Tag: Waqf Board row

  • ವಕ್ಫ್ ವಿವಾದ; ಹುಬ್ಬಳ್ಳಿಗೆ ವಕ್ಫ್ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷ ಭೇಟಿ – ರೈತರಿಂದ ಅಹವಾಲು ಸ್ವೀಕಾರ

    ವಕ್ಫ್ ವಿವಾದ; ಹುಬ್ಬಳ್ಳಿಗೆ ವಕ್ಫ್ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷ ಭೇಟಿ – ರೈತರಿಂದ ಅಹವಾಲು ಸ್ವೀಕಾರ

    ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸಂಸದೀಯ ಜಂಟಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹುಬ್ಬಳ್ಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.

    ಹುಬ್ಬಳ್ಳಿಗೆ ಆಗಮಿಸಿದ ಪಾಲ್ ನೇತೃತ್ವದ ಸಮಿತಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಸ್ವಾಗತ ಕೋರಿದರು. ವಿವಾದದ ಕುರಿತು ಮಾತನಾಡಿದ ಜಗದಾಂಬಿಕಾ ಪಾಲ್, ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದಿದೆ. ಕರ್ನಾಟಕ ಜನರ ಸಮಸ್ಯೆಗಳ ಆಲಿಸಲು ಬಂದಿದ್ದೇನೆ. ಇದರ ವಿಸ್ತೃತ ವರದಿ ಸಿದ್ಧಪಡಿಸಿ ಸ್ವೀಕಾರಕ್ಕೆ ನೀಡಲಾಗುವುದು. ಕರ್ನಾಟಕದ ರೈತರು, ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಸುಮಾರು 50 ರಿಂದ 60 ವರ್ಷಗಳಿಂದ ಉಳಿಮೆ ಮಾಡಿದ ಜಮೀನು. ದೇವಸ್ಥಾನಗಳ ಕಬಳಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ್ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದಾರೆ. ಇದನ್ನು ಸಹ ಪರಿಗಣಿಸಲಾಗುವುದು ಎಂದು ಪಾಲ್ ತಿಳಿಸಿದರು.

    ವಕ್ಫ್ ಜಂಟಿ ಸಂಸದೀಯ ಸಮಿತಿಯಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ವೇಳೆ ರೈತರಿಂದ ಮನವಿ ಸ್ವೀಕರಿಸಲಾಯಿತು. ಸಂಸದ ತೇಜಸ್ವಿ ಸೂರ್ಯ, ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಗೋವಿಂದ ಕಾರಜೋಳ, ಶಾಸಕ ಮಹೇಶ್ ಟೆಂಗಿನಕಾಯಿ, ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಿದರು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ರೈತರ ಮುಖಂಡರು, ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

    ಸತ್ಯ ಶೋಧನಾ ಸಮಿತಿಯಿಂದ ಜಂಟಿ ಸಂಸದೀಯ ಕಮಿಟಿಗೆ ವರದಿ ಸಲ್ಲಿಕೆ ಮಾಡಲಾಯಿತು. ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದಿದ್ದ ವಕ್ಫ್ ಬೋರ್ಡ್ ಆಸ್ತಿ ನೋಟಿಸ್ ತನಿಖೆ. ವಿಜಯಪುರ ಜಿಲ್ಲೆಯ ಸೇರಿದಂತೆ ವಿವಿಧ ಕಡೆ ತೆರಳಿ ವರದಿ ಸಲ್ಲಿಸಿರುವ ಬಿಜೆಪಿ ಸತ್ಯ ಶೋಧನಾ ಸಮಿತಿಯ ಪದಾಧಿಕಾರಿಗಳು ಭಾಗಿಯಾಗಿದ್ದರು.

  • ಹರಿಹರದ ಗುಡ್ಡದಲ್ಲಿ ಝಂಡಾ ಕಟ್ಟೆ ಮಾಡಿ ಶಸ್ತ್ರಾಸ್ತ್ರ ಸಂಗ್ರಹ: ರೇಣುಕಾಚಾರ್ಯ ಆರೋಪ

    ಹರಿಹರದ ಗುಡ್ಡದಲ್ಲಿ ಝಂಡಾ ಕಟ್ಟೆ ಮಾಡಿ ಶಸ್ತ್ರಾಸ್ತ್ರ ಸಂಗ್ರಹ: ರೇಣುಕಾಚಾರ್ಯ ಆರೋಪ

    ದಾವಣಗೆರೆ: ಹರಿಹರದ ಕೋಮರನಹಳ್ಳ ಗುಡ್ಡದಲ್ಲಿ ಮುಸಲ್ಮಾನರು ಝಂಡಾ ಕಟ್ಟೆ ಮಾಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P. Renukacharya) ಆರೋಪ ಮಾಡಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿವಾದದ (Waqf Board row) ವಿಚಾರವಾಗಿ ಪ್ರತಿಕ್ರಿಯಿಸಿದರು. ಗುಡ್ಡದ ಅರಣ್ಯ ಪ್ರದೇಶದಲ್ಲಿ ಇವರು ಹೀಗೆ ಒತ್ತುವರಿ ಮಾಡಿಕೊಂಡರೆ ಇಲಾಖೆಯವರು ಸುಮ್ನೆ ಇರ್ತಾರೆ. ಆದರೆ ರೈತರ ಮೇಲೆ ಮಾತ್ರ ದಬ್ಬಾಳಿಕೆ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಕ್ಫ್ ಬೋರ್ಡ್ ದೇಶಕ್ಕೆ ಮಾರಕವಾದ ಮಂಡಳಿಯಾಗಿದೆ. ಕಾಂಗ್ರೆಸ್‍ನ ಕೆಲ ನಾಯಕರು ಸದ್ದಿಲ್ಲದೆ ಭೂಮಿಯನ್ನು ವಕ್ಫ್‌ಗೆ ನೀಡಿದ್ದಾರೆ. ಯಾವಾಗ ಜನಾಕ್ರೋಶ ಆರಂಭವಾಯ್ತೋ ಆಗ ರಾಜ್ಯ ಸರ್ಕಾರ ಯು-ಟರ್ನ್ ಹೊಡೆದಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ನೋಟಿಸ್ ವಾಪಸ್ಸು ಪಡೆದಿದ್ದೇವೆ ಎಂದು ಹೇಳಿದ್ದಾರೆ. ಅದರ ಜೊತೆ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ಕೂಡ ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ನೋಟಿಸ್ ನೀಡಿದ್ದೇವೆ ಎಂದು ಜಮೀರ್ ಹೇಳಿದ್ದಾರೆ. ಜಮೀರ್ ಒಬ್ಬ ಮತಾಂದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಕಾರಣವಾದವರು. ನಾನೇ ಸೂಪರ್ ಸಿಎಂ ಎಂದು ಮೆರೆಯುತ್ತಿದ್ದಾನೆ. ಇದು ಸರಿಯಲ್ಲ, ನಿನ್ನನ್ನು ನಿಮ್ಮ ಸರ್ಕಾರವನ್ನು ಮನೆಗೆ ಕಳುಹಿಸುವ ಕೆಲಸ ರಾಜ್ಯದ ಜನರು ಮಾಡ್ತಾರೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

    ಮಠಾಧೀಶರು ಈಗ ಬೀದಿಗೆ ಇಳಿದು ಪ್ರತಿಭಟನೆ ಮಾಡುಲು ಮುಂದಾಗಬೇಕಿದೆ. ರಾಜ್ಯದಲ್ಲಿ ಹಲವು ಮಠಗಳು, ದೇವಸ್ಥಾನಗಳು ಹಾಗೂ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. ಜಮೀರ್ ನಿನ್ನ ಮಾತ್ರ ಅಲ್ಲ ನಿಮ್ಮ ಸರ್ಕಾರವನ್ನು ನಾಳೆನೇ ಇಲ್ಲಾ ಎನ್ನಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.