Tag: Warning

  • ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್

    ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್

    ಬೀದರ್: ರೌಡಿಶೀಟರ್ (Rowdy Sheeter) ಪೇರೆಡ್‌ನಲ್ಲಿ ರೌಡಿಗಳಿಗೆ ಬೀದರ್ ಎಸ್ಪಿ ಪ್ರದೀಪ್ ಗುಂಟಿ (SP Pradeep Gunti) ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಜಿಲ್ಲೆಯ ಪೊಲೀಸ್ ಪೇರೆಡ್ ಮೈದಾನದಲ್ಲಿ (Police Parade Ground) ನಡೆದ ರೌಡಿ ಪೆರೇಡ್‌ನಲ್ಲಿ ಜಿಲ್ಲೆಯಾದ್ಯಂತ ನೂರಾರು ರೌಡಿಗಳು ಭಾಗಿಯಾಗಿದ್ದು, ಇನ್ನೂ ಎಲ್ಲಾ ಅಪರಾಧ ಕೃತ್ಯಗಳು ಬಂದ್ ಆಗಬೇಕು. ನಾವು ಯಾವಾಗ ಮನೆ ಮೇಲೆ ದಾಳಿ ಮಾಡುತ್ತೇವೆ ಗೊತ್ತಿಲ್ಲ. ಹೀಗಾಗಿ ಮೊದಲೇ ಎಲ್ಲಾ ಅಪರಾಧಗಳನ್ನು ಬಿಟ್ಟು ಬಿಡಿ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ

    ಇರಾನಿ ಗ್ಯಾಂಗ್‌ನ ಖತರ್ನಾಕ್ ರೌಡಿ ಪೇರೆಡ್‌ಗೆ ಕ್ಯಾಪ್ ಹಾಕೊಂಡು ಬರುತ್ತಿಯಾ, ಮೂರೂ ಕಳ್ಳತನ ಕೇಸ್ ದಾಖಲಾಗಿದ್ದರೂ ಇನ್ನೂ ನೀನು ಪರಿವರ್ತನೆಯಾಗಿಲ್ವಾ ಎಂದು ವಾರ್ನಿಂಗ್ ನೀಡಿದರು.

    ಇನ್ನೂ ಗಾಂಜಾ ಕೇಸ್‌ನಲ್ಲಿ ಸಾಮೂಹಿಕವಾಗಿ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ, ನೀವು ಪೊಲೀಸ್ ಮೇಲೆಯೇ ಹಲ್ಲೆ ಮಾಡುತ್ತೀರಾ ಎಂದು ಇವರನ್ನು ರೌಡಿ ಪೇರೆಡ್‌ಗೆ ಕರೆಸಿ ಎಂದು ಸೂಚಿಸಿದ್ದಾರೆ.

    ಇಂದು ರೌಡಿ ಪೇರೆಡ್‌ಗೆ ಯಾರು ಹಾಜರಾಗಿ¯್ಲ ಅಂಥವರ ಕೇಸ್ ಕ್ಲೋಸ್ ಮಾಡಲ್ಲ. ಎಲ್ಲಾ ರೌಡಿಗಳು ಪುಲ್ ಆಕ್ಟಿವ್ ಆಗಿರುವುದು ಮಾಹಿತಿ ಬಂದಿದೆ. ನಾವು ಮಧ್ಯರಾತ್ರಿ ಯಾವಾಗ ಮನೆ ಮೇಲೆ ದಾಳಿ ಮಾಡುತ್ತೆವೆ ಗೊತ್ತಿಲ್ಲ. ಹೀಗಾಗಿ ಮೊದಲೇ ಎಲ್ಲಾ ಅಪರಾಧಗಳನ್ನು ಬಿಟ್ಟು ಬಿಡಿ ಎಂದು ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.ಇದನ್ನೂ ಓದಿ: ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ

  • ಬಿಗ್ ಬಾಸ್: ಗರ್ಲ್ ಫ್ರೆಂಡ್ ವಿಚಾರದಲ್ಲಿ ಜಶ್ವಂತ್ ಗೆ ಖಡಕ್ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್

    ಬಿಗ್ ಬಾಸ್: ಗರ್ಲ್ ಫ್ರೆಂಡ್ ವಿಚಾರದಲ್ಲಿ ಜಶ್ವಂತ್ ಗೆ ಖಡಕ್ ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್

    ಬಿಗ್ ಬಾಸ್ ಮನೆಯಲ್ಲಿರುವ ಜಶ್ವಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಸಂಗ ನಿನ್ನೆ ಸುದೀಪ್ ಪಂಚಾಯತಿಯಲ್ಲಿ ನಡೆಯಿತು. ವಾರಾಂತ್ಯದಲ್ಲಿ ನಡೆಯುವ  ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಸುದೀಪ್, ನೇರವಾಗಿಯೇ ಜಶ್ವಂತ್ ಗೆ ಎಚ್ಚರಿಕೆ ನೀಡಿದರು. ಇದೇ ರೀತಿ ಮುಂದುವರೆದರೆ, ಮನೆಯ ಬಾಗಿಲು ತೋರಿಸಬೇಕಾಗುತ್ತದೆ ಎಂದು ನೇರವಾಗಿಯೇ ಸಂದೇಶ ರವಾನಿಸಿದರು.

    ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಾಗ ಯಾರೂ, ಯಾರೊಂದಿಗೂ ಚರ್ಚೆ ಮಾಡುವಂತಿಲ್ಲ. ತಮ್ಮ ಸ್ವಂತ ನಿರ್ಧಾರದಿಂದ ಆಯ್ಕೆ ಮಾಡಬೇಕು. ಆದರೆ, ಜಶ್ವಂತ್ ತನ್ನ ಲವರ್ ನಂದು ಜೊತೆ ಚರ್ಚೆ ಮಾಡಿ, ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯ ನಿಯಮವನ್ನು ಅವರು ಮುರಿದಿದ್ದಾರೆ. ಪದೇ ಪದೇ ಜಶ್ವಂತ್ ಹೀಗಿಯೇ ಮಾಡುತ್ತಿರುವುದರಿಂದ ಸುದೀಪ್ ಇಂಥದ್ದೊಂದು ಎಚ್ಚರಿಕೆ ಕೊಟ್ಟಿದ್ದಾರೆ. ಲವರ್ ಅನ್ನುವುದು ಮನೆಯಿಂದ ಆಚೆ, ಮನೆಯೊಳಗೆ ಇಬ್ಬರೂ ಸ್ಪರ್ಧಿ ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ. ಇದನ್ನೂ ಓದಿ: ವಿಜ್ಞಾನ ಮತ್ತು ಪುರಾಣ ಮಿಶ್ರಣದ ಧ್ರುವ 369 ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ರಾಜ್ಯಪಾಲ

    ಸುದೀಪ್ ಇಂಥದ್ದೊಂದು ಎಚ್ಚರಿಕೆ ಕೊಟ್ಟಾಗ ನಂದು ಮತ್ತು ಜಶ್ವಂತ್ ಇಬ್ಬರೂ ಡಲ್ ಆದಂತೆ ಕಂಡು ಬಂದರು. ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ನಂದು ಪರ ನಿಲ್ಲುವ ಜಶ್ವಂತ್, ಮನೆಯಲ್ಲೂ ಅವರು ಲವರ್ ರೀತಿಯಲ್ಲೇ ಕಾಣುತ್ತಿದ್ದಾರೆ. ಅಲ್ಲದೇ, ಮನೆಯಾಚೆ ನಂದು ಜೊತೆ ಜಶ್ವಂತ್ ಹೇಗಿರುತ್ತಿದ್ದರೊ, ಅದೇ ರೀತಿಯಲ್ಲಿ ಮನೆಯಲ್ಲೂ ಇರುತ್ತಾರೆ. ಮುಂದೆ ಹೀಗೆ ಆಗಬಾರದು ಎನ್ನುವ ಎಚ್ಚರಿಕೆ ಸುದೀಪ್ ಮಾತಿನಲ್ಲಿತ್ತು.

    Live Tv
    [brid partner=56869869 player=32851 video=960834 autoplay=true]

  • ನೆಲಮಂಗಲ ಟೌನ್ ಪೊಲೀಸರ ದಿಢೀರ್ ಕಾರ್ಯಾಚರಣೆ- ಪೋಲಿ ಪುಂಡರಿಗೆ ಶಾಕ್

    ನೆಲಮಂಗಲ ಟೌನ್ ಪೊಲೀಸರ ದಿಢೀರ್ ಕಾರ್ಯಾಚರಣೆ- ಪೋಲಿ ಪುಂಡರಿಗೆ ಶಾಕ್

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ನ್ಯೂಸೆನ್ಸ್ ಮಾಡುತ್ತಿದ್ದವರಿಗೆ ನೆಲಮಂಗಲ ಟೌನ್ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಮಧ್ಯಪಾನ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಮಳೆಯಲ್ಲೂ ನಡುಗುವಂತೆ ಚಳಿ ಬಿಡಿಸಿದ್ದಾರೆ.

    ರಸ್ತೆ ಬದಿ, ಅಂಗಡಿ ಬಾರ್, ಇನ್ನಿತರ ಕಡೆ ಸಮಸ್ಯೆ ಮಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ಪೊಲೀಸರ ದಿಢೀರ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಮಕ್ಕಳು, ವೃದ್ದರು, ಮಹಿಳೆಯರು ಓಡಾಡುವ ಪ್ರದೇಶದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದನ್ನ ಗಮನಿಸಿದ ನೆಲಮಂಗಲ DYSP ಜಗದೀಶ್ ಮತ್ತು ಇನ್ಸ್‍ಪೆಕ್ಟರ್ ಎ.ವಿ.ಕುಮಾರ್ ನೇತೃತ್ವದ ತಂಡ ಖಾಸಗೀ ವಾಹನದಲ್ಲಿ ಕಾರ್ಯಾಚರಣೆ ನಡೆಸಿ ಪೋಲಿ ಪುಂಡರನ್ನು ಬೆಚ್ಚಿ ಬೀಳಿಸಿದ್ದಾರೆ. ಇನ್ನೂ ಮುಂದೆ ಇಂತಹ ಪ್ರಕರಣ ಜರುಗದಂತೆ ಖಡಕ್ ವಾನಿರ್ಂಗ್ ನೀಡಿ ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

  • ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ನಿರಾಣಿ

    ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವ ನಿರಾಣಿ

    – ಸಬೂಬು ಹೇಳಿದರೆ ಸಹಿಸುವುದಿಲ್ಲ
    – ಆಗುವುದಿಲ್ಲ ಹೋಗುವುದಿಲ್ಲ ಎಂಬ ಮಾತೇ ಬೇಡ

    ಬೆಂಗಳೂರು: ಆಗುವುದಿಲ್ಲ, ಬರುವುದಿಲ್ಲ ಎಂಬ ಸಬೂಬು ಹೇಳದೆ ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡದಿದ್ದರೆ, ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದರು.

    ರೇಸ್‍ಕೋರ್ಸ್ ರಸ್ತೆಯ ಖನಿಜ ಭವನದ ಉದ್ಯೋಗ ಮಿತ್ರದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಅಕಾರಿಗಳ ಜೊತೆ ಶುಕ್ರವಾರ ಔಪಚಾರಿಕ ಸಭೆ ನಡೆಸಿದ ಅವರು, ಇನ್ನು ಮುಂದೆ ನನ್ನ ಇಲಾಖೆಯಲ್ಲಿ ಆಗುವುದಿಲ್ಲ, ಬರುವುದಿಲ್ಲ ಎಂಬ ಕಾರಣಗಳನ್ನು ನೀಡಲೇಬಾರದು. ಕೆಲಸ ಮಾಡುವುದಷ್ಟೇ ನಿಮ್ಮ ಗುರಿಯಾಗಿರಬೇಕೆಂದು ತಾಕೀತು ಮಾಡಿದರು.

    ಏನೋ ಒಂದು ಮಾಡಬೇಕೆಂಬ ಅಸಡ್ಡೆ ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಯು ಅತ್ಯಂತ ಮಹತ್ವದ ಇಲಾಖೆಯಾಗಿರುವುದರಿಂದ ಇನ್ನು ಮುಂದೆ ಶಿಸ್ತುಬದ್ಧವಾಗಿ ಕೆಲಸ ಮಾಡಲೇಬೇಕೆಂದು ಸೂಚಿಸಿದರು.

    ನಮ್ಮ ಉದ್ದಿಮೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ಮೊದಲ ಪ್ರಾಶಸ್ತ್ಯ ಕೊಡಬೇಕು. ನೆರೆಯ ರಾಜ್ಯಗಳಲ್ಲಿ ಅಲ್ಲಿನವರಿಗೆ ಆದ್ಯತೆ ಕೊಡುತ್ತಾರೆ. ಹೊರರಾಜ್ಯದವರಿಗೆ ಬಂಡವಾಳ ಹೂಡಿಕೆ ಮಾಡಿಕೊಂಡು ಲಾಭ ಮಾಡುವವರು ಪುನಃ ಇತ್ತ ಕಡೆ ಬರುವುದಿಲ್ಲ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಇನ್ನು ಮುಂದೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ರೋಗಗ್ರಸ್ಥ ನಿಗಮಗಳನ್ನು ಗುರುತಿಸುವ ಕೆಲಸ ಮಾಡಬೇಕು. ಇವುಗಳ ಪುನಶ್ಚೇತನಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.

  • ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ಬೆಂಗಳೂರು: ಮಹಾ ಮಳೆಗೆ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಸಂಭವಿಸಿದ್ದು, ಇದೀಗ ಹವಾಮಾನ ಇಲಾಖೆ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆ.

    ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಲ್ಲದೆ ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಆಗಸ್ಟ್ 9 ರಿಂದ 13ರವರೆಗೆ ವರುಣ ಅಬ್ಬರಿಸಲಿದ್ದಾನೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಆಗಸ್ಟ್ 10 ರಂದು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಹ ಆಗಸ್ಟ್ 9 ಹಾಗೂ 10 ರಂದು 2 ದಿನ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

  • ಅಂತ್ಯಕ್ರಿಯೆಯಿಂದ ಜನರಿಗೆ ತೊಂದರೆಯಾದ್ರೆ ತಹಶೀಲ್ದಾರ್ ಮನೆ ಮುಂದೆ ಶವ ಇಡುತ್ತೇವೆ: ಕತ್ತಿ

    ಅಂತ್ಯಕ್ರಿಯೆಯಿಂದ ಜನರಿಗೆ ತೊಂದರೆಯಾದ್ರೆ ತಹಶೀಲ್ದಾರ್ ಮನೆ ಮುಂದೆ ಶವ ಇಡುತ್ತೇವೆ: ಕತ್ತಿ

    – ಸಚಿವನಾಗಿ ಮಾಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು

    ಚಿಕ್ಕೋಡಿ: ಅಂತ್ಯಕ್ರಿಯೆ ಮಾಡಲು ಜನರಿಗೆ ತೊಂದರೆ ಆಗಬಾರದು. ತೊಂದರೆ ಆದರೆ ತಹಶೀಲ್ದಾರ್ ಮನೆ ಮುಂದೆ ಶವ ತಂದು ಇಡುತ್ತೇವೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಆಯೋಜಿಸಿದ್ದ ಕೊರೊನಾ ನಿಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಲು ಯಾವುದೇ ಸಮಸ್ಯೆ ಆಗಬಾರದು. ಸರ್ಕಾರಿ ಜಮೀನುಗಳಿದ್ದರೆ ಅವುಗಳನ್ನು ಸ್ಮಶಾನಗಳಿಗಾಗಿ ಮೀಸಲಿಡಬೇಕು ಎಂದು ಹೇಳಿದರು.

    ಜಮೀನುಗಳು ಇಲ್ಲದ ಗ್ರಾಮಗಳ ಅಧಿಕಾರಿಗಳು ಜಮೀನು ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ಸ್ಮಶಾನ ಜಾಗ ಇಲ್ಲದೆ ಜನ ತೊಂದರೆ ಅನುಭವಿಸಬಾರದು ಎಂದು ಅಧಿಕಾರಿಗಳಿಗೆ ಉಮೇಶ ಕತ್ತಿ ಎಚ್ಚರಿಕೆ ನೀಡಿದರು. ಅಲ್ಲದೆ ಗ್ರಾಮಗಳನ್ನು ಬಿಟ್ಟು ತೋಟದಲ್ಲಿ ವಾಸಿಸುವ ಜನರಿಗೆ ರಸ್ತೆ ವ್ಯವಸ್ಥೆ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಉಮೇಶ ಕತ್ತಿ ಸೂಚಿಸಿದರು.

    ಸಭೆ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಉಮೇಶ ಕತ್ತಿ ಅವರು, ನನ್ನ ಮಂತ್ರಿ ಮಾಡೋದು ಬಿಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಚಿವನಾಗಿ ಮಾಡಿದರೆ ಸ್ವಾಗತ ಮಾಡುತ್ತೇನೆ ಸದ್ಯ ಶಾಸಕನಾಗಿ ಜನ ಸೇವೆ ಮಾಡುತ್ತಾ ಕ್ಷೇತ್ರದಲ್ಲಿದ್ದೇನೆ ಎಂದು ತಿಳಿಸಿದರು.

  • ಕೇಂದ್ರದ ಮಾರ್ಗಸೂಚಿಗಳನ್ನು ಕಠಿಣಗೊಳಿಸಬೇಕೇ ಹೊರತು ಸಡಿಲ ಮಾಡುವಂತಿಲ್ಲ – ಗೃಹ ಇಲಾಖೆ

    ಕೇಂದ್ರದ ಮಾರ್ಗಸೂಚಿಗಳನ್ನು ಕಠಿಣಗೊಳಿಸಬೇಕೇ ಹೊರತು ಸಡಿಲ ಮಾಡುವಂತಿಲ್ಲ – ಗೃಹ ಇಲಾಖೆ

    ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಬದಲಾಯಿಸುವಂತಿಲ್ಲ ಎಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಇಲಾಖೆ ತಿಳಿಸಿದೆ.

    ಇಂದು ಈ ಸಂಬಂಧ ಆದೇಶ ಹೊರಡಿಸಿರುವ ಗೃಹ ಇಲಾಖೆ ಕೇಂದ್ರ ಸರ್ಕಾರ ನೀಡಿರುವ ನಿಯಮಗಳನ್ನು ಸಡಿಲಿಕೆ ಮಾಡುವಂತಿಲ್ಲ. ಆದರೆ ಮತ್ತಷ್ಟು ನಿಯಮಗಳನ್ನು ಕಠಿಣ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ.

    ಕಂಟೈನ್‍ಮೆಂಟ್, ಬಫರ್, ರೆಡ್, ಗ್ರೀನ್, ಆರೆಂಜ್ ಜೋನ್ ಗಳನ್ನು ಆರೋಗ್ಯ ಇಲಾಖೆ ಸಲಹೆ ಮೇರೆಗೆ ಮಾಡಿದ್ದು, ಕಂಟೈನ್‍ಮೆಂಟ್ ಜೋನ್ ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಲಾಕ್‍ಡೌನ್ ವಿನಾಯತಿ ನೀಡಿದರೆ ಇದು ಯಥಾವತ್ತಾಗಿ ಜಾರಿಗೆ ಬರಬೇಕು. ಕಂಟೈನ್‍ಮೆಂಟ್ ಜೋನ್ ಗಳಲ್ಲಿ ಯಾವುದೇ ಕಾರಣಕ್ಕೂ ವಿನಾಯತಿ ನೀಡಬಾರದು ಎಂದು ಸೂಚಿಸಿದೆ.

    ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಎಲ್ಲ ವಲಯಗಳಲ್ಲಿ ನಿರ್ಬಂಧಿಸಿರುವ ವಲಯಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿನಾಯತಿ ನೀಡದಂತೆ ಗೃಹ ಇಲಾಖೆ ಎಚ್ಚರಿಸಿದೆ.

  • ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಕ್ವಾರಂಟೈನ್‍ನಲ್ಲಿ ಟಿಕ್‍ಟಾಕ್ ಮಾಡಿದವರಿಗೆ ಡಿಸಿ ಖಡಕ್ ಎಚ್ಚರಿಕೆ

    ಹಾಸನ: ಕ್ವಾರಂಟೈನ್‍ನಲ್ಲಿ  ಟಿಕ್‍ಟಾಕ್ ಮಾಡಿದವರಿಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಮುಂಬೈನಿಂದ ಬಂದು ಚನ್ನರಾಯಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಜಿಲ್ಲಾಧಿಕಾರಿ ಆರ್.ಗಿರೀಶ್ ಗಮನಕ್ಕೆ ಬಂದಿದ್ದು, ಟಿಕ್‍ಟಾಕ್ ಮಾಡುತ್ತಿರುವವರಿಗೆ ನಿಯಮ ಪಾಲಿಸುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.

    ಮುಂಬೈನಿಂದ ಹಾಸನಕ್ಕೆ ಬಂದ 12 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ ಹಾಸನ ಗ್ರೀನ್ ಜೋನ್ ಪಟ್ಟ ಕಳೆದುಕೊಂಡಂತಾಗಿದೆ. ಆದರೆ ಮುಂಬೈನಿಂದ ಬಂದ ಕೆಲವರು ಕ್ವಾರಂಟೈನ್ ಕೇಂದ್ರದಲ್ಲಿ ನಿಯಮ ಪಾಲಿಸದೆ ಟಿಕ್‍ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.ಗಿರೀಶ್ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ಈ ಬಗ್ಗೆ ತಿಳಿದುಕೊಂಡು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

  • ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮುಚ್ಚಿದ್ರೆ ಲೈಸೆನ್ಸ್ ರದ್ದು, ಜೊತೆಗೆ ಕ್ರಿಮಿನಲ್ ಕೇಸ್: ಶ್ರೀರಾಮುಲು

    ಖಾಸಗಿ ಆಸ್ಪತ್ರೆ, ಕ್ಲಿನಿಕ್ ಮುಚ್ಚಿದ್ರೆ ಲೈಸೆನ್ಸ್ ರದ್ದು, ಜೊತೆಗೆ ಕ್ರಿಮಿನಲ್ ಕೇಸ್: ಶ್ರೀರಾಮುಲು

    ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳನ್ನು ಮುಚ್ಚಬಾರದು. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಮುಚ್ಚಿದರೆ ಆ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

    ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕೊರೊನಾ ನಿಯಂತ್ರಣ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಎಚ್ಚರಿಕೆ ವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಂದ್ ಆಗಿರುವ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದು ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಶ್ರೀರಾಮುಲು ಸೂಚಿಸಿದ್ದಾರೆ.

    ಈ ಕುರಿತು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಕೂಡಲೇ ಸೂಚನೆ ನೀಡಲು ಸಚಿವ ಶ್ರೀರಾಮುಲು ಆದೇಶ ಮಾಡಿದ್ದಾರೆ. ಈ ಮೊದಲೇ ಮಾಹಿತಿ ನೀಡಿ ಎಚ್ಚರಿಸಿದ್ದರೂ ಆಸ್ಪತ್ರೆ ಅಥವಾ ಕ್ಲಿನಿಕ್ ಸ್ಥಗಿತಗೊಳಿಸಿದ್ದರೆ ಯಾವ ಮುಲಾಜಿಲ್ಲದೆ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಿಮಿನಲ್ ಕೇಸ್ ಸಹ ಹಾಕಲಾಗುತ್ತದೆ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

  • ಇನ್ಮೇಲೆ ವಾರ್ನಿಂಗ್ ಇರಲ್ಲ, ಆ್ಯಕ್ಷನ್ ಅಷ್ಟೇ: ಹಾಸನ ಎಸ್‍ಪಿ

    ಇನ್ಮೇಲೆ ವಾರ್ನಿಂಗ್ ಇರಲ್ಲ, ಆ್ಯಕ್ಷನ್ ಅಷ್ಟೇ: ಹಾಸನ ಎಸ್‍ಪಿ

    ಹಾಸನ: ಇನ್ನು ಮೇಲೆ ವಾರ್ನಿಂಗ್ ಇರಲ್ಲ. ಆಕ್ಷನ್ ಅಷ್ಟೇ ಇರುತ್ತೆ ಎಂದು ಕಫ್ರ್ಯೂ ಉಲ್ಲಂಘಿಸುವ ಮಂದಿಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

    ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸ್‍ಪಿ, ಜಿಪಂ ಸಿಇಒ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಎಷ್ಟೇ ಬುದ್ಧಿವಾದ ಹೇಳಿದರೂ ಪದೇ ಪದೇ ಅಂಗಡಿ ತೆಗೆಯುವವರು ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ಬಗ್ಗೆ ಮಾತನಾಡಿದ ಎಸ್‍ಪಿ ಶ್ರೀನಿವಾಸ್ ಗೌಡ, ಮೊದಲು ಎಚ್ಚರಿಕೆ ಕೊಡುವುದು ನಮ್ಮ ಕರ್ತವ್ಯ. ಈಗ ಎಚ್ಚರಿಕೆ ಕೊಟ್ಟಾಗಿದೆ. ಇನ್ನು ನಿಯಮ ಮೀರಿ ನಡೆದರೆ ಆಕ್ಷನ್ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಷ್ಟೇ ಅಲ್ಲದೆ ನಿಯಮ ಮೀರಿರುವ ಹೋಟೆಲ್, ಹೋಂಸ್ಟೇ ಮೇಲೆ ಈಗಾಗಲೇ ಮೂರು ಕೇಸ್ ದಾಖಲಾಗಿದೆ ಎಂದು ಕೂಡ ತಿಳಿದರು. ಈ ವೇಳೆ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ ಯಾರಾದರೂ ವಿದೇಶದಿಂದ ಬಂದವರು ಮನೆಯಿಂದ ಹೊರಗೆ ಓಡಾಡುತ್ತಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

    ಜಿಲ್ಲೆಯಲ್ಲಿ ಯಾವುದೇ ಕೊರೊನ ಪಾಸಿಟಿವ್ ಕೇಸ್ ಕಂಡು ಬಂದಿಲ್ಲ. ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ರೋಗ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿದರು.