Tag: Waqf Bill

  • ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

    ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

    – ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಅರ್ಜಿ; ಏ.15ರಂದು ವಿಚಾರಣೆ
    – ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಕೇಂದ್ರ

    ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf Bill) ಇದೀಗ ಕಾನೂನು ಸ್ವರೂಪ ಪಡೆದಿದೆ. ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು, ತಕ್ಷಣದಿಂದ ಹೊಸ ವಕ್ಫ್ ಕಾಯ್ದೆ ಜಾರಿಗೆ ಬರಲಿದೆ. ಕಳೆದ ವಾರವಷ್ಟೇ ಸಂಸತ್‌ನಲ್ಲಿ ಅಂಗೀಕಾರಗೊಂಡಿದ್ದ ಮಸೂದೆಗೆ ಮೂರು ದಿನಗಳ ಹಿಂದೆಯಷ್ಟೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು.

    ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಅರ್ಜಿ
    ವಕ್ಫ್ ತಿದ್ದುಪಡಿ ಕಾಯ್ದೆ, 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಮಧ್ಯೆ, ಕೇಂದ್ರ ಸರ್ಕಾರ ಮಂಗಳವಾರ (ಇಂದು) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕೇವಿಯಟ್ ಸಲ್ಲಿಸಿದ್ದು, ವಕ್ಫ್ ಕಾಯ್ದೆ ವಿಚಾರದಲ್ಲಿ ಯಾವುದೇ ಆದೇಶ ಹೊರಡಿಸುವ ಮುನ್ನ ವಿಚಾರಣೆ ನಡೆಸದಂತೆ ಕೋರಿದೆ.

    ಕೇವಿಯಟ್‌ ಸಲ್ಲಿಸೋದು ಏಕೆ?
    ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಯಾವುದೇ ಅರ್ಜಿಯ ಬಗ್ಗೆ ವಿಚಾರಣೆ ಮಾಡದೇ ಯಾವುದೇ ಆದೇಶ ಹೊರಡಿಸದಂತೆ ನೋಡಿಕೊಳ್ಳಲು ಕೇವಿಯಟ್ ಅನ್ನು ಸಲ್ಲಿಸಲಾಗುತ್ತದೆ.

  • ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಇತಿಹಾಸದಲ್ಲಿ ಕೆಟ್ಟ ದಿನ- ಬೋಸರಾಜು

    ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಇತಿಹಾಸದಲ್ಲಿ ಕೆಟ್ಟ ದಿನ- ಬೋಸರಾಜು

    ಬೆಂಗಳೂರು: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್ (Waqf Bill) ಅಂಗೀಕಾರ ಆಗಿರುವುದು ಇತಿಹಾಸದಲ್ಲಿ ಒಂದು ಕೆಟ್ಟ ದಿನ ಎಂದು ಸಚಿವ ಎನ್.ಎಸ್ ಬೋಸರಾಜು (NS Bosaraju) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಜುಲೈಯೊಳಗೆ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

    ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ (BJP), ಆರ್‌ಎಸ್‌ಎಸ್ (RSS) ಅವರ ಪ್ರಯತ್ನದಿಂದ ಈ ಮಸೂದೆ ತಂದಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ವಿಧೇಯಕವನ್ನು ವಿರೋಧ ಮಾಡಿದ್ದಾರೆ. ಜಂಟಿ ಸದನ ಸಮಿತಿಗೆ ಹೋದಾಗಲು ಸಮಿತಿಯ ಸಭೆಯಲ್ಲಿ ವಿರೋಧಿಸಿದ್ದಾರೆ. ತಮ್ಮ ಪ್ರಯತ್ನಕ್ಕೆ ಬಲ ತೋರಿಸಿ ಬಿಲ್ ಪಾಸ್ ಮಾಡಿಕೊಂಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ಗುರುವಾರ ಸಂಸತ್‌ನಲ್ಲಿ ನಡೆದಿರುವುದು ಕೆಟ್ಟ ದಿನ ಎಂದು ನಾವು ಭಾವಿಸುತ್ತೇವೆ. ಮುಂದೆ ಏನೇ ಪರಿಣಾಮ ಆದರೂ ಅದಕ್ಕೆ ಕೇಂದ್ರವೇ ಜವಾಬ್ದಾರಿವಹಿಸಬೇಕು ಎಂದು ಆಗ್ರಹಿಸಿದರು.

    ಕರ್ನಾಟಕದಲ್ಲಿ ಬಿಲ್ ಜಾರಿ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏನು ಮಾಡಬೇಕು ಎಂದು ನಾವು ವಿಚಾರ ಮಾಡ್ತೀವಿ. ಬಿಲ್‌ಗೆ ನಾವು ವಿರೋಧ ಮಾಡಿದ್ದೇವೆ. ಇಡೀ ದೇಶದಲ್ಲಿ ವಿಪಕ್ಷಗಳು ವಿರೋಧ ಮಾಡಿವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ವಿಚಾರ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ

  • ನನ್ನ ಉಚ್ಚಾಟನೆ ಮಾಡದಿದ್ರೆ ನೇಣು ಹಾಕಿಕೊಳ್ತೀನಿ ಅಂತ ಬಿಎಸ್‌ವೈ ಅಮಿತ್ ಶಾಗೆ ಬ್ಲ್ಯಾಕ್‌ಮೇಲ್ ಮಾಡಿದ್ರು – ಯತ್ನಾಳ್

    ನನ್ನ ಉಚ್ಚಾಟನೆ ಮಾಡದಿದ್ರೆ ನೇಣು ಹಾಕಿಕೊಳ್ತೀನಿ ಅಂತ ಬಿಎಸ್‌ವೈ ಅಮಿತ್ ಶಾಗೆ ಬ್ಲ್ಯಾಕ್‌ಮೇಲ್ ಮಾಡಿದ್ರು – ಯತ್ನಾಳ್

    – ಬಿಜೆಪಿಯಲ್ಲಿ ಈ ಕೆಟ್ಟ ಯಡಿಯೂರಪ್ಪ ಕುಟುಂಬ ಮುಂದುವರೆದ್ರೆ ಹೊಸ ಪಕ್ಷದ ಬಗ್ಗೆ ಚಿಂತಿಸ್ತೀವಿ ಎಂದ ಶಾಸಕ

    ಬೆಂಗಳೂರು: ವಿಜಯೇಂದ್ರನನ್ನು (BY Vijayendra) ತೆಗೆದರೆ, ನನ್ನನ್ನು ಹೊರಗೆ ಹಾಕದಿದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಅಮಿತ್ ಶಾಗೆ ಯಡಿಯೂರಪ್ಪ (BS Yediyurappa) ಬ್ಲ್ಯಾಕ್‌ಮೇಲ್ ಮಾಡಿದ್ದರು. ಅದಕ್ಕಾಗಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil yatnal) ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೆಳಮಟ್ಟದ ರಾಜಕೀಯ ಮಾಡಿ, ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ. ತಾನು ಸಾಯೋ ಮುಂಚೆ ವಿಜಯೇಂದ್ರನನ್ನು ಸಿಎಂ ಮಾಡೋದು ಅವರ ಆಸೆಯಾಗಿದೆ. ಹೀಗಾಗಿ ತಮ್ಮ ಮಗನ ರಕ್ಷಣೆಗಾಗಿ ಭಾಗಿಯಾಗಿದ್ದಾರೆ. ಜಗತ್ತಿನಲ್ಲಿಯೂ ಆಸ್ತಿ ಮಾಡೋಕೆ ಈ ಹೋರಾಟವನ್ನು ಯಡಿಯೂರಪ್ಪ, ವಿಜಯೇಂದ್ರ ಮಾಡುತ್ತಿದ್ದಾರೆ. ರೈತರು, ಬಡವರ ಪರವಾಗಿ ಯಡಿಯೂರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ತನ್ನ ಮಗನ ಕುರ್ಚಿ ಗಟ್ಟಿ ಮಾಡೋಕೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ

    ಹೊಸ ಪಕ್ಷ ಕಟ್ಟುವ ವಿಚಾರವಾಗಿ ಮಾತನಾಡಿದ ಅವರು, ಯಾರು ಹೇಳಿದ್ರು ಹೊಸ ಪಕ್ಷ ಕಟ್ಟುತ್ತೇವೆ ಅಂತಾ? ನಾವು ಮೊದಲು ಸರ್ವೇ ಮಾಡುತ್ತೇವೆ. ಬಿಜೆಪಿಯಲ್ಲಿ (BJP) ಈ ಕೆಟ್ಟ ಯಡಿಯೂರಪ್ಪ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಕರ್ನಾಟಕದಲ್ಲಿ ಭವಿಷ್ಯ ಇದೆ. ಇವರು ಭ್ರಷ್ಟಾಚಾರದಲ್ಲಿ ಇದ್ದಾರೆ. ಕೊರೊನಾ, ಡಿ-ನೋಟಿಫಿಕೇಶನ್ ಹಗರಣ ಇದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತಾಡಲು ಇವರಿಗೇನು ನೈತಿಕತೆ ಇದೆ. ವಿಜಯೇಂದ್ರ ಚೇಲಾಗಳು ಯತ್ನಾಳ್ ರಾಜೀನಾಮೆ ಕೊಡಬೇಕು ಎಂದು ಹೇಳುತ್ತಾರೆ. ಡಿಕೆಶಿ ಕೊಟ್ಟ ಭಿಕ್ಷೆಯಿಂದ ಶಾಸಕ ಆಗಿರೋದು. ಹಾಗಾಗಿ ಮೊದಲು ವಿಜಯೇಂದ್ರ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ಶಿಕಾರಿಪುರದಿಂದ ಆರಿಸಿ ಬರಲಿ. ಚೇಲಾಗಳ ಕೈಯಲ್ಲಿ ಹೇಳಿಸುವುದನ್ನು ಬಿಟ್ಟು ಧಮ್ ಇದ್ದರೆ ವಿಜಯೇಂದ್ರ ನನ್ನ ಎದುರಿಗೆ ಮಾತಾಡಲಿ, 4 ಚೇಲಾಗಳನ್ನ ಇಟ್ಟುಕೊಂಡು ಹಂದಿಗಳಿಂದ ಮಾತಾಡಿಸಬೇಡ ಎಂದು ಕಿಡಿಕಾರಿದರು.

    ವಕ್ಪ್ ಬಿಲ್ (Waqf Bill) ಪಾಸ್ ವಿಚಾರವಾಗಿ, ಮೋದಿ, ಅಮಿತ್ ಶಾಗೆ ಧನ್ಯವಾದ ಹೇಳುತ್ತೇನೆ. ವಕ್ಫ್ ಬಿಲ್ ಪಾಸ್ ಆಗಿದೆ. ಕರಾಳ ಬಿಲ್ ಇವತ್ತು ತಿದ್ದುಪಡಿ ಆಗಿದೆ. ವಿಜಯೇಂದ್ರ ಚೇಲಾಗಳಿಲ್ಲದೇ ನಾವು ರಾಜ್ಯ ಸುತ್ತಿ ದಾಖಲಾತಿ ಸಂಗ್ರಹ ಮಾಡಿದ್ದೆವು. ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗುತ್ತದೆ. ವಕ್ಫ್ ತಿದ್ದುಪಡಿಯನ್ನು ಸ್ವಾಗತ ಮಾಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.ಇದನ್ನೂ ಓದಿ:ಬೆಲೆ ಏರಿಕೆಗೆ ಖಂಡನೆ – 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಅಹೋರಾತ್ರಿ ಧರಣಿ

  • ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

    ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ

    ನವದೆಹಲಿ: ವಕ್ಫ್ ತಿದ್ದುಪಡಿ (Waqf) ಮಸೂದೆಯನ್ನು ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ (Kerala Catholic Bishops’ Association) ಬೆಂಬಲ ನೀಡಿದೆ. ಜನ ಪ್ರತಿನಿಧಿಗಳ ತಿದ್ದುಪಡಿಯ ಪರವಾಗಿ ಮತ ಚಲಾಯಿಸಬೇಕು. ಇದರಿಂದ ವಕ್ಫ್ ಮಂಡಳಿಯ ಭೂಮಿಯ ಮೇಲೆ ಹಕ್ಕು ಚಲಾಯಿಸುವುದನ್ನು ನಿಲ್ಲಿಸಬಹುದು ಎಂದು ತಿಳಿಸಿದೆ.

    ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಅನೇಕ ಸಂಸ್ಥೆಗಳು ಮಸೂದೆಯನ್ನು ಬೆಂಬಲಿಸುತ್ತಿವೆ. ವಕ್ಫ್ನ ಆಸ್ತಿಗಳನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಈ ಮಸೂದೆಯಿಂದ ಸಾಮಾನ್ಯ ಜನರ ಕಲ್ಯಾಣವಾಗುತ್ತದೆ. ಅದಲ್ಲದೇ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿದ ಕೆಲವು ಪ್ರಭಾವಿ ಜನರಿದ್ದಾರೆ. ವಿಷಯಗಳನ್ನು ಟೀಕಿಸುವುದು ಪ್ರತಿಯೊಬ್ಬರ ಹಕ್ಕು, ಆದರೆ ಟೀಕೆಯಲ್ಲಿ ಕೆಲವು ವಿಷಯಗಳು ಇರಬೇಕು ಎಂದಿದೆ.ಇದನ್ನೂ ಓದಿ:ಬುಧವಾರ ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ಎರ್ನಾಕುಲಂ ಜಿಲ್ಲೆಯ ಮುನಂಬಮ್‌ನಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ನಿವಾಸಿಗಳ ವಶದಲ್ಲಿರುವ ಸುಮಾರು 400 ಎಕರೆ ಭೂಮಿಯ ಮೇಲಿನ ವಕ್ಫ್ ಮಂಡಳಿಯ ಹಕ್ಕನ್ನು ಉಲ್ಲೇಖಿಸಿ, ವಕ್ಫ್ ಕಾಯ್ದೆಯಲ್ಲಿನ ವಿವಿಧ ಷರತ್ತುಗಳು, ಭೂನಿವಾಸಿಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಅನುಭವಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಇವುಗಳನ್ನು ತಿದ್ದುಪಡಿ ಮಾಡಬೇಕು. ಕೋಝಿಕ್ಕೋಡ್‌ನಲ್ಲಿ ಫಾರೂಕ್ ಕಾಲೇಜು ಆಡಳಿತ ಮಂಡಳಿ ಭೂಮಿಯನ್ನು ಅಲ್ಲಿನ ನಿವಾಸಿಗಳಿಗೆ ಮಾರಾಟ ಮಾಡಿ, ಇದನ್ನು ನಿಮಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಿತ್ತು.

    ಹೀಗಾಗಿ ವಿಪಕ್ಷಗಳು ಹಾಗೂ ಮುಸ್ಲಿಂ ಸಮುದಾಯದ ತೀವ್ರ ವಿರೋಧದ ನಡುವೆ ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಾಳೆ ಮಧ್ಯಾಹ್ನ ಕೇಂದ್ರ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಬಿಲ್ ಮಂಡಿಸಲಿದ್ದಾರೆ. ವಕ್ಫ್ ಬಿಲ್ ಮೇಲಿನ ವಿಸ್ತೃತ ಚರ್ಚೆಗಾಗಿ ಬರೋಬ್ಬರಿ 8 ಗಂಟೆ ಸಮಯ ಮೀಸಲು ಇಡಲಾಗಿದೆ.

    ಏ.4ಕ್ಕೆ ಬಜೆಟ್ ಅಧಿವೇಶನ ಮುಗಿಯುವ ಹಿನ್ನೆಲೆಯಲ್ಲಿ ನಾಳೆಯೇ ಈ ಬಿಲ್‌ಗೆ ಲೋಕಸಭೆಯಲ್ಲಿ (Lokasabha) ಅನುಮೋದನೆ ಪಡೆಯಲು ಮೋದಿ ಸರ್ಕಾರ (Modi Government) ಪ್ಲ್ಯಾನ್‌ ಮಾಡಿದೆ. ಈ ವಿಧೇಯಕದ ಪರ 298 ಸಂಸದರು ನಿಲ್ಲುವ ಸಾಧ್ಯತೆಯಿದ್ದು, ನಾಳೆಯೇ ವೋಟಿಂಗ್ ನಡೆಯಲಿರುವ ಹಿನ್ನೆಲೆ ಎಲ್ಲಾ ಸಂಸದರು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ವ್ಹಿಪ್ ಜಾರಿ ಮಾಡಿದೆ. ಆದರೆ ಈ ಬಿಲ್ ಪಾಸ್ ಆಗದಂತೆ ನೋಡಿಕೊಳ್ಳಲು ವಿಪಕ್ಷಗಳು ಕಸರತ್ತು ನಡೆಸಿವೆ. ಈ ವಿಧೇಯಕವನ್ನು ನಾವು ಸದನದಲ್ಲಿ ವಿರೋಧ ಮಾಡುತ್ತೇವೆ ಎಂದು ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಸೇರಿ ಹಲವು ಪಕ್ಷಗಳು ಘೋಷಣೆ ಮಾಡಿವೆ.ಇದನ್ನೂ ಓದಿ:ಪತ್ನಿಯಿಂದ ಪತಿಯ ವಾಟ್ಸಪ್ ಹ್ಯಾಕ್ – ಪರ ಸ್ತ್ರೀಯರೊಂದಿಗೆ ರಾಸಲೀಲೆ ನೋಡಿ ಶಾಕ್

  • ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

    ವಕ್ಫ್ ತಿದ್ದುಪಡಿ ಮಸೂದೆ – 14 ತಿದ್ದುಪಡಿಗಳಿಗೆ ಜಂಟಿ ಸಮಿತಿಯ ಒಪ್ಪಿಗೆ

    – ಜೆಪಿಸಿ ಮುಖ್ಯಸ್ಥರ ವಿರುದ್ಧ ವಿಪಕ್ಷಗಳ ಸದಸ್ಯರು ಗರಂ

    ನವದೆಹಲಿ: ಸಂಸತ್ತಿನ ಜಂಟಿ ಸಮಿತಿಯು (JPC ) ವಕ್ಫ್ ತಿದ್ದುಪಡಿ ಮಸೂದೆಗೆ ಇಂದು ಅನುಮೋದನೆ ನೀಡಿದೆ.

    ಈ ಮಸೂದೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಮಂಡಿಸಿದ್ದರು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ (Jagdambika Pal) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ, ವಕ್ಫ್‌ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ – ಡಿಸಿ, ಎಸ್ಪಿಗಳಿಗೆ ಕೃಷ್ಣಬೈರೇಗೌಡ ಸೂಚನೆ

    ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಪ್ರಜಾಪ್ರಭುತ್ವ ಪದ್ದತಿಯಲ್ಲಿ ಜೆಪಿಸಿ ಕೆಲಸ ಮಾಡಿಲ್ಲ ಎಂದು ವಿಪಕ್ಷ ಸದಸ್ಯರು ಗರಂ ಆದರು. ಈ 14 ಪ್ರತಿಪಾದನೆಗಳ ಅನುಮೋದನೆಗೆ ಬುಧವಾರ (ಜ.29) ವೋಟಿಂಗ್ ನಡೆಯಲಿದೆ. ಜನವರಿ 31ಕ್ಕೆ ಅಂತಿಮ ವರದಿಯನ್ನು ಲೋಕಸಭೆಗೆ ಸಲ್ಲಿಸಲು ಜೆಪಿಸಿ ಮುಖ್ಯಸ್ಥರು ತೀರ್ಮಾನಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್, ಎನ್‌ಡಿಎ ಸದಸ್ಯರು ಮಂಡಿಸಿದ 14 ತಿದ್ದುಪಡಿಗಳನ್ನು ಸ್ವೀಕರಿಸಲಾಗಿದೆ. ವಿಪಕ್ಷದ ಸದಸ್ಯರು ಹಲವು ತಿದ್ದುಪಡಿಗಳನ್ನು ಮಂಡಿಸಿದ್ದರಾದರೂ, ಅವೆಲ್ಲವನ್ನೂ ಮತದಾನದ ಮೂಲಕ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

    ಸಮಿತಿಯು ಅಂಗೀಕರಿಸಿದ ತಿದ್ದುಪಡಿಗಳು ಕಾನೂನನ್ನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ. ವಕ್ಫ್‌ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡುವ ಜೆಪಿಸಿ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕ ಎಂದು ಬಣ್ಣಿಸಿರುವ ಜಗದಂಬಿಕಾ ಪಾಲ್‌, ಅಂಗೀಕರಿಸಿದ ತಿದ್ದುಪಡಿಗಳು ಉತ್ತಮ ಮಸೂದೆಯನ್ನು ರೂಪಿಸುತ್ತವೆ ಎಂದು ಬಲವಾಗಿ ನಂಬಿರುವುದಾಗಿ ಹೇಳಿದ್ದಾರೆ.

  • ವಕ್ಫ್‌ ಮಸೂದೆ ಸಭೆಯಲ್ಲಿ ಹೈಡ್ರಾಮಾ – ಟಿಎಂಸಿ ಸಂಸದ ಅಮಾನತು

    ವಕ್ಫ್‌ ಮಸೂದೆ ಸಭೆಯಲ್ಲಿ ಹೈಡ್ರಾಮಾ – ಟಿಎಂಸಿ ಸಂಸದ ಅಮಾನತು

    – ಸಭೆಯಲ್ಲಿ ಅನುಚಿತ ವರ್ತನೆ, ಗಾಜಿನ ಬಾಟೆಲ್‌ ಒಡೆದು ಎಸೆದ ಆರೋಪ

    ಕೋಲ್ಕತ್ತಾ: ವಕ್ಫ್‌ ಬೋರ್ಡ್‌ ಬಿಲ್‌ಗೆ ತಿದ್ದುಪಡಿ ತರುವ ಕುರಿತು ಚರ್ಚಿಸಲು ಸೇರಿದ್ದ ಜಂಟಿ ಸಂಸದೀಯ ಸಮಿತಿಯ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆಯಿತು.

    ವಕ್ಫ್‌ ಬಿಲ್‌ ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥ ಜಗದಾಂಬಿಕಾ ಪಾಲ್‌ ವಿರುದ್ಧ ಅನುಚಿತ ವರ್ತನೆ, ಅಸಾಂವಿಧಾನಿಕ ಪದ ಬಳಕೆ ಹಾಗೂ ಗಾಜಿನ ಬಾಟೆಲ್‌ ಒಡೆದು ಪಾಲ್‌ ಮೇಲೆ ಎಸೆದ ಆರೋಪದಲ್ಲಿ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರನ್ನು ಅಮಾನತು ಮಾಡಲಾಗಿದೆ.

    ಬ್ಯಾನರ್ಜಿ ಅವರನ್ನು 1 ದಿನ ಹಾಗೂ 2 ಸಭೆಗಳಿಂದ ಅಮಾನತು ಮಾಡಲಾಗಿದೆ. ಗಾಜಿನ ಬಾಟಲ್ ಒಡೆದು ಜಗದಂಬಿಕಾ ಪಾಲ್ ಮೇಲೆ ಎಸೆದ ಆರೋಪ ಕೇಳಿಬಂದಿದೆ. ಗಾಜಿನ ಬಾಟಲ್ ಒಡೆದಾಗ ಕಲ್ಯಾಣ್ ಬ್ಯಾನರ್ಜಿ ಕೈಗೆ ಗಾಯವಾಗಿದೆ.

    ಬಿಜೆಪಿ ಲೋಕಸಭೆಯ ಸಂಸದ ನಿಶಿಕಾಂತ್ ದುಬೆ ಅವರು ಒಂಬತ್ತು ಸದಸ್ಯರ ಬೆಂಬಲದೊಂದಿಗೆ ನಿರ್ಣಯವನ್ನು ಮಂಡಿಸಿದ ನಂತರ ಅವರನ್ನು ಅಮಾನತುಗೊಳಿಸಲಾಯಿತು. ಆದರೆ ಎಂಟು ಮಂದಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಜೆಪಿಸಿ ಅಧ್ಯಕ್ಷೆ ಮತ್ತು ಬಿಜೆಪಿ ಲೋಕಸಭಾ ಸಂಸದ ಜಗದಾಂಬಿಕಾ ಪಾಲ್ ಅವರು ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವ ಆದೇಶ ಹೊರಡಿಸಿದ್ದಾರೆ.

  • ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

    ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಬಂತು 1.25 ಕೋಟಿ ಪ್ರತಿಕ್ರಿಯೆ

    – ಇ-ಮೇಲ್ ಅಭಿಯಾನದ ಹಿಂದೆ ಪಾಕ್-ಚೀನಾ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

    ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆಯ ಬಗ್ಗೆ ತನಿಖೆ ನಡೆಸುತ್ತಿರುವ ಸಂಸದೀಯ ಸಮಿತಿಯು ಸುಮಾರು 1.25 ಕೋಟಿ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಬಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಚೀನಾದ ಪಾತ್ರವಿದೆ ಇರಬಹುದು. ಈ ಪ್ರತಿಕ್ರಿಯೆಗಳ ಮೂಲದ ಬಗ್ಗೆ ತನಿಖೆ ನಡೆಸಬೇಕೇಂದು ಒತ್ತಾಯಿಸಿದ್ದಾರೆ.

    ಈ ಕುರಿತು ನಿಶಿಕಾಂತ್ ದುಬೆ, ವಕ್ಫ್ ಮಸೂದೆ ತನಿಖಾ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಮಸೂದೆ ವಿರೋಧಿಸಿ ಬರುತ್ತಿರುವ ಪ್ರತಿಕ್ರಿಯೆಗಳ ಹಿಂದೆ ತೀವ್ರಗಾಮಿ ಸಂಘಟನೆಗಳು, ಝಾಕಿರ್ ನಾಯ್ಕ್‌ನಂತಹ ವ್ಯಕ್ತಿಗಳ ಕೈವಾಡ ಇರಬಹುದು. ಐಎಸ್‌ಐ ಮತ್ತು ಚೀನಾದಂತಹ ವಿದೇಶಿ ಶಕ್ತಿಗಳ ಸಂಭಾವ್ಯ ಪಾತ್ರವನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ನಿಶಿಕಾಂತ್ ದುಬೆ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದು, ಈ ಪ್ರತಿಕ್ರಿಯೆ ಸಲ್ಲಿಕೆಗಳ ಭೌಗೋಳಿಕ ಮೂಲದ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಭಾರತವೊಂದರಿಂದಲೇ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಪಡೆಯುವುದು ಅಸಾಧ್ಯ. ಭಾರತವು ಪ್ರಬಲ ಸಂಸದೀಯ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದ್ದು, ವಿದೇಶಿ ಹಸ್ತಕ್ಷೇಪದ ಮೂಲಕ ಅದರ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ರಾಷ್ಟ್ರೀಯ ಸಾರ್ವಭೌಮತೆಗೆ ನೇರ ಬೆದರಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

    ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಗುಂಪುಗಳು ತೀವ್ರವಾಗಿ ವಿರೋಧಿಸುತ್ತಿವೆ. ವಕ್ಫ್ ತಿದ್ದುಪಡಿ ವಿಧೇಯಕದ ಮೂಲಕ ಅವರ ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಯತ್ನ ನಡೆಯುತ್ತಿದೆ ಎನ್ನುತ್ತಾರೆ. ವಿರೋಧ ಪಕ್ಷಗಳು ಕೂಡ ಈ ಮಸೂದೆಯನ್ನು ವಿರೋಧಿಸಿದ್ದವು, ನಂತರ ಸರ್ಕಾರವು ವಕ್ಫ್ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿತು. ಜಂಟಿ ಸಂಸದೀಯ ಸಮಿತಿಯು ವಕ್ಫ್ ತಿದ್ದುಪಡಿ ಮಸೂದೆಗೆ ಒಮ್ಮತ ಮೂಡಿಸಲು ಜನರ ಪ್ರತಿಕ್ರಿಯೆಯನ್ನು ಕೋರಿತ್ತು ಮತ್ತು ಅದಕ್ಕಾಗಿ ಜಾಹೀರಾತು ನೀಡಿತ್ತು. ಸಮಿತಿಯು ಕೋಟಿಗಟ್ಟಲೆ ಶಿಫಾರಸುಗಳನ್ನು ಸ್ವೀಕರಿಸುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ಹೇಳಿದ್ದರು.

  • ವಕ್ಫ್ ಮಸೂದೆ ಸಂಸತ್‌ನ ಸ್ಥಾಯಿ ಸಮಿತಿಗೆ ರವಾನೆ

    ವಕ್ಫ್ ಮಸೂದೆ ಸಂಸತ್‌ನ ಸ್ಥಾಯಿ ಸಮಿತಿಗೆ ರವಾನೆ

    ನವದೆಹಲಿ: ವಕ್ಫ್ ಬೋರ್ಡ್ನಲ್ಲಿ ಸುಧಾರಣೆ ತರುವ ಸಲುವಾಗಿ ಕೇಂದ್ರ ಸರ್ಕಾರ, ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಆದರೆ, ನಿರೀಕ್ಷೆಯಂತೆ ಇದಕ್ಕೆ ಕಾಂಗ್ರೆಸ್ ಸೇರಿ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯ್ತು. ಪರಿಣಾಮವಾಗಿ ಕೇಂದ್ರ ಸರ್ಕಾರ, ವಕ್ಫ್ ತಿದ್ದುಪಡಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳಿಸಿಕೊಟ್ಟಿದೆ.

    ಸಂಸತ್‌ನಲ್ಲಿ ಕೇಂದ್ರ ಮಂತ್ರಿ ಕಿರಣ್ ರಿಜಿಜು ಈ ಮಸೂದೆ ಮಂಡಿಸಿದರು. ಇದಕ್ಕೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ, ಡಿಎಂಕೆ, ಎಂಐಎಂ, ಕಮ್ಯುನಿಸ್ಟ್ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಮಸೂದೆ ಖಂಡಿಸಿ ಸದನದಲ್ಲಿ ಗದ್ದಲ ಉಂಟು ಮಾಡಿದವು. ಆದರೆ, ನಿಮ್ಮ ಕೈಲಿ ಆಗದ ಕಾರಣ ನಾವು ತಿದ್ದುಪಡಿ ಮಾಡ್ಬೇಕಿದೆ ಎಂದು ಕಿರಣ್ ರಿಜಿಜು ಕೌಂಟರ್ ಕೊಟ್ಟರು.

    ರಾಜ್ಯ ವಕ್ಫ್ ಬೋರ್ಡ್ಗಳು ಮಾಫಿಯಾ ಆಗಿವೆ ಎಂದು ವಿಪಕ್ಷಗಳ ಅನೇಕರು ನನ್ನ ಬಳಿ ದೂರು ನೀಡಿದ್ದಾರೆ. ನಾನು ಅವರ ಹೆಸರೇಳಿ ಅವರ ರಾಜಕೀಯ ಜೀವನ ನಾಶ ಮಾಡಲು ಹೋಗಲ್ಲ ಎಂದು ರಿಜಿಜು ಹೇಳಿಕೊಂಡರು. ರಿಜಿಜು ಮಾತಿಗೆ ಆಕ್ರೋಶ ವ್ಯಕ್ತವಾಯ್ತು. ಇದು ಕ್ರೂರ ಬಿಲ್.. ಸಂವಿಧಾನದ ಮೇಲಿನ ದಾಳಿ ಎಂದು ಕೆಸಿ ವೇಣುಗೋಪಾಲ್ ಆರೋಪಿಸಿದರು.

    ವಕ್ಫ್ ಬೋರ್ಡ್ನಲ್ಲಿ ಮುಸ್ಲಿಮೇತರರನ್ನು ನೇಮಕ ಮಾಡುವ ನಿಯಮವನ್ನು ವಿರೋಧಿಸಿದರು. ಹಿಂದೂ ದೇವಾಲಯಗಳನ್ನು ನಿರ್ವಹಿಸಲು ಕ್ರೈಸ್ತರು, ಮುಸ್ಲಿಮರಿಗೆ ಆಗುತ್ತಾ ಎಂದು ಕನಿಮೋಳಿ ಪ್ರಶ್ನಿಸಿದರು. ಈ ಮಸೂದೆ ರಾಜಕೀಯ ಷಡ್ಯಂತ್ರ ಎಂದು ಸಮಾಜವಾದಿ ಪಕ್ಷ ಟೀಕಿಸಿತು.

    ಸ್ಟಾಂಡಿಂಗ್ ಕಮಿಟಿಗೆ ವಹಿಸುವಂತೆ ಎನ್‌ಸಿಪಿ ಒತ್ತಾಯಿಸಿತು. ತೀವ್ರ ವಿರೋಧ ಹಿನ್ನೆಲೆಯಲ್ಲಿ ಇದನ್ನು ಜೆಪಿಸಿಗೆ ಕಳಿಸಲು ಕೇಂದ್ರ ಸರ್ಕಾರ ಒಪ್ಪಿತು.