Tag: wagon R

  • ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    – ಟಾಪ್‌ 5ರ ಒಳಗಡೆ ಮೂರು ಮಾರುತಿ ಕಾರುಗಳಿಗೆ ಸ್ಥಾನ
    – 2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟ

    ನವದೆಹಲಿ: ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ (India Car Market) ನಂಬರ್‌ ಒನ್‌ ಸ್ಥಾನದಲ್ಲಿದ್ದ ಮಾರುತಿ ಸುಜುಕಿ (Maruti Suzuki) ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್‌ (Tata Motors) ಹಿಂದಿಕ್ಕಿದೆ.

    ಹೌದು. ಇಲ್ಲಿಯವರೆಗೆ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್‌ (Tata Punch) ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್‌ ಮಾಡಿದೆ.

    ವ್ಯಾಗನ್‌ ಆರ್‌

    ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ (Wagon R) ಮತ್ತು ಸ್ವಿಫ್ಟ್ (Swift) ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್‌ 1,90,855 ಮಾರಾಟವಾದರೆ ಟಾಟಾ ಪಂಚ್‌ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಾರು ಎಷ್ಟು ಮಾರಾಟ
    1. ಟಾಟಾ ಪಂಚ್‌ (SUV) – 2,02,030
    2. ವ್ಯಾಗನ್‌ ಆರ್‌(Hatchback) – 1,90,855
    3. ಮಾರುತಿ ಎರ್ಟಿಗಾ(MUV) – 1,90,091
    4. ಮಾರುತಿ ಬ್ರೀಜಾ (SUV) – 1,88, 160
    5. ಹುಂಡೈ ಕ್ರೇಟಾ (SUV) – 1,86,919

    ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್‌-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್‌ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್‌ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್‌ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.

    ಮಾರುತಿ ಎರ್ಟಿಗಾ
    ಮಾರುತಿ ಎರ್ಟಿಗಾ

    2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟವಾಗಿದ್ದು ಮಾರುತಿ ಕಾರುಗಳ ಮಾರುಕಟ್ಟೆ 41%ಕ್ಕೆ ಕುಸಿದಿದೆ. ವಿಶೇಷವಾಗಿ 10 ಲಕ್ಷ ರೂ. ಒಳಗಿನ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಇರುವುದರಿಂದ ಮಾರುತಿ ಕಾರುಗಳ ಮಾರುಕಟ್ಟೆ ಕುಸಿತವಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    2018 ರಲ್ಲಿ ಭಾರತದಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಸಂದರ್ಭದಲ್ಲಿ ಟಾಪ್‌-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.

    ಅಂಬಾಸಿಡರ್‌

    ಯಾವ ಕಂಪನಿಯ ಕಾರುಗಳಿಗೆ ಮೊದಲ ಸ್ಥಾನ?
    1957 – 1984 : ಅಂಬಾಸಿಡರ್‌( ಹಿಂದೂಸ್ಥಾನ್‌ ಮೋಟಾರ್ಸ್‌)
    1985-2004 – ಮಾರುತಿ 800
    2005-2017 – ಮಾರುತಿ ಅಲ್ಟೋ ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಮಾರುತಿ 800

    ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
    2018 – ಮಾರುತಿ ಡಿಸೈರ್‌ – 2,64,612
    2019 – ಮಾರುತಿ ಅಲ್ಟೋ – 2,08,087
    2020 – ಮಾರುತಿ ಸ್ವಿಫ್ಟ್‌ – 1,60,765
    2021 – ಮಾರುತಿ ವ್ಯಾಗನ್‌ ಆರ್‌ – 1,83,851
    2022 – ಮಾರುತಿ ವ್ಯಾಗನ್‌ ಆರ್‌ – 2,17,317
    2023 – ಮಾರುತಿ ಸ್ವಿಫ್ಟ್‌ – 2,03,469
    2024 – ಟಾಟಾ ಪಂಚ್‌ – 2,02,030

    ಅಲ್ಟೋ

    2021 ರಲ್ಲಿ ಬಿಡುಗಡೆಯಾದ ಪಂಚ್‌ 190 mm ಗ್ರೌಂಡ್ ಕ್ಲಿಯರೆನ್ಸ್, ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, EBD ಜೊತೆಗೆ ABS, ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಹೊಂದಿದೆ. 5 ಸ್ಟಾರ್‌ ಸೇಫ್ಟಿ ರೇಟಿಂಗ್‌ ಹೊಂದಿರುವುದರಿಂದ ಪಂಚ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.

    ಗ್ಲೋಬಲ್ NCAP ನಿಂದ ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್‌ ಪಡೆದುಕೊಂಡಿದೆ. ಭಾರತ್ NCAP ಮಾನದಂಡಗಳ ಅಡಿಯಲ್ಲಿ ಪರೀಕ್ಷೆಗೊಳಪಡಿಸಿದ ಎಲ್ಲಾ ಟಾಟಾ ವಾಹನಗಳಲ್ಲಿ ಪಂಚ್ ಇವಿ ಅತ್ಯಧಿಕ ಸುರಕ್ಷತಾ ರೇಟಿಂಗ್‌ ಪಡೆದಿದೆ.

     

  • ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನವದೆಹಲಿ: ಈ ವರ್ಷದ ಆಗಸ್ಟ್ 3 ರಿಂದ ಸೆಪ್ಟೆಂಬರ್ 1 ರ ನಡುವೆ ತಯಾರಿಸಲಾದ ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ ಮತ್ತು ಇಗ್ನಿಸ್(Wagon R, Celerio, Ignis) ಕಾರುಗಳನ್ನು ಮಾರುತಿ ಸುಜುಕಿ(Maruti Suzuki) ಕಂಪನಿ ಹಿಂದಕ್ಕೆ ಪಡೆದಿದೆ.

    ಹಿಂಬದಿಯ ಬ್ರೇಕ್ ಅಸೆಂಬ್ಲಿ ಪಿನ್‌ನಲ್ಲಿ ದೋಷ ಇರುವ ಕಾರಣ 9,925 ಯುನಿಟ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಪ್ರಕಟಿಸಿದೆ. ಇದನ್ನೂ ಓದಿ: ಮಾರುತಿಗೆ ಬಂಪರ್‌ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ

    ಹಿಂಭಾಗದ ಬ್ರೇಕ್(Rear Brake) ಅಸೆಂಬ್ಲಿ ಪಿನ್‌ನಲ್ಲಿ (‘Part’) ದೋಷ ಇದ್ದ ಕಾರಣ ವಿಚಿತ್ರವಾದ ಶಬ್ದವನ್ನು ಉಂಟುಮಾಡುತ್ತಿತ್ತು. ದೀರ್ಘ ಅವಧಿಯಲ್ಲಿ ಈ ದೋಷವು ಬ್ರೇಕ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.

    ಗ್ರಾಹಕರ ಸುರಕ್ಷತೆಯನ್ನು ಪರಿಗಣಿಸಿ, ತಪಾಸಣೆಗಾಗಿ ವಾಹನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ದೋಷಯುಕ್ತ ಭಾಗವನ್ನು ಉಚಿತವಾಗಿ ಬದಲಾಯಿಸಲಾಗುವುದು. ಗ್ರಾಹಕರು ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಬ್ರೇಕ್‌ ಕಿಟ್‌ ಅನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಕಂಪನಿ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ಕಳ್ಳತನವಾಗಿದ್ದ ಕೇಜ್ರಿವಾಲ್ ಕಾರು ಪತ್ತೆ

    ನವದೆಹಲಿ: ಗುರುವಾರದಂದು ದೆಹಲಿ ಸಚಿವಾಲಯದ ಆವರಣದಿಂದ ಕಳ್ಳತನವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ಪತ್ತೆಯಾಗಿದೆ.

    ಕಾರು ಗಜಿಯಾಬಾದ್ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉತ್ತರಪ್ರದೇಶ ಪೊಲೀಸರು ಕಾರನ್ನು ಪತ್ತೆ ಮಾಡಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಮುಖ ಚಹರೆ ಕಾಣಿಸಿದ್ದು, ಆತನ ಫೋಟೋವನ್ನ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಹಂಚಿದ್ದಾರೆ.

    ಕಾರ್ ಕಳ್ಳತನವಾಗಿದ್ದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದಿದ್ದರು. ದೆಹಲಿ ಸಚಿವಾಲಯದ ಹೊರಗಡೆ ನನ್ನ ಕಾರು ಕಳ್ಳತನವಾಗಿದೆ. ನನ್ನ ಕಾರ್ ಕಳ್ಳತನವಾಗಿದೆ ಅನ್ನೋದು ಚಿಕ್ಕ ವಿಚಾರವೇ. ಆದ್ರೆ ದೆಹಲಿ ಸಚಿವಾಲಯದ ಹೊರಗಡೆ ಕಳ್ಳತನವಾಗಿದೆ ಅನ್ನೋದು ಕಾನೂನು ಸುವ್ಯವಸ್ಥೆ ತ್ವರಿತವಾಗಿ ಕ್ಷೀಣಿಸುತ್ತಿದೆ ಎಂಬುದನ್ನ ಸೂಚಿಸುತ್ತಿದೆ ಎಂದು ಕೇಜ್ರೀವಾಲ್ ಪತ್ರದಲ್ಲಿ ಹೇಳಿದ್ದರು.

    ಅಲ್ಲದೆ ದೆಹಲಿ ಪೊಲೀಸರನ್ನ ಕುರಿತು “ನಿಮ್ಮ ಗಮನ ಎಲ್ಲಿದೆ” ಎಂದು ಟ್ವೀಟ್ ಮಾಡಿದ್ದರು.

    ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ  ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆ ಮಾಡಿದ್ದರು. ಆರಂಭದಲ್ಲಿ ಆಪ್ ಪ್ರಚಾರ ಕಾರ್ಯದ ವೇಳೆ ಈ ಕಾರು ಮೂಲಕವೇ ಕೇಜ್ರಿವಾಲ್ ಪ್ರಚಾರಕ್ಕೆ ತೆರಳುತ್ತಿದ್ದರು.