Tag: Waqf Amendment Bill

  • ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

    ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

    ನವದೆಹಲಿ: ಸಂಸತ್‌ನಲ್ಲಿ ತೀವ್ರ ಚರ್ಚೆಗೆ ಒಳಪಟ್ಟು, ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ (Waqf Amendment Bill) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದಾರೆ.

    ಶುಕ್ರವಾರ ಬೆಳಗ್ಗೆ ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ, ಮಸೂದೆಗೆ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಇದಕ್ಕೂ ಮೊದಲು, ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಬೆಂಬಲಿಸಿದರೆ, 232 ಸದಸ್ಯರು ವಿರೋಧಿಸಿದರು. ಈ ರೀತಿಯಾಗಿ, ಎರಡೂ ಸದನಗಳಲ್ಲಿ ಬಹುಮತದೊಂದಿಗೆ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿಗಳ ಒಪ್ಪಿಗೆಗೆ ರವಾನೆಯಾಗಿತ್ತು. ಪರ ವಿರೋಧಗಳ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನಾಗಿದೆ. ಇದೇ ವೇಳೆ ಮುರ್ಮು ಅವರು, ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ 2025ಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 1996ರ ವಿಶ್ವಕಪ್ ಗೆದ್ದ ಲಂಕಾ ಕ್ರಿಕೆಟ್‌ ದಿಗ್ಗಜರ ಜೊತೆ ಮೋದಿ ಸಂವಾದ!

    ಈ ಶಾಸನ ‘ಮುಸ್ಲಿಂ ವಿರೋಧಿ’ ಮತ್ತು ‘ಅಸಂವಿಧಾನಿಕ’ ಎಂದು ವಿರೋಧ ಪಕ್ಷಗಳು ತೀವ್ರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿವೆ. ಈ ತಿದ್ದುಪಡಿಯು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಸ್ವಾತಂತ್ರ‍್ಯದ ಮೇಲೆ ದಾಳಿ ಮಾಡುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಆಕ್ಷೇಪಣೆಗಳು ಸಂಸತ್ತಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಆದರೆ ಮಸೂದೆಯು ‘ಐತಿಹಾಸಿಕ ಸುಧಾರಣೆ’ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಇದನ್ನೂ ಓದಿ: ಯಶಸ್ವಿ, ಪರಾಗ್‌ ಅಮೋಘ ಬ್ಯಾಟಿಂಗ್‌; ಪಂಜಾಬ್‌ಗೆ ರಾಯಲ್‌ ʻಪಂಚ್‌ʼ – ರಾಜಸ್ಥಾನ್‌ಗೆ 50 ರನ್‌ಗಳ ಭರ್ಜರಿ ಜಯ

    ಸರ್ಕಾರದ ಅಧಿಸೂಚನೆ ಹೊರಬಿದ್ದರೆ ಕಾನೂನು ರೂಪದಲ್ಲಿ ಇದು ಜಾರಿಗೆ ಬರಲಿದೆ. ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.  ಇದನ್ನೂ ಓದಿ: ಕುಮಾರಸ್ವಾಮಿ ಮಾತಿಗೆ ಹೆದರೋ ಮಗ ನಾನಲ್ಲ – ಡಿಕೆಶಿ ಕೌಂಟರ್‌

    ಜಂಟಿ ಸಂಸದೀಯ ಸಮಿತಿ ರಚನೆ ಸೇರಿದಂತೆ 6 ತಿಂಗಳುಗಳ ವಿಸ್ತೃತ ಚರ್ಚೆ ಹಾಗೂ ಸಮಾಲೋಚನೆಗಳ ಬಳಿಕ ಕಾಯ್ದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗಿತ್ತು. ಹೊಸ ಕಾನೂನನ್ನು ಕಾಂಗ್ರೆಸ್, ಎಐಎಂಐಎಂ ಮತ್ತು ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳ ಮೂಲಕ ಪ್ರಶ್ನಿಸಿವೆ. ಆದರೆ  ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಗೆ ಸಮಯವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ

  • ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ

    ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ

    – ಆರ್‌ಎಸ್‌ಎಸ್‌ನ ಮುಂದಿನ ಟಾರ್ಗೆಟ್‌ ಕ್ರೈಸ್ತ ಸಮುದಾಯ ಎಂದ ರಾಗಾ
    – ಮಸೀದಿ, ಸ್ಮಶಾನ ಮುಟ್ಟಲ್ಲ ಅಂದ್ರು ರವಿಶಂಕರ್

    ನವದೆಹಲಿ: ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ 2024 (Waqf Amendment Bill 2024), ಕಾಯ್ದೆಯಾಗೋದು ಮಾತ್ರ ಬಾಕಿ ಇದೆ.

    ಇಂತಹ ಹೊತ್ತಲ್ಲಿ ವಕ್ಫ್ ವಶದಲ್ಲಿರುವ ವಿವಾದಾತ್ಮಕ ಸಾರ್ವಜನಿಕ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಕಾಲೇಜು, ಆಸ್ಪತ್ರೆ, ಮನೆಗಳನ್ನು ಕಟ್ಟಿಸ್ತೇವೆ. ಇನ್ಮುಂದೆ ವಕ್ಫ್ ಬೋರ್ಡ್ (Waqf Board) ಹೆಸರಲ್ಲಿ ಒಂದಿಂಚು ಭೂಮಿಯನ್ನು ಕಬಳಿಸಲು ಆಗಲ್ಲ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ (Yogi adityanath) ಹೇಳಿದ್ದಾರೆ. ಇದನ್ನೂ ಓದಿ: ಭಾರತ ಮೂಲದ ತಮಿಳು ಸಮುದಾಯಕ್ಕೆ 10,000 ಮನೆ ನಿರ್ಮಾಣ ಭರವಸೆ ನೀಡಿದ ಮೋದಿ

    ಮತ್ತೊಂದ್ಕಡೆ, ಯಾವುದೇ ಮಸೀದಿ, ಪ್ರಾರ್ಥನಾ ಸ್ಥಳ, ಕಬರ್‌ಸ್ತಾನವನ್ನು ಮುಟ್ಟಲ್ಲ.. ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಮಧ್ಯೆ, ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಹೊಂದಿರೋದು ವಕ್ಫ್‌ಬೋರ್ಟ್‌ ಅಲ್ಲ. ಕ್ಯಾಥೊಲಿಕ್ ಚರ್ಚ್‌ಗಳ ಬಳಿ ಹೆಚ್ಚು ಭೂಮಿಯಿದೆ ಎಂದು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದ್ರೆ, ಇದನ್ನು ಮರು ದಿನವೇ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.  ಇದನ್ನೂ ಓದಿ: L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    ಇದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಸಂಘಪರಿವಾರ ಶೀಘ್ರವೇ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, ಧಾರವಾಡದಲ್ಲಿ ವಕ್ಫ್ ಬಿಲ್ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ.  ಇದನ್ನೂ ಓದಿ: ಮಂಡ್ಯದಲ್ಲಿ 3.80 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣ: ಚಲುವರಾಯಸ್ವಾಮಿ 

  • ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ವಕ್ಫ್‌ ಬಿಲ್‌ಗೆ ಕಾಂಗ್ರೆಸ್‌ ವಿರುದ್ಧ – ಜೋಶಿ ಕಿಡಿ

    ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ವಕ್ಫ್‌ ಬಿಲ್‌ಗೆ ಕಾಂಗ್ರೆಸ್‌ ವಿರುದ್ಧ – ಜೋಶಿ ಕಿಡಿ

    – ವಕ್ಫ್‌ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ
    – ಪೊಲೀಸರು ಕಾಂಗ್ರೆಸ್‌ ಸರ್ಕಾರದ ಗುಲಾಮರಾ?; ಸಚಿವ ರೋಷಾವೇಶ

    ಹುಬ್ಬಳ್ಳಿ: ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ಮುಸ್ಲಿಮರ ವಿರುದ್ಧವಾಗಿಲ್ಲ. ಕಾಂಗ್ರೆಸ್‌ ನಾಯಕರಿಗೆ ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ಮಸೂದೆಗೆ ವಿರುದ್ಧ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಕಿಡಿ ಕಾರಿದರು.

    ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ್‌ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ. ಸೋನಿಯಾ ಗಾಂಧಿ (Sonia Gandhi) ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಜಾ ಮಾತೆ ಸುಪುತ್ರ ರಾಹುಲ್ ಗಾಂಧಿ ಈ ಹಿಂದೆ ಬಿಲ್ ಹರಿದು ಹಾಕಿದ್ದಾರೆ. ಅವರು ಈ ಬಿಲ್ ಬಗ್ಗೆ ಮಾತನಾಡುತ್ತಾರೆ. ಮೋದಿ ಸರ್ಕಾರ ಅಸಂವಿಧಾನಕವಾಗಿ ಬಿಲ್ ಮಂಡನೆ ಮಾಡಿಲ್ಲ. ಕಾಂಗ್ರೆಸ್ ನಾಯಕರಿಗೆ ಈ ಬಿಲ್ ನಿಂದ ರಾಜಕೀಯವಾಗಿ ಹಿನ್ನಡೆ ಆಗುತ್ತೆ, ಹೀಗಾಗಿ ವಿರೋಧ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಇದರ ಪ್ರಭಾವ ಗೊತ್ತಾಗುತ್ತದೆ ಎಂದರು.

    ವಕ್ಫ್‌ ಬಿಲ್ ಮುಸ್ಲಿಮರ (Muslims) ವಿರುದ್ಧ ಇಲ್ಲ. 39 ಲಕ್ಷ ಎಕರೆಗೆ 168 ಕೋಟಿ ರೆವೆನ್ಯೂ ಬರ್ತಾ ಇದೆ. ಕರ್ನಾಟಕದಲ್ಲಿ 54 ಸಾವಿರ ಎಕರೆ ವಕ್ಫ್‌ ಜಮೀನಿದೆ. ಈ ಆಸ್ತಿಯನ್ನ ಸರಿಯಾಗಿ ಬಳಸಿದರೆ, ಸಚ್ಛರ ಕಮೀಟಿ ವರದಿ ಪ್ರಕಾರ 12 ಸಾವಿರ ಕೋಟಿ ಆದಾಯ ಬರ್ತಿತ್ತು. ಇದರಲ್ಲಿ ದುರಪಯೋಗ, ಸ್ವಜನ ಪಕ್ಷಪಾತ ಇದೆ, ಆಸ್ತಿ ನುಂಗ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ವಿಚಾರ ಮಾಡಿ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

    ಈ ವಕ್ಫ್‌ ಬಿಲ್‌ ಬಗ್ಗೆ ಕೆಲವರಿಗೆ ತಪ್ಪಾಗಿ ಅರ್ಥ ಮಾಡಿಸ್ತಿದ್ದಾರೆ. ಬಹಳ ಹಿಂದೂಗಳ ಆಸ್ತಿ ವಕ್ಫ್‌ ಆಗಿದೆ. ವಕ್ಫ್‌ ಬೋರ್ಡ್ ಇಂಡಿಪೆಂಡೆಂಟ್ ಇದೆ. ಅನೇಕರ ಮುಸ್ಲಿಮರ ಮನೆಗಳನ್ನ ವಕ್ಫ್‌ ಆಸ್ತಿ ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ಅನೇಕರ ಮುಸ್ಲಿಂ ಮನೆ ವಕ್ಫ್‌ ಆಸ್ತಿ ಆಗಿವೆ. ಆದ್ದರಿಂದ ವಕ್ಫ್‌ ಬೋರ್ಡ್‌ನಲ್ಲಿ ಸರಿಯಾದ ರೀತಿ ಮ್ಯಾನೇಜಮೆಂಟ್ ಆಗಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್‌ ನ್ಯಾಯಾಧೀಶರಾಗಿ ನ್ಯಾ. ವರ್ಮಾ ಪ್ರಮಾಣ ವಚನ ಸ್ವೀಕಾರ

    ಇನ್ನೂ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ಸರ್ಕಾರ ಎಷ್ಟು ಅಸಹಿಷ್ನತೆ ಇದೆ ಅಂತ ಸ್ಪಷ್ಟ ಆಗುತ್ತೆ. ಒಬ್ಬ ಶಾಸಕನಿಗೆ ಜಾತಿ ಅಥವಾ ಅವಾಚ್ಯ ಶಬ್ದದಿಂದ ಬೈದ್ರೆ, ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದಾರೆ ಅದರಲ್ಲೆನು ತಪ್ಪು? ಮೃತಪಟ್ಟ ಯುವಕ ಸೇರಿ ಇಬ್ಬರು ಯುವಕರ ಮೇಲೆ ಎಫ್‌ಐಆರ್ ಹಾಕ್ತಾರೆ. ಅಧಿಕಾರದ ಧರ್ಪ, ದುರಹಂಕಾರ ಯಾವ ಪ್ರಮಾಣದಲ್ಲಿದೆ? ಎಫ್‌ಐಆರ್ ಕೋರ್ಟ್‌ನಲ್ಲಿ ಸ್ಟೇ ಆಗುತ್ತೆ. ಆದರೂ ರೌಡಿ ಶೀಟರ್ ತಗಿತೇನೆ ಅಂತ ಬೆದರಿಸಿದ್ದಾರೆ. ಪೊಲೀಸರಿಗೆ ಹೇಳ್ತೇನೆ ಸರ್ಕಾರ ಒಂದೇ ಇರೋದಿಲ್ಲ, ಯಾವ ಆಧಾರದ ಮೇಲೆ ರೌಡಿ ಶೀಟರ್ ಹಾಕ್ತಿರಾ? ಪೊಲೀಸರೇ ಕಾಂಗ್ರೆಸ್ ಪಕ್ಷದ ಗುಲಾಮರಾ ನೀವು? ನಾವು ಕೂಡ ಸರ್ಕಾರದಲ್ಲಿದ್ದೇವೆ, ರಾಮಾನುಜ, ಎಸ್‌ಪಿ ಅಮಾನತ್ತು ಆಗಬೇಕು. ಪೊಣ್ಣನ್ನ ಅನ್ನೋನು ರಾಜಕೀಯಕ್ಕೆ ಅನ್ ಫಿಟ್ ಇದ್ದಾರೆ. ಕೆಲವೊಮ್ಮೆ ನಮ್ಮ ಫೋಟೋ ಕೂಡ ಹಾಕ್ತಾರೆ ನಾವು ಎಫ್‌ಐಆರ್‌ ಹಾಕಿದ್ದೇವಾ? ಆತನ ವಾಟ್ಸಪ್‌ನಲ್ಲಿ ಸ್ಪಷ್ಟವಾಗಿ ಹೆಸರಿದೆ, ಶಾಸಕನ ಹೆಸರು ಬರೆದಿದ್ದಾರೆ. ಇವರ ಮೇಲೆ ಒಂದೂ ಕೇಸ್ ಹಾಕಲ್ಲ ಒಳ್ಳೆ ರೀತಿಯ ಕೆಲಸ ಮಾಡುವ ಪೊಲೀಸರು ನಮ್ಮಲ್ಲಿ ಇದ್ದಾರೆ. ಹೈಕೋರ್ಟ್ ಸ್ಟೇ ಮಾಡಿದ ಮೇಲೂ ರೌಡಿ ಶೀಟರ್ ಹಾಕಿದ್ರೆ ಇಬ್ಬರು ಆಫೀಸರ್ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

    ನಾನು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಬೈತಿಲ್ಲ. ಈ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು. ಇವರ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಹಾಕಲು ಸೂಚಿಸಿದ್ದೇನೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆ ಎಲ್ಲಾ ಪೌಲ್ಟ್ರಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸೂಚನೆ

  • ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಎಪಿ

    ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಎಎಪಿ

    ನವದೆಹಲಿ: ಸಂಸತ್‌ನ ಉಭಯ ಸದನಗಳಲ್ಲಿ ಅನುಮೋದನೆಗೊಂಡ ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ವಿರುದ್ಧ ಆಮ್‌ ಆದ್ಮಿ ಪಕ್ಷ (AAP) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

    ಆಪ್ ಶಾಸಕ, ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತ್‌-ಉಲ್ಲಾ-ಖಾನ್‌ ಅವರು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ, ಅಹಮದಾಬಾದಲ್ಲಿ ವಕ್ಫ್ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ – ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

    ಮಸೂದೆಯು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಅನಿಯಂತ್ರಿತ ಕಾರ್ಯಾಂಗ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಡುತ್ತದೆ. ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ವಕ್ಫ್‌ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ಮೂಲಕ ಮಸೂದೆ ಪಾಸ್‌ ಆಯಿತು. ಮಸೂದೆಯನ್ನು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಇದು ಸಂವಿಧಾನಬಾಹಿರ ಎಂದು ವಿಪಕ್ಷಗಳು ಬಿಲ್‌ಗೆ ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

  • ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    – ವಕ್ಫ್‌ ಭೂಮಿಗಳಲ್ಲಿ 5 ಸ್ಟಾರ್‌ ಹೋಟೆಲ್‌, ಶೋ ರೂಂಗಳು ತಲೆಯೆತ್ತಿವೆ: ರವಿಶಂಕರ್‌ ಪ್ರಸಾದ್‌

    ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಗೆ (Waqf Amendment Bill) ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಬಿಜೆಪಿ ಸಂಸದ ರವಿಶಂಕರ್‌ ಪ್ರಸಾದ್‌ (Ravi Shankar Prasad) ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಮಸೀದಿ, ಪೂಜಾ ಸ್ಥಳ ಅಥವಾ ‘ಕಬ್ರಸ್ತಾನ್’ (ಸ್ಮಶಾನ) ಮುಟ್ಟುವುದಿಲ್ಲ ಎಂದು ಮಸೂದೆ ಕುರಿತು ಸ್ಪಷ್ಟಪಡಿಸಿದ್ದಾರೆ.

    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಸಾದ್‌ ತಿಳಿಸಿದ್ದಾರೆ.

    ವಿಷಯವು ತುಂಬಾ ಸರಳ ಮತ್ತು ನೇರವಾಗಿದೆ. ವಕ್ಫ್ ಅನ್ನು ರಚಿಸಿದ ‘ವಖಿಫ್’ನ ಉದ್ದೇಶವನ್ನು ವ್ಯವಸ್ಥಾಪಕರಾಗಿರುವ ‘ಮುತ್ತವಲಿ’ ಸರಿಯಾಗಿ ಕಾರ್ಯಗತಗೊಳಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದಷ್ಟೇ ಇದರ ಉದಾತ್ತ ಉದ್ದೇಶವಾಗಿದೆ. ವಕ್ಫ್ ಧಾರ್ಮಿಕ ಸಂಸ್ಥೆಯಲ್ಲ. ಅದು ಕಾನೂನುಬದ್ಧ ಅಥವಾ ಶಾಸನಬದ್ಧ ಸಂಸ್ಥೆಯಾಗಿದೆ. ‘ಮುತ್ತವಲಿ’ ಕೇವಲ ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ. ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ. ಏಕೆಂದರೆ ವಕ್ಫ್ ಅನ್ನು ರಚಿಸಿದ ನಂತರ, ಆಸ್ತಿ ಅಲ್ಲಾಹನದ್ದಾಗಿರುತ್ತದೆ. ಮಸೂದೆ ಮುಸ್ಲಿಂ ಮಹಿಳೆಯರಿಗೆ ಸಬಲೀಕರಣ ನೀಡುತ್ತದೆ. ವಿಧವೆಯರು ಮತ್ತು ಶೋಷಣೆಗೆ ಒಳಗಾದ ಜನತೆಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

    ನಾನು ಹುಟ್ಟಿದ ನಗರವಾದ ಪಾಟ್ನಾದ ಡಾಕ್ ಬಂಗಲೋ ಬಳಿಯ ಪ್ರದೇಶಗಳಲ್ಲಿ ಸಾಕಷ್ಟು ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್‌ಗಳು ಮತ್ತು ಶೋ ರೂಂಗಳು ತಲೆ ಎತ್ತಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಅಲ್ಲಿ ಎಷ್ಟು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

  • ಕೋಲ್ಕತ್ತಾ, ಅಹಮದಾಬಾದಲ್ಲಿ ವಕ್ಫ್ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ – ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

    ಕೋಲ್ಕತ್ತಾ, ಅಹಮದಾಬಾದಲ್ಲಿ ವಕ್ಫ್ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ – ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

    – ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಆರಂಭ

    ಕೋಲ್ಕತ್ತಾ/ ಅಹಮದಾಬಾದ್‌: ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು (Protest) ಆರಂಭಗೊಂಡಿವೆ. ಶುಕ್ರವಾರ ಪ್ರಾರ್ಥನೆಯ ಬಳಿಕ ಕೋಲ್ಕತ್ತಾ (Kolkata), ಚೆನ್ನೈ (Chennai) ಮತ್ತು ಅಹಮದಾಬಾದ್‌ನಲ್ಲಿ (Ahmedabad) ಸಾವಿರಾರು ಜನ ಬೀದಿಗಿಳಿದು ಪ್ರತಿಭಟಿಸಿದ್ದು, ಪ್ರತಿಭಟನಾಕಾರರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ.

    ಕೋಲ್ಕತ್ತಾದಲ್ಲಿ ರಾಷ್ಟ್ರಧ್ವಜ ಹಿಡಿದು, ‘ನಾವು ವಕ್ಫ್ ತಿದ್ದುಪಡಿಯನ್ನು ತಿರಸ್ಕರಿಸುತ್ತೇವೆ’ ಎಂಬ ಪೋಸ್ಟರ್‌ಗಳನ್ನು ಹಿಡಿದು ಸಾವಿರಾರು ಜನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ಅಹಮದಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀಮ್ (ಎಐಎಂಐಎಂ) ರಾಜ್ಯ ಘಟಕದ ಮುಖ್ಯಸ್ಥ ಮತ್ತು ಅದರ 40 ಸದಸ್ಯರನ್ನು ವಶಕ್ಕೆ ಪಡೆದರು.

    ಚೆನ್ನೈನಲ್ಲಿ ಸಹ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಚೆನ್ನೈ ಮತ್ತು ಕೊಯಮತ್ತೂರು ಮತ್ತು ತಿರುಚಿರಾಪಳ್ಳಿಯಂತಹ ಪ್ರಮುಖ ನಗರಗಳಲ್ಲಿ ಟಿವಿಕೆ ಕಾರ್ಯಕರ್ತರು ಜಮಾಯಿಸಿ ವಕ್ಫ್ ಮಸೂದೆಯ ವಿರುದ್ಧ ಘೋಷಣೆ ಕೂಗಿದರು.

    ನಟ ವಿಜಯ್‌ ಪ್ರತಿಕ್ರಿಯಿಸಿ, ವಕ್ಫ್ ಮಸೂದೆಯನ್ನು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅದರ ಅಂಗೀಕಾರವು ಭಾರತದ ಜಾತ್ಯತೀತ ಅಡಿಪಾಯವನ್ನು ಪ್ರಶ್ನಿಸುತ್ತದೆ ಎಂದು ಟೀಕಿಸಿದರು.

    ಏ.2 ರಂದು ವಿಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು (Kiran Rijiju) ಮಸೂದೆಯನ್ನು ಮಂಡಿಸಿದ್ದರು. ಲೋಕಸಭೆ ಅಂಗೀಕಾರದ ನಂತರ ಅವರು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡಿಸಿದ್ದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್‌ ವಕ್ಫ್‌ಗೆ ನೀಡ್ತಿತ್ತು: ಕಿರಣ್‌ ರಿಜಿಜು

  • ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

    ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

    – ವಕ್ಫ್‌ ಬಿಲ್‌ ಸಮಾಜವನ್ನು ಶಾಶ್ವತವಾಗಿ ವಿಭಜಿಸುವ ಬಿಜೆಪಿ ತಂತ್ರ; ಸೋನಿಯಾ ಗಾಂಧಿ
    – ಸಂವಿಧಾನದ ಮೇಲೆ ಮೋದಿ ಸರ್ಕಾರದ ಆಕ್ರಮಣ ಎಂದ ಜೈರಾಮ್‌ ರಮೇಶ್‌

    ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ಕುರಿತು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ (Sonia Gandhi) ಟೀಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ.

    ವಕ್ಫ್‌ ತಿದ್ದಿಪಡಿ ಮಸೂದೆ – 2024 ಅನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಕುರಿತು ಮಾತನಾಡಿದ ಸೋನಿಯಾ ಗಾಂಧಿ ಅವರು, ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸುವ ಮೂಲಕ ಸಮಾಜವನ್ನು ಶಾಶ್ವತವಾಗಿ ವಿಭಜಿಸಲು ಬಿಜೆಪಿ ಹೊರಟಿದೆ. ಈ ಮಸೂದೆಯೂ ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಸಮಾಜವನ್ನು ಶಾಶ್ವತವಾಗಿ ವಿಭಜಿಸಲು ಬಿಜೆಪಿಯ (BJP) ಉದ್ದೇಶಿತ ಕಾರ್ಯತಂತ್ರದ ಭಾಗವಾಗಿದೆ ಎಂದು ಕಿಡಿ ಕಾರಿದರು.

    ಸೋನಿಯಾ ಗಾಂಧಿ ಅವರ ಈ ಹೇಳಿಕೆ ಖಂಡಿಸಿ ಆಡಳಿತ ಪಕ್ಷದ ಸದಸ್ಯರು ಮೇಲ್ಮನೆಯಲ್ಲಿ ಗದ್ದಲ ಎಬ್ಬಿಸಿದ್ರು. ಸೋನಿಯಾ ಅವರು ಕ್ಷಮೆ ಕೇಳಬೇಕು (‘ಸೋನಿಯಾ ಗಾಂಧಿ ಮಾಫಿ ಮಾಂಗೊ’) ಎಂದು ಪಟ್ಟು ಹಿಡಿದರು. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ವಿಕ್ಷಗಳ ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಸೋನಿಯಾ ಗಾಂದಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತಿಲ್ಲ. ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮಾತನಾಡಲು ಅವಕಾಶ ನೀಡದೇ ಇರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸತ್‌ನಲ್ಲಿ ವಕ್ಫ್‌ ಮಸೂದೆ ಅಂಗೀಕಾರ: ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣನೆ

    ಇನ್ನೂ ವಕ್ಫ್‌ ಮಸೂದೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ವಕ್ಫ್‌ ತಿದ್ದುಪಡಿ ಮಸೂದೆಯ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು. ಅಲ್ಲದೇ ಇದು ಭಾರತದ ಸಂವಿಧಾನದ ಮೇಲೆ ಮೋದಿ ಸರ್ಕಾರದ ಆಕ್ರಮಣ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಟ್ರಂಪ್‌ ತೆರಿಗೆ ಸಮರ- ಇಂದು ಒಂದೇ ದಿನ ಕರಗಿತು ಹೂಡಿಕೆದಾರರ 11.19 ಲಕ್ಷ ಕೋಟಿ ಸಂಪತ್ತು

    ಮತ್ತೊಂದೆಡೆ, ವಕ್ಫ್ ಬಿಲ್-ಅಮೆರಿಕದ ಪ್ರತಿ ಸುಂಕ ವಿರೋಧಿಸಿ ಸಂಸತ್‌ನ ಒಳಗೆ ಹೊರಗೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ರು. ಸರಿಯಾದ ಚರ್ಚೆ ನಡೆಸದೇ ಬಲವಂತವಾಗಿ ವಕ್ಫ್ ಬಿಲ್‌ಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಆರೋಪಿಸಿದ್ರು. ವಕ್ಫ್ ಬಿಲ್ ಮೇಲಿನ ಚರ್ಚೆಯಲ್ಲಿ ಪ್ರಿಯಾಂಕಾ ಗಾಂದಿ ವಾದ್ರಾ ಪಾಲ್ಗೊಳ್ಳದೇ ಇರೋದಕ್ಕೆ ವಯನಾಡಿನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇನ್ನು, ವಕ್ಫ್ ಬಿಲ್ ಬೆಂಬಲಿಸಿದ ಜೆಡಿಯು ನಡೆ ಖಂಡಿಸಿ, ಐವರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದ ಹಾಗೇ, ಮೇಲ್ಮನೆ ಕಲಾಪ ಇಂದು ನಸುಕಿನಜಾವ 4 ಗಂಟೆಯವರೆಗೂ ನಡೀತು. ರಾಜ್ಯಸಭೆ ಚರಿತ್ರೆಯಲ್ಲೇ 17 ಗಂಟೆಯಷ್ಟು ಗರಿಷ್ಠ ಸಮಯ ಕಲಾಪ ನಡೆದಿರೋದು ಇದೇ ಮೊದಲು.

  • ಸಂಸತ್‌ನಲ್ಲಿ ವಕ್ಫ್‌ ಮಸೂದೆ ಅಂಗೀಕಾರ: ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣನೆ

    ಸಂಸತ್‌ನಲ್ಲಿ ವಕ್ಫ್‌ ಮಸೂದೆ ಅಂಗೀಕಾರ: ಐತಿಹಾಸಿಕ ಕ್ಷಣ ಎಂದು ಮೋದಿ ಬಣ್ಣನೆ

    ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಯು (Waqf Amendment Bill) ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದು ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಮಸೂದೆ ಅಂಗೀಕಾರಗೊಂಡಿರುವುದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗಾಗಿ ನಮ್ಮ ಸಾಮೂಹಿಕ ಅನ್ವೇಷಣೆಯಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಇದು ದೀರ್ಘಕಾಲದಿಂದ ಅವಕಾಶ ವಂಚಿತರಾಗಿರುವ ಜನರಿಗೆ ಸಹಕಾರಿಯಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ದಶಕಗಳಿಂದ ವಕ್ಫ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಇತ್ತು. ಇದರಿಂದ ಮುಸ್ಲಿಂ ಮಹಿಳೆಯರು, ಬಡ ಮುಸ್ಲಿಮರು, ಪಸ್ಮಾಂಡ ಮುಸ್ಲಿಮರ ಹಿತಾಸಕ್ತಿಗಳಿಗೆ ಧಕ್ಕೆಯಾಗಿತ್ತು. ಸಂಸತ್ತು ಅಂಗೀಕರಿಸಿದ ಮಸೂದೆ ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಾವು ಆಧುನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಯುಗವನ್ನು ಪ್ರವೇಶಿಸುತ್ತೇವೆ. ಪ್ರತಿಯೊಬ್ಬ ನಾಗರಿಕನ ಘನತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ. ಬಲಿಷ್ಠ, ಅಂತರ್ಗತ, ಸಹಾನುಭೂತಿ ಭಾರತ ನಿರ್ಮಾಣಕ್ಕೆ ಮಸೂದೆ ಪೂರಕವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ – ಜೆಡಿಯುನಲ್ಲಿ ಭಿನ್ನಮತ ಸ್ಫೋಟ – ಇಬ್ಬರು ಮುಸ್ಲಿಂ ಶಾಸಕರು ರಾಜೀನಾಮೆ

  • ಸಂಸತ್‌ನಲ್ಲಿ ವಕ್ಫ್ ಬಿಲ್ ಅಂಗೀಕಾರ ಬೆನ್ನಲ್ಲೇ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆ

    ಸಂಸತ್‌ನಲ್ಲಿ ವಕ್ಫ್ ಬಿಲ್ ಅಂಗೀಕಾರ ಬೆನ್ನಲ್ಲೇ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆ

    – ಪಾರ್ಲಿಮೆಂಟಲ್ಲಿ ಅನ್ವರ್‌ ಮಾಣಿಪ್ಪಾಡಿ ವರದಿ ಉಲ್ಲೇಖಿಸಿ ಮಾತನಾಡಿದ್ದ ಅಮಿತ್‌ ಶಾ

    ಮಂಗಳೂರು: ವಕ್ಫ್ ಬಿಲ್ ಅಂಗೀಕಾರ (Waqf Amendment Bill) ಆಗಿರುವ ಹಿನ್ನೆಲೆ ವಕ್ಫ್ ಅಕ್ರಮದ ಬಗ್ಗೆ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ (Anwar Manippady) ಬೆದರಿಕೆ ಕರೆಗಳು ಬಂದಿವೆ.

    ಕಳೆದ ಎರಡು ಮೂರು ದಿನಗಳಿಂದ ನಿರಂತರ ಇಂಟರ್‌ನೆಟ್ ಕಾಲ್ ಮೂಲಕ ಬೆದರಿಕೆ ಬರುತ್ತಿದೆ. ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಅನ್ನೋ ಕರೆಗಳು ಬರುತ್ತಿದೆ ಎಂದು ಅನ್ವರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ಬೆದರಿಕೆ ಕರೆ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅನ್ವರ್ ಮಾಣಿಪ್ಪಾಡಿ, ನೀನು ಬಹಳಷ್ಟು ನಾಯಕರು, ವ್ಯಕ್ತಿಗಳ ವಿರುದ್ಧ ತಪ್ಪು ಮಾಹಿತಿ ಕೊಟ್ಟಿದ್ದೀಯ. ಎಲ್ಲರೂ ನೊಂದಿದ್ದಾರೆ. ಯಾರು ಕೂಡ ನಿನ್ನನ್ನು ಕ್ಷಮಿಸಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    ನನ್ನ ಕಸಿನ್ ಒಬ್ಬರು ಪೊಲೀಸ್ ಆಫೀಸರ್. ನನಗೆ ಕರೆ ಮಾಡಿ ಜೋಪಾನವಾಗಿರಪ್ಪ, ಮನೆಯಿಂದ ಹೊರಗಡೆ ಒಬ್ಬನೇ ಹೋಗಬೇಡ ಅಂತ ಸಲಹೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಇತಿಹಾಸದಲ್ಲಿ ಕೆಟ್ಟ ದಿನ- ಬೋಸರಾಜು

    ನನ್ನ ವರದಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ್ದೇನೆ. ಕಲಬುರಗಿಯಲ್ಲಿ ದೊಡ್ಡ ದೊಡ್ಡ ಮಾಲ್, ಬಿಲ್ಡಿಂಗ್‌ಗಳಿವೆ. ಅವರ ಹೆಸರಲ್ಲಿ ಅಲ್ಲದಿದ್ದರೂ, ಬೇರೆಯವರ ಹೆಸರಲ್ಲಿ ಒತ್ತುವರಿಯಾಗಿದೆ. ಬಹುಪಾಲು ಬೇನಾಮಿ ಆಸ್ತಿ ಎಂದು ತಿಳಿಸಿದ್ದಾರೆ.

    ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ ಈಗ ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ವಕ್ಫ್ ವಿಚಾರದಲ್ಲಿ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆಗಳು ಬಂದಿವೆ.

    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯೊಂದಿಗೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಆಗಿದೆ. ಚರ್ಚೆ ವೇಳೆ ಕರ್ನಾಟಕದ ವಕ್ಫ್ ಒತ್ತುವರಿ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದರು. ಮಾಣಿಪ್ಪಾಡಿ ಅವರ ವರದಿ ಉಲ್ಲೇಖಿಸಿ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದರು.

  • ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ನವದೆಹಲಿ: ತೀವ್ರ ಗದ್ದಲ, ಜಟಾಪಟಿ, ಸುದೀರ್ಘ 12 ಗಂಟೆ ಚರ್ಚೆ ನಂತರ ಮಧ್ಯರಾತ್ರಿ ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯಸಭೆ (Rajya Sabha) ಅನುಮೋದನೆ ನೀಡಿದೆ. ಈ ಮೂಲಕ ವಕ್ಫ್‌ ಮಸೂದೆಯನ್ನು (Waqf Amendment Bill) ಸೋಲಿಸುತ್ತೇವೆ ಎಂದಿದ್ದ INDIA ಒಕ್ಕೂಟಕ್ಕೆ ಮುಖಭಂಗವಾಗಿದ್ದು ನಿರೀಕ್ಷೆಯಂತೆ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಸೂದೆಯನ್ನು ಪಾಸ್‌ ಮಾಡುವ ಮೂಲಕ ಮೋದಿ ಸರ್ಕಾರಕ್ಕೆ (Narendra Modi) ಗೆಲುವು ಸಿಕ್ಕಿದೆ.

    ಮಧ್ಯರಾತ್ರಿ 2:30 ಕ್ಕೆ ನಡೆದ ಮತದಾನದಲ್ಲಿ ಮಸೂದೆ ಪರ 128, ವಿರುದ್ಧ 95 ಮತಗಳು ಬಿದ್ದವು. ಲೋಕಸಭೆ ಮತ್ತ ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಆಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಹಿ ಹಾಕಿದ ಬಳಿಕ ಅಧಿಕೃತವಾಗಿ ಉಮೀದ್‌ ಕಾಯ್ದೆ (UMEED Act – Unified Waqf Management, Empowerment, Efficiency and Development Act) ಜಾರಿಯಾಗಲಿದೆ. ಇದನ್ನೂ ಓದಿ: ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ

    ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್‌ ರಿಜಿಜು, ಸದುದ್ದೇಶದಿಂದ ತಂದಿರುವ ಮಸೂದೆಗೆ ಕಾಂಗ್ರೆಸ್ ಸೇರಿ ವಿಪಕ್ಷಗಳೆಲ್ಲಾ ಬೆಂಬಲ ನೀಡಬೇಕು. ಕಾನೂನುಗಳು ನ್ಯಾಯ ಇರಬೇಕೇ ಹೊರತು ಜಗಳ ಮಾಡಲು ಅಲ್ಲ, ವಕ್ಫ್ ಕೇವಲ ಮುಸ್ಲಿಮರ ಅಧೀನದಲ್ಲಿರಲಿದೆ. ಬೇರೆಯವರ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

    ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಪುರಸ್ಕರಿಸಿದ್ದೇವೆ. 2013 ರಲ್ಲಿ ತಂದ ವಕ್ಫ್ ಮಸೂದೆಯನ್ನು ಎದುರಿಸಲು ರಚಿಸಲಾದ 13 ಸದಸ್ಯರ ಸಮಿತಿಗಿಂತ ಸಮಿತಿಯು 31 ಸದಸ್ಯರನ್ನು ಹೊಂದಿತ್ತು. 2013 ರ ಸಮಿತಿಯ 22 ಸಭೆಗಳಿಗೆ ಹೋಲಿಸಿದರೆ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ 200 ಗಂಟೆಗಳ ಕಾಲ ಚರ್ಚಿಸಿದೆ ಮತ್ತು 36 ಸಭೆಗಳನ್ನು ನಡೆಸಿದೆ ಎಂದು ತಿಳಿಸಿದರು.