Tag: Walmart

  • ಅಮೆರಿಕದ ವಾಲ್‌ಮಾರ್ಟ್‌ನಲ್ಲಿ ಗುಂಡಿನ ಸುರಿಮಳೆ – 10ಕ್ಕೂ ಹೆಚ್ಚು ಮಂದಿ ಸಾವು

    ಅಮೆರಿಕದ ವಾಲ್‌ಮಾರ್ಟ್‌ನಲ್ಲಿ ಗುಂಡಿನ ಸುರಿಮಳೆ – 10ಕ್ಕೂ ಹೆಚ್ಚು ಮಂದಿ ಸಾವು

    ವಾಷಿಂಗ್ಟನ್: ಅಮೆರಿಕದ (US) ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ (Walmart) ನಡೆದ ಗುಂಡಿನ ದಾಳಿಯಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚೆಸಾಪೀಕ್‌ನ ಸ್ಯಾಮ್ಸ್ ವೃತ್ತದಲ್ಲಿರುವ ವಾಲ್‌ಮಾರ್ಟ್‌ನಲ್ಲಿ (Walmart) ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು (US Police) ತಿಳಿಸಿದ್ದಾರೆ. ಸದ್ಯ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮೃತಪಟ್ಟವರ ಸಂಖ್ಯೆ ಹಾಗೂ ಗಾಯಗೊಂಡವರ ಸಂಖ್ಯೆ ಎಷ್ಟೆಂದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ವಾಲ್‌ಮಾರ್ಟ್ ಉದ್ಯೋಗಿಯೇ ಶೂಟರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಆದರೆ ಇದು ಖಚಿತವಾಗಿಲ್ಲ. ಸದ್ಯ ಹಂತಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಮೆರಿಕದ ಸಲಿಂಗಕಾಮಿಗಳ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ – 5 ಸಾವು, 18 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಎರಡು ವರ್ಷದ ಹಿಂದಿನ ಪ್ರಕರಣ ಬಿನ್ಸಿ ಬನ್ಸಾಲ್‍ಗೆ ಸುತ್ತಿಕೊಂಡಿದ್ದು ಹೇಗೆ?

    ಎರಡು ವರ್ಷದ ಹಿಂದಿನ ಪ್ರಕರಣ ಬಿನ್ಸಿ ಬನ್ಸಾಲ್‍ಗೆ ಸುತ್ತಿಕೊಂಡಿದ್ದು ಹೇಗೆ?

    ಬೆಂಗಳೂರು: ಎರಡು ವರ್ಷದ ಹಿಂದಿನ ಪ್ರಕರಣ ಸದ್ದು ಮಾಡಿದ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಫ್ಲಿಪ್ ಕಾರ್ಟ್‍ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಮೇಲೆ ಬಿನ್ನಿ ಬನ್ಸಾಲ್ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ಸಂಬಂಧ ವಾಲ್ ಮಾರ್ಟ್ ತನಿಖೆಗೆ ಇಳಿದ ಬೆನ್ನಲ್ಲೇ ಬಿನ್ನಿ ಬನ್ಸಾಲ್ ಈಗ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ನಡೆದಿದ್ದು ಏನು?
    ಬಿನ್ಸಿ ಬನ್ಸಾಲ್ ಮೇಲೆ ಆರೋಪ ಮಾಡಿದ್ದ ಫ್ಲಿಪ್ ಕಾರ್ಟ್ ಮಹಿಳಾ ಉದ್ಯೋಗಿ 2012ರಲ್ಲೇ ಕಂಪನಿ ತೊರೆದಿದ್ದರು. 2016 ರಲ್ಲಿ ಆಕೆ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಬಿನ್ಸಿ ಬನ್ಸಾಲ್ ಅವರ ಸಂಪರ್ಕ ಆಗಿದೆ. ಈ ಸಮಯದಲ್ಲಿ ತನ್ನ ಮೇಲೆ ಬಿನ್ಸಿ ಬನ್ಸಾಲ್ ಲೈಂಗಿಕ ದುರ್ವತನೆ ತೋರಿದ್ದಾರೆ ಎಂದು ಉದ್ಯೋಗಿ ಆರೋಪಿಸಿದ್ದಾರೆ.

    ವಾಲ್ ಮಾರ್ಟ್ ಕಂಪನಿ ಫ್ಲಿಪ್ ಕಾರ್ಟ್ ಖರೀದಿಸುತ್ತಿದೆ ಎನ್ನುವ ವಿಚಾರ ತಿಳಿದ ಬಳಿಕ ಮಹಿಳಾ ಉದ್ಯೋಗಿ ಜುಲೈನಲ್ಲಿ ವಾಲ್ ಮಾರ್ಟ್ ಸಿಇಒ ಡೌಗ್ ಮ್ಯಾಕ್ಮಿಲ್ಲನ್ ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ದೂರು ಬಂದಿದ್ದರೂ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಆಗಸ್ಟ್ ತಿಂಗಳಿನಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಲ್ ಮಾರ್ಟ್ ಮಾಜಿ ಉದ್ಯೋಗಿಯ ದೂರಿನ ಬಗ್ಗೆ ಆಂತರಿಕ ತನಿಖೆಗೆ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

    ಬಿನ್ನಿ ಬನ್ಸಾಲ್ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಸ್ವತಂತ್ರ ತನಿಖೆಯಲ್ಲಿ ಸಿಕ್ಕಿಲ್ಲ. ಬನ್ಸಾಲ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ. ಆದರೆ ಆರೋಪಗಳಿಗೆ ಬಿನ್ನಿ ಅವರ ಪ್ರತಿಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ವಾಲ್ ಮಾರ್ಟ್ ಹೇಳಿದೆ.

    ಆರು ತಿಂಗಳ ಹಿಂದಷ್ಟೇ ಅಮೆರಿಕದ ರಿಟೇಲ್ ದೈತ್ಯ ವಾಲ್ ಮಾರ್ಟ್ ಫ್ಲಿಪ್ ಕಾರ್ಟ್ ಅನ್ನು ಖರೀದಿಸಿತ್ತು. ಇದರ ಬೆನ್ನಲ್ಲೇ ಫ್ಲಿಪ್‍ಕಾರ್ಟ್ ಸಹಸಂಸ್ಥಾಪಕ ಸಚಿನ್ ಬನ್ಸಾಲ್ ಸಂಸ್ಥೆಗೆ ವಿದಾಯ ಹೇಳಿದ್ದರು. ಈಗ ಬಿನ್ನಿ ಬನ್ಸಾಲ್ ಸಹ ಫ್ಲಿಪ್ ಕಾರ್ಟ್ ತೊರೆದಿದ್ದಾರೆ. ವಾಲ್ ಮಾರ್ಟ್ ಈ ವರ್ಷ ಮೇ ತಿಂಗಳಲ್ಲಿ 16 ಶತಕೋಟಿ ಡಾಲರ್(1.07 ಲಕ್ಷ ಕೋಟಿ ರೂ.) ನೀಡಿ ಫ್ಲಿಪ್ ಕಾರ್ಟ್‍ನ ಶೇ.77 ಷೇರುಗಳನ್ನು ಖರೀದಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

    ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

    ಬೆಂಗಳೂರು: ಅಮೆರಿಕದ ವಾಲ್‍ಮಾರ್ಟ್ ಖರೀದಿಯಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿರುವ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ.

    ಫ್ಲಿಪ್‍ಕಾರ್ಟ್ ನ ಸಂಸ್ಥಾಪಕ ಸಚಿನ್ ಬನ್ಸಾಲ್ 5.5%, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ 5% ಷೇರುಗಳನ್ನು ಹೊಂದಿದ್ದಾರೆ. ಇವರ ಜೊತೆ ಫ್ಲಿಪ್‍ಕಾರ್ಟ್ ನ ಉದ್ಯೋಗಿಗಳಾದ ಸಮೀರ್ ನಿಗಮ್, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಅನಂತ ನಾರಾಯಣನ್ ಬಳಿ ಹೆಚ್ಚು ಷೇರುಗಳಿರುವ ಕಾರಣ ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ.

    ಸುಮಾರು 10 ಸಾವಿರ ಉದ್ಯೋಗಿಗಳು ಫ್ಲಿಪ್‍ಕಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, 3 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಷೇರಿಗೆ 150 ಡಾಲರ್ (ಅಂದಾಜು 10 ಸಾವಿರ ರೂ.) ಮೌಲ್ಯವನ್ನು ನಿಗದಿ ಮಾಡಿದ ಪರಿಣಾಮ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಖರೀದಿ ಬಳಿಕ ಷೇರುಗಳನ್ನು ವಾಪಸ್ ಕೊಂಡುಕೊಳ್ಳಲಾಗುವುದು ಎಂದು ಫ್ಲಿಪ್‍ಕಾರ್ಟ್ ಗ್ರೂಪ್ ಸಿಇಒ ಬಿನ್ನಿ ಬನ್ಸಾಲ್ ಘೋಷಿಸಿದ್ದಾರೆ.

    ಫ್ಲಿಪ್‍ಕಾರ್ಟ್ ಕಂಪೆನಿಯ ನಿಯಮದ ಪ್ರಕಾರ 4 ವರ್ಷಗಳ ಮುಂಚಿತವಾಗಿ ಷೇರುಗಳನ್ನು ಮಾರಾಟ ಮಾಡುವಂತಿಲ್ಲ. ಹಾಗಾಗಿ ವಾಲ್‍ಮಾರ್ಟ್ ಜೊತೆಗಿನ ಒಪ್ಪಂದದ ಬಗ್ಗೆ ಹೊರಗೆ ಎಲ್ಲೂ ಮಾತನಾಡದಂತೆ ಫ್ಲಿಪ್‍ಕಾರ್ಟ್ ಕಂಪೆನಿ ನಿರ್ದೇಶಿಸಿದೆ.

    ಫ್ಲಿಪ್‍ಕಾರ್ಟ್ ನ ಶೇ. 77 ಷೇರುಗಳನ್ನು ವಾಲ್‍ಮಾರ್ಟ್ ಖರೀದಿ ಮಾಡಿದ್ದು, ಉಳಿದ ಶೇ. 23 ಷೇರುಗಳು ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್, ಚೀನಾದ ಟೆನ್‍ಸೆಂಟ್ ಹೋಲ್ಡಿಂಗ್ಸ್, ಟೈಗರ್ ಗ್ಲೋಬಲ್ ಮ್ಯಾನೇಜ್‍ಮೆಂಟ್ ಮತ್ತು ಮೈಕ್ರೋಸಾಫ್ಟ್ ಕಾರ್ಪೋರೇಷನ್ ಮತ್ತು ಫ್ಲಿಪ್‍ಕಾರ್ಟ್ ಉದ್ಯೋಗಿಗಳ ಬಳಿಯಿದೆ.

  • ಭಾವನಾತ್ಮಕ ಸಂದೇಶ ರವಾನಿಸಿದ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್

    ಭಾವನಾತ್ಮಕ ಸಂದೇಶ ರವಾನಿಸಿದ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್

    ನವದೆಹಲಿ: ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ವಾಲ್‍ಮಾರ್ಟ್ ಖರೀದಿಸಿದ ಬಳಿಕ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಫೇಸ್ ಬುಕ್ ಪೋಸ್ಟ್ ಮಾಡಿರುವ ಅವರು, ಫ್ಲಿಪ್‍ಕಾರ್ಟ್ ಸಂಸ್ಥೆಯೂ ಗ್ರಾಹಕರ ಆಯ್ಕೆಗಳನ್ನು ಎತ್ತಿ ಹಿಡಿದಿದ್ದು, ನಾವು ಉತ್ತಮ ಜನರೊಂದಿಗೆ ಕೆಲಸ ಮಾಡಿದ್ದೇವೆ. ಈ ವೇಳೆ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಭಾರತದ ಹಲವು ಸಂಕೀರ್ಣ ಸಮಸ್ಯೆಗಳನ್ನು ಈ ಮೂಲಕ ಬಗೆಹರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಇಂದು ನಮ್ಮ ಸೇವೆ ಮುಕ್ತಾಯವಾಗಿದೆ. ಸಂಸ್ಥೆಯನ್ನು ಹಸ್ತಾಂತರಿಸಿದ್ದೇವೆ. ಆದರೆ ಮುಂದೆಯೂ ಹೊರಗಿನಿಂದ ನಿಂತು ಸಂಸ್ಥೆಯನ್ನು ಪ್ರೋತ್ಸಾಹಿಸುತ್ತೇವೆ. ಫ್ಲಿಪ್ ಕಾರ್ಟ್ ನಿಮ್ಮ ಉತ್ತಮ ಸೇವೆ ಮುಂದುವರೆಸಿ ಎಂದು ಹೇಳಿದ್ದಾರೆ.

    https://www.facebook.com/sachin.bansal/posts/10156303878255996

    ಸದ್ಯ ನಾವು ಸ್ವಲ್ಪ ಬಿಡುವಿನ ಸಮಯವನ್ನು ತೆಗೆದುಕೊಂಡಿದ್ದು, ಕೆಲ ವಯಕ್ತಿಕ ಯೋಜನೆಗಳನ್ನು ಪೂರ್ಣಗೊಳಿಸಲು ಈ ಅವಧಿಯಲ್ಲಿ ಗಮಹರಿಸುತ್ತೇವೆ. ಅಲ್ಲದೇ ಈ ಅವಧಿ ಮಕ್ಕಳು ಯಾವ ಆಟಗಳನ್ನು ಆಡುತ್ತಾರೆ ಎಂಬುದನ್ನು ನೋಡುತ್ತೇವೆ. ಈ ಅವಧಿಯಲ್ಲಿ ಪಡೆದ ಅದ್ಭುತ ಸಂಬಂಧಗಳನ್ನು ಮುಂದುವರೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    2007 ರಲ್ಲಿ ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದ್ದರು. ಸಂಸ್ಥೆ ಆರಂಭದಿಂದಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತಿತ್ತು. ಸಂಸ್ಥೆ ಮಾರಾಟ ಬಳಿಕ ಸಚಿನ್ ಬನ್ಸಾಲ್ ಹುದ್ದೆಯಿಂದ ಫ್ಲಿಪ್‍ಕಾರ್ಟ್ ನಿಂದ ನಿರ್ಗಮಿಸಿದ್ದಾರೆ. ಈ ಖರೀದಿಯಿಂದ ವಾಲ್‍ಮಾರ್ಟ್ ಮತ್ತು ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ದಿಗ್ಗಜ ಕಂಪೆನಿಗಳಾಗಲಿವೆ. ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ, ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ ಎನ್ನಲಾಗಿದೆ.

    ವಾಲ್ ಮಾರ್ಟ್ 500 ಬಿಲಿಯನ್ ಯುಎಸ್ ಡಾಲರ್(33.63 ಲಕ್ಷ ಕೋಟಿ ರೂ) ಮೌಲ್ಯದ ಅಮೆರಿಕದ ಕಂಪೆನಿಯಾಗಿದೆ. ಬಹಳ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಇದರ ವಿಶೇಷವಾಗಿದೆ.

  • ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

    ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

    ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಕಂಪೆನಿಯನ್ನು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಖರೀದಿಸಿದೆ

    20 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.34 ಲಕ್ಷ ಕೋಟಿ ರೂ) ಮೌಲ್ಯದ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಕಂಪೆನಿಯನ್ನು 16 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.07 ಲಕ್ಷ ಕೋಟಿ ರೂ) ಗಳಿಗೆ ವಾಲ್ ಮಾರ್ಟ್ ಖರೀದಿ ಮಾಡಿದೆ. ಕಂಪೆನಿಯ 77% ಷೇರನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ.

    ಅಮೆಜಾನ್ ಕಂಪೆನಿ ಕೂಡ ಫ್ಲಿಪ್‍ಕಾರ್ಟ್ ಖರೀದಿಸಲು ಪ್ರಯತ್ನಿಸಿತ್ತು. ಅಂತಿಮವಾಗಿ ಫ್ಲಿಪ್‍ಕಾರ್ಟ್ ಆಡಳಿತ ಮಂಡಳಿಯು ವಾಲ್‍ಮಾರ್ಟ್ ಅನ್ನು ಆಯ್ಕೆ ಮಾಡಿದೆ. ವಾಲ್‍ಮಾರ್ಟ್ ಹಾಗೂ ಅಮೆಜಾನ್ ಎರಡೂ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿವೆ.

    2007 ರಲ್ಲಿ ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದ್ದರು. ಸಂಸ್ಥೆ ಆರಂಭದಿಂದಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತಿತ್ತು.

    ಸಚಿನ್ ಬನ್ಸಾಲ್ ಹುದ್ದೆಯಿಂದ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಖರೀದಿಯಿಂದ ವಾಲ್‍ಮಾರ್ಟ್ ಮತ್ತು ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ದಿಗ್ಗಜ ಕಂಪೆನಿಗಳಾಗಲಿವೆ. ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ, ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ ಎನ್ನಲಾಗಿದೆ.

    ವಾಲ್ ಮಾರ್ಟ್ 500 ಬಿಲಿಯನ್ ಯುಎಸ್ ಡಾಲರ್(33.63 ಲಕ್ಷ ಕೋಟಿ ರೂ) ಮೌಲ್ಯದ ಅಮೆರಿಕದ ಕಂಪೆನಿಯಾಗಿದೆ. ಬಹಳ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಇದರ ವಿಶೇಷ. ಇಷ್ಟು ದಿನ ಪ್ಲಿಪ್ ಕಾರ್ಟ್ ಗೆ ಸರಬರಾಜು ಮಾಡುತ್ತಿದ್ದ ವರ್ತಕರು ಈ ಖರೀದಿಯಿಂದ ವ್ಯಾಪಾರವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವಾಲ್‍ಮಾರ್ಟ್ ತನ್ನದೇ ಬ್ರಾಂಡ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಚಿಂತೆಗೀಡಾಗಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ವಾಲ್‍ಮಾರ್ಟ್ ಪ್ರಯತ್ನಿಸುತ್ತಿತ್ತು. ವಿದೇಶಿ ನೇರ ಬಂಡವಾಳದ ಕಾನೂನಿನಿಂದಾಗಿ ಸಾಧ್ಯವಾಗಿರಲಿಲ್ಲ. ಹೋಲ್ ಸೇಲ್ ವ್ಯಾಪಾರಕ್ಕೆ ಸೀಮಿತವಾಗಿ 21 ಹೋಲ್ ಸೇಲ್ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿತ್ತು. ಭಾರತದ ಮಾರುಕಟ್ಟೆಗೆ ಬರಲು ಮತ್ತು ತನ್ನ ಪ್ರತಿಸ್ಪರ್ಧಿ ಅಮೆರಿಕದ ಅಮೆಜಾನ್ ಗೆ ಸೆಡ್ಡು ಹೊಡೆಯಲು ಫ್ಲಿಪ್‍ಕಾರ್ಟ್ ಖರೀದಿ ವಾಲ್ಮಾರ್ಟ್ ಭಾರೀ ಸಹಾಯವಾಗಲಿದೆ

    ಭಾರತದಲ್ಲಿ ಚಿಲ್ಲರೆ ವ್ಯಾಪಾರವು ಈಗಿರುವ 1.3 ಟ್ರಿಲಿಯನ್ ಡಾಲರ್(87451 ಕೋಟಿ ರೂ) ಗಳಿಂದ 2027ಕ್ಕೆ 3.6 ಟ್ರಿಲಿಯನ್ ಡಾಲರ್(2.42 ಲಕ್ಷ ಕೋಟಿ ರೂ) ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.