Tag: waged workers

  • ‘ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ’ – ಬೈಕ್, ಕಾಲ್ನಡಿಗೆಯಲ್ಲಿ ತಮ್ಮೂರಿನತ್ತ ಕೂಲಿ ಕಾರ್ಮಿಕರ ಪಯಣ

    ‘ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ’ – ಬೈಕ್, ಕಾಲ್ನಡಿಗೆಯಲ್ಲಿ ತಮ್ಮೂರಿನತ್ತ ಕೂಲಿ ಕಾರ್ಮಿಕರ ಪಯಣ

    ಯಾದಗಿರಿ: ಇಷ್ಟು ದಿನ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು, ಕಾಲ್ನಡಿಗೆ ಮತ್ತು ಬೈಕ್ ಮೂಲಕ ತಮ್ಮ-ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ.

    ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತಮ್ಮ ಕುಟುಂಬಗಳೊಂದಿಗೆ ಕೆಲವರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರೆ. ಇನ್ನೂ ಕೆಲವರು ಉತ್ತರ ಪ್ರದೇಶಕ್ಕೆ ಬೈಕ್ ಮೇಲೆ ಹೊರಟಿದ್ದಾರೆ. ಕಲಬುರಗಿ, ವಿಜಯಪುರ ಹಾಗೂ ದಾವಣಗೆರೆಯಲ್ಲಿ ಪಾನಿಪೂರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ 25 ಕ್ಕೂ ಹೆಚ್ಚು ಕಾರ್ಮಿಕರು ಉತ್ತರ ಭಾರತದತ್ತ ನಮ್ಮ ಪ್ರಯಾಣ ಬೆಳೆಸಿದ್ದಾರೆ.

    ವಿಶ್ರಾಂತಿಗಾಗಿ ಯಾದಗಿರಿ ನಗರದ ರಸ್ತೆಗಳ ಪಕ್ಕದಲ್ಲಿ ಕಾರ್ಮಿಕರು ಬಿಡಾರ ಹಾಕಿದ್ದಾರೆ. ಈ ಬಗ್ಗೆ ತಿಳಿದು ಸ್ಥಳಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕಾರ್ಮಿಕರಿಗೆ ಧೈರ್ಯ ತುಂಬಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಆದರೆ ಅಧಿಕಾರಿಗಳ ಮಾತಿಗೆ ಬಗ್ಗದ ಕಾರ್ಮಿಕರು, ತಮಗೆ ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ ಎಂದು ಅಳಲು ತೊಡಿಕೊಂಡು ತಮ್ಮ ಪಯಣವನ್ನು ಮುಂದುವರೆಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಸೈಕಲ್ ಹತ್ತಿ ಉತ್ತರಪ್ರದೇಶಕ್ಕೆ ಹೊರಟ ನಾಲ್ವರು ಯುವಕರು

    ಲಾಕ್‍ಡೌನ್ ಎಫೆಕ್ಟ್ – ಸೈಕಲ್ ಹತ್ತಿ ಉತ್ತರಪ್ರದೇಶಕ್ಕೆ ಹೊರಟ ನಾಲ್ವರು ಯುವಕರು

    ಹಾಸನ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ತಮ್ಮ ರಾಜ್ಯಕ್ಕೆ ತೆರಳಲು ಸಾಧ್ಯವಾಗದೆ ನಾಲ್ವರು ಯುವಕರು ಹಾಸನದಲ್ಲೇ ಉಳಿದಿದ್ದರು. ಆದರೆ ಈಗ ಹೊಸದಾಗಿ ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.

    ಉತ್ತರಪ್ರದೇಶದಿಂದ ಹಾಸನಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‍ಡೌನ್ ನಂತರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರು ಕೂಡ ವಾಪಸ್ ತೆರಳಲು ಬಸ್ ಇಲ್ಲದಂತಾಗಿದೆ.

    ಇತ್ತ ಸ್ವಂತ ವಾಹನ ಮಾಡಿಕೊಂಡು ಉತ್ತರಪ್ರದೇಶಕ್ಕೆ ಹೋಗಲು ಯುವಕರ ಬಳಿ ಹಣವಿಲ್ಲ. ಹೀಗಾಗಿ ಹಾಸನ ನಗರದಲ್ಲಿರುವ ಸಿಟಿ ಸೈಕಲ್ ಶಾಪ್‍ಗೆ ತೆರಳಿದ ಯುವಕರು ಹೊಸದಾಗಿ ನಾಲ್ಕು ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.