Tag: Warn

  • ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

    ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

    ಮಿಳು ಚಿತ್ರನಟ ವಿಶಾಲ್ (Vishal) ಕಿಡಿಕಾರಿದ್ದಾರೆ. ತಮ್ಮ ಚಿತ್ರಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅವರು ಹೇಳಿಕೆ ನೀಡಿದ್ದಾರೆ. ಹಲವಾರು ಚಿತ್ರಮಂದಿರಗಳಲ್ಲಿ ನನ್ನ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಅದಕ್ಕೆ ಕಾರಣ ಏನು ಎನ್ನುವುದು ನನಗೆ ಗೊತ್ತಿದೆ. ಹೀಗೆ ಕೆಣಕಿದರೆ ಸುಮ್ಮನೆ ಇರೋದಿಲ್ಲವೆಂದು ಮಾತನಾಡಿದ್ದಾರೆ.

    ವಿಶಾಲ್ ವಾರ್ನ್ ಮಾಡಿದ್ದು ಬೇರೆ ಯಾರಿಗೂ ಅಲ್ಲ, ಸಚಿವ ಹಾಗೂ ನಟ ಉದಯ್ ನಿಧಿ ಸ್ಟಾಲಿನ್ (Uday Nidhi Stalin) ಗೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಮಧ್ಯ ಕೋಲ್ಡ್ ವಾರ್ ಯಾವತ್ತಿನಿಂದಲೂ ಇದೆ. ವಿಶಾಲ್ ಸಿನಿಮಾಗಳಿಗೆ ಅವರು ತಡೆಯೊಡ್ಡುತ್ತಾರೆ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು. ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎನ್ನುವುದು ವಿಶಾಲ್ ಆರೋಪ.

    ಸದ್ಯ ವಿಶಾಲ್ ನಟನೆಯ ರತ್ನಂ ಸಿನಿಮಾ ರಿಲೀಸ್ ಆಗಿದೆ. ಜಿಲ್ಲಾ ಕೇಂದ್ರಗಳಲ್ಲೇ ವಿಶಾಲ್ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಜೊತೆಗೆ ಸಿನಿಮಾ ರಂಗದಲ್ಲಿ ಅವರನ್ನು ಹತ್ತಿಕ್ಕುವ ಕೆಲಸವನ್ನೂ ಕೆಲವರು ಮಾಡುತ್ತಿದ್ದಾರಂತೆ. ಹಾಗಾಗಿ ವಿಶಾಲ್ ವಾರ್ನ್ ಮಾಡಿದ್ದಾರೆ.

  • ಹವಾ ಮೆಂಟೇನ್ ಮಾಡಿದ್ರೆ ಬಾಲ ಕಟ್ – ರೌಡಿಶೀಟರ್‌ಗಳಿಗೆ ಖಡಕ್ ವಾರ್ನ್

    ಹವಾ ಮೆಂಟೇನ್ ಮಾಡಿದ್ರೆ ಬಾಲ ಕಟ್ – ರೌಡಿಶೀಟರ್‌ಗಳಿಗೆ ಖಡಕ್ ವಾರ್ನ್

    – ರಾತ್ರೋರಾತ್ರಿ ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ

    ಬೆಂಗಳೂರು: ರಾತ್ರೋರಾತ್ರಿ ಶ್ರೀರಾಂಪುರ ಪೊಲೀಸರು ರೌಡಿಶೀಟರ್ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಶ್ರೀರಾಂಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮೇಲೆ ದಾಳಿ ನಡೆಸಿ ಬಿಸಿಮುಟ್ಟಿಸುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆತಂದು ಖಡಕ್ ವಾರ್ನ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.

    ಗಣೇಶ್ ತಂಬಿ, ಲೋಗನಾಥ್ ಸೇರಿದಂತೆ ಪ್ರಮುಖ ರೌಡಿಶೀಟರ್‌ಗಳನ್ನ ಕರೆ ತಂದು ಶ್ರೀರಾಂಪುರ ಇನ್ಸ್‌ಪೆಕ್ಟರ್ ಬೆಂಡೆತ್ತಿದ್ದಾರೆ. ರಸ್ತೆಗಳಲ್ಲಿ ನಿಂತು ಎದುರಿಸಿ ಬೆದರಿಸಿ ರಾಬರಿ ಮಾಡೋದು, ಮೊಬೈಲ್ ಕಳ್ಳತನ, ಹವಾ ಮೆಂಟೇನ್ ಮಾಡಿದರೆ ಬಾಲ ಕಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರು ಕಡ್ಡಾಯವಾಗಿ ಠಾಣೆಗಳಿಗೆ ಬಂದು ತಮ್ಮ ಮುಖಗಳನ್ನ ತೋರಿಸಿ ಹೋಗಬೇಕು. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಹೆಸರುಗಳು ಕೇಳಿ ಬಂದರೆ, ಮುಂದೆ ಆಗೋ ಅನಾಹುತಗಳಿಗೆ ನೀವೇ ಕಾರಣರಾಗಿರುತ್ತೀರಾ ಎಂದು ಶ್ರೀರಾಂಪುರ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ.

    ಸುಮಾರು 25ಕ್ಕೂ ಹೆಚ್ಚು ಪುಡಾರಿಗಳನ್ನ ಕರೆತಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಮನೆಗಳಿಗೆ ಹೋಗಿ ಪೋಷಕರಿಗೆ ಮಕ್ಕಳ ಬಗ್ಗೆ ಗಮನ ಇಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

  • ರೆಡ್ಡಿ ಡೀಲ್-ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‍ನಿಂದ ಖಡಕ್ ಸಂದೇಶ ರವಾನೆ

    ರೆಡ್ಡಿ ಡೀಲ್-ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‍ನಿಂದ ಖಡಕ್ ಸಂದೇಶ ರವಾನೆ

    ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಹೈಕಮಾಂಡ್ ರಾಜ್ಯ ಬಿಜೆಪಿ ನಾಯರಕರಿಗೆ ಖಡಕ್ ಸಂದೇಶವನ್ನು ರವಾನಿಸಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಜನಾರ್ದನ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಹೈಕಮಾಂಡ್ ಪಡೆದುಕೊಂಡಿದ್ದು, ಗಣಿ ಧಣಿ ಪರ ಅಥವಾ ವಿರೋಧ ಹೇಳಿಕೆ ನೀಡದಂತೆ ಸೂಚಿಸಿದೆ. ಜನಾರ್ದನ ರೆಡ್ಡಿ ಜೊತೆಗಿನ ನಿಮ್ಮ ಸ್ನೇಹ ವೈಯಕ್ತಿಕ. ನಿಮ್ಮ ಹೇಳಿಕೆ ಪಕ್ಷದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಯ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರಂತೆ.

    ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿಯೇ ರೆಡ್ಡಿಗೂ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಅಂತಾ ಹೇಳಲಾಗಿದೆ. ಇದೇ ನಿಲುವುವನ್ನು ರಾಜ್ಯ ಬಿಜೆಪಿ ನಾಯಕರು ಪ್ರದರ್ಶಿಸಬೇಕು ಎಂದು ಹೈಕಮಾಂಡ್ ಖಡಕ್ ಎಚ್ಚರಿಕೆಯನ್ನು ನೀಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv