Tag: Waqf Amendment Bill

  • ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ

    ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ

    – ಮೋದಿ ಸರ್ಕಾರದಲ್ಲಿ ಎಲ್ಲರೂ ಸಮಾನರು
    – ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ತಿವಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

    ನವದೆಹಲಿ: ಕಳೆದ ಕೆಲವು ದಶಕಗಳಲ್ಲಿ 5,970 ಸರ್ಕಾರಿ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 1975 -2020ರ ವರೆಗೂ 40 ಆಸ್ತಿಗಳನ್ನು ವಕ್ಫ್‌ ಆಸ್ತಿ (Wafq Property) ಎಂದು ಘೋಷಿಸಲಾಗಿದೆ. ಇದರಲ್ಲಿ ಕೆರೆಗಳುಮ, ರೈತರ ಜಮೀನು, ಮಂದಿರ, ಸಾರ್ವಜನಿಕ ಆಸ್ತಿಯೂ ಸೇರಿದೆ. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ ಎಂದು ಸಚಿವ ಜೆ.ಪಿ ನಡ್ಡಾ (JP Nadda) ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ ವಕ್ಫ್ ಬಿಲ್ ಮೇಲೆ ಮಾತನಾಡಿದ ಅವರು, ಮೋದಿ ಸರ್ಕಾರದಲ್ಲಿ (Modi Government) ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ. ಕಳೆದ 70 ವರ್ಷಗಳಲ್ಲಿ ಯಾರು ಅವರನ್ನು ಬೆದರಿಸಿ ಇಟ್ಟಿದ್ದಾರೆ? ಅವರನ್ನು ಯಾರು ಪ್ರತ್ಯೇಕವಾಗಿ ನೋಡಿದ್ದಾರೆ? 50-100 ವರ್ಷಗಳ ಬಳಿಕ ನಾವು ಯಾರು ಇರಲ್ಲ. ಆದರೆ ಮಾಡಿದ ಕೆಲಸಗಳು ಪರಿಣಾಮ ಬೀರುತ್ತವೆ. ತ್ರಿವಳಿ ತಲಾಖ್‌ ಕೋರ್ಟ್ ಹೇಳಿದರೂ ರದ್ದು ಮಾಡಲಿಲ್ಲ, ಕಾಂಗ್ರೆಸ್ ಸರ್ಕಾರ (Congress Government) ಯಾಕೆ ರದ್ದು ಮಾಡಲಿಲ್ಲ? ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಮುಸ್ಲಿಮರನ್ನು 2ನೇ ದರ್ಜೆ ನಾಗರಿಕಂತೆ ನೋಡಲಾಗುತ್ತಿದೆ ಎನ್ನುತ್ತಾರೆ. ಮುಸ್ಲಿಂ ಮಹಿಳೆಯರನ್ನ 2ನೇ ದರ್ಜೆ ನಾಗರಿಕನ್ನಾಗಿ ನೋಡಲಾಗುತ್ತಿತ್ತು. ಆದ್ರೆ ಇಂದು ಕೋಟ್ಯಂತರ ಮುಸ್ಲಿಂ ಮಹಿಳೆಯರು (Muslim Women) ಸ್ವಾತಂತ್ರ‍್ಯಗೊಂಡಿದ್ದಾರೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

    ವಕ್ಫ್ ಅನ್ನು ಬೇರೆ ದೇಶಗಳು ಸರ್ಕಾರಕ್ಕೆ ತೆಗೆದುಕೊಂಡು ನಡೆಸುತ್ತಿವೆ. ಆದ್ರೆ ನಾವು ಸರ್ಕಾರದ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. ಬದಲಿಗೆ ಹೊಣೆಗಾರಿಕೆಗೆ ತರುತ್ತಿದ್ದೇವೆ. ಮುಸ್ಲಿಂ ದೇಶಗಳು ವಕ್ಫ್ ಅನ್ನು ಪರಾಮರ್ಶಕ, ಡಿಜಿಟಲ್ ಮಾಡುತ್ತಿವೆ. ಭಾರತದಲ್ಲಿ ಮಾಡಲು ಏನ್ ಸಮಸ್ಯೆ? ವಕ್ಫ್ ಆಸ್ತಿ ಸರಿಯಾದ ಕೈಯಲ್ಲಿ ಇರಬೇಕು, ಸರಿಯಾಗಿ ಬಳಕೆಯಾಗಬೇಕು. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ, ದುರುಪಯೋಗ ತಡೆಯುತ್ತಿದ್ದೇವೆ ಎಂದು ಜೆ.ಪಿ ನಡ್ಡಾ ಹೇಳಿದರು. ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

    ಕಳೆದ ಕೆಲವು ದಶಕಗಳಿಂದ 5,970 ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 1975 -2020ರ ವರೆಗೂ 40 ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಇದರಲ್ಲಿ ಕೆರೆಗಳುಮ, ರೈತರ ಜಮೀನು, ಮಂದಿರ, ಸಾರ್ವಜನಿಕ ಆಸ್ತಿಯೂ ಸೇರಿದೆ. ವಕ್ಫ್ ಆಸ್ತಿಯಲ್ಲಿ ಏರಿಕೆಯಾದರೂ ಅದರ ಆದಾಯದಲ್ಲಿ ಯಾವುದೇ ಏರಿಕೆಯಾಗಿಲ್ಲ. ವಕ್ಫ್ ಆಸ್ತಿ ದುರ್ಬಳಕೆ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಕೇರಳದಲ್ಲಿ ಕ್ರಿಶ್ಚಿಯನ್ ಆಸ್ತಿಯನ್ನೂ ವಶಪಡಿಸಿಕೊಳ್ಳಿಸಲಾಗುತ್ತಿದೆ. ಅವರು ನಮ್ಮ ಬಳಿ ಅಳಲು ವ್ಯಕ್ತಪಡಿಸುತ್ತಿದ್ದಾರೆ. ಈ ದುರ್ಬಳಕೆಗೆ ಕಡಿವಾಣ ಹಾಕೋದಕ್ಕೆ ವಕ್ಫ್‌ ಮಸೂದೆಗೆ ತಿದ್ದುಪಡಿ ತರಲಾಗಿದೆ. ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

  • ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

    ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

    – ಪುಷ್ಪಾ ಸ್ಟೈಲ್‌ನಲ್ಲಿ ತಗ್ಗೋದೇ ಇಲ್ಲ ಎಂದ ಖರ್ಗೆ
    – ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದ ಧನಕರ್

    ನವದೆಹಲಿ: ವಕ್ಫ್ ಬಿಲ್ ಮಂಡನೆಗೆ ಮುನ್ನವೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗರಂ ಆದ ಪ್ರಸಂಗ ನಡೆಯಿತು. ವಕ್ಫ್ ಭೂಮಿ ಕಬ್ಜಾ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಅನುರಾಗ್ ಠಾಕೂರ್ (Anurag Thakur) ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರು. ಇಂತಹ ರಾಜಕೀಯ ದಾಳಿಗಳಿಗೆ ನಾನು ಬೆದರುವ ಮಾತೇ ಇಲ್ಲ ಎಂದು ಪುಷ್ಪಾ ಸಿನಿಮಾ ಶೈಲಿಯಲ್ಲಿ ಅಬ್ಬರಿಸಿದ್ರು.

    ಅನುರಾಗ್ ಠಾಕೂರ್ ಅರೋಪಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಆಸ್ತಿ (Waqf  Property) ಕಬಳಿಕೆ ಆರೋಪಕ್ಕೆ ತಿರುಗೇಟು ನೀಡಿದರು. ನನ್ನ ಜೀವನ ತೆರದ ಪುಸ್ತಕ, ಜೀವನದಲ್ಲಿ ಕಷ್ಟ ಮತ್ತು ಹೋರಾಟವಿದೆ. ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. 60 ವರ್ಷ ರಾಜಕೀಯದಲ್ಲಿ ಇದನ್ನು ಬಯಸಿರಲಿಲ್ಲ. ಇಂತಹ ಆಧಾರ ರಹಿತ ಆರೋಪ ನಿರೀಕ್ಷಿಸರಲಿಲ್ಲ. ಅನುರಾಗ್ ಠಾಕೂರ್ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಅದನ್ನು ನಮ್ಮ ಸಂಸದರು ವಿರೋಧಿಸಿದ ಬಳಿಕ ಈ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ. ಆದರೆ ಡ್ಯಾಮೇಜ್ ಆಗಿ ಹೋಗಿದೆ, ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ನನ್ನ ಚಾರಿತ್ರ‍್ಯ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ವಕ್ಫ್‌ ಮಸೂದೆ | ದಾನದ ಆಸ್ತಿ ದುರ್ಬಳಕೆಯಾಗದಂತೆ ತಡೆಯಲು ಮೋದಿ ಮುಂದಾಗಿದ್ದಾರೆ: ಹೆಚ್‌ಡಿಡಿ

    ದೇವೇಗೌಡರು ಇದನ್ನು ಕೇಳಿಸಿಕೊಳ್ಳಬೇಕು. ಅವರ 50 ವರ್ಷದಿಂದ ನೋಡಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷನಾಗಿ ನಾನು ಒತ್ತಾಯ ಪೂರ್ವಕವಾಗಿ ಎದ್ದು ನಿಲ್ಲಬೇಕಿದೆ. ಅನುರಾಗ್ ಠಾಕೂರ್ ಹೇಳಿಕೆಯನ್ನು ವಿರೋಧಿಸಬೇಕಿದೆ, ಠಾಕೂರ್ ಈ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೇ ಅವರು ರಾಜೀನಾಮೆ ನೀಡಬೇಕು. ಅವರು ಸಾಬೀತರಾದರೇ ನಾನು ರಾಜೀನಾಮೆ ನೀಡುತ್ತೇನೆ. ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಸಿದ್ರು.  ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

    ನಾನು ಕಾರ್ಮಿಕನ ಮಗ, ಕಾರ್ಮಿಕ ನಾಯಕ, ಅಲ್ಲಿಂದ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ದೇವೇಗೌಡರಿಗೆ ಎಲ್ಲವೂ ಗೊತ್ತಿದೆ. ವಿಧಾನಸಭೆಯಲ್ಲಿ ಯಾರು ನನಗೆ ಬೆರಳು ಎತ್ತಿ ಮಾಡನಾಡಿಲ್ಲ. ಈ ಬಿಜೆಪಿ ನಾಯಕರು ಬೆದರಿಕೆ ಬಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಒಡೆದು ಹೊಗ್ತಿನಿ, ಬಗ್ಗುವುದಿಲ್ಲ, ನಾನು ಒಂದಿಂಚು ಭೂಮಿ ಕಬಳಿಸಿಲ್ಲ, ಅನುರಾಗ್ ಠಾಕೂರ್ ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿದರು. ಬಳಿಕ ಈ ಚರ್ಚೆಯನ್ನು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್‌ ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದರು.  ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

  • ವಕ್ಫ್‌ ಮಸೂದೆ | ದಾನದ ಆಸ್ತಿ ದುರ್ಬಳಕೆಯಾಗದಂತೆ ತಡೆಯಲು ಮೋದಿ ಮುಂದಾಗಿದ್ದಾರೆ: ಹೆಚ್‌ಡಿಡಿ

    ವಕ್ಫ್‌ ಮಸೂದೆ | ದಾನದ ಆಸ್ತಿ ದುರ್ಬಳಕೆಯಾಗದಂತೆ ತಡೆಯಲು ಮೋದಿ ಮುಂದಾಗಿದ್ದಾರೆ: ಹೆಚ್‌ಡಿಡಿ

    ನವದೆಹಲಿ: ವಕ್ಫ್ ಬೋರ್ಡ್‌ನ (Waqf  Board) ಆಸ್ತಿ 1.2 ಲಕ್ಷ ಕೋಟಿ ರೂ. ಬೆಲೆ ಬಾಳುತ್ತದೆ. ಈ ಆಸ್ತಿಯನ್ನು ದಾನಿಗಳು ನೀಡಿದ್ದು, ಇದು ದುರ್ಬಳಕೆ ಆಗದಂತೆ ಪ್ರಧಾನಿ ಮೋದಿಯವರು (Narendra Modi) ತಡೆಯಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು (H.D Devegowda) ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಗೆ (Waqf Amendment Bill) ಬೆಂಬಲಿಸಿ ಅವರು ಮಾತನಾಡಿದರು. ಈ ವೇಳೆ, ದಾನದ ಆಸ್ತಿ ಉಳ್ಳವರ ಪಾಲಾಗದಂತೆ ಕಾಪಾಡಲು ಪ್ರಧಾನಿ ಮುಂದಾಗಿದ್ದಾರೆ. ಈ ಆಸ್ತಿಯನ್ನು ಸರ್ಕಾರ ನೀಡಿಲ್ಲ. ದಾನಿಗಳು ನೀಡಿದ ದಾನ ದುರ್ಬಳಕೆಯಾಗಬಾರದು ಎಂದಿದ್ದಾರೆ.

    ದೇವರನ್ನು ನನ್ನ ಸ್ನೇಹಿತ ಅಲ್ಹಾ ಅಂತಾರೆ, ನಾನು ರಾಮ ಎನ್ನುತ್ತೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿವನು. ತಿರುಪತಿ, ಅಜ್ಮೀರ್ ದರ್ಗಾ, ಗೊಲ್ಡನ್ ಟೆಂಪಲ್‌ಗೆ ಹೋಗುತ್ತೇನೆ. ಜೀವನದಲ್ಲಿ ಕೆಲವು ಸಿದ್ಧಾಂತ ಇಟ್ಟುಕೊಂಡಿದ್ದೇನೆ. ವಕ್ಫ್ ಮಸೂದೆ ಮತ್ತು ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ಕರ್ನಾಟಕದಲ್ಲಿ ಉಪ ಲೋಕಾಯುಕ್ತ ಜಸ್ಟಿಸ್ ಆನಂದ್ ಅವರು ವರದಿ ನೀಡಿದ್ದಾರೆ. ನಾನು ಸಿಎಂ ಅಥವಾ ಯಾವುದೇ ನಾಯಕರ ಹೆಸರು ಉಲ್ಲೇಖಿಸಲ್ಲ. ವರದಿ ಮಾರಾಟ ಮಾಡಲಾಯಿತು, ಇದು ಬೆಳಕಿಗೆ ಬರಲಿಲ್ಲ. ಇಂದು ಅವರು ಆಡಳಿತ ನಡೆಸುತ್ತಿದ್ದಾರೆ. ಇಂದು ಅವರು ಸಹ ಇಲ್ಲಿ ಮಾತನಾಡಿದರು ಎಂದು ಪರೋಕ್ಷವಾಗಿ ಖರ್ಗೆಯವರಿಗೆ ಕುಟುಕಿದರು.

    ನಾನು ಸಿಎಂ ಆಗಿ ಅಲ್ಪ ಸಂಖ್ಯಾತರ ರಕ್ಷಣೆಗೆ ಸಾಕಷ್ಟು ನಿರ್ಧಾರ ಮಾಡಿದ್ದೇನೆ. ನಾನು ಯಾವುದೇ ಸಿದ್ಧಾಂತದವನಲ್ಲ, ನಾನು ರೈತ. ಮುಸ್ಲಿಂ ಮಾತ್ರವಲ್ಲ ಬಹಳಷ್ಟು ಸಮುದಾಯಕ್ಕೆ ಮೀಸಲಾತಿ ನೀಡಿದ್ದೇನೆ. ನಾನು ಸ್ಪೀಕರ್ ಆಸನಕ್ಕೆ ಎಂದೂ ಅವಮಾನ ನೋಡಿಲ್ಲ. ಇಂದು ನೋಡಿ ಬೇಸರವಾಗುತ್ತಿದೆ. ಕರ್ನಾಟಕದಲ್ಲಿ ಏನಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

  • ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ನವದೆಹಲಿ: ಲೋಕಸಭೆ ಅಂಗೀಕಾರದ ನಂತರ ಕೇಂದ್ರ ಸಚಿವ ಕಿರಣ್ ರಿಜಿಜು (Kiran Rijiju) ಅವರು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡಿಸಿದರು.

    ವಕ್ಫ್ ಮಂಡಳಿಗಳನ್ನು ಬಲಪಡಿಸುವ, ಮಹಿಳೆಯರು, ಮಕ್ಕಳು ಮತ್ತು ವಂಚಿತ ವರ್ಗಗಳ ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರಚಿಸಲಾಗಿದೆ ಎಂದು ಕಿರಣ್ ರಿಜಿಜು ಮಸೂದೆ ಮಂಡಿಸಿ ಹೇಳಿದರು. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    ಬುಧವಾರ ತಡರಾತ್ರಿ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, 288 ಸದಸ್ಯರು ಇದರ ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

    ಹೊಸ ಮಸೂದೆಯನ್ನು UMEED (ಏಕೀಕೃತ ವಕ್ಫ್ ನಿರ್ವಹಣೆ, ಮೌಲ್ಯವರ್ಧನೆ, ಕಾರ್ಯದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ) ಎಂದು ಕರೆಯಲಾಗುವುದು ಎಂದು ಹೇಳಿದ್ದ ಕಿರಣ್‌ ರಿಜಿಜು ತಿಳಿಸಿದ್ದಾರೆ. ಇದನ್ನು ಒಳ್ಳೆಯ ಉದ್ದೇಶಕ್ಕೆ ಜಾರಿಗೆ ತರಲಾಗಿದೆ. ಯಾರಿಗೂ ಇದರಿಂದ ಸಮಸ್ಯೆ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು – ತಡರಾತ್ರಿ 2 ಗಂಟೆಗೆ ಅಂಗೀಕಾರ

  • ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    – ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಬಡವರಿಗೆ ಆಗೋ ಪ್ರಯೋಜನಗಳೇನು?
    – ಪರ-ವಿರೋಧದ ಚರ್ಚೆ ಏನು?

    ದೇಶಾದ್ಯಂತ ವಕ್ಫ್ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರವು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ ಚರ್ಚೆ, ವಾಕ್ಸಮರದ ನಡುವೆ ಮಸೂದೆ ಅಂಗೀಕಾರಗೊಂಡಿದೆ. ಸಂಸತ್‌ನ ಹೊರಗೂ ವಕ್ಫ್ ಬಗೆಗಿನ ಪರ-ವಿರೋಧದ ಚರ್ಚೆ ಜೋರಾಗಿದೆ. ಕೇಂದ್ರದ ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಂ ಸಂಘಟನೆಗಳಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಬೆಂಬಲ ಸೂಚಿಸಿವೆ.

    ತಿದ್ದುಪಡಿಯಾದ ವಕ್ಫ್ ಕಾಯ್ದೆಯು ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸುವುದು, ನೋಂದಣಿ ಪ್ರಕ್ರಿಯೆ ಸುಧಾರಿಸುವುದು, ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ, ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು, ಬಡವರ ಹಿತಕ್ಕಾಗಿ ಮಹತ್ವದ ಬದಲಾವಣೆ ತರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ಇದು ಅಸಾಂವಿಧಾನಿಕ, ಮುಸ್ಲಿಮರ ಹಕ್ಕು ಕಸಿಯುವ ಯತ್ನ, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಟೀಕಿಸಿವೆ.

    ಏನಿದು ವಕ್ಫ್ ವಿವಾದ? ಹೊಸ ತಿದ್ದುಪಡಿ ಮಸೂದೆಯಲ್ಲೇನಿದೆ? ಕೇಂದ್ರದ ಸಮರ್ಥನೆ ಏನು? ವಿಪಕ್ಷಗಳ ವಿರೋಧ ಯಾಕೆ? ಸಂಸತ್‌ನಲ್ಲಿ ಮಸೂದೆ ಅಂಗೀಕಾರವಾದರೆ ಆಗುವ ಬದಲಾವಣೆಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ವಕ್ಫ್ ಎಂದರೇನು?
    ವಕ್ಫ್ ಎನ್ನುವುದು ಮುಸ್ಲಿಮರು ಆಸ್ತಿ ರೂಪದಲ್ಲಿ ನೀಡುವ ದತ್ತಿ ಅಥವಾ ಧಾರ್ಮಿಕ ದೇಣಿಗೆಯಾಗಿದೆ. ಮಸೀದಿ, ದರ್ಗಾ, ಸ್ಮಶಾನಗಳು, ಆಶ್ರಯ ಮನೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಸಮರ್ಪಿಸಲಾದ ಆಸ್ತಿಯಾಗಿದೆ. 1954ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬಂದಿತು. ಈ ಕಾನೂನಿನ ಅನ್ವಯ, ಇಸ್ಲಾಂ ಅನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ಆಸ್ತಿಯನ್ನು ದಾನ ಮಾಡಿದರೆ, ಅದು ವಕ್ಫ್ ಆಸ್ತಿಯಾಗಿ ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಒಳಪಡುತ್ತದೆ. ವಕ್ಫ್ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ.

    ವಕ್ಫ್ ಆಸ್ತಿ ಆಗುವುದು ಹೇಗೆ?
    ಪತ್ರ ಅಥವಾ ಉಪಕರಣದ ಮೂಲಕ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸಿದರೆ ವಕ್ಫ್ ಆಗಬಹುದು. ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ಮುಸ್ಲಿಮೇತರನು ಕೂಡ ವಕ್ಫ್ ರಚಿಸಬಹುದು. ಆದರೆ, ವಕ್ಫ್ ಅನ್ನು ರಚಿಸುವ ಉದ್ದೇಶ ಇಸ್ಲಾಮಿಕ್ ಆಗಿರಬೇಕು. ಆಸ್ತಿಯನ್ನು ವಕ್ಫ್ ಎಂದು ಗೊತ್ತುಪಡಿಸಿದರೆ, ಅದನ್ನು ಬೇರೆ ಕಡೆ ವರ್ಗಾಯಿಸಲು ಸಾಧ್ಯವಿಲ್ಲ. ದೇವರ ಹೆಸರಲ್ಲಿ ದತ್ತಿ ಕಾರ್ಯವಾಗಿ ಶಾಶ್ವತವಾಗಿ ಉಳಿಯುತ್ತದೆ. 1955ರ ಕಾಯ್ದೆ ಅಡಿಯಲ್ಲಿ ಸರ್ವೇ ಕಮಿಷನರ್ ಸ್ಥಳೀಯ ತನಿಖೆಯನ್ನು ನಡೆಸುತ್ತಾರೆ. ಸಾಕ್ಷಿಗಳನ್ನು ಕರೆಯುವುದು, ಸಾರ್ವಜನಿಕ ದಾಖಲೆಗಳನ್ನು ಕೇಳುವುದನ್ನು ಇದು ಒಳಗೊಂಡಿರುತ್ತದೆ. ಬಳಿಕ ವಕ್ಫ್ ಎಂದು ಘೋಷಿಸಲಾದ ಎಲ್ಲಾ ಆಸ್ತಿಗಳನ್ನು ಪಟ್ಟಿ ಮಾಡುತ್ತಾರೆ.

    ವಕ್ಫ್ ಆಸ್ತಿ ಎಷ್ಟಿದೆ?
    ಭಾರತದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆ. 8 ಲಕ್ಷ ಎಕರೆ ವಕ್ಫ್ ಆಸ್ತಿ ವಿಸ್ತೀರ್ಣ ಆಗಿದೆ. ಆಸ್ತಿಯ ಅಂದಾಜು ಮೌಲ್ಯ 1 ಲಕ್ಷ ಕೋಟಿ ರೂ.. ಆಸ್ತಿಯಲ್ಲಿ ಒಟ್ಟು 1,50,569 ಸ್ಮಶಾನಗಳಿವೆ. 1,19,200 ಮಸೀದಿಗಳಿವೆ. 1,13,187 ಅಂಗಡಿ ಮತ್ತು 92,505 ಮನೆಗಳಿವೆ. 1,40,788 ಕೃಷಿ ಭೂಮಿಗಳಿವೆ. ವಕ್ಫ್‌ ಆಸ್ತಿಯ ವ್ಯಾಪ್ತಿಯಲ್ಲಿ 33,492 ಧಾರ್ಮಿಕ ಸ್ಥಳಗಳಿವೆ. ದೇಶದಲ್ಲಿ 32 ವಕ್ಫ್ ಮಂಡಳಿಗಳಿವೆ.

    ವಕ್ಫ್ ಕಾಯ್ದೆಗೆ ಎಷ್ಟು ತಿದ್ದುಪಡಿಯಾಗಿವೆ?
    1995ರಲ್ಲಿ ವಕ್ಫ್ ಕಾಯ್ದೆಗೆ ಮೊದಲ ತಿದ್ದುಪಡಿ ಮಾಡಲಾಯಿತು. 2013ರಲ್ಲಿ ಕಾಯ್ದೆಗೆ 2ನೇ ತಿದ್ದುಪಡಿ ತರಲಾಯಿತು. 2024ರಲ್ಲಿ 2 ಬಾರಿ ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಈಗ ಹೊಸ ಮಸೂದೆಯಲ್ಲಿ 44 ತಿದ್ದುಪಡಿಗಳಿವೆ.

    ಹೊಸ ಮಸೂದೆ ಯಾಕೆ?
    ವಕ್ಫ್ ವ್ಯಾಖ್ಯಾನ, ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರ, ನೋಂದಣಿ, ವಕ್ಫ್ ಆಸ್ತಿಗಳ ಸರ್ವೆ, ಒತ್ತುವರಿ ತೆರವು ಸೇರಿದಂತೆ ಹಲವು ವಿಚಾರಗಳಿಗೆ ಕಾಯ್ದೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಇರುವ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.

    ವಕ್ಫ್ ಮಂಡಳಿ ಬಗೆಗಿನ ವಿವಾದ ಏನು?
    ವಕ್ಫ್ ಮಂಡಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಮ್ಮೆ ವಕ್ಫ್ ಆಸ್ತಿಯಾಗಿದ್ದರೆ, ಅದು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ. ಇದರಿಂದ ವಕ್ಫ್ ಆಸ್ತಿ ರದ್ದತಿ ಅಸಾಧ್ಯ. ಈ ನಿಯಮ ವಿವಾದಗಳನ್ನು ಹುಟ್ಟುಹಾಕಿದೆ. ವಕ್ಫ್ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ಪರಿಣಾಮಕಾರಿಯಾಗಿಲ್ಲ. ಅಕ್ರಮ ಭೂ ಸ್ವಾಧೀನ, ದುರುಪಯೋಗ, ಮಾಲೀಕತ್ವದ ವಿವಾದಗಳು, ನೋಂದಣಿ ಮತ್ತು ಸಮೀಕ್ಷೆಗಳಲ್ಲಿನ ವಿಳಂಬ, ದೂರುಗಳ ಹೆಚ್ಚಳದಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ವಕ್ಫ್ ನ್ಯಾಯಮಂಡಳಿ ನೀಡಿದ ತೀರ್ಪುಗಳನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಆಗುವುದಿಲ್ಲ. ಇದು ವಕ್ಫ್ ನಿರ್ವಹಣೆಯಲ್ಲಿನ ಪಾರದರ್ಶಕತೆ ಮೇಲೆ ಪ್ರಶ್ನೆ ಹುಟ್ಟುಹಾಕಿದೆ. ಕೆಲವು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಿವೆ. ಇದು ಕಾನೂನು ವಿವಾದಕ್ಕೆ ಕಾರಣವಾಗಿದೆ.

    ವಕ್ಫ್ ಕಾಯ್ದೆ ಒಂದು ಧರ್ಮಕ್ಕಷ್ಟೇ ಸೀಮಿತವಾಗಿದೆ. ಇತರೆ ಧರ್ಮಗಳಿಗೆ ಈ ರೀತಿಯ ಕಾನೂನು ಇಲ್ಲ. ವಕ್ಫ್ ಕಾಯ್ದೆ ಸಾಂವಿಧಾನಿಕವೇ ಎಂಬ ಪ್ರಶ್ನೆಯೊಂದಿಗೆ ದೆಹಲಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಕೇಳಿದೆ.

    ತಿದ್ದುಪಡಿ ಮಸೂದೆಯಲ್ಲೇನಿದೆ?
    * ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಯನ್ನು ‘ಏಕೀಕೃತ ವಕ್ಫ್ ನಿರ್ವಹಣೆ, ಮೌಲ್ಯವರ್ಧನೆ, ಕಾರ್ಯದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ-1995’ ಎಂದು ಮರುನಾಮಕರಣ ಮಾಡುತ್ತದೆ. ಅದರಂತೆ, ಕನಿಷ್ಠ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವ ವ್ಯಕ್ತಿ ತನ್ನ ಒಡೆತನದಲ್ಲಿರುವ ಆಸ್ತಿಯನ್ನು ವಕ್ಫ್ಗೆ ನೀಡಬಹುದು. ದಾನ ನೀಡುವವರೊಂದಿಗೆ ‘ವಕ್ಫ್-ಅಲಲ್-ಔಲಾದ್’ (ದತ್ತಿ ಒಪ್ಪಂದ) ಮಾಡಿಕೊಳ್ಳುವಾಗ, ಕುಟುಂಬದ ಮಹಿಳೆಯರಿಗೆ ಪಿತ್ರಾರ್ಜಿತವಾಗಿ ಸಿಗುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ.

    * ಮೂಲ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸರ್ವೆ ನಡೆಸಲು ರಾಜ್ಯ ಸರ್ಕಾರ ಸರ್ವೆ ಆಯುಕ್ತರನ್ನು ನೇಮಕ ಮಾಡುವಂತಿತ್ತು. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಜವಾಬ್ದಾರಿಯನ್ನು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿಗೆ ನೀಡಲಾಗಿದೆ.

    * 1995ರ ವಕ್ಫ್ ಮಸೂದೆ ಪ್ರಕಾರ, ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿತ್ತು. ಹೊಸ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೂ, ಜಿಲ್ಲಾಧಿಕಾರಿ ವಿವಾದವನ್ನು ಪರಿಹರಿಸಬಹುದು.

    * ಹಿಂದಿನ ಕಾಯ್ದೆಯಲ್ಲಿ ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಇರಬೇಕು ಎಂದಿತ್ತು. ಈಗಿನ ತಿದ್ದುಪಡಿ ಮಸೂದೆಯಲ್ಲಿ ಇಬ್ಬರು ಮುಸ್ಲಿಮೇತರರು ಮತ್ತು ಇಬ್ಬರು ಮುಸ್ಲಿಂ ಮಹಿಳೆಯರು ಇರಬೇಕು ಎಂದು ಬದಲಾಯಿಸಲಾಗಿದೆ. (ಶಿಯಾ, ಸುನ್ನಿ ಮತ್ತು ಮುಸ್ಲಿಮರ ಹಿಂದುಳಿದ ವರ್ಗಗಳಿಂದ ಕನಿಷ್ಠ ಒಬ್ಬರು ಸದಸ್ಯರು ಇರಬೇಕು).

    * ಮೂಲ ಕಾಯ್ದೆಯಡಿ ವಕ್ಫ್ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂದಿತ್ತು. ತಿದ್ದುಪಡಿ ಮಸೂದೆಯಲ್ಲಿ, ಆದೇಶದ ಮೇಲೆ 90 ದಿನಗಳ ಒಳಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

    * 1995 ಕಾಯ್ದೆಯಲ್ಲಿ ವಕ್ಫ್ ಮಂಡಳಿಗೆ ಕೆಲವು ನಿರ್ದೇಶನ ನೀಡುವ ಅಧಿಕಾರವಷ್ಟೇ ಕೇಂದ್ರ ಸರ್ಕಾರಕ್ಕಿತ್ತು. ಆದರೆ, ಕಾನೂನು ರಚಿಸುವ ಅಧಿಕಾರ ಇರಲಿಲ್ಲ. ಆದರೆ, ಹೊಸ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆ, ನೋಂದಣಿ, ಲೆಕ್ಕಪರಿಶೋಧನೆಯಲ್ಲಿ ಕೇಂದ್ರದ ಪಾತ್ರವನ್ನು ಹೆಚ್ಚಿಸಿದೆ.

    ವಕ್ಫ್‌ ಕಾಯ್ದೆಗೆ ಪರಮಾಧಿಕಾರ ನೀಡಿದ್ದ ಸೆಕ್ಷನ್‌ 40 ರದ್ದು
    ಯಾವುದೇ ಭೂಮಿ ವಕ್ಫ್‌ ಆಸ್ತಿ ಎಂದು ಘೋಷಿಸಲು ವಕ್ಫ್‌ ಮಂಡಳಿಗಳು ಮತ್ತು ನ್ಯಾಯಾಧೀಕರಣಕ್ಕೆ ಈ ಹಿಂದಿನ ವಕ್ಫ್‌ ಕಾಯ್ದೆಯಲ್ಲಿದ್ದ ಸೆಕ್ಷನ್‌ 40 ಅವಕಾಶ ನೀಡಿತ್ತು. ಈ ನಿಯಮ ಬಳಸಿಕೊಂಡು ಸಾಮೂಹಿಕ ಭೂ ಪರಿವರ್ತನೆ ಮಾಡಿಕೊಳ್ಳಲಾಗುತ್ತಿತ್ತು. ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರಲಿಲ್ಲ. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್‌ ಕೈಬಿಡಲಾಗಿದ್ದು, ವಕ್ಫ್‌ ಹಕ್ಕು ಸಾಧಿಸುವ ಆಸ್ತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಕಲ್ಪಿಸಿದೆ.

    ಮುಸ್ಲಿಮೇತರ ಆಸ್ತಿಗಳ ಕಥೆ ಏನು?
    2024ರ ಸೆಪ್ಟೆಂಬರ್ ತಿಂಗಳಲ್ಲಿ 25 ರಾಜ್ಯಗಳ 5,973 ಸರ್ಕಾರಿ ಆಸ್ತಿಗಳನ್ನು ವಕ್ಫ್ ಎಂದು ಮಂಡಳಿಗಳು ಘೋಷಿಸಿದ್ದವು. ಕರ್ನಾಟಕದಲ್ಲೂ ಕೃಷಿ ಜಮೀನು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗ, ಸ್ಮಶಾನ, ಕೆರೆ ಹಾಗೂ ದೇವಾಲಯಗಳನ್ನೂ ವಕ್ಫ್ ಆಸ್ತಿಗಳು ಎಂದು ಗುರುತಿಸಲಾಗಿತ್ತು. ಕರ್ನಾಟಕದ ನೆರೆ ರಾಜ್ಯಗಳಲ್ಲೂ ವಕ್ಫ್ ಆಸ್ತಿ ವಿಚಾರವಾಗಿ ವಿವಾದ ಹುಟ್ಟುಕೊಂಡಿದೆ. ಕರ್ನಾಟಕದಲ್ಲೂ ಹಲವೆಡೆ ಇಂಥ ಘಟನೆಗಳು ನಡೆದಿವೆ. ಇವುಗಳ ಕಥೆ ಏನು ಎಂಬುದು ಪ್ರಶ್ನೆಯಾಗಿದೆ.

    ತಿದ್ದುಪಡಿ ಮಸೂದೆಯಿಂದ ಬಡವರಿಗೆ ಪ್ರಯೋಜನ ಆಗುತ್ತಾ?
    ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ವಕ್ಫ್ ಆಸ್ತಿ ನಿರ್ವಹಣೆಯ ಡಿಜಿಟಲೀಕರಣವು ಟ್ರಾö್ಯಕಿಂಗ್, ಗುರುತಿಸುವಿಕೆ, ಮೇಲ್ವಿಚಾರಣೆಯನ್ನು ಸುಧಾರಿಸುತ್ತದೆ. ಪಾರದರ್ಶಕತೆ, ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಜಾಗ ಒತ್ತುವರಿ, ಪಾರದರ್ಶಕ ಕೊರತೆ ನೀಗಿಸುತ್ತದೆ. ಜೊತೆಗೆ, ಆರ್ಥಿಕವಾಗಿ ಪಾರದರ್ಶಕತೆ ತರುವುದರಿಂದ ಹಣದ ಸೋರಿಕೆಯಾಗದೇ, ಹಣವನ್ನು ಕಲ್ಯಾಣ ಉದ್ದೇಶಗಳಿಗಾಗಿ ಬಳಸುವುದನ್ನು ಖಾತ್ರಿಪಡಿಸುತ್ತದೆ. ವಕ್ಫ್ ಭೂಮಿಗಳ ದುರುಪಯೋಗ, ಅಕ್ರಮ ಸ್ವಾಧೀನ ತಡೆಗಟ್ಟಿ ಆದಾಯ ಹೆಚ್ಚಿಸುತ್ತದೆ. ಹಣ ನೇರವಾಗಿ ಬಡವರ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯ ತಿಳಿಸಿದೆ.

  • ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು – ತಡರಾತ್ರಿ 2 ಗಂಟೆಗೆ ಅಂಗೀಕಾರ

    ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು – ತಡರಾತ್ರಿ 2 ಗಂಟೆಗೆ ಅಂಗೀಕಾರ

    ನವದೆಹಲಿ: 14 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ವಕ್ಫ್‌ ತಿದ್ದುಪಡಿ ಮಸೂದೆಯನ್ನು (Waqf Amendment Bill) ಬುಧವಾರ ಮಧ್ಯರಾತ್ರಿ 1:43 ಗಂಟೆಗೆ ಲೋಕಸಭೆ ಅಂಗೀಕರಿಸಿದೆ.

    ವಿವಾದಿತ ಮಸೂದೆ ಕುರಿತು ಸಂಸತ್‌ನಲ್ಲಿ 12 ಗಂಟೆಗಳ ಕಾಲ ಚರ್ಚೆ ನಡೆಯಿತು. ನಂತರ 2 ತಾಸುಗಳ ಕಾಲ ಮತದಾನ ನಡೆಯಿತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಸೂದೆಗೆ ಸದನ ಅಸ್ತು ಎಂದಿದೆ. ಮಸೂದೆ ಪರ 288 ಹಾಗೂ ಮಸೂದೆ ವಿರುದ್ಧ 232 ಮತ ಬಿದ್ದವು. ಇದನ್ನೂ ಓದಿ: ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

    ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ದಿನವಿಡೀ ಚರ್ಚೆ ನಡೆಯಿತು. ಮಸೂದೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಮುಸ್ಲಿಮರ ಹಕ್ಕು ಕಸಿಯುವ ಯತ್ನ ಎಂದು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಮಸೂದೆ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.

    ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ಗುರುವಾರ ರಾಜ್ಯಸಭೆಯಲ್ಲೂ ಮಂಡನೆಯಾಗಲಿದೆ. ಇಲ್ಲೂ ಕೂಡ ಸುದೀರ್ಘ ಚರ್ಚೆ ಬಳಿಕ ಮತದಾನ ನಡೆಯಲಿದೆ. ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರಗೊಂಡರೆ ರಾಷ್ಟ್ರಪತಿಗಳ ಸಹಿಗೆ ರವಾನೆಯಾಗಲಿದೆ. ರಾಷ್ಟ್ರಪತಿಗಳು ಸಹಿ ಮಾಡಿದಾಗ ಮಸೂದೆ ಕಾನೂನಾಗಲಿದೆ. 236 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 119 ಮತಗಳು ಬೇಕು. ಎನ್‌ಡಿಎ 125 ಸದಸ್ಯರನ್ನು ಹೊಂದಿದೆ. ಹೀಗಾಗಿ, ಅಲ್ಲಿಯೂ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

  • ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

    ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

    ನವದೆಹಲಿ: ವಕ್ಫ್ ಆಸ್ತಿಯನ್ನು ತಪ್ಪಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ವಕ್ಫ್ ಬೋರ್ಡ್ ಮತ್ತು ವಕ್ಫ್ ಕೌನ್ಸಿಲ್‌ನ ಕೆಲಸ. ಹಾಗಾಗಿ ವಕ್ಫ್‌ ಕಾನೂನು (Waqf Law) ಅಡಿಯಲ್ಲಿ ಯಾರಾದ್ರೂ ದಾನ ಮಾಡಿದ ಆಸ್ತಿಯ ಆಡಳಿತವನ್ನು ಮಾತ್ರ ಮುಸ್ಲಿಮೇತರ ಸದಸ್ಯರು ನೋಡಿಕೊಳ್ತಾರೆ. ಇನ್ನುಳಿದಂತೆ ಧಾರ್ಮಿಕ ವ್ಯವಹಾರ ನಿರ್ವಹಣೆ ಮಾಡುವಲ್ಲಿ ಮುಸ್ಲಿಮೇತರ ಸದಸ್ಯರು ಯಾವುದೇ ಪಾತ್ರ ನಿರ್ವಹಿಸಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

    ಪ್ರಶ್ನೋತ್ತರ ಕಲಾಪದ ವೇಳೆ ವಕ್ಫ್ ಬಿಲ್ (Waqf Amendment Bill) ಮಂಡನೆಗೆ ಬಗ್ಗೆ ತಡವಾಗಿ ಸಂಸದರಿಗೆ ಮಾಹಿತಿ ಬಂದಿದೆ, ಸಂಸದರಿಗೂ ಅವಕಾಶ ನೀಡಬೇಕು, ತಿದ್ದುಪಡಿ ಪ್ರತಿಯನ್ನು ಅಧ್ಯಯನಕ್ಕೆ ಸರಿಯಾಗಿ ನೀಡಿಲ್ಲ. ನಾವು ಚರ್ಚೆ ಮಾಡಲು ಹೇಗೆ ಸಾಧ್ಯ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್ ಪ್ರಶ್ನೆ ಮಾಡಿದರು.

    ಇದಕ್ಕೆ ಉತ್ತರಿಸಿದ ಕೇಂದ್ರ ಗೃಹಸಚಿವ ಅಮಿತ್‌ ಶಾ, ವಿಪಕ್ಷಗಳ ಆಗ್ರಹದ ಮೇರೆಗೆ ವಕ್ಫ್‌ ತಿದ್ದುಪಡಿ ಮಸೂದೆಯನ್ನ ಜೆಪಿಸಿಗೆ ಕಳುಹಿಸಲಾಗಿತ್ತು. ಈಗ ಅಲ್ಲಿಂದ ಬಂದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆದು ಈಗ ಬಿಲ್ ಮಂಡಿಸಿದೆ. ಕಾಂಗ್ರೆಸ್ ಅವಧಿಯ ರೀತಿಯಲ್ಲಿ ಜೆಪಿಸಿ ಕೆಲಸ ಮಾಡಲ್ಲ, ವ್ಯವಸ್ಥಿತ ಚರ್ಚೆಯ ಮೂಲಕ ಪರಿಶೀಲನೆಗೆ ಒಳಪಟ್ಟಿದೆ ಎಂದು ಉತ್ತರಿಸಿದರು.

    ನಂತರ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಚರ್ಚೆ ವೇಳೆ ಮಾಣಿಪ್ಪಾಡಿ ವರದಿ ಉಲ್ಲೇಖಿಸಿ ಅಮಿತ್‌ ಶಾ ಮಾತನಾಡಿದರು. 29,000 ಎಕರೆ ವಕ್ಫ್‌ ಆಸ್ತಿಯನ್ನ ದೇಶದ ಕೆಲಸಗಳಿಗೆ ಬಾಡಿಗೆ ನೀಡಲಾಗಿದೆ ಅಂತಿದ್ದಾರೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆಯನ್ನ ವಕ್ಫ್‌ ಆಸ್ತಿ ಎಂದು ಘೋಷಿಸಿ ವಿವಾದ ಮಾಡಲಾಯ್ತು. ಈ ವಿವಾದಿತ ಭೂಮಿ 5,000 ಕೋಟಿ ಬೆಲೆ ಬಾಳುತ್ತದೆ. ಎಕ್ರೆಗೆ 12,000 ರೂಪಾಯಿಯಂತೆ ಬಾಡಿಗೆ ನೀಡಲಾಗಿದೆ. ಆದ್ರೆ ಇದರ ಲೆಕ್ಕಾಚಾರ ಮಾಡ್ಬೇಡಿ, ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಾರೆ. ಈ ಹಣ ದೇಶದ ಬಡ ಮುಸ್ಲಿಮರದ್ದು, ಈ ಹಣ ಕಳ್ಳತನ ಮಾಡಲಿಕ್ಕೆ ಇರೋದಲ್ಲ ಅಂತ ಹೇಳಿದ್ದಾರೆ.

    ಕರ್ನಾಟಕದ ದತ್ತ ಪೀಠದ ಮೇಲೂ ಹಕ್ಕು ಸ್ಥಾಪನೆ ಮಾಡಿದ್ದಾರೆ. ಬೇರೆ ಬೇರೆ ಸಮುದಾಯದ ಭೂಮಿಯನ್ನ ಅತಿಕ್ರಮಿಸಿಕೊಳ್ಳಲಾಗಿದೆ. ಕ್ರೈಸ್ತರೂ ವಕ್ಫ್‌ ಬಿಲ್‌ಗೆ ಸಹಮತ ನೀಡಿದ್ದಾರೆ. ಈ ಬಿಲ್ ಮುಸ್ಲಿಮರ ಲಾಭಕ್ಕೆ ಇದೆ ಎಂದು ಮುಂದೆ ಗೊತ್ತಾಗಲಿದೆ, ದಕ್ಷಿಣದ ಸಂಸದರು ಇದನ್ನ ವಿರೋಧಿಸುವ ಮೂಲಕ ಕ್ರಿಶ್ಚಿಯನ್ನರ ವಿರೋಧ ಕಟ್ಟಿಕೊಳ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೂ ವಕ್ಫ್‌ ಮಸೂದೆಯ ಬಗ್ಗೆ ವಿಪಕ್ಷ ನಾಯಕರು ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ. ಈ ಮಸೂದೆಯೂ ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ. ಪಾರದರ್ಶಕತೆ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಯಾವುದೇ ಮುಸ್ಲಿಮೇತರರು ವಕ್ಫ್‌ ಮಂಡಳಿಗೆ ಬರುವುದಿಲ್ಲ. ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸುವವರಲ್ಲಿ ಯಾವುದೇ ಮುಸ್ಲಿಮೇತರರನ್ನು ಸೇರಿಸುವ ನಿಬಂಧನೆ ಇಲ್ಲ, ಹಾಗೆ ಮಾಡಲು ನಾವೂ ಬಯಸೋದಿಲ್ಲ. ತಮ್ಮ ವೋಟ್‌ಬ್ಯಾಂಕ್‌ಗಾಗಿ ಅಲ್ಪ ಸಂಖ್ಯಾತರಲ್ಲಿ ಭಯ ಹುಟ್ಟಿಸಲು ಈ ರೀತಿಯ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಮುಸ್ಲಿಮೇತರ ಸದಸ್ಯರ ಕೆಲವು ವಕ್ಫ್ ಕಾನೂನಿನ ಆಡಳಿತ ಮತ್ತು ದೇಣಿಗೆಗಾಗಿ ನೀಡಿದ ನಿಧಿಗಳು ಉದ್ದೇಶಗಳಿಗಾಗಿ ಬಳಕೆಯಾಗುತ್ತಿವೆಯೇ (ಇಸ್ಲಾಂ ಧರ್ಮಕ್ಕಾಗಿ, ಬಡವರ ಅಭಿವೃದ್ಧಿಗಾಗಿ) ಅಥವಾ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುವುದು ಅಷ್ಟೇ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಲ್ಲ. ಅದನ್ನು ಬಿಟ್ಟು ವಕ್ಫ್‌ಗೆ ಒಬ್ಬ ಮುಸ್ಲಿಮೇತರನೂ ಬರುವುದಿಲ್ಲ ಅನ್ನೋದನ್ನ ಈ ಸದನದ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

    ವಕ್ಫ್ ತಿದ್ದುಪಡಿ ಬಿಲ್.. ಪ್ರಮುಖಾಂಶ
    * ಇನ್ಮುಂದೆ ಹೊಸ ಆಸ್ತಿಗಳ ಘೋಷಣೆಗೆ ತಡೆ
    * ಸೂಕ್ತ ದಾಖಲೆಗಳಿದ್ದರೆ ಮಾತ್ರ ಹಕ್ಕು ಸಾಧಿಸಬಹುದು
    * ಎಲ್ಲಾ ವಕ್ಫ್ ಆಸ್ತಿಗಳ ನೋಂದಣಿ ಕಡ್ಡಾಯ
    * ಆರು ತಿಂಗಳೊಳಗೆ ಆಸ್ತಿ ವಿವರ ಸಲ್ಲಿಸಬೇಕು
    * ಪ್ರತಿ 5 ವರ್ಷಕ್ಕೊಮ್ಮೆ ವಕ್ಫ್ ಆಸ್ತಿಗಳ ಸರ್ವೆ
    * ಆಸ್ತಿಗಳ ನೋಂದಣಿ, ನಿರ್ವಹಣೆಯಲ್ಲಿ ಪಾರದರ್ಶಕತೆ
    * ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ
    * ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿ ತನಿಖೆಯ ಅಧಿಕಾರ
    * ಡಿಸಿ ಮೇಲ್ವಿಚಾರಣೆಯಲ್ಲಿ ಕಾನೂನಿಗೆ ಅನುಗುಣವಾಗಿ ಸರ್ವೆ
    * ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಸಮಾನಹಕ್ಕು ಖಾತ್ರಿ
    * ಕೇಂದ್ರ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರಿಗೆ ಸ್ಥಾನಮಾನ
    * ವಕ್ಫ್ ಬೋರ್ಡ್ಗಳಲ್ಲಿ ಮುಸ್ಲಿಮೇತರರಿಗೂ ಸದಸ್ಯ ಸ್ಥಾನ
    * ಶಿಯಾ, ಸುನ್ನಿ, ಬೋಹ್ರಾ, ಅಘಖಾನಿ, ಹಿಂದುಳಿದ ವರ್ಗಗಳಿಗೆ ಆದ್ಯತೆ
    * ಶಿಕ್ಷಣ, ಆರೋಗ್ಯ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಆದಾಯ ಬಳಕೆ
    * ಕನಿಷ್ಠ 5 ವರ್ಷ ಇಸ್ಲಾಂ ಧರ್ಮ ಪಾಲಿಸಿದ ವ್ಯಕ್ತಿಗೆ ಆಸ್ತಿ ದಾನದ ಅಧಿಕಾರ

  • ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ಭೋಪಾಲ್: ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಭೋಪಾಲ್‌ನ ಮುಸ್ಲಿಂ ಸಮುದಾಯದ ಮಹಿಳೆಯರು ಬೀದಿಗಿಳಿದಿದ್ದಾರೆ.

    ಇಂದು ಮಧ್ಯಾಹ್ನ ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದರು. ಇದಕ್ಕೂ ಮೊದಲು ಪೆಕಾರ್ಡ್‌ ಹಿಡಿದು ರಸ್ತೆಗಿಳಿದ ಮುಸ್ಲಿಂ ಮಹಿಳೆಯರು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮೋದಿ ಜೀಗೆ ನಮ್ಮ ಬೆಂಬಲ’.. ‘ಧನ್ಯವಾದಗಳು ಮೋದಿ ಜೀ’ ಎಂದು ಬರೆದಿರುವ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ.

    ವಕ್ಫ್‌ ತಿದ್ದುಪಡಿ ಮಸೂದೆ ಪರವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಇದೆ. ಆದರೆ, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಮಸೂದೆಗೆ ವಿರುದ್ಧವಾಗಿವೆ. ಮುಸ್ಲಿಂ ಸಮುದಾಯ ಕೂಡ ಮಸೂದೆಯನ್ನು ಬಲವಾಗಿ ವಿರೋಧಿಸಿವೆ.

    ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಸಂಸದರಿಗೆ ಮಂಗಳವಾರ ವಿಪ್‌ ಜಾರಿ ಮಾಡಿದ್ದವು.

  • ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ನವದೆಹಲಿ: ವಿಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಇಂದು ವಕ್ಫ್‌ ತಿದ್ದುಪಡಿ ಮಸೂದೆಯನ್ನು (Waqf Amendment Bill tak) ಮಂಡಿಸಲಾಯಿತು.

    ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಮಸೂದೆಯನ್ನು ಮಂಡಿಸಿದರು.

    ಎರಡೂ ಮನೆಗಳ ಜಂಟಿ ಸಮಿತಿಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ನಡೆದ ಚರ್ಚೆಯನ್ನು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಲ್ಲಿಯವರೆಗೆ ಮಾಡಲಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಜಂಟಿ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಮತ್ತು ಅಭಿನಂದಿಸುತ್ತೇನೆ. ಇಲ್ಲಿಯವರೆಗೆ, ವಿವಿಧ ಸಮುದಾಯಗಳ ರಾಜ್ಯ ಹೊಂದಿರುವವರ ಒಟ್ಟು 284 ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಮಿತಿಯ ಮುಂದೆ ಮಂಡಿಸಿವೆ. 25 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯಗಳ ವಕ್ಫ್‌ ಮಂಡಳಿಗಳು ಸಹ ತಮ್ಮ ಸಲ್ಲಿಕೆಗಳನ್ನು ಪ್ರಸ್ತುತಪಡಿಸಿವೆ ಎಂದು ರಿಜಿಜು ತಿಳಿಸಿದ್ದಾರೆ.

    ಭರವಸೆ ಮಾತ್ರವಲ್ಲ, ಈ ಮಸೂದೆಯನ್ನು ವಿರೋಧಿಸುವವರು ಸಹ ತಮ್ಮ ಹೃದಯದಲ್ಲಿ ಬದಲಾವಣೆಯನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ಪ್ರತಿಯೊಬ್ಬರೂ ಈ ಮಸೂದೆಯನ್ನು ಸಕಾರಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂದು ರಿಜಿಜು ಆಶಯ ವ್ಯಕ್ತಪಡಿಸಿದ್ದಾರೆ.

  • ಏ.2ಕ್ಕೆ ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?

    ಏ.2ಕ್ಕೆ ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?

    – ಇದು ನಮ್ಮ ಮೇಲಿನ ದಾಳಿಯೆಂದ ಮುಸ್ಲಿಮರು
    – ರಂಜಾನ್ ದಿನ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

    ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡನೆಗೆ ಕೇಂದ್ರ ಸರ್ಕಾರ ಸಕಲ ತಯಾರಿ ಮಾಡಿಕೊಂಡಿದೆ. ಏಪ್ರಿಲ್ 4ಕ್ಕೆ ಬಜೆಟ್ ಅಧಿವೇಶನ ಅಂತ್ಯವಾಗಲಿದ್ದು, ಏಪ್ರಿಲ್ 2ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ (Lok Sabha) ಮಂಡನೆಯಾಗಲಿದೆ. ಇದು ದೇಶದ ಮುಸ್ಲಿಂ ಸಮುದಾಯದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

    ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಸರ್ಕಾರ ಹೇಳಿದೆ. ಆದರೂ, ಇದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆಸ್ತಿ ಹಕ್ಕುಗಳ ಮೇಲೆ ದಾಳಿ ಎಂದು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ. ಇದರ ಭಾಗವಾಗಿ ರಂಜಾನ್ ದಿನವೇ ದೇಶಾದ್ಯಂತ ಮುಸ್ಲಿಮರು ಕಪ್ಪುಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪ್ರತಿಭಟನೆ ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ

    ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಇಂತಹದೊಂದು ಚಳುವಳಿಗೆ ಕಳೆದ ಶುಕ್ರವಾರ ಚಾಲನೆ ಕೊಟ್ಟಿತ್ತು. ಇಂದು ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಸೇರಿದಂತೆ ಹಲವು ರಾಜ್ಯಗಳಲ್ಲಿ ಮಸೀದಿಗಳಲ್ಲಿ ಜನರು ಕಪ್ಪು ಬಟ್ಟೆಯೊಂದಿಗೆ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿದರು. ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಮಾತನಾಡಿ, ನಾವು ಈ ಬಿಲ್‌ಗೆ ವಿರುದ್ಧವಾಗಿದ್ದೇವೆ ಮತ್ತು ಬೀದಿಗಳಿಂದ ಸಂಸತ್‌ವರೆಗೆ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  Greater Noida| ಕೂಲರ್ ನಿರ್ಮಾಣದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 3 ಕಾರ್ಖಾನೆಗಳು ಭಸ್ಮ

    ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಈ ಬಿಲ್ ಅಸಂವಿಧಾನಿಕವಾಗಿದ್ದು, ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಕೂಡ ಈ ಬಿಲ್ ದೇಶದಲ್ಲಿ ಗಲಭೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಬಿಲ್‌ನಿಂದ ಮಸೀದಿಗಳು, ದರ್ಗಾಗಳು ಮತ್ತು ಕಬರಸ್ಥಾನಗಳಂತಹ ವಕ್ಫ್ ಆಸ್ತಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಡಬಹುದು ಎಂದು ಮುಸ್ಲಿಂ ಸಮುದಾಯ ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು, 60 ಮಸೀದಿಗಳಿಗೆ ಹಾನಿ: ಮ್ಯಾನ್ಮರ್‌ ಮುಸ್ಲಿಂ ಸಂಘಟನೆ

    1. ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ:
    ಹಿಂದಿನ ಕಾನೂನು (1995): ವಕ್ಫ್ ಆಸ್ತಿಗಳ ಸರ್ವೆಯನ್ನು ರಾಜ್ಯ ಸರ್ಕಾರವು ನೇಮಿಸಿದ ಸರ್ವೆ ಆಯುಕ್ತರು ನಡೆಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು.
    ಹೊಸ ತಿದ್ದುಪಡಿ (2024): ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ.

    2. ವಕ್ಫ್ ಘೋಷಣೆಗೆ ಷರತ್ತುಗಳು:
    ಹಿಂದಿನ ಕಾನೂನು: ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು.
    ಹೊಸ ತಿದ್ದುಪಡಿ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳ ಕಾಲ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರವನ್ನು ನೀಡಲಾಗಿದೆ. ಇದರಿಂದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶವಿದೆ.

    3. ಮಹಿಳೆಯರಿಗೆ ಆಸ್ತಿ ಹಕ್ಕು:
    ಹಿಂದಿನ ಕಾನೂನು: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ಯಾವುದೇ ನಿರ್ದಿಷ್ಟ ಉಲ್ಲೇಖ ಇರಲಿಲ್ಲ.
    ಹೊಸ ತಿದ್ದುಪಡಿ: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ.

    4. ವಕ್ಫ್ ಮಂಡಳಿಯ ರಚನೆ:
    ಹಿಂದಿನ ಕಾನೂನು: ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ.
    ಹೊಸ ತಿದ್ದುಪಡಿ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯವಾಗಿದೆ. ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆಯನ್ನು ತರಲಾಗಿದೆ.

    5. ಲೆಕ್ಕಪರಿಶೋಧನೆ (ಆಡಿಟ್):
    ಹಿಂದಿನ ಕಾನೂನು: ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು.
    ಹೊಸ ತಿದ್ದುಪಡಿ: ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು ಎಂದು ತಿದ್ದುಪಡಿ ತರಲಾಗಿದೆ. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.

    6. ಆಸ್ತಿಯ ನೋಂದಣಿ ಮತ್ತು ಪಾರದರ್ಶಕತೆ:
    ಹಿಂದಿನ ಕಾನೂನು: ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯಮಿತಿ ಇರಲಿಲ್ಲ.
    ಹೊಸ ತಿದ್ದುಪಡಿ: ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯವಾಗಿದ್ದು, ಆರು ತಿಂಗಳೊಳಗೆ ವಿವರಗಳನ್ನು ಸಲ್ಲಿಸಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಸರ್ವೆ ನಡೆಸುವ ನಿಯಮವೂ ಜಾರಿಗೆ ಬರಲಿದೆ.