Tag: Waqf Property

  • ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

    ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

    – ಜೆಪಿಸಿ ಮುಖ್ಯಸ್ಥರ ವಿರುದ್ಧ ವಿಪಕ್ಷಗಳ ಸದಸ್ಯರು ಗರಂ

    ನವದೆಹಲಿ: ಸಂಸತ್ತಿನ ಜಂಟಿ ಸಮಿತಿಯು (JPC ) ವಕ್ಫ್ ತಿದ್ದುಪಡಿ ಮಸೂದೆಗೆ ಇಂದು ಅನುಮೋದನೆ ನೀಡಿದೆ.

    ಈ ಮಸೂದೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಮಂಡಿಸಿದ್ದರು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ (Jagdambika Pal) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ, ವಕ್ಫ್‌ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ – ಡಿಸಿ, ಎಸ್ಪಿಗಳಿಗೆ ಕೃಷ್ಣಬೈರೇಗೌಡ ಸೂಚನೆ

    ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಪ್ರಜಾಪ್ರಭುತ್ವ ಪದ್ದತಿಯಲ್ಲಿ ಜೆಪಿಸಿ ಕೆಲಸ ಮಾಡಿಲ್ಲ ಎಂದು ವಿಪಕ್ಷ ಸದಸ್ಯರು ಗರಂ ಆದರು. ಈ 14 ಪ್ರತಿಪಾದನೆಗಳ ಅನುಮೋದನೆಗೆ ಬುಧವಾರ (ಜ.29) ವೋಟಿಂಗ್ ನಡೆಯಲಿದೆ. ಜನವರಿ 31ಕ್ಕೆ ಅಂತಿಮ ವರದಿಯನ್ನು ಲೋಕಸಭೆಗೆ ಸಲ್ಲಿಸಲು ಜೆಪಿಸಿ ಮುಖ್ಯಸ್ಥರು ತೀರ್ಮಾನಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್, ಎನ್‌ಡಿಎ ಸದಸ್ಯರು ಮಂಡಿಸಿದ 14 ತಿದ್ದುಪಡಿಗಳನ್ನು ಸ್ವೀಕರಿಸಲಾಗಿದೆ. ವಿಪಕ್ಷದ ಸದಸ್ಯರು ಹಲವು ತಿದ್ದುಪಡಿಗಳನ್ನು ಮಂಡಿಸಿದ್ದರಾದರೂ, ಅವೆಲ್ಲವನ್ನೂ ಮತದಾನದ ಮೂಲಕ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

    ಸಮಿತಿಯು ಅಂಗೀಕರಿಸಿದ ತಿದ್ದುಪಡಿಗಳು ಕಾನೂನನ್ನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ. ವಕ್ಫ್‌ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡುವ ಜೆಪಿಸಿ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕ ಎಂದು ಬಣ್ಣಿಸಿರುವ ಜಗದಂಬಿಕಾ ಪಾಲ್‌, ಅಂಗೀಕರಿಸಿದ ತಿದ್ದುಪಡಿಗಳು ಉತ್ತಮ ಮಸೂದೆಯನ್ನು ರೂಪಿಸುತ್ತವೆ ಎಂದು ಬಲವಾಗಿ ನಂಬಿರುವುದಾಗಿ ಹೇಳಿದ್ದಾರೆ.

  • ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು

    ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು

    – ಜ.20 ರಂದು ಶ್ರೀರಂಗಪಟ್ಟಣ ಬಂದ್‌ಗೆ ಕರೆ

    ಮಂಡ್ಯ: ವಕ್ಫ್ ಭೂತ, ಸಕ್ಕರಿ ನಗರಿ ಮಂಡ್ಯ ಜಿಲ್ಲೆಯ ರೈತರನ್ನ (Mandya Farmers) ಬಿಟ್ಟೂಬಿಡದೆ ಕಾಡುತ್ತಿದೆ. ಸಾಕಷ್ಟು ರೈತರ ಜಮೀನಿನ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ (Waqf Property) ಎಂದು ನಮೂದು ಆಗುತ್ತಿದೆ. ಇದು ಜಿಲ್ಲೆಯ ರೈತರ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣ ಬಂದ್‌ಗೂ (Srirangapatna Bandh) ಕರೆ ನೀಡಲಾಗಿದೆ.

    ಹೌದು. ಮಂಡ್ಯದ (Mandya) ಕೋಟೆನಗರಿ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಕ್ಫ್‌ ಭೂತ ಆತಂಕ ಸೃಷ್ಠಿ ಮಾಡಿದೆ. ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ. ಸ್ವಾಧೀನದಾರರ ಕಲಂನಲ್ಲಿ ರೈತರ ಹೆಸರಿದ್ರೂ, ಋಣ ಕಲಂನಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನೂ ಓದಿ: ಮೈಕ್ರೊ ಫೈನಾನ್ಸ್ ಕಿರುಕುಳ ಆರೋಪ; ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

    ಸಾಮಾನ್ಯವಾಗಿ ಜಮೀನನ ಮೇಲೆ ಸಾಲ ತೆಗೆದುಕೊಂಡರೇ, ಕ್ರಯ ಮಾಡಿಸಿದ್ರೆ ಮಾತ್ರ ಋಣ ಕಲಂನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. 2014-15ರಲ್ಲಿ ಈ ರೀತಿ ಉಲ್ಲೇಖವಾಗಿದೆ. ಕೇವಲ ರೈತರ ಜಮೀನು ಮಾತ್ರವಲ್ಲದೇ ಸರ್ಕಾರಿ ಶಾಲೆ, ಪಾರಂಪರಿಕ ಕಟ್ಟಡ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಇದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮತ್ತೆ ಒಂದಾಗುತ್ತಾ ಬಿಜೆಪಿ-ಉದ್ಧವ ಸೇನೆ?; ರಾಜ್ ಠಾಕ್ರೆ ಗೆಳೆಯ, ಉದ್ಧವ್ ಶತ್ರು ಅಲ್ಲ ಎಂದ ಮಹಾರಾಷ್ಟ್ರ ಸಿಎಂ

    ಅಂದಹಾಗೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿರುವ ಈ ವಕ್ಫ್ ಬೋರ್ಡ್‌ನ ಗೋಲ್ಮಾಲ್‌ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನವರಿ 20 ರಂದು ಶ್ರೀರಂಗಪಟ್ಟಣ ಬಂದ್‌ಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ರೈತರು ಸಹ ಜಾನುವಾರುಗಳ ಜೊತೆ ರಸ್ತೆಗೆ ಇಳಿಯಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯ ಮೈಲೇಜ್‌ಗೋಸ್ಕರ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ – ಅಣ್ಣಾಮಲೈ

  • ವಕ್ಫ್‌ ಆಸ್ತಿ ಬಗ್ಗೆ ಸಮ್ಮನಿರಲು ಮಾಣಿಪ್ಪಾಡಿಗೆ ವಿಜಯೇಂದ್ರ 150 ಕೋಟಿ ಆಮಿಷ: ಸಿದ್ದರಾಮಯ್ಯ ಬಾಂಬ್‌

    ವಕ್ಫ್‌ ಆಸ್ತಿ ಬಗ್ಗೆ ಸಮ್ಮನಿರಲು ಮಾಣಿಪ್ಪಾಡಿಗೆ ವಿಜಯೇಂದ್ರ 150 ಕೋಟಿ ಆಮಿಷ: ಸಿದ್ದರಾಮಯ್ಯ ಬಾಂಬ್‌

    ಬೆಂಗಳೂರು: ವಕ್ಪ್ ಆಸ್ತಿ (Waqf Property) ಕಬಳಿಕೆಯ ಬಗ್ಗೆ ಮೌನವಾಗಿರಲು ಬಿ.ವೈ.ವಿಜಯೇಂದ್ರ (B Y Vijayendra) ಅವರು ತಮಗೆ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಬಿಜೆಪಿ (BJP) ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ (Anwar Manippady) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ (Siddaramaiah) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
    ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದು ಮಾತ್ರವಲ್ಲ ಇದಕ್ಕಾಗಿ 150 ಕೋಟಿ ರೂ. ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ. ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ ಎಂದು ಸಾಕ್ಷಾತ್ ಅನ್ವರ್ ಮಾಣಿಪ್ಪಾಡಿಯವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.

    ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ನರೇಂದ್ರ ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ?

    ವಕ್ಪ್ ಆಸ್ತಿ ವಿಚಾರದಲ್ಲಿ ವಿಜಯೇಂದ್ರ ಅವರು ವಹಿಸುತ್ತಿರುವ ಆಸಕ್ತಿಯನ್ನ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಪ್ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಶಾಮೀಲಾಗಿರುವಂತೆ ಕಾಣುತ್ತಿದೆ. ಅವರ ಜೊತೆ ಪಕ್ಷದ ಮಹಾಮಹಿಮರೆಲ್ಲರೂ ಶಾಮೀಲಾಗಿರುವ ಸಂಶಯ ಇದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟಿಸ್‌ ನೀಡಿರುವುದನ್ನು ಈಗಾಗಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಮಾಣಿಪ್ಪಾಡಿ ಅವರ ಬಾಯಿಮುಚ್ಚಿಸುವ ಷಡ್ಯಂತ್ರದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ವಕ್ಪ್ ಆಸ್ತಿ ಲೂಟಿಯಲ್ಲಿ ಬೇರೆ ಯಾರೆಲ್ಲ ಪಾಲುದಾರರಿದ್ದಾರೆ? ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ.

    ಆಶ್ಚರ್ಯದ ಸಂಗತಿಯೆಂದರೆ, ಒಂದೆಡೆ ಇಂತಹ ಗಂಭೀರ ಆರೋಪ ಹೊತ್ತುಕೊಂಡಿರುವ ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ, ಇನ್ನೊಂದೆಡೆ ಪಕ್ಷದ ಹೈಕಮಾಂಡ್ ಗೆ ಎರಡು ಸಾವಿರ ಕೋಟಿ ರೂ. ಸಂದಾಯ ಮಾಡಿ ವಿಜಯೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ನೋಡಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕರ್ನಾಟಕವನ್ನು ಎಟಿಎಂ ಮಾಡಿತ್ತು ಎಂದು ಆರೋಪಿಸಬೇಕಾಗುತ್ತದೆ.

    ಪ್ರಧಾನಿ ನರೇಂದ್ರ ಮೋದಿ ಅವರೇ, ಕೋವಿಡ್ ಸಲಕರಣೆಗಳ ಖರೀದಿ ಭ್ರಷ್ಟಾಚಾರದಿಂದ ಹಿಡಿದು ವಕ್ಪ್ ಆಸ್ತಿ ಕಬಳಿಕೆಯಲ್ಲಿನ ಲೂಟಿ ವರೆಗೆ ರಾಜ್ಯ ಬಿಜೆಪಿಯ ಕಪಾಟಿನಿಂದ ಒಂದೊಂದೇ ಅಸ್ತಿ ಪಂಜರಗಳು ಉರುಳಿಬೀಳುತ್ತಲೇ ಇದೆ. ಈ ಹಗರಣಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ನಾಯಕರು ನಮ್ಮ ಪಕ್ಷ ಮತ್ತು ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

  • ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ

    ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ

    ಬೀದರ್: ರಾಜ್ಯದಲ್ಲಿ ವಕ್ಫ್ ವಿವಾದ (Waqf Dispute) ಕಡಿಮೆಯಾಗುತ್ತಿದ್ದಂತೆ ಮತ್ತೆ ಬೀದರ್ (Bidar) ಜಿಲ್ಲೆಯಲ್ಲಿ ವಕ್ಫ್ ವಕ್ರದೃಷ್ಟಿ ಬಿದ್ದಿದೆ. ಇದೀಗ ಲಿಂಗಾಯತ ಮಹಾಮಠದ ಬಸವಗಿರಿ (Basavagiri) ವಕ್ಫ್ ಪಾಲಾಗಿದೆ.

    ಈಗಾಗಲೇ ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಗಡಿ ಜಿಲ್ಲೆ ಬೀದರ್‌ನಲ್ಲಿ ಒಟ್ಟು 13 ಸಾವಿರಕ್ಕೂ ಅಧಿಕ ಆಸ್ತಿ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ.ಇದನ್ನೂ ಓದಿ: BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.

    ಪ್ರತಿ ವರ್ಷ ಅದ್ದೂರಿಯಾಗಿ ವಚನ ವಿಜಯೋತ್ಸವ ಕಾರ್ಯ ಮಾಡಿ ಸಾಧಕರನ್ನು ಗುರುತಿಸಿ, ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಈ ಶರಣ ವಿಶ್ವವಿದ್ಯಾಲಯ ಭಕ್ತಿ ಭವನ ಇಂದು ವಕ್ಫ್ ಪಾಲಾಗಿದ್ದು, ವಕ್ಫ್ ಬೋರ್ಡ್ ಬಸವಣ್ಣನವರ ಜಾಗವನ್ನು ಬಿಡದೆ ಕಬಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ:ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಡಿವೈನ್‌ ಸ್ಟಾರ್-‌ ರಿಷಬ್‌ ಶೆಟ್ಟಿ ಪೋಸ್ಟರ್‌ ಔಟ್

  • ತಿಮ್ಮಸಂದ್ರ ವಕ್ಫ್‌ ಆಸ್ತಿ ಪ್ರಕರಣ – ರೈತರಿಗೆ ಭೂಮಿ ಮಂಜೂರು ಆಗಿರೋ ದಾಖಲೆಗಳಿಲ್ಲ ಎಂದ ಡಿಸಿ

    ತಿಮ್ಮಸಂದ್ರ ವಕ್ಫ್‌ ಆಸ್ತಿ ಪ್ರಕರಣ – ರೈತರಿಗೆ ಭೂಮಿ ಮಂಜೂರು ಆಗಿರೋ ದಾಖಲೆಗಳಿಲ್ಲ ಎಂದ ಡಿಸಿ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿವಾದಿತ ಜಾಗಕ್ಕಾಗಿ ವಕ್ಫ್‌ ಹಾಗೂ ರೈತರ (Farmers) ನಡುವಿನ ಸಂಘರ್ಷ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರಿಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

    ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಡಿಸಿ, ತಿಮ್ಮಸಂದ್ರ ಗ್ರಾಮದ 13 ಹಾಗೂ 13-1, 13-2, 13-3 ಸೇರಿದಂತೆ ಸರ್ವೆ ನಂಬರ್ 20ರ ಜಮೀನುಗಳು ಮೂಲ ಫಕೀರ್ ಇನಾಂತಿ ಜಮೀನುಗಳಾಗಿವೆ. ಕಂದಾಯ ಇಲಾಖೆಯಲ್ಲಿ ಇರುವ ದಾಖಲೆಗಳ ಪ್ರಕಾರ ರೈತರಿಗೆ ಈ ಜಮೀನುಗಳಿಗೆ ಮಂಜೂರಾಗಿಲ್ಲ. ಬದಲಾಗಿ 1975ರ ನಂತರ ಒಬ್ಬರಿಂದ ಒಬ್ಬರಿಗೆ ಕ್ರಯ ಆಗಿ ಪಹಣಿಗಳು ಬದಲಾವಣೆ ಆಗಿವೆ. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

    2002 ರಲ್ಲಿ ಈ ಜಮೀನುಗಳು ತಮಗೆ ಸೇರಬೇಕು ಅಂತ ಜಾಮೀಯಾ ಮಸೀದಿ ಟ್ರಸ್ಟ್ ನವರು ಎಸಿ ನ್ಯಾಯಾಲಯಕ್ಕೆ ಹೋಗಿದ್ದು ನ್ಯಾಯಾಲಯ ರೈತರಿಗೆ ಯಾವುದೇ ರೀತಿಯ ಮಂಜೂರಾತಿ ಆದ ಬಗ್ಗೆ ದಾಖಲೆಗಳಿಲ್ಲದ ಕಾರಣ ಇದು ವಕ್ಫ್ ಆಸ್ತಿಯೆಂದು ಆದೇಶ ಮಾಡಿದೆ. ಇದೇ ಆದೇಶವನ್ನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಎತ್ತಿ ಹಿಡಿದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು

    ಇನ್ನೂ ವಕ್ಪ್ ಮಂಡಳಿಯಲ್ಲೂ ಸಹ ವಿಚಾರಣೆಯಾಗಿ ಇದು ವಕ್ಫ್ ಆಸ್ತಿ ಎಂದು ಆದೇಶವಾಗಿದೆ. ಸದ್ಯ ಈ ಆದೇಶದ ವಿರುದ್ದ ರೈತರು ಹೈಕೋರ್ಟ್‌ಗೆ ರಿಟ್ ಅರ್ಜಿ ಮೂಲಕ ಮೇಲ್ಮನವಿ ಸಲ್ಲಿಸಿಕೊಂಡಿದ್ದು ವಿಚಾರಣೆ ಬಾಕಿಯಿದೆ. ಹೈಕೋರ್ಟ್ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ರವೀಂದ್ರ ತಿಳಿಸಿದರು. ಆದ್ರೆ ಸದ್ಯ ಎರಡು ಕಡೆಯವರು ವಿವಾದಿತ ಜಾಗಕ್ಕೆ ಹೋಗದಂತೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಾಗಿದೆ ಅಂತ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್ ತಿಳಿಸಿದ್ದಾರೆ.

  • ಬೀದರ್ | ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

    ಬೀದರ್ | ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

    – 217 ಎಕರೆ ಸುಪರ್ದಿಗೆ ಪಡೆದು ಬೇಲಿ

    ಬೀದರ್: ವಕ್ಫ್ ವಕ್ರದೃಷ್ಟಿ ಜಿಲ್ಲೆ ಜಿಲ್ಲೆಗೂ ಹಬ್ಬಿದ್ದು, ಬೀದರ್‌ನ ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲಾಗಿದೆ.

    ರೈತರ ಜಮೀನು, ಮಠ, ದೇವಸ್ಥಾನ, ಶಾಲೆ, ಆಸ್ಪತ್ರೆ ಹೀಗೆ ಎಲ್ಲವೂ ವಕ್ಫ್ ಆಸ್ತಿಯಾಗುತ್ತಿದೆ. ಈಗ ಬಸವಣ್ಣನ ಕರ್ಮಭೂಮಿ ಬೀದರ್‌ನಲ್ಲಿ ಬರೋಬ್ಬರಿ 13,295 ಎಕರೆ ಜಾಗ ವಕ್ಫ್‌ಗೆ  ಸೇರಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಒಂದು ಕಡೆ ತಲಾ ತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಸಾವಿರಾರು ಎಕರೆ ರೈತರ ಜಮೀನು ವಕ್ಫ್ ಆಗಿದೆ. ಇನ್ನೊಂದು ಕಡೆ 13,295 ಎಕರೆ ಜಮೀನು ವಕ್ಫ್ ಪಾಲು ಎಂದು ವಕ್ಫ್ ಬೋರ್ಡ್ ಅಧಿಕೃತ ದಾಖಲೆಯನ್ನು ನೀಡಿದೆ.

    ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ ಭೂಮಿ ಈಗ ವಕ್ಫ್ ಆಸ್ತಿಯಾಗಿ ಪಹಣಿಯಲ್ಲಿ ಬದಲಾಗಿದೆ. ವಕ್ಫ್ ಬೋರ್ಡ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 13,295 ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಜಿಲ್ಲೆಯಲ್ಲಿ 2,747 ವಕ್ಫ್ ಸಂಸ್ಥೆಗಳು ಹಾಗೂ 3,822 ವಕ್ಫ್ ಆಸ್ತಿಗಳ ಸಂಖ್ಯೆ ಸೇರಿ ಒಟ್ಟು 13,295 ಎಕರೆ ಜಮೀನು ವಕ್ಫ್ ಆಸ್ತಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 217 ಎಕರೆ ವಕ್ಫ್ ಬೋರ್ಡ್ ತನ್ನ ಸುಪರ್ದಿಗೆ ತೆಗೆದುಕೊಂಡು ಬೇಲಿ ಹಾಕಿದ್ದು, ಜಿಲ್ಲೆಯ ಪ್ರಮುಖ ಆಸ್ತಿಗಳ ಮೇಲೆ ವಕ್ಫ್ ಕೆಂಗಣ್ಣು ಹಾಕಿದೆ.ಇದನ್ನೂ ಓದಿ: ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ದರ್ಶನ ಆರಂಭ

    ಬೀದರ್ ತಾಲೂಕಿನಲ್ಲಿ 5,232 ಎಕರೆ, ಔರಾದ್‌ನಲ್ಲಿ 331 ಎಕರೆ, ಹುಮ್ನಾಬಾದ್‌ನಲ್ಲಿ 2,798 ಎಕರೆ, ಬಸವಕಲ್ಯಾಣದಲ್ಲಿ 3,292 ಎಕರೆ ಹಾಗೂ ಭಾಲ್ಕಿಯಲ್ಲಿ 1,635 ಎಕರೆ ಜಮೀನು ವಕ್ಫ್ ಆಸ್ತಿ ಇದೆ ಎಂದು ವಕ್ಫ ಮಂಡಳಿ ಜಿಲ್ಲಾ ಕಚೇರಿಯ ಸರ್ಕಾರಿ ದಾಖಲೆಯಲ್ಲಿ ನಮೂದಿಸಿದೆ. ನಾವು 50 ವರ್ಷದಿಂದ ಉಳುಮೆ ಮಾಡುತ್ತಿದ್ದ ಜಮೀನು ಏಕಾಏಕಿ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ಬದಲಾಗಿದೆ. ಇಡೀ ಊರಿಗೇ ಊರು, ಸ್ಮಾರಕಗಳು, ರೈತರ ಜಮೀನುಗಳು, ಸರ್ಕಾರಿ ಜಾಗಗಳು, ಮಠ, ಮಂದಿರಗಳು ವಕ್ಫ್‌ಗೆ ಸೆರ್ಪಡೆಯಾಗಿವೆ. ಶೀಘ್ರವೇ ವಕ್ಫ್ ಹೋಗದೇ ಇದ್ದರೆ ಸರ್ಕಾರದ ವಿರುದ್ಧ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.

    ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮವೊಂದರಲ್ಲೇ 200 ರೈತರ 960 ಎಕರೆ ಭೂಮಿ 2013ರಲ್ಲಿ ವಕ್ಫ್ ಬೋರ್ಡ್ ಎಂದು ಪಹಣಿಯಲ್ಲಿ ಬದಲಾಗಿದೆ. 50 ವರ್ಷದಿಂದ ಈ ಗ್ರಾಮದ ರೈತರು ಇದೇ ಜಮೀನುಗಳಲ್ಲಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದು, ಈಗಾ ಏಕಾಏಕಿ ವಕ್ಫ್‌ಗೆ  ಸೇರ್ಪಡೆಯಾಗಿದೆ. ಬೀದರ್ ತಾಲೂಕಿನ ಧರ್ಮಪೂರ ಗ್ರಾಮದಲ್ಲಿ 26 ಎಕರೆ ಜಮೀನಲ್ಲಿರುವ ಇಡೀ ಗ್ರಾಮವೇ ವಕ್ಫ್‌ಗೆ  ಸೇರ್ಪಡೆಯಾಗಿದೆ. ಇದರಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿ, ಮಠ, ಮಂದಿಗಳು ಇದ್ದು, ಇಡೀ ಗ್ರಾಮದ ಜನರು ಕಂಗಾಲಾಗಿದ್ದಾರೆ. ಔರಾದ್ ತಾಲೂಕಿನ ತೋರಣ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಾ ಈಗಾ ವಕ್ಫ್‌ಗೆ ಸೇರಿದೆ.

    ಐತಿಹಾಸಿಕ ಬೀದರ್ ಕೋಟೆಯ ಸೋಲಾ ಕಂಬ, ಅಷ್ಟೂರಿನ ಐತಿಹಾಸಿಕ 14 ಗುಂಬಜ್‌ಗಳು, ಬರೀದ್ ಶಾಯಿ ಗುಂಬಜ್, ಶಬಲ್ ಬರೀದ್ ಗುಂಬಜ್‌ಗಳು ವಕ್ಫ್‌ಗೆ  ಸೇರ್ಪಡೆಯಾಗಿವೆ. 1974ರಲ್ಲಿ ಗೆಜೆಟ್ ನೋಟಿಫಿಕೇಷನ್ ಬಳಿಕ ಐತಿಹಾಸಿಕ ಸ್ಮಾರಕಗಳನ್ನು ವಕ್ಫ್‌ಗೆ ಸೇರ್ಪಡೆ ಮಾಡಲಾಗಿದೆ. ಪುರಾತತ್ವ ಇಲಾಖೆಯ ಅಡಿಯಲ್ಲಿರುವ ಈ ಆಸ್ತಿಗಳು ಏಕಾಏಕಿ ವಕ್ಫ್‌ಗೆ ಹೇಗೆ ಸೆರ್ಪಡೆಯಾಗಿವೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

    ರೈತರ ಸಾವಿರಾರು ಎಕರೆ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಆಸ್ಪತ್ರೆಗಳು, ಇಡೀ ಗ್ರಾಮವನ್ನೇ ವಕ್ಫ್‌ಗೆ ಸೇರಿಸಿದ್ದು, ಜನರನ್ನು ರೊಚ್ಚಿಗೇಳುವಂತೆ ಮಾಡಿದೆ. ವಕ್ಫ್ ಕಾಯಿದೆಯನ್ನು ಬದಲಾಯಿಸಿದರೆ ಒಳ್ಳೆಯದು. ಇಲ್ಲವಾದರೆ ರೈತರ ಪರವಾಗಿ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಾನು ಕ್ಷೇತ್ರ ಶಾಸಕನಾಗಿ ಬೆಂಗಳೂರು ಚಲೋ ಮಾಡುತ್ತೇನೆ ಎಂದು ಸರ್ಕಾರ ಹಾಗೂ ಸಚಿವರ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – 12 ಬಲಿ

     

  • ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್‌ಗೆ ಹೈಕೋರ್ಟ್‌ ತಡೆ

    ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್‌ಗೆ ಹೈಕೋರ್ಟ್‌ ತಡೆ

    ಬೆಂಗಳೂರು: ವಕ್ಫ್ ನೋಟಿಸ್ ನೀಡಿದ ಕಾರಣ ಹಾವೇರಿಯ ರೈತ (Haveri Farmer) ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಸ್ಟ್ ಹಾಕಿದ್ದ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಹಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ (Karnataka Highcourt) ತಡೆ ನೀಡಿದೆ.

    ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ಗೆ ಗುರುವಾರ (ನ.14) ತಡೆ ನೀಡಿದೆ. ಇದನ್ನೂ ಓದಿ: ವಕ್ಫ್‌ ನೋಟಿಸ್‌ನಿಂದಲ್ಲ ಸಾಲಭಾದೆಯಿಂದ ರೈತ ರುದ್ರಪ್ಪ ಆತ್ಮಹತ್ಯೆ – ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ

    ಏನಿದು ಪ್ರಕರಣ?
    ಪಹಣಿಯಲ್ಲಿ ವಕ್ಫ್ (Waqf) ಎಂದು ನಮೂದಾದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಸಾಲಬಾಧೆಗೆ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಈ ಕಾರಣಕ್ಕೆ ತೇಜಸ್ವಿ ಸೂರ್ಯ ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    ಮೃತ ರೈತ ರುದ್ರಪ್ಪನ ಕುಟುಂಬಸ್ಥರು ಹುಬ್ಬಳ್ಳಿಯಲ್ಲಿ (Hubballi) ವಕ್ಫ್ ಕಾಯಿದೆ ತಿದ್ದುಪಡಿ ಜಂಟಿ ಸದನ ಸಮಿತಿಗೆ ವಕ್ಫ್ ಬೋರ್ಡ್‌ನಿಂದ ಅನ್ಯಾಯ ಆಗಿರೋದಾಗಿ ದೂರು ನೀಡಿದ್ದರು. ಆದರೆ ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಪೊಲೀಸರು ಹಾಗೂ ಜಿಲ್ಲಾಡಳಿತ ಈಗ ಸ್ಪಷ್ಟನೆ ನೀಡಿತ್ತು. ಇದನ್ನೂ ಓದಿ: ಬಿಡಿಎ ಭರ್ಜರಿ ಬೇಟೆ – ನಾಗರಬಾವಿ ಬಡಾವಣೆಯಲ್ಲಿ 60 ಕೋಟಿ ಮೌಲ್ಯದ ಆಸ್ತಿ ಜಪ್ತಿ

  • Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಪುರಾತನ ಗುಟ್ಟಾಂಜನೇಯಸ್ವಾಮಿ ದೇವಾಲಯವನ್ನೇ (GuttaAnjaneya Temple) ಖಬರಸ್ತಾನ್ ವಕ್ಪ್ ಆಸ್ತಿಯಾಗಿ (Waqf Property) ನಮೂದು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಅಂದಹಾಗೆ 2018-19 ರಲ್ಲೇ ಸರ್ಕಾರದ ಆದೇಶದ ಪ್ರಕಾರ ಬೆಳ್ಳೂಟಿ ಗ್ರಾಮದ ಸರ್ವೆ ನಂಬರ್ ೦6ರ 1 ಎಕೆರೆ 30 ಗುಂಟೆ ಜಾಗವನ್ನ ವಕ್ಪ್ ಆಸ್ತಿಯಾಗಿ ನಮೂದು ಮಾಡಲಾಗಿದೆ. 1 ಎಕರೆ 30 ಗುಂಟೆಯಲ್ಲಿ ಗುಟ್ಟಾಂಜನಯೇಸ್ವಾಮಿ ದೇವಾಲಯ ಸೇರಿದಂತೆ ಪಕ್ಕದಲ್ಲೇ ಮಸೀದಿ ದರ್ಗಾವೂ ಇದೆ. ಆದ್ರೆ ಪೂರಾ 1 ಎಕೆರೆ 30 ಗುಂಟೆಯೂ ಖಬರಸ್ತಾನ್ ವಕ್ಪ್ ಆಸ್ತಿಯಾಗಿ ಬದಲಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ಶಾಕ್ – ಕಳೆದೆರಡು ತಿಂಗಳಿಂದ ಸಿಕ್ಕಿಲ್ಲ ಅಕ್ಕಿ ದುಡ್ಡು

    ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯನ್ನೂ ವಕ್ಫ್‌ ಹೆಸರಿಗೆ ಪರಭಾರೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    2015-16 ರಲ್ಲಿ ಪಹಣಿಯಲ್ಲಿ ಸ್ಕೂಲು ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆ ಎತ್ತಿದೆ. ಗ್ರಾಮಸ್ಥರು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

  • Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

    Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

    ಮಡಿಕೇರಿ: ವಿಜಯಪುರದಿಂದ ಆರಂಭವಾದ ವಕ್ಫ್ ಬೋರ್ಡ್‌ನ (Waqf Board) ರಾದ್ಧಾಂತ ಇದೀಗ ರಾಜ್ಯಾದ್ಯಂತ ಹಬ್ಬಿದೆ. ರೈತರ ಜಮೀನಾಯ್ತು, ಮನೆಗಳಾಯ್ತು, ಈಗ ನೂರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿರುವ ದೇವಸ್ಥಾನ (Kodagu Temple) ಜಾಗದ ಮೇಲೂ ವಕ್ಫ್‌ ವಕ್ರದೃಷ್ಟಿ ನೆಟ್ಟಿದೆ. ದೇವಾಲಯದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ಹೃದಯ ಭಾಗದಲ್ಲಿ ವನದುರ್ಗಾ ದೇವಾಲಯದ (Vanadurgha Temple) ಟ್ರಸ್ಟ್‌ನ ಸುಮಾರು 11 ಎಕರೆ ಜಾಗ‌ದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ಉಲ್ಲೇಖವಾಗಿದೆ. ನೂರಾರು ವರ್ಷಗಳಿಂದ ಪೂರ್ವಜರು ಇಲ್ಲಿ ವನದುರ್ಗಾ ಚೌಡೇಶ್ವರಿ ಹಾಗೂ ಗುಳಿಗ ದೈವಗಳ ಆರಾಧಾನೆ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    10 ವರ್ಷಗಳ ಹಿಂದೆ ದೇವಸ್ಥಾನದ 11 ಎಕರೆ ಜಾಗದ ಆರ್‌ಟಿಸಿಯಲ್ಲಿ ಸಂಗಮನಾಥ್ ಪಟೇಲ್ ಪೂವಯ್ಯ, ಅಬ್ದುಲ್ ಗನಿ, ಮಹಮ್ಮದ್ ಇಬ್ರಾಹಿಂ, ಟ್ರಸ್ಟಿ ಎಂದು ನಮೂದಾಗಿತ್ತು. ಆದರೀಗ ಜುಮ್ಮ ಮಸೀದಿ, ಸುನ್ನಿ ನಗರೂರು ಮತ್ತು ವಕ್ಪ್ ಆಸ್ತಿ ಎಂದು ಉಲ್ಲೇಖವಾಗಿದೆ. ಇದರಿಂದ ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್‌ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ

    ಇದು ಹಿಂದೂಗಳ ದೇವಾಲಯ ಅನ್ನೋದಕ್ಕೆ ನೂರಾರು ವರ್ಷಗಳ ಹಿಂದೆ ಹಳೆಗನ್ನಡದಲ್ಲಿ ಬರೆದಿರುವ ಚೌಡೇಶ್ವರಿ ದೇವಾಲಯದ ಕಲ್ಲು ಸಹ ಸಾಕ್ಷಿಯಿದೆ. ಪ್ರತಿ ವರ್ಷ ಈ ದೇವಾಲಯದಲ್ಲಿ ವಾರ್ಷಿಕೋತ್ಸವ, ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ದೇವಾಲಯದೊಂದಿಗೆ ಭಕ್ತರಿಗೆ ಭಾವನ್ಮಾಕ ಸಂಬಂಧ ಇದೆ. ಈ ನಡುವೆ ವಕ್ಫ್‌ ಆಸ್ತಿ ವಿವಾದ ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದೆ. ರಾಜ್ಯ ಸರ್ಕಾರ ಎಚ್ಚೆತ್ತು ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    ನಿನ್ನೆಯಷ್ಟೇ ರಾಜ್ಯದ ಕೆಲ ರೈತರಿಗೆ ನೀಡಿದ್ದ ನೋಟಿಸ್‌ ಅನ್ನು ಕಂದಾಯ ಇಲಾಖೆ ವಾಪಸ್‌ ಪಡೆದಿರುವುದಾಗಿ ಹೇಳಿದೆ. ಈ ಬೆನ್ನಲ್ಲೇ ಹಿಂದೂ ದೇವಾಲಯದ ಆರ್‌ಟಿಸಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು ಜನರಲ್ಲಿ ಆಕ್ರೋಶ ತರಿಸಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ 

  • ವಕ್ಫ್ ಆಸ್ತಿ ಅತಿಕ್ರಮಿಸಿದ್ದೀರಿ, ಮನೆ ಖಾಲಿ ಮಾಡಿ – ಕುಶಾಲನಗರದಲ್ಲಿ ಕೊಡವ ಮಹಿಳೆಗೆ ಬೆದರಿಕೆ

    ವಕ್ಫ್ ಆಸ್ತಿ ಅತಿಕ್ರಮಿಸಿದ್ದೀರಿ, ಮನೆ ಖಾಲಿ ಮಾಡಿ – ಕುಶಾಲನಗರದಲ್ಲಿ ಕೊಡವ ಮಹಿಳೆಗೆ ಬೆದರಿಕೆ

    – ಷರಿಯಾ ಕೋರ್ಟ್‌ಗೆ ಬರಬೇಕಾಗುತ್ತೆ ಅಂತ ಆವಾಜ್‌

    ಮಡಿಕೇರಿ: ಇದ್ದಕ್ಕಿದ್ದಂತೆ ಮಹಿಳೆಯೊಬ್ಬರ ಮನೆಯ ಆವರಣಕ್ಕೆ ಪ್ರವೇಶಿಸಿ ನೀವು ವಕ್ಫ್ ಆಸ್ತಿಯನ್ನು (Waqf Property) ಅತಿಕ್ರಮಿಸಿಕೊಂಡು ಮನೆ ಕಟ್ಟಿದೀರಿ, ತೆರವುಗೊಳಿಸಿ ಎಂದು ಕೆಲವರು ಬೆದರಿಕೆ ಒಡ್ಡಿದ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

    ಈ ಕುರಿತು ಕೊಡಗು ಎಸ್ಪಿಗೆ ಗ್ರಾಮದ ಮಹಿಳೆ ರೇಣುಕಾ ಉತ್ತಪ್ಪ ದೂರು ನೀಡಿದ್ದಾರೆ. ತಾವು ತಮ್ಮ ಕುಶಾಲನಗರದ (Kushalnagar) ಮುಳ್ಳುಸೋಗೆ ಮನೆಯಲ್ಲಿ ಒಬ್ಬರೇ ಇರುವಾಗ ಇಬ್ಬರು ಬಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ನಿಮ್ಮ ಜಹಗೀರು ಅಂದುಕೊಂಡಿದ್ದೀರಾ? – ಡಿಕೆಶಿ ವಿರುದ್ಧ ಆರ್.ಅಶೋಕ್ ವಾಗ್ದಾಳಿ

    ದೂರಿನಲ್ಲಿ ಏನಿದೆ?
    ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ರೇಣುಕಾ ಉತ್ತಪ್ಪ ಮುಳ್ಳುಸೋಗೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಕಳೆದ ಅಕ್ಟೋಬರ್‌ 25ರಂದು ಬೆಳಿಗ್ಗೆ 11 ಗಂಟೆಗೆ, ತಾವೊಬ್ಬರೇ ಮನೆಯಲ್ಲಿ ಇರುವಾಗ ಅನ್ಯ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮನೆಯ ಆವರಣಕ್ಕೆ ಪ್ರವೇಶಿಸಿದ್ದಾರೆ. ಇದು ವಕ್ಫ್ ಆಸ್ತಿ, ತಕ್ಷಣವೇ ಮನೆಯನ್ನು ತೆರವುಗೊಳಿಸಿ ವಕ್ಫ್‌ಗೆ ಒಪ್ಪಿಸುವಂತೆ ಬೆದರಿಸಿದ್ದಾರೆ.

    ಆಗ ನಾನು ನನ್ನ ತಂದೆ 1984 ರಲ್ಲಿ ಮುಳ್ಳುಸೋಗೆಯಲ್ಲಿ ಸರ್ವೆ ನಂಬರ್ 79/2 ರಲ್ಲಿ 36 ಸೆಂಟ್ಸ್ ಜಮೀನನ್ನು ಮಾನ್ಯಪಂಡ ಬೋಪಣ್ಣ ಎಂಬುವವರಿಂದ ಖರೀದಿಸಿದ್ದರು. ಅಂದಿನಿಂದ ನಾವು ಇದೇ ಆಸ್ತಿಯಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚೆಗೆ ನನ್ನ ಪೋಷಕರು ನಿಧನರಾದರು, ನಂತರ ನಾನು ಇದನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇನೆ, ಏಕೆ ತೆರವುಗೊಳಿಸಬೇಕು? ನಿಮ್ಮ ಬಳಿ ಯಾವುದಾದರೂ ನ್ಯಾಯಾಲಯದ ನೋಟಿಸ್ ಅಥವಾ ವಕ್ಫ್‌ಗೆ ಸೇರಿರುವುದಕ್ಕೆ ದಾಖಲೆ ಕೊಡಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಸಿಎಂ ಹೆಸರು ಹಾಳು ಮಾಡಲು ಮುಡಾ ಕೇಸ್‌ನಲ್ಲಿ ಆರೋಪ ಮಾಡ್ತಿದ್ದಾರೆ – ದಿನೇಶ್ ಗುಂಡೂರಾವ್

    ಆಗ ಅವರು ನೀವು ಮನೆ ಖಾಲಿ ಮಾಡದಿದ್ದರೇ ಹೊರಗೆ 15 ಜನರು ಇದ್ದಾರೆ. ಅವರನ್ನು ಕರೆಯುವುದಾಗಿ ಬೆದರಿಸಿದರು. ಇದರಿಂದ ಕೋಪಗೊಂಡ ಮಹಿಳೆ ಕೂಡಲೇ ಮನೆಯ ಆವರಣದಿಂದ ಹೊರ ಹೋಗುವಂತೆ ಗದರಿಸಿದ್ದಾರೆ. ಆಗ ಅವರು ನಮಗೆ ಷರಿಯಾ ಕೋರ್ಟ್ ಇದೆ. ನೀವು ಬೆಂಗಳೂರಿನ ಷರಿಯಾ ಕೋರ್ಟ್‌ಗೆ (Sharia Court) ಬರಬೇಕಾಗುತ್ತದೆ. ಅಲ್ಲಿ ನಿಮ್ಮ ಮಾಲೀಕತ್ವ ಸಾಬೀತುಪಡಿಸಬೇಕು ಎಂದು ಬೆದರಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಆಶಿಕಾ ರಂಗನಾಥ್ ನೋಡಲು ಮುಗಿಬಿದ್ದ ಜನ : ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

    ಘಟನೆ ಕುರಿತು ಕೊಡವ ಸಮಾಜದ ಒಕ್ಕೂಟಗಳ ಅಧ್ಯಕ್ಷರಿಗೂ ಸೂಕ್ತ ನೆರವು ನೀಡುವಂತೆ ಕೋರಿ ದೂರು ಸಲ್ಲಿಸಿದ್ದಾರೆ. ಕುಶಾಲನಗರ ಪೋಲೀಸರು ತನಿಖೆ ನಡೆಸುತಿದ್ದು, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.