Tag: Voting Machine

  • ಮತಯಂತ್ರಗಳನ್ನು ಒಡೆದು ದಾಂಧಲೆ ಪ್ರಕರಣ – 30 ಜನ ಪೊಲೀಸರ ವಶಕ್ಕೆ

    ಮತಯಂತ್ರಗಳನ್ನು ಒಡೆದು ದಾಂಧಲೆ ಪ್ರಕರಣ – 30 ಜನ ಪೊಲೀಸರ ವಶಕ್ಕೆ

    ವಿಜಯಪುರ: ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆ ಮತದಾನದ ವೇಳೆ ತಪ್ಪು ಮಾಹಿತಿಯಿಂದಾಗಿ ಗ್ರಾಮಸ್ಥರೇ ಮತಯಂತ್ರಗಳನ್ನು (Voting Machine) ಪುಡಿಪುಡಿ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 25-30 ಜನರನ್ನು ವಶಕ್ಕೆ ಪಡೆದಿದ್ದಾರೆ.

    ವಿಜಯಪುರ (Vijayapura) ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ (EVM), ವಿವಿಪ್ಯಾಟ್ ಮಶೀನ್‌ಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಅವುಗಳನ್ನು ಚುನಾವಣಾ ಸಿಬ್ಬಂದಿ ವಾಪಸ್ ತರೋದನ್ನು ಗಮನಿಸಿ ಜನರು ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ 25-30 ಜನರನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಸ್ಥರು ಇವಿಎಂ, ವಿವಿಪ್ಯಾಟ್‌ಗಳು ಹಾಗೂ ಕಾರನ್ನು ಹಾನಿಗೊಳಿಸಿದ್ದಾರೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆ ತೆಗೆದುಕೊಂಡರೆ ಕ್ರಮ ಫಿಕ್ಸ್ ಎಂದು ಎಸ್‌ಪಿ ಹೆಚ್‌ಡಿ ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು

    ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ. ಘಟನೆಯ ವೇಳೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗೂ ಥಳಿಸಿದ್ದು, ಘಟನೆಯಿಂದಾಗಿ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಆದರೂ ಸಹ ಮತದಾನ ಪ್ರಕ್ರಿಯೆ ಮುಂದುವರಿದಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

  • ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು

    ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ವಿಜಯಪುರ ಗ್ರಾಮಸ್ಥರು

    ವಿಜಯಪುರ: ತಪ್ಪು ಮಾಹಿತಿಯಿಂದ ಗ್ರಾಮಸ್ಥರೇ ಮತಯಂತ್ರಗಳನ್ನು (Voting Machine) ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ (EVM), ವಿವಿಪ್ಯಾಟ್ ಮಶೀನ್‍ಗಳಾಗಿದ್ದವು. ಅವುಗಳನ್ನು ಸಿಬ್ಬಂದಿಯು ವಾಪಸ್ ತರೋದನ್ನು ಗಮನಿಸಿ ಜನರು ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ.

    ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಮತ ಚಲಾಯಿಸಲು ಬಂದಿದ್ದ ವ್ಯಕ್ತಿ, ಮಹಿಳೆ ಪ್ರತ್ಯೇಕ ಮತದಾನ ಕೇಂದ್ರದಲ್ಲಿ ಸಾವು

    ಘಟನೆಯ ವೇಳೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗೂ ಥಳಿಸಿದ್ದು, ಘಟನೆಯಿಂದಾಗಿ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಆದರೂ ಸಹ ಮತದಾನ ಪ್ರಕ್ರಿಯೆ ಮುಂದುವರಿದಿದೆ. ಇದನ್ನೂ ಓದಿ: Karnataka Election 2023: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯಿಂದ ಮತದಾನ

  • ಚುನಾವಣೆ ಸೋಲಿನ ಬಳಿಕ ವೋಟಿಂಗ್ ಯಂತ್ರ ವಶಪಡಿಸಿಕೊಳ್ಳಲು ಟ್ರಂಪ್ ಆದೇಶ!

    ಚುನಾವಣೆ ಸೋಲಿನ ಬಳಿಕ ವೋಟಿಂಗ್ ಯಂತ್ರ ವಶಪಡಿಸಿಕೊಳ್ಳಲು ಟ್ರಂಪ್ ಆದೇಶ!

    ವಾಷಿಂಗ್ಟನ್: 2020ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡ ಬಳಿಕ ಮತದಾನದ ಯಂತ್ರಗಳನ್ನು ವಶಪಡಿಸಿಕೊಳ್ಳಲು ತಮ್ಮ ಕರಡು ಕಾರ್ಯನಿರ್ವಾಹಕ ಆದೇಶದಲ್ಲಿ ರಕ್ಷಾಣಾ ಕಾರ್ಯದರ್ಶಿಗೆ ಸೂಚಿಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಹೌದು, ಹೊಸದಾಗಿ ಬಿಡುಗಡೆಯಾದ ನ್ಯಾಶನಲ್ ಆರ್ಕೈವ್ ದಾಖಲೆಯ ಪ್ರಕಾರ ಜೋ ಬೈಡೆನ್‌ರನ್ನು ಅಧ್ಯಕ್ಷರೆಂದು ಘೋಷಿಸುವುದನ್ನು ತಡೆಯಲು ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದ ಒಂದು ಕ್ರಮ ಬಹಿರಂಗವಾಗಿದೆ. ಇದನ್ನೂ ಓದಿ: ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

    2020ರ ಡಿಸೆಂಬರ್ 16ರಂದು ಚುನಾವಣಾ ದಾಖಲೆ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಯಂತ್ರಗಳು, ಉಪಕರಣಗಳು, ಎಲೆಕ್ಟ್ರಾನಿಕ್ ಸಂಗ್ರಹದ ಮಾಹಿತಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲು ರಕ್ಷಣಾ ಕಾರ್ಯದರ್ಶಿಗೆ ಆದೇಶಿಸಲಾಗಿತ್ತು. ಇದನ್ನೂ ಓದಿ: ವಿಮಾನ ಪ್ರಯಾಣಿಕರು ಇನ್ಮುಂದೆ ಒಬ್ಬರು ಒಂದೇ ಹ್ಯಾಂಡ್ ಬ್ಯಾಗ್ ಒಯ್ಯಬೇಕು!

    ಈ ಕರಡು ಆದೇಶವು 700 ಪುಟಗಳ ಟ್ರಂಪ್ ಅವರ ಅಧ್ಯಕ್ಷೀಯ ದಾಖಲೆಯಲ್ಲಿ ದೊರಕಿದೆ. ಇದನ್ನು ನ್ಯಾಶನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಶನ್ ಯುಎಸ್ ಹೌಸ್ ಸಮಿತಿಗೆ ಬಿಡುಗಡೆ ಮಾಡಿದೆ. ಟ್ರಂಪ್‌ನ ಆಡಳಿತದ ಅವಧಿಯ ವ್ಯವಹಾರದ ಡೈರಿ, ಸಂದರ್ಶಕರ ದಾಖಲೆ, ಭಾಷಣದ ಕರಡು ಮತ್ತು ಟಿಪ್ಪಣಿಗಳು ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.

  • ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಉಡುಪಿ: ನಗರದ ಎರಡು ಕಡೆ ಮತಯಂತ್ರ ಕೈಕೊಟ್ಟಿದ್ದರೂ, ಮತದಾನದ ಅವಧಿಯನ್ನು ವಿಸ್ತರಿಸದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡವೂರಿನ ಎರಡು ಮತಯಂತ್ರಗಳು ಕೈಕೊಟ್ಟ ಪರಿಣಾಮ, ಎರಡು ಗಂಟೆ ಮತದಾನ ಸ್ಥಗಿತವಾಗಿತ್ತು. ಆದರೆ ಜಿಲ್ಲಾಡಳಿತ 2 ಗಂಟೆಗಳ ಅವಧಿಯನ್ನು ವಿಸ್ತರಣೆ ಮಾಡದೇ, 5 ಗಂಟೆಗೆ ಮತದಾನ ಮುಕ್ತಾಯವಾಗುತ್ತದೆ ಎಂದು ತಿಳಿಸಿದೆ.

    ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನಗೊಂಡ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕೊಡವೂರಿನ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮತಯಂತ್ರದ ದೋಷದಿಂದ ಎರಡು ಗಂಟೆ ಮತದಾನ ವಿಳಂಬವಾಗಿದೆ. ಹೀಗಾಗಿ ಹೆಚ್ಚುವರಿ 2 ಗಂಟೆಗಳ ಮತದಾನಕ್ಕೆ ಜಿಲ್ಲಾಡಳಿತ ಅವಕಾಶಮಾಡಿಕೊಡಬೇಕು. ಒಂದೊಂದು ಮತವೂ ಅಮೂಲ್ಯವಾಗಿದೆ ಎಂದು ಹೇಳಿದರು.

    ಕಳೆದ ಬಾರಿಯೂ ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟಿತ್ತು. ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ಗಂಭೀರತೆ ಇಲ್ಲ. ನಮ್ಮೂರಿನಿಂದ ಮದುವೆಗೆ ಹೊರಟ 60 ಜನ ವೋಟ್ ಹಾಕಲು ಬಂದಿದ್ದರು. ಮತಯಂತ್ರ ಕೆಟ್ಟಿದ್ದಕ್ಕೆ ಅವರು ವಾಪಾಸ್ಸು ಹೋದರು ಮತ್ತೆ ಅವರು ಬರುವುದಿಲ್ಲವೆಂದು ಬಿಜೆಪಿ ಅಭ್ಯರ್ಥಿ ವಿಜಯ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಎರಡು ಕಡೆ ಮತಯಂತ್ರ ದೋಷ ಕಂಡುಬಂದಿದೆ. ಈಗಾಗಲೇ ನಮ್ಮ ಸಿಬ್ಬಂದಿ ದೋಷ ಸರಿಪಡಿಸಿದ್ದಾರೆ. ಅಲ್ಲದೇ ಬೇರೆ ಮತಯಂತ್ರವನ್ನು ಹಾಕಿದ್ದಾರೆ. ಎರಡು ಮತಗಟ್ಟೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಮತದಾರರು 5 ಗಂಟೆಯ ಒಳಗೆ ಟೋಕನ್ ಪಡೆದುಕೊಳ್ಳಬೇಕು. ಟೋಕನ್ ಪಡೆದುಕೊಂಡ ಮತದಾರರಿಗೆ ಮತದಾನಕ್ಕೆ ಅವಕಾಶಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಮತದಾನದ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಮತದಾನ ಮಾಡುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ. ಮತಯಂತ್ರ ದೋಷದಿಂದಾಗಿ ಉಂಟಾದ ಸಮಸ್ಯೆಗೆ ಮತದಾರರು ಸಹಕರಿಸಬೇಕೆಂದು ವಿನಂತಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv