ರಾಯಚೂರು: ರಾಷ್ಟ್ರ ರಾಜಕಾರಣ ಒಂದು ರೀತಿ ಕವಲು ದಾರಿಯಲ್ಲಿದೆ. ಕಳೆದ 10-11 ವರ್ಷಗಳಿಂದ ಅತ್ಯಂತ ದುರ್ಬಲ ಪ್ರಧಾನಿ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಂಸದ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ (VS Ugrappa) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಸಿಂಹಾವಲೋಕನ ಮಾಡಿದರೆ ಮೋದಿ ಅವಧಿಯಲ್ಲಿ ಅವರ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. 2014ರಿಂದ ದೇಶದ ಮೇಲೆ 3,982 ಸಾರಿ ಭಯೋತ್ಪಾದಕರ ದಾಳಿ ಆಗಿದೆ. ಕಾಶ್ಮೀರದಲ್ಲಿ ನಡೆದ ಘಟನೆಗೆ ಕೇಂದ್ರ ಸರ್ಕಾರದ ಬೇಹುಗಾರಿಕೆ, ಭದ್ರತಾ ವೈಫಲ್ಯ ಕಾರಣ. ಪ್ರಧಾನಿಯನ್ನು ಭಾರಿ ಬಿಂಬಿಸುತ್ತಾರೆ. ಇದೇನಾ ಅಚ್ಚಾ ದಿನ್? ಪ್ರಧಾನಿಯಾಗಿ ಮುಂದುವರೆಯಲು ಮೋದಿಗೆ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೂರು ಜಿಲ್ಲೆ, 9 ಠಾಣೆ, 13 ಸ್ಪೀಡ್ ಬೋಟ್ ಗಸ್ತು – ಅಲರ್ಟ್ ಬಗ್ಗೆ ಕರಾವಳಿ ಕಾವಲು ಪಡೆ ಎಸ್‌ಪಿ ಹೇಳಿದ್ದೇನು?
ದೇಶದ ರಕ್ಷಣೆ ವಿಚಾರದಲ್ಲಿ ಎಂದೂ ಕಾಂಗ್ರೆಸ್ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಉಗ್ರರನ್ನು ಸದೆಬಡೆಯಲು ಕಾಂಗ್ರೆಸ್ ತ್ಯಾಗ, ಬಲಿದಾನ ಮಾಡುತ್ತಾ ಬಂದಿದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಬಲಿದಾನವಾಗಿದೆ. ದೇಶದ ರಕ್ಷಣೆಗೊಸ್ಕರ ಕಾಂಗ್ರೆಸ್ ಸದಾ ಸಿದ್ಧವಿದೆ. ಪ್ರಧಾನಿ, ಕೇಂದ್ರ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಬದ್ಧರಿದ್ದೇವೆ. ಆದರೆ ನಿಮ್ಮ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಜನರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾಳು – ಕಂಗಲಾದ ಕಂಪ್ಲಿಯ ರೈತರು
ದಾವಣಗೆರೆ: ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.
ಶ್ರೀ ಆಂಜನೇಯ ಜನ್ಮಭೂಮಿ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯ ಕಿಷ್ಕಿಂದೆ ಆಂಜನಾದ್ರಿ ಬೆಟ್ಟವೇ ಹನುಮನ ನಿಜವಾದ ಜನ್ಮಭೂಮಿ. ತಿರುಪತಿಯಲ್ಲಿ ವಿನಾಕರಣ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಆಂಜನೇಯನ ಜನ್ಮಭೂಮಿಯನ್ನೆ ಹೈಜಾಕ್ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಯ ಪ್ರಶ್ನೆ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ
ಪ್ರಧಾನಿ ಮೋದಿ ಅವರ ಶ್ರೀಮತಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಮ ಜನ್ಮಭೂಮಿ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಇಲ್ಲಿ ಯಾಕೆ ಮೌನ ವಹಿಸಿದೆ. ಯಾಕೆ RSS ಕೇಂದ್ರ, ರಾಜ್ಯ ಸರ್ಕಾರ ಖಂಡಿಸುತ್ತಿಲ್ಲ? ಸುಮ್ಮನಿದ್ದರೆ ಒಪ್ಪಿಕೊಂಡಂತೆ ಅಲ್ವಾ ಎಂದು ವ್ಯಂಗ್ಯವಾಡಿದರು.
ನಾವು ಬಿಜೆಪಿ ಅವರ ತರ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ ಆಂಜನೇಯ. ಆಂಜನೇಯನ ನೈಜ ಜನ್ಮಭೂಮಿ ಅಭಿವೃದ್ಧಿ ಮಾಡುವ ಕೆಲಸ ಎಲ್ಲರಿಂದ ಆಗಲಿ. ತಿರುಪತಿಗೆ ಆಂಜನೇಯ ಬಂದು ಹೋಗಿರಬಹುದು. ಆದರೆ ನಿಜವಾದ ಹುಟ್ಟು ಕರ್ನಾಟಕದ ಕಿಷ್ಕಿಂದೆಯಲ್ಲಿದೆ. ಈ ಹಿನ್ನೆಲೆ ಗಂಗಾವತಿಯ ಆಂಜನಾದ್ರಿಬೆಟ್ಟ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.
ರಾಷ್ಟ್ರದಲ್ಲಿ ರಾಮ ಜನ್ಮಭೂಮಿ ಬಗ್ಗೆ ವಾದ ನಡೀತಾ ಇದೆ. ಸಂಘರ್ಷದ ಬಳಿಕ ರಾಮಮಂದಿರ ಕಟ್ಟಲಾಗ್ತಿದೆ. ಇಡೀ ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಆಧುನಿಕ ರಾಮಭಕ್ತರು ಮರೆತಿದ್ದಾರೆ. ತಲಕಾವೇರಿಯಿಂದ ಹಿಡಿದು ಪಶ್ಚಿಮ ಘಟ್ಟಗಳಲ್ಲಿ 4 ಸಾವಿರ ಟಿಎಂಸಿ ನೀರು ಪ್ರಕೃತಿದತ್ತವಾಗಿ ಶೇಖರಣೆಯಾಗುತ್ತದೆ. ಇಲ್ಲಿಯವರೆಗೂ ಬಳಕೆಯಾಗುವ ನೀರು 2 ಸಾವಿರ ಟಿಎಂಸಿ ನೀರು ಮಾತ್ರ. ಉಳಿದ 2 ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಅನೌನ್ಸ್ ಮಾಡುತ್ತಾರೆ. ನದಿಗಳ ಜೋಡಣೆ ಮಾಡುತ್ತೇವೆ. ದಕ್ಷಿಣ ಭಾರತದ ನದಿಜೋಡಣೆ ಮಾಡಲು ಹೋಗಿದ್ದಾರೆ. ಇಲ್ಲಿ ಯಾರು ಕೂಡ ಕೇಳಿಲ್ಲ, ಎಷ್ಟು ನೀರು ಇದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಎಲ್ಲ ನೀರನ್ನು ಪೆನ್ನಾರ್‍ನಲ್ಲಿ ತಂದು ಬಿಡುತ್ತಾರಂತೆ. ಕರ್ನಾಟಕವನ್ನು ನೀರಿನ ವಿಚಾರವಾಗಿ ಏನು ಬೇಕಾದರೂ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿದಿದೆ. ಯಾರ ಅಭಿಪ್ರಾಯ ಸಂಗ್ರಹಿಸದೆ ನದಿ ಜೋಡಣೆಗೆ ಕೈ ಹಾಕಿದ್ದಾರೆ ಎಂದರು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ
ಇದು ಏನಾದ್ರು ಜಾರಿಯಾದರೆ ಕರ್ನಾಟಕಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಲಾಭ ಆಗುವುದು ತಮಿಳುನಾಡು ಹಾಗೂ ಆಂಧ್ರಕ್ಕೆ ಮಾತ್ರ. ಕರ್ನಾಟಕದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಇವೆ ಅದನ್ನು ಬಿಟ್ಟಿದ್ದಾರೆ. ಈಗ ಇರುವ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಪಡೆಯದೆ ಅಂತರಾಜ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಇದರಲ್ಲಿ ಪೊಲಿಟಿಕಲ್ ವಿಲ್ ಎಷ್ಟು ಇದೆ ಎಂದು ಕೇಳುತ್ತಿದ್ದೇವೆ ಎಂದು ಸಂಶಯ ವ್ಯಕ್ತಪಡಿಸಿದರು.
ಬೆಂಗಳೂರು: ಉನ್ನತ ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಕೌಶಲ್ಯಾಭಿವೃದ್ಧಿ ಕೇಂದ್ರದ ಲ್ಯಾಬ್ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದು, ಸುಮಾರು 34 ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ. ಇದೆಲ್ಲವೂ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರ ಅನುಮತಿ ಮೇರೆಗೆ ನಡೆದಿದ್ದು, ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ವಿ.ಎಸ್.ಉಗ್ರಪ್ಪ ಹಾಗೂ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನಾ ಖಾವೂಂಗಾ, ನಾ ಖಾನೇ ದೂಂಗಾ (ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎನ್ನುತ್ತ, ನಾನು ಈ ದೇಶದ ಕಾವಲುಗಾರ ಎಂದು ಹೇಳಿಕೊಳ್ಳುತ್ತಾರೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಟೂಲ್ ರೂಮ್ ಆ್ಯಂಡ್ ಟ್ರೇನಿಂಗ್ ಸೆಂಟರ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಐಆರ್ ಪಿಎಸ್ ಅಧಿಕಾರಿ ಹೆಚ್.ರಾಘವೇಂದ್ರ, ಆಡಳಿತ ವ್ಯವಸ್ಥಾಪಕರಾದ ಮುನೀರ್ ಅಹ್ಮದ್, ಖರೀದಿ ಅಧಿಕಾರಿಗಳಾದ ರಾಜಕುಮಾರ್ ಅವರು ಅಕ್ರಮ ಟೆಂಡರ್ ಮೂಲಕ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಐಆರ್ ಪಿಎಸ್ ಅಧಿಕಾರಿ ಕುಣಿಗಲ್ ಮೂಲದವರಾಗಿದ್ದು, ಅವರದೇ ಸಮಾಜದ ಸಂಬಧಿಕರಿರುವ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ ಈ ಇಲಾಖೆಗೆ ಬಡ್ತಿ ಪಡೆದು ಬಂದಿದ್ದಾರೆ. ಬಹುತೇಕ ಇಲಾಖೆಗಳಲ್ಲಿ ಇಂತಹ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಈ ರೀತಿ ರೈಲ್ವೆ ಇಲಾಖೆಗೆ ಸೇರಿದ ಐಆರ್ ಪಿಎಸ್ ಅಧಿಕಾರಿಯನ್ನು ಇಲಾಖೆಗೆ ನೇಮಕ ಮಾಡಲಾಗಿದೆ. ಇವರ ಅವಧಿಯಲ್ಲಿ ಈ ತರಬೇತಿ ಕೇಂದ್ರದ ಲ್ಯಾಬ್ ಗಳಿಗೆ ತರಿಸಲಾಗಿರುವ ಉತ್ಪನ್ನಗಳನ್ನು ಯಾವ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಬಳಸುವುದಿಲ್ಲ. ಅವುಗಳ ಅವಶ್ಯಕತೆ ಇಲ್ಲದಿದ್ದರೂ ವಿನಾಕಾರಣ ಈ ಉತ್ಪನ್ನಗಳನ್ನು ಖರೀದಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಗೆ ಕೇಂದ್ರ ಹಾಗೂ ರಾಜ್ಯದಿಂದ 200 ಕೋಟಿಯಷ್ಟು ಅನುದಾನ ನೀಡಲಾಗಿದೆ. ಇದು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಇಲಾಖೆ ಮಂತ್ರಿಗಳು ಡಾ.ಅಶ್ವಥ್ ನಾರಾಯಣ್ ಅವರು. ರಾಜ್ಯದಲ್ಲಿ ಸುಮಾರು 25 ಕೌಶಲ್ಯ ತರಬೇತಿ ಕೇಂದ್ರಗಳಿದ್ದು, ಈಗ ಹೊಸದಾಗಿ ಅಶ್ವಥ್ ನಾರಾಯಣ್ ಅವರ ಹುಟ್ಟೂರಾಗಿರುವ ಚಿಕ್ಕಕಲ್ಯದಲ್ಲಿ ಹಾಗೂ ದೇವನಹಳ್ಳಿಯಲ್ಲಿ ಈ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕೇಂದ್ರಗಳ ಪೈಕಿ ರಾಜಾಜಿನಗರ ಕೇಂದ್ರದಲ್ಲಿ 500 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತೆಂದು ಸರ್ಕಾರದಿಂದ ಸುಳ್ಳು ಲೆಕ್ಕ: ರಾಮಲಿಂಗಾರೆಡ್ಡಿ
ಈ ಮೂರು ಅಧಿಕಾರಿಗಳು ಸಂಬಂಧಪಟ್ಟ ಮಂತ್ರಿಗಳ ಗಮನದಲ್ಲೇ 8 ಟೆಂಡರ್ ಕರೆದಿದ್ದಾರೆ. ಇದರ ಒಟ್ಟಾರೆ ಮೊತ್ತ 61.52,04,747 ರೂಪಾಯಿ. ಇನ್ನು 40 ಕೋಟಿ ಮೌಲ್ಯದ ಉಳಿದ ಎರಡು ಟೆಂಡರ್ ಪ್ರಕ್ರಿಯೆಯೂ ಮುಕ್ತಾಯ ಹಂತದಲ್ಲಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುತ್ತೇವೆ ಎಂದರು.
ಈಗ ಕರೆದಿರುವ ಟೆಂಡರ್ ಪೈಕಿ ಮೊದಲನೇ ಟೆಂಡರ್ ನಲ್ಲಿ ಖರೀದಿ ಮೊತ್ತ, 9,47,98,000. ಆದರೆ ಇದರ ಮಾರುಕಟ್ಟೆ ಮೊತ್ತ 4.50 ಕೋಟಿ. ಎರಡನೇ ಟೆಂಡರ್ ನಲ್ಲಿ 9.20 ಕೋಟಿ ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 4 ಕೋಟಿ. ಮೂರನೇ ಬಿಡ್ ನಲ್ಲಿ 17.82 ಕೋಟಿ ಖರೀದಿ ಮೊತ್ತವಿದ್ದು, ಅವುಗಳ ಮಾರುಕಟ್ಟೆ ಮೊತ್ತ 8.50 ಕೋಟಿ. ನಾಲ್ಕನೇ ಬಿಡ್ ನಲ್ಲಿ 2.80 ಕೋಟಿ ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 1.25 ಕೋಟಿ ಮಾತ್ರ. ಐದನೇ ಬಿಡ್ ನಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಲ್ಯಾಬ್ ಗೆ 1.03 ಕೋಟಿ ಖರೀದಿ ಮೊತ್ತವಿದೆ. ಮಾರುಕಟ್ಟೆಯಲ್ಲಿ ಅದರ ಮೌಲ್ಯ 40 ಲಕ್ಷ. ಆರನೇ ಟೆಂಡರ್ ನಲ್ಲಿ 4.86 ಕೋಟಿ ಮೊತ್ತ ನಿಗದಿ ಮಾಡಿದ್ದು, ಮಾರುಕಟ್ಟೆ ಮೊತ್ತ 2 ಕೋಟಿ. ಏಳನೇ ಟೆಂಡರ್ ನಲ್ಲಿ 6.93 ಕೋಟಿ ನಿಗದಿ ಮಾಡಿದ್ದು, ಇದರ ಮಾರುಕಟ್ಟೆ ಮೊತ್ತ ಕೇವಲ 3 ಕೋಟಿ. ಎಂಟನೇ ಬಿಡ್ ನಲ್ಲಿ 9.83 ಕೋಟಿ ನಿಗದಿ ಮಾಡಲಾಗಿದ್ದು, ಇದರ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 3.15 ಕೋಟಿ. ಒಟ್ಟಾರೆ ಈ ಎಲ್ಲ ಬಿಡ್ ಗಳಿಂದ ಸರ್ಕಾರ 61.52 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಅದರ ಮಾರುಕಟ್ಟೆ ಮೊತ್ತ 27.15 ಕೋಟಿ ರೂಪಾಯಿ ಮಾತ್ರ. ಅವರಿಗೆ ಕಿಕ್ ಬ್ಯಾಕ್ ಹೋಗಿರುವುದು 34.37 ಕೋಟಿ ರೂ. ಎಂದು ಆರೋಪಿಸಿದರು. ಇದನ್ನೂ ಓದಿ: ಕಲಬುರಗಿ, ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯತೆ: ಸಚಿವ ಅಶೋಕ್
ಈ 8 ಟೆಂಡರ್ ಗಳಲ್ಲಿ ಬಹುತೇಕ ಬಿಡ್ ಗಳನ್ನು ಅಕ್ವಾ ಟೆಕ್ವಿಪ್ಮೆಂಟ್ಸ್ ಗೆ ನೀಡಲಾಗಿದೆ. ಬಿಡ್ ನಂ.7 ಅನ್ನು ರವಿತೇಜ ಎಲೆಕ್ಟೋಸಿಸ್ಟಮ್ಸ್ ಗೆ ನೀಡಲಾಗಿದ್ದು, ಇದು ಅಕ್ವಾ ಟೆಕ್ವಿಪ್ಮೆಂಟ್ಸ್ ನ ಸ್ನೇಹಿತರಾಗಿದ್ದಾರೆ. ಇನ್ನು ಮೊದಲ ಬಿಡ್ ಅನ್ನು ಲಾರೆನ್ಸ್ ಅಂಡ್ ಮೇಯೋ ಅವರಿಗೆ ನೀಡಿದ್ದಾರೆ. ಈ ಟೆಂಡರ್ ನಲ್ಲಿ ಭಾಗಿಯಾಗಿರುವವರು ಉತ್ಪನ್ನ ತಯಾರಕರಲ್ಲ. ಈ ಉತ್ಪನ್ನ ಸರಬರಾಜು ಮಾಡುವ ಏಜೆನ್ಸಿಗಳೂ ಅಲ್ಲ ಎಂದರು.
ಈ ಟೆಂಡರ್ ಅನ್ನು ಇವರಿಗೆ ನೀಡಬೇಕು ಎಂಬ ಉದ್ದೇಶದಿಂದ ಟೆಂಡರ್ ಕರೆಯುವಾಗ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಬೇರೆಯವರಿಗೆ ಟೆಂಡರ್ ನಲ್ಲಿ ಅವಕಾಶ ಸಿಗಬಾರದು ಎಂದು ಸಚಿವರ ರಕ್ಷಣೆಯಲ್ಲಿ ಈ ಮೂವರು ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದಾರೆ ಎಂದು ಆರೋಪಿಸಿದರು.
ಪಾರದರ್ಶಕ ಟೆಂಡರ್ ಕಾಯ್ದೆ ಪ್ರಕಾರ ಯಾವುದೇ ಟೆಂಡರ್ 1 ಕೋಟಿಗೂ ಹೆಚ್ಚು ಮೊತ್ತದ್ದಾಗಿದ್ದರೆ ಬಿಡ್ ಪೂರ್ವಭಾವಿ ಸಭೆ ಕರೆಯಬೇಕು. ಈ 8 ಟೆಂಡರ್ ಕರೆಯುವ ಸಂದರ್ಭದಲ್ಲಿ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. ಟೆಂಡರ್ ದಾಖಲೆಗಳಲ್ಲೂ ಈ ಸಭೆಯ ಬಗ್ಗೆ ಮಾಹಿತಿ ಇಲ್ಲ. ಇದರ ಜೊತೆಗೆ ಸಿಎಂಸಿ ಯಂತ್ರಗಳನ್ನು 2019ರಲ್ಲಿ 28.98 ಲಕ್ಷ ರೂಪಾಯಿಗೆ ಒಂದು ಯಂತ್ರ ಎಂಬಂತೆ ಒಟ್ಟು 5 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. 2021ರಲ್ಲಿ ಇದೇ ಯಂತ್ರಗಳನ್ನು 31.27 ಲಕ್ಷಮೊತ್ತದಂತೆ 6 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. ಅದೇ ಯಂತ್ರಗಳನ್ನು ಮಾರ್ಚ್ ನಲ್ಲಿ 99.12 ಲಕ್ಷದಂತೆ 4 ಯಂತ್ರಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿಗೆ ಒಂದು ಯಂತ್ರವನ್ನು ಮೂರುಪಟ್ಟು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗಿದೆ ಎಂದು ವಿವರಿಸಿದರು.
ಪಾರದರ್ಶಕ ಕಾಯ್ದೆ ಪ್ರಕಾರ ಬಿಡ್ ನಲ್ಲಿ ಒಂದು ಅಥವಾ ಎರಡು ಕಂಪನಿಗಳು ಮಾತ್ರ ಭಾಗವಹಿಸಿದ್ದರೆ, ಆ ಟೆಂಡರ್ ರದ್ದುಗೊಳಿಸಿ ಮರುಟೆಂಡರ್ ಕರೆಯಬೇಕು ಎಂದು ಕಾನೂನು ಹೇಳುತ್ತದೆ. ದುರಾದೃಷ್ಟವಶಾತ್ 8 ಟೆಂಡರ್ ಗಳಲ್ಲಿ ಕೇವಲ 2 ಕಂಪನಿಗಳು ಮಾತ್ರ ಭಾಗವಹಿಸಿದ್ದು, ಇವುಗಳಲ್ಲಿ ಯಾವ ಟೆಂಡರ್ ಅನ್ನು ಮರುಟೆಂಡರ್ ಕರೆಯಲಿಲ್ಲ. ಈ ಎರಡು ಕಂಪನಿಗಳು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಮೂವರು ಅಧಿಕಾರಿಗಳು ರಾಜ್ಯ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದು, ಈ ತಿಮಿಂಗಲಗಳನ್ನು ಪೋಷಣೆ ಮಾಡುತ್ತಿರುವುದು ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರು. ಅಶ್ವಥ್ ನಾರಾಯಣ ಅವರೇ ನಿಮಗೂ ಈ ಅಧಿಕಾರಿ ರಘುನಾಥ್ ಅವರಿಗೂ ಇರುವ ಸಂಬಂಧ ಏನು? ಈ ಅವ್ಯವಹಾರದಲ್ಲಿ ನಿಮ್ಮ ಪಾಲೆಷ್ಟು? ಈ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹೇಗೆಲ್ಲಾ ಲೂಟಿ ಮಾಡಲಾಗುತ್ತಿದೆ ಎಂಬುದಕ್ಕೆ ಇದು ಕೇವಲ ಸ್ಯಾಂಪಲ್ ಅಷ್ಟೇ. ಈ ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ಈ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು. ಇದರಲ್ಲಿ ಅಧಿಕಾರಿಗಳು, ಮಂತ್ರಿಗಳ ಪಾತ್ರ ಎನು? ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹೆಚ್.ಎಂ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಇಂತಹ ಅನೇಕ ಹಗರಣಗಳಿವೆ. ಮೊಟ್ಟೆ ಹಗರಣ ಮಾಡಿದ ಮಂತ್ರಿಯನ್ನು ಖಾತೆ ಬದಲಾಯಿಸಿ ಮತ್ತೆ ಬೇರೆ ಖಾತೆ ನೀಡಿದ್ದಾರೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಮಾಸ್ಕ್ ನಿಂದ ಉಪಕರಣವರೆಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಎಂದವರು ಈ ಸರ್ಕಾರಕ್ಕೆ ಎಷ್ಟು ಪರ್ಸೆಂಟ್ ಸರ್ಕಾರ ಎಂದು ಕರೆಯುತ್ತಾರೋ ಗೊತ್ತಿಲ್ಲ. ಹಿಂದುಳಿದ ವರ್ಗಗಳ ಸಚಿವರಾದ ಪೂಜಾರಿ ಅವರೇ ಇದೇ ಸರ್ಕಾರದ ಹಿಂದಿನ ಮಂತ್ರಿಗಳ ಹಗರಣವನ್ನು ಬಯಲು ಮಾಡಿದ್ದಾರೆ ಎಂದರೆ ಈ ಸರ್ಕಾರ ಯಾವ ಮಟ್ಟಕ್ಕೆ ಭ್ರಷ್ಟಾಚಾರ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದರು. ಇದನ್ನೂ ಓದಿ: ಆಪರೇಷನ್ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್
ಕೃಷಿ ಇಲಾಖೆ 210 ಕೋಟಿ, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಅವ್ಯವಹಾರದ ಆರೋಪ. ಹೀಗೆ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸರ್ಕಾರ ಇದಾಗಿದೆ. ಯಾರು ಹೆಚ್ಚು ಭ್ರಷ್ಟಾಚಾರ ನಡೆಸುತ್ತಾರೆ ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಈ ಹಿಂದೆ ಎಸ್‍ಸಿ ಎಸ್‍ಟಿ ಮಕ್ಕಳಿಗಾಗಿ ಏಸರ್ ಕಂಪನಿಯಿಂದ 14,500 ರೂ.ಗೆ ಒಂದು ಲ್ಯಾಪ್ ಟಾಪ್ ಎಂಬಂತೆ 28 ಸಾವಿರ ಲ್ಯಾಪ್ ಟಾಪ್ ಖರೀದಿ ಮಾಡಿದ್ದಕ್ಕೆ ಯಡಿಯೂರಪ್ಪನವರು ಹೋರಾಟ ಮಾಡಿ, ಸಮಿತಿ ರಚಿಸಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಅಶ್ವಥ್ ನಾರಾಯಣ್ ಅವರು ಬಂದ ನಂತರ ಅದೇ ಏಸರ್ ಕಂಪನಿಯಿಂದ ಅದೇ ಲ್ಯಾಪ್ ಟಾಪ್ ಅನ್ನು 28 ಸಾವಿರಕ್ಕೆ ಒಂದು ಲ್ಯಾಪ್ ಟಾಪ್ ನಂತೆ 1.10 ಲಕ್ಷ ಲ್ಯಾಪ್ ಟಾಪ್ ಖರೀದಿಸಿದ್ದಾರೆ. ಹೀಗೆ ಈ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಂಚಾಲಕ ರಾಮಚಂದ್ರಪ್ಪ ಹಾಗೂ ಸಲೀಂ ಅವರು ಉಪಸ್ಥಿತರಿದ್ದರು.
ಮೈಸೂರು: ಅತ್ಯಾಚಾರ ನಡೆದ್ರೂ ಐಪಿಸಿ ಸೆಕ್ಷನ್ 376ರ ಅಡಿ ಯಾಕೆ ಕೇಸ್ ಯಾಕೆ ಹಾಕಲಿಲ್ಲ? ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ. ರಾಜ್ಯದ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿ.ಎಸ್ ಉಗ್ರಪ್ಪ, ತಿಂಗಳಲ್ಲಿ ಮೈಸೂರಿನಲ್ಲಿ ಒಂದು ಶೂಟೌಟ್ ಆಗಿದೆ. ಮೂರು ಮರ್ಡರ್ ಗಳಾಗಿವೆ, ಮೂರು ದರೋಡೆ, 16 ಕಳ್ಳತನಗಳಾಗಿವೆ. ಸರಸ್ವತಿಪುರಂನಲ್ಲಿ ಇವತ್ತು ಬಾಲಕಿ ಅತ್ಯಾಚಾರ ಕೇಸ್ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಅತ್ಯಾಚಾರ ನಡೆದ್ರೂ 376ರ ಅಡಿ ಕೇಸ್ ಯಾಕೆ ಹಾಕಲಿಲ್ಲ? ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ? ಹಿಂದೆ ವಿಬ್ ಗಯಾರ್ ಶಾಲೆಯಲ್ಲಿ ಪ್ರಕರಣ ಆಗಿತ್ತು ಆಗ ನೀವು ಏನಂತ ಬಾಯಿ ಬಡಿದುಕೊಳ್ತಿದ್ರಿ. ಈಗ ಮೈಸೂರಿನ ಹೊಣೆ ಯಾರು ಹೊರಬೇಕು ಎಂದು ಪ್ರಶ್ನಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
ಮೈಸೂರಿನಲ್ಲಿ ಮಂಗಳವಾರ ನಡೆದಿರುವ ಕೃತ್ಯ ಅಮಾನವೀಯವಾದುದು. ದೆಹಲಿಯ ನಿರ್ಭಯಾ ಕೇಸ್ ರೀತಿಯಲ್ಲಿ, ತೆಲಂಗಾಣದ ರೆಡ್ಡಿ ಕೇಸ್ ರೀತಿಯಲ್ಲಿ ಹೀನ ಕೃತ್ಯವಿದು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ರಿಂಗ್ ರಸ್ತೆಯಲ್ಲಿ ಲಲಿತಾದ್ರಿ ಪಾರ್ಕ್ ಇದೆ. ಆ ಪಾರ್ಕ್‍ನಲ್ಲಿ ಯುವತಿ ಮತ್ತು ಅಕೆಯ ಸ್ನೇಹಿತ ಮಾತನಾಡುತ್ತಿರುತ್ತಾರೆ. ಅಲ್ಲಿಂದ ಯುವತಿ ಎಳೆದೋಯ್ದು ಕೃತ್ಯವೆಸಗಿದ್ದಾರೆ. ಸಂಜೆ 7:30 ರಿಂದ 10:30 ರವರೆಗೆ ನಡೆದಿದೆ. ನಂತರ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಣ್ಣುಮಗಳ ದೇಹದ ಮೇಲೆ ಗಂಭೀರ ಗುರುತುಗಳಿವೆ, ಗಾಯಗಳಾಗಿವೆ. ಪೈಶಾಚಿಕವಾಗಿ ಕೃತ್ಯವೆಸಗಿದ್ದಾರೆ. ಘಟನೆ ನಡೆದು 24 ಗಂಟೆಯಾದರೂ ಕೇಸ್ ದಾಖಲಾಗಿರಲಿಲ್ಲ ನಂತರ ಹಾಲನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಮೋದಿ ನಿರ್ಭಯ ಕೇಸ್ ವೇಳೆ ಏನು ಮಾಡಿದ್ರಿ? ನಂದಿತಾ ಸಾವು ಗೃಹ ಸಚಿವರ ಕ್ಷೇತ್ರದಲ್ಲಿ ನಡೆದಿತ್ತು ಆಗ ನೀವು ಏನು ಮಾಡಿದ್ದಿರಿ ಇದರ ಬಗ್ಗೆ ನೀವು ಉತ್ತರಿಸಿ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಮೈಸೂರು ಪ್ರಕರಣ: ಕಾಂಗ್ರೆಸ್
ತುಮಕೂರು: ಪಾಕಿಸ್ತಾನ ನಮ್ಮ ಶತ್ರುರಾಷ್ಟ್ರ ಅನ್ನೋದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಪ್ರಧಾನಿ ಮೋದಿಯವರು ನಮ್ಮೆಲ್ಲರ ಬೆಂಬಲ ಪಡೆದು ಪಾಕಿಸ್ತಾನವನ್ನು ಮುಗಿಸಿ ಬಿಡಲಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಧಾನಿಯವರಿಗೆ ಬೆಂಬಲ ಸೂಚಿಸಿದ್ದಾರೆ.
ಮೊದಲು ದೇಶ ಎಂಬ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಬಿಜೆಪಿಯ ದ್ವಂದ್ವ ನಿಲುವಿನಿಂದ ದೇಶದ ರಕ್ಷಣೆ ವಿಚಾರ ಕಗ್ಗಂಟಾಗಿ ಉಳಿದಿದೆ. 1971 ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಚಿತ್ರಾನ್ನ ಮಾಡಿದ್ದರು. ವಾಜಪೇಯಿ, ಎಲ್.ಕೆ ಅಡ್ವಾಣಿಯವರ ಸಹಕಾರ ಪಡೆದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ದಿಟ್ಟತನ ತೋರಿದ್ದರು. ಪ್ರಧಾನಿ ಮೋದಿಯವರೂ ಈಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದರಲ್ಲಿ ನಮ್ಮ ಅಭ್ಯಂತರ ಇಲ್ಲ. ನಾವೂ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.
ರಾಜ್ಯದ ಪ್ರವಾಸಿ ತಾಣಗಳಲ್ಲಿ ಜೂಜು ಕೇಂದ್ರವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರಪ್ಪ ಖಂಡಿಸಿದ್ದಾರೆ. ಇದು ಬಿಜೆಪಿಯ ರಾಷ್ಟ್ರ ಪ್ರೇಮ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ. ಈ ರೀತಿಯ ಜೂಜು ಕೇಂದ್ರವನ್ನು ತೆರೆಯಲು ಹೊರಟಿರುವ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸಿ.ಟಿ ರವಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
– ಬಡವರು ಬದುಕಲು ಆಗುತ್ತಿಲ್ಲ
– ಅಗತ್ಯ ವಸ್ತುಗಳ ಬೆಲೆ ಏರಿಕೆ
ಬಳ್ಳಾರಿ: ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನದಲ್ಲಿದೆ, ಅಂತರಾಷ್ಟ್ರೀಯ ಮಟ್ಟದ ರೂಪಾಯಿ ಮೌಲ್ಯ ಕುಸಿಯುತ್ತಿದ್ದು ದೇಶ ದಿವಾಳಿಯಾಗಲು ಬಿಜೆಪಿ ಕಾರಣ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಡವರು ಬದಕಲು ಆಗುತ್ತಿಲ್ಲ. ತೈಲ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿದಾಟುವ ಪರಿಸ್ಥಿತಿ ಬಂದಿದ್ದು, ಜನಸಾಮಾನ್ಯರು 10 ಗ್ರಾಂ ಚಿನ್ನ ಕೊಳ್ಳಲು ಕಷ್ಟವಾಗಿದೆ. ಜನ ಸಾಮಾನ್ಯರ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ, ಕೇಂದ್ರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉಂಟಾದ ಪ್ರವಾಹದ ಹಾನಿ ತುಂಬಲು ಕೇಂದ್ರ ಸರ್ಕಾರ ಅಗತ್ಯ ಹಣ ನೀಡುತ್ತಿಲ್ಲ. ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಕಾಲು ಬೀಳುವುದು ಬಾಕಿ ಉಳಿದಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ಅಲ್ಪನಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎನ್ನುವುದಕ್ಕೆ ಸೋಮಶೇಖರ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉತ್ತಮ ಉದಾಹರಣೆ. ಸೋಮಶೇಖರ್ ರೆಡ್ಡಿ ಅಲ್ಪಸಂಖ್ಯಾತರ ಬಗ್ಗೆ ಹೇಳಿದ್ದು ಅವರ ಮಾತಲ್ಲ, ಬಿಜೆಪಿಯ ಮಾತು. ಬಿಜೆಪಿಯವರ ಉದ್ದೇಶ ಸೋಮಶೇಖರ್ ರೆಡ್ಡಿ ಅವರ ಮಾತಿನಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.
ಹಾವೇರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದಾ ಪಕ್ಷ ನಿಷ್ಠರು. ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಕಾರ್ಯಕ್ರಮಕ್ಕೆ ಬದ್ಧರಾಗಿ ಕೆಲಸ ಮಾಡಿದವರು. ಅವರಿಗೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನೀಡಲಾಗಿದೆ. ಈಗಲೂ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ರೂ ಅದನ್ನು ಸಮರ್ಥವಾಗಿ ನಿಭಾಯಿಸೋ ಶಕ್ತಿ ಅವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ. ಹೇಳಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಜವಾಬ್ದಾರಿ ನೀಡುವ ವಿಚಾರದಲ್ಲಿ ಮನಬಂದಂತೆ ಮಾತನಾಡ್ತಿರೋ ಬಿಜೆಪಿಗೆ ಜನರು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸ್ತಾರೆ. ಜೈಲಿಗೆ ಹೋಗಿ ಬಂದಿರೋ ಅಮಿತ್ ಶಾ ಈ ರಾಷ್ಟ್ರದ ಗೃಹ ಸಚಿವರು, ರಾಷ್ಟ್ರದ ಬಿಜೆಪಿ ಅಧ್ಯಕ್ಷರು. ಇನ್ನು ಬಿಜೆಪಿ ಮುಗಿಸೋದೆ ನನ್ನ ಗುರಿ ಅಂದಿದ್ದ ಸಿಎಂ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದವರು. ಅಂಥವರಿಗೆ ಅಧಿಕಾರ ನೀಡಿರುವ ಬಿಜೆಪಿಗೆ ಈ ಬಗ್ಗೆ ಪ್ರಶ್ನಿಸೋ ನೈತಿಕತೆ ಇಲ್ಲ ಎಂದು ಗುಡುಗಿದರು.
ಇನ್ನು ಸರ್ಕಾರ ಕೆಡವಲ್ಲ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿದ ಉಗ್ರಪ್ಪ, ಸರ್ಕಾರ ಉಳಿಸೋದು, ಕೆಡವೋದು ಯಾವುದೇ ಪಕ್ಷ ಅಥವಾ ಯಾವುದೇ ಮುಖಂಡರ ಕೈಯಲ್ಲಿ ಇಲ್ಲ. ಅದೆಲ್ಲವೂ ಪ್ರಜಾಪ್ರಭುತ್ವದ ಮಾಲೀಕರಾದ ಜನರ ಕೈಯಲ್ಲಿದೆ. ಹೀಗಾಗಿ ಹೇಳಿಕೆಗಳಿಗಾಗಿ ಹೇಳಿಕೆ ನೀಡೋದು ಯಾರಿಗೂ ಶೋಭೆ ತರೋದಿಲ್ಲ. ನಾವ್ಯಾರು ಸರ್ಕಾರ ಕೆಡವಲು ಹೊರಟಿಲ್ಲ ಎಂದು ಹೆಚ್‍ಡಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಈ ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಯಾವಾಗ ತನ್ನ ಆಂತರಿಕ ಗೊಂದಲಗಳಿಂದ ಬೀಳುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಉತ್ತಮವಾಗಿ ಜನರ ಸೇವೆ ಮಾಡಿ. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ: ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ, ಹಿಟ್ಲರ್ ಪ್ರವೃತ್ತಿ ಮೋದಿಯವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಮೋದಿಯವರ ಮುಂದೆ ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಪ್ರಧಾನಿ ಭೇಟಿಗೆ ಬಿಎಸ್‍ವೈ ಅಪಾಯಿಂಟ್‍ಮೆಂಟ್ ಕೇಳಿದಾಗ ನಾಲ್ಕು ಬಾರಿ ಕ್ಯಾನ್ಸಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಇರೋ ಹಿಂದಿನ ಉದ್ದೇಶ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಮಾಧ್ಯಮದವರನ್ನು ನಿರ್ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಇಂದು ನೆರೆ ಪರಿಹಾರ ಹಣ ಬಿಡುಗಡೆಯಾಗದು, ಇನ್ನೂ ಹಳೆಯ ಕಾಲದ ನೀತಿ ಇದೆ. ಅದನ್ನು ಬದಲಿಸಬೇಕು. ಓಬೆರಾಯನ ಕಾಲದ ನೀತಿಗಳು ಬದಲಾಗಬೇಕಿದೆ.
ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಮೂಲ, ವಲಸೆ ಕಾಂಗ್ರೆಸ್ ಎಂದು ಅಸಮಾಧಾನವಿಲ್ಲ. ಕಾಂಗ್ರೆಸ್ ಒಂದೇ, ಎಲ್ಲರೂ ಕಾಂಗ್ರೆಸ್ ನಾಯಕರೇ, ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಅವರವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಪಕ್ಷದ ಹೈ ಕಮಾಂಡ್ ವಿಪಕ್ಷ ನಾಯಕರ ಆಯ್ಕೆ ಕುರಿತು ತಿರ್ಮಾನ ಮಾಡುತ್ತದೆ ಎಂದರು.
ಬಳ್ಳಾರಿ ಜಿಲ್ಲೆಗೆ ಇತಿಹಾಸ ಇದೆ. ಬಳ್ಳಾರಿ ಜನರ ಬದುಕಿನ ಜೊತೆ ಯಾರೂ ಚೆಲ್ಲಾಟ ಆಡಬಾರದು. ಚುನಾವಣೆಗಾಗಿ ಕೆಲವರ ವೈಯಕ್ತಿಕ, ಭಾವನಾತ್ಮಕ ವಿಚಾರ ಜನರ ಮುಂದೆ ಒಯ್ಯುವುದು ಸರಿಯಲ್ಲ. ಮೊದಲು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಿ. ಅಖಂಡ ಬಳ್ಳಾರಿಯಾಗಿ ಉಳಿಯಬೇಕೋ, ವಿಭಜನೆಯಾಗಬೇಕೋ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಿ, ಅಂತಿಮ ನಿರ್ಣಯ ತೆಗೆದುಕೊಳ್ಳುಬೇಕು. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ಒಡೆಯುವುದು ಬೇಡ ಎಂದು ಉಗ್ರಪ್ಪ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ರದ್ದು ಮಾಡುವ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್ ನಷ್ಟದಲ್ಲಿದೆ ಎಂದು ಮುಚ್ಚುವುದಾದಲ್ಲಿ, ಅನೇಕ ಸಮಸ್ಯೆಗಳು ನಷ್ಟದಲ್ಲಿ ಇವೆ. ಅವನ್ನೂ ಮುಚ್ಚುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ಮಾಡಿದ ಎಲ್ಲ ಕೆಲಸಗಳನ್ನು ಡೈವರ್ಟ್ ಮಾಡುವ ಖಾಯಿಲೆ ಇದೆ. ಅನ್ನ ಭಾಗ್ಯದಲ್ಲಿ ಲಾಭವಿಲ್ಲ, ಅದನ್ನು ನಿಲ್ಲಿಸುತ್ತಾರೆನೋ ಎಂದು ಉಗ್ರಪ್ಪ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು: ಬೀಫ್(ದನದ ಮಾಂಸ) ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈಶ್ವರಪ್ಪನವಗೆ ಧಮ್ಮು, ತಾಕತ್ತು ಇದ್ದರೆ ದೇಶದ ಬೀಫ್ ರಫ್ತನ್ನು ತಡೆಯಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕು ಮಿಸ್ಟರ್ ಈಶ್ವರಪ್ಪ. ನಿನ್ನೆಯಷ್ಟೇ ಈಶ್ವರಪ್ಪನವರು ಬಿಜೆಪಿಗೆ ಮತ ಹಾಕದವರು ಪಾಕ್ ಪರ ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು ಇದಕ್ಕೆ ಇಂದು ಉಗ್ರಪ್ಪ ತಿರುಗೇಟು ನೀಡಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ದೇಶದಲ್ಲಿ ಹಲವು ಭಾಷೆಗಳಿವೆ. ಗುಜರಾತಿ, ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಅಸ್ಸಾಮಿ, ಪಂಜಾಬಿ ಸೇರಿ 22 ಭಾಷೆಗಳಿವೆ. ನಿಮ್ಮ ಗುಜರಾತಿ ಕೂಡ ಪ್ರಾಂತೀಯ ಭಾಷೆ. ಇದನ್ನು ನೋಡಿಯೂ ನೀವು ಹಿಂದಿ ಹೇರಿಕೆಗೆ ಹೊರಟಿದ್ದೇಕೆ, ವಿವಿಧತೆಯಲ್ಲಿ ಏಕತೆಯನ್ನು ಮುರಿಯೋಕೆ ನೋಡುತ್ತಿದ್ದೀರಾ, ಸಂವಿಧಾನದ ಬಗ್ಗೆ ನಿಮಗೆ ಗೌರವವಿದ್ದರೆ ಈ ನಿರ್ಧಾರವನ್ನು ಕೈಬಿಡಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರಿಗೆ ಮನುಷ್ಯತ್ವ ಇಲ್ಲ. ನೆರೆ ವಿಚಾರದಲ್ಲಿ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಲಿಲ್ಲ. ಈಶ್ವರಪ್ಪ, ಮಾಧುಸ್ವಾಮಿ, ಲಕ್ಷ್ಮಣ ಸವದಿ ಬಳಸಿರುವ ಪದಗಳು ಅಧಿಕಾರದ ಮದ ನೆತ್ತಿಗೇರಿರುವುದನ್ನು ಸಾಬೀತುಪಡಿಸುತ್ತವೆ. ನಾನು ನೀಲಿ ಚಿತ್ರ ನೋಡಿದ್ದೇನಷ್ಟೇ. ಕಾಂಗ್ರೆಸ್ ಅವರು ನೀಲಿಚಿತ್ರ ಮಾಡುತ್ತಾರೆ ಎಂದು ಸವದಿ ಹೇಳಿದ್ದಾರೆ. ಯಾರು ಮಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಲಿ. ಒಬ್ಬ ಉನ್ನತ ಹುದ್ದೆಯಲ್ಲಿ ಇರುವವರಿಗೆ ಈ ರೀತಿ ಮಾತು ಜಾರಬಾರದು ಎಂದು ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಸಲೇ ಬೇಕು. ಅಲ್ಲಿ ಅಧಿವೇಶನ ನಡೆಸದಿದ್ದರೆ ಆ ಭಾಗದ ಜನರಿಗೆ ಸರ್ಕಾರ ಮೋಸ ಮಾಡಿದಂತೆ. ಅಲ್ಲದೆ, ಅನ್ಯಾಯ ಮಾಡಿದಂತೆ. ಇದು ಬಿಜೆಪಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೆ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಶೋಷಿತ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಡೈವರ್ಟ್ ಮಾಡಲು ಹೊರಟಿರುವುದು ಸರಿಯಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಅತ್ಯಾಚಾರ ಸಂತ್ರಸ್ತರಿಗೆ, ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸಹ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ: ನೂರು ಕೋಟಿ ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಬಹುದು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ವ್ಯಾಪಾರಕ್ಕಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ಕೋಟಿ ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಬಹುದು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರದಲ್ಲಿ ಸೇಡಿನ ರಾಜಕಾರಣ ನಡಿಯುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಸಂಪತ್ತನ್ನು ಮೊದಲು 8 ಕೋಟಿ ರೂ. ಅಂದರು. ಇದೀಗ 800 ಕೋಟಿ ರೂ. ಎನ್ನುತ್ತಿದ್ದಾರೆ. ಅಮಿತ್ ಶಾ ಹಾಗೂ ನಿತಿನ್ ಗಡ್ಕರಿ ಮಕ್ಕಳ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಇಲ್ಲವೇ? ದೇಶದಲ್ಲಿನ ಆರ್ಥಿಕ ಹಿಂಜರಿತ ಮರೆ ಮಾಚಲು ಡಿ.ಕೆ.ಶಿವಕುಮಾರ್ ಅವರನ್ನು ಬಲಿ ಕೊಡುತ್ತಿದ್ದಾರೆ. ವಿಚಾರಣೆಗೆ ಕೇವಲ ಎಂಟು ದಿನ ಸಾಕು. ಆದರೆ, 15 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ಇದಕ್ಕೆ ಜನತಾ ನ್ಯಾಯಾಲವೇ ಮುಂದಿನ ದಿನಗಳಲ್ಲಿ ಉತ್ತರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ. ಒಂದು ಕಡೆ ಪ್ರವಾಹ ಮತ್ತೊಂದೆಡೆ ಬರ ಇದೆ. ರಾಜ್ಯ ಸರ್ಕಾರ 38,500 ಕೋಟಿ ರೂ. ಅಂದಾಜು ನಷ್ಟ ಎಂದು ವರದಿ ಮಾಡಿದೆ. ಕೇಂದ್ರ ಸರ್ಕಾರವನ್ನು ಕೇಳಿರುವುದು 3,800 ಕೋಟಿ ರೂ. ಮಾತ್ರ. ಈ ವರೆಗೆ ಕೇವಲ 374 ಕೋಟಿ ರೂ.ಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರ 203 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಗ್ರೇಟ್ ಲೀಡರ್ ಈಶ್ವರಪ್ಪ ಸಂತ್ರಸ್ತರಿಗೆ ಹತ್ತು ಸಾವಿರ ಕೊಟ್ಟಿದ್ದೇ ಹೆಚ್ಚಾಯಿತು ಎನ್ನುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇತ್ತ ಮುಖ್ಯಮಂತ್ರಿಗಳು ನಿಧಾನವಾಗಿ ನಷ್ಟದ ವರದಿ ಮಾಡಿ ಎನ್ನುತ್ತಾರೆ. ರಾಜ್ಯದಲ್ಲಿ ಸರ್ಕಾರ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದರೂ ಪರಿಹಾರ ರಾಜ್ಯ ನಾಯಕರಿಂದ ಪರಿಹಾರ ಕೇಳಲು ಸಾಧ್ಯವಾಗಲಿಲ್ಲ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದರೆ, ನಮಗೆ ಪ್ರಧಾನಿಯನ್ನು ಭೇಟಿ ಮಾಡಿಸಿ ಎಂದು ಕೇಳಿದರೆ ಅದನ್ನೂ ಮಾಡಿಲ್ಲ. ಮಾಧ್ಯಮದವರಿಗೂ ಭೇಟಿ ಮಾಡಿಸಿಲ್ಲ. ಬಿಜೆಪಿ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.