Tag: Vyalikaval Police

  • ದಿನದ ಖರ್ಚಿಗೆ 5,000 ರೂ.ಗೆ ಡಿಮ್ಯಾಂಡ್‌ – ಪತ್ನಿಯಿಂದ ನಿತ್ಯ ಕಿರುಕುಳ, ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ

    ದಿನದ ಖರ್ಚಿಗೆ 5,000 ರೂ.ಗೆ ಡಿಮ್ಯಾಂಡ್‌ – ಪತ್ನಿಯಿಂದ ನಿತ್ಯ ಕಿರುಕುಳ, ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತಿ

    – 60 ವರ್ಷ ಆದ್ಮೇಲೆ ಮಕ್ಕಳು ಮಾಡಿಕೊಳ್ಳೋಣ ಅಂತ ಟಾರ್ಚರ್‌

    ಬೆಂಗಳೂರು: ಟೆಕ್ಕಿಯೊಂದಿಗೆ (Techie) ಒಪ್ಪಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಪತ್ನಿ ಗಂಡನೊಂದಿಗೆ ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ಬೇಡಿಕೆಯಿಡುವುದರ ಜೊತೆಗೆ ಬ್ಯೂಟಿ ಹಾಳಾಗುತ್ತೆ ಸ್ವಂತ ಮಕ್ಕಳು ಬೇಡ.. ದತ್ತು ಮಕ್ಕಳನ್ನ ಪಡೆದುಕೊಳ್ಳೊಣ ಎಂದು ಗಂಡನಿಗೆ, ಪತ್ನಿ ಕಿರುಕುಳ (Wife Tortur) ಕೊಡುತ್ತಿದ್ದಾರೆಂದು ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಟೆಕ್ಕಿ ಶ್ರೀಕಾಂತ್ ಹಾಗೂ ಯುವತಿ 2022 ರಲ್ಲಿ ಮದುವೆ ಆಗಿದ್ದಾರೆ. ಮದ್ವೆ (Marriage) ಆದ್ಮೇಲೆ ಒಂದು ದಿನವೂ ಗಂಟನೊಂದಿಗೆ ನೆಟ್ಟಗೆ ಸಂಸಾರ ಮಾಡಿಲ್ಲವಂತೆ ಈ ಮಹಿಳೆ. ಮಕ್ಕಳು ಮಾಡಿಕೊಳ್ಳೊಣ ಅಂತ ಗಂಡ ಶ್ರೀಕಾಂತ್ ಕೇಳಿದರೆ ಈಗ ಮಕ್ಕಳು ಬೇಡ ನಮಗೆ 60 ವರ್ಷವಾದ ಬಳಿಕ ಮಕ್ಕಳು ಮಾಡಿಕೊಳ್ಳೊಣ ಎನ್ನುತ್ತಾಳೆ, ಮುಟ್ಟಲು ಹೋದ್ರೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬ್ಲಾಕ್ ಮೇಲ್ ಮಾಡುತ್ತಾಳೆ ಪತಿ ಆರೋಪಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಶ್ರೀಕಾಂತ್ ವರ್ಕ್ ಫ್ರಮ್‌ ಹೋಮ್‌ ಕೆಲಸ ಮಾಡುತ್ತಿದ್ದರು. ಕೆಲಸ ಮಾಡಲು ಕುಳಿತರೇ ಜೋರಾಗಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುವುದು, ಜಗಳ ಮಾಡುತ್ತಾ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡ್ತಾಳೆ. ಹೆಂಡತಿ ಕಾಟದಿಂದ ರೋಸಿ ಹೋಗಿದ್ದೇನೆ. ಒಂದು ದಿನವೂ ಮದ್ವೆಯಾದ ಖುಷಿಯಿಲ್ಲ. ಖರ್ಚು ಮಾಡಿದ್ದ ಹಣವೂ ಹಣ, ಬಂಗಾರವೂ ನನ್ನ ಕೈಗೆ ಸಿಕ್ತಿಲ್ಲ. ಸದ್ಯ ಇರುವ ಕೆಲಸವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇನೆ ಅಂತ ಪತಿ ಶ್ರೀಕಾಂತ್‌ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ (Vyalikaval Police Station) ದೂರು ನೀಡಿದ್ದಾರೆ.

    ಪ್ರಕರಣ ಸಂಬಂದ ಎನ್‌ಸಿಆರ್ ಮಾಡಿಕೊಂಡಿರೋ ಪೊಲೀಸರು ತನಿಖೆ ಮಾಡುತ್ತಿದ್ದಾರೆ.‌ ಸದ್ಯ ಡಿವೋರ್ಸ್ ನೀಡಲು ಪತ್ನಿ 45 ಲಕ್ಷಕ್ಕೆ ಡಿಮಾಂಡ್ ಮಾಡುತ್ತಿದ್ದಾರೆಂದು ಪತಿ ಶ್ರೀಕಾಂತ್ ಆರೋಪ ಮಾಡುತ್ತಿದ್ದಾರೆ.

    ಆಡಿಯೋ ವೈರಲ್‌:
    ಇನ್ನೂ ಪತಿ – ಪತ್ನಿ ಮಾತನಾಡಿದ ಆಡಿಯೋವೊಂದು ವೈರಲ್‌ ಆಗಿದೆ. ಮಕ್ಕಳು ಮಾಡಿಕೊಳ್ಳೋಣ ಅಂತ ಶ್ರೀಕಾಂತ್‌ ಕೇಳಿದ್ದಕ್ಕೆ 60 ವರ್ಷ ಆದ್ಮೇಲೆ ಮಾಡಿಕೊಳ್ಳೋಣ ಇಲ್ಲದಿದ್ರೆ.. ನೀವೂ ಹಾಗೆ ಸಾಯಿರಿ, ನಾನು ಹಾಗೇ ಸಾಯ್ತಿನಿ ಅಂದಿದ್ದಾಳೆ. ಈ ಜನ್ಮದಲ್ಲಿ ನಿಮಗೆ ಬುದ್ಧಿ ಬರಲ್ಲ, ಈ ಜನ್ಮದಲ್ಲಿ ನಾವಿಬ್ಬರೂ ಪೋಷಕರಾಗಲ್ಲ, ಪಪ್ಪಾಯ, ಪೈನಾಪಲ್‌ ರೆಡಿ ಇರುತ್ತೆ ತಿಂದುಬಿಟ್ರೆ ಆಯ್ತು… ನಾನು ನಿಮ್ಮನ್ನ ಹತ್ತಿರಕ್ಕೆ ಸೇರಿಸಲ್ಲ. ಇನ್ನೆಲ್ಲಿ ಮಗು ಆಗುತ್ತೆ ಅಂತ ಪತಿಗೆ ಜೋರು ಮಾಡಿದ್ದಾಳೆ.

  • ಮಹಾಲಕ್ಷ್ಮಿ ಪ್ರಕರಣದಲ್ಲಿ ಟ್ವಿಸ್ಟ್‌ – ಶಂಕಿತ ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

    ಮಹಾಲಕ್ಷ್ಮಿ ಪ್ರಕರಣದಲ್ಲಿ ಟ್ವಿಸ್ಟ್‌ – ಶಂಕಿತ ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

    ಬೆಂಗಳೂರು: ದೆಹಲಿಯ ಶ್ರದ್ಧಾವಾಕರ್‌ ಮಾದರಿಯಲ್ಲಿ ಹತ್ಯೆಗೀಡಾಗಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದ (Mahalakshmi Case) ತನಿಖೆ ಚುರುಕು ಪಡೆದಿದೆ. ಈ ನಡುವೆಯೇ ಪ್ರಕರಣ ಶಂಕಿತ ಆರೋಪಿ ಒಡಿಶಾದಲ್ಲಿ (Odisha) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಕೊಲೆ ಆರೋಪಿ. ಈತ ಮಹಾಲಕ್ಷ್ಮಿ ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ವಿಚಾರಣೆಗೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಒಡಿಶಾಗೆ ತೆರಳಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಭೀಕರ ಹತ್ಯೆ; ಅಶ್ರಫ್‌ ಸೇರಿ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ

    ತನಿಖೆ ಚುರುಕು:
    ಸೆಪ್ಟೆಂಬರ್ 1ರ ತನಕ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಕೊಲೆ ಆಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಅಂದಾಜಿಸಿದ್ದಾರೆ. ಇನ್ನೂ ಆಕೆ ಕೆಲಸ ಮಾಡ್ತಿದ್ದ ಶಾಪ್‌ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಬಾರದೇ ಇರೋದು ಹಲವು ಅನುಮಾಗಳಿಗೆ ಕಾರಣವಾಗಿತ್ತು. ಒಡಿಶಾದಲ್ಲಿ ಹಂತಕ ಇರುವ ಶಂಕೆ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಕೊಲೆ ಪ್ರಕರಣದ ಬಗ್ಗೆ ಒಡಿಶಾ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಮಹಾಲಕ್ಷ್ಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌ – ಫ್ರಿಡ್ಜ್‌ ಮೇಲೆ ಹಲವು ಕಡೆ ಹಲವು ಬೆರಳಚ್ಚು ಗುರುತು ಪತ್ತೆ!

    ಈ ಮಧ್ಯೆ, ಮಹಾಲಕ್ಷ್ಮಿ ಶವವನ್ನು 59 ತುಂಡು ಮಾಡಿರುವ ಹಂತಕ ತುಂಬಾನೆ ಅಪಾಯಕಾರಿ ಎಂದು ಮನೋವೈದ್ಯರು ವಿಶ್ಲೇಷಣೆ ಮಾಡಿದ್ದರು. ಸುಡೋ ಮ್ಯಾಚೋಯಿಸಂ ಎಂಬ ಅಪರಾಧ ಸ್ವಭಾವ ಇರಬಹುದು. ಆತನನ್ನು ತಕ್ಷಣವೇ ಬಂಧಿಸದಿದ್ರೆ ಇನ್ನಷ್ಟು ಮಂದಿ ಇದೇ ರೀತಿ ಬಲಿಯಾಗಬಹುದು ಎಂದು ಎಚ್ಚರಿಕೆ ಸಹ ನೀಡಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ- ಪಶ್ಚಿಮ ಬಂಗಾಳದಲ್ಲಿ ಹಂತಕ ತಲೆಮರೆಸಿಕೊಂಡಿರೋ ಶಂಕೆ

  • ಮಹಾಲಕ್ಷ್ಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌ – ಫ್ರಿಡ್ಜ್‌ ಮೇಲೆ ಹಲವು ಕಡೆ ಹಲವು ಬೆರಳಚ್ಚು ಗುರುತು ಪತ್ತೆ!

    ಮಹಾಲಕ್ಷ್ಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌ – ಫ್ರಿಡ್ಜ್‌ ಮೇಲೆ ಹಲವು ಕಡೆ ಹಲವು ಬೆರಳಚ್ಚು ಗುರುತು ಪತ್ತೆ!

    ಬೆಂಗಳೂರು: ಇಲ್ಲಿನ ವೈಯಾಲಿಕಾವಲ್‌ ಠಾಣಾ ವ್ಯಾಪ್ತಿಯಲ್ಲಿ (Vyalikaval) ನಡೆದಿರುವ ಒಂಟಿ ಮಹಿಳೆ ಮಹಾಲಕ್ಷ್ಮಿ ಹತ್ಯೆ ಪ್ರಕರಣ ಸಂಬಂಧ ವೈದ್ಯರಿಂದು ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮತ್ತೊಂದೆಡೆ ವೈಯಾಲಿಕಾವಲ್ ಪೊಲೀಸರು ತನಿಖೆ (Vyalikaval Police Investigation) ಚುರುಕುಗೊಳಿಸಿದ್ದು, ಭಯಾನಕ ಸತ್ಯಗಳನ್ನು ಬಯಲಿಗೆಳೆಯುತ್ತಿದ್ದಾರೆ.

    \

    ಪೊಲೀಸರ ತನಿಖೆಯಲ್ಲಿ, ಫ್ರಿಡ್ಜ್‌ ಮೇಲೆ ಹಲವು ಬೆರಳಚ್ಚಿನ ಗುರುತುಗಳು ಪತ್ತೆ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಇದರಿಂದ ಮಹಾಲಕ್ಷ್ಮಿ ಮರ್ಡರ್ ಹಿಂದೆ ಹಂತಕ ಒಬ್ಬನೆ ಇದ್ದಾನಾ? ಅಥವಾ ಇಬ್ಬರು ಇದ್ದಾರಾ ಅನ್ನೋ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಎಫ್‌ಎಸ್‌ಎಲ್‌ (FSL) ತಜ್ಞರು ಶೋಧ ಮುಂದುವರಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

    ಶಂಕಿತ ಹಂತಕನ ಸಹೋದರನ ವಿಚಾರಣೆ:
    ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವೈಯಾಲಿಕಾವಲ್ (Vyalikaval) ಪೊಲೀಸರು, ಸೋಮವಾರ ಬೆಂಗಳೂರಿನಲ್ಲಿದ್ದ ಹಂತಕನ ಸಹೋದರನನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಸುಮಾರು 2 ಗಂಟೆಗಳಕಾಲ ನಡೆದ ವಿಚಾರಣೆಯಲ್ಲಿ ಹಲವು ಮಾಹಿತಿಗಳನ್ನ ಸಂಗ್ರಹಿಸಿದ್ದಾರೆ. ಕೊಲೆ ಮಾಡಿ ಕರೆ ಮಾಡಿದ್ದರ ಬಗ್ಗೆ ಶಂಕಿತ ಹಂತನ ಸಹೋದರ ಮಾಹಿತಿ ನೀಡಿರೋದಾಗಿಯೂ ತಿಳಿದುಬಂದಿದೆ. ಸುಮಾರು 30 ತುಂಡುಗಳನ್ನಾಗಿ ಕತ್ತರಿಸಿದ ಬಳಿಕ ಸಹೋದರನಿಗೆ ಕಾಲ್ ಮಾಡಿ ಹೇಳಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕನ್ನಡಿಗರನ್ನ ಕೆಣಕಿದ್ದ ʻಸುಗಂಧʼ ರಾಣಿ – ಕೆಲಸದಿಂದ ಕಿತ್ತೊಗೆದು ಬಿಸಿಮುಟ್ಟಿಸಿದ ಕಂಪನಿ

    ಶಂಕಿತ ಹಂತಕ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ:
    ಮಹಾಲಕ್ಷ್ಮಿ ಕೊಲೆ ಪ್ರಕರಣದ ಶಂಕಿತ ಹಂತಕ ಕಳೆದ 6 ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಕೊಲೆಯಾಗಿರುವ ಮಹಾಲಕ್ಷ್ಮಿ ಹಾಗೂ ಶಂಕಿತ ಹಂತಕ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರಂನ ಬಟ್ಟೆ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಶಂಕಿತ ಹಂತಕ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಹಂತಕ ಕೆಲಸ ಬಿಟ್ಟ ಬಳಿಕ ತನ್ನಿಂದ ಅಂತರ ಕಾಯ್ದುಕೊಳ್ತಾ ಇದ್ದಾಳೆ ಅನ್ನೋ ಅನುಮಾನ ಆತನಲ್ಲಿ ಹುಟ್ಟಿಕೊಂಡಿತ್ತಂತೆ. ಆಗಾಗ ಅಂತರ ಕಾಯ್ದುಕೊಳ್ಳುವ ವಿಚಾರಕ್ಕೆ ಇಬ್ಬರ ಮದ್ಯೆ ಗಲಾಟೆಯೂ ನಡೆದಿತ್ತು ಎಂದು ಹೇಳಲಾಗುತ್ತಿದೆ.

    ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣಕ್ಕೆ ಶಂಕಿತ ಹಂತಕ ಭೀಕರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ಬೆಂಗಳೂರಿನ ದೇವಸ್ಥಾನದಲ್ಲಿ ಆಗಮಶಾಸ್ತ್ರದಂತೆ ಶುದ್ಧಿಕಾರ್ಯ