.

    ನಗರದ ಡಿ.ಆರ್.ಗ್ರೌಂಡ್‍ನಲ್ಲಿ ಹಮ್ಮಿಕೊಂಡಿದ್ದ ರೌಡಿಗಳ ಪರೇಡ್‍ನಲ್ಲಿ ಭಾಗವಹಿಸಿ ರೌಡಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಳ್ಳೆತನದಿಂದ ಇದ್ದು ಸರಿ ದಾರಿಯಲ್ಲಿ ನಡೆಯುತ್ತೀನಿ ಅಂದರೆ ನಮ್ಮ ಸಪೋರ್ಟ್ ಇರುತ್ತೆ. ಮತ್ತೆ ಏನಾದರು ಬಾಲ ಬಿಚ್ಚಿ ತಮ್ಮ ಹಳೆ ಕಸುಬನ್ನು ಮುಂದವರಿಸಿದರೆ, ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ. ಹಾಗೆಯೇ ಅಡ್ಡದಾರಿಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಸೂಚಿಸಿದ್ದಾರೆ.

  • ಅಣ್ಣಾವ್ರ ಹಾಗೆ ಬೆಳೀಬೇಕು, ಹೀಗೆ ಹೆದ್ರಿಸೋದಲ್ಲ- ಮತ್ತೆ ಹಿಂಗೆ ಮಾಡಿದ್ರೆ ಬಾಲ ಕಟ್ ಎಂದ ಎಸ್‍ಪಿ

    ಅಣ್ಣಾವ್ರ ಹಾಗೆ ಬೆಳೀಬೇಕು, ಹೀಗೆ ಹೆದ್ರಿಸೋದಲ್ಲ- ಮತ್ತೆ ಹಿಂಗೆ ಮಾಡಿದ್ರೆ ಬಾಲ ಕಟ್ ಎಂದ ಎಸ್‍ಪಿ

    – ಜಂಗ್ಲಿ ಟೈಟಲ್‍ಗಾಗಿ 100 ಬಾರಿ ಸಿನಿಮಾ ನೋಡಿದ್ದ ರೌಡಿ

    ಮಂಡ್ಯ: ಜಂಗ್ಲಿ ಟೈಟಲ್‍ಗಾಗಿ ಮಂಡ್ಯದ ರೌಡಿಶೀಟರ್ ಒಬ್ಬ ‘ಜಂಗ್ಲಿ’ ಸಿನಿಮಾವನ್ನು 100 ಬಾರಿ ವೀಕ್ಷಣೆ ಮಾಡಿರುವ ಸಂಗತಿ ಪೊಲೀಸರು ಮಾಡಿದ ರೌಡಿ ಶೀಟರ್‌ಗಳ ಪೆರೇಡ್‍ನಲ್ಲಿ ತಿಳಿದು ಬಂದಿದೆ.

    ರೌಡಿ ಶೀಟರ್ ಶೇಖರ್ 100 ಬಾರಿ ‘ಜಂಗ್ಲಿ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾನೆ. ಇಂದು ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್‌ಗಳ ಪೆರೇಡ್ ನಡೆದಿದೆ. ಈ ಹಿಂದೆ ಯಾರೋ ಜಂಗ್ಲಿ ಎಂದು ಕರೆದಿದ್ದಕ್ಕೆ ‘ಜಂಗ್ಲಿ ಅಣ್ಣ’ ಅಂತ ಕರಿ ಎಂದು ಹಲ್ಲೆ ಮಾಡಿದ್ದನು. ಅದಕ್ಕೆ ಇಂದು ಪೆರೇಡ್‍ನಲ್ಲಿ ನಿಂಗೆ ಯಾರೋ ಟೈಟಲ್ ನೀಡಿದ್ದು ಎಂದು ಎಸ್‍ಪಿ ಕೇಳಿದ್ದಾರೆ.

    ಆಗ ಜಂಗ್ಲಿ ಶೇಖರ್, ನಾನು ಜಂಗ್ಲಿ ಸಿನಿಮಾವನ್ನು ನೂರು ಬಾರಿ ನೋಡಿದ್ದೇನೆ. ಅದಕ್ಕೆ ಎಲ್ಲರೂ ಜಂಗ್ಲಿ ಎಂದು ಕರೆಯುತ್ತಾರೆ ಎಂದು ಎಸ್‍ಪಿ ಪರಶುರಾಮ್ ಅವರಿಗೆ ಹೇಳಿದ್ದಾನೆ. ನಂತರ ಎಸ್‍ಪಿ ಅವರು, ನಿನ್ನ ಅಣ್ಣ ಎಂದು ಕರೀಬೇಕಾ. ಡಾ.ರಾಜ್‍ಕುಮಾರ್ ಅವರು ಇದ್ದರು. ಅವರು ನನ್ನ ಅಣ್ಣ ಎಂದು ಕರೀರಿ ಅಂತಾ ಯಾರಿಗೂ ಹೇಳಲಿಲ್ಲ. ಆದರೆ ಜನರು ಅವರನ್ನು ಈಗಲೂ ಅಣ್ಣಾವ್ರು ಎಂದೇ ಕರೆಯುತ್ತಾರೆ. ಅಣ್ಣಾವ್ರ ಹಾಗೆ ಬೆಳೆಯಬೇಕು ಅದನ್ನು ಬಿಟ್ಟು ಹೀಗೆ ಹೆದರಿಸುವುದು ಅಲ್ಲ, ಇನ್ನೊಂದು ಸಾರಿ ಹೀಗೆ ಮಾಡಿದ್ದು ತಿಳಿದರೆ ಬಾಲ ಕಟ್ ಮಾಡುತ್ತೇನೆ ಎಂದು ರೌಡಿಶೀಟರ್ ಶೇಖರ್‌ಗೆ ಎಸ್‍ಪಿ ವಾರ್ನಿಂಗ್ ಕೊಟ್ಟಿದ್ದಾರೆ.

    ರೌಡಿ ಪೆರೇಡ್‍ಗೆ ಬಂದಿದ್ದ ಮತ್ತೊಬ್ಬ ರೌಡಿ ಶೀಟರ್ ಬಸವನಿಗೂ ಎಸ್‍ಪಿ ಕ್ಲಾಸ್ ತೆಗೆದುಕೊಂಡರು. ಬಸವ ಮುಖದ ಶೈನಿಂಗ್‍ಗಾಗಿ ಕ್ರೀಮ್‍ವೊಂದನ್ನು ಹಾಕಿರುವ ಪರಿಣಾಮ ಮುಖ ಕೆಂಪಾಗಿ ಕಾಣುತ್ತಿತ್ತು. ಇದಕ್ಕೆ ಎಸ್‍ಪಿ ಪರಶುರಾಮ್ ಅವರು ಯಾಕೋ ಮುಖ ಇಷ್ಟೊಂದು ಕೆಂಪಾಗಿದೆ ಎಂದು ಕೇಳಿದ್ದಾರೆ. ಅದಕ್ಕೆ ಶೈನಿಂಗ್ ಕ್ರೀಮ್ ಹಾಕಿದ್ದೇನೆ ಎಂದು ಬಸವ ಹೇಳಿದ. ವೈಟ್ ಆಗಲು ಹೋಗಿ ರೆಡ್ ಆಗಿದಿಯಲ್ಲೋ, ಎಲ್ಲರೂ ಇವನು ಹಚ್ಚುವ ಕ್ರೀಮ್ ಹಚ್ಚಿ ಕೆಂಪಾಗಿ ಕಾಣುತ್ತೀರಾ ಎಂದು ಎಸ್‍ಪಿ ಗೇಲಿ ಮಾಡಿದರು.

    ಇಂದು ನಡೆದ ಮಂಡ್ಯ ರೌಡಿ ಶೀಟರ್‌ಗಳ ಪೈಕಿ 200 ಮಂದಿ ರೌಡಿಗಳು ಹಾಜರಿದ್ದರು. ಬಂದ ಎಲ್ಲಾ ರೌಡಿಗಳಿಗೂ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಖಡಕ್ ವಾರ್ನಿಂಗ್ ನೀಡಿ ಎಲ್ಲಾ ರೌಡಿ ಚುಟುವಟಿಕೆಗಳನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದರು. ಪೆರೇಡ್‍ಗೆ ಬಂದ 200 ರೌಡಿ ಶೀಟರ್‌ಗಳ ಪೈಕಿ 20 ಮಂದಿಯ ಉತ್ತಮ ನಡತೆಯನ್ನು ಗಮನಿಸಿ ರೌಡಿ ಶೀಟರ್ ನಿಂದ ಕೈ ಬಿಡಲಾಯಿತು.

  • ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಆನೇಕಲ್: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಗಳನ್ನು ಕರೆಸಿ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸ್ ಠಾಣಾ ವಿಭಾಗದಲ್ಲಿ ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಕೊಲೆ, ಕಳ್ಳತನ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಆನೇಕಲ್ ಸುತ್ತಮುತ್ತ ಗಾಂಜಾ ಮಾರಾಟ ಹಾಗೂ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಾಗ ಕಾನೂನು ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆ. ಒಳ್ಳೆಯ ನಡವಳಿಕೆಯಿಂದ ನಡೆದುಕೊಂಡರೆ, ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂಬ ವಿಷಯವನ್ನು ಆನೇಕಲ್ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣ ಲಮಾಣಿ, ಸಬ್ ಇನ್ಸ್ ಪೆಕ್ಟರ್ ಮುರಳೀಧರ್ ರೌಡಿ ಶೀಟರ್ ಗಳಿಗೆ ಮನವರಿಕೆ ಮಾಡಿಕೊಟ್ಟರು.

  • ಸಾರಿಗೆ ಸಿಬ್ಬಂದಿಗೆ ಡಿಸಿಎಂ ಸವದಿ ವಾರ್ನಿಂಗ್

    ಸಾರಿಗೆ ಸಿಬ್ಬಂದಿಗೆ ಡಿಸಿಎಂ ಸವದಿ ವಾರ್ನಿಂಗ್

    ಬೆಂಗಳೂರು: ನಾಳೆ ನಡೆಯುವ ಭಾರತ್ ಬಂದ್ ನಲ್ಲಿ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಸಿಬ್ಬಂದಿ ಭಾಗವಹಿಸಬಾರದು. ಸಂಸ್ಥೆಯ ಕೆಲಸಕ್ಕೆ ಗೈರು ಹಾಜರಾದರೆ ಅಂತಹವರ ವೇತನವನ್ನು ಕಡಿತಗೊಳಿಸಲಾಗುವುದು ಹಾಗೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ಸಿಬ್ಬಂದಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

    ಸಾರಿಗೆ ನಿಗಮಗಳನ್ನು ಸರ್ಕಾರವು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆ ಎಂದು ಘೋಷಿಸಿದೆ. ಆ ಪ್ರಕಾರ ಸಮರ್ಪಕವಾದ ಸಾರಿಗೆ ಸೌಲಭ್ಯವನ್ನು ಒದಗಿಸುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ನೌಕರರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಕೆ.ಎಸ್.ಆರ್.ಟಿ.ಸಿ ಹಾಗೂ ಬಿಎಂಟಿಸಿ ಎಂದಿನಂತೆ ಕಾರ್ಯ ನಿರ್ವಹಿಸಬೇಕೆಂದು ಮುನ್ನೆಚ್ಚರಿಕೆ ನೀಡಲಾಗಿದೆಂದು ತಿಳಿಸಿದ್ದಾರೆ.

    ಸಾರ್ವಜನಿಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬಂದ್-ಮುಷ್ಕರದಲ್ಲಿ ಭಾಗವಹಿಸುವ ಯಾರೊಬ್ಬರೂ ಸರ್ಕಾರಿ ಆಸ್ತಿ- ಪಾಸ್ತಿಗಳಿಗೆ ಅದರಲ್ಲೂ ವಿಶೇಷವಾಗಿ ಸಾರಿಗೆ ಬಸ್ಸುಗಳಿಗೆ ಹಾನಿ ಉಂಟುಮಾಡುವ ದುಷ್ಕೃತ್ಯಕ್ಕೆ ಮುಂದಾಗಬಾರದು. ಒಂದು ವೇಳೆ ಕಾನೂನು ಉಲ್ಲಂಘಿಸಿ ಅಹಿತಕರ ಘಟನೆಗಳಿಗೆ ಯತ್ನಿಸಿದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಈ ರೀತಿಯ ಬಂದ್‍ಗಳಿಂದಾಗಿ ನಮ್ಮ ಸರ್ಕಾರಿ ಸಂಸ್ಥೆಗಳಿಗೆ ನಷ್ಟವಾಗುವುದಲ್ಲದೇ ರಾಷ್ಟ್ರದ ಆರ್ಥಿಕ ಚಟುವಟಿಕೆಗಳು ಅಧೋಗತಿಗೆ ತಲುಪುವಂತಾಗುತ್ತದೆ ಎಂದು ಪ್ರಕಟನೆ ಹೊರಡಿಸಿದ್ದಾರೆ.

  • ಹುಡುಗೀರಿಗೆ ಚುಡಾಯಿಸಿದ್ರೆ ಒನಕೆ ಓಬವ್ವ ಬರ್ತಾಳೆ: ಎಸ್‍ಪಿ ನಿಶಾ ಜೇಮ್ಸ್ ಖಡಕ್ ವಾರ್ನಿಂಗ್

    ಹುಡುಗೀರಿಗೆ ಚುಡಾಯಿಸಿದ್ರೆ ಒನಕೆ ಓಬವ್ವ ಬರ್ತಾಳೆ: ಎಸ್‍ಪಿ ನಿಶಾ ಜೇಮ್ಸ್ ಖಡಕ್ ವಾರ್ನಿಂಗ್

    ಉಡುಪಿ: 2020ಯನ್ನು ಬರಮಾಡಿಕೊಳ್ಳಲು ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಸ್ಪೆಷಲ್ ಅರೇಂಜ್ಮೆಂಟ್ ಮಾಡಲಾಗಿದೆ. ಈ ನಡುವೆ ಉಡುಪಿ ಎಸ್ ಪಿ ನಿಶಾ ಜೇಮ್ಸ್ ಕುಡುಕರಿಗೆ ಮತ್ತು ಪೋಕರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ಇವತ್ತು ಸಂಜೆಯಾಗುತ್ತಲೇ ಹೊಸ ವರ್ಷದ ಕಿಚ್ಚು ಹಚ್ಕೊಳುತ್ತೆ. ಕುಡಿದ ಮತ್ತಲ್ಲಿ ಮಣಿಪಾಲದ ಮಾಡರ್ನ್ ಯುವತಿಯರನ್ನು ಕೆಲ ಪೋಕರಿಗಳು ಚುಡಾಯಿಸಲು ಶುರುಮಾಡ್ತಾರೆ. ಹಾಗೇನಾದ್ರು ಯಾರಾದರೂ ಚುಡಾಯಿಸಿದ್ರೊ ಅವರ ಕಥೆ ಕ್ಲೋಸ್. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್‍ಪಿ ನಿಶಾ ಜೇಮ್ಸ್, ಮಣಿಪಾಲದಲ್ಲಿ ರಾಣಿ ಅಬ್ಬಕ್ಕ ಪಡೆಯನ್ನು ನಿಯೋಜಿಸಿದ್ದು, ಗಸ್ತು ತಿರುಗಲಿದ್ದಾರೆ. ಯಾರಾದ್ರೂ ಕಾನೂನು ಮೀರಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಹೇಳಿದ್ದಾರೆ.

    ಹೊಸ ವರ್ಷದ ನೆಪದಲ್ಲಿ ಯಾರಾದರೂ ಬಾಲ ಬಿಚ್ಚೋಕೆ ಟ್ರೈ ಮಾಡಿದರೆ ನಿಮ್ನ ಚಚ್ಚೋಕೆ ಲೇಡಿ ಪೊಲೀಸರು ರೆಡಿಯಾಗಿದ್ದಾರೆ. ಖಾಸಗಿ ಹೋಟೆಲ್, ಪಬ್‍ನಲ್ಲಿ ಕಾರ್ಯಕ್ರಮ ಸಂದರ್ಭ ಖಾಸಗಿ ಸೆಕ್ಯೂರಿಟಿ ನೇಮಿಸಬೇಕು. 12.30 ರೊಳಗೆ ಎಲ್ಲಾ ಸಂಭ್ರಮಾಚರಣೆಗಳು ಮುಗಿಸಬೇಕು ಎಂದು ತಿಳಿಸಿದ್ದಾರೆ.

    ಕೇರಳ ಮತ್ತು ಹೊರ ಜಿಲ್ಲೆಯ ಯುವಕರು ಮೋಜು ಮಸ್ತಿಗೆ ಉಡುಪಿ ಮಣಿಪಾಲ ಬರುವುದರ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ. ಸ್ಪೆಷಲ್ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು ಸಿಸಿಟಿವಿ ಅಳವಡಿಸಲಾಗಿದೆ. ಹೊರ ರಾಜ್ಯ ಜಿಲ್ಲೆಯ ವಾಹನಗಳ ಮೇಲೆ ಗಸ್ತು ಪೊಲೀಸರು ನಿಗಾ ವಹಿಸಿದ್ದು, ಕೇಸ್ ದಾಖಲಿಸೋಕೆ ರೆಡಿಯಾಗಿದ್ದಾರೆ.

    ಪೇಜಾವರಶ್ರೀ ನಿಧನದಿಂದ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿದ್ದು, ಮಲ್ಪೆಯ ಬೀಚ್ ಫೆಸ್ಟಿವಲ್ ಕೂಡಾ ರದ್ದು ಮಾಡಲಾಗಿದೆ. ಕುಡಿದು ವಾಹನ ಚಲಾಯಿಸೋರಿಗೆ ಫೈನ್ ಜೊತೆ ಕೇಸ್ ಹಾಕೋದಕ್ಕೆ ಪೊಲೀಸರು ದಂಡದ ಪುಸ್ತಕ ಕೈಗೆತ್ತಿಕೊಂಡಿದ್ದು, ಕುಡಿತದ ಅಭ್ಯಾಸ ಇರದ ಚಾಲಕನನ್ನು ಜೊತೆಗೆ ಕರೆದುಕೊಂಡು ಹೋಗಿ ಎಂದು ಎಸ್‍ಪಿ. ನಿಶಾ ಜೇಮ್ಸ್ ಸಲಹೆ ಕೊಟ್ಟಿದ್ದಾರೆ.

  • ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲೇ ಹೊಸ ವರ್ಷಾಚರಣೆ- ಯುವಕರಿಗೆ ಎಸ್‌ಪಿ ಖಡಕ್ ಎಚ್ಚರಿಕೆ

    ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲೇ ಹೊಸ ವರ್ಷಾಚರಣೆ- ಯುವಕರಿಗೆ ಎಸ್‌ಪಿ ಖಡಕ್ ಎಚ್ಚರಿಕೆ

    ರಾಯಚೂರು: ಹೊಸ ವರ್ಷಾಚರಣೆ ಹೆಸರಿನಲ್ಲಿ ಕಾನೂನು ಮೀರಿ ನಡೆದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕುಡಿದು ವಾಹನಗಳನ್ನು ಚಲಾಯಿಸುವಂತವರನ್ನು ಪರಿಶೀಲನೆ ಮಾಡಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಕುಡಿದ ಮತ್ತಿನಲ್ಲಿ ವಾಹನಗಳನ್ನು ಚಲಾಯಿಸದೆ, ತಮ್ಮ ಸ್ವಂತ ವಾಹನಗಳನ್ನು ಮನೆಯಲ್ಲಿ ಬಿಟ್ಟು ಆಟೋ ಅಥವಾ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಿ. ಕುಡಿದು ವಾಹನ ಚಲಾಯಿಸಿದಲ್ಲಿ ಸೂಕ್ತ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಸ್‍ಪಿ ಹೇಳಿದ್ದಾರೆ.

    ನಗರದ ಮುಖ್ಯ ರಸ್ತೆಗಳಾದ ಸ್ಟೇಷನ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಂಜ್ ರಸ್ತೆ ಇನ್ನು ಮುಂತಾದ ಕಡೆ ವಾಹನದ ಸೈಲನ್ಸರ್ ತೆಗೆದು ಕರ್ಕಶವಾಗಿ ಶಬ್ದ ಮಾಡುತ್ತಾ, ವಾಹನ ಚಲಾಯಿಸಿ ತೊಂದರೆ ಕೊಡುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಮದ್ಯಪಾನ ಮಾಡಿ ಆಗಲಿ ಅಥವಾ ಹೊಸ ವರ್ಷದ ಆಚರಣೆಯ ಭರಾಟೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುವವರ ಮೇಲೆ ಕ್ರಮಕೈಗೊಳ್ಳಲು ಓಬವ್ವನ ಪಡೆ ನಿರಂತರವಾಗಿ ಗಸ್ತು ಮಾಡುತ್ತದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರಿಯಿಡಿ ಗಸ್ತು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಬಂದೋಬಸ್ತ್ ನಡೆಸಲಿದ್ದಾರೆ. ರಾತ್ರಿ 10.30 ಗಂಟೆಯ ನಂತರ ಲೌಡ್ ಸ್ಪೀಕರ್ ಮತ್ತು ಪಟಾಕಿಯನ್ನು ಯಾರೂ ಹಚ್ಚ ಕೂಡದು ಎಂದು ಎಚ್ಚರಿಸಿದ್ದಾರೆ.

    4 ಡಿವೈಎಸ್‍ಪಿ, 20 ಸಿಪಿಐ, 40 ಪಿಎಸ್‍ಯ, 10 ಡಿಎಆರ್, 2 ಕೆಎಸ್‍ಆರ್ ಪಿ ತುಕಡಿ ಒಟ್ಟು 250 ಪೊಲೀಸ್ ಪೇದೆಗಳು ಬಂದೋಬಸ್ತ್ ಕರ್ತವ್ಯದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲಾದ್ಯಾಂತ ಶಾಂತಿ-ಸುವ್ಯಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಪ್ರತಿಭಟನೆ ನಡೆಸಿದ್ರೆ ಹುಷಾರ್ – ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ವಾರ್ನಿಂಗ್

    ಪ್ರತಿಭಟನೆ ನಡೆಸಿದ್ರೆ ಹುಷಾರ್ – ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಖಡಕ್ ವಾರ್ನಿಂಗ್

    ಬೆಂಗಳೂರು: ರಾಷ್ಟ್ರೀಯ ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ಸಂಬಂಧ ದೇಶಾದ್ಯಂತ ಪರ- ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಜೊತೆಗೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಇದರಿಂದ ಎಚ್ಚತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ಸಂಬಂಧ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ. ಒಂದು ವೇಳೆ ಪ್ರತಿಭಟನೆ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಲ ಶಿಕ್ಷಣ, ಸಂಸ್ಥೆ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿವೆ. ವಿಡಿಯೋ ಗ್ರಾಫ್ ಅಧಾರದ ಮೇಲೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

    ಪ್ರತಿಭಟನೆಗೆ ಅವಕಾಶ ಕೋರಿ ಸಾಕಷ್ಟು ಅರ್ಜಿಗಳು ಬಂದಿದ್ದವು. ಇಲ್ಲಿವರೆಗೂ ಯಾರಿಗೂ ಅನುಮತಿ ಕೊಟ್ಟಿಲ್ಲ. ಪ್ರತಿಭಟನೆ ಮಾಡುವವರು ಉತ್ತರ ಭಾರತದ ರಾಜ್ಯಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಿ, ನಗರದಲ್ಲಿ ಮಾಡಲು ಅವಕಾಶ ಇಲ್ಲ ಎಂದರು.

    ಇದೇ ವೇಳೆ ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಅಂತವರ ಮೇಲೆ ಐಟಿ ಸೆಲ್‍ನಿಂದ ನಿಗಾ ವಹಿಸಲಾಗಿದ್ದು, ಸೂಕ್ತ ಕ್ರಮದ ಎಚ್ಚರಿಕೆ ನೀಡಿದರು.

  • ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಪುಡಾರಿಗಳಿಗೆ ಡಿಸಿಪಿ ಶರಣಪ್ಪ ಖಡಕ್ ಎಚ್ಚರಿಕೆ

    ಬೆಂಗಳೂರು: ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆ ವಿಭಾಗದ ಪುಡಾರಿಗಳನ್ನು ಕರೆಸಿ ಪರೇಡ್ ಮಾಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಪೂರ್ವ ವಿಭಾಗದ ಬಾಣಸವಾಡಿ, ಹಲಸೂರು, ರಾಮೂರ್ತಿ ನಗರ, ಬೈಯ್ಯಪ್ಪನ ಹಳ್ಳಿ, ಇಂದಿರಾ ನಗರ, ಜೀವನ್ ಭೀಮಾನಗರ ಸೇರಿದಂತೆ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ರೌಡಿ ಶೀಟರ್ ಗಳನ್ನು ಕರೆದು ಪರೇಡ್ ಮಾಡಲಾಯ್ತು. ಪರೇಡ್‍ನಲ್ಲಿ ಸುಮಾರು 150 ಕ್ಕೂ ಹೆಚ್ಚು ಪುಡಿ ರೌಡಿಗಳಿಗೆ ಲೆಫ್ಟ್ ರೈಟ್ ಮಾಡಿ ಖಡಕ್ ವಾರ್ನ್ ಮಾಡಿದ್ರು. ಅಷ್ಟೇ ಅಲ್ಲದೇ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ನಿರತರಾದರೆ ಗೂಂಡ ಆಕ್ಟ್ ಆಗಿ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಅದರಲ್ಲೂ ಕೆಲ ದಿನಗಳಿಂದ ಪೂರ್ವ ವಿಭಾಗದ ರಾಮಮೂರ್ತಿ ನಗರ, ಬೈಯ್ಯಪ್ಪನಹಳ್ಳಿ ಅಸುಪಾಸಿನಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪರೇಡ್ ಮಾಡಿ ಡಿಸಿಪಿ ವಾರ್ನ್ ಮಾಡಿದ್ದಾರೆ. ಪರೇಡ್ ವೇಳೆ ಆಕ್ಟಿವ್ ಆಗಿರುವ ಅಪಾಯಕಾರಿ ಕ್ರಿಮಿನಲ್‍ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಆಯಾ ಠಾಣಾ ಇನ್ಸ್ ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿಗೆ ಡಿಸಿಪಿ ಶರಣಪ್ಪ ತಾಕೀತು ಮಾಡಿದರು. ಅಪರಾಧ ಚಟುವಟಿಕೆಯಲ್ಲಿ ಭಾಗಿರುತ್ತಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೇ ಬಂಧಿಸಿ ಜೈಲಿಗೆ ಕಳಿಸುವಂತೆ ಸೂಚಿಸಿದರು.

  • “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    “ಯಾವ ಕೇಸಲ್ಲಿ ಬೇಕಾದ್ರು ಫಿಟ್ ಮಾಡ್ತೀನಿ”- ಧಮ್ಕಿ ಹಾಕಿದ ಲೇಡಿ ಸಿಪಿಐ

    ತುಮಕೂರು: ಜಿಲ್ಲೆಯ ತಿಲಕ್ ಪಾರ್ಕ್ ಬಳಿ ನಡೆಯುತ್ತಿದ್ದ ರೌಡಿಗಳ ಪರೇಡ್‍ನಲ್ಲಿ ಮಹಿಳಾ ಸಿಪಿಐಯೊಬ್ಬರು ‘ಲೇಡಿ ಸಿಂಗಂ’ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಯಾವ ಕೇಸಲ್ಲಿ ಬೇಕಾದರು ಫಿಟ್ ಮಾಡುತ್ತೇನೆ ಎಂದು ರೌಡಿಶೀಟರ್​ಗಳಿಗೆ ಧಮ್ಕಿ ಹಾಕಿದ್ದಾರೆ.

    ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. “ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು, ಮಕ್ಕಳಾ ಮುಚ್ಚಿಕೊಂಡಿರಿ. ಅನ್ನ ತಿನ್ನಲು ಗತಿಯಿಲ್ಲ, ನೆಟ್ಟಗೆ ಬಟ್ಟೆ ಹಾಕೋ ಗತಿಯಿಲ್ಲ ನಿಮಗೆ” ಎಂದು ಹೀನಾಮಾನವಾಗಿ ರೌಡಿಶೀಟರ್​ಗಳಿಗೆ ಬೈದಿದ್ದಾರೆ. ಜೊತೆಗೆ ಚನ್ನಪ್ಪನ ಪಾಳ್ಯದ ಹೆಣ್ಣು ಮಕ್ಕಳು ಬಾರಿ ಆಟ ಆಡ್ತಾರೆ, ಅವರಿಗೆ ಹೇಳಿ ಎಂದು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ.

    ರೌಡಿಶೀಟರ್​ಗಳಿಗೆ , “ಮಗನೇ ಬೀದಿ ಹೆಣ ಆಗ್ತೀಯಾ, ಮದುವೆ ಮಾಡ್ಕೊಬೇಡ. ನನ್ಮಕ್ಕಳಾ ರೌಡಿಶೀಟರ್ ಗೆ ನಾನು ಏನ್ ಬೇಕಾದರೂ ಮಾಡಬಹುದು. ಯಾರ ಪರ್ಮಿಷನ್ನು ಬೇಕಾಗಿಲ್ಲ. ಯಾರಿಗೂ ಕೇಳಬೇಕಾಗಿಲ್ಲ. ನೀವು ಸಾಯೋ ತನಕನೂ ನಾವು ನಿಮ್ಮನ್ನ ಯಾವ ಕೇಸಲ್ಲಿ ಬೇಕಾದರೂ ಫಿಟ್ ಮಾಡಬಹುದು” ಎಂದು ಸಿಪಿಐ ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.

    ಅಲ್ಲದೆ ಇವರಿಗೆಲ್ಲಾ ಚೆನ್ನಾಗಿ ವರ್ಕ್ ಮಾಡಿ, ಮದುವೆ ಮಾಡಿಕೊಂಡು ಹೆಂಡತಿ ಮಾಡ್ಕೊಂದರೆ ಅವಳು ಬೇರೆಯವರ ಪಾಲಾಗುತ್ತಾಳೆ ಎಂದು ಸಭ್ಯತೆ ಮೀರಿ ಪಾರ್ವತಮ್ಮ ಮಾತನಾಡಿದ್ದಾರೆ. ಜವಾಬ್ದಾರಿಯುತ ಕೆಲಸದಲ್ಲಿರುವ ಅಧಿಕಾರಿ ಈ ರೀತಿ ವರ್ತಿಸಿರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

  • ಅಲೋಕ್ ಕುಮಾರ್ ನೈಟ್ ರೌಂಡ್ಸ್ – ಖಾಕಿಯ ಬೆವರಿಳಿಸಿದ ಕಮಿಷನರ್

    ಅಲೋಕ್ ಕುಮಾರ್ ನೈಟ್ ರೌಂಡ್ಸ್ – ಖಾಕಿಯ ಬೆವರಿಳಿಸಿದ ಕಮಿಷನರ್

    – ಡ್ರಿಂಕ್ ಆ್ಯಂಡ್ ಡ್ರೈವ್ ಸವಾರರಿಗೆ ಖಡಕ್ ವಾರ್ನಿಂಗ್
    – 1000ಕ್ಕೂ ಹೆಚ್ಚು ಬೈಕ್‍ಗಳು ವಶ

    ಬೆಂಗಳೂರು: ಖಡಕ್ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಮತ್ತೆ ನಗರದಲ್ಲಿ ನೈಟ್ ರೌಂಡ್ಸ್ ಹೊಡೆದಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ನೂತನ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಫುಲ್ ಆ್ಯಕ್ಟೀವ್ ಆಗಿದ್ದಾರೆ.

    ಶನಿವಾರ ರಾತ್ರಿ ಹೆಬ್ಬಾಳ, ಮಲ್ಲೇಶ್ವರಂ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್ ಸೇರಿ ಹಲವೆಡೆಗಳಲ್ಲಿ ನೈಟ್ ರೌಂಡ್ಸ್ ಮಾಡಿ, ಪೊಲೀಸರಿಗೆ ನಡುಕ ಹುಟ್ಟಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಮಲ್ಲೇಶ್ವರಂ ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಪೊಲೀಸರ ನಿರ್ಲಕ್ಷ್ಯ ಕಂಡು ಫುಲ್ ಗರಂ ಆಗಿದ್ದಾರೆ.

    ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ರಾತ್ರಿ ವೇಳೆ ಹೆಲ್ಮೆಟ್ ಹಾಕದೆ ಬೈಕ್ ರೈಡ್ ಮಾಡುತ್ತಿದ್ದ ರೋಡ್ ರೋಮಿಯೋಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ ಪಾಯಿಂಟ್‍ಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡು ಕೆಂಡಮಂಡಲರಾಗಿದ್ದಾರೆ. ನಗರದ 20ಕ್ಕೂ ಹೆಚ್ಚಿನ ಚೆಕ್ ಪಾಯಿಂಟ್‍ಗಳಲ್ಲಿ ಕಾರು, ಬೈಕ್‍ಗಳನ್ನ ತಾಪಸಣೆ ಮಾಡಿ, ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

    ಇನ್ನು ಮುಂದೆ ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಾಚರಣೆ ಮಾಡುತ್ತೇವೆ. ಸಾರ್ವಜನಿಕರಿಗೆ ರಾತ್ರಿ ಟೈಮಲ್ಲಿ ಪೊಲೀಸರು ಇದ್ದಾರೆ ಎಂಬ ನಂಬಿಕೆ ಬರಬೇಕು. ದಾಖಲೆಗಳಿಲ್ಲದ ಸಾವಿರಕ್ಕೂ ಹೆಚ್ಚಿನ ಬೈಕ್‍ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.