Tag: Wanindu Hasaranga

  • ಲಂಕಾಗೆ ಆಘಾತ – ವಿಶ್ವಕಪ್‌ ಟೂರ್ನಿಯಿಂದ ಸ್ಪಿನ್‌ ಮಾಂತ್ರಿಕ ಹಸರಂಗ ಔಟ್‌?

    ಲಂಕಾಗೆ ಆಘಾತ – ವಿಶ್ವಕಪ್‌ ಟೂರ್ನಿಯಿಂದ ಸ್ಪಿನ್‌ ಮಾಂತ್ರಿಕ ಹಸರಂಗ ಔಟ್‌?

    ಕೊಲಂಬೊ: ಅಕ್ಟೋಬರ್‌ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಗೂ ಮುನ್ನವೇ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಲಂಕಾ ತಂಡದ ಸ್ಪಿನ್‌ ಮಾಂತ್ರಿಕ ವಾನಿಂದು ಹಸರಂಗ ಗಾಯದ ಸಮಸ್ಯೆಗೆ (Wanindu Hasaranga Injury) ತುತ್ತಾಗಿದ್ದು, ವಿಶ್ವಕಪ್‌ ಟೂರ್ನಿಯಿಂದ ಬಹುತೇಕ ಹೊರಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಸರಂಗ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನ ಪರಿಶೀಲಿಸಲು ಶ್ರೀಲಂಕಾ (Sri Lanka) ವಿದೇಶಿ ವೈದ್ಯರೊಂದಿಗೆ (Doctors) ಸಮಾಲೋಚನೆ ನಡೆಸುತ್ತಿದೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೇ ಅವರು ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬರ್‌ ಆಜಂ ಬಳಿಕ ನವೀನ್ ಉಲ್ ಹಕ್‌ನನ್ನ ಹೊಗಳಿದ ಗಂಭೀರ್‌ – ಕಾಲೆಳೆದ ಕೊಹ್ಲಿ ಫ್ಯಾನ್ಸ್‌

    ಕಳೆದ ಆಗಸ್ಟ್‌ ತಿಂಗಳಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌ ವೇಳೆ ಹಸರಂಗ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆದ್ದರಿಂದ ಏಷ್ಯಾಕಪ್‌ ವೇಳೆಯೂ ತಂಡದಿಂದ ಹೊರಗುಳಿದಿದ್ದರು. ಇದೀಗ 2023ರ ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಶ್ರೀಲಂಕಾ ತಂಡ ಅ.7 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ: Asian Games 2023: ಕ್ರಿಕೆಟ್‌ನಲ್ಲಿ ಚಿನ್ನ – ಇತಿಹಾಸ ನಿರ್ಮಿಸಿದ ಭಾರತದ ಮಹಿಳೆಯರು

    ಈ ಪಂದ್ಯದಲ್ಲಿ ಪಾಲ್ಗೊಳ್ಳಲು ಹಸರಂಗ ಫಿಟ್‌ನೆಸ್‌ ಸಾಬೀತು ಮಾಡಬೇಕಿದೆ. ಆದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನ ತಿಳಿಯಲು ವಿದೇಶಿ ವೈದ್ಯರನ್ನ ಸಂಪರ್ಕಿಸಲಾಗುತ್ತಿದೆ. ಒಂದು ವೇಳೆ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದರೆ ಕನಿಷ್ಠ 3 ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ. ಜೊತೆಗೆ ವಿಶ್ವಕಪ್‌ ಟೂರ್ನಿಯಿಂದಲೂ ಹೊರಗುಳಿಯಬೇಕಾಗುತ್ತದೆ ಎಂದು ಶ್ರೀಲಂಕಾ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಅರ್ಜುನ ಡಿ ಸಿಲ್ವಾ ತಿಳಿಸಿದ್ದಾರೆ. ಇದನ್ನೂ ಓದಿ: Asian Games : ಶೂಟಿಂಗ್‌ನಲ್ಲಿ ವಿಶ್ವದಾಖಲೆ – ಚಿನ್ನ ಗೆದ್ದ ಭಾರತದ ಪುರುಷರು

    ಇದೇ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ಭಾರತದ ವಿವಿಧ ಸ್ಥಳಗಳಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPL 2023: ಅಬ್ಬರಿಸಲು ನಾವ್‌ ರೆಡಿ ಎಂದ ಹಸರಂಗ – ಈ ಸಲ ಕಪ್‌ ನಮ್ದೆ ಅಂದ್ರು ಫ್ಯಾನ್ಸ್‌

    IPL 2023: ಅಬ್ಬರಿಸಲು ನಾವ್‌ ರೆಡಿ ಎಂದ ಹಸರಂಗ – ಈ ಸಲ ಕಪ್‌ ನಮ್ದೆ ಅಂದ್ರು ಫ್ಯಾನ್ಸ್‌

    – ಆರ್‌ಸಿಬಿಗೆ ಎಂಟ್ರಿಕೊಟ್ಟ ಸ್ಪಿನ್‌ ಮಾಂತ್ರಿಕ

    ಮುಂಬೈ: ಶ್ರೀಲಂಕಾ ತಂಡದ ಸ್ಪಿನ್‌ ಮಾಂತ್ರಿಕ ವಾನಿಂದು ಹಸರಂಗ (Wanindu Hasaranga) ಆರ್‌ಸಿಬಿಗೆ (RCB) ತಂಡಕ್ಕೆ ಮರಳಿದ್ದು, 2023ರ ಐಪಿಎಲ್‌ನಲ್ಲಿ (IPL 2023) ಮೊದಲ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ.

    ಇತ್ತೀಚೆಗೆ ನ್ಯೂಜಿಲೆಂಡ್‌ ಜೊತೆಗಿನ ದ್ವಿಪಕ್ಷಿಯ ಸರಣಿ ಹಿನ್ನೆಲೆಯಲ್ಲಿ ಹಸರಂಗ ಶ್ರೀಲಂಕಾ (SriLanka) ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದರು. ಹಾಗಾಗಿ ಆರ್‌ಸಿಬಿ ತಂಡದಿಂದ ಹೊರಗುಳಿದಿದ್ದರು. ಆದರೀಗ ಆರ್‌ಸಿಬಿ ತಂಡವನ್ನ ಕೂಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಬ್ಬರಿಸಲು ನಾವ್‌ ರೆಡಿ ಎಂಬ ಖಡಕ್‌ ಸಂದೇಶವನ್ನ ಎದುರಾಳಿಗಳಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ವಾನಿಂದು ಹಸರಂಗ ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ ಅವರು 26 ವಿಕೆಟ್‌ ಉರುಳಿಸಿ, 7.54ರ ಸರಾಸರಿಯಲ್ಲಿ ಬೌಲಿಂಗ್ ನಡೆಸಿದ್ದರು ಈ ಮೂಲಕ 2022ರ ಐಪಿಎಲ್‌ನಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಯನ್ನೂ ಹಸರಂಗ ಮಾಡಿದ್ದರು. ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಸೇರಿಕೊಂಡ ಹಸರಂಗ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ವಾನಿಂದು ಹಸರಂಗ, ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲು ಹರ್ಷವಾಗುತ್ತಿದೆ. ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಉತ್ಸಾಹದಿಂದ ಕಾಯುತ್ತಿದ್ದೆ. ತಂಡದ ಆಟಗಾರರು ಅತ್ಯುತ್ತಮವಾಗಿ ಸಿದ್ಧತೆ ನಡೆಸುತ್ತಿದ್ದು ಹರ್ಷ ಮೂಡಿಸಿದೆ. ಈ ಬಾರಿ ಆರ್‌ಸಿಬಿ ತಂಡದ ಪರವಾಗಿ ಮೊದಲ ಬಾರಿಗೆ ಬೌಲಿಂಗ್ ಮಾಡಲಿದ್ದೇನೆ. ವೈಯಕ್ತಿಕವಾಗಿ ಈ ಸವಾಲನ್ನು ಎದುರಿಸಲು ಸಜ್ಜಾಗಿದ್ದೇನೆ ಎಂದು ಹೇಳಿದ್ದಾರೆ.

    ಏಪ್ರಿಲ್‌ 15ರಂದು ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಈಗಾಗಲೇ ಸತತ 4 ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಖಾತೆ ತೆರೆಯುವ ತವಕದಲ್ಲಿದ್ದರೆ, ಸತತ ಎರಡು ಸೋಲು ಅನುಭವಿಸಿರುವ ಆರ್‌ಸಿಬಿ ತಂಡ ಹ್ಯಾಟ್ರಿಕ್‌ ಸೋಲಿನಿಂದ ತಪ್ಪಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಆರ್‌ಸಿಬಿ ಉತ್ತಮ ಕಮ್‌ಬ್ಯಾಕ್‌ ಆಗುವ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಈ ಸಲ ಕಪ್‌ ನಮ್ದೆ ಎಂದು ಮತ್ತೆ – ಮತ್ತೆ ಹೇಳ್ತಿದ್ದಾರೆ.

  • ಬಹುಕಾಲದ ಗೆಳತಿಯನ್ನ ವರಿಸಿದ ಲಂಕಾ ಕ್ರಿಕೆಟಿಗ ಹಸರಂಗ

    ಬಹುಕಾಲದ ಗೆಳತಿಯನ್ನ ವರಿಸಿದ ಲಂಕಾ ಕ್ರಿಕೆಟಿಗ ಹಸರಂಗ

    ಕೊಲೊಂಬೊ: ಶ್ರೀಲಂಕಾ ತಂಡದಲ್ಲಿ ಸ್ಪಿನ್ ಮಾಂತ್ರಿಕ ಎಂದೇ ಖ್ಯಾತಿಯಾಗಿರುವ ಕ್ರಿಕೆಟಿಗ ವಾನಿಂದು ಹಸರಂಗ (Wanindu Hasaranga) ತನ್ನ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಆರ್‌ಸಿಬಿ (RCB) ತಂಡದ ಆಲ್‌ರೌಂಡರ್ ಸಹ ಆಗಿರುವ ವಾನಿಂದು ಹಸರಂಗ, ಗೆಳತಿ ವಿಂದ್ಯಾ (Vindya) ವಿವಾಹದ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: WPL 2023: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು – ಗುಜರಾತ್ ಜೈಂಟ್ಸ್‌ಗೆ 11 ರನ್ ರೋಚಕ ಜಯ

    ಶ್ರೀಲಂಕಾ (SriLanka) ತಂಡದಲ್ಲಿ ತನ್ನ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಆಟದಿಂದ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಸರಂಗ. ಆರ್‌ಸಿಬಿ ತಂಡದಲ್ಲಿ ಆಲ್‌ರೌಂಡರ್ ಆಗಿಯೂ ಮಿಂಚಿದ್ದಾರೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ‌ ಜೊತೆ ಮೋದಿ ಮ್ಯಾಚ್ ವೀಕ್ಷಣೆ

    ಮಾರ್ಚ್ 9 ರಂದು ಆತ್ಮೀಯರ ಸಮ್ಮುಖದಲ್ಲಿ ಹಸರಂಗ-ವಿಂದ್ಯಾ ಜೋಡಿಯ ವಿವಾಹ (Marriage) ಮಹೋತ್ಸವ ಜರುಗಿದೆ. ನವ ಜೋಡಿಯ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತ ಆರ್‌ಸಿಬಿ ತಂಡ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಶುಭ ಹಾರೈಸಿದೆ. ಇದನ್ನೂ ಓದಿ: ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

    2022ರ ಏಷ್ಯಾಕಪ್ (AisaCup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಹಸರಂಗ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದರೊಂದಿಗೆ 2022ರ ಟಿ20 ವಿಶ್ವಕಪ್‌ನಲ್ಲಿ (T20 WorldCup) 15 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.

  • T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    ಕ್ಯಾನ್ಬೆರಾ: ಜಾನ್ ಪ್ರೈಲಿಂಕ್ (JanFrylinck), ಜೆಜೆ ಸ್ಮಿತ್ ಆಲ್‌ರೌಂಡರ್ ಆಟ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಟಿ20 ವಿಶ್ವಕಪ್ (T20 WorldCup) ಮೊದಲ ಪಂದ್ಯದಲ್ಲೇ ಶ್ರೀಲಂಕಾ (SriLanka) ವಿರುದ್ಧ ನಮೀಬಿಯಾ (Namibia) 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅರ್ಹತಾ ಸುತ್ತಿನ ಉದ್ಘಾಟನಾ ಪಂದ್ಯದಲ್ಲೇ ಶುಭಾರಂಭ ಪಡೆದುಕೊಂಡಿದೆ.

    ಶ್ರೀಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ನಮೀಬಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಲಂಕಾ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನಿಗದಿತ 19 ಓವರ್‌ಗಳಲ್ಲೇ 108 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನಮೀಬಿಯಾಕ್ಕೆ ನೀಡಿತು. ನಂತರ ಕ್ರೀಸ್‌ಗಳಿದ ಲಂಕಾಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ (Kusal Mendis)  ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ನಿಸ್ಸಾಂಕ 10 ಎಸೆತಗಳಲ್ಲಿ 9 ರನ್‌ಗಳಿಸಿದರೆ ಮೆಂಡಿಸ್ 6 ಎಸೆತಕ್ಕೆ 6ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟ್ ಬೀಸಿದ ಧನಂಜಯ ಡಿ ಸಿಲ್ವಾ 11 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 12 ರನ್ ಗಳಿಸಿ ನಿರ್ಗಮಿಸಿದರು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭಾನುಕಾ ರಾಜಪಕ್ಸೆ (Bhanuka Rajapaksa)ಹಾಗೂ ದಸುನ್ ಶನಕ ಉತ್ತಮ ಸಾಂಘಿಕ ಪ್ರದರ್ಶನದಿಂದ 49 ರನ್ ಕಲೆಹಾಕಿದರು. ಇಬ್ಬರ ಜೊತೆಯಾಟದಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿ 44 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಿಂದ ತಂಡ ಗೆಲುವಿನ ಕನಸು ಕಾಣುತ್ತಿರುವಾಗಲೇ ರಾಜಪಕ್ಸೆ ಆಟಕ್ಕೆ ನಮೀಬಿಯಾ ಬೌಲರ್ ಬ್ರೇಕ್ ಹಾಕಿದರು. ರಾಜಪಕ್ಸೆ 20 ರನ್ (21 ಎಸೆತ, 2 ಬೌಂಡರಿ), ದಸುಮ್ ಶನಕ 29 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು. ನಂತರದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಲಂಕಾ ಉದ್ಘಾಟನಾ ಪಂದ್ಯದಲ್ಲೇ ಸೋಲನ್ನು ಅನುಭವಿಸಬೇಕಾಯಿತು.

    ದನುಷ್ಕ ಗುಣತಿಲಕ, ಪ್ರಮೋದ್ ಮದುಶನ್ ಶೂನ್ಯಕ್ಕೆ ನಿರ್ಗಮಿಸಿದರೆ, ವನಿಂದು ಹಸರಂಗ 4 ರನ್, ಚಾಮಿಕಾ ಕರುಣಾರತ್ನೆ 5 ರನ್, ದುಷ್ಮಂತ ಚಮೀರ 8 ರನ್ ಗಳಿಸಿದರು. ಮಹೇಶ್ ತೀಕ್ಷಣ 11 ರನ್‌ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ತಂಡದ ಪರ ಪ್ರಮೋದ್ ಮದುಶನ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚಮೀರಾ, ಕರುಣರತ್ನೆ ಹಾಗೂ ವನಿಂದ ಹಸರಂಗ (Wanindu Hasaranga) ತಲಾ ಒಂದೊಂದು ವಿಕೆಟ್ ಪಡೆದರು. ಒಟ್ಟಿನಲ್ಲಿ ಲಂಕಾ ಬ್ಯಾಟಿಂಗ್ ವೈಫಲ್ಯ ಇಂದಿನ ಸೋಲಿಗೆ ಕಾರಣವಾಯಿತು.

    ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ವ್ಯಾನ್ ಲಿಂಗೆನ್ 3 ರನ್, ಡಿವನ್ ಲಾ ಕುಕ್ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜಾನ್ ನಿಕೊಲ್ ಈಟನ್ 20 ರನ್, ಸ್ಟಿಫನ್ ಬಾರ್ಡ್ 26, ನಾಯಕ ಗೆರ್ಹಾಡ್ ಬಾರ್ಡ್ 20 ರನ್ ಕಲೆಹಾಕಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.

    ಪ್ರೈಲಿಂಕ್ – ಸ್ಮಿತ್ ಆಲ್‌ರೌಂಡರ್ ಆಟ: ನಮೀಬಿಯಾ ತಂಡವು 14.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್ ಪ್ರೈಲಿಂಕ್ (JanFrylinck) ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಾನ್ ಪ್ರೈಲಿಂಕ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಪೇರಿಸಿ ತಂಡಕ್ಕೆ ಆಸರೆಯಾದರು.

    ಇನ್ನೂ ಬೌಲಿಂಗ್‌ನಲ್ಲೂ ಅಬ್ಬರಿಸಿದ ಪ್ರೈಲಿಂಕ್ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರೆ, ಜೆಜೆ ಸ್ಮಿತ್ 3 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ನಮೀಬಿಯಾ ತಂಡದ ಪರ ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್‌, ಬೆನ್ ಶಿಕೊಂಗೊ, ಜಾನ್ ಫ್ರಿಲಿಂಕ್, ತಲಾ ಎರಡು ವಿಕೆಟ್ ಪಡೆದರೆ, ಜೆಜೆ ಸ್ಮಿತ್ 1 ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

    ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?

    ಕೋಲ್ಕತ್ತಾ: ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವನಿಂದು ಹಸರಂಗ ಕ್ಯಾಚ್ ಹಿಡಿದು ಬಿಟ್ಟ ಬಳಿಕ ಈ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

    ತೀವ್ರ ಪೈಪೋಟಿಯಿಂದ ಕೂಡಿದ್ದ ಬೆಂಗಳೂರು ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 207 ರನ್ ಪೇರಿಸಿತು. ಬಳಿಕ 208 ರನ್‍ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡದ ರಾಹುಲ್ ಮತ್ತು ದೀಪಕ್ ಹೂಡಾ ತಂಡದ ಗೆಲುವಿಗಾಗಿ ಭರ್ಜರಿ ಬ್ಯಾಟಿಂಗ್‍ಗೆ ಮುಂದಾದರು. ಈ ವೇಳೆ 10ನೇ ಓವರ್‌ನ 3ನೇ ಎಸೆತದಲ್ಲಿ ಹೂಡಾ ದೊಡ್ಡ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಲೈನ್ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಸರಂಗ ಕ್ಯಾಚ್ ಹಿಡಿದು ನಿಯಂತ್ರಣ ಕಳೆದುಕೊಂಡು ಬಳಿಕ ಬಾಲ್ ಎಸೆದರು. ಆದರೆ ಬಾಲ್ ಹಸರಂಗ ಕೈನಲ್ಲಿ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿತ್ತು. ಆದರೆ ಅಂಪೈರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಇತ್ತ ಆರ್‌ಸಿಬಿ ಆಟಗಾರರು ಕೂಡ ಈ ಬಗ್ಗೆ ಹೆಜ್ಜೆ ಗಮನಹರಿಸಲಿಲ್ಲ. ಆದರೆ ಹಸರಂಗ ಕೈನಲ್ಲಿ ಬಾಲ್ ಕೆಲ ಸೆಕೆಂಡ್‍ಗಳ ಕಾಲ ಹೋಲ್ಡ್ ಆಗಿದ್ದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    https://twitter.com/Indrabeing/status/1529518913352273921

    ಐಸಿಸಿ ನಿಯಮವೇನು?
    ಐಸಿಸಿ ನಿಯಮ 33.3 ಪ್ರಕಾರ ಕ್ಯಾಚ್ ಪ್ರಕ್ರಿಯೆಯು ಬಾಲ್ ಮೊದಲ ಬಾರಿಗೆ ಫೀಲ್ಡರ್ ಸಂಪರ್ಕಕ್ಕೆ ಬಂದಾಗಿನಿಂದ ಪ್ರಾರಂಭವಾಗುತ್ತದೆ. ಬಾಲ್ ಮತ್ತು ಫೀಲ್ಡರ್ ಸ್ವಂತ ಚಲನೆ ಮತ್ತು ಬಾಲ್ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ. ಈ ವೇಳೆ ಸ್ವಂತ ಚಲನೆ ಅಥವಾ ಬಾಲ್ ಮೇಲಿನ ನಿಯಂತ್ರಣ ಕಳೆದುಕೊಂಡರೇ ಇದು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ.

    ಈ ನಿಯಮದ ಪ್ರಕಾರ ಹಸರಂಗ ಹಿಡಿದ ಕ್ಯಾಚ್‌ ನಾಟೌಟ್‌ ಎಂಬ ತೀರ್ಮಾನಕ್ಕೆ ಬಂತು. ಇತ್ತ ಫೀಲ್ಡಿಂಗ್‌ನಲ್ಲಿ ಮಿಂಚಿದ ಹಸರಂಗ 5 ರನ್‌ಗಳನ್ನು ಸೇವ್‌ ಮಾಡಿ ತಂಡದ ಗೆಲುವಿಗೆ ನೆರವಾದರು.