Tag: Ward Boy

  • ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

    ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ – ವಾರ್ಡ್ ಬಾಯ್ ಅರೆಸ್ಟ್

    ಹುಬ್ಬಳ್ಳಿ: ಇಲ್ಲಿನ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶ್ವಸಿಯಾಗಿದ್ದಾರೆ.

    ಬಂಧಿತನನ್ನು ಅಶೋಕ್ ಹಲಗಿ ಎಂದು ಗುರುತಿಸಲಾಗಿದೆ. ಕಳೆದ 23ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೊಂಕಿತ ಮಹಿಳೆಯ ಮೇಲೆ ವಾರ್ಡಬಾಯ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಸೋಂಕಿತ ಮಹಿಳೆ ಪುತ್ರನಿಗೆ ಈ ಕುರಿತು ಮಾಹಿತಿ ನೀಡಿದ್ದಳು.

    ಘಟನೆ ಬೆಳಕಿಗೆ ಬಂದ ನಂತರ ಸೊಂಕಿತ ಮಹಿಳೆಯ ಪರವಾಗಿ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ಕೃತ್ಯವನ್ನ ಆಸ್ಪತ್ರೆಯ ಆಡಳಿತ ಮಂಡಳಿ ಅಲ್ಲಗೆಳೆದಿದ್ದರು. ಅಲ್ಲದೇ ದೂರುದಾರನ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ಈ ಘಟನೆಯ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿದ ವಿದ್ಯಾನಗರ ಪೋಲೀಸರು ಸೊಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಾರ್ಡ್ ಬಾಯ್ ಅಶೋಕ ಹಲಗಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇದನ್ನೂ ಓದಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

    ವಾರ್ಡಬಾಯ್ ಅಶೋಕ್ ಹಲಗಿ ಕೃತ್ಯ ಎಸಗಿದ ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಆಸ್ಪತ್ರೆಯಿಂದ ಪರಾರಿಯಾಗಿ ಅಪಘಾತದಲ್ಲಿ ಗಾಯಗೊಂಡಿದ್ದ. ಆರೋಪಿಯ ಚಲನವಲನ ಪತ್ತೆ ಮಾಡಿದ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರ ಮೊಬೈಲ್ ಕದ್ದ ಆರೋಪಿ ಬಂಧನ 

    ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

  • ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    ಔಷಧಿ ಹಚ್ಚೋ ನೆಪದಲ್ಲಿ ಮಹಿಳಾ ರೋಗಿಯ ಖಾಸಗಿ ಅಂಗ ಮುಟ್ಟಿ ವಾರ್ಡ್ ಬಾಯ್ ಕಿರುಕುಳ!

    – ಕುಟುಂಬಸ್ಥರು ನೀಡಿದ ದೂರಿನಿಂದ ಆರೋಪಿ ಅರೆಸ್ಟ್

    ಮುಂಬೈ: ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಒಬ್ಬ ಮಹಿಳಾ ರೋಗಿಗೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ.

    ಆರೋಪಿಯನ್ನು ಮುಕೇಶ್ ಪ್ರಜಾಪತಿ(25) ಎಂದು ಗುರುತಿಸಲಾಗಿದೆ. ಈತ ಸರ್ಜರಿಗೆಂದು ಬಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಿರುಕುಳ ನೀಡಿದ್ದಾನೆ.

    ಡಿಸೆಂಬರ್ 16ರಂದು 29 ವರ್ಷದ ಮಹಿಳೆ ಸರ್ಜರಿಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 17ರಂದು ರಾತ್ರಿ 25 ವರ್ಷದ ಯುವಕ ಮಹಿಳೆಯ ಬಳಿ ಬಂದು ನಿಮ್ಮ ದೇಹಕ್ಕೆ ಔಷಧಿ ಹಚ್ಚಬೇಕು ಎಂದು ಹೇಳಿದ್ದಾನೆ. ಆರೋಪಿ ಮಾತನ್ನು ನಂಬಿದ ಮಹಿಳೆ ಆಯ್ತು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿ ಮಹಿಳೆಯ ಖಾಸಗಿ ಅಂಗವನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ.

    ಆರೋಪಿಯಿಂದ ಕಿರುಕುಳ ಎದರಿಸಿದ ಮಹಿಳೆ ಮರುದಿನ ನಡೆದ ಘಟನೆಯನ್ನು ತಮ್ಮ ಸಂಬಂಧಿಕರ ಮುಂದೆ ವಿವರಿಸಿದ್ದಾರೆ. ಇದರಿಂದ ಎಚ್ಚೆತ್ತ ಸಂತ್ರಸ್ತೆ ಕುಟುಂಬ ಕೂಡಲೇ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ತಡರಾತ್ರಿ ವಾರ್ಡ್ ಬಾಯ್ ಮಹಿಳೆ ಇದ್ದ ರೂಮಿನೊಳಗೆ ಹೇಗೆ ಬಂದ ಎಂದು ಪ್ರಶ್ನಿಸಿದ್ದಾರೆ.

    ಸಂತ್ರಸ್ತೆ ಕುಟುಂಬ ಪೊಲೀಸರಿಗೂ ದೂರು ನೀಡಿದರು. ಹೀಗಾಗಿ ಡಿಸೆಂಬರ್ 18ರಂದು ವಾರ್ಡ್ ಬಾಯ್ ನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.