Tag: VVPAT

  • ಚುನಾವಣೆ ಪ್ರಕ್ರಿಯೆ ನಿಯಂತ್ರಿಸುವ ಅಧಿಕಾರ ತಮಗಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಕೇಸಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

    ಚುನಾವಣೆ ಪ್ರಕ್ರಿಯೆ ನಿಯಂತ್ರಿಸುವ ಅಧಿಕಾರ ತಮಗಿಲ್ಲ: ಇವಿಎಂ-ವಿವಿಪ್ಯಾಟ್ ತಾಳೆ ಕೇಸಲ್ಲಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

    ನವದೆಹಲಿ: ಮತಯಂತ್ರದಲ್ಲಿ ನಮೂದಾದ ಶೇ.100 ರಷ್ಟು ಮತಗಳೊಂದಿಗೆ ವಿವಿ ಪ್ಯಾಟ್ (VVPAT) ಸ್ಲಿಪ್‌ಗಳನ್ನು ಹೋಲಿಸಿ ಲೆಕ್ಕ ಹಾಕಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ತೀರ್ಪನ್ನು ಕಾಯ್ದಿರಿಸಿದೆ.

    ಕೇಂದ್ರ ಚುನಾವಣಾ ಆಯೋಗ ಎನ್ನುವುದು ಸಂವಿಧಾನಬದ್ಧವಾದ ಸಂಸ್ಥೆ. ನೀವು ಹೀಗೆ ಮಾಡಿ ಎಂದು ಕೋರ್ಟ್ ನಿರ್ದೇಶಿಸಲು ಬರಲ್ಲ. ಅಸಲಿಗೆ ಚುನಾವಣೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಅಧಿಕಾರ ತಮಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕನೌಜ್‌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸ್ಪರ್ಧೆ

    ಇವಿಎಂನಲ್ಲಿ ಮೈಕ್ರೋ ಕಂಟ್ರೋಲರ್ ಎಲ್ಲಿರುತ್ತೆ? ಕಂಟ್ರೋಲಿಂಗ್ ಯೂನಿಟ್‌ನಲ್ಲಾ? ವಿವಿ ಪ್ಯಾಟ್‌ನಲ್ಲಾ ಎಂದು ಪ್ರಶ್ನಿಸಿತು. ಇದಕ್ಕೆ ಚುನಾವಣಾಧಿಕಾರಿಗಳು ಕೋರ್ಟ್ ಮುಂದೆ ಹಾಜರಾಗಿ ವಿವರಣೆ ನೀಡಿದರು. ಇದನ್ನು ಪರಿಶೀಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತು.

    ಈ ಸಂದರ್ಭದಲ್ಲಿ, ನಮ್ಮ ಅನುಮಾನಗಳನ್ನು ಆಯೋಗ ನಿವಾರಿಸಿದೆ. ಆದರೆ ನಿಮ್ಮ ಆಲೋಚನಾ ಧೋರಣೆಯನ್ನು ನಾವು ಬದಲಿಸಲಾಗಲ್ಲ. ಕೇವಲ ಅನುಮಾನಗಳ ಆಧಾರದ ಮೇಲೆ ಯಾವುದೇ ತೀರ್ಪು ನೀಡಲ್ಲ ಎಂದು ಅರ್ಜಿದಾರರನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಹೇಳಿತು. ಇದನ್ನೂ ಓದಿ: ಬಿಜೆಪಿ ಟಿಕೆಟ್‌ ವಂಚಿತ, ಹತ್ರಾಸ್‌ ಸಂಸದ ಹೃದಯಾಘಾತದಿಂದ ನಿಧನ

  • ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ಅಣಕು ಮತದಾನದಲ್ಲಿ ಬಿಜೆಪಿಗೆ ಅಧಿಕ ಮತ – ಇವಿಎಂ ಪರಿಶೀಲನೆಗೆ ಸುಪ್ರೀಂ ಸೂಚನೆ

    ನವದೆಹಲಿ: ಕೇರಳದ ಕಾಸರಗೋಡಿನಲ್ಲಿ (Kasaragodu) ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ (BJP) ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (Electronic Voting Machines) ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ಆದೇಶಿಸಿದೆ.

    ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ ನಂತರ ನ್ಯಾ.ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಇವಿಎಂ ಸಮಸ್ಯೆಯನ್ನು ಪರಿಶೀಲಿಸುವಂತೆ ಇಸಿಐಗೆ ಸೂಚಿಸಿತು. ಇದನ್ನೂ ಓದಿ: ಬೆಂಗ್ಳೂರು ಕುದುರೆಗಳಿಗೆ ಗ್ಲಾಂಡರ್ಸ್‌ ರೋಗ ಕಂಟಕ; ಚಿತಾಗಾರದಲ್ಲಿ ರೋಗ ಪೀಡಿತ ಕುದುರೆ ಬರ್ನಿಂಗ್‌

    ಅಣಕು ಮತದಾನ ನಡೆದ ವೇಳೆ 4 ಇವಿಎಂಗಳು ಮತ್ತು ವಿವಿಪ್ಯಾಟ್‍ಗಳ (VVPAT) ಹೋಲಿಕೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಮುಂದೆ ಈ ವಿಚಾರ ಪ್ರಸ್ತಾಪಿಸಿದರು. ಮನವಿಯನ್ನು ಆಲಿಸಿದ ಪೀಠ ಚುನಾವಣಾ ಆಯೋಗದ ಸಲಹೆಗಾರ ಮಣಿಂದರ್ ಸಿಂಗ್ ಅವರಿಗೆ ಸೂಚನೆ ನೀಡಿದೆ.

    ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳೊಂದಿಗೆ ತಾಳೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್‍ಗಳಿಗೆ ಹೋಲಿಸಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.

    ಮತದಾರರ ಮತವನ್ನು ದಾಖಲಿಸಿದಂತೆ ಖಚಿತಪಡಿಸಿಕೊಳ್ಳಲು ಮತಪೆಟ್ಟಿಗೆಯಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳನ್ನು ಭೌತಿಕವಾಗಿ ಬಿಡಲು ಮತದಾರರಿಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರಸ್ತುತ, ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಿದ ಐದು ಇವಿಎಂಗಳಲ್ಲಿ ದಾಖಲಾದ ಮತಗಳಿಗೆ ಮಾತ್ರ ವಿವಿಪ್ಯಾಟ್ ಪರಿಶೀಲನೆಯನ್ನು ಮಾಡಲಾಗುತ್ತಿತ್ತು. ಇದನ್ನೂ ಓದಿ: ಮಸೀದಿಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್: ಮುತಾಲಿಕ್

  • ಏ.16ಕ್ಕೆ ವಿವಿಪ್ಯಾಟ್ ತಾಳೆಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ: ಸುಪ್ರೀಂ

    ಏ.16ಕ್ಕೆ ವಿವಿಪ್ಯಾಟ್ ತಾಳೆಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ: ಸುಪ್ರೀಂ

    ನವದೆಹಲಿ: ವಿವಿಪ್ಯಾಟ್ (VVPAT) ಮೂಲಕ ಚಲಾವಣೆಯಾದ ಮತಗಳ ಮರು ಪರಿಶೀಲನೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಏ.16 ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

    ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಏ.16 ರಂದು ವಿಚಾರಣೆಗೆ ಈ ಬಗ್ಗೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ‌

    ವಕೀಲ ಪ್ರಶಾಂತ್ ಭೂಷಣ್ ಅವರು ತುರ್ತು ವಿಚಾರಣೆಯನ್ನು ಕೋರಿದ ನಂತರ, ಇತರ ವಿಷಯಗಳ ಜೊತೆಗೆ ಎನ್‍ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಸಲ್ಲಿಸಿದ ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಏಪ್ರಿಲ್ 3 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

    ಎಪ್ರಿಲ್ 1 ರಂದು, ಆಯ್ದ ಐದು ಇವಿಎಂಗಳಿಂದ ಸ್ಲಿಪ್‍ಗಳನ್ನು ತಾಳೆ ಮಾಡುವ ಪ್ರಸ್ತುತ ಪದ್ಧತಿಗೆ ವಿರುದ್ಧವಾಗಿ ಚುನಾವಣೆಯಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳ ಸಂಪೂರ್ಣ ಎಣಿಕೆಗೆ ಕೋರಿ ಕಾರ್ಯಕರ್ತ ಅರುಣ್ ಕುಮಾರ್ ಅಗರವಾಲ್ ಮನವಿ ಮಾಡಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಮತ್ತು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.

    ಪ್ರಸ್ತುತ ಬ್ಯಾಲೆಟ್ ಯಂತ್ರದಲ್ಲಿ ಬಟನ್ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್ ಸ್ಕ್ರೀನ್‍ನಲ್ಲಿ ಒಂದು ಸ್ಲಿಪ್ ರೆಡಿಯಾಗುತ್ತದೆ. ಆ ಸ್ಲಿಪ್‍ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್ ಈ ಸ್ಲಿಪ್ ಸ್ಕ್ರೀನ್‍ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್ ಆದ ಬಳಿಕ ಆ ಸ್ಲಿಪ್ ಅಟೋಮ್ಯಾಟಿಕ್ ಆಗಿ ಕತ್ತರಿಸಿ ವಿವಿಪ್ಯಾಟ್ ಬಾಕ್ಸ್ ಒಳಗಡೆ ಬೀಳುತ್ತದೆ.

    ಏಳು ಹಂತದಲ್ಲಿ ಲೋಕಸಭೆ ಚುನಾವಣೆ ಭಾರತದಲ್ಲಿ ನಡೆಯಲಿದ್ದು ಏ.19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್‌ ಕೇರ್ – ಏ.23 ರವರೆಗೆ‌ ಜೈಲೇ ಗತಿ

  • ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

    ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

    ನವದೆಹಲಿ: ಪ್ರತಿ ಚುನಾವಣೆಯ (Election) ಸಮಯದಲ್ಲಿ ಸದ್ದು ಮಾಡುವ ಇವಿಎಂ (EVM) ಬಗ್ಗೆ ಕಾಂಗ್ರೆಸ್‌ (Congress) ತನ್ನ ಪ್ರಣಾಳಿಕೆಯಲ್ಲಿ (Manifesto) ಪ್ರಸ್ತಾಪ ಮಾಡಿದೆ.

    ಇವಿಎಂ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್‌ ಇವಿಎಂ ಮೂಲಕ ಮತದಾನ ಮಾಡಿದರೂ ಸ್ಲಿಪ್‌ ಮತದಾರನ ಕೈಗೆ ನೀಡಬೇಕೆಂದು ಹೇಳಿದೆ.  ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು

     
    ಪ್ರಣಾಳಿಕೆಯಲ್ಲಿ ಏನಿದೆ?
    ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಭರವಸೆ ನೀಡುತ್ತೇವೆ. ಇವಿಎಂ ಮೂಲಕ ಮುದ್ರಣವಾದ ಪೇಪರ್‌ ಅನ್ನು ಮತದಾರ ಕೈಯಲ್ಲಿ ಹಿಡಿದು ಪರಿಶೀಲಿಸಿ ನಂತರ ಅದನ್ನು  ಬಾಕ್ಸ್‌ಗೆ ಹಾಕುವಂತೆ ಮಾಡುತ್ತೇವೆ. ಇವಿಎಂನಲ್ಲಿ ಬಿದ್ದ ಮತಗಳಿಗೂ ಮತ್ತು ವಿವಿಪ್ಯಾಟ್‌ ಮೂಲಕ ಬಿದ್ದ ಬ್ಯಾಲೆಟ್‌ ಪೇಪರ್‌ಗೆ ತಾಳೆಯಾಗಬೇಕು. ಈ ವ್ಯವಸ್ಥೆ ಜಾರಿಯಾಗಲು ಚುನಾವಣಾ ಕಾನೂನಿಗೆ ತಿದ್ದುಪಡಿ ಮಾಡುತ್ತೇವೆ ಎಂದು ಭರವಸೆ ನೀಡಿದೆ.

    ಮತದಾರ ಕೈಯಲ್ಲಿ ಬ್ಯಾಲೆಟ್‌ ಪೇಪರ್‌ ಪರೀಕ್ಷಿಸಲು ಅವಕಾಶ ಸಿಗುವುದರಿಂದ ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಹೆಚ್ಚಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ದನ್ನೂ ಓದಿ: ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಮುಂದಿನ ಗುರಿ: ಮಲ್ಲಿಕಾರ್ಜುನ ಖರ್ಗೆ


    ಈಗ ಹೇಗಿದೆ?
    ಪ್ರಸ್ತುತ ಬ್ಯಾಲೆಟ್‌ ಯಂತ್ರದಲ್ಲಿ ಬಟನ್‌ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್‌ ಸ್ಕ್ರೀನ್‌ನಲ್ಲಿ ಒಂದು ಸ್ಲಿಪ್‌ ರೆಡಿಯಾಗುತ್ತದೆ. ಆ ಸ್ಲಿಪ್‌ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್‌ ಈ ಸ್ಲಿಪ್‌ ಸ್ಕ್ರೀನ್‌ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್‌ ಆದ ಬಳಿಕ ಆ ಸ್ಲಿಪ್‌ ಅಟೋಮ್ಯಾಟಿಕ್‌ ಆಗಿ ಕತ್ತರಿಸಿ ವಿವಿಪ್ಯಾಟ್‌ ಬಾಕ್ಸ್‌ ಒಳಗಡೆ ಬೀಳುತ್ತದೆ.

    ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 5 ಮತ ಎಣಿಕೆ ಕೇಂದ್ರಗಳ ವಿವಿಪ್ಯಾಟ್‌ ಮತ್ತು ಎವಿಎಂ ಯಂತ್ರಗಳಲ್ಲಿ ಬಿದ್ದ ಮತಗಳನ್ನು ಎಣಿಕೆ ಮಾಡಿ ತಾಳೆ ಹಾಕುತ್ತಾರೆ. ಬ್ಯಾಲೆಟ್‌ ಪೇಪರ್‌ ಚುನಾವಣೆಯಲ್ಲಿ ಅಕ್ರಮಗಳು ನಡೆಯತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಮತ ಎಣಿಕೆ ಪ್ರಕ್ರಿಯೆ ಸುಲಭಗೊಳಿಸಲು ಭಾರತದಲ್ಲಿ ಇವಿಎಂ ಬಳಕೆ ಮಾಡಲಾಗುತ್ತದೆ. ಇದನ್ನೂ ಓದಿ:ದೇಶಾದ್ಯಂತ ಜಾತಿಗಣತಿ, ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ – ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ವಿಪಕ್ಷಗಳ ಬೇಡಿಕೆ ಏನು?
    ವಿಪಕ್ಷಗಳು ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆಯಾಗಿದೆ. ಈಗ ಸ್ಲಿಪ್‌ ಪ್ರಿಂಟ್‌ ಆಗಿ 7 ಸೆಕೆಂಡ್‌ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಒಂದು ವೇಳೆ ಕೈಗೆ ಸ್ಲಿಪ್‌ ಕೊಟ್ಟರೆ ಮತದಾರ ಅದನ್ನು ಬಾಕ್ಸ್‌ಗೆ ಹಾಕದೇ ಹರಿದು ಹಾಕಿದರೆ ಬಿದ್ದ ಮತಕ್ಕೂ ವಿವಿ ಪ್ಯಾಟ್‌ನಲ್ಲಿ ಬಿದ್ದ ಸ್ಲಿಪ್‌ ತಾಳೆಯಾಗುವುದಿಲ್ಲ. ಈ ಕಾರಣಕ್ಕೆ ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ಇಲ್ಲಿಯವರೆಗೆ ಒಪ್ಪಿಲ್ಲ. ಸುಪ್ರೀಂ ನೀಡುವ ಆದೇಶದ ಮೇಲೆ ಈಗ ವಿಪಕ್ಷಗಳ ಬೇಡಿಕೆ ನಿಂತಿದೆ.

  • ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ನವದೆಹಲಿ: ಇವಿಎಂಗಳೊಂದಿಗೆ ವಿವಿಪ್ಯಾಟ್ ಯಂತ್ರದ ಸ್ಲಿಪ್‌ಗಳನ್ನು ಹೊಂದಾಣಿಕೆ ಮಾಡುವ ಅರ್ಜಿಯನ್ನು ಮುಂದಿನವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಎಡಿಆರ್ (Association for Democratic Reforms) ಸಲ್ಲಿಸಿರುವ ಅರ್ಜಿಯನ್ನು ಮುಂದಿನ ಮಂಗಳವಾರ ಅಥವಾ ಬುಧವಾರಕ್ಕೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.

    ಅರ್ಜಿದಾರರ ಸಂಘಟನೆ ಎಡಿಆರ್ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ವಿವಿಪ್ಯಾಟ್ ವಿಚಾರವಾಗಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಕಳುಹಿಸಿದೆ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?

    ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಕೋರ್ಟ್ ಮುಂದೆ ಹಾಜರಾಗಿ, ಚುನಾವಣೆ ಹತ್ತಿರವಿದ್ದು, ಈ ಬಗ್ಗೆ ವಿಚಾರಣೆ ನಡೆಸದಿದ್ದರೆ ಈ ಅರ್ಜಿ ನಿಷ್ಫಲವಾಗಲಿದೆ ಎಂದು ವಾದಿಸಿದರು. ಅರ್ಜಿಯ ಪರಿಸ್ಥಿತಿ ಅರಿತ ಪೀಠವು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠ ವಿಚಾರಣೆಗೆ ಸಮ್ಮತಿ ಸೂಚಿಸಿತು. ಇದನ್ನೂ ಓದಿ: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ: ವೆಂಕಟೇಶ್‌ಗೆ ಪ್ರತಾಪ್‌ ಸಿಂಹ ತಿರುಗೇಟು

    ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ನಲ್ಲಿ ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ -ವಿವಿಪಿಎಟಿ) ಸ್ಲಿಪ್‌ಗಳನ್ನು ಇವಿಎಂ ಯಂತ್ರಗಳೊಂದಿಗೆ ಹೊಂದಾಣಿಕೆ ಮಾಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದೆ. VVPAT ಸ್ವತಂತ್ರ ಮತ ಪರಿಶೀಲನಾ ಯಂತ್ರವಾಗಿದ್ದು, ಮತದಾರರು ಚಲಾಯಿಸಿದ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ VVPAT ಸ್ಲಿಪ್‌ಗಳ ಮೂಲಕ ಕೇವಲ ಐದು ಆಯ್ದ EVM ಗಳನ್ನು ಪರಿಶೀಲಿಸುವ ಅಭ್ಯಾಸವಿದೆ.

    ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ವಿವಿಪ್ಯಾಟ್ ಸ್ಲಿಪ್‌ಗಳನ್ನು ಸಂಪೂರ್ಣ ಎಣಿಕೆ ಮತ್ತು ಇವಿಎಂಗಳೊಂದಿಗೆ ಹೊಂದಿಸುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ.

  • ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ನವದೆಹಲಿ: ಇವಿಎಂ (EVM) ಬಗ್ಗೆ INDIA ಒಕ್ಕೂಟದ ಸದಸ್ಯರು ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ವಿವಿಪ್ಯಾಟ್‌ಗಳಲ್ಲಿ (VVPAT) ಬಿದ್ದ ಸ್ಲಿಪ್‌ಗಳನ್ನು ಎಣಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

    ದೆಹಲಿಯಲ್ಲಿ ನಡೆದ ನಾಲ್ಕನೇ ಸಭೆಯಲ್ಲಿ ಇವಿಎಂ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿದೆ. ಇವಿಎಂಗಳ ಕಾರ್ಯನಿರ್ವಹಣೆಯ ಸಮಗ್ರತೆಯ ಬಗ್ಗೆ ಹಲವು ಅನುಮಾನಗಳಿವೆ ಮತ್ತು ಇವುಗಳನ್ನು ಅನೇಕ ತಜ್ಞರು ಮತ್ತು ವೃತ್ತಿಪರರು ಸಹ ಎತ್ತಿದ್ದಾರೆ ಎಂದು ವಿಪಕ್ಷಗಳು ಹೇಳಿವೆ.

    ವಿವಿಪ್ಯಾಟ್ ಬಿದ್ದ ಎಲ್ಲಾ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು. ವಿವಿಪ್ಯಾಟ್ ಸ್ಲಿಪ್ (VVPAT Slip) ಬಾಕ್ಸ್‌ನಲ್ಲಿ ಬೀಳುವ ಮತದಾರರ ಅದನ್ನು ಕೈಯಾರೇ ಪರಿಶೀಲಿಸಬೇಕು. ಮತದಾರ ತಮ್ಮ ಆಯ್ಕೆಯನ್ನು ಪರಿಶೀಲಿಸಿದ ನಂತರ ಅದನ್ನು ಪ್ರತ್ಯೇಕ ವಿವಿ ಪ್ಯಾಟ್‌ ಪೆಟ್ಟಿಗೆಯಲ್ಲಿ ಹಾಕಬೇಕು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

    ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಜನರ ಸಂಪೂರ್ಣ ವಿಶ್ವಾಸವನ್ನು ಮರುಸ್ಥಾಪಿಸುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ.  ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ಈಗ ಹೇಗಿದೆ?
    ಪ್ರಸ್ತುತ ಬ್ಯಾಲೆಟ್‌ ಯಂತ್ರದಲ್ಲಿ ಬಟನ್‌ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್‌ ಸ್ಕ್ರೀನ್‌ನಲ್ಲಿ ಒಂದು ಸ್ಲಿಪ್‌ ರೆಡಿಯಾಗುತ್ತದೆ. ಆ ಸ್ಲಿಪ್‌ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್‌ ಈ ಸ್ಲಿಪ್‌ ಸ್ಕ್ರೀನ್‌ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್‌ ಆದ ಬಳಿಕ ಆ ಸ್ಲಿಪ್‌ ಅಟೋಮ್ಯಾಟಿಕ್‌ ಆಗಿ ಕತ್ತರಿಸಿ ವಿವಿಪ್ಯಾಟ್‌ ಬಾಕ್ಸ್‌ ಒಳಗಡೆ ಬೀಳುತ್ತದೆ.

    ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 5 ಮತ ಎಣಿಕೆ ಕೇಂದ್ರಗಳ ವಿವಿಪ್ಯಾಟ್‌ ಮತ್ತು ಎವಿಎಂ ಯಂತ್ರಗಳಲ್ಲಿ ಬಿದ್ದ ಮತಗಳನ್ನು ಎಣಿಕೆ ಮಾಡಿ ತಾಳೆ ಹಾಕುತ್ತಾರೆ. ಬ್ಯಾಲೆಟ್‌ ಪೇಪರ್‌ ಚುನಾವಣೆಯಲ್ಲಿ ಅಕ್ರಮಗಳು ನಡೆಯತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಮತ ಎಣಿಕೆ ಪ್ರಕ್ರಿಯೆ ಸುಲಭಗೊಳಿಸಲು ಭಾರತದಲ್ಲಿ ಇವಿಎಂ ಬಳಕೆ ಮಾಡಲಾಗುತ್ತದೆ.

    ವಿಪಕ್ಷಗಳ ಬೇಡಿಕೆ ಈಡೇರುತ್ತಾ?
    ವಿಪಕ್ಷಗಳು ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು ಎಂದು ಬೇಡಿಕೆ ಇಟ್ಟಿವೆ. ಈಗ ಸ್ಲಿಪ್‌ ಪ್ರಿಂಟ್‌ ಆಗಿ 7 ಸೆಕೆಂಡ್‌ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಒಂದು ವೇಳೆ ಕೈಗೆ ಸ್ಲಿಪ್‌ ಕೊಟ್ಟರೆ ಮತದಾರ ಅದನ್ನು ಬಾಕ್ಸ್‌ಗೆ ಹಾಕದೇ ಹರಿದು ಹಾಕಿದರೆ ಬಿದ್ದ ಮತಕ್ಕೂ ವಿವಿ ಪ್ಯಾಟ್‌ನಲ್ಲಿ ಬಿದ್ದ ಸ್ಲಿಪ್‌ ತಾಳೆಯಾಗುವುದಿಲ್ಲ. ಈ ಕಾರಣಕ್ಕೆ ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪುತ್ತಾ ಎಂಬುದರ ಬಗ್ಗೆಯೇ ಅನುಮಾನವಿದೆ.

     

  • ಇವಿಎಂನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಆರೋಪ- ಎಣಿಕೆ ದಿನ ಲೆಕ್ಕ ಪಕ್ಕಾ ಇರಲಿ ಎಂದ ಮತದಾರ

    ಇವಿಎಂನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಆರೋಪ- ಎಣಿಕೆ ದಿನ ಲೆಕ್ಕ ಪಕ್ಕಾ ಇರಲಿ ಎಂದ ಮತದಾರ

    ಚಿಕ್ಕಮಗಳೂರು: ಮತದಾನ ಮುಗಿದ ಬಳಿಕ ಇವಿಎಂ (EVM) ಹಾಗೂ ವಿವಿ ಪ್ಯಾಟ್ (VVPAT) ಯಂತ್ರಗಳನ್ನು ಅಧಿಕಾರಿಗಳು ಮತಗಟ್ಟೆಯಲ್ಲೇ ಬಿಟ್ಟು ಹೋದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

    ನಗರದ ಪೆನ್ಷನ್ ಮೊಹಲ್ಲದ ಕಾಲೇಜಿನ ಮತಗಟ್ಟೆ ಸಂಖ್ಯೆ 168 ಹಾಗೂ 169 ರಲ್ಲಿ ಇರಿಸಲಾಗಿದ್ದ ಒಂದು ಇವಿಎಂ ಮಾತ್ರ ತೆಗೆದುಕೊಂಡು ಹೋಗಿದ್ದರು. ಬಳಿಕ ರಾಜಕೀಯ ಪಕ್ಷಗಳ ಏಜೆಂಟರ (Election Agents) ಕಣ್ಣಿಗೆ ಯಂತ್ರಗಳು ಕಾಣಿಸಿವೆ. ಅಧಿಕಾರಿಗಳನ್ನು ವಾಪಸ್ ಕರೆಸಿ ಪೊಲೀಸ್ ಭದ್ರತೆಯಲ್ಲಿ ಮತಯಂತ್ರವನ್ನು ಸಾಗಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ಕಿಡ್ನಿ ಸಮಸ್ಯೆ – ಸಿ.ಟಿ ರವಿ ಆಸ್ಪತ್ರೆಗೆ ದಾಖಲು

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೆನ್ಷನ್ ಮೊಹಲ್ಲಾ ಬೂತ್ ನಲ್ಲಿ 700 ಮತಗಳಿವೆ. ಮತ ಎಣಿಕೆಯ ದಿನ ಲೆಕ್ಕ ಸರಿಯಾಗಿ ಇರಬೇಕೆಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಲಿ, 115 ಸ್ಥಾನ ಪಡೆದು ಸರ್ಕಾರ ರಚಿಸುತ್ತೇವೆ : ಬಿಎಸ್‌ವೈ

  • ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

    ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

    ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಗೆ (Election) ರಾಯಚೂರು (Raichuru) ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತದಾರರಿಗೆ ಅರಿವು ಮೂಡಿಸಲು ಜಿಲ್ಲಾದ್ಯಂತ ಇವಿಎಂ (EVM) ಪ್ರಾತ್ಯಕ್ಷಿಕೆ ಕೇಂದ್ರಗಳನ್ನ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

    ಇವಿಎಂ ಮೂಲಕ ನಡೆಯುವ ಮತದಾನ ಪಾರದರ್ಶಕವಾಗಿರುತ್ತದೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡಲು ಇವಿಎಂ ಯಂತ್ರದ ಮಾದರಿಯನ್ನು ಸ್ಥಾಪಿಸಲಾಗಿದೆ. ಮತದಾನದ ಬಗ್ಗೆ ಗೊಂದಲಗಳಿದ್ದರೆ ಮತದಾರರು ಪರಿಹರಿಸಿಕೊಳ್ಳಲು ಪ್ರಾತ್ಯಕ್ಷಿಕೆ ಕೇಂದ್ರಗಳು ನೆರವಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲಾ ಚುನಾವಣಾ ಐಕಾನ್ ಆಗಿ ಬಾಹುಬಲಿ ನಿರ್ದೇಶಕ ರಾಜಮೌಳಿ ನೇಮಕ

    ಜಿಲ್ಲೆಯಲ್ಲಿ 6 ಮೊಬೈಲ್ ಕೇಂದ್ರ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ವಿಧಾನಸಭಾ ಕ್ಷೇತ್ರಗಳ ಆರ್‍ಓ, ಎಸಿ ಕಚೇರಿ, ಇಓ ಕಚೇರಿ, ತಹಶೀಲ್ದಾರ್ ಕಚೆರಿಗಳಲ್ಲಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನ ತೆರೆಯಲಾಗಿದೆ. 3522 ಬಿಯುಗಳು, 2468 ಸಿಯುಗಳು, 2677 ವಿವಿ ಪ್ಯಾಟ್ ಯಂತ್ರಗಳು ಬಂದಿವೆ. ಮೊದಲ ಹಂತದ ತಪಾಸಣೆಯಲ್ಲಿ 4 ಸಿಯು, 4 ಬಿಯು, 8 ವಿವಿಪ್ಯಾಟ್ (VVPAT) ಯಂತ್ರಗಳು ತಾಂತ್ರಿಕ ದೋಷ ಹೊಂದಿರುವುದು ಕಂಡು ಬಂದಿದೆ. ಅಂತಹ ಒಟ್ಟು 16 ಯಂತ್ರಗಳನ್ನು ತಿರಸ್ಕರಿಸಿ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು

  • ವಿವಿಪ್ಯಾಟ್ ಮತ ಪರಿಶೀಲನೆ – ವಿಪಕ್ಷಗಳ ಅರ್ಜಿ ವಜಾ

    ವಿವಿಪ್ಯಾಟ್ ಮತ ಪರಿಶೀಲನೆ – ವಿಪಕ್ಷಗಳ ಅರ್ಜಿ ವಜಾ

    ನವದೆಹಲಿ: 2019 ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ವಿವಿಪ್ಯಾಟ್ ಹಾಗೂ ಇವಿಎಂ ಶೇ.50 ರಷ್ಟು ತಾಳೆ ನೋಡಲು ವಿಪಕ್ಷಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನ ವಜಾಗೊಳಿಸಿದೆ.

    ಅರ್ಜಿಯ ಕುರಿತು ಈಗಾಗಲೇ ನ್ಯಾಯಾಲಯ ನೀಡಿರುವ ಆದೇಶವನ್ನು ಮತ್ತೆ ಪುನರ್ ಪರಿಶೀಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯಿ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿದೆ.

    ಕೆಲ ದಿನಗಳ ಹಿಂದೆ ಈ ಕುರಿತು ಮಹತ್ವದ ಆದೇಶ ನೀಡಿದ್ದ ನ್ಯಾಯಾಲಯ ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯ ಬದಲಾಗಿ 5 ಮತಗಟ್ಟೆಯ ವಿವಿ ಪ್ಯಾಟ್ ಹಾಗೂ ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ತಾಳೆ ಮಾಡಬೇಕು ಎಂದು ಆದೇಶಿಸಿತ್ತು. ಈ ತೀರ್ಪನ್ನು ಪುನರ್ ಪರಿಶೀಲಿಸಿ ಶೇ. 25 ರಷ್ಟು ಇವಿಎಂ ಗಳನ್ನಾದರು ತಾಳೆ ನೋಡಬೇಕು ಎಂದು 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಕೆ ಮಾಡಿದ್ದವು. ಇದಕ್ಕೂ ಮುನ್ನ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿ ಚುನಾವಣಾ ಕ್ಷೇತ್ರದ ಶೇ.50 ರಷ್ಟು ಇವಿಎಂ ಗಳನ್ನು ವಿವಿಪ್ಯಾಟ್ ನೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿತ್ತು. ಈ ಮನವಿಗೆ ಆಯೋಗ ಶೇ.50 ರಷ್ಟು ಮತ ಎಣಿಕೆ ನಡೆಸಿದರೆ ಫಲಿತಾಂಶ ಪ್ರಕಟಿಸಲು 5-6 ದಿನ ಬೇಕಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿತ್ತು.

  • ಸ್ಟ್ರಾಂಗ್ ರೂಮ್‍ನಲ್ಲಿ ಫೋಟೋ – ಕಾರ್ಯಕರ್ತ ಜೈಲುಪಾಲು

    ಸ್ಟ್ರಾಂಗ್ ರೂಮ್‍ನಲ್ಲಿ ಫೋಟೋ – ಕಾರ್ಯಕರ್ತ ಜೈಲುಪಾಲು

    ಹೈದರಾಬಾದ್: ಇವಿಎಂ ಮತ್ತು ವಿವಿಪ್ಯಾಟ್‍ಗಳಿದ್ದ ಸ್ಟ್ರಾಂಗ್ ರೂಮ್ ನಲ್ಲಿ ಫೋಟೋ ತೆಗೆದ ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಕರ್ತನೊಬ್ಬ ಜೈಲುಪಾಲಾಗಿದ್ದಾನೆ.

    ಮಲ್ಕಾಜ್‍ಗಿರಿ ಲೋಕಸಭಾ ಕ್ಷೇತ್ರದ ಬೂತ್ ಏಜೆಂಟ್ ಎನ್ ವೆಂಕಟೇಶ್ ಬಂಧಿತ ಆರೋಪಿ. ಅಭ್ಯರ್ಥಿ ಮರಿ ರಾಜಶೇಖರ್ ರೆಡ್ಡಿ ಅವರ ಬೂತ್ ಏಜೆಂಟ್ ಆಗಿದ್ದ ವೆಂಕಟೇಶ್ ಏಪ್ರಿಲ್ 11 ರಂದು ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಬೋಗ್ರಾಮ್ ಕಾಲೇಜಿನ ಸ್ಟ್ರಾಂಗ್ ರೂಮ್‍ಗೆ ತೆರಳಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.

    ಸ್ಟ್ರಾಂಗ್ ರೂಮಿನ ಒಳಗಡೆ ಚುನಾವಣಾ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪಕ್ಷದ ಕಾರ್ಯಕರ್ತನಾಗಿರುವ ಈತ ಕೊಠಡಿ ಪ್ರವೇಶಿಸಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.