Tag: Waqf Property Controversy

  • ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ

    ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ

    ಬೀದರ್: ರಾಜ್ಯದಲ್ಲಿ ವಕ್ಫ್ ವಿವಾದ (Waqf Dispute) ಕಡಿಮೆಯಾಗುತ್ತಿದ್ದಂತೆ ಮತ್ತೆ ಬೀದರ್ (Bidar) ಜಿಲ್ಲೆಯಲ್ಲಿ ವಕ್ಫ್ ವಕ್ರದೃಷ್ಟಿ ಬಿದ್ದಿದೆ. ಇದೀಗ ಲಿಂಗಾಯತ ಮಹಾಮಠದ ಬಸವಗಿರಿ (Basavagiri) ವಕ್ಫ್ ಪಾಲಾಗಿದೆ.

    ಈಗಾಗಲೇ ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಗಡಿ ಜಿಲ್ಲೆ ಬೀದರ್‌ನಲ್ಲಿ ಒಟ್ಟು 13 ಸಾವಿರಕ್ಕೂ ಅಧಿಕ ಆಸ್ತಿ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ.ಇದನ್ನೂ ಓದಿ: BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.

    ಪ್ರತಿ ವರ್ಷ ಅದ್ದೂರಿಯಾಗಿ ವಚನ ವಿಜಯೋತ್ಸವ ಕಾರ್ಯ ಮಾಡಿ ಸಾಧಕರನ್ನು ಗುರುತಿಸಿ, ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಈ ಶರಣ ವಿಶ್ವವಿದ್ಯಾಲಯ ಭಕ್ತಿ ಭವನ ಇಂದು ವಕ್ಫ್ ಪಾಲಾಗಿದ್ದು, ವಕ್ಫ್ ಬೋರ್ಡ್ ಬಸವಣ್ಣನವರ ಜಾಗವನ್ನು ಬಿಡದೆ ಕಬಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ:ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಡಿವೈನ್‌ ಸ್ಟಾರ್-‌ ರಿಷಬ್‌ ಶೆಟ್ಟಿ ಪೋಸ್ಟರ್‌ ಔಟ್

  • ವಕ್ಫ್‌ ಆಸ್ತಿ ವಿವಾದ – ಸಚಿವ ಜಮೀರ್‌ ಗಡಿಪಾರಿಗೆ ವಿಜಯೇಂದ್ರ ಆಗ್ರಹ

    ವಕ್ಫ್‌ ಆಸ್ತಿ ವಿವಾದ – ಸಚಿವ ಜಮೀರ್‌ ಗಡಿಪಾರಿಗೆ ವಿಜಯೇಂದ್ರ ಆಗ್ರಹ

    ಚಿತ್ರದುರ್ಗ: ಸಚಿವ ಜಮೀರ್ ಅಹ್ಮದ್‌ರನ್ನ ಗಡಿಪಾರು ಮಾಡಿದ್ರೆ ರಾಜ್ಯಕ್ಕೆ ಒಳಿತು. ಶಾಂತಿಯುತ ರಾಜ್ಯದಲ್ಲಿ ಜಮೀರ್‌ (Zameer Ahmed Khan) ಅವರಿಂದ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಅಹಿಂದ ಹೆಸರು ಹೇಳಿ ಅಹಿಂದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಆಸ್ತಿ, ರೈತರ ಜಮೀನು, ಮಠ ಮಾನ್ಯಗಳ ಆಸ್ತಿ ಕಬಳಿಸುವ ಕೆಲಸ ಆಗುತ್ತಿದೆ. ಆದ್ರೆ ಸಿಎಂ ಸಿದ್ಧರಾಮಯ್ಯ Siddaramaiah) ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ರೈತರಿಗೆ ನೀಡಿದ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ತಾಕತ್ತಿದ್ದರೆ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಲಿ ಎಂದು ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ

    ಸಚಿವ ಜಮೀರ್ ಅಹ್ಮದ್ ಸಂವಿಧಾನದ ಬಗ್ಗೆ ಮಾತಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗೂಂಡಾಗಿರಿ ಮಾಡಿ, ರೈತರ ಜಮೀನು, ಮಠಮಾನ್ಯಗಳ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ. ವಕ್ಫ್ ಮೂಲಕ ಸಚಿವ ಜಮೀರ್ ಅಹ್ಮದ್ ಭೂಕಬಳಿಕೆ ಕೆಲಸ ಮಾಡ್ತಿದ್ದಾರೆ. ಅವರನ್ನ ಗಡಿಪಾರು ಮಾಡಿದ್ರೆ ಈ ರಾಜ್ಯಕ್ಕೆ ಒಳಿತು ಎಂದಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಮತ್ತೊಂದು ಗೋಲ್ಮಾಲ್‌; ಚಲನ್‌ ನಕಲು ಮಾಡಿ ಮುಡಾಗೆ ವಂಚನೆ – ಜನ ಕಟ್ಟಿದ ಹಣ ಕೆಲ ನೌಕರರ ಜೇಬಿಗೆ

    ಇದೇ ವೇಳೆ ಕಾಂಗ್ರೆಸ್‌ ಸರ್ಕಾರದ ಆಡಳಿತದ ಕುರಿತು ಮಾತನಾಡಿ, ಸಿಎಂ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಮತ್ತೊಂದು ಕಡೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುವ ವಾತಾವರಣ ಇದೆ. ಆದ್ದರಿಂದ ಸಿದ್ಧರಾಮಯ್ಯ ಆತಂಕದಲ್ಲಿ ಇದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆಂದು ಬೊಬ್ಬೆ ಹೊಡೀತಿದ್ದರು. ಈಗ ಸಿಎಂ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಹಗರಣದಿಂದ ಸಿದ್ಧರಾಮಯ್ಯ ಬಣ್ಣ ಬಯಲಾಗಿದೆ. ಇಡಿ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ಸಚಿವರ ಆಪ್ತ ಮುಡಾ ಕಮಿಷನರ್ ದಿನೇಶ್‌ ಓಡಿ ಹೋಗಿದ್ದಾನೆ. ವಾಲ್ಮೀಕಿ ಹಗರಣದ ಬಗ್ಗೆ ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.