Tag: wagon

  • ಬೋಗಿಯ ಕೆಳಗಡೆ ಜೋಡಿಯ ಡೇಟಿಂಗ್

    ಬೋಗಿಯ ಕೆಳಗಡೆ ಜೋಡಿಯ ಡೇಟಿಂಗ್

    – ಖಡಕ್ ವಾರ್ನಿಂಗ್ ನೀಡಿದ ರೈಲ್ವೇ ಇಲಾಖೆ

    ನವದೆಹಲಿ: ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಾ ಎಂಬ ಸಂಶಯ ಹುಟ್ಟಿಕೊಳ್ಳುತ್ತದೆ. ಭಾರತೀಯ ರೈಲ್ವೇ ಇಲಾಖೆ ಮಂಗಳವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿಕೊಂಡಿತ್ತು. ಈ ಫೋಟೋದಲ್ಲಿ ಜೋಡಿಯೊಂದು ಗೂಡ್ಸ್ ರೈಲಿನ ಬೋಗಿ (ವ್ಯಾಗನ್) ಕೆಳಗೆ ಕುಳಿತಿದ್ದಾರೆ. ಫೋಟೋವನ್ನು ಟ್ವೀಟ್ ಮಾಡಿಕೊಂಡಿರುವ ರೈಲ್ವೇ ಇಲಾಖೆ ಜೋಡಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

    ರೈಲಿನ ಟ್ರ್ಯಾಕ್ ಮೇಲೆ ಈ ರೀತಿ ಕುಳಿತುಕೊಳ್ಳುವುದು ಅಪಾಯಕಾರಕ ಮತ್ತು ಶಿಕ್ಷಾರ್ಹ. ರೈಲುಗಳ ನಿಂತಾಗ ಬೋಗಿಯ ಕೆಳಗೆ ಕುಳಿತುಕೊಳ್ಳಲು ಪ್ರಯತ್ನಿಸಬೇಡಿ. ರೈಲು ಯಾವುದೇ ಸುಳಿವು ನೀಡದೇ ಚಲಿಸಲು ಆರಂಭಿಸಿದ್ರೆ ನಿಮ್ಮ ಜೀವಕ್ಕೆ ಅಪಾಯ. ನಿಗದಿತ ಸ್ಥಳದಲ್ಲಿಯೇ ರೈಲು ಹಳಿಗಳನ್ನು ಕ್ರಾಸ್ ಮಾಡಿ ಎಂದು ರೈಲ್ವೇ ಇಲಾಖೆಯಲ್ಲಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.

    ಕೆಲ ಪ್ರೇಮಿಗಳು ಜನಸಂದಣಿ ಇಲ್ಲದ ಸ್ಥಳಗಳನ್ನು ತಮ್ಮ ಏಕಾಂತಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕುಟುಂಬದ ಸದಸ್ಯರು ಆಗಮಿಸಿದ ಸ್ಥಳಗಳತ್ತ ಮುಖ ಮಾಡುತ್ತಾರೆ. ಈ ಜೋಡಿ ರೈಲಿನ ಬೋಗಿಯ ಕೆಳಗೆ ಕುಳಿತು ತಮ್ಮ ಜೀವಕ್ಕೆ ಅಪಾಯ ತಂದುಕೊಂಡಿತ್ತು. ಈ ಜೋಡಿ ಯಾರು ಮತ್ತು ಫೋಟೋ ಯಾವ ಸ್ಥಳದಲ್ಲಿ ಸೆರೆ ಹಿಡಿಯಲಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.