Tag: Waqf Amendment Bill

  • ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ: ಓವೈಸಿ ಆಕ್ರೋಶ

    ವಕ್ಫ್ ತಿದ್ದುಪಡಿ ಮಸೂದೆ ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ: ಓವೈಸಿ ಆಕ್ರೋಶ

    ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮೂಲಕ ಸರ್ಕಾರ ಮುಸ್ಲಿಮರ ಆಸ್ತಿ ಕಬಳಿಕೆ ಮಾಡುವ ಹುನ್ನಾರ ಮಾಡಿದೆ, ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರಿಂದ ಸ್ಮಶಾನಗಳು, ಮಸೀದಿಗಳು ಮತ್ತು ದರ್ಗಾಗಳನ್ನು ಕಸಿದುಕೊಳ್ಳುವ ನಿಬಂಧನೆಗಳನ್ನು ಹೊಂದಿದೆ ಎಂದು ಎಐಎಮ್‌ಐಎಮ್ (AIMIM) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಆರೋಪಿಸಿದ್ದಾರೆ.

    ಮಸೂದೆ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಮಸೂದೆ ವಕ್ಫ್ ಆಸ್ತಿಯನ್ನು ಉಳಿಸುವುದಕ್ಕಾಗಿ ಅಲ್ಲ, ಅತಿಕ್ರಮಣಕಾರರನ್ನು ತೆಗೆದುಹಾಕುವುದಕ್ಕಾಗಿ ಅಲ್ಲ, ಈ ಮಸೂದೆ ವಕ್ಫ್ ಆಸ್ತಿಯನ್ನು ಕೊನೆಗೊಳಿಸುವುದಕ್ಕಾಗಿ. ಮುಸ್ಲಿಮರಿಂದ ಸ್ಮಶಾನಗಳು, ಖಾಂಕಾ, ದರ್ಗಾಗಳನ್ನು ಕಸಿದುಕೊಳ್ಳುವುದಕ್ಕಾಗಿ. ಅವರ ಉದ್ದೇಶಗಳು ಕೆಟ್ಟವು ಮತ್ತು ಅವರು ದೇಶದಲ್ಲಿ ದೂರವನ್ನು ಹೆಚ್ಚಿಸಲು ಬಯಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ‘ಅಪ್ಪು’ ಸಿನಿಮಾ ನೋಡೋಕೆ ನನಗೆ ಧೈರ್ಯ ಇಲ್ಲ: ಶಿವಣ್ಣ

    ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಕಾಯ್ದೆಯನ್ನು ಬೆಂಬಲಿಸಿದರೆ ಸಾರ್ವಜನಿಕರು ಅವರನ್ನು ಜೀವನಪರ್ಯಂತ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್; ಸರಬರಾಜು ಸಮಸ್ಯೆ ಆಗಿದೆ, ಅಕ್ಕಿ ಕೊರತೆ ಇಲ್ಲ: ಮುನಿಯಪ್ಪ

    ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಸರ್ಕಾರ ವಕ್ಫ್ ಮಸೂದೆಯನ್ನು ಪರಿಚಯಿಸುವ ನಿರೀಕ್ಷೆಯಿದೆ. ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ರಚಿಸಲಾದ ಜಂಟಿ ಸಂಸದೀಯ ಸಮಿತಿಯಲ್ಲಿ ಓವೈಸಿ ಸದಸ್ಯರೂ ಆಗಿದ್ದರು. ಈ ಮಸೂದೆಯನ್ನು ವಾಪಸ್ ಪಡೆಯಲು ವ್ಯಾಪಕ ಒತ್ತಡ ಕೇಳಿ ಬರುತ್ತಿದೆ. ಇದನ್ನೂ ಓದಿ: ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರೋ ಬೋಧಕ ಹುದ್ದೆ ಹಂತ ಹಂತವಾಗಿ ಭರ್ತಿ: ಡಾ.ಸುಧಾಕರ್

  • ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

    ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

    ನವದೆಹಲಿ: ಜಂಟಿ ಸಂಸದೀಯ ಸಮಿತಿ ನೀಡಿದ ವರದಿ ಮೇರೆಗೆ ವಕ್ಫ್ (ತಿದ್ದುಪಡಿ) ಮಸೂದೆಗೆ (Waqf Amendment Bill) ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ.

    ಫೆ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (JPC) ವರದಿ ಆಧರಿಸಿ ಫೆ.19ರ ಸಭೆಯಲ್ಲಿ ಸಂಪುಟ ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – 5ನೇ ದಿನವೂ ರಕ್ಷಣಾ ಕಾರ್ಯ, 10,000 ಘನ ಮೀಟ‌ರ್ ಕೆಸರು ತೆಗೆಯುವುದೇ ಸವಾಲು!

    ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ (2025 Budget Session) ಮೊದಲಾರ್ಧದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ವಿಕ್ಷಗಳು ಗದ್ದಲದಿಂದಾಗಿ ಸ್ವಲ್ಪ ಸಮಯದ ವರೆಗೆ ಕಲಾಪವನ್ನು ಮುಂದೂಡಲಾಯಿತು. ಅಲ್ಲದೇ ವಿಪಕ್ಷ ಸಂಸದರು ತಮ್ಮ ಭಿನ್ನಾಭಿಪ್ರಾಯವನ್ನು ಜೆಪಿಸಿ ವರದಿಯಲ್ಲಿ ತಿರುಚಲಾಗಿದೆ ಎಂದು ದೂರಿದರು. ಆದ್ರೆ ಕೇಂದ್ರವು ಈ ಆರೋಪವನ್ನು ನಿರಾಕರಿಸಿತು.

    ಕಳೆದ ವಾರವಷ್ಟೇ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈ ಮೂಲಕ ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸುವ ಗುರಿ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಂಡ್ಯ | KSRTC ಬಸ್ ಚಕ್ರಕ್ಕೆ ತಲೆಕೊಟ್ಟು ಯುವಕ ಆತ್ಮಹತ್ಯೆ

    ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ (Jagdambika Pal) ನೇತೃತ್ವದ ಜೆಪಿಸಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸಿದೆ. ಕಳೆದ ಜನವರಿಯಲ್ಲಿ ಜೆಪಿಸಿ ಸಭೆಯಲ್ಲಿ ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಮಾತ್ರವೇ ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಇದನ್ನೂ ಓದಿ: ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆ – ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆ

  • ವಕ್ಪ್ ತಿದ್ದುಪಡಿ ಮಸೂದೆ ಪರಿಶೀಲನೆ ಅಂತ್ಯ – ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ

    ವಕ್ಪ್ ತಿದ್ದುಪಡಿ ಮಸೂದೆ ಪರಿಶೀಲನೆ ಅಂತ್ಯ – ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ

    ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ (Waqf Amendment Bill) ಕುರಿತ ಕರಡು ವರದಿಯನ್ನು ಜಂಟಿ ಸಂಸದೀಯ ಸಮಿತಿಯು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ಸಲ್ಲಿಸಿದೆ.

    ವಕ್ಫ್ ಮಸೂದೆ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ಸಂಸತ್ ಭವನದ ಕಚೇರಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಿದ್ದಾರೆ.

    ಜಂಟಿ ಸಂಸದೀಯ ಸಮಿತಿಯು ನಿನ್ನೆ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಕರಡು ವರದಿಯನ್ನು ಅಂಗೀಕರಿಸಿದೆ. ಸಮಿತಿಯ 16 ಸದಸ್ಯರು ಕರಡು ಮಸೂದೆ ಪರವಾಗಿ ಮತ ಚಲಾಯಿಸಿದರೆ, 11 ಸದಸ್ಯರು ಮಸೂದೆಯ ವಿರೋಧವಾಗಿ ಮತವನ್ನು ಚಲಾಯಿಸಿದ್ದರು. ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆಯನ್ನು 2024ರ ಆಗಸ್ಟ್ 8ರಂದು ಜಂಟಿ ಸಂಸದೀಯ ಸಮಿತಿಗೆ(Waqf JPC) ಉಲ್ಲೇಖಿಸಲಾಗಿತ್ತು.

    ಇನ್ನೂ ಞ ಬಗ್ಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 1995ರ ವಕ್ಫ್ ಕಾಯ್ದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ದೇಶಾದ್ಯಂತ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಇದನ್ನ ಐತಿಹಾಸಿಕ ಹೆಜ್ಜೆ ಎಂದು ಕರೆದ ಸೂರ್ಯ, ಜೆಪಿಸಿ ತನ್ನ ವರದಿಯನ್ನು ಅಂತಿಮಗೊಳಿಸುವ ಮೊದಲು ಪಾಲುದಾರರು ಮತ್ತು ಸಾರ್ವಜನಿಕರೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

    ವಕ್ಫ್ ಆಸ್ತಿಗಳನ್ನು ದೀರ್ಘಕಾಲದವರೆಗೆ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಆಸ್ತಿಗಳ ವಂಚನೆ ಮತ್ತು ಅತಿಕ್ರಮಣದ ಹಲವಾರು ನಿದರ್ಶನಗಳು ಕಂಡುಬಂದಿವೆ, ಸರ್ಕಾರಿ ಭೂಮಿಗಳು, ಖಾಸಗಿ ಭೂಮಿಗಳು ಮತ್ತು ಕೃಷಿ ಭೂಮಿಗಳನ್ನು ಸಹ ವಕ್ಫ್ ಎಂದು ಹೇಳಿಕೊಳ್ಳಲಾಗುತ್ತಿದೆ. ಮಸೂದೆಯು ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ, ವಕ್ಫ್ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೃತ್ತಿಪರತೆಯನ್ನು ತರುತ್ತದೆ. ತಿದ್ದುಪಡಿಗಳು ಮುಸ್ಲಿಂ ಸಮುದಾಯವನ್ನು ಸಬಲೀಕರಣಗೊಳಿಸುತ್ತವೆ. ಅದೇ ಸಮಯದಲ್ಲಿ ವಕ್ಫ್ ಕಾಯ್ದೆಯ ನಿಬಂಧನೆಗಳ ದುರುಪಯೋಗವನ್ನು ತಡೆಯುತ್ತವೆ ಎಂದು ಹೇಳಿದರು.

  • Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ

    Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ

    ನವದೆಹಲಿ: ಜೆಪಿಸಿ ಸಮಿತಿಯ ಅಧ್ಯಕ್ಷರು ತಮಗಿಷ್ಟಬಂದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸ ಮುಂದೂಡಬೇಕೆಂಬ ತಮ್ಮ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ, ವಕ್ಫ್ ತಿದ್ದುಪಡಿ ಮಸೂದೆಯ (Waqf Amendment Bill) ಮೇಲಿನ ಜಂಟಿ ಸಮಿತಿಯ (JPC) ವಿಪಕ್ಷ ಸದಸ್ಯರು ಸಮಿತಿಯ ಮುಂಬರುವ 5 ರಾಜ್ಯಗಳ ಪ್ರವಾಸವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

    ಸಮಿತಿಯು ಶನಿವಾರದಿಂದ (ನ.9 ರಿಂದ) ಗುವಾಹಟಿ, ಭುವನೇಶ್ವರ, ಕೋಲ್ಕತ್ತಾ, ಪಾಟ್ನಾ ಮತ್ತು ಲಕ್ನೋ ಪ್ರವಾಸವನ್ನು (JPC State Tour) ಆರಂಭಿಸಲಿದ್ದು, ವಿವಿಧ ಸಂತ್ರಸ್ತರ ಜೊತೆ ಚರ್ಚೆ ನಡೆಸಲಿದೆ. ಅಧ್ಯಕ್ಷರ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ವಿವರಿಸಿದರು. ಜಾರ್ಖಂಡ್‌ನಲ್ಲಿ ಮುಂಬರುವ ಚುನಾವಣೆಗಳು, ಬಂಗಾಳದ ಉಪಚುನಾವಣೆಗಳು ಮತ್ತು ಉತ್ಸವಗಳ ಹಿನ್ನೆಲೆ ಪ್ರತಿಪಕ್ಷಗಳ ಸದಸ್ಯರು ಪ್ರವಾಸದಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ ಎಂದರು.

    ನಾವು ನಮ್ಮದೇ ಆದ ವೇಳಾಪಟ್ಟಿ ಹೊಂದಿದ್ದೇವೆ, ಪ್ರವಾಸದಲ್ಲಿ ಹೇಗೆ ಭಾಗವಹಿಸಲು ಸಾಧ್ಯ? ಪ್ರವಾಸಗಳು ಮುಂದೂಡಲ್ಪಟ್ಟಿಲ್ಲ ಎಂದು ನಾವು ನಿರಾಶೆಗೊಂಡಿದ್ದೇವೆ. ನಾವು ಇದನ್ನು ಸ್ಪೀಕರ್ ಅವರ ಗಮನಕ್ಕೆ ತಂದಿದ್ದೇವೆ. ನಮಗೆ ನಮ್ಮದೇ ಆದ ಬದ್ಧತೆಗಳಿವೆ. ಇದನ್ನು ಹೇಗೆ ಸರಿಹೊಂದಿಸಬಹುದು? ಪ್ರವಾಸಗಳು ಅತ್ಯಂತ ತೀವ್ರವಾದವು. ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡದಂತೆ ನಮ್ಮನ್ನು ತಡೆಯಲಾಗುತ್ತಿದೆ. ಜಾರ್ಖಂಡ್ ಚುನಾವಣೆಗಳಿವೆ, ಬಂಗಾಳದಲ್ಲಿ ಉಪಚುನಾವಣೆಗಳಿವೆ, ಅವರು ಈ ಪ್ರಕ್ರಿಯೆಯನ್ನು ಮುಂದೂಡಲು ಸ್ಪೀಕರ್‌ಗೆ ಮನವಿ ಮಾಡಿದರೂ ಏನೂ ಮಾಡಲಾಗಿಲ್ಲ ಎಂದು ಬ್ಯಾನರ್ಜಿ ಹೇಳಿದರು.

    ಸಮಿತಿಯ ಅಧ್ಯಕ್ಷರು ನಮ್ಮ ಪ್ರಕ್ರಿಯೆಯನ್ನು ಅಣಕಿಸುತ್ತಿದ್ದಾರೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಿತಿಗೆ ತನಿಖೆಯ ಅಧಿಕಾರವಿಲ್ಲ. ಅದರ ಕೆಲಸ ಕೇವಲ ಮಸೂದೆಯನ್ನು ಪರಿಶೀಲಿಸುವುದು. ಮೇಲಾಗಿ, ಅಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸುವಂತಿಲ್ಲ ಮತ್ತು ಸಮಿತಿಯು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    ಪ್ರತಿಪಕ್ಷದ ಜೆಪಿಸಿ ಸದಸ್ಯರು ನವೆಂಬರ್ 5 ರಂದು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ, ವೇಳಾಪಟ್ಟಿಯನ್ನು ಮುಂದೂಡಬೇಕು ಮತ್ತು ಜೆಪಿಸಿಯ ಸಭೆಯ ದಿನಗಳ ಸಂಖ್ಯೆಯನ್ನು ವಾರದಲ್ಲಿ ಎರಡು ದಿನಗಳಿಂದ ವಾರಕ್ಕೆ ಒಂದು ದಿನ ಅಥವಾ ಪ್ರತಿ ಹದಿನೈದು ದಿನಗಳಿಗೊಮ್ಮೆ ಸತತ ಎರಡು ದಿನಗಳಿಗೆ ಕಡಿತಗೊಳಿಸಬೇಕೆಂದು ಕೋರಿದ್ದರು. ಇದನ್ನೂ ಓದಿ: ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌!