Tag: voters list

  • ರಾಜ್ಯದಲ್ಲೂ ಬಿಹಾರ ಮಾಡೆಲ್‌ – ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಿದ್ಧತೆ

    ರಾಜ್ಯದಲ್ಲೂ ಬಿಹಾರ ಮಾಡೆಲ್‌ – ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಿದ್ಧತೆ

    ಬೆಂಗಳೂರು: ಬಿಹಾರದ (Bihar) ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯಲಿದೆ. ಅದರಂತೆ ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದಾರೆ ಎಂದು ತಿಳಿಸಲಾಗಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗ (Karnataka Election Commission) ಮಾಹಿತಿ ನೀಡಿದ್ದು, ಕೇಂದ್ರ ಚುನಾವಣಾ ಆಯೋಗದಿಂದ ನೋಟಿಫಿಕೇಷನ್ ಜಾರಿಯಾದ ತಕ್ಷಣ ರಾಜ್ಯದ ಎಲ್ಲಾ ಮತದಾರರು ʻಸರ್‌ʼ ಅಭಿಯಾನಕ್ಕೆ ಒಳಪಡಲಿದ್ದಾರೆ.

    ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ (Voter List), ಮತಗಟ್ಟೆಗಳು ಬದಲಾಗಲಿವೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶ‌ನದಂತೆ ರಾಜ್ಯದಲ್ಲಿ ಎಸ್ ಐಆರ್‌ಗೆ ಸಿದ್ಧತೆ ಮಾಡಿಕೊಳ್ತಿರೋ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸೆಪ್ಟೆಂಬರ್ 25ರ ಒಳಗಡೆ ಪೂರ್ಣ ಆಗಲಿದೆ. 2025ರಲ್ಲಿ 5.40 ಕೋಟಿ ಮತದಾರರು ಮತದಾರರ ಪಟ್ಟಿಯಲ್ಲಿ ಇದ್ದಾರೆ. 2002 ರಲ್ಲಿ 3.40 ಕೋಟಿ ಮತದಾರರ ಪಟ್ಟಿಯಲ್ಲಿ ಇದ್ದವರು. 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆಗಿದ್ರೆ ಡಿಜಿಟಲ್ ಸ್ವರೂಪಕ್ಕೆ ತಂದಿಲ್ಲ. ಪ್ರಸ್ತುತ ʻಸರ್‌ʼ ಅಡಿ ಆದ್ರೆ ಡಿಜಿಟಲ್ ಸ್ವರೂಪಕ್ಕೆ ತರಲಿದ್ದೇವೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.‌

    ನೋಟಿಫಿಕೇಷನ್ ಆದ ತಕ್ಷಣವೇ ʻಸರ್‌ʼ
    ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ ಬಂದ ಬಳಿಕ ಎಸ್‌ಐಆರ್ ಪ್ರಕ್ರಿಯೆ ಶುರುವಾಗಲಿದೆ. ಇದನ್ನೂ ಓದಿ: ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್‌ ಗಾಂಧಿ ಬಾಂಬ್‌

    ಎಸ್‌ಐಆರ್ ಪ್ರಕ್ರಿಯೆ ಯಾಕೆ ?
    ನಕಲಿ ಮತದಾನ ತಡೆಗಟ್ಟುವುದಕ್ಕೆ ಹಾಗೂ ಯಾರೊಬ್ಬರೂ ಮತದಾನ ಹಕ್ಕಿನಿಂದ ವಂಚಿತರಾಗಬಾರದು ಅನ್ನೋ ಉದ್ದೇಶದಿಂದ ಸರ್‌ ಅಭಿಯಾನ ನಡೆಸಲಾಗುತ್ತಿದೆ. ಬೂತ್ ಮಟ್ಟದಲ್ಲಿ, ಶಿಬಿರಗಳನ್ನ ಆಯೋಜನೆ ಮಾಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ. ಇದನ್ನೂ ಓದಿ: ರಾಹುಲ್‌ ಆರೋಪಿಸಿದಂತೆ ಆನ್‌ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ

    ಎಸ್‌ಐಆರ್ ಪ್ರಕ್ರಿಯೆ ಹೇಗಿರಲಿದೆ?
    1. ಬಿಎಲ್‌ಓಗಳು ಮನೆ ಮನೆಗೆ ಭೇಟಿ ಕೊಡ್ತಾರೆ.
    2. ಕ್ಯೂಆರ್‌ ಕೋಡ್ ಮಾದರಿಯ ಆಧಾರಿತ ಅರ್ಜಿ 2 ಪ್ರತಿಯಲ್ಲಿ ಮಾಹಿತಿ ಸಂಗ್ರಹ.
    3. ಅಧಿಕಾರಿ ಸಹಿ ಮಾಡಿದ ಒಂದು ಪ್ರತಿ ಮತದಾರರಿಗೆ ಸಲ್ಲಿಕೆ.
    4. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಮೂರು ಭಾರಿ ಮನೆಗೆ ಭೇಟಿ ನೀಡಲಿದ್ದಾರೆ.
    5. ಸಂಪರ್ಕಕ್ಕಾಗಿ ‌ಪಕ್ಕದ ಮನೆಯವರ ಸಹಾಯ ಪಡೆಯಲಿದ್ದಾರೆ.

    ಮತದಾರರು ಏನು ಮಾಡಬೇಕು ?
    1. ಗುರುತಿನ ಚೀಟಿಯಲ್ಲಿ ಪೋಟೋ ಸರಿ ಇಲ್ಲದಿದ್ದರೆ ಸ್ಪಷ್ಟವಾದ ಫೋಟೋ ನೀಡಬೇಕು
    2. ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನ ನೀಡಬೇಕು
    3. ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

    ʻಸರ್‌ʼ ಅಭಿಯಾನ ವೇಳೆ ಚುನಾವಣಾ ಆಯೋಗ ಕೈಗೊಳ್ಳುವ ಕ್ರಮಗಳೇನು?
    1. ಎರಡು ಕಡೆ ಹೆಸರು ಇದ್ದರೆ ಫೋಟೊ ಸ್ಕ್ಯಾನಿಂಗ್‌ ಸಿಸ್ಟಮ್‌ ಮೂಲಕ ಪತ್ತೆ ಹಚ್ಚಿ ಕ್ರಮ
    2. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲು
    3. ಪರಿಷ್ಕರಣೆ ನಂತರವೂ ಹೆಸರು ಸೇರದಿದ್ದರೆ ಬಿಎಲ್‌ಒಗಳು ಸಹಿ ಮಾಡಿ ನೀಡಿರುವ ನಮೂನೆ ಮೂಲಕ ಪ್ರಶ್ನಿಸಬಹುದು

    ಪಕ್ಷಗಳ ಸಂಬಂಧ
    1. ವಿಶೇಷ ಪರಿಷ್ಕರಣೆ ಕುರಿತು ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ, ವಿವರ ನೀಡಿಕೆ
    2. ಪ್ರತಿ ಬೂತ್‌ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ಪಕ್ಷಗಳ ಮುಖಂಡರಿಗೆ ಸೂಚನೆ. ಇದನ್ನೂ ಓದಿ: EC ಮೊಬೈಲ್‌ ಸಂಖ್ಯೆ, ಐಪಿ ವಿಳಾಸ ನೀಡಿದ್ರೂ ಕರ್ನಾಟಕದ ಸಿಐಡಿ ಏನು ಮಾಡುತ್ತಿದೆ: ಅನುರಾಗ್‌ ಠಾಕೂರ್‌ ಪ್ರಶ್ನೆ

  • ಸಂಸತ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳ ಚರ್ಚೆಗೆ ವಿಪಕ್ಷಗಳ ಆಗ್ರಹ

    ಸಂಸತ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳ ಚರ್ಚೆಗೆ ವಿಪಕ್ಷಗಳ ಆಗ್ರಹ

    ನವದೆಹಲಿ: ಮತದಾರರ ಪಟ್ಟಿಯಲ್ಲಿನ ದೋಷಗಳ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಸಂಸದರು ಆಗ್ರಹಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದರು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲು ಒತ್ತಾಯಿಸಿ ಗದ್ದಲ ನಡೆಸಿದರು.

    ಲೋಕಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವುದಿಲ್ಲ ಎಂಬ ನಿಮ್ಮ ಹೇಳಿಕೆಯನ್ನು ನಾವು ಸ್ವೀಕರಿಸುತ್ತೇವೆ. ಆದರೆ ಈ ವಿಷಯದ ಬಗ್ಗೆ ಚರ್ಚೆ ನಡೆಯಬೇಕೆಂದು ಮಹಾರಾಷ್ಟ್ರ ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲೂ ವಿರೋಧ ಪಕ್ಷಗಳು ಒಂದೇ ಧ್ವನಿಯಲ್ಲಿ ಪ್ರಶ್ನೆಗಳನ್ನು ಎತ್ತಿವೆ. ಹೀಗಾಗಿ ಈ ಬಗ್ಗೆ ಚರ್ಚೆಯಾಗಬೇಕು ಎಂದರು. ಇದನ್ನೂ ಓದಿ: ನಟಿ ರನ್ಯಾಗೆ ಸಿದ್ದರಾಮಯ್ಯರಿಂದ ಪರಮೇಶ್ವರ್‌ವರೆಗೆ ಯಾರೂ ಸಪೋರ್ಟ್ ಮಾಡಿಲ್ಲ: ಚಲುವರಾಯಸ್ವಾಮಿ

    ಈ ವಿಷಯದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ಕಪಿಲ್ ಸಿಬಲ್, ಚುನಾವಣಾ ಆಯೋಗವು ಸರ್ಕಾರದ ಕೈಯಲ್ಲಿದೆ. ಪ್ರಜಾಪ್ರಭುತ್ವ ಹೀಗೆಯೇ ಮುಂದುವರಿದರೆ ಮತ್ತು ಚುನಾವಣಾ ಆಯೋಗವು ಸರ್ಕಾರಕ್ಕಾಗಿ ಲಾಬಿ ಮಾಡುತ್ತಲೇ ಇದ್ದರೆ ಬರುವ ಫಲಿತಾಂಶಗಳು ನಿಮ್ಮ ಮುಂದೆ ಇವೆ. ಈ ವ್ಯವಸ್ಥೆ ಮುಂದುವರಿದರೆ ಇದು ಪ್ರಜಾಪ್ರಭುತ್ವವಲ್ಲ. ನಾವು ಹಲವು ವರ್ಷಗಳಿಂದ ಅನುಮಾನದಿಂದ ಇದ್ದೇವೆ. ನೆಲದ ಮೇಲೆ ಏನಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಕೇಳಲು ಯಾರೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ – ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನ ಮುಂಬೈಗೆ ವಾಪಸ್‌

    ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತ ರಾಯ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಕೆಲವು ದೋಷಗಳಿವೆ. ಪಶ್ಚಿಮ ಬಂಗಾಳ ಮುರ್ಷಿದಾಬಾದ್ ಮತ್ತು ಬುರ್ದ್ವಾನ್ ಸಂಸದೀಯ ಕ್ಷೇತ್ರಗಳು ಮತ್ತು ಹರಿಯಾಣದಲ್ಲಿ ಒಂದೇ ರೀತಿಯ ಇಪಿಐಸಿ (ಚುನಾವಣಾ ಫೋಟೋ ಗುರುತಿನ ಚೀಟಿ) ಸಂಖ್ಯೆಯನ್ನು ಹೊಂದಿರುವ ಮತದಾರರಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ರನ್ಯಾ ಕೇಸ್: ಯಾವ ಸಚಿವರು? – ಎಂ.ಬಿ ಪಾಟೀಲ್‌ ಪ್ರಶ್ನೆ

    ಮಹಾರಾಷ್ಟ್ರದ ವಿಷಯದಲ್ಲಿಯೂ ಇದನ್ನು ಹೇಳಲಾಗಿದೆ. ಹರಿಯಾಣದಲ್ಲೂ ಈ ವಿಷಯದ ಬಗ್ಗೆ ಗಮನ ಸೆಳೆಯಲಾಯಿತು. ಈಗ ಅವರು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೂ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಇಡೀ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಆಗಬೇಕು. ಪಟ್ಟಿಗಳಲ್ಲಿ ಕೆಲವು ತಪ್ಪುಗಳು ಏಕೆ ಸಂಭವಿಸಿವೆ ಎಂಬುದಕ್ಕೆ ಚುನಾವಣಾ ಆಯೋಗ ದೇಶಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಎಫ್‌ಬಿಐ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಡ್ರಗ್ ಡೀಲರ್ ಪಂಜಾಬ್ ಪೊಲೀಸರ ವಶಕ್ಕೆ

  • ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಬೆಂಗಳೂರು: ಆಗಸ್ಟ್ 20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 (Special Revision Of Voters’ List) ಆರಂಭವಾಗಲಿದೆ ಚುನಾವಣಾ ಆಯೋಗ (Election Commission) ತಿಳಿಸಿದೆ.

    ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ರಾಜ್ಯದ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

    ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ: ಪ್ರತಾಪ್ ಸಿಂಹ

    ಸಾರ್ವಜನಿಕರು ಅರ್ಜಿ ನಮೂನೆ 6 ಮತ್ತು8 ಗಳನ್ನು ಸಲ್ಲಿಸುವಾಗ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ. ಇದನ್ನೂ ಓದಿ: ನಾನು ಭ್ರಷ್ಟಾಚಾರ ಎಸಗಿಲ್ಲ – ಮಾರಿಗುಡಿಯಲ್ಲಿ ಹರೀಶ್ ಪೂಂಜಾ ಪ್ರಮಾಣ 

    ಎಲ್ಲಾ ರೀತಿಯ ಚುನಾವಣಾ ಸಂಬಂಧಿತ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ Voter Helpline application ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

    ಆಗಸ್ಟ್‌ 20 ರಿಂದ ಅಕ್ಟೋಬರ್‌ 18ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ/ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿಪಡಿಸುವುದು. ವಿಭಾಗ/ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ/ಭಾಗಗಳ ಮತಗಟ್ಟೆಗಳ ಸ್ಥಳವನ್ನು ಅಂತಿಮಗೊಳಿಸುವಿಕೆ ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ.

    ಅಕ್ಟೋಬರ್‌ 19 ರಿಂದ ಅಕ್ಟೋಬರ್‌ 28 ವರೆಗೆ ನಮೂನೆ 1 ರಿಂದ 8 ರ ತಯಾರಿ ನಡೆದು ಅ.29 ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ ಅ.29 ರಿಂದ ನವೆಂಬರ್‌ 28 ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಲೇವಾರಿಯನ್ನು ಡಿ.24ರ ಒಳಗಡೆ ಮುಗಿಸಲಾಗುತ್ತದೆ. ಅಂತಿಮವಾಗಿ ಎಲ್ಲಾ ದತ್ತಾಂಶವನ್ನು ಕ್ರೋಢಿಕರಿಸಿ 2025ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

  • ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಇದೇ ಏಪ್ರಿಲ್‌ 26 (ನಾಳೆ)ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 

    ಒಟ್ಟು 1,44,17,530 ಪುರುಷರು, 1,43,87,585 ಮಹಿಳೆಯರು ಹಾಗೂ 3,067 ತೃತೀಯ ಲಿಂಗಿಗಳು ಸೇರಿ ಒಟ್ಟು 2,88,08,182 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಾದ್ರೆ ಕ್ಷೇತ್ರವಾರು ಮತದಾರರ ವಿವರ ಎಷ್ಟಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… 

    ಉಡುಪಿ-ಚಿಕ್ಕಮಗಳೂರು

    ಹಾಸನ

    ದಕ್ಷಿಣ ಕನ್ನಡ

    ಚಿತ್ರದುರ್ಗ (ಎಸ್‌ಸಿ)

    ತುಮಕೂರು

    ಮಂಡ್ಯ

    ಮೈಸೂರು

    ಚಾಮರಾಜನಗರ (ಎಸ್‌ಸಿ)

    ಬೆಂಗಳೂರು ಗ್ರಾಮಾಂತರ

    ಬೆಂಗಳೂರು ಉತ್ತರ

    ಬೆಂಗಳೂರು ಕೇಂದ್ರ

    ಬೆಂಗಳೂರು ದಕ್ಷಿಣ

    ಚಿಕ್ಕಬಳ್ಳಾಪುರ

    ಕೋಲಾರ (ಎಸ್‌ಸಿ)

  • ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಎರಡು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಗದ್ದಲ ಎದ್ದಿದೆ. ಅದರಲ್ಲೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಹೆಸರಿನಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿವೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸಿದೆ. ಈ ಅನುಮಾನಕ್ಕೆ ಕಾರಣ ಹೊಂಬಾಳೆ ಹೆಸರು.

    ಚಿತ್ರೋದ್ಯಮದ ಬಹುತೇಕರಿಗೆ ಗೊತ್ತಿರುವಂತೆ ಹೊಂಬಾಳೆ ಫಿಲ್ಮಸ್ ಸಂಸ್ಥೆಯು ಅಶ್ವತ್ಥ್ ನಾರಾಯಣ್ ಅವರ ಸಂಬಂಧಿ ವಿಜಯ್ ಕುಮಾರ್ ಅವರದ್ದು. ಈ ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಚಿತ್ರಗಳು ನಿರ್ಮಾಣಗೊಂಡಿವೆ. ‘ಹೊಂಬಾಳೆ’ ಎನ್ನುವ ಹೆಸರೇ ಮತದಾರರ ಪಟ್ಟಿಯ ವಿವಾದಕ್ಕೆ ಮುನ್ನುಡಿಯಾಗಿದ್ದು, ಇದು ಚಿಲುಮೆ ಎನ್ನುವ ಹೆಸರಿನ ಸಂಸ್ಥೆಯ ಜೊತೆ ತಳುಕುಹಾಕಿಕೊಂಡಿದೆ.  ಮತದಾರರ ಪಟ್ಟಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಹೆಸರು ಬಲವಾಗಿ ಕೇಳಿಬಂದಿದೆ. ಚಿಲುಮೆ ಸಂಸ್ಥೆಯು ಈ ಹಿಂದೆ ಹೊಂಬಾಳೆ ಹೆಸರಿನಲ್ಲಿ ಚಟುವಟಿಕೆಯಲ್ಲಿತ್ತು ಎನ್ನುವುದು ವಿವಾದಕ್ಕೆ ಕಾರಣವಾದ ಅಂಶ.

    ಹೊಂಬಾಳೆ ಹೆಸರು ಕೇಳಿ ಬರುತ್ತಿದ್ದಂತೆಯೇ ಆದ ಘಟನೆಗೂ ಅಶ್ವತ್ಥ್ ನಾರಾಯಣ್ ಅವರಿಗೆ ನೇರ ಸಂಬಂಧವಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆ ಫಿಲ್ಮಸ್ ಸಂಸ್ಥೆಯನ್ನು ತಿವಿಯಲು ಈ ಬ್ಯಾನರ್ ನಿಂದ ನಿರ್ಮಾಣವಾದ ಎರಡು ಚಿತ್ರಗಳ ಹೆಸರನ್ನು ಉಪಯೋಗಿಸಿಕೊಂಡು, ಹೊಂಬಾಳೆ ಫಿಲ್ಮ್ಸ್ ನ ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು

    ಈ ಕುರಿತು ಸರಣಿಯ ಟ್ವಿಟ್ ಮಾಡಿರುವ ಸಿದ್ಧರಾಮಯ್ಯ, ‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು’ ಎಂದು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಭಾರೀ ವೈರಲ್ ಆಗಿದೆ. ಅಲ್ಲದೇ ಅನೇಕರು ಇದಕ್ಕೆ ಸ್ಪಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ವೈದ್ಯ ಪರಿಷತ್ ಚುನಾವಣೆ: ಮತದಾರರ ಪಟ್ಟಿಯಲ್ಲಿ ವೈದ್ಯರ ಹೆಸರೇ ಮಾಯ

    ಕರ್ನಾಟಕ ವೈದ್ಯ ಪರಿಷತ್ ಚುನಾವಣೆ: ಮತದಾರರ ಪಟ್ಟಿಯಲ್ಲಿ ವೈದ್ಯರ ಹೆಸರೇ ಮಾಯ

    ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವೈದ್ಯಕೀಯ ಪರಿಷತ್ ಚುನಾವಣೆಯಲ್ಲಿಯೂ ರಾಜಕೀಯ ಜೋರಾಗಿ ನಡದಿದೆ. ಕರ್ನಾಟಕ ವೈದ್ಯ ಪರಿಷತ್ ಚುನಾವಣೆಯಲ್ಲಿ ಅರ್ಧದಷ್ಟು ಮತಗಳು ನಾಪತ್ತೆಯಾಗಿವೆ. ಇದರಿಂದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೋಧಕ ಹಾಗು ಬೋಧಕೇತರ ವಿಭಾಗಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತಗಳು ಮಾಯವಾಗಿವೆ.

    ಬೋಧಕ ವಿಭಾಗದಲ್ಲಿ ಒಟ್ಟು 230 ಮತಗಳಿದ್ದು ಮತದಾರರ ಪಟ್ಟಿಯಲ್ಲಿ 143 ಮತಗಳು ಮಾತ್ರ ಇವೆ. ಬೋಧಕೇತರ ವಿಭಾಗದಲ್ಲಿ 930 ಮತಗಳಿದ್ದು ಅದರಲ್ಲಿ ಕೇವಲ 450 ಮತಗಳಿವೆ. ಇದರಿಂದ ಕುಪಿತರಾದ ವೈದ್ಯರು ತಮ್ಮ ಅನುಕೂಲಕ್ಕಾಗಿ ಕೆಲವರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ನೋಡೆಲ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು.

    ವೈದ್ಯರೆಲ್ಲರಿಗೂ ಮತದಾನಕ್ಕೆ ಅವಕಾಶ ನೀಡಬೇಕು ಅಂತ ಆಗ್ರಹಿಸಿ ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯವರೆಗೂ ಚುನಾವಣೆ ನಡೆಯುತ್ತಿದ್ದು, ಬೋಧಕ ವಿಭಾಗಕ್ಕೆ 3 ಜನ, ಬೋಧಕೇತರು 4 ಜನ ಸ್ಪರ್ಧಿಸಿದ್ದಾರೆ.

    ರಾಯಚೂರಿನಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ಮತದಾನ ನಡೆಯುತ್ತಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಎರಡು ವಿಭಾಗದಲ್ಲಿ ವೈದ್ಯರು ಮತದಾನ ಮಾಡಬೇಕಿದೆ. ಚುನಾವಣೆಯಲ್ಲಿ ಕಲಬುರಗಿ ವಿಭಾಗದ ವೈದ್ಯರು ಸಹ ಮತ ಹಾಕಬಹುದಾಗಿದೆ.

  • ಮತದಾರರ ಪಟ್ಟಿ ನಿರೀಕ್ಷಿಸುತ್ತಿರೋರಿಗೆ ಗುಡ್ ನ್ಯೂಸ್

    ಮತದಾರರ ಪಟ್ಟಿ ನಿರೀಕ್ಷಿಸುತ್ತಿರೋರಿಗೆ ಗುಡ್ ನ್ಯೂಸ್

    ಬೆಂಗಳೂರು: ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರಲ್ಲೂ ಪರಿಷ್ಕರಣೆಗೆ ಕರೆ ನೀಡಲಾಗಿದೆ. ಈ ಮೂಲಕ ಮತದಾರರ ಪಟ್ಟಿ ನಿರೀಕ್ಷಿಸುತ್ತಿರುವವರಿಗೆ ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅಕ್ಟೋಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ. ಹೊಸ ಮತದಾರರ ನೋಂದಣಿ ಅಥವಾ ಹೊಸ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆಗಳಿದ್ದಲ್ಲಿ ಸಾರ್ವಜನಿಕರು ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಹುದು ಎಂದು ತಿಳಿಸಿದರು.

    ಬೆಂಗಳೂರಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿವೆ. ಈವರೆಗೆ 91,00,207 ಮತದಾರರಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಇದ್ದಿದ್ದರಿಂದ ಮತದಾರರ ಲಟ್ಟಿ ಪರಿಶೀಲನೆ ತಡವಾಗಿ ಮಾಡಲಾಗುತ್ತಿದೆ. ಅರ್ಜಿಗಳ ಸ್ವೀಕರಿಸಿದ ಬಳಿಕ ಅಕ್ಟೋಬರ್ 16 ರಿಂದ ಮನೆಮನೆಗೆ ಹೋಗಿ ಪರಿಶೀಲಿಸಲಾಗುವುದು. ಮತಗಟ್ಟೆಗಿಂತ ಎರಡು ಕಿ.ಮೀ ಹೆಚ್ಚು ದೂರದಲ್ಲಿ ಮತದಾರ ಇರಬಾರದು. ಮತಗಟ್ಟೆಗಳ ಬದಲಾವಣೆ ಇದ್ದಲ್ಲಿಯೂ ಪರಿಷ್ಕರಣೆ ವೇಳೆ ಬದಲಾವಣೆ ಮಾಡಲಾಗುವುದು. ಫೆಬ್ರವರಿ 2002 ರಿಂದ ಜನವರಿ 2003ರ ವರೆಗೆ ಹುಟ್ಟಿದವರು ಹೊಸ ಮತದಾರರಾಗಲಿದ್ದು, ಈ ವೇಳೆ ನೋಂದಣಿ ಮಾಡಿಕೊಳ್ಳಬೇಕು ಎಂದರು.

    ಒಂದೇ ಕುಟುಂಬದ ಎಲ್ಲ ಸದಸ್ಯರು ಮತದಾರರಾಗಿ ಒಂದೇ ಸ್ಥಳದಲ್ಲಿ ಇರಬೇಕು. ಫಾರ್ಮ್ 7ರ ಮುಖೇನ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದು ಹಾಕುವುದು. ಮರಣವಾಗಿದ್ದರೆ ಅಥವಾ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕುವುದು. ಮತಗಟ್ಟೆಗಳು ಶಿಥಿಲವಾಗಿದ್ದರೆ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಒಟ್ಟಿನಲ್ಲಿ ಎಲ್ಲ ಅರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಸಮಗ್ರ ಪರಿಷ್ಕರಣೆಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

    ಮತದಾರರು ಸಲ್ಲಿಸಬೇಕಾದ ವಿವರಗಳು:
    1) ಪಾಸ್ ಪೋರ್ಟ್
    2) ಚಾಲನಾ ಪರವಾನಗಿ
    3) ಆಧಾರ್ ಪತ್ರ
    4) ಪಡಿತರ ಚೀಟಿ
    5) ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ
    6) ಬ್ಯಾಂಕ್ ಪಾಸ್ ಬುಕ್
    7) ರೈತರ ಗುರುತಿನ ಚೀಟಿ
    8) ಚುನಾವಣಾ ಆಯೋಗ ನಮೂದಿಸಿರುವ ಇತರ ಯಾವುದೇ ದಾಖಲೆಗಳು

    ಮತದಾರರಿಗೆ ಯಾವುದೇ ಗೊಂದಲಗಳಿದ್ದಲ್ಲಿ 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

  • ಸ್ಥಳೀಯ ಚುನಾವಣೆಯಲ್ಲಿ ರಮ್ಯಾ ವೋಟ್ ಮಾಡದಿದ್ರೆ, ಸ್ಪರ್ಧೆ ಮಾಡುವಂತಿಲ್ಲ: ಮಂಡ್ಯ ಜನ

    ಸ್ಥಳೀಯ ಚುನಾವಣೆಯಲ್ಲಿ ರಮ್ಯಾ ವೋಟ್ ಮಾಡದಿದ್ರೆ, ಸ್ಪರ್ಧೆ ಮಾಡುವಂತಿಲ್ಲ: ಮಂಡ್ಯ ಜನ

    ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಮತದಾನವನ್ನು ಮಾಡದೇ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧೆ ಮಾಡಲು ಬಿಡುವುದಿಲ್ಲವೆಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

    ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೇ, ಸಾರ್ವಜನಿಕರ ಕೆಂಗಣ್ಣಿಗೆ ರಮ್ಯಾ ಗುರಿಯಾಗಿದ್ದರು. ಒಂದು ವೇಳೆ ನೀವು ಸ್ಥಳೀಯ ಸಂಸ್ಥೆಯಲ್ಲಿ ಚುನಾವಣೆಯಲ್ಲಿ ಮತದಾನ ಮಾಡದೇ ಇದ್ದರೆ, ನೀವು ಯಾವುದೇ ಕಾರಣಕ್ಕೂ ಮಂಡ್ಯದಿಂದ ಸ್ಪರ್ಧೆ ಮಾಡುವಂತಿಲ್ಲ ಎಂದು ಜನ ಆಗ್ರಹಿಸಿದ್ದಾರೆ.

    ರಮ್ಯಾರವರು ನಗರದ 11 ನೇ ವಾರ್ಡಿನ ಮತದಾರರಾಗಿದ್ದು, ಮತದಾರರ ಪಟ್ಟಿಯಲ್ಲಿ 621 ನೇ ಕ್ರಮಸಂಖ್ಯೆಯಲ್ಲಿ ಹೊಂದಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರು 420 ನೇ ಕ್ರಮಾಂಕದಲ್ಲಿದ್ದರು. ಅಲ್ಲದೇ ರಮ್ಯಾ ವಿಧಾನಸಭೆ ಚುನಾವಣೆ ಮತದಾನಕ್ಕೆ ಬರುತ್ತಾರೆಂದು ಬೆಂಬಲಿಗರು ಹೆಸರು ಹಾಗೂ ಕ್ರಮಸಂಖ್ಯೆಯನ್ನು ಬರೆದುಕೊಂಡು ಕಾಯುತ್ತಿದ್ದರು. ಆದರೆ ಅವರು ಮತದಾನ ಮಾಡದೇ ಬೇಜವಾಬ್ದಾರಿ ಪ್ರದರ್ಶಿಸಿದ್ದರು. ಮತದಾನ ಮಾಡದ ರಮ್ಯಾ ವಿರುದ್ಧ ರಾಷ್ಟ್ರಮಟ್ಟದಲ್ಲಿ ಟೀಕೆಗಳು ಕೇಳಿಬಂದಿದ್ದವು. ಅಲ್ಲದೇ ಒಬ್ಬ ಮಾಜಿ ಸಂಸದೆಯಾಗಿ ಮತವನ್ನು ಚಲಾಯಿಸದೇ, ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.

    ಮಂಡ್ಯದಿಂದಲೇ ರಮ್ಯಾ ಕಾಂಗ್ರೆಸ್‍ನಿಂದ ಮತ್ತೊಮ್ಮೆ 2019ರ ಲೋಕಸಭಾ ಚುನಾವಣೆಗೆ ಸ್ಪಧಿಸುತ್ತಾರೆಂದು ಅವರ ತಾಯಿ ರಂಜಿತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ರಾಜ್ಯ ಮಟ್ಟದಲ್ಲಿ ಜೆಡಿಎಸ್ ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ಹೊಂದಿರಬಹುದು, ಆದರೆ ಯಾವುದೇ ಕಾರಣಕ್ಕೂ ಜಿಡಿಎಸ್ ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೆಡಿಎಸ್‍ಗೆ ಬಿಡಲ್ಲ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ರಮ್ಯಾ ಕಣಕ್ಕೆ: ತಾಯಿ ರಂಜಿತಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡೆರಡು ಮತಪಟ್ಟಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೆಸರು

    ಎರಡೆರಡು ಮತಪಟ್ಟಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೆಸರು

    ಬಾಗಲಕೋಟೆ: ಹುನಗುಂದ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿರುವ ವಿಷಯ ಬೆಳಕಿಗೆ ಬಂದಿದೆ.

    ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್ ದಾಖಲೆ ಸಮೇತ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್, ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಹುಟ್ಟೂರು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಪತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರಲ್ಲದೇ, ಇಳಕಲ್ ನಗರದ ವಾರ್ಡ್ ನಂಬರ್ 1ರ ಮತದಾರರ ಪಟ್ಟಿಯಲ್ಲಿಯೂ ಹೆಸರನ್ನು ಹೊಂದಿದ್ದಾರೆ. ಈ ಮೂಲಕ ಕಾನೂನಿಗೆ ಮಣ್ಣೆರಚಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಇಳಕಲ್ ನಗರದ ಬೂತ್ ನಂಬರ್ 151ರಲ್ಲಿ ಬೇರೆ ಬೇರೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದಲ್ಲಿರುವ 29 ಜನರನ್ನು ಸೇರಿಸಲಾಗಿದೆ. ಅಲ್ಲದೇ ಅದೇ ಬೂತ್ ನಲ್ಲಿ 16 ಜನ ಸತ್ತವರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಕ್ಷೇತ್ರದಾದ್ಯಂತ ಶಾಸಕ ಕಾಶಪ್ಪನವರ್ ತಮ್ಮ ಪ್ರಭಾವ ಬಳಸಿ ಹುನಗುಂದ ಮತಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ನಕಲಿ ಮತದಾರರನ್ನು ಸೃಷ್ಟಿ ಮಾಡಿದ್ದಾರೆ ಎಂದು ದೊಡ್ಡನಗೌಡ ಪಾಟಿಲ್ ಆರೋಪಿಸಿದ್ದಾರೆ.

    ಇದಕ್ಕೆ ಹುನಗುಂದ ತಹಶೀಲ್ದಾರ ಸುಭಾಸ್ ಸಂಪಗಾವಿ, ಇಳಕಲ್ ನಗರಸಭೆ ಆಯುಕ್ತ ಪಾತ್ರವಹಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರಿನ ಮನವಿ ನೀಡಿದ್ದಾರೆ.