Tag: VoterIDScam

  • ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಮತದಾರರ ಪಟ್ಟಿ ಹಗರಣ ಪ್ರಕರಣ – ನಾಲ್ವರು ಆರ್‌ಓಗಳು ಅರೆಸ್ಟ್

    ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ಪ್ರಕರಣಕ್ಕೆ (VoterID Scam) ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಹಲಸೂರು ಗೇಟ್ ಪೊಲೀಸರು (Police) ನಾಲ್ವರು ಆರ್‌ಓಗಳನ್ನ ಬಂಧಿಸಿದ್ದಾರೆ.

    ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ ವಿಭಾಗ), ಸೊಹೆಲ್ ಅಹಮದ್ (ಶಿವಾಜಿನಗರ), ಚಂದ್ರಶೇಖರ್ (ಮಹಾದೇವಪುರ) ಹಾಗೂ ಆರ್‌ಆರ್ ನಗರದ ಎಆರ್‌ಓ ಮಹೇಶ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಆರ್‌ಒಗಳು ಖಾಸಗಿ ವ್ಯಕ್ತಿಗಳಿಗೆ ಬಿಎಲ್‌ಓ ಕಾರ್ಡ್ಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ಚುನಾವಣಾ ಆಯೋಗ (Election Commission) ಈಗಾಗಲೇ ಅಧಿಕಾರಿಗಳ ಫೋನ್ ಕರೆ ತನಿಖೆಗೆ ಮುಂದಾಗಿದೆ. ಬಿಬಿಎಂಪಿ (BBMP) ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ರಂಗಪ್ಪ ಅವರು ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದರೆ, ಶ್ರೀನಿವಾಸ್ ಅವರು, ಮಹದೇವಪುರ ಕ್ಷೇತ್ರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಮೂರು ಕ್ಷೇತ್ರದಲ್ಲಿ ಬಿಎಲ್‌ಓ ಐಡಿ ಕಾರ್ಡ್ ಇಟ್ಟುಕೊಂಡು ಸರ್ವೆ ನಡೆಸಲಾಗಿತ್ತು. ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಅವರನ್ನು ಅಮಾನತುಗೊಳಿತು. ಇದನ್ನೂ ಓದಿ: ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

    ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲಿಯೇ ಅಮಾನತುಗೊಂಡ ಅಧಿಕಾರಿಗಳನ್ನು ವಿಚಾರಣೆ ನಡೆಸಲಿದ್ದು, ಬಿಎಲ್‌ಓ ಎಂಬ ಐಡಿ ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು ಯಾರು? ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆ ಮಾಹಿತಿ ಕದ್ದಿದೆಯಾ? ಹೀಗೆ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು

    ಚುನಾವಣಾ ಆಯೋಗ ಸೂಚನೆ – ಮತದಾರರ ಪಟ್ಟಿ ಪರಿಷ್ಕರಣೆ ಶುರು

    ವಿಜಯಪುರ: ಚುನಾವಣಾ ಆಯೋಗದ (Election Commission) ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ (Voter List Verification) ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಶನಿವಾರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಅವರು ನಗರದ ವಿವಿಧ ಮತಗಟ್ಟೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವಿಜಯಪುರ ನಗರದ ಮತಗಟ್ಟೆ ಸಂಖ್ಯೆ 153 ಹಾಗೂ ಮತಗಟ್ಟೆ ಸಂಖ್ಯೆ 119ರ ಸ್ವತಂತ್ರ ಕಾಲೋನಿ, ಖಾಜಾನಗರ, ಗುಂಡಬಾವಡಿ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ವಿಳಾಸದ ಬದಲಾವಣೆಗಳಿದ್ದರೆ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಪ್ರಸ್ತುತ ಕಾಯ್ದೆಯಲ್ಲಿ ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಅನ್ನು ನಾಲ್ಕು ಅರ್ಹತಾ ದಿನಾಂಕಗಳೆಂದು ನಿಗದಿಪಡಿಸಲಾಗಿದೆ. ಅರ್ಹ ಯುವ ಮತದಾರರು (Voters) ತಮ್ಮ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.  

    ಮತಗಟ್ಟೆ ಅಧಿಕಾರಿಗಳು ಸಹ ಯಾವುದೇ ಮತದಾರ ಮತದಾನದಿಂದ ವಂಚಿತವಾಗದಂತೆ ಜವಾಬ್ದಾರಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು – ಸಿ.ಎನ್.ಅಶ್ವಥ್ ನಾರಾಯಣ ಕರೆ

    ದೋಷಗಳಿಲ್ಲದೇ ಮತದಾರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ ಅವರು, ಮತದಾರ ಲಿಂಗಾನುಪಾತ ಹಾಗೂ 18 ವರ್ಷದ ಯುವ ಮತದಾರರು ಮತದಾರರ ಪಟ್ಟಿಯ ಅನುಪಾತ ಕುರಿತು ಮತಗಟ್ಟೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

    ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರೂ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಿಲ್ಲಾ ದೂರು ನಿರ್ವಹಣಾ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಸಂಪರ್ಕಿಸುವಂತೆ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ವಿಜಯಪುರ ತಹಶೀಲ್ದಾರ ಸಿದರಾಯ ಭೋಸಗಿ ಸೇರಿದಂತೆ, ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]