Tag: war 2

  • ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಟಾಲಿವುಡ್‌ನ ಎಂಗ್ ಟೈಗರ್ ಎಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಜೂ.ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದ ನಂತರ ದೇವರ ಸಿನಿಮಾದಲ್ಲಿ ನಟಿಸಿದ್ದರು. ದೇವರ ಸಿನಿಮಾ ಅಂದುಕೊಟ್ಟ ಮಟ್ಟಿಗೆ ಹಿಟ್ ಆಗಲಿಲ್ಲ. ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿತ್ತು. ಇದೀಗ ಮತ್ತೊಮ್ಮೆ ತಾರಕ್‌ಗೆ ಹಿನ್ನಡೆಯಾಗಿದೆ. ಜೂ.ಎನ್‌ಟಿಆರ್ ದೇವರ ಸಿನಿಮಾ ಬಳಿಕ ಬಾಲಿವುಡ್‌ನ ವಾರ್-2 ಸಿನಿಮಾದಲ್ಲಿ ನಟಿಸಿದ್ದರು. ವಾರ್-2 ಸಿನಿಮಾ ಕೂಡಾ ಬಂಡವಾಳ ಹೂಡಿದ ನಿರ್ಮಾಪಕನಿಗೆ ಸಂಕಷ್ಟ ತಂದೊಡ್ಡಿದೆ.

    ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ನಟಿಸಿದ ವಾರ್-2 ಸಿನಿಮಾ ಇದೇ ಆ.14ಕ್ಕೆ ತೆರೆಕಂಡಿತ್ತು. ತೆರೆಕಂಡು ಒಂದು ವಾರವಾದರೂ ಸಿನಿಮಾ 200 ಕೋಟಿ ಗಳಿಕೆ ಕಂಡಿಲ್ಲ. 150 ಕೋಟಿ ಕಲೆಹಾಕುವಲ್ಲಿ ಸಿನಿಮಾ ತೆವಳುತ್ತ ಸಾಗುತ್ತಿದೆ. ಯಶ್‌ರಾಜ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದ ವಾರ್-2 ಕಲೆಕ್ಷನ್ ಸಿಂಗಲ್ ನಂಬರ್‌ಗೆ ಬಂದು ನಿಂತಿದೆ.‌ ಇದನ್ನೂ ಓದಿ: ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ `45’ ರಿಲೀಸ್ ಡೇಟ್ ಫಿಕ್ಸ್

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ದೇವರ ಸಿನಿಮಾ ಕೂಡಾ ಸೋತು ಸುಣ್ಣವಾಗಿತ್ತು. ಈ ವರ್ಷ ತೆರೆಕಂಡ ವಾರ್-2 ಕೂಡ ತಾರಕ್‌ಗೆ ಸಕ್ಸಸ್ ತಂದುಕೊಟ್ಟಿಲ್ಲ. ಒಂದು ಕಡೆ ವಾರ್-2 ಸಿನಿಮಾ ರಿಲೀಸ್ ಆದ ದಿನವೇ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕೂಡ ತೆರೆಗೆ ಬಂದಿತ್ತು. ಇದು ಸಿನಿಮಾದ ಕಲೆಕ್ಷನ್‌ಗೆ ಮುಳುವಾಯ್ತು ಎಂದು ಕೆಲವರ ಅಭಿಪ್ರಾಯವಾದ್ರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ನೇರವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ತಾರಕ್‌ಗೆ ಸೋಲಿನ ಪಟ್ಟ ಸಿಕ್ಕಿದೆ.

  • ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ವಾರ್-2 ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಹುನಿರೀಕ್ಷಿತ ವಾರ್-2 (War-2) ಸಿನಿಮಾ ಟೀಸರ್‌ನಿಂದಲೇ (Teaser) ಕುತೂಹಲವನ್ನು ಹುಟ್ಟಿಸಿದೆ. ಆಗಸ್ಟ್‌ 14 ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ಈ ಸಿನಿಮಾದ ಟ್ರೇಲರ್‌ ನೋಡುವ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮೂಡಿದೆ. ಆ ಬಗ್ಗೆ ಯಶ್ ರಾಜ್ ಫಿಲಂಸ್ ದಿನಾಂಕ ಘೋಷಣೆ ಮಾಡಿದೆ. ಇದೇ ಜುಲೈ 25ರಂದು ಚಿತ್ರದ ಟ್ರೇಲರ್‌ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ ನಿರ್ಮಾಣ ಸಂಸ್ಥೆ.

    ಜೂ.ಎನ್‌ಟಿಆರ್ (Jr NTR) ಹಾಗೂ ಹೃತಿಕ್ ರೋಷನ್ (Hrithik Roshan) ಇಂಡಸ್ಟ್ರಿಗೆ ಬಂದು 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸಿನಿಮಾದ ಟ್ರೇಲರ್‌ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಈ ಹಿಂದೆ ಜೂ.ಎನ್‌ಟಿಆರ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದೀಗ ಜುಲೈ 25ಕ್ಕೆ ಟ್ರೇಲರ್‌ ರಿಲೀಸ್ ಆಗಲಿದೆ. ಇದನ್ನೂ ಓದಿ: ಪೆದ್ದಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಿದ ರಾಮ್ ಚರಣ್ : ಮತ್ತೆ ಶೂಟಿಂಗ್ ಶುರು

     

    ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ ಅಯಾನ್ ಮುಖರ್ಜಿ. ವಿಶೇಷ ಅಂದ್ರೆ ಜೂ.ಎನ್‌ಟಿಆರ್ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಮೊದಲು ವಾರ್ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯಿಸಿದ್ದರು.

  • War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್‌ಗೆ (Jr.NTR) ಇಂದು (ಮೇ 20) ಹುಟ್ಟುಹಬ್ಬದ ಹಿನ್ನೆಲೆ ‘ವಾರ್ 2’ (War 2) ಟೀಸರ್ ರಿಲೀಸ್ ಮಾಡಲಾಗಿದೆ. ಹೃತಿಕ್ ರೋಷನ್ (Hrithik Roshan) ಮುಂದೆ ಖಡಕ್ ವಿಲನ್ ಆಗಿ ತಾರಕ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

    ‘ವಾರ್ 2’ ಟೀಸರ್‌ನಲ್ಲಿ ಹೃತಿಕ್ ಮುಂದೆ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ನನ್ನ ಕಣ್ಣುಗಳ ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಎನ್ನುತ್ತಾ ತಾರಕ್ ಡೈಲಾಗ್ ಶುರುವಾಗಿದೆ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತದೆ, ಗೆಟ್ ರೆಡಿ ಫಾರ್ ವಾರ್ ಎಂದು ತಾರಕ್ ಡೈಲಾಗ್ ಹೊಡೆದಿದ್ದಾರೆ. ಹೃತಿಕ್ ಮತ್ತು ತಾರಕ್ ಜುಗಲ್‌ಬಂದಿ ಮಸ್ತ್ ಆಗಿದೆ. ಇಬ್ಬರೂ ಪೈಪೋಟಿಯಲ್ಲಿ ಫೈಟಿಂಗ್ ಮಾಡಿದಂತಿದೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಸೀಕ್ವೆನ್ಸ್ ಟೀಸರ್‌ನಲ್ಲಿ ತೋರಿಸಲಾಗಿದೆ. ಈ ಚಿತ್ರದ ಟೀಸರ್ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

    ಗ್ಲ್ಯಾಮರ್‌ ಗೊಂಬೆಯಾಗಿ ಕಿಯಾರಾ ಅಡ್ವಾಣಿ (Kiara Adavni) ನಟಿಸಿದ್ದು, ಬಿಕಿನಿಯಲ್ಲಿ ಮಿಂಚಿದ್ದಾರೆ. ರಾ ಏಜೆಂಟ್ ಆಗಿರೋ ಹೃತಿಕ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು 150 ದಿನಗಳ ಕಾಲ 6 ದೇಶಗಳಲ್ಲಿ ‘ವಾರ್ 2’ ಶೂಟಿಂಗ್ ಮಾಡಲಾಗಿದೆ.

    ಯಶ್ ರಾಜ್ ಫಿಲ್ಮ್ ನಿರ್ಮಾಣದ ಈ ಸಿನಿಮಾವನ್ನು ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಆ.14ರಂದು ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ವಾರ್ 2 ರಿಲೀಸ್ ಆಗಲಿದೆ.

  • ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?

    ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?

    ‘ದೇವರ’ ಸಿನಿಮಾ (Devara) ಬಳಿಕ ಜ್ಯೂ.ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೇ 20ರಂದು ತಾರಕ್ ಹುಟ್ಟುಹಬ್ಬದ ಹಿನ್ನೆಲೆ ಈ ಚಿತ್ರದ ಬಗ್ಗೆ ಅಪ್‌ಡೇಟ್ ಸಿಗುತ್ತಾ ಎಂದು ನಿರೀಕ್ಷಿಸಿದವರಿಗೆ ಕಹಿ ಸುದ್ದಿ ಸಿಕ್ಕಿದೆ. ನಟನ ಹುಟ್ಟುಹಬ್ಬದಂದು ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲ್ಲ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ (JR NTR) ಕಾಂಬಿನೇಷನ್ ಸಿನಿಮಾಗೆ ‘ಪುಷ್ಪ 2’ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಮೇ 20ರಂದು ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬ. ಆ ದಿನ ‘ವಾರ್ 2’ (War 2) ಚಿತ್ರದಿಂದ ಅಪ್‌ಡೇಟ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

     

    View this post on Instagram

     

    A post shared by Mythri Movie Makers (@mythriofficial)

    ಸದ್ಯ ಈ ಸುದ್ದಿ ಫ್ಯಾನ್ಸ್‌ಗೆ ಬೇಸರ ಆಗಿದ್ರೂ ‘ವಾರ್ 2’ ಚಿತ್ರದ ತುಣುಕನ್ನು ನೋಡಿ ಸಂಭ್ರಮಿಸಬಹುದಲ್ವಾ ಎಂದು ಖುಷಿಪಡ್ತಿದ್ದಾರೆ. ನಟನ ಮೊದಲ ಬಾಲಿವುಡ್ ಚಿತ್ರವಾಗಿರೋದ್ರಿಂದ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

    ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತಾರಕ್ ತೆರೆಹಂಚಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ಜಾನ್ ಅಬ್ರಹಾಂ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

  • ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

    ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

    ‘ಸ್ತ್ರೀ 2′ (Stree 2) ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಶ್ರದ್ಧಾ ಕಪೂರ್‌ಗೆ (Shraddha Kapoor) ಬೇಡಿಕೆ ಹೆಚ್ಚಾಗಿದೆ. ಹಾಗಂತ ಬಂದ ಸಿನಿಮಾ ಆಫರ್ಸ್‌ಗಳನ್ನು ಅವರು ಒಪ್ಪಿಕೊಳ್ತಿಲ್ಲ. ಹೀಗಿರುವಾಗ ‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

    ಶ್ರದ್ಧಾ ಕಪೂರ್ ಅವರು ‘ಸ್ತ್ರೀ 2’ ಸಿನಿಮಾ ಮೂಲಕ ಸಕ್ಸಸ್ ಕಂಡ ಮೇಲೆ ನಾಯಕಿಯಾಗಿ ಮತ್ತು ಸ್ಪೆಷಲ್ ಹಾಡುಗಳಿಗೆ ಹೆಜ್ಜೆ ಹಾಕಲು ಬುಲಾವ್ ಬರುತ್ತಿದೆ. ಈ ಹಿಂದೆ ‘ಪುಷ್ಪ 2’ಗೆ ನಟಿಯನ್ನು ಕೇಳಲಾಗಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಆಗದೇ ಇದ್ದಿದ್ದಕ್ಕೆ ಅವರನ್ನು ಕೈಬಿಡಲಾಯಿತು ಎಂಬ ಸುದ್ದಿ ಹರಿದಾಡಿತ್ತು. ಇದೀಗ ‘ವಾರ್ 2’ (War 2) ಚಿತ್ರದಲ್ಲಿ ಶ್ರದ್ಧಾ ಹೆಸರು ಸದ್ದು ಮಾಡುತ್ತಿದೆ.

    ಜ್ಯೂ.ಎನ್‌ಟಿಆರ್, ಹೃತಿಕ್ ರೋಷನ್ (Hrithik Roshan) ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಶ್ರದ್ಧಾರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ನಟಿ ಗ್ರೀನ್ ಸಿಗ್ನಲ್ ಕೊಟ್ರಾ? ಚಿತ್ರತಂಡದ ಭಾಗವಾಗ್ತಿದ್ದಾರಾ? ಎಂಬುದು ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

  • ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡ ಕಿಯಾರಾ ಅಡ್ವಾಣಿ

    ಹೃತಿಕ್ ರೋಷನ್ (Hrithik Roshan), ಜ್ಯೂ.ಎನ್‌ಟಿಆರ್ ನಟನೆಯ ವಾರ್ 2 ಸಿನಿಮಾದ ಶೂಟಿಂಗ್ ವಿದೇಶದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ‘ವಾರ್ 2’ ಸೆಟ್‌ನ ಫೋಟೋ ಹಂಚಿಕೊಂಡಿದ್ದಾರೆ.

    ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳ್ತಿರುವ ‘ವಾರ್ 2’ (War 2) ಚಿತ್ರಕ್ಕೆ ಕಿಯಾರಾ ನಾಯಕಿಯಾಗಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗುರುವ ನಟಿ ಡೈರೆಕ್ಟರ್ ಅಯಾನ್ ಜೊತೆ ಕುಳಿತಿರುವ ಸೆಟ್‌ನ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ ಹೋಲಿ ಸನ್‌ಡೇ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ಅಂದಹಾಗೆ, ಇತ್ತೀಚೆಗೆ ಗ್ರೀಸ್‌ನಲ್ಲಿ ಹೃತಿಕ್ ರೋಷನ್ (Hrithik Roshan) ಮತ್ತು ಕಿಯಾರಾ (Kiara Advani) ರೊಮ್ಯಾಂಟಿಕ್ ಸಾಂಗ್ ಶೂಟ್ ನಡೆಯುತ್ತಿದೆ. ಅದರ ಕೆಲ ತುಣುಕುಗಳನ್ನು ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಚಿತ್ರತಂಡ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ಇನ್ನೂ ಮೊದಲ ಬಾರಿಗೆ ಹೃತಿಕ್, ಕಿಯಾರಾ, ಜ್ಯೂ.ಎನ್‌ಟಿಆರ್ ಜೊತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಫ್ಯಾನ್ಸ್ಗೆ ಭಾರೀ ಭರವಸೆ ಇದೆ.

  • ಹೃತಿಕ್‌, ಕಿಯಾರಾ ನಟನೆಯ ‘ವಾರ್‌ 2’ ಚಿತ್ರದ ವಿಡಿಯೋ ಲೀಕ್‌

    ಹೃತಿಕ್‌, ಕಿಯಾರಾ ನಟನೆಯ ‘ವಾರ್‌ 2’ ಚಿತ್ರದ ವಿಡಿಯೋ ಲೀಕ್‌

    ಹೃತಿಕ್ ರೋಷನ್ ಮತ್ತು ಕಿಯಾರಾ (Kiara Advani) ನಟನೆಯ ಬಹುನಿರೀಕ್ಷಿತ ‘ವಾರ್ 2’ (War 2) ಚಿತ್ರದ ಶೂಟಿಂಗ್ ಇಟಲಿಯಲ್ಲಿ ಭರದಿಂದ ನಡೆಯುತ್ತಿದೆ. ‘ವಾರ್ 2’ ಸಿನಿಮಾ ಸೆಟ್‌ನ ವಿಡಿಯೋ ಮತ್ತು ಫೋಟೋಗಳು ಲೀಕ್ ಆಗಿವೆ. ಚಿತ್ರದಲ್ಲಿನ ಹೃತಿಕ್, ಕಿಯಾರಾ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ನಾಲ್ಕೈದು ದಿನಗಳ ಹಿಂದೆ ‘ವಾರ್ 2’ ತಂಡದ ಜೊತೆ ಹೃತಿಕ್ (Hrithik Roshan) ಮತ್ತು ಕಿಯಾರಾ ಇಟಲಿಗೆ ತೆರಳಿದ್ದರು. ರೊಮ್ಯಾಂಟಿಕ್ ಸಾಂಗ್ ಶೂಟ್ ಇಟಲಿಯಲ್ಲಿ ಭರದಿಂದ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ಭಾಗಿಯಾದ ‘ವಾರ್ 2’ ಜೋಡಿಯ ಫೋಟೋ ಇದೀಗ ಲೀಕ್ ಆಗಿದೆ. ಇಬ್ಬರೂ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ತುಣುಕುಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇನ್ನೂ ಫೋಟೋ ಲೀಕ್‌ ಆಗಿರೋದು ಸಹಜವಾಗಿ ಚಿತ್ರತಂಡಕ್ಕೆ ಬೇಸರವುಂಟು ಮಾಡಿದೆ.

    ಅಂದಹಾಗೆ, ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತೆಲುಗಿನ ನಟ ಜ್ಯೂ.ಎನ್‌ಟಿಆರ್ (Jr.Ntr) ನಟಿಸಿದ್ದಾರೆ. ತಾರಕ್ ಕೂಡ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರವನ್ನು ‘ಬ್ರಹ್ಮಾಸ್ತ್ರ’ ಖ್ಯಾತಿಯ ನಿರ್ದೇಶಕ ಆಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

    ಇನ್ನೂ ಮೊದಲ ಬಾರಿಗೆ ಹೃತಿಕ್‌ ಮತ್ತು ಕಿಯಾರಾ ಜೊತೆಯಾಗಿ ನಟಿಸುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಅದಷ್ಟೇ ಅಲ್ಲ, ಹೃತಿಕ್‌ ಮತ್ತು ತಾರಕ್‌ ಜುಗಲ್‌ಬಂದಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  • ಬಾಲಿವುಡ್‌ನತ್ತ ಆ್ಯಕ್ಷನ್ ಪ್ರಿನ್ಸ್- ಹೃತಿಕ್ ರೋಷನ್ ಸಿನಿಮಾದಲ್ಲಿ ಧ್ರುವ ಸರ್ಜಾ

    ಬಾಲಿವುಡ್‌ನತ್ತ ಆ್ಯಕ್ಷನ್ ಪ್ರಿನ್ಸ್- ಹೃತಿಕ್ ರೋಷನ್ ಸಿನಿಮಾದಲ್ಲಿ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ (KD Film) ಸಿನಿಮಾದ ರಿಲೀಸ್ ಬಗ್ಗೆ ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಕ್ರೇಜಿ ಅಪ್‌ಡೇಟ್ ಸಿಕ್ಕಿದೆ. ಬಾಲಿವುಡ್‌ಗೆ ಹಾರಲಿದ್ದಾರೆ ಧ್ರುವ ಸರ್ಜಾ. ಇದನ್ನೂ ಓದಿ:‘ಪುಷ್ಪ 2’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಜಾನ್ವಿ ಕಪೂರ್‌

    ‘ಪೊಗರು’ ಸಿನಿಮಾ ರಿಲೀಸ್ ಆಗಿ 3 ವರ್ಷ ಕಳೆದರೂ ಫ್ಯಾನ್ಸ್‌ಗೆ ಅವರ ಚಿತ್ರಗಳ ಬಗ್ಗೆ ಏನು ಅಪ್‌ಡೇಟ್ ಸಿಗದೇ ನಿರಾಶರಾಗಿದ್ದರು. ಆದರೆ ತಮ್ಮ ಮುಂಬರುವ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಧ್ರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಈಗ ಮಾರ್ಟಿನ್, ಕೆಡಿ ಚಿತ್ರಗಳ ಟ್ರೇಲರ್, ಟೀಸರ್ ರಿಲೀಸ್‌ಗಾಗಿ ಫ್ಯಾನ್ಸ್ ಕಾಯುತ್ತಿರುವಾಗಲೇ ಹೃತಿಕ್ ರೋಷನ್ ಜೊತೆ ಧ್ರುವ ಸರ್ಜಾ ನಟಿಸುವ ಕುರಿತು ಸ್ವೀಟ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ‘ವಾರ್ 2’ (War 2) ಸಿನಿಮಾದಲ್ಲಿ ಹೃತಿಕ್ ರೋಷನ್ ಅವರ ಸಹೋದರನಾಗಿ ಪವರ್‌ಫುಲ್ ಪಾತ್ರದಲ್ಲಿ ನಟಿಸೋಕೆ ಧ್ರುವಗೆ ಕರೆ ಬಂದಿದೆ ಎಂದು ಸುದ್ದಿ ಹಬ್ಬಿದೆ. ಹೃತಿಕ್, ಜ್ಯೂ.ಎನ್‌ಟಿಆರ್ ಜೊತೆ ಧ್ರುವ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂದು ಹೇಳಲಾಗ್ತಿದೆ. ಈಗ ವೈರಲ್ ಆಗಿರುವ ಈ ಸುದ್ದಿ ನಿಜನಾ? ಎಂಬುದನ್ನು ಧ್ರುವ ಅಥವಾ ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.

    4 ವರ್ಷಗಳ ಹಿಂದೆ ‘ವಾರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ‘ವಾರ್ 2’ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಚಿತ್ರರಂಗದಲ್ಲಿ ಸೌತ್ ಸಿನಿಮಾಗಳೇ ಗೆಲುವು ಕಾರಣುತ್ತಿರುವುದಕ್ಕೆ ದಕ್ಷಿಣದ ತಾರೆಯರಿಗೆ ಬಾಲಿವುಡ್ ಮಣೆ ಹಾಕ್ತಿದೆ. ಈ ಬಾರಿ ವಾರ್‌ 2 ಸಿನಿಮಾ ಗೆಲ್ಲುತ್ತಾ? ಕಾಯಬೇಕಿದೆ.

  • ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್

    ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್ (Jr.Ntr) ಸದ್ಯ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದ್ದಾರೆ. ‘ವಾರ್ 2’ (War 2) ಸಿನಿಮಾದ ಶೂಟಿಂಗ್‌ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇದರ ನಡುವೆ ತಾರಕ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

    ‘ವಾರ್ 2’ಗಾಗಿ ಹೃತಿಕ್ ರೋಷನ್ (Hrithik Roshan) ಜೊತೆ ಕೈಜೋಡಿಸಿರುವ ಜ್ಯೂ.ಎನ್‌ಟಿಆರ್ ಮೇ 20ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ವಾರ್ 2’ ಚಿತ್ರದ ಜ್ಯೂ.ಎನ್‌ಟಿಆರ್ ಪಾತ್ರದ ಲುಕ್ ಕೂಡ ರಿವೀಲ್ ಆಗಲಿದೆ. ಚಿತ್ರದ ಮೊದಲ ಪೋಸ್ಟರ್ ಹೊರಬೀಳಲಿದೆ.

    ಹೃತಿಕ್ ರೋಷನ್ ಮುಂದೆ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಇಬ್ಬರ ಕಾಂಬಿನೇಷನ್ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ವಿಲನ್ ಆಗಿ ನಟಿಸಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಸದ್ಯದಲ್ಲೇ ಇದರ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಎರಡು ವಾರ ಕಳೆದರೂ ಪತ್ತೆಯಾಗದ ನಟ ಗುರುಚರಣ್ ಸಿಂಗ್

    ‘ಆರ್‌ಆರ್‌ಆರ್’ (RRR) ಚಿತ್ರದ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್‌ಗೆ ಬೇಡಿಕೆ ಹೆಚ್ಚಾಗಿದೆ. ಕೊರಟಲ ಶಿವ ಜೊತೆ ‘ದೇವರ’ (Devara Film) ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2 ಭಾಗಗಳಲ್ಲಿ ಬರಲಿದೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಈ ವರ್ಷ ಅಕ್ಟೋಬರ್ 10ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  • ಜ್ಯೂ.ಎನ್‌ಟಿಆರ್‌ರನ್ನು ಹೊಗಳಿದ ಬಾಲಿವುಡ್‌ ನಟ ಅನುಪಮ್ ಖೇರ್

    ಜ್ಯೂ.ಎನ್‌ಟಿಆರ್‌ರನ್ನು ಹೊಗಳಿದ ಬಾಲಿವುಡ್‌ ನಟ ಅನುಪಮ್ ಖೇರ್

    ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ (Jr.Ntr) ಸದ್ಯ ಬಾಲಿವುಡ್‌ನಲ್ಲಿ ‘ವಾರ್ 2’ (War 2) ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ‘ಆರ್‌ಆರ್‌ಆರ್’ ಹೀರೋ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜ್ಯೂ.ಎನ್‌ಟಿಆರ್ ಮತ್ತು ಅನುಪಮ್ ಖೇರ್ (Anupam Kher) ಭೇಟಿಯಾಗಿರುವ ಫೋಟೋ ವೈರಲ್‌ ಆಗಿದೆ. ನನ್ನ ನೆಚ್ಚಿನ ವ್ಯಕ್ತಿ ಎಂದು ಜ್ಯೂ.ಎನ್‌ಟಿಆರ್‌ರನ್ನು ಅನುಪಮ್ ಖೇರ್ ಹೊಗಳಿದ್ದಾರೆ.

    ನನ್ನ ನೆಚ್ಚಿನ ವ್ಯಕ್ತಿ ಮತ್ತು ನಟನನ್ನು ಭೇಟಿಯಾಗಿದ್ದು, ಖುಷಿಯಾಯಿತು. ಅವರ ಕೆಲಸ ಇಷ್ಟವಾಯಿತು. ಅವರು ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಜ್ಯೂ.ಎನ್‌ಟಿಆರ್‌ಗೆ ಅನುಪಮ್ ಖೇರ್ ವಿಶ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ನಿಮ್ಮ ನಟನೆಯನ್ನು ಯಾವಾಗಲೂ ಅಭಿಮಾನದಿಂದ ನೋಡುತ್ತೇವೆ. ಮುಂದಿನ ಪೀಳಿಗೆಯ ನಟರಿಗೆ ನೀವು ಯಾವಾಗಲೂ ಸ್ಫೂರ್ತಿ ಎಂದು ಅನುಪಮ್ ಖೇರ್ ಪೋಸ್ಟ್‌ಗೆ ಜ್ಯೂ.ಎನ್‌ಟಿಆರ್ ಪ್ರತಿಯುತ್ತರ ನೀಡಿದ್ದಾರೆ.

    ಅಂದಹಾಗೆ, ‘ವಾರ್ 2’ (War 2) ಸಿನಿಮಾದಲ್ಲಿ ಹೃತಿಕ್ ರೋಷನ್, ಜ್ಯೂ.ಎನ್‌ಟಿಆರ್, ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನುಪಮ್ ಖೇರ್‌ಗೂ ಚಿತ್ರದಲ್ಲಿ ಉತ್ತಮ ಪಾತ್ರವಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.