Tag: VVPI

  • ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಕೇದಾರನಾಥ್: ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹಾಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನ ಪ್ರವೇಶಿಸುವ ಮುನ್ನ ಮೋದಿಯವರ ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದು, ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದಾರೆ.

    ಆದೇಶಗಳನ್ನು ಹೊರಡಿಸುವ ವ್ಯಕ್ತಿ ಅವುಗಳನ್ನು ಪಾಲನೆ ಮಾಡಬೇಕು ಎಂಬವುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ರುದ್ರಾಭಿಷೇಕ ಮಾಡಲು ದೇವಾಲಯ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಶೂ ತೆಗೆಯುತ್ತಿದ್ದ ಪ್ರಧಾನಿಗೆ ಸಹಾಯ ಮಾಡಲು ವ್ಯಕ್ತಿಯೊಬ್ಬರು ಮುಂದಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಆ ವ್ಯಕ್ತಿಯನ್ನು ತಮಗೆ ಸಹಾಯ ಮಾಡುವುದರಿಂದ ತಡೆದಿದ್ದಾರೆ. ಮೋದಿ ಅವರು ದೇವಸ್ಥಾನದೊಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 28 ವರ್ಷಗಳ ನಂತರ ಪ್ರಧಾನಿಯೊಬ್ಬರು ಕೇದಾರನಾಥ್ ದೇವರಿಗೆ ರುದ್ರಾಭಿಷೇಕ ಮಾಡಿಸಿರುವುದು.

    ಗಣ್ಯ ವ್ಯಕ್ತಿಗಳ ಕಾರಿನಿಂದ ಕೆಂಪು ಗೂಟವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ವಿವಿಐಪಿ ಸಂಸ್ಕೃತಿ ಅಂತ್ಯಗೊಳ್ಳಬೇಕು ಎಂದು ಪ್ರಧಾನಿ ಆದೇಶ ಜಾರಿ ತಂದಿದ್ದಾರೆ. ಬೇರೆಯವರಿಗೆ ಹೇಳುವ ಮಾತುಗಳನ್ನು ನಾನು ಪಾಲನೆ ಮಾಡುತ್ತೇನೆ ಎಂದು ಮೋದಿ ತೋರಿಸಿದ್ದಾರೆ. ದೇಶದಲ್ಲಿ ವಿಪಿಐ ಬದಲು ಇಪಿಐ (Every Person Important) ನ್ನು ಮೋದಿ ರವಿವಾರ `ಮನ್ ಕೀ ಬಾತ್’ನಲ್ಲಿ ಪರಿಚಯಿಸಿದ್ದರು.

     

    https://youtu.be/Eolf5i8Kxkw