Tag: Wang Zhi Yi

  • Malaysia Masters: ಫೈನಲ್‌ನಲ್ಲಿ ಸಿಂಧುಗೆ ಸೋಲು – ಪ್ರಶಸ್ತಿ ಗೆಲ್ಲುವ ಕನಸು ಭಗ್ನ

    Malaysia Masters: ಫೈನಲ್‌ನಲ್ಲಿ ಸಿಂಧುಗೆ ಸೋಲು – ಪ್ರಶಸ್ತಿ ಗೆಲ್ಲುವ ಕನಸು ಭಗ್ನ

    ಕೌಲಾಲಂಪುರ: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ ಸಿಂಧು (PV Sindhu) ಅವರು ಮಲೇಷ್ಯಾ ಮಾಸ್ಟರ್ಸ್ (Malaysia Masters 2024) ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ.

    ಚೀನಾದ ಪ್ರತಿಸ್ಪರ್ಧಿ ವಾಂಗ್ ಝಿಯಿ (Wang Zhi Yi) ವಿರುದ್ಧ 16-21, 21-5, 21-16 ಸೆಟ್‌ಗಳಿಂದ ಸಿಂಧು ಸೋತಿದ್ದು, ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಮೊದಲ ಸೆಟ್‌ನಲ್ಲಿ 21-16 ಪಾಯಿಂಟ್ಸ್‌ ಗಳಿಸುವ ಮೂಲಕ 5 ಪಾಯಿಂಟ್ಸ್‌ಗಳಲ್ಲಿ ಮುನ್ನಡೆ ಸಾಧಿಸಿದ್ದ ಪಿ.ವಿ ಸಿಂಧು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದ್ರೆ 2ನೇ ಸೆಟ್‌ನಲ್ಲಿ ಚೀನಾದ ಆಟಗಾರ್ತಿ ಭರ್ಜರಿ ಕಮ್‌ಬ್ಯಾಕ್ ಮಾಡಿದರು. ಇದರಿಂದ ಸಿಂಧು 5-21 ಪಾಯಿಂಟ್ಸ್‌ ಗಳಿಸಿ ತೀವ್ರ ಹಿನ್ನಡೆ ಅನುಭವಿಸಿದ್ದರು. ಬಳಿಕ 3ನೇ ಸೆಟ್‌ನಲ್ಲೂ ಸಿಂಧುಗೆ ಅವಕಾಶ ನೀಡದ ವಾಂಗ್ ಝಿಯಿ 21-16 ಪಾಯಿಂಟ್ಸ್‌ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.

    ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ (Busanan Ongbamrungphan) ವಿರುದ್ಧ ಸಿಂಧು 13-21, 21-16, 21-12 ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ ವಿಶ್ವದ 6ನೇ ಶ್ರೇಯಾಂಕಿತ ಆಟಗಾರ್ತಿಯಾದ ಚೀನಾದ ಹಾನ್ ಯೂ ಅವರನ್ನ ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಸಿದ್ದರು. ಇದನ್ನೂ ಓದಿ: ವಿಶ್ವಕಪ್‌ ಒಂದು ಪಂದ್ಯಕ್ಕೆ ಕೊಹ್ಲಿ ಗೈರು ಸಾಧ್ಯತೆ

    ಕಳೆದ 2 ವರ್ಷಗಳಿಂದ ಫಾರ್ಮ್‌ ಕಳೆದುಕೊಂಡಿದ್ದ ಸಿಂಧು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದಕ್ಕೂ ಮುನ್ನ ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್‌ ಆಗಿದ್ದರು. 2022ರಲ್ಲಿ ಸಿಂಗಾಪುರ ಓಪನ್ಸ್‌ (Singapore Opens) ಟ್ರೋಫಿ ಗೆದ್ದಿದ್ದರು. ಇದೀಗ ಮತ್ತೆ ಸೋಲಿನ ಅಭಿಯಾನ ಮುಂದುವರಿಸಿದ್ದಾರೆ. ಇದನ್ನೂ ಓದಿ: ನೀರಜ್‌ ಚೋಪ್ರಾಗೆ ಗಾಯದ ಸಮಸ್ಯೆ; ಒಸ್ಟ್ರಾವಾ ಗೋಲ್ಡನ್ ಸ್ಪೈಕ್-2024ನಿಂದ ಹೊರಕ್ಕೆ

  • ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭರ್ಜರಿ ಜಯ ಸಾಧಿಸಿದ್ದು, ಮೊದಲ ಸೂಪರ್-500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಚೀನಾದ ವಾಂಗ್ ಝಿ ಯಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಸೂಪರ್-500 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಆರಂಭದಲ್ಲೇ ವಾಂಗ್ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ 21-9 ಅಂತರದಿAದ ಗೆದ್ದುಕೊಂಡರು. 2ನೇ ಸೆಟ್‌ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. 2ನೇ ಸುತ್ತಿನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್‌ ಮೂಲಕ 6 ಪಾಯಿಂಟ್ ಗಳಿಸಿ ಸಿಂಧು ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದರು. ಪರಿಣಾಮ 2ನೇ ಸುತ್ತಿನಲ್ಲಿ ಸಿಂಧು 11-21 ಅಂತರದಲ್ಲಿ ಸೋತರು. ಇದನ್ನೂ ಓದಿ: ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಮೊದಲೆರಡು ಸುತ್ತಿನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಅಂತಿಮ ಸುತ್ತಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದರಂತೆ ಮೊದಲ 5 ಪಾಯಿಂಟ್‌ವರೆಗೂ ಜಿದ್ದಾ-ಜಿದ್ದಿನ ಹೋರಾಟ ಕಂಡು ಬಂದಿತು. ಈ ಹಂತದಲ್ಲಿ ಸಿಂಧು ಭರ್ಜರಿ ಸ್ಮ್ಯಾಶ್‌ಗಳ ಮೂಲಕ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಇದರಿಂದ ವಾಂಗ್ ಝಿ ಯಿ ಅವರ ಪಾಯಿಂಟ್ 6 ಇದ್ದಾಗಲೇ ಸಿಂಧು ಅವರ ಪಾಯಿಂಟ್ 11ಕ್ಕೆ ಏರಿತ್ತು.

    ಮಧ್ಯಂತರದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು. ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಅವರು ಮತ್ತೊಮ್ಮೆ ಅಬ್ಬರಿಸಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.

    ನಿನ್ನೆ 32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನಿನ ಸೈನಾ ಕವಾಕಮಿ ಅವರನ್ನು 21-15 21-7 ಅಂತರದಲ್ಲಿ ಸೋಲಿಸುವ ಮೂಲಕ ಸಿಂಧು ಮೇಲುಗೈ ಸಾಧಿಸಿದ್ದರು. ಈ ಮೂಲಕ ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ: Singapore Open 2022: ಫೈನಲ್‍ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು

    ಎರಡು ಬಾರಿ ಒಲಿಂಪಿಕ್ಸ್ ಪ್ರಶಸ್ತಿ ವಿಜೇತರಾಗಿರುವ ಪಿ.ವಿ.ಸಿಂಧು 2022ನೇ ಋತುವಿನಲ್ಲಿ ಸಿಂಗಾಪುರ್ ಓಪನ್ 2022 ಸೈಯದ್ ಮೋದಿ ಇಂಟರ್‌ನ್ಯಾಷನಲ್ ಹಾಗೂ ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ -300 ಪ್ರಶಸ್ತಿಗಳನ್ನು ಗೆದ್ದ ನಂತರ ಸೂಪರ್ 500 ಪ್ರಶಸ್ತಿ ಸಿಂಧು ಅವರ 3ನೇ ಪ್ರಶಸ್ತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]