Tag: Voter Corruption

  • ಮತಯಂತ್ರದ ದೋಷ – ಕೋಲಾರದ ಹತ್ತು ಕಡೆ ಮತದಾನ ವಿಳಂಬ

    ಮತಯಂತ್ರದ ದೋಷ – ಕೋಲಾರದ ಹತ್ತು ಕಡೆ ಮತದಾನ ವಿಳಂಬ

    ಕೋಲಾರ:  ಜಿಲ್ಲೆಯ ಹತ್ತು ಮತಗಟ್ಟೆಯಲ್ಲಿ ಮತಯಂತ್ರಗಳ ದೋಷದಿಂದಾಗಿ ಮತದಾರರು ಪರದಾಡುವಂತಾಗಿದೆ. ಸರದಿಯಲ್ಲಿ ನಿಂತಿದ್ದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ಕೋಲಾರದ ಗೌರಿಪೇಟೆ (ಮತಗಟ್ಟೆ ಸಂಖ್ಯೆ 141 ಮತ್ತು 135), ಮಹಾಲಕ್ಷ್ಮಿ ಬಡಾವಣೆ (ಮತಗಟ್ಟೆ ಸಂಖ್ಯೆ 193), ಕೋಲಾರ ತಾಲ್ಲೂಕಿನ ಲಕ್ಕೂರು (ಮತಗಟ್ಟೆ ಸಂಖ್ಯೆ 161 ಹಾಗೂ 163), ವೇಮಗಲ್ (ಮತಗಟ್ಟೆ ಸಂಖ್ಯೆ 60) ಸೇರಿದಂತೆ ವಿವಿಧ ಕಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಹೀಗಾಗಿ ಮತದಾರರು ಸರದಿಯಲ್ಲಿಯೇ ನಿಲ್ಲುವಂತಾಗಿದೆ.

    7 ಗಂಟೆಗೆ ಮತದಾನ ಆರಂಭಗೊಂಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 8 ಗಂಟೆಯಾದರೂ ಮತದಾನ ಪ್ರಾರಂಭವಾಗಿರಲಿಲ್ಲ. ಹೀಗಾಗಿ ಜನ ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.