Tag: wall collapse

  • ಖಾನಪೂರದಲ್ಲಿ ಗೋಡೆ ಬಿದ್ದು ಬಾಲಕನ ಸಾವು – 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಡಿಸಿ

    ಖಾನಪೂರದಲ್ಲಿ ಗೋಡೆ ಬಿದ್ದು ಬಾಲಕನ ಸಾವು – 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಡಿಸಿ

    ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಬಾಲಕನಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಐದು ಲಕ್ಷ ಪರಿಹಾರ ನೀಡಿದ್ದಾರೆ.

    ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದ ಅನಂತರಾಜ ಧರಣೇಂದ್ರ ಪಾಶೆಟ್ಟಿ(15) ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದನು. ಬಾಲಕ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಆರ್.ಟಿ.ಜಿ.ಎಸ್ ಮೂಲಕ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಇದನ್ನೂ ಓದಿ: ಗೋಡೆ ಕುಸಿತ – 15 ವರ್ಷದ ಬಾಲಕ ಸ್ಥಳದಲ್ಲೆ ಸಾವು

    ಪ್ರಕೃತಿ ವಿಕೋಪದಿಂದ ಈ ಘಟನೆ ಸಂಭವಿಸಿರುವ ಹಿನ್ನೆಲೆ ನಿಯಮಾವಳಿ ಪ್ರಕಾರ ಮೃತ ಬಾಲಕನ ತಂದೆ ಧರಣೇಂದ್ರ ಪಾಶೆಟ್ಟಿ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಖಾನಾಪುರ ತಹಶೀಲ್ದಾರರ ಪಿ.ಡಿ. ಖಾತೆಯಿಂದ ಜಮಾ ಮಾಡಲಾಗಿದೆ. ದುರಂತದ ಕುರಿತು ವರದಿಯನ್ನು ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರಧನವನ್ನು ನೀಡುವ ಮೂಲಕ ಜಿಲ್ಲಾಡಳಿತ ಅತ್ಯಂತ ತ್ವರಿತವಾಗಿ ಸ್ಪಂದಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ದುರ್ಮರಣ

    ಮದುವೆ ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ದುರ್ಮರಣ

    ಲಕ್ನೋ: ಮದುವೆ ಮನೆ ಗೋಡೆ ಕುಸಿದು 5 ವರ್ಷದ ಮಗು ಸೇರಿ ಮೂವರು ಧಾರುಣ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಸರೋಜಿನಿ ನಗರ ಪೊಲೀಸ ವೃತ್ತದ ಬಳಿಯ ಬಜ್ನೋರ್‌ನಲ್ಲಿ ನಡೆದಿದೆ.

    ಗುರುವಾರ ರಾತ್ರಿ ನಡೆದ ದುರ್ಘಟನೆಯಲ್ಲಿ 5 ವರ್ಷದ ಶ್ರದ್ಧಾ ಎಂಬ ಮಗು ಮೃತಪಟ್ಟಿದೆ. ಘಟನೆಯಲ್ಲಿ 34 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಗಲಭೆ ಪ್ರಕರಣಕ್ಕೆ ಟ್ವಿಸ್ಟ್ – ಇಡಿಗೆ ಪತ್ರ ಬರೆದ ದೆಹಲಿ ಪೊಲೀಸ್ ಆಯುಕ್ತ

    ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಮದುವೆ ಮನೆಯಲ್ಲಿ ಎಲ್ಲರೂ ಊಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

    ಇದ್ದಕ್ಕಿದ್ದಂತೆ ಗೋಡೆ ಮತ್ತು ಬಾಲ್ಕನಿ ಕುಸಿದು ಬಿದ್ದು ಹೀಗಾಯಿತು ಎಂದು ಘಟನೆಯ ಪ್ರತ್ಯಕ್ಷದರ್ಶಿ ಅನಿಕೇತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ಉಚಿತ

  • ಶೌಚಾಲಯದ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ದುರ್ಮರಣ

    ಚೆನ್ನೈ: ಖಾಸಗಿ ಶಾಲೆಯೊಂದರಲ್ಲಿ ಶೌಚಾಲಯದ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಶಾಫ್ಟರ್ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಇನ್ನುಳಿದ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಮರ ಕಳ್ಳತನ

    ಘಟನೆಯ ಬಳಿಕ ಪೊಲೀಸರು, ರಕ್ಷಣೆ ಸಿಬ್ಬಂದಿ ಹಾಗೂ ಜಿಲ್ಲಾಧಿಕಾರಿ ಬಂದು ಪರಿಶೀಲನೆ ನಡೆಸಿದ್ದು, ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದ ರಭಸಕ್ಕೆ ಗೋಡೆಯ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

  • ಭಾರೀ ಮಳೆಗೆ ಗೋಡೆ ಕುಸಿತ – ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸಾವು

    ಭಾರೀ ಮಳೆಗೆ ಗೋಡೆ ಕುಸಿತ – ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸಾವು

    ಚೆನ್ನೈ: ಭಾರೀ ಮಳೆಗೆ ಗೋಡೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆರು ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

    ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆನರ್ಂಪಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆ ಕುರಿತಂತೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೆನರ್ಂಪಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ಘಟನೆ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಮರತಪಟ್ಟ 9 ಮಂದಿ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಕಳೆದೊಂದು ವಾರದಿಂದ ತಮಿಳುನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ಶುಕ್ರವಾರವೂ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲಾ – ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ.

  • ಪಕ್ಕದ ಮನೆ ಗೋಡೆ ಕುಸಿದು ದಂಪತಿ ಸಾವು

    ಪಕ್ಕದ ಮನೆ ಗೋಡೆ ಕುಸಿದು ದಂಪತಿ ಸಾವು

    ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ತುಂತುರು ಮಳೆಯ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಗೋಡೆ ಕುಸಿತಗೊಂಡು ದಂಪತಿ ಸಾವನ್ನಪ್ಪಿದ್ದಾರೆ.

    chitradurga

    ಹಿರಿಯೂರು ತಾಲೂಕಿನ ಕಾರೋಬನಹಳ್ಳಿಯಲ್ಲಿ ಘಟನೆ ನಡೆದಿದ್ದು, ಚನ್ನಕೇಶವ (26) ಮತ್ತು ಸೌಮ್ಯ (21) ಮೃತ ದುರ್ದೈವಿಗಳು. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಗೋಡೆ ತೇವಗೊಂಡಿದ್ದು, ಮನೆಯ ಗೋಡೆ ಕುಸಿತಗೊಂಡಿದೆ. ಇದು ಪಕ್ಕದ ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಅದರಲ್ಲಿ ವಾಸವಾಗಿದ್ದ ಚನ್ನಕೇಶವ ಮತ್ತು ಸೌಮ್ಯ ಮೃತಪಟ್ಟಿದ್ದಾರೆ.

    ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

  • ಮಳೆಯಿಂದ ಗೋಡೆ ಕುಸಿತ- ಬಾಲಕ ಸಾವು, ತಾಯಿ ಪಾರು

    ಮಳೆಯಿಂದ ಗೋಡೆ ಕುಸಿತ- ಬಾಲಕ ಸಾವು, ತಾಯಿ ಪಾರು

    ಕೋಲಾರ: ರಾಜ್ಯದ ಬಹುತೇಕ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಭಾರೀ ಅನಾಹುತಗಳನ್ನು ಸೃಷ್ಟಿಸುತ್ತಿದ್ದು, ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಾಲಕ ಸಾವನ್ನಪ್ಪಿದ್ದಾನೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಾಲಕ ಹರೀಶ್ (13) ಮೃತಪಟ್ಟಿದ್ದಾನೆ. ರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ತೇವಗೊಂಡಿದ್ದು, ಇದರಿಂದಾಗಿ ಒಮ್ಮೆಲೆ ಕುಸಿದು ಬಿದ್ದಿದೆ. ಮನೆಯಲ್ಲೇ ಮಲಗಿದ್ದ ಬಾಲಕನ ಮೇಲೆ ಗೋಡೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾನೆ. ಬಾಲಕನ ತಾಯಿ ಆನಂದಮ್ಮಗೂ ತೀವ್ರ ಗಾಯಗಳಾಗಿವೆ.

    ಇಟ್ಟಿಗೆಯ ಹಳೆಯ ಗೋಡೆಯಾಗಿದ್ದರಿಂದ ತೇವಗೊಂಡು ಕುಸಿದು ಬಿದ್ದಿದೆ. ಮಲಗಿದ್ದಾಗ ಬಿದ್ದಿದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ. ತೀವ್ರ ಗಾಯಗೊಂಡಿರುವ ಆನಂದಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಳೆಗೆ ಗೋಡೆ ಕುಸಿತ – ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ

    ಮಳೆಗೆ ಗೋಡೆ ಕುಸಿತ – ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ

    – ಕುರಿ ಶೆಡ್‍ನಲ್ಲಿ ವಾಸವಿದ್ದ ವೃದ್ಧ ದಂಪತಿ

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಗೆ ಕುರಿ ಶೆಡ್‍ನ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದು, ವೃದ್ಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಜೂಲಪಾಳ್ಯದಲ್ಲಿ ನಡೆದಿದೆ.

    ಗ್ರಾಮದ ಸಾಲಮ್ಮ (56) ಮೃತ ವೃದ್ಧೆ ಹಾಗೂ ಸಾಲಮ್ಮ ಪತಿ 70 ವರ್ಷದ ನರಸಿಂಹಯ್ಯ ಗಾಯಗೊಂಡವರು. ಅಂದಹಾಗೆ ಮನೆಯಿಲ್ಲದ ಬಡ ದಂಪತಿಯಾದ ಸಾಲಮ್ಮ-ನರಸಿಂಹಯ್ಯ ಕುರಿಗಳನ್ನು ಸಾಕುತ್ತಿದ್ದ ಶೆಡ್‍ನಲ್ಲಿ ವಾಸ ಮಾಡುತ್ತಿದ್ದರು.

    ಸಾಕಷ್ಟು ಹಳೆಯದಾದ ಕಲ್ಲಿನ ಮೇಲ್ಚಾವಣಿಯ ಕುರಿ ಶೆಡ್‍ಗೆ ಇಟ್ಟಿಗೆ ಗೋಡೆಯಿದ್ದು, ಸಾಕಷ್ಟು ಹಳೆಯದಾದ ಗೋಡೆ ಮಳೆಯಿಂದ ಕುಸಿತಗೊಂಡಿದೆ. ಪರಿಣಾಮ ದಂಪತಿ ಇಬ್ಬರು ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾಲಮ್ಮ ತೀರಿಕೊಂಡಿದ್ದು, ತಾತ ನರಸಿಂಹಯ್ಯ ಬೆನ್ನು ಮೂಳೆ ಹಾಗೂ ಕಾಲು ಮುರಿತವಾಗಿ ಹಾಸಿಗೆ ಹಿಡಿದಿದ್ದಾರೆ. ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಮಳೆಯಿಂದ ಕುಸಿದ ಮನೆಯ ಗೋಡೆ – ಸಂಕಟಕ್ಕೆ ಸಿಲುಕಿದ ಬಡ ಕುಟುಂಬ

    ಹಾಸನ: ಮಳೆಯಿಂದ ಮನೆಯ ಗೋಡೆ ಕುಸಿತವಾಗಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

    ಶ್ರೀಕಂಠನಗರದಲ್ಲಿ ಮಂಜುಳಮ್ಮ ಎಂಬುವವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಇರಲು ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲದ ಮಂಜುಳಮ್ಮ ಗಾರೆ ಕೆಲಸ ಮಾಡಿಕೊಂಡು ಇಬ್ಬರು ಹೆಣ್ಣು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.

    ಲಾಕ್‍ಡೌನ್ ನಂತರ ಸರಿಯಾಗಿ ಕೂಲಿ ಕೆಲಸ ಕೂಡ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆಯಿಂದ ಮನೆಗೋಡೆ ಕುಸಿದಿದ್ದು, ಇಡೀ ಕುಟುಂಬ ಸಂಕಟಕ್ಕೆ ಸಿಲುಕಿದೆ. ಅದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಸರ್ಕಾರದಿಂದ ಧನ ಸಹಾಯ ಮಾಡಿಸುವಂತೆ ಮನೆ ಹಾನಿಗೊಳಗಾದವರು ಮನವಿ ಮಾಡಿದ್ದಾರೆ.

  • ಶಾಲಾ ಗೋಡೆ ಕುಸಿತ – ಪ್ರಾರ್ಥನೆಯಿಂದ ತಪ್ಪಿತು ಭಾರೀ ಅನಾಹುತ

    ಶಾಲಾ ಗೋಡೆ ಕುಸಿತ – ಪ್ರಾರ್ಥನೆಯಿಂದ ತಪ್ಪಿತು ಭಾರೀ ಅನಾಹುತ

    ಹಾಸನ: ಶಾಲಾ ಕಟ್ಟಡದ ಬೃಹತ್ ಗಾತ್ರದ ಗೋಡೆ ಕುಸಿದು ಭಾರೀ ಅನಾಹುತವೊಂದು ತಪ್ಪಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೆನ್ನೇನಹಳ್ಳಿಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ವಿದ್ಯಾರ್ಥಿಗಳು ಪ್ರಾರ್ಥನೆಗೆ ಸೇರಿದ ಸಮಯದಲ್ಲಿ ಶಿಥಿಲವಾದ ಕಟ್ಟಡದ ಹತ್ತು ಅಡಿಗಿಂತಲೂ ಉದ್ದದ ಬೃಹತ್ ಗೋಡೆ ನೋಡನೋಡುತಿದ್ದಂತೆ ಕುಸಿದು ಬಿದ್ದಿದೆ. ಬೆಳಗ್ಗೆ ಸರಿಯಾಗಿ ಶಾಲಾ ಪ್ರಾರ್ಥನೆ ನಡೆಸುವ ಸಂದರ್ಭದಲ್ಲಿ ಗೋಡೆ ಕುಸಿದಿರುವುದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

    ಸದ್ಯ ವಿದ್ಯಾರ್ಥಿಗಳು ಇನ್ನೂ ಕಟ್ಟಡದ ಒಳಕ್ಕೆ ಹೋಗಿರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಶಿಥಿಲಗೊಂಡಿರುವ ಕೊಠಡಿಯಲ್ಲೇ ವಿದ್ಯಾರ್ಥಿಗಳು ಅನಿವಾರ್ಯ ವಾಗಿ ಪಾಠ ಕೇಳುವ ಪರಿಸ್ಥಿತಿ ಇದೆ. ಈ ಹಿಂದೆ ಹಿರಿಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಹಲವು ಬಾರಿ ವಿಷಯ ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಇದಾಗಿದ್ದು ಒಟ್ಟು ಇಪ್ಪತ್ತೈದು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕಟ್ಟಡ ಮಾಡಿಕೊಡುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಚಾಮರಾಜನಗರ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರದ ದೇಶೀಗೌಡನಪುರ ಗ್ರಾಮದ ವೀರಭದ್ರಸ್ವಾಮಿ(4) ಮೃತಪಟ್ಟ ಮಗು. ಭಾರೀ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ವೀರಭದ್ರಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ ತಂದೆ ಮಲ್ಲೇಶ್ ಮತ್ತು ತಾಯಿ ಚೆನ್ನಮ್ಮ ಅವರಿಗೂ ಗಂಭೀರ ಗಾಯಗಳಾಗಿದೆ.

    ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಮವಾರ ರಾತ್ರಿ ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ದಿಢೀರನೇ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ-ತಾಯಿಗೆ ತಮ್ಮ ಮಗು ಮೃತಪಟ್ಟಿರುವ ವಿಷಯವೇ ತಿಳಿದಿಲ್ಲ ಎನ್ನಲಾಗಿದೆ.

    ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೋಮವಾರ ಸಂಜೆ ವೇಳೆಗೆ ದಿಢೀರ್ ಎಂದು ಭಾರೀ ಮಳೆಯಾಗಿದೆ. ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಮೈಸೂರು ಸರ್ಕಲ್, ಸಂಜಯ್ ನಗರ, ಯಶವಂತಪುರ, ಕೋರಮಂಗಲ, ಹೆಬ್ಬಾಳ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಿದೆ.