Tag: Wagner

  • ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

    ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

    ಕಲಬುರಗಿ: ಯುದ್ಧ ಪೀಡಿತ ಉಕ್ರೇನ್‌ (Ukraine) ಗಡಿಯಲ್ಲಿ ಕಲಬುರಗಿಯ (Kalaburagi) ಮೂವರು ಯುವಕರು ಸಿಕ್ಕಿಬಿದ್ದಿದ್ದು, ನಮ್ಮನ್ನು ಕೂಡಲೇ ರಕ್ಷಿಸಬೇಬೇಕೆಂದು ಮನವಿ ಮಾಡಿದ್ದಾರೆ.

    ತೆಲಂಗಾಣದ 22 ವರ್ಷದ ಯುವಕ ಮತ್ತು ಕಲಬುರಗಿಯ ಮೂವರು ವ್ಯಾಗ್ನರ್‌ (Wagner) ಪಡೆಯಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾ ಗಡಿಯಲ್ಲಿ ಸಿಲುಕಿದ್ದಾರೆ. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ತಕ್ಷಣವೇ ರಕ್ಷಿಸಬೇಕು ಎಂದು ಮೊರೆ ಇಟ್ಟಿದ್ದಾರೆ.

    ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವಿಡಿಯೋದಲ್ಲಿ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.

    ನಾವು ಹೈಟೆಕ್ ವಂಚನೆಗೆ ಬಲಿಯಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್‌ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಸೈನ್ಯದ ಭದ್ರತಾ ಸಹಾಯಕ ಕೆಲಸದ ಭರವಸೆಯೊಂದಿಗೆ ನಾವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಬಂದಿದ್ದೇವೆ. ನಂತರ ನಾವು ವಂಚನೆಗೆ ಒಳಗಾದ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕಾರಣಿ ರಾಜುನನ್ನು ಕ್ಷಮಿಸಲ್ಲ: ಕಾನೂನು ಕ್ರಮಕ್ಕೆ ಮುಂದಾದ ತ್ರಿಶಾ

     

    ಈ ಯುವಕರು ಆರಂಭದಲ್ಲಿ ದುಬೈನಲ್ಲಿ 30-40 ಸಾವಿರ ರೂ. ದುಡಿಯುತ್ತಿದ್ದರು. ಈ ವೇಳೆ ಓರ್ವ ಏಜೆಂಟ್‌ ಪರಿಚಯವಾಗಿದ್ದಾನೆ. ಆತ ರಷ್ಯಾದಲ್ಲಿ 2 ಲಕ್ಷ ರೂ. ಸಂಬಳ ನೀಡಲಾಗುವುದು ಎಂದು ಆಸೆ ತೋರಿಸಿದ್ದ. ಈತನ ಮಾತಿಗೆ ಮರಳಾಗಿ ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಇವರು ಡಿಸೆಂಬರ್‌ನಲ್ಲಿ ರಷ್ಯಾಗೆ ತೆರಳಿದ್ದರು.

    4 ಮಂದಿ ಅಲ್ಲದೇ ದೇಶದ 60 ಮಂದಿ ರಷ್ಯಾದಲ್ಲಿ ಇದ್ದಾರೆ. ಇವರು ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಭಾಷೆಯಲ್ಲಿರುವ ಒಪ್ಪಂದ ಪತ್ರಕ್ಕೆ ಇವರೆಲ್ಲ ಸಹಿ ಹಾಕಿ ಹಾಕಿದ್ದಾರೆ.

    ವಾಗ್ನಾರ್‌ ಸೇನೆಯಲ್ಲಿರುವ ಸುಫಿಯಾನ್‌ ಮಹಾರಾಷ್ಟ್ರದಲ್ಲಿರುವ ಸಹೋದರನಿಗೆ ಮೊಬೈಲ್‌ ಕರೆ ಮಾಡಿ ತಿಳಿಸಿದ ಬಳಿಕ ಈ ಉದ್ಯೋಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಟ ದರ್ಶನ್ ಹೇಳಿಕೆ ಖಂಡಿಸಿ ದೂರು: ಕ್ಷಮೆ ಕೇಳಲು ಆಗ್ರಹ

    15 ದಿನಗಳ ಹಿಂದೆ ನನ್ನ ಸಹೋದರ ಸುಫಿಯಾನ್ ನನ್ನೊಂದಿಗೆ ಮಾತನಾಡಿದ್ದ. ಅವರು ಉಕ್ರೇನ್ ಗಡಿಯಿಂದ ಕೇವಲ 40 ಕಿಮೀ ದೂರದಲ್ಲಿದ್ದಾರೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಯುದ್ಧಕ್ಕೆ ಕಳುಹಿಸಲಾಗಿದೆ. ನಾವು ಏಜೆಂಟ್‌ನಿಂದ ಮೋಸ ಹೋಗಿದ್ದೇವೆ ಎಂದು ಸೈಯದ್ ಸಲ್ಮಾನ್ ಹೇಳಿದ್ದಾರೆ. ಇದನ್ನೂ ಓದಿ: ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

     ನನ್ನ ಸಹೋದರನಿಗೆ ಒಂದು ಅವಕಾಶ ಸಿಕ್ಕಿದಾಗ ಅವರು ರಷ್ಯಾದ ಸೈನ್ಯಕ್ಕೆ ಸೇರಿದ ಮೊಬೈಲ್ ಫೋನ್ ಬಳಸಿ ನಮಗೆ ಸಂದೇಶ ರವಾನಿಸಿದ್ದಾರೆ. ನಮ್ಮನ್ನು ಭಾರತಕ್ಕೆ ಮರಳಲು ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದರು ಎಂದು ಸಹೋದರ ತಿಳಿಸಿದರು.

    ವ್ಯಾಗ್ನರ್‌ ಪಡೆ ಎಂದರೇನು?
    ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ.

     

  • ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ಮಾಸ್ಕೋ: ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ (Russia) ಮೇಲೆ ದಂಗೆ ಏಳಲು ನಿರ್ಧರಿಸಿತ್ತು. ಆದರೆ ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆಯ ಪರಿಣಾಮ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈಬಿಟ್ಟಿದ್ದಾರೆ. ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ರೋಸ್ಟೋವ್ ಆನ್ ಡಾನ್ ಅನ್ನು ತೊರೆಯುತ್ತಿದ್ದ ವೇಳೆ ನಗರವಾಸಿಗಳು ಅವರತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.

    ಉಕ್ರೇನ್ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಎದ್ದಿದ್ದ. ಯೆವ್ಗೆನಿ ಪ್ರಿಗೋಜಿನ್ ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದು ದಾಳಿಗೆ ಮುಂದಾಗಿತ್ತು.

    ವ್ಯಾಗ್ನರ್ ಸೇನೆ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ಬಳಿಕ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

    ಇದೀಗ ಮಾಸ್ಕೋ ಸಮೀಪ ಬಂದಿದ್ದ ವ್ಯಾಗ್ನರ್‌ಗಳಿಗೆ ವಾಪಸಾಗುವಂತೆ ಸೂಚಿಸಲಾಗಿದೆ. ಅದರಂತೆ ವ್ಯಾಗ್ನರ್ ಪಡೆಗಳು ನಗರವನ್ನು ತೊರೆಯುವ ಸಂದರ್ಭ ರಷ್ಯನ್ನರು ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಹೊರಟಿದ್ದ ಖಾಸಗಿ ಸೇನೆಗೆ ಟಾ ಟಾ.. ಬೈ ಬೈ ಹೇಳಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.

    ವ್ಯಾಗ್ನರ್ ಗುಂಪು ಟೆಲಿಗ್ರಾಂನಲ್ಲಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಶಸ್ತ್ರಸಜ್ಜಿತ ವಾಹನಗಳು ಹಾಗೂ ಟ್ಯಾಂಕರ್‌ಗಳು ಪಟ್ಟಣವನ್ನು ತೊರೆಯುವ ದೃಶ್ಯವಿದೆ. ಈ ವೇಳೆ ಹತ್ತಾರು ಜನರು ವ್ಯಾಗ್ನರ್.. ವ್ಯಾಗ್ನರ್.. ಎಂದು ಘೋಷಣೆ ಕೂಗಿದ್ದಾರೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಈ ವೇಳೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

  • ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಪುಟಿನ್‌ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ

    ಮಾಸ್ಕೋ: ಉಕ್ರೇನ್‌ (Ukraine ) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಆಪ್ತನೇ ಈಗ ರಷ್ಯಾ ಸೇನೆ ವಿರುದ್ಧ ಬಂಡಾಯ ಏಳುವ ಮೂಲಕ ಶಾಕ್‌ ನೀಡಿದ್ದಾನೆ.

    ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದಿದ್ದು, ದಾಳಿಯ ಎಚ್ಚರಿಕೆ ನೀಡಿದೆ.

    ತನ್ನ ಸೇನೆಯ ಮೇಲೆಯೇ ದಾಳಿ ಮಾಡುತ್ತಿರುವ ರಷ್ಯಾ ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ. ರಷ್ಯಾ ಸೇನಾ ನಾಯಕತ್ವವನ್ನೇ ಅಂತ್ಯಗೊಳಿಸಲು ಯಾವುದೇ ಕ್ರಮಕ್ಕೂ ನಾನು ಸಿದ್ಧನಿದ್ದೇನೆ ಎಂದು ಯೆವ್ಗೆನಿ ಪ್ರಿಗೋಜಿನ್ ಶಪಥ ಮಾಡಿದ್ದಾನೆ.  ಇದನ್ನೂ ಓದಿ: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಆಶೀರ್ವಾದ ಪಡೆದ ಅಮೆರಿಕ ಗಾಯಕಿ

    ವ್ಯಾಗ್ನರ್‌ ಪಡೆ ಎಂದರೇನು?
    ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ.  ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.

    ತಿರುಗಿ ಬಿದ್ದಿದ್ದು ಯಾಕೆ?
    ಈ ವರ್ಷದ ಜನವರಿಯಲ್ಲಿ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಉಪ್ಪು ತಯಾರಿಸುವ ಪಟ್ಟಣವಾದ ಸೊಲೆಡಾರ್ ಅನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈ ಪ್ರದೇಶವನ್ನು ಗೆದ್ದ ಶ್ರೇಯಸ್ಸು ವಿಚಾರವಾಗಿ ವ್ಯಾಗ್ನರ್‌ ಪಡೆ ಮತ್ತು ರಷ್ಯಾ ಸೇನೆಯ ಬಗ್ಗೆ ಕಿತ್ತಾಟ ನಡೆಯುತ್ತಿತ್ತು. ಯೆವ್ಗೆನಿ ಪ್ರಿಗೋಜಿನ್ ಇದರ ಕ್ರೆಡಿಟ್‌ ನಮಗೆ ಸಿಗಬೇಕು ಎಂದು ಹೇಳಿದ್ದ.

    ನಂತರದ ದಿನಗಳಲ್ಲಿ ರಷ್ಯಾ ಸೇನೆ ನಮಗೆ ಸರಿಯಾಗಿ ಮದ್ದುಗುಂಡುಗಳನ್ನು ಪೂರೈಸುತ್ತಿಲ್ಲ ಎಂದು ಕಿಡಿಕಾರಿದ್ದ. ಅಷ್ಟೇ ಅಲ್ಲದೇ ರಷ್ಯಾದ ಮಿಲಿಟರಿ ನಾಯಕರು ಸರಿಯಾಗಿ ಸೇನೆಯನ್ನು ಮುನ್ನಡೆಸುತ್ತಿಲ್ಲ ಎಂದು ದೂರಿದ್ದ. ಮಿಲಿಟರಿ ನಾಯಕರ ಕುರಿತಾಗಿ ಈತನ ಹೇಳಿಕೆಯ ಬಗ್ಗೆ ತಿಳಿದಿದ್ದರೂ ಪುಟಿನ್‌ ತಲೆಕೆಡಿಸಿಕೊಂಡಿರಲಿಲ್ಲ. ಈ ಕಿತ್ತಾಟ ಜಾಸ್ತಿ ಆಗಿದ್ದು, ಇಂದು ರಷ್ಯಾ ಸೇನೆ ತನ್ನ ಪಡೆಗಳನ್ನು ಗುರಿಯಾಗಿಸಿ ಮಾರಣಾಂತಿಕ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ಯೆವ್ಗೆನಿ ಪ್ರಿಗೋಜಿನ್ ಸಿಟ್ಟಾಗಿ ದಾಳಿ ಮಾಡಿ ರಷ್ಯಾ ಸೇನಾ ಮುಖ್ಯಸ್ಥರನ್ನು ಕೆಳಗೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

     

    ಈಗ ರಷ್ಯಾದಲ್ಲಿ ಏನಾಗುತ್ತಿದೆ?
    ವ್ಯಾಗ್ನರ್ ಗುಂಪಿನ ಮುಖ್ಯಸ್ಥ  ಪ್ರಿಗೋಜಿನ್ ಮಾಸ್ಕೋ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಕ್ಸ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ರೋಸ್ಟೊವ್‌ನಲ್ಲಿ ಮನೆಗಳಿಂದ ಹೊರಬರಬೇಡಿ ಎಂದು ಜನರಲ್ಲಿ ರಷ್ಯಾ ಅಧಿಕಾರಿಗಳು ಕೇಳಿದ್ದಾರೆ.