Tag: Waqf Row

  • ವಕ್ಫ್ ತಿದ್ದುಪಡಿ ಕರಡು ಮೇಲ್ನೋಟಕ್ಕೆ ಸಂವಿಧಾನಕ್ಕೆ ವಿರುದ್ಧ ಅಂತ ಕಾಣ್ತದೆ: ಯು.ಟಿ.ಖಾದರ್

    ವಕ್ಫ್ ತಿದ್ದುಪಡಿ ಕರಡು ಮೇಲ್ನೋಟಕ್ಕೆ ಸಂವಿಧಾನಕ್ಕೆ ವಿರುದ್ಧ ಅಂತ ಕಾಣ್ತದೆ: ಯು.ಟಿ.ಖಾದರ್

    – ಏನೋ ಒಂದು ಉದ್ದೇಶಕ್ಕೆ ಧ್ವನಿವರ್ಧಕ ಬಂದ್‌ ಮಾಡಿ ಬಿಂಬಿಸಿದ್ರು: ಸ್ಪೀಕರ್‌

    ಮಂಗಳೂರು: ಸಂವಿಧಾನಕ್ಕೆ ವಿರುದ್ಧವಾದದ್ದು ಯಾವುದೂ ಕೂಡ ಸರಿಯಲ್ಲ. ವಕ್ಫ್ ತಿದ್ದುಪಡಿ ಡ್ರಾಫ್ಟ್ ಮೇಲ್ನೋಟಕ್ಕೆ ನೋಡುವಾಗ ಸಂವಿಧಾನಕ್ಕೆ ವಿರುದ್ಧ ಅಂತ ಕಾಣ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ (U.T.Khader) ಅಭಿಪ್ರಾಯಪಟ್ಟರು.

    ವಕ್ಫ್ ತಿದ್ದುಪಡಿ (Waqf Amendment Bill) ವಿರುದ್ಧ ವ್ಯಾಪಕ ಆಕ್ರೋಶ, ಪ್ರತಿಭಟನೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ದೇಶದ ಎಲ್ಲಾ ಜನರು ಸಂತೋಷವಾಗಿ ಇರ್ತಾರೆ. ಇವತ್ತು ಈ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಅದನ್ನ ಜನರು ಒಪ್ಪಲು ಸಾಧ್ಯವಿಲ್ಲ. ಏನೋ ದುರುದ್ದೇಶಪೂರ್ವಕವಾಗಿ ರೂಪಿಸಲಾದ ತಿದ್ದುಪಡಿ ಕಾಯಿದೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ವಾಮೀಜಿ ಕಾಲಿಗೆ ಬಿದ್ದ ಪೊಲೀಸರ ವಿರುದ್ಧ ಶಿಸ್ತು ಕ್ರಮ – ಬೇರೆ ಬೇರೆ ಠಾಣೆಗೆ ವರ್ಗಾವಣೆ

    ಏನೋ ಒಂದು ಉದ್ದೇಶದಿಂದ ಧ್ವನಿವರ್ಧಕ ಬಂದ್ ಮಾಡಿ ಬಿಂಬಿಸಿದ್ರು. ತಿಂಗಳುಗಟ್ಟಲೇ ನಾಟಕ ಆಯ್ತು, ಜನರಲ್ಲಿ ಗೊಂದಲ ಮೂಡಿಸಿದ್ರು. ಈಗ ಅಧಿಕಾರಿಗಳು ಬಂದು ಯಕ್ಷಗಾನವನ್ನೇ ನಿಲ್ಲಿಸ್ತಾ ಇದ್ದಾರೆ. ಯಾಕೆ ನಿಲ್ಲಿಸ್ತಾರೆ ಅಂದರೆ, ಇವರು ಮಾಡಿದ ಕಾನೂನಿನ ಕಾರಣಕ್ಕಾಗಿ ನಿಲ್ಲಿಸ್ತಾರೆ. ಕಾನೂನನ್ನ ದುರುದ್ದೇಶ ಇಟ್ಟುಕೊಂಡು ಮಾಡಿದ್ರೆ ಹೀಗೇ ಆಗೋದು. ಒಬ್ಬೊಬ್ಬ ಅಧಿಕಾರಿ ಬಂದಾಗ ಅವರಿಗೆ ಇಷ್ಟ ಬಂದ ಹಾಗೆ ಕಾನೂನು ಪಾಲಿಸ್ತಾರೆ. ಹಾಗಾಗಿ ಸಮಸ್ಯೆಯಿಂದ ಮತ್ತೆ ಮತ್ತೆ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.

    ಸಂವಿಧಾನಕ್ಕೆ ಅನುಗುಣವಾಗಿ ಇರದ ಈ ತಿದ್ದುಪಡಿ ಸರಿಯಲ್ಲ. ಸ್ವಾಭಾವಿಕವಾಗಿ ಇದರ ವಿರುದ್ಧ ಜನರು ಪ್ರತಿಭಟನೆ ಮಾಡ್ತಾ ಇದ್ದಾರೆ. ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಸೌಂದರ್ಯ. ಅದು ಕಾನೂನು ರೀತಿಯಲ್ಲಿ ಇರಬೇಕು. ಸಂವಿಧಾನಾತ್ಮಕ ರೀತಿಯಲ್ಲೇ ಹೋರಾಟ ಮಾಡಬೇಕು. ಉಲೇಮಾಗಳು ಗೌರವಪೂರ್ವಕವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಎಲ್ಲಾ ಯುವಕರು ಉಲೇಮಾಗಳ ಹಾಗೂ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯಿರಿ ಎಂದು ತಿಳಿಹೇಳಿದರು. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮವನ್ನು ಹೇಳಿದ್ದಕ್ಕೆ ಪ್ರದೀಪ್‌ ಈಶ್ವರ್‌ಗೆ ಸಿಟ್ಟು: ಪಿಸಿ ಮೋಹನ್‌

    ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಸರಿಯಾಗಿ ಆಲೋಚನೆ ಮಾಡಲಿ. ಈ ಭಾಗದಲ್ಲಿ ವಕ್ಫ್ ಆಸ್ತಿ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಆ ಭಾಗದಲ್ಲಿ ಇದೆ ಎಂದರು.

  • Waqf: 150 ಕೋಟಿ ಆಫರ್| ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು: ಅನ್ವರ್ ಮಾಣಿಪ್ಪಾಡಿ

    Waqf: 150 ಕೋಟಿ ಆಫರ್| ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು: ಅನ್ವರ್ ಮಾಣಿಪ್ಪಾಡಿ

    – ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್ ಬಂದಿತ್ತು
    – ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ರೆ ನನ್ನ ವರದಿಯನ್ನ ಸಿಬಿಐ ತನಿಖೆಗೆ ಹಸ್ತಾಂತರಿಸಲಿ

    ಮಂಗಳೂರು: ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು 150 ಕೋಟಿ ಆಫರ್ ಮಾಡಿದ್ದರೆಂಬ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ (Anwar Manippady) ಸ್ಪಷ್ಟಪಡಿಸಿದ್ದಾರೆ.

    ‘ಪಬ್ಲಿಕ್ ಟಿವಿ’ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ಕೋಟಿ ಕೋಟಿ ಲಂಚ ನೀಡುವ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್

    ಸಿಎಂ ಸಿದ್ದರಾಮಯ್ಯನವರು ಇದೀಗ ಮಾಡಿದ ಆರೋಪ ಸುಳ್ಳು. ವಿಜಯೇಂದ್ರ ಯಾವುದೇ ರೀತಿಯ ಹಣದ ಬೇಡಿಕೆ ನೀಡಿಲ್ಲ. ಸರ್ಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು (ಯಡಿಯೂರಪ್ಪ ಸಿಎಂ ಆಗಿದ್ದಾಗ) ಒತ್ತಾಯಿಸಿದ್ದೆ. ಆದರೆ, ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಇದೀಗ ಸಿಎಂ ಸಿದ್ದರಾಮಯ್ಯನವರು ಹೇಳಿದ ರೀತಿ ಸಿಬಿಐಗೆ ವಹಿಸಲಿ ಎಲ್ಲವೂ ಹೊರ ಬರುತ್ತೆ ಎಂದಿದ್ದಾರೆ.

    ವಕ್ಫ್ ವರದಿಯನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ನನಗೆ ಹಣದ ಆಮಿಷ ಒಡ್ಡಿದ್ದರು. 2012ರಿಂದಲೂ ಶುರು ಮಾಡಿ ಮರ‍್ನಾಲ್ಕು ವರ್ಷಗಳಿಂದ ಆಫರ್ ನೀಡುತ್ತಾ ಬಂದಿದ್ದರು. ನಾನು ಬೈದು ಕಳುಹಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ರಾಜಕೀಯ ಬಿಟ್ಟರೆ ಬೇರೇನು ಬೇಕಿಲ್ಲ: ಡಿಕೆಶಿ ವಾಗ್ದಾಳಿ

    ಪ್ರಧಾನ ಮಂತ್ರಿಗಳಿಗೂ ವರದಿ ಸಂಬಂಧ ಬಹಳಷ್ಟು ಪತ್ರಗಳನ್ನು ಬರೆದಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಕೇಳಿಕೊಂಡಿದ್ದೆ ಎಂದು ತಿಳಿಸಿದ್ದಾರೆ.

    ನಮ್ಮ ವಕ್ಫ್ನ ಒಟ್ಟು ಆಸ್ತಿ 50 ಸಾವಿರ ಎಕರೆ ಇದ್ದಾಗ, ಅದರಲ್ಲಿ 27-28 ಸಾವಿರ ಎಕರೆ ಕಬಳಿಕೆ ಆಗಿ ಬಾಕಿ ಉಳಿದಿದ್ದು 23 ಸಾವಿರ ಎಕರೆ. ಆಗ ಸಿದ್ದರಾಮಯ್ಯ ಅವರು 1,60,000 ಎಕರೆಗೆ ನೋಟಿಸ್ ಕೊಡ್ತಾರೆ ಬೇರೆ ಬೇರೆ ರೈತರಿಗೆ. ಇದು ಯಾಕೆ? ಇದು ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕಿಡಿ ಹೊತ್ತಿಸಿದ್ದು, ಅವರಿಬ್ಬರು ಹೊಡೆದಾಡಿಕೊಳ್ಳಲಿ ಅಂತಾ. ಅವರು ಅಷ್ಟು ಸತ್ಯವಂತರಾಗಿದ್ದರೆ ಒಮ್ಮೆ ನೋಟಿಸ್ ಕೊಟ್ಟವರು ಹಿಂದಕ್ಕೆ ಯಾಕೆ ಪಡೆದುಕೊಳ್ತಾರೆ? ಕೇವಲ 23-24 ಸಾವಿರ ಎಕರೆ ಇರಬೇಕಾದರೆ, 1,60,000 ಎಕರೆಗೆ ಹೇಗೆ ನೋಟಿಸ್ ಕೊಟ್ಟರು ಎಂದು ಮಾಣಿಪ್ಪಾಡಿ ಪ್ರಶ್ನಿಸಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ಆ ಸಮುದಾಯಕ್ಕೆ ಏನಾದರು ಮಾಡಬೇಕೆಂಬ ಮನಸ್ಸಿದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿದ ಕೆಎಎಸ್ ಅಧಿಕಾರಿ

    ಕಾಂಗ್ರೆಸ್‌ನಲ್ಲಿರುವ ಮುಸ್ಲಿಂ ನಾಯಕರು ಸೇರಿ ಬಹಳಷ್ಟು ಮಂದಿ ವಕ್ಫ್ ಆಸ್ತಿಯನ್ನು ಲೂಟಿ ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಲು ತೋಳು ಬಲ ಮತ್ತು ಹಣದ ಬಲದಿಂದ ಸಾಕಷ್ಟು ಪ್ರಯತ್ನ ಮಾಡಿದರು. ನನಗೆ ಕಿರುಕುಳವನ್ನೂ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

  • ರೈತ ಆತ್ಮಹತ್ಯೆ ಕೇಸ್‌ ಟ್ವೀಟ್‌ ವಿವಾದ; ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು

    ರೈತ ಆತ್ಮಹತ್ಯೆ ಕೇಸ್‌ ಟ್ವೀಟ್‌ ವಿವಾದ; ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು

    ಬೆಂಗಳೂರು: ವಕ್ಫ್‌ (Waqf) ನೀಡಿದ್ದ ನೋಟಿಸ್‌ ವಿಚಾರಕ್ಕೆ ಹಾವೇರಿಯಲ್ಲಿ (Haveri) ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಟ್ವೀಟ್‌ ಮಾಡಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿ ಆದೇಶ ಹೊರಡಿಸಿದೆ.

    ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಂಸದ ತೇಜಸ್ವಿ ಸೂರ್ಯ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ನಾಗಪ್ರಸನ್ನ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತ್ತು. ಗುರುವಾರ ತೀರ್ಪು ನೀಡಿದ್ದು, ಸಂಸದರ ಮೇಲಿನ ಸುಳ್ಳು ಸುದ್ದಿ ಹರಡುವಿಕೆ ಪ್ರಕರಣವನ್ನು ರದ್ದು ಮಾಡಿದೆ. ಇದನ್ನೂ ಓದಿ: 2ಎ ಮೀಸಲಾತಿಗಾಗಿ ಪಂಚಮಸಾಲಿಗಳ ಒತ್ತಾಯ ಸಂವಿಧಾನ ವಿರೋಧಿ: ಸಿಎಂ

    ಹಾವೇರಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದರು. ವಕ್ಫ್‌ ವಿಚಾರಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಸಿದ್ದರು. ಅದಾದ ಕೆಲವೇ ಹೊತ್ತಲ್ಲಿ ಟ್ವೀಟ್‌ ಡಿಲೀಟ್‌ ಮಾಡಿ ಕ್ಷಮಾಪಣೆ ಕೋರಿದ್ದರು.

    ಸಂಸದರು ಸುಳ್ಳು ಸುದ್ದಿ ಹರಡಿದ್ದಾರೆಂದು ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ಪ್ರಶ್ನಿಸಿ ತೇಜಸ್ವಿ ಸೂರ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಹಿಂದೂ ಪದ ವಿವಾದ – ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್

  • ನಮ್ಮ ಮಠ-ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ: ಯತ್ನಾಳ್

    ನಮ್ಮ ಮಠ-ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ: ಯತ್ನಾಳ್

    ಬಾಗಲಕೋಟೆ: ನಮ್ಮ ಮಠ ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳಿಂದ ಹಣ ತೆಗೆದುಕೊಳ್ಳಬೇಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಜನರಿಗೆ ಕರೆ ನೀಡಿದರು.

    ಬನಹಟ್ಟಿ ಪಟ್ಟಣದಲ್ಲಿ ವಕ್ಫ್ ಹಠಾವೋ, ದೇಶ ಬಚಾವೋ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಾರ್ಲಿಮೆಂಟ್ ಹಾಗೂ ವಿಧಾನಸೌಧ ಬಗ್ಗೆ ಮಾತಾಡ್ತಾರೆ. ನಿಮ್ಮನ್ನ ಹೊರಗೆ ಬರೋಕೆ ಬಿಡಲ್ಲ ಅಂತಾ ಮೌಲ್ವಿ ಹೇಳಿದ್ದಾರೆ. ವಕ್ಫ್ ವಿರುದ್ಧ ನಮ್ಮ ಹೋರಾಟ ನಿರಂತರ. ನಮ್ಮ ಮನೆ, ಮಠ ಹಾಗೂ ಭೂಮಿ ಹೋದ್ರೆ ನಾವೇ ಸಾಬೀತುಪಡಿಸಿಕೊಳ್ಳಬೇಕು. ಇಂತಹ ಪರಿಸ್ಥಿತಿ ನಮಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಲ್ಯಾಂಡ್ ಜಿಹಾದ್‍ನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ: ಪಿ.ರಾಜೀವ್

    ನಮ್ಮ ಮಠ ಮಾನ್ಯಗಳ ಜೀರ್ಣೋದ್ಧಾರಕ್ಕೆ ಆ ಮುಲ್ಲಾಗಳ ಕಡೆ ಹಣ ತೆಗೆದುಕೊಳ್ಳಬೇಡಿ. ಸಿಎಂ ಇಬ್ರಾಹಿಂ ಹೇಳ್ತಾನೆ, ಮಂತ್ರಾಲಯ ದೇವಸ್ಥಾನ ನಿಜಾಮೋ, ಹಜಾಮೋ ದಾನ ಕೊಟ್ಟಾನಂತೆ ಹೇಳ್ತಾನೆ. ಆದ್ರೆ ಮಾನಪ್ಪಾಡಿ ವರದಿಯಲ್ಲಿ ಸಿಎಂ ಇಬ್ರಾಹಿಂ ಎಷ್ಟು ಆಸ್ತಿ ಹೊಡೆದಾರ ಗೊತ್ತಾ? ಆ ಜಮೀರ್, ಇದು ಅಲ್ಲಾ ಕೇ ಆಸ್ತಿ ಹೈ ಅಂದಾ ಬೀದರ್‌ನಲ್ಲಿ. ನಿಮ್ಮಪ್ಪಂದಾ ಈ ಆಸ್ತಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಬೀದರ್‌ನಲ್ಲಿ ಬಸವಣ್ಣನವ್ರ ಮಂಟಪ ವಕ್ಫ್ಗೆ ಸೇರಿಸಿದ್ದಾರೆ. ಆದ್ರೆ ಈ ಬಗ್ಗೆ ಒಬ್ಬನಾದ್ರೂ ಬಸವ ಅನುಯಾಯಿ ಬಾಯಿ ಬಿಡ್ತಾರಾ? ನೀಮ್… ಭೀಮ್ ಭಾಯಿ ಭಾಯಿ ಅಲ್ಲ. ನಮ್ಮ ಕಣ್ಣೇರಿಮಠದ ಸ್ವಾಮೀಜಿ ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ‘ಪಾರ್ಟಿಷನ್ ಆಫ್ ಇಂಡಿಯಾ ಆ್ಯಂಡ್ ಪಾಕಿಸ್ತಾನ’ ಅಂತಾ ಪುಸ್ತಕ ಬರೆದಿದ್ದಾರೆ. ಮುಸ್ಲಿಮರು ನಮ್ಮನ್ನ ಎಂದೂ ಭಾಯಿ ಭಾಯಿ ಅನ್ನಲ್ಲ, ಕಾಪೀರ್ ಅಂತಾರೆ. ಈ ದೇಶದಲ್ಲಿ ಹಿಂದೂಗಳಿದ್ರೆ ಅಷ್ಟೇ ಶಾಂತಿ, ನೆಮ್ಮದಿ ಇರುತ್ತೆ ಎಂದು ಅಂಬೇಡ್ಕರ್ ಅವ್ರು ಈ ಮೊದಲೇ ಹೇಳಿದ್ದಾರೆ. ಜೋಗಿನಾಥ್ ಮಂಡಲ್ ಮಹಮ್ಮದ್ ಅಲಿ ಜಿನ್ನಾನ ಜೊತೆ ಸೇರಿ ಪಾಕಿಸ್ತಾನಕ್ಕೆ ಹೋದ್ರು. ಪಾಕಿಸ್ತಾನದ ಮೊದಲ ಕಾನೂನು ಮಂತ್ರಿ ಜೋಗಿನಾಥ್ ಮಂಡಲ್. ಅವರಿಗೆ ಮಾತನಾಡಲು ಅವಕಾಶ ಕೊಡದೇ, ಅವ್ರನ್ನ ಮರ್ಡರ್ ಮಾಡಲು ಹೋಗಿದ್ರು. ಕೊನೆಗೆ ಅವ್ರು ಭಾರತಕ್ಕೆ ಬಂದು ಕೊನೆಯುಸಿರೆಳೆದ್ರು. ಹಿಂದೂ ಮುಸ್ಲಿಂ ಎಂದೂ ಭಾಯಿ ಭಾಯಿ ಆಗಲ್ಲ ಎಂದರು. ಇದನ್ನೂ ಓದಿ: ಉಳುವವನೇ ಭೂಮಿಯ ಒಡೆಯ ಕಾಯ್ದೆ ಈ ವಕ್ಫ್ ವಿಚಾರದಲ್ಲಿ ಯಾಕೆ ಆಗಲಿಲ್ಲ: ಪ್ರತಾಪ್ ಸಿಂಹ ಪ್ರಶ್ನೆ

    ತೇರದಾಳದಲ್ಲಿ 450 ಎಕರೆ, ಬೀಳಗಿ ತಾಲೂಕಿನ ಅನಗವಾಡಿಯಲ್ಲಿ 220 ಎಕರೆ ವಕ್ಫ್ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 6590 ಎಕರೆ ವಕ್ಫ್ ಆಗಿದೆ. ವಿಜಯಪುರದಲ್ಲಿ 16 ಸಾವಿರ ಎಕರೆ ವಕ್ಫ್ ಆಗಿದೆ. ಜಮೀರ್ ಅಲ್ಲಾಕೇ ಆಸ್ತಿ ಅಂತಾನೆ. ಆಗ ಅಲ್ಲಾ ಎಲ್ಲಿದ್ದ ಎಂದು ಪ್ರಶ್ನಿಸಿದರಲ್ಲದೇ, ನಾಳೆ ವಿಧಾನಸಭೆಯಲ್ಲಿ ಹೋರಾಟ ಮಾಡ್ತೇವೆ ಎಂದು ತಿಳಿಸಿದರು.

  • ಕಾಂಗ್ರೆಸ್‌, ಬಿಜೆಪಿ ಶಾಸಕರಿಗೂ ತಟ್ಟಿದ ವಕ್ಫ್ ಬಿಸಿ – ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು

    ಕಾಂಗ್ರೆಸ್‌, ಬಿಜೆಪಿ ಶಾಸಕರಿಗೂ ತಟ್ಟಿದ ವಕ್ಫ್ ಬಿಸಿ – ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು

    ರಾಯಚೂರು: ಇಷ್ಟು ದಿನ ರೈತರು, ಮಠ ಮಾನ್ಯಗಳಿಗೆ ತಟ್ಟಿದ್ದ ವಕ್ಫ್ ಬಿಸಿ ಈಗ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ತಟ್ಟಿದೆ. ರಾಯಚೂರಿನ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಶರಣಗೌಡ ಬಯ್ಯಾಪೂರಗೆ ಬಿಸಿ ತಟ್ಟಿದ್ದು ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ.

    ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಜ್ಜಲ್‌ಗೆ ಸೇರಿದ ಲಿಂಗಸುಗೂರಿನ ಮುದಗಲ್ ಸೀಮೆಯ ಸ.ನಂ 242/7 ರ 1 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ. 2016-17 ರಲ್ಲಿ ಖರೀದಿಸಿದ್ದ ಜಮೀನಿನಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ಸರಿಪಡಿಸುವಂತೆ ಶಾಸಕ ವಜ್ಜಲ್ ಈಗಾಗಲೇ ತಹಶೀಲ್ದಾರ್‌ ಹಾಗೂ ಲಿಂಗಸುಗೂರು ಎಸಿ ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಟ್ವಿಸ್ಟ್‌ – ಜಿಟಿ ದೇವೇಗೌಡ ಸಂಬಂಧಿಗೆ 19 ಸೈಟ್‌ ಹಂಚಿಕೆ!

    ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಹೆಸರಿನ ಜಮೀನ‌ನ ಪಹಣಿಯಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಸರ್ವೆ ನಂ. 242/4 ರ ಒಂದು ಎಕರೆ ಜಮೀನು 2007-08 ರಲ್ಲಿ ಖರೀದಿಸಿದ್ದ ಬಯ್ಯಾಪೂರ ಈಗಾಗಲೇ ಜಮೀನು ಎನ್‌ಎ ಮಾಡಿಸಿದ್ದಾರೆ. ಜೊತೆಗೆ ಅದೇ ಸ.ನಂ. ನಲ್ಲಿರುವ ಲಿಂಗಸುಗೂರಿನ ಅಂಕಲಿಮಠದ ಶ್ರೀಗಳಿಗೂ ಬಿಸಿ ತಟ್ಟಿದ್ದು, ಸ.ನಂ 242/8 ರ ಫಕೀರಸ್ವಾಮಿಗೆ ಸೇರಿದ 19 ಗುಂಟೆ ಜಮೀನಿನಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಮುದಗಲ್‌‌ನ ಸ.ನಂ 242 ರ ಒಟ್ಟು 30 ಎಕರೆ ಜಮೀನಿನ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಾಗಿದೆ.

  • ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಶಿವಮೊಗ್ಗ: ಸುದ್ದಿಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ವಿರುದ್ಧ ಜಯನಗರ ಪೊಲೀಸ್ (Police) ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.

    ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದ್ದ ವಿವಾದದ ಬಗ್ಗೆ ನಗರದಲ್ಲಿ (Shivamogga) ನ.13 ರಂದು ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮುಸ್ಲಿಮರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಹೇಗೆ ಆದರೆ ಮುಸಲ್ಮಾನರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಎಂದು ಹೇಳಿದ್ದರು.

    ಇದೇ ವೇಳೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಮರು ಈ ರೀತಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

    ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

    ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

  • ವಕ್ಫ್ ಹೋರಾಟದ ವಿಚಾರದಲ್ಲಿ ರಾಜ್ಯಾಧ್ಯಕ್ಷರ ನಿರ್ಧಾರವೇ ಅಂತಿಮ: ಯತ್ನಾಳ್ ಟೀಂಗೆ ರೇಣುಕಾಚಾರ್ಯ ತಿರುಗೇಟು

    ವಕ್ಫ್ ಹೋರಾಟದ ವಿಚಾರದಲ್ಲಿ ರಾಜ್ಯಾಧ್ಯಕ್ಷರ ನಿರ್ಧಾರವೇ ಅಂತಿಮ: ಯತ್ನಾಳ್ ಟೀಂಗೆ ರೇಣುಕಾಚಾರ್ಯ ತಿರುಗೇಟು

    ಬೆಂಗಳೂರು: ವಕ್ಫ್ (waqf Row) ವಿರುದ್ಧದ ಹೋರಾಟದ ವಿಚಾರದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y vijayendra) ಯಾವ ನಿರ್ಧಾರ ಮಾಡ್ತಾರೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಟೀಂನಿಂದ ನಡೆಯುತ್ತಿರುವ ವಕ್ಫ್ ಜನ ಜಾಗೃತಿ ಅಭಿಯಾನದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಅಧಿಕೃತವಾಗಿ ರಾಜ್ಯಾಧ್ಯಕ್ಷರು ಏನು ತೀರ್ಮಾನ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ಧವಾಗಿರಬೇಕು. ಬಿಜೆಪಿ ಶಿಸ್ತಿನ ಪಕ್ಷ, ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಮಟ್ಟದಲ್ಲಿ ಪ್ರತಿಭಟನೆ ಆಗಿದೆ. ಅವರು ಅಧಿಕೃತವಾಗಿ ಪ್ರವಾಸ ಮಾಡಲಿದ್ದಾರೆ, ಅವರ ಹೊರತುಪಡಿಸಿದರೆ ಪಕ್ಷದ ಹೆಸರಲ್ಲಿ ಬೇರೆಯವರು ಪ್ರವಾಸ ಮಾಡಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈಗ ನಾನು ಟೀಮ್‌ ತೆಗೆದುಕೊಂಡು ಹೋದರೆ ಹೈಕಮಾಂಡ್ ಅವಕಾಶ ಕೊಡುತ್ತಾ? ಯಾವುದೇ ಕಾರಣಕ್ಕೆ ಹೈಕಮಾಂಡ್ ಅನುಮತಿ ನೀಡಲ್ಲ. ರಾಜ್ಯಾಧ್ಯಕ್ಷರ ತೀರ್ಮಾನವೇ ಅಂತಿಮ. ರಾಜ್ಯಾಧ್ಯಕ್ಷರು ಹೋರಾಟ ಪ್ರಾರಂಭ ಮಾಡಿದ ಮೇಲೆ ಸರ್ಕಾರ ವಕ್ಫ್ ನೋಟಿಸ್ ವಾಪಸ್ ಪಡೆದಿದೆ. ಯಾವುದೇ ತಂಡಕ್ಕೂ ಅಭಿಯಾನ ಮಾಡಲು ನೈತಿಕ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

  • ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್‌ ಆಸ್ತಿ ಮಾಡಲು ಮುಂದಾಗಿದ್ದಾರೆ: ಯತ್ನಾಳ್‌ ಆರೋಪ

    ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್‌ ಆಸ್ತಿ ಮಾಡಲು ಮುಂದಾಗಿದ್ದಾರೆ: ಯತ್ನಾಳ್‌ ಆರೋಪ

    – ವಕ್ಫ್‌ ಟ್ರಿಬ್ಯುನಲ್‌ ರದ್ದಾಗಬೇಕು ಎಂದು ಒತ್ತಾಯ

    ಬೆಂಗಳೂರು: ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್‌ ಆಸ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ವಕ್ಫ್ ದೊಡ್ಡ ಅನ್ಯಾಯ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು. ವಕ್ಫ್ ಟ್ರಿಬ್ಯುನಲ್ ಒಂದು ಶಾಪ ಆಗಿದೆ. ಹೀಗಾಗಿ, ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥ ಆಗಬೇಕು. ಈಗ 2,700 ಎಕರೆ ಜಾಗ ಖಬರ್ ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್‌ಗೆ (Waqf Row) ಎಷ್ಟು ಜಾಗ ತಗೋಬೋದು ಅಂತಾ ಅವರು ಲೀಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ

    ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಅವರು ಧಮ್ಕಿ ಹಾಕುತ್ತಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು JPCಗೆ ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ. ಜಮೀರ್ ಬಂದು ಭಾಷಣ ಮಾಡ್ತಾರೆ. ಸೌತಾನ್ ಅಂತ ಮಾತಾಡಿ ಪ್ರಚೋದನೆ ಮಾಡ್ತಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಿ ಜಮೀರ್‌ ಹೇಳ್ತಿದ್ದಾರೆ. ಅಧಿಕಾರಿಗಳು ಭಯ ಬಿದ್ದಿದ್ದಾರೆ. ಹೀಗಾಗಿ, ಕೇಂದ್ರದ ನಿರ್ಧಾರ ಆಗೋವರೆಗೂ ನೀವು ಯಾವುದೇ ದಾಖಲಾತಿ ಮಾಡಬೇಡಿ ಅಂತಾ ಅಧಿಕಾರಿಗಳಿಗೆ ಸೂಚನೆ ಕೊಟ್ಡಿದ್ದೇವೆ ಎಂದು ತಿಳಿಸಿದರು.

    ವಕ್ಫ್ ಟ್ರಿಬ್ಯುನಲ್ ರದ್ದು ಆಗಬೇಕು ಅನ್ನೋದು ನಮ್ಮ ಮೊದಲ ಬೇಡಿಕೆ. ಇದು ಆಗಲೇಬೇಕು. ಹೀಗಾಗಿ, ಜನ ಜಾಗೃತಿ ಅಭಿಯಾನ ಮಾಡ್ತಿದ್ದೇವೆ. ನೋಟಿಸ್ ಕೊಟ್ಟು ಕೆಲವು ಈಗ ವಾಪಸ್ ಪಡೆದಿದ್ದಾರೆ.‌ ಆದರೆ‌, ಅನೇಕ ಕಡೆ ನೋಟಿಸ್ ಕೊಡದೇ ದಾಖಲಾತಿ ವಕ್ಫ್ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದಲೇ ಇದರ ವಿರುದ್ಧ ಹೋರಾಟ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೀದರ್ | ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

  • ಮೈಸೂರಿನ ಸರ್ಕಾರಿ ಶಾಲೆ ಜಾಗ ವಕ್ಫ್ ಆಸ್ತಿ – ಅಭಿನಂದನೆಗಳು ಸರ್ ಎಂದು ಸಿಎಂಗೆ ಪ್ರತಾಪ್ ಸಿಂಹ ಟಾಂಗ್

    ಮೈಸೂರಿನ ಸರ್ಕಾರಿ ಶಾಲೆ ಜಾಗ ವಕ್ಫ್ ಆಸ್ತಿ – ಅಭಿನಂದನೆಗಳು ಸರ್ ಎಂದು ಸಿಎಂಗೆ ಪ್ರತಾಪ್ ಸಿಂಹ ಟಾಂಗ್

    ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಮತ್ತೊಂದು ವಕ್ಫ್ ಗದ್ದಲ ಉಂಟಾಗಿದ್ದು, ಸರ್ಕಾರಿ ಖರಾಬು ಜಾಗ ಈಗ ವಕ್ಫ್ (Waqf) ಆಸ್ತಿ ಆಗಿದೆ.

    ಸರ್ಕಾರಿ ಶಾಲೆ ಜಾಗವನ್ನು ತನ್ನದು ಎಂದು ವಕ್ಫ್ ಹೇಳಿಕೊಂಡಿದೆ. ಮೈಸೂರು ತಾಲೂಕು ಇಲವಾಲದ ಸರ್ಕಾರಿ ಶಾಲೆ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದ್ದು, ಸರ್ಕಾರಿ ಖರಾಬು ಜಾಗವನ್ನ 2020ರಲ್ಲಿ ವಕ್ಫ್ ಮಂಡಳಿ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು – ವಿವಾದಾತ್ಮಕ ಪದ ಬಳಸಿದ ಜಮೀರ್

    ಮೈಸೂರು ತಾಲೂಕು ಉಪ ವಿಭಾಗಾಧಿಕಾರಿ ಕೋರ್ಟ್ನಲ್ಲಿ ಈ ತೀರ್ಮಾನವಾಗಿದೆ. 2020ರಲ್ಲಿ ಸರ್ಕಾರಿ ಖರಾಬು ಹೆಸರನ್ನು ತೆಗೆದು, ವಕ್ಫ್ ಆಸ್ತಿ ಎಂದು ಆರ್‌ಟಿಸಿ ಹೊರಡಿಸಲಾಗಿದೆ. ಇಲವಾಲದ ಸರ್ವೆ ನಂಬರ್ 54ರಲ್ಲಿ ಬರುವ 34 ಗುಂಟೆ ಜಾಗ ಇದು.

    ಇದೇ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha). ಸಿಎಂ ಸಿದ್ದರಾಮಯ್ಯಗೆ ಟ್ಯಾಗ್ ಮಾಡಿ, ‘ಕಂಗ್ರಾಜುಲೇಷನ್ ಸರ್’ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಮನೆಗಳಿಗೆ ‘ಗ್ರೇ ವಾಟರ್ ರೀಸೈಕ್ಲಿಂಗ್’ ಕಡ್ಡಾಯಕ್ಕೆ ಜಲಮಂಡಳಿ ಚಿಂತನೆ – ಏನಿದು ಯೋಜನೆ?

  • ಜಮೀರ್‌ನನ್ನು ಗಡಿಪಾರು ಮಾಡೋದು ಬೇಡ ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ಕಿಡಿ

    ಜಮೀರ್‌ನನ್ನು ಗಡಿಪಾರು ಮಾಡೋದು ಬೇಡ ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ಕಿಡಿ

    ಚಿಕ್ಕಮಗಳೂರು: ಸಚಿವ ಜಮೀರ್ ಅಹಮದ್‍ರನ್ನು (Zameer Ahmed) ಗಡಿಪಾರು ಮಾಡ್ಬೇಕು, ಕಿತ್ತಾಕಬೇಕು ಎಂದು ಮಾತಾಡುತ್ತಿದ್ದಾರೆ. ಅದೆಲ್ಲ ಬೇಡ ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,000 ಬಾಂಗ್ಲಾದೇಶಿ ಮುಸಲ್ಮಾನರಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲೀಸ್ಟ್ ತಯಾರು ಮಾಡಿದ್ದಾನೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

    ಬಿಜೆಪಿಯವರು ಜಮೀರ್‍ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಗಡಿಪಾರು, ಸಸ್ಪೆಂಡ್ ಬೇಡ ಯಾವುದಾರೂ ಆಲದಮರಕ್ಕೆ ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ. ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ತೆಗೆದುಕೊಂಡು ನುಂಗಿ ನೀರು ಕುಡಿಯೋಕೆ ಇದು ನಿಮ್ಮ ಅಪ್ಪಂದ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.