Tag: Wadde

  • ಮನೆಯ ಮೇಲ್ಛಾವಣಿ ಕುಸಿದು ವಯೋವೃದ್ಧೆ ಸಾವು

    ಮನೆಯ ಮೇಲ್ಛಾವಣಿ ಕುಸಿದು ವಯೋವೃದ್ಧೆ ಸಾವು

    ಹಾವೇರಿ: ತವರಿಗೆ ಬಂದಿದ್ದ ವೃದ್ಧೆ ಮೇಲೆ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ನೆಗಳೂರ ಗ್ರಾಮದಲ್ಲಿ ನಡೆದಿದೆ.

    ಮರೋಳ ಗ್ರಾಮದ ಶಿವಗಂಗಮ್ಮ ಸುಟಮನಿ (70) ಮೃತ ದುರ್ದೈವಿ. ಈಕೆ ಕಳೆದ 20 ದಿನಗಳ ಹಿಂದೆ ನೆಗಳೂರ ಗ್ರಾಮದ ಬಸವರಾಜ ಕಡಕೋಳ ಎಂಬವರ ಮನೆಗೆ ಬಂದಿದ್ದರು. ಹೀಗೆ ತವರಿಗೆ ಬಂದಿದ್ದ ವೃದ್ಧೆ ಇದೀಗ ಮನೆಯ ಮೇಲ್ಛಾವಣಿ ಬಿದ್ದು ಸಾವನ್ನಪ್ಪಿದ್ದಾರೆ.

    ಶಿವಗಂಗಮ್ಮ ಅಜ್ಜಿ ತವರು ಮನೆಗೆ ಬಂದಿದ್ದರು. ಈ ವೇಳೆ ಮನೆಯ ಕಟ್ಟೆಯ ಮೇಲೆ ಕುಳಿತಾಗ ಮನೆಯ ಮೇಲ್ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದೆ. ವೃದ್ಧೆಯನ್ನು ಮೊದಲು ಗುತ್ತಲದ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಣೇಬೆನ್ನೂರಿನ ನಂದಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಇದೀಗ ಚಿಕಿತ್ಸೆ ಫಲಿಸದೆ ಅಜ್ಜಿ ಮೃತಪಟ್ಟಿದ್ದಾರೆ. ಗುತ್ತಲ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.