Tag: Waiter

  • ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು

    ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು

    – ಶವವನ್ನು ಕಾಡಿನಲ್ಲಿ ಬಚ್ಚಿಟ್ರು

    ಲಕ್ನೋ: ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ ಮನೆಯಲ್ಲಿ ರಕ್ತ ಹರಿದಿರುವ ಘಟನೆಯೊಂದು ನಡೆದಿದೆ. ಮದುವೆಗೆ ಬಂದ ಅಥಿತಿಗಳ ಮೇಲೆ ಮುಸುರೆ ತಟ್ಟೆಗಳು ಬಿತ್ತು ಎಂದು ವೈಟರ್‌ನನ್ನೇ (Waiter) ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು.

    ಮುಸುರೆ ತಟ್ಟೆಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೈಟರ್ ಪಂಕಜ್‌ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್‌ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ ಕೊಂಡುಹೋಗಿ ಅಲ್ಲಿ ಬಚ್ಚಿಟ್ಟಿದಾರೆ. ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರು ಪಂಕಜ್‌ನ ಶವವನ್ನು ಕಾಡಿನಿಂದ ವಶಪಡಿಸಿಕೊಂಡಿದ್ದಾರೆ.

    ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಿನ್ನ, ಜಮೀನು, ಬಿಎಂಡಬ್ಲ್ಯು ಕಾರಿಗೆ ಬೇಡಿಕೆ- ವೈದ್ಯೆ ಆತ್ಮಹತ್ಯೆಗೆ ಶರಣು

  • ಮಟನ್ ಸೂಪ್‍ನಲ್ಲಿ ಅನ್ನ – ಕೋಪಗೊಂಡ ಗ್ರಾಹಕರಿಂದ ವೇಟರ್‌ನ ಕೊಲೆ

    ಮಟನ್ ಸೂಪ್‍ನಲ್ಲಿ ಅನ್ನ – ಕೋಪಗೊಂಡ ಗ್ರಾಹಕರಿಂದ ವೇಟರ್‌ನ ಕೊಲೆ

    ಮುಂಬೈ: ಮಟನ್ ಸೂಪ್‍ನಲ್ಲಿ (Mutton Soup) ಅನ್ನ (Rice) ಇರುವುದನ್ನು ನೋಡಿದ ಗ್ರಾಹಕರಿಬ್ಬರು (Customer) ವೇಟರ್‌ನನ್ನು (Waiter) ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದದಿದೆ.

    ಮಹಾರಾಷ್ಟ್ರದ ಪುಣೆಯ ಪಿಂಪಲ್ ಸೌದಾಗರ್ ಪ್ರದೇಶದ ಹೋಟೆಲ್‍ವೊಂದರಲ್ಲಿ (Hotel) ಈ ಘಟನೆ ನಡೆದಿದೆ. ಮಂಗೇಶ್ ಪೋಸ್ತೆ (19) ಎಂಬಾತ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಆ ಹೊಟೆಲ್‍ಗೆ ತಡರಾತ್ರಿ ಕುಡಿತದ ಅಮಲಿನಲ್ಲಿ ಬಂದ ಇಬ್ಬರು ಗ್ರಾಹಕರು ಮಟನ್ ಸೂಪ್‍ನ್ನು ಆರ್ಡರ್ ಮಾಡಿದ್ದಾರೆ. ಈ ಮಟನ್ ಸೂಪ್‍ನ್ನು ಮಂಗೇಶ್ ಗ್ರಾಹಕರಿಗೆ ಸರ್ವ್ ಮಾಡಿದ್ದಾನೆ. ಈ ವೇಳೆ ಆ ಗ್ರಾಹಕರು ಮಟನ್ ಸೂಪ್‍ನಲ್ಲಿ ಅಕ್ಕಿ ಇರುವುದನ್ನು ನೋಡುತ್ತಾರೆ.

     

    ಇದರಿಂದ ಕೋಪಗೊಂಡ ಇಬ್ಬರು ಗ್ರಾಹಕರು ಹೋಟೆಲ್‍ನಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ ಎಂದು ಮಂಗೇಶ್ ಮೇಲೆ ಹಲ್ಲೆ ನಡೆಸುತ್ತಾರೆ. ಹಲ್ಲೆ ವೇಳೆ ಮಂಗೇಶ್‍ಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಘಟನೆ ವೇಳೆ ಬಿಡಿಸಲು ಬಂದ ಮತ್ತಿಬ್ಬರು ವೇಟರ್‌ಗಳ ಮೇಲೂ ಆತ ಹಲ್ಲೆ ನಡೆಸಿದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿದೆ.

    POLICE JEEP

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳಲ್ಲಿ ಒಬ್ಬನನ್ನು ವಿಜಯ್ ವಾಘಿರೆ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್

    ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್

    ಬೆಂಗಳೂರು: ನನಗೇನು ಗೊತ್ತಿಲ್ಲ, ನನಗೆ ಈ ಬಗ್ಗೆ ಕೇಳಬೇಡಿ ಎಂದು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ ನಾಗರಾಜ್ ಹೇಳಿದ್ದಾರೆ.

    ದರ್ಶನ್ ಮತ್ತು ಸ್ನೇಹಿತರು ದಲಿತ ವೇಟರ್‍ರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಆರೋಪಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನನಗೇನು ಗೊತ್ತಿಲ್ಲ. ನನಗೆ ಈ ಬಗ್ಗೆ ಕೇಳಬೇಡಿ. ಈ ಬಗ್ಗೆ ಇವತ್ತೇ ಟಿವಿಯಲ್ಲಿ ನೋಡುತ್ತಿದ್ದೇನೆ. ನಾನು ಹೋಟೆಲ್‍ನಲ್ಲಿ ಅಂದು ಇರಲಿಲ್ಲ. ಪ್ರಕರಣ ನಡೆದಿದೆ ಎಂದು ಹೋಟೆಲ್‍ನವರು ಅಥವಾ ಹೋಟೆಲ್‍ನಲ್ಲಿ ಹೊಡೆಸಿಕೊಂಡವರಾದರು ಹೇಳಬೇಕು. ಆದರೆ ಇಬ್ಬರೂ ಕೂಡ ಆ ಬಗ್ಗೆ ಹೇಳಿಲ್ಲ. ಇಂದ್ರಜಿತ್ ಲಂಕೇಶ್‍ರವರು ಮಾಡುತ್ತಿರುವ ಆರೋಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಇಂದ್ರಜಿತ್ ಲಂಕೇಶ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್, ಹರ್ಷ ಮೇಲಾಂಟ, ಮತ್ತು ಪವಿತ್ರ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ. ನೀಡಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ:ಇಂದ್ರಜಿತ್ ಮನವಿಯಂತೆ ತನಿಖೆ ನಡೆಸುವಂತೆ ಮೈಸೂರು ಎಸ್‍ಪಿಗೆ ಸೂಚನೆ: ಬೊಮ್ಮಾಯಿ

  • ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ಮಹಿಳೆ ಮೇಲೆ ವೇಟರ್ ಹಲ್ಲೆ!

    ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ಮಹಿಳೆ ಮೇಲೆ ವೇಟರ್ ಹಲ್ಲೆ!

    ಮುಂಬೈ: ಹೋಟೆಲಿನಲ್ಲಿ ಮಹಿಳೆಯೊಬ್ಬರು ತನ್ನ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದ ವೇಳೆ ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ವೇಟರ್ ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಮುಂಬೈನ ಜೆ.ಬಿ ನಗರದಲ್ಲಿ ನಡೆದಿದೆ.

    ನಿಶಾಂತ್ ಗೌಡ(23) ಹಲ್ಲೆ ಮಾಡಿರುವ ವೇಟರ್ ಎಂದು ಗುರುತಿಸಲಾಗಿದೆ. ಫರ್ಜಾನಾ ಮಿರಾತ್(30) ಹಲ್ಲೆಗೊಳಗಾದ ಮಹಿಳೆ. ಭಾನುವಾರ ಬೆಳಗ್ಗೆ ಫರ್ಜಾನಾ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. ಈ ವೇಳೆ ಜೆ.ಬಿ ನಗರದಲ್ಲಿರುವ ಹೋಟೆಲ್‍ಗೆ ತನ್ನ ತಾಯಿಯ ಜೊತೆಗೆ ಫರ್ಜಾನಾ ಹೋಗಿದ್ದಾರೆ. ಆಗ ಅಲ್ಲಿ 6ರಿಂದ 7 ಬಾರಿ ವೇಟರ್‍ನನ್ನು ಪದೇ ಪದೇ ಕರೆದು ತಿಂಡಿ ಆರ್ಡರ್ ಮಾಡಿದ್ದಾರೆ. ಅಲ್ಲದೆ ತನ್ನ ಮದುವೆ ವಾರ್ಷಿಕೋತ್ಸವದ ಆಚರಣೆ ಮಾಡಲು ಫರ್ಜಾನಾ ಕೇಕ್ ಕೂಡ ಆರ್ಡರ್ ಮಾಡಿದ್ದಾರೆ.

    ಬಳಿಕ ಕೇಕ್ ಕತ್ತರಿಸಲು ಚಾಕು ನೀಡದ್ದಕ್ಕೆ ಮತ್ತೆ ನಿಶಾಂತ್‍ನನ್ನು ಕರೆದು ಚಾಕು ನೀಡುವಂತೆ ಕೇಳಿದ್ದಾರೆ. ಮೊದಲೇ ಕೋಪದಲ್ಲಿದ್ದ ವೇಟರ್ ಪದೇ ಪದೇ ಈ ಮಹಿಳೆ ಹಿಂಸೆ ನೀಡುತ್ತಿದ್ದಾಳೆಂದು ಚಾಕು ತಂದು ನೇರವಾಗಿ ಫರ್ಜಾನಾನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೈದ ಪರಿಣಾಮ ಮಹಿಳೆಯ ಕತ್ತಿನ ಮೇಲೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಆರೋಪಿಯನ್ನು ಜೆ.ಬಿ ನಗರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv