Tag: walk

  • ಆಸ್ಪತ್ರೆಗೆ ತಲುಪಲು 7 ಕಿಮೀ ನಡೆದುಕೊಂಡು ಹೋದ ಗರ್ಭಿಣಿ – ಬಿಸಿಲಿನ ತಾಪಕ್ಕೆ ಸಾವು

    ಆಸ್ಪತ್ರೆಗೆ ತಲುಪಲು 7 ಕಿಮೀ ನಡೆದುಕೊಂಡು ಹೋದ ಗರ್ಭಿಣಿ – ಬಿಸಿಲಿನ ತಾಪಕ್ಕೆ ಸಾವು

    ಮುಂಬೈ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಮನೆಗೆ ಹಿಂದಿರುಗಲು ಗ್ರಾಮದಿಂದ 7 ಕಿಮೀ ನಡೆದುಕೊಂಡು (Walk) ಬರುತ್ತಿದ್ದ ಗರ್ಭಿಣಿಯೊಬ್ಬಳು (Pregnant) ಸೂರ್ಯನ ಶಾಖಕ್ಕೆ (Heat Stroke) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಸಾವನ್ನಪ್ಪಿದ ಮಹಿಳೆ. ಈಕೆ 3.5 ಕಿ.ಮೀ ನಡೆದು ಅಲ್ಲಿಂದ ಆಟೋದಲ್ಲಿ ಪ್ರಾಥಮಿಕ ಕೇಂದ್ರಕ್ಕೆ ತೆರಳಿದ್ದಾಳೆ.

    9ನೇ ತಿಂಗಳಿನಲ್ಲಿದ್ದ ಮಹಿಳೆಗೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಆಕೆ ಬಿಸಿಲಿನಲ್ಲಿ 3.5 ಕಿಮೀ ಪುನಃ ನಡೆದುಕೊಂಡು ಬಂದಿದ್ದಾಳೆ. ಇದನ್ನೂ ಓದಿ: 12 ವಿದ್ಯಾರ್ಥಿನಿಯರಿಗೆ ಕಿರುಕುಳ – ಶಿಕ್ಷಕ ಅರೆಸ್ಟ್

    ಅದಾದ ಬಳಿಕ ಸಂಜೆಯ ನಂತರ ಸೋನಾಲಿಗೆ ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಿಸಿಲಿನ ಶಾಖದಿಂದಾಗಿ ಆಕೆಗೆ ಅನಾರೋಗ್ಯ ಉಂಟಾಗಿದೆ ಎಂದು ದೃಢಪಡಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಜೊತೆಗೆ ಹೊಟ್ಟೆಯಲ್ಲಿರುವ ಮಗುವು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಹಣವಿಲ್ಲದ್ದಕ್ಕೆ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಬಸ್‍ನಲ್ಲೇ ಕ್ರಮಿಸಿದ ತಂದೆ

  • CWG 2022: ನಡಿಗೆ, ಜಾವೆಲಿನ್‌ನಲ್ಲಿ ಭಾರತಕ್ಕೆ ಕಂಚು

    CWG 2022: ನಡಿಗೆ, ಜಾವೆಲಿನ್‌ನಲ್ಲಿ ಭಾರತಕ್ಕೆ ಕಂಚು

    ಲಂಡನ್: 22ನೇ ಕಾಮನ್‌ವೆಲ್ತ್ ಕ್ರಿಡಾಕೂಟ ಪ್ರಾರಂಭವಾಗಿ ಇಂದು 10ನೇ ದಿನವಾಗಿದ್ದು, ಭಾರತೀಯ ಕ್ರೀಡಾಪಟುಗಳು ಒಂದಾದಮೇಲೊಂದರಂತೆ ಪದಕಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಇದೀಗ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ ಹಾಗೂ ಮಹಿಳೆಯರ ಜಾವೆಲಿನ್ ಸ್ಪರ್ಧೆಯಲ್ಲಿ ಅನು ರಾಣಿ ಕಂಚನ್ನು ಗೆದ್ದಿದ್ದಾರೆ.

    ಸಂದೀಪ್ ಕುಮಾರ್ ಅವರು ಪುರುಷರ 10,000 ಮೀ. ಫೈನಲ್ ವಾಕ್ ರೇಸ್‌ನಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಸಂದೀಪ್ ಕಾಮನ್‌ವೆಲ್ತ್ ಗೇಮ್ಸ್ 2022ರ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಬೆಳ್ಳಿ

    ಶನಿವಾರವಷ್ಟೇ ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಗೆದ್ದಿದ್ದರು. ಇಂದು ಪುರುಷರ ನಡಿಗೆ ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ 10,000 ಮೀ. ಅನ್ನು ಕೇವಲ 28:49.21 ಸಮಯದಲ್ಲಿ ಕ್ರಮಿಸಿ ಕಂಚನ್ನು ಬಾಚಿಕೊಂಡಿದ್ದಾರೆ.

    ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅನು ರಾಣಿ ಪಾತ್ರರಾಗಿದ್ದಾರೆ. 60 ಮೀ. ದೂರಕ್ಕೆ ಜಾವೆಲಿನ್ ಎಸೆದ ಅನು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

    Live Tv
    [brid partner=56869869 player=32851 video=960834 autoplay=true]

  • ಮಧ್ಯರಾತ್ರಿ ಮಚ್ಚು ಹಿಡಿದು ಬಾಗಿಲು ಬಡಿಯುವ ವ್ಯಕ್ತಿ

    ಮಧ್ಯರಾತ್ರಿ ಮಚ್ಚು ಹಿಡಿದು ಬಾಗಿಲು ಬಡಿಯುವ ವ್ಯಕ್ತಿ

    – ಬೆಚ್ಚಿಬಿದ್ದ ಲಿಂಗಸುಗೂರು ಜನತೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ನಗರದ ವಿವೇಕಾನಂದ ಬಡಾವಣೆಯ ಜನ ಅಪರಿಚಿತ ವ್ಯಕ್ತಿಯ ವಿಲಕ್ಷಣ ವರ್ತನೆಗೆ ಬೆಚ್ಚಿಬಿದ್ದಿದ್ದಾರೆ.

    ಅಪರಿಚಿತ ವ್ಯಕ್ತಿ ಮಧ್ಯರಾತ್ರಿ ಮಚ್ಚು ಹಿಡಿದು ಮನೆಗಳ ಬಾಗಿಲು ಬಡಿಯುತ್ತಿದ್ದಾನೆ. ಈ ವಿಲಕ್ಷಣ ನಡವಳಿಕೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಲಿಂಗಸುಗೂರು ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಕಳೆದೆರಡು ದಿನಗಳಿಂದ ವಿವಿಧ ಏರಿಯಾಗಳಲ್ಲಿ ರಾತ್ರಿ ಮಚ್ಚು ಹಿಡಿದು ವ್ಯಕ್ತಿ ತಿರುಗಾಟ ನಡೆಸಿದ್ದಾನೆ. ಇದನ್ನೂ ಓದಿ: ಆಪರೇಷನ್‌ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್

    ಸಿಸಿ ಟಿವಿ ವೀಡಿಯೋ ನೋಡಿ ಭಯಭೀತರಾದ ಜನ, ರಾತ್ರಿ ನಿದ್ದೆಗೆಡಿಸಿಕೊಂಡಿದ್ದಾರೆ. ಬಡಾವಣೆಯಲ್ಲಿ ಈಗಾಗಲೇ ಒಂದು ಮನೆ ಕಳ್ಳತನವಾಗಿದೆ. ಮನೆ ಬಾಗಿಲು ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹೀಗಾಗಿ ಜನರಿಗೆ ಭಯ ಶುರುವಾಗಿದೆ.

    ಮಚ್ಚು ಹಿಡಿದು ರಾತ್ರಿ ಗಸ್ತು ತಿರುಗುವ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಹೀಗಾಗಿ ಭಯಭೀತರಾಗಿರುವ ಜನ ಅಪರಿಚಿತ ವ್ಯಕ್ತಿಯ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ರಣಬಿಸಿಲಲ್ಲಿ ಒಂದು ತಿಂಗಳ ಹಸುಗೂಸು ಹೊತ್ತು 2 ಕಿ.ಮೀ ನಡೆದ ತಾಯಿ

    ರಣಬಿಸಿಲಲ್ಲಿ ಒಂದು ತಿಂಗಳ ಹಸುಗೂಸು ಹೊತ್ತು 2 ಕಿ.ಮೀ ನಡೆದ ತಾಯಿ

    ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ತಿಂಗಳ ಮಗವಿಗೆ ಚಿಕಿತ್ಸೆ ಕೊಡಿಸಲೆಂದು ತಾಯಿಯೊಬ್ಬರು ಎರಡು ಕಿಲೋಮೀಟರ್ ನಡೆದುಕೊಂಡು ಬಂದು ಮಗುವಿಗೆ ಚಿಕಿತ್ಸೆ ಕೊಡಿಸಿದ ಘಟನೆ ಮಡಿಕೇರಿ ನಗರದಲ್ಲಿ ಇಂದು ನಡೆದಿದೆ.

    ಲಾಕ್‍ಡೌನ್ ಆಗಿದ್ದ ಪರಿಣಾಮ ಮಡಿಕೇರಿ ನಗರದಲ್ಲಿ ವಾಹನಗಳ ಸಂಚಾರ ಇಲ್ಲದೇ ನಗರದ ಮಹದೇವಪೇಟೆಯಿಂದ ಖಾಸಗಿ ಆಸ್ಪತ್ರೆಗೆ ಬಾಣಂತಿಯನ್ನು ಅವರ ತಾಯಿ ಕರೆದುಕೊಂಡು ಹೋಗಿದ್ದಾರೆ.

    ವಾಹನಗಳು ಯಾವುದು ಇರದ ಕಾರಣ ಸುಡುವ ಬಿಸಿಲಲ್ಲೇ ಮಗುವನ್ನು ಹೊತ್ತುಕೊಂಡು ಸಾಗಿದ್ದು, ರಶ್ಮಿ ಅವರೊಂದಿಗೆ ಅವರು ತಾಯಿ ಚಿಕಿತ್ಸೆಗಾಗಿ ಸಂಕಷ್ಟ ಎದುರಿಸಿದ್ದಾರೆ.

    ಹಸುಗೂಸುನ್ನು ಹೊತ್ತು ನಡೆದ ತಾಯಿಯ ಪರಿಸ್ಥಿತಿಯನ್ನು ಕಂಡು ಕರುಳು ಹಿಂಡಿ ಬರುವಂತಿತ್ತು. ಲಾಕ್‍ಡೌನ್ ಆಗಿರುವುದರಿಂದ ಜಿಲ್ಲೆಯಲ್ಲಿ ಇರುವ ಪೊಲೀಸರು ಕಟ್ಟಿನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವ ಪರಿಣಾಮದಿಂದ ತುರ್ತುಸೇವೆಗಳಿಗೆ ಬರಲು ಕೂಡ ಅಟೋ ಚಾಲಕರು ಹಿಂದೆಟ್ಟು ಹಾಕಿದರು. ಹೀಗಾಗಿ ಎರಡು ಕಿಲೋಮೀಟರ್ ಹಸುಗೂಸನ್ನು ಹೊತ್ತು ನಡೆಯುವ ಪರಿಸ್ಥಿತಿ ಒದಗಿಬಂತು ಎಂದು ನೋವಿನಲ್ಲೇ ಬಾಣಂತಿ ರಶ್ಮಿ ಹೇಳಿದ್ದಾರೆ

  • ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಮನೆಯಲ್ಲಿ ಶೈನ್ ಆಗುತ್ತಿರುವ ಶಮಂತ್!

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದ ಎಲ್ಲ ಸದಸ್ಯರು ಒಂದೊಂದು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲರ ಮಧ್ಯೆ ಡಿಫರೆಂಟ್ ಆಗಿ ‘ಬಾ ಗುರು’ ಡೈಲಾಗ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆಗಿದ್ದ ಶಮಂತ್ ಕೂಡ ಒಬ್ಬರು.

    ಹಲವಾರು ಪ್ರತಿಭೆ ಹೊಂದಿರುವ ‘ಬ್ರೋ ಗೌಡ’ ಶಮಂತ್ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದಲೂ ಆದ್ಯಾಕೋ ಸೈಲೆಂಟ್ ಆಗಿದ್ದರು. ಹೀಗಾಗಿ ಮನೆಯ ಎಲ್ಲ ಸ್ಪರ್ಧಿಗಳು ಶಮಂತ್ ಮಾತನಾಡುವುದಿಲ್ಲ, ಸೈಲೆಂಟ್, ಬೆರೆಯುವುದು ಕಡಿಮೆ ಹೀಗೆ ಹಲವಾರು ರೀಸನ್ ಹೇಳುತ್ತಿದ್ದರು. ಆದ್ರೆ ಇದೀಗ ಮನೆಯ ಎಲ್ಲಾ ಸದಸ್ಯರ ಆರೋಪಗಳಿಗೆ ಸೆಡ್ಡು ಹೊಡೆಯುವಂತೆ ಶಮಂತ್ ಈ ವಾರ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಯೆಸ್, ಇಷ್ಟು ದಿನ ಸೈಲೆಂಟ್ ಆಗಿದ್ದ ಶಮಂತ್ ಇದೀಗ ರೊಚ್ಚಿಗೆದ್ದು ನಾನು ಯಾರಿಗೂ ಕಡಿಮೆ ಇಲ್ಲ ಎಂಬುವಂತೆ ಎಂರ್ಟಟೈನ್ ಮೆಂಟ್ ನೀಡಲು ಸ್ಟಾರ್ಟ್ ಮಾಡಿದ್ದಾರೆ. ನಿನ್ನೆ ಶಮಂತ್ ಬೆಡ್ ರೂಮ್ ಏರಿಯಾದಲ್ಲಿ ಮನೆಯ ಕೆಲವು ಮಂದಿ ಹೇಗೆ ನಡೆಯುತ್ತಾರೆ ಎಂಬುವುದನ್ನು ಅಭಿನಯ ಮಾಡಿ ತೋರಿಸಿದ್ದಾರೆ.

    ಮೊದಲಿಗೆ ವೈಷ್ಣವಿ ನಡಿಗೆ ತೋರಿಸಿದ ಶಮಂತ್, ಬಳಿಕ ನಿಧಿ ಕೈ ಕಟ್ಟಿ ನಡೆದುಕೊಂಡು ಹೋಗುವಂತೆ ನಡೆಯುತ್ತಾರೆ. ನಂತರ ಚಕ್ರವರ್ತಿ ಜೇಬಿನಲ್ಲಿ ಕೈ ಹಿಡಿದುಕೊಂಡು ನಡೆದುಕೊಂಡು ಹೋಗುವಂತೆ ಹೋಗುತ್ತಾರೆ. ಇದಾದ ಬಳಿಕ ಅರವಿಂದ್, ಪ್ರಶಾಂತ್ ಸಂಬರ್ಗಿ, ಮಂಜು, ವಿಶ್ವನಾಥ್, ಶುಭ ಪೂಂಜಾ ನಡೆಯುವುದನ್ನು ತೋರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಎಕೋ ವಾಯ್ಸ್‍ನಲ್ಲಿ ಮಾತನಾಡುವ ಮೂಲಕ ಮನೆಯ ಸದಸ್ಯರ ಮನಗೆದ್ದಿದ್ದರು.

    ಒಟ್ಟಾರೆ ಎಲೆಮರಿ ಕಾಯಿಯಂತೆ ಪ್ರತಿಭೆಗಳನ್ನು ತಮ್ಮಳೊಗೆ ಅಡವಿಸಿಕೊಂಡಿದ್ದ ಶಮಂತ್ ಇದೀಗ ಗರಿಗೆದರಿದ ನವಿಲಿನಂತೆ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  • ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    – ಬಿಯರ್ ಬಾಟಲ್, ಇಟ್ಟಿಗೆಯಿಂದು ಹೊಡೆದು ಕೊಂದ್ರು

    ಚಂಡೀಗಢ: ರಾತ್ರಿ ವೇಳೆ ಪತ್ನಿ ಹಾಗೂ ತಂದೆಯ ಜೊತೆ ಮನೆಯ ಹೊರಗೆ ವಾಕ್ ಹೋದವ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಶವವಾದ ಘಟನೆ ಪಂಜಾಬ್‍ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಬಿಹಾರ ಮೂಲದ ಮಿಥುನ್ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪಟಿಯಾಲ ಜಿಲ್ಲೆಯ ಶಂಕರ್‍ಪುರ ಗ್ರಾಮದ ಜಗಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ಘಟನೆಯ ನಂತರ ಪರಾರಿಯಾಗಿದ್ದಾರೆ.

    ಘಟನೆ ನಡೆದಾಗ ಸ್ಥಳದಲ್ಲೇ ಇದ್ದ ಮಿಥುನ್ ತಂದೆ ಮಾತನಾಡಿ, ನಾನು, ನನ್ನ ಮಗ ಮತ್ತು ಆತನ ಪತ್ನಿ ಊಟದ ನಂತರ ಸುಮಾರು 12 ಗಂಟೆಗೆ, ಗುರುದ್ವಾರದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದೇವೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು, ಈ ಸಮಯದಲ್ಲಿ ಹುಡುಗಿಯ ಜೊತೆ ಇಲ್ಲಿ ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೇ ಮಾಡಿದರು. ಆಗ ಮಿಥುನ್ ಆಕೆ ನನ್ನ ಪತ್ನಿ ಎಂದು ಹೇಳಿದ. ಆಗ ವಾಗ್ವಾದ ನಡೆದು ಓರ್ವ ಮಿಥುನ್‍ಗೆ ಬಾಟಲಿಯಲ್ಲಿ ಹೊಡೆದ ನಂತರ ಇಬ್ಬರು ಸೇರಿ ಕಲ್ಲು ಇಟ್ಟಿಗೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ, ಮಿಥುನ್ ತನ್ನ ತಂದೆ ಮತ್ತು ಪತ್ನಿಯ ಜೊತೆಗೆ ಪಾಟಿಯಾಲದ ಕಾರ್ಖಾನೆ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ. ಜೊತೆಗೆ ಆತನನ್ನು ಬಿಯರ್ ಬಾಟಲ್, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಿಥುನ್ ಅನ್ನು ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

    ಈ ಸಂಬಂಧ ಗ್ರೇನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಇನ್ಸ್ ಸ್ಪೆಕ್ಟರ್ ಗುರ್ನಮ್ ಸಿಂಗ್, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಅವರು ಘಟನೆಯ ನಂತರ ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

    ರಾಯಚೂರು: ನಗರದ ಹತ್ತಿ ಮಿಲ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶದ ಕಾರ್ಮಿಕರು ಲಾಕ್‍ಡೌನ್ ಹಿನ್ನೆಲೆ ನಡೆದುಕೊಂಡೇ ತಮ್ಮ ಊರುಗಳಿಗೆ ಹೊರಟಿದ್ದಾರೆ.

    ಲಾಕ್‍ಡೌನ್ ನಿಂದ ಕಂಗಾಲಾದ ಸುಮಾರು 70 ಜನ ಕಾರ್ಮಿಕರು ಕೆಲಸವಿಲ್ಲದೆ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾರೆ. ಕುಟುಂಬ ಸಮೇತ ಗಂಟುಮೂಟೆ ಕಟ್ಟಿಕೊಂಡು ರಾಯಚೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ. ಮಕ್ಕಳು, ಮಹಿಳೆಯರು, ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೊರಟಿದ್ದಾರೆ.

    ಸರ್ಕಾರ ಸೇವಾಸಿಂಧು ವೈಬ್‍ಸೈಟ್ ಆರಂಭಿಸಿದ್ದರೂ ಇವರಿಗೆ ಅನುಕೂಲವಾಗಿಲ್ಲ. ಸಮಪರ್ಕ ಮಾಹಿತಿ ಇಲ್ಲದೆ ಕಂಗಾಲಾಗಿ ನಡೆದುಕೊಂಡೇ ಸ್ವಗಾಮಕ್ಕೆ ಹೊರಟಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಕೆಲಸವಿಲ್ಲದ ಕಾರಣಕ್ಕೆ ಊಟಕ್ಕೂ ತೊಂದರೆಯಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ನಡೆದುಕೊಂಡೇ ಹೊರಟಿರುವುದರಿಂದ ಸದ್ಯ ರಾಯಚೂರು ಜಿಲ್ಲಾಡಳಿತ ಕಾರ್ಮಿಕರನ್ನು ತಡೆದಿದೆ.

    ಸದ್ಯ ಊಟದ ವ್ಯವಸ್ಥೆ ಮಾಡಿದ್ದು, ಊರಿಗೆ ತೆರಳಲು ಅನುಕೂಲ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಕಾರ್ಮಿಕರು ರಾಯಚೂರಿನ ಚಿಕ್ಕಸುಗೂರು ಬಳಿ ಉಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ವ್ಯವಸ್ಥೆ ಮಾಡದಿದ್ದರೆ ನಡೆದುಕೊಂಡೇ ಹೋಗಲು ಕಾರ್ಮಿಕರು ನಿರ್ಧರಿಸಿದ್ದಾರೆ.

  • 3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು

    3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು

    – ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ

    ರಾಯ್ಪುರ: ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಅನೇಕ ಕಾರ್ಮಿಕರು ನಡೆದುಕೊಂಡು ತಮ್ಮ ತಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದಾರೆ. ಈ ನಡುವೆ ತೆಲಂಗಾಣದಿಂದ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

    ಜಾಮ್ಲೋ ಮಕ್ಡಾಮ್ (12) ಮೃತ ಬಾಲಕಿ. ತೆಲಂಗಾಣದಿಂದ ಚತ್ತೀಸ್‍ಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಆದ ಪರಿಣಾಮ ಏಪ್ರಿಲ್ 15ರಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ 11 ಮಂದಿಯೊಂದಿಗೆ ತನ್ನ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯ ಮೂಲಕ ಹೊರಟ್ಟಿದ್ದಳು.

    11 ಜನರು ಈ ಗುಂಪು ಮೂರು ದಿನಗಳ ಕಾಲ ನಡೆದಿದ್ದರು. ಆದರೆ ಶನಿವಾರ ಮಧ್ಯಾಹ್ನ ಬಾಲಕಿ ತನ್ನ ಮನೆಗ ಇನ್ನೂ 14 ಕಿ.ಮೀ ದೂರದಲ್ಲಿದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೊನೆಗೆ ಆಕೆಯ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಆಕೆಯ ಮನೆಗೆ ತೆಗೆದುಕೊಂಡು ಹೋಗಲಾಗಿದೆ.

    ಬಾಲಕಿ ತೀವ್ರ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಆಕೆಗೆ ಕೊರೊನಾ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಹಿರಿಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಬಿ.ಆರ್.ಪುಜಾರಿ ಹೇಳಿದರು.

    ಬಾಲಕಿಯ ತಂದೆ ಆಂಡೋರಮ್ ಮಾತನಾಡಿ, ತೆಲಂಗಾಣದಲ್ಲಿ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಕಾರಣ ಅವಳು ಮೂರು ದಿನಗಳ ಕಾಲ ನಡೆದಿದ್ದಾಳೆ. ಹೀಗಾಗಿ ಮಗಳು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅವಳು ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದರು.

    ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದೆ.

  • ಇಂದಿನಿಂದ 8 ದಿನಗಳ ಗ್ರಾಮಗಳೆಡೆಗೆ ನಡಿಗೆ ಆರಂಭ

    ಇಂದಿನಿಂದ 8 ದಿನಗಳ ಗ್ರಾಮಗಳೆಡೆಗೆ ನಡಿಗೆ ಆರಂಭ

    ಮೈಸೂರು: ಜಿಲ್ಲೆಯ ಸ್ವಾಮಿ ವಿವೇಕಾನಂದ ಯೂಥ್ ಮೂವ್‍ಮೆಂಟ್‍ನಿಂದ ಇವತ್ತಿನಿಂದ ಡಿಸೆಂಬರ್ 29ರವರೆಗೆ ನಮ್ಮೊಳಗಿನ ನಡಿಗೆ ಎಂಬ ಗ್ರಾಮೀಣ ಭಾರತ ನಡಿಗೆ ಶುರುವಾಗಿದೆ.

    ಸಂಸ್ಥೆಯ ಡಾ. ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ನಡಿಗೆ ಶುರುವಾಗಿದ್ದು, ಮೈಸೂರು ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಈ ನಡಿಗೆ ನಡೆಯಲಿದೆ. 8 ದಿನಗಳಲ್ಲಿ ಒಟ್ಟು 114 ಕಿ.ಮೀ. ನಡಿಗೆ ಸಾಗಲಿದೆ. ಗ್ರಾಮೀಣ ಜನರೊಂದಿಗೆ ಮಾತಕತೆ, ಗ್ರಾಮಗಳ ಸ್ಥಿತಿ, ಜನರ ಮನಸ್ಥಿತಿ ಅರಿಯುವುದು ಈ ನಡಿಗೆಯ ಉದ್ದೇಶ. ಈ ನಡಿಗೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳ, ದೆಹಲಿ ರಾಜ್ಯಗಳ ಜನರು ಈ ನಡಿಗೆಯಲ್ಲಿ ಭಾಗವಹಿಸಿದ್ದಾರೆ.

    ನಡಿಗೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರು ಸಂಸ್ಥೆಗೆ 10 ಸಾವಿರ ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣವನ್ನು ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಗಳಿಗೆ ನೀಡಲಿದೆ. ಈ ನಡಿಗೆಗೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ನೀಡಿದರು. ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ, ಎನ್‍ಆರ್ ಫೌಂಡೇಷನ್ ಅಧ್ಯಕ್ಷ ಗುರು ಉಪಸ್ಥಿತರಿದ್ದರು.

  • ಮಂಗ್ಳೂರಲ್ಲಿ 600ಕ್ಕಿಂತ್ಲೂ ಹೆಚ್ಚು ಮಹಿಳೆಯರಿಂದ ಸೀರೆಯಲ್ಲೇ ವಾಕಿಂಗ್!

    ಮಂಗ್ಳೂರಲ್ಲಿ 600ಕ್ಕಿಂತ್ಲೂ ಹೆಚ್ಚು ಮಹಿಳೆಯರಿಂದ ಸೀರೆಯಲ್ಲೇ ವಾಕಿಂಗ್!

    ಮಂಗಳೂರು: ಸೀರೆ ಉಟ್ಟು ನಡಿಯೋಕೆ ಆರಾಮ ಆಗಲ್ಲ ಅನ್ನೋದು ಬಹಳಷ್ಟು ಮಹಿಳೆಯರ ದೂರು. ಅದ್ರೆ ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ.

    ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ ನ ವತಿಯಿಂದ `ಸೀರೆಯಲ್ಲಿ ವಾಕಿಂಗ್’ ಎಂಬ ವಿಶಿಷ್ಠ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಬೆಳ್ಳಂಬೆಳಗ್ಗೆ ಸೀರೆಯುಟ್ಟು ಹಾಜರಿದ್ದು, ಗಾಂಧಿನಗರ ಪಾರ್ಕ್ ಮುಂಭಾಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ನಗರದ ಮಣ್ಣಗುಡ್ಡೆಯಿಂದ ಸೀರೆ ವಾಕಿಂಗ್ ಆರಂಭಿಸಿದ ಸುಮಾರು 600ಕ್ಕಿಂತ ಹೆಚ್ಚು ಮಹಿಳೆಯರು ಮಂಗಳಾ ಕ್ರೀಡಾಂಗಣ ಮೂಲಕ ಮತ್ತೆ ಮಣ್ಣಗುಡ್ಡ ತಲುಪಿ ಎರಡು ಕಿ.ಮೀ ವಾಕಿಂಗ್ ಪೂರ್ತಿಗೊಳಿಸಿದ್ರು. ಶೂ, ಟ್ರಾಕ್ ಸೂಟ್ ಅಲ್ಲದೆಯೂ ಸೀರೆಯಲ್ಲೂ ವಾಕಿಂಗ್ ಮಾಡಲು ಸಾಧ್ಯ ಎಂಬುದರ ಸಂದೇಶ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾದೆ ಅಂತ ಶೈಲಜಾ ಗಣೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews