Tag: vote

  • ಕಾಂಗ್ರೆಸ್‌ಗೆ ಮತ ಹಾಕುವವರು ಕಳ್ಳರು: ಕಂಗನಾ ರಣಾವತ್‌

    ಕಾಂಗ್ರೆಸ್‌ಗೆ ಮತ ಹಾಕುವವರು ಕಳ್ಳರು: ಕಂಗನಾ ರಣಾವತ್‌

    ನವದೆಹಲಿ: ನಾಸ್ತಿಕರನ್ನು ನಂಬಲು ಸಾಧ್ಯವಿಲ್ಲ. ಕಳ್ಳರು ಮಾತ್ರ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ.

    ʻಜೀವನದ ನಾಲ್ಕು ನಿಯಮಗಳನ್ನು ನೆನಪಿಟ್ಟುಕೊಳ್ಳಿʼ ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 1.ಮೂರ್ಖರು ಮಾತ್ರ ಮೂರ್ಖರನ್ನು ಬೆಂಬಲಿಸುತ್ತಾರೆ. 2.ತನ್ನನ್ನೇ ನಂಬದವರಿಗೆ ದೇವರು ಮತ್ತು ನಂಬಿಕೆ ಮೇಲೆ ವಿಶ್ವಾಸವಿರುವುದಿಲ್ಲ. 3.ನಿಮ್ಮ ಅಂತರಂಗದ ಪ್ರತಿಬಿಂಬವಾಗಿರುವ ಗುರುವನ್ನು ನೀವು ಕಾಣುವಿರಿ. ನೀವು ಸತ್ಯವಂತರಾಗಿದ್ದರೆ ಸತ್ಯವಂತ ಗುರುಗಳನ್ನೇ ಅನುಸರಿಸುವಿರಿ. ನೀವು ಒಳ್ಳೆಯವರಾಗಿಲ್ಲದಿದ್ದರೆ, ವಂಚಕರನ್ನೇ ಗುರು ಎಂದು ಕಾಣುವಿರಿ. 3.ನೀವು ಕಳ್ಳರಾಗಿದ್ದರೆ ಕಾಂಗ್ರೆಸ್‌ನ್ನು ಬೆಂಬಲಿಸುವಿರಿ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದು ಕಂಗನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶೂಟಿಂಗ್‍ಗಾಗಿ ರಾಜಮಂಡ್ರಿಗೆ ಬಂದಿಳಿದ ರಾಮ್ ಚರಣ್ – ಅಭಿಮಾನಿಗಳಿಂದ ನೂಕು ನುಗ್ಗಲು

    ಕಂಗನಾ ರಣಾವತ್‌ ಹಿಂದಿನಿಂದಲೂ ಬಿಜೆಪಿ ಪರವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಕಂಗನಾ ಭೇಟಿಯಾಗಿದ್ದರು. ಅವರ ಪೋಸ್ಟ್‌ಗಳು ಸಹ ಬಿಜೆಪಿ ಪರವಾಗಿವೆ.

    ಅಷ್ಟೇ ಅಲ್ಲದೆ ವಿವಾದಾತ್ಮಕ ಹೇಳಿಕೆಗಳ ಮೂಲಕವೂ ಕಂಗನಾ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಗಾಂಧೀಜಿ ಅವರ ಅಹಿಂಸಾವಾದವನ್ನು ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದರು. ಇದನ್ನೂ ಓದಿ: ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ: ಕೇಜ್ರಿವಾಲ್‌

  • ಬಲವಂತವಾಗಿ ಬಿಜೆಪಿಗೆ ಮತ ಹಾಕಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಅಖಿಲೇಶ್ ಆಗ್ರಹ

    ಬಲವಂತವಾಗಿ ಬಿಜೆಪಿಗೆ ಮತ ಹಾಕಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಅಖಿಲೇಶ್ ಆಗ್ರಹ

    ಲಕ್ನೋ: ಅಂಗವಿಕಲ ಹಿರಿಯ ನಾಗರಿಕರೊಬ್ಬರಿಗೆ ಬಲವಂತವಾಗಿ ಬಿಜೆಪಿಗೆ ಮತ ಹಾಕಿಸಿದ ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಅತ್ಯಂತ ಗಂಭೀರ ವಿಚಾರ ಇದಾಗಿದೆ. ಆ ಅಧಿಕಾರಿಯನ್ನು ಆಯೋಗವು ಅಮಾನತು ಮಾಡ ಬೇಕು. ಅಂತಹ ಅಧಿಕಾರಿಗಳನ್ನು ಆಯೋಗವು ಗುರುತಿಸಬೇಕು ಮತ್ತು ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಅಖಿಲೇಶ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಈ ಘಟನೆ ಕುರಿತಾದ ಒಂದು ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಬಿಜೆಪಿಗೆ ಮತ ಹಾಕುವಂತೆ ಅಧಿಕಾರಿಗಳು ಬಲವಂತ ಮಾಡಿದ್ದಾರೆ ಎಂದು ಆಗ್ರಾದ ಫತೇಹಾಬಾದ್ ನಿವಾಸಿ 80 ವರ್ಷದ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಗ್ರಾಮದ ಜನರು ಧಾವಿಸಿ ಬಂದು ಅಧಿಕಾರಿಗಳ ಮುಂದೆ ದಾಂದಲೆ ನಡೆಸಿದ್ದರು. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್

    ಅಲ್ಲಿಗೆ ಬಂದಿದ್ದ ಹಿರಿಯ ಅಧಿಕಾರಿಯೊಬ್ಬರು ಒಂದು ಮತದಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳಿದ್ದಾರೆ. ಬಲವಂತದಿಂದ ಮತ ಹಾಕಿಸಿದ ಬಗ್ಗೆ ಗ್ರಾಮದ ಜನರು ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದ ದೃಶ್ಯಗಳೂ ವೀಡಿಯೋದಲ್ಲಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಅಂಚೆ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ ಆಗ್ರಾದಲ್ಲಿ ಭಾನುವಾರ ಆರಂಭಗೊಂಡಿದೆ. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು

  • ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

    ಹಾಸನ: ನೀವು ನನಗೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ, ಆದರೂ ನಿಮಗೆ ನಾನು ಕೆಲಸ ಮಾಡಿ ಕೊಡುತ್ತೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.

    ನಗರದ 30-31 ನೇ ವಾರ್ಡ್‍ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ನೆಲೆಸಿರುವ ಜನರಿಗೆ ಹಕ್ಕುಪತ್ರ ಸಂಬಂಧ ಹಾಗೂ ಅವರ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆ ಇದಾಗಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ನೀವು ನನಗೆ ಮತ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ಮತ ಹಾಕುತ್ತೀರಿ ಎಂಬ ನಂಬಿಕೆ ನನಗಿಲ್ಲ. ಆದರೂ ನಾನು ನಿಮಗೆ ಕೆಲಸ ಮಾಡಿಕೊಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ನೀವು 2023ರ ಚುನಾವಣೆಯಲ್ಲಿ ಮತ ಹಾಕದಿದ್ದರೂ 2028ಕ್ಕೆ ಆದರೂ ಮತ ಹಾಕುತ್ತೀರಿ. ನನಗೇನು ತುರ್ತು ಮತ ಹಾಕೋದು ಏನೂ ಬೇಡ. ನನಗೆ ಅಥವಾ ಬಿಜೆಪಿಗೆ ಮತ ಹಾಕುವುದಿಲ್ಲವೇ ಬೇಡ. ಆದರೆ ಪ್ರೀತಂಗೌಡ ಅಥವಾ ಬಿಜೆಪಿ ಹೆಸರು ತೋರಿಸಿ ಅವರಿಗೆ ವಿರುದ್ಧವಾಗಿ ಮತ ಕೇಳುವವರಿಗೆ ಮಾತ್ರ ಮತ ಹಾಕಬೇಡಿ. ನಿಮ್ಮ ಕಷ್ಟಕ್ಕೆ ಆದವರಿಗೆ ನೀವು ಮತ ಹಾಕಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್‍ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ

    ಪ್ರೀತಂ ಗೌಡ ವಿರುದ್ಧ ಮತ ಹಾಕಿ ಅನ್ನುವವರನ್ನು ನಿಮ್ಮ ಹತ್ತಿರ ಸೇರಿಸಬೇಡಿ. ಇದನ್ನೇ 3 ಸಾರಿ ಹೇಳುತ್ತಿದ್ದೇನೆ ಎಲ್ಲರಿಗೂ ತಲೆಗೆ ಹೋಗಲಿ ಅಂತ ತಾಕೀತು ಮಾಡುತ್ತಿದ್ದೇನೆ. ಹಕ್ಕು ಪತ್ರ ನೀಡಿ ಪರೋಕ್ಷವಾಗಿ ಬೇರೆಯವರಿಗೆ ಮತ ಹಾಕಬಾರದು ಅಂತ ತಾಕೀತು ಮಾಡುತ್ತಿದ್ದೇನೆ ಎಂದರು.

  • ಹಿಂದೂ, ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ: ರಾಕೇಶ್ ಟಿಕಾಯತ್

    ಹಿಂದೂ, ಮುಸ್ಲಿಂ ಒಡೆದು ಆಳುವ ನೀತಿ ನಡೆಯುವುದಿಲ್ಲ: ರಾಕೇಶ್ ಟಿಕಾಯತ್

    ಲಕ್ನೋ: ಹಿಂದೂ, ಮುಸ್ಲಿಮರನ್ನು ಒಡೆದು ಆಳುವ ನೀತಿ ಉತ್ತರಪ್ರದೇಶದಲ್ಲಿ ನಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಪಿಯಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ವಿದ್ಯುತ್ ದರ ಏರಿಕೆಯಿಂದಾಗಿ ಅನ್ನದಾತರು ಸಂಕಷ್ಟ ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ರೈತರ ಸಮಸ್ಯೆಗಳು, ನಿರುದ್ಯೋಗ, ಹಣದುಬ್ಬರದಿಂದ ಮಧ್ಯಮ ವರ್ಗದ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಚುನಾವಣೆ ವಿಷಯಗಳಾಗಬೇಕು. ಉತ್ತರ ಪ್ರದೇಶದ ಮತದಾರರು ರೈತರ ಏಳ್ಗೆ ಮತ್ತು ಕಲ್ಯಾಣದ ಬಗ್ಗೆ ಮಾತನಾಡುವವರಿಗೆ ಮಾತ್ರ ಮಣೆ ಹಾಕುತ್ತಾರೆಯೇ ವಿನಃ ಧಾರ್ಮಿಕ ನೆಲೆಯಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್‍ಬಿಟ್ ಹೆಚ್ಚಿಸಿದ ಮಾಳವಿಕಾ ಮೋಹನನ್

    ಮೊಹಮ್ಮದ್ ಅಲಿ ಜಿನ್ನಾ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಹಿಂದೂ-ಮುಸ್ಲಿಮರನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ಒಡೆದು ಆಳುವುದಕ್ಕೆ ಹೊರಟಿರುವುದು ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನು ಉಂಟು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾನು ರಾಜಕಾರಣಿಯಲ್ಲ, ರಾಜಕೀಯ ಪಕ್ಷಗಳಿಂದ ದೂರ ಉಳಿದಿದ್ದೇನೆ, ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರ ನಾಯಕರನ್ನು ಪ್ರಶ್ನಿಸುವುದಕ್ಕೆ ಜನರಿಗೆ ಒತ್ತಾಯಿಸುತ್ತೇನೆ, ನಾನು ರೈತರ ಸಮಸ್ಯೆಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

    ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದು, ಅಂಥ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • 80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಮಹತ್ವ ನಿರ್ಧಾರವೊಂದನ್ನು ಕೈಗೊಂಡಿದೆ. 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಅಂಗವಿಕಲರು ಮನೆಯಲ್ಲೇ ಇದ್ದು ಮತ ಚಲಾಯಿಸಬಹುದು ಎಂದು ಆಯೋಗ ತಿಳಿಸಿದೆ.

    ವೃದ್ಧರು, ಅಂಗವಿಕಲರು, ಕೊರೊನಾ ಸೋಂಕಿಗೆ ಒಳಗಾಗಿರುವವರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲೇ ಇದ್ದು ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವ್ಯವಸ್ಥೆಯನ್ನು ಅವರಿಗೆ ಮಾಡಿಕೊಡಲಾಗುವುದು ಎಂದು ಆಯೋಗ ಹೇಳಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    VOTE

    ಉತ್ತರ ಪ್ರದೇಶ ಚುನಾವಣೆ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಮಾತನಾಡಿ, ವಿಳಂಬ ಮಾಡದೇ ಕೋವಿಡ್‌ ನಿಯಮಗಳನ್ನು ಪಾಲಿಸಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶ ಹಾಲಿ ಸರ್ಕಾರದ ಅವಧಿ ಮೇ 14ಕ್ಕೆ ಮುಗಿಯಲಿದೆ. ಚುನಾವಣೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಯೋಗವು ಈಗಾಗಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಚುನಾವಣೆ ವೇಳೆ ಯಾವುದೇ ಭ್ರಷ್ಟ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್​ನಲ್ಲಿರುವ ವಿರುಷ್ಕಾ!

    ಆರೋಗ್ಯ ಕಾರ್ಯದರ್ಶಿ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಚುನಾವಣೆ ದಿನಾಂಕ ಘೋಷಣೆಯಾದಾಗ ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

  • ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

    ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

    ಹಾಸನ: ಮತದಾನ ಮಾಡಲು ಆಗಮಿಸಿದ ತಮ್ಮ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಒಂಬತ್ತನೆಯವರಾಗಿ ಮತ ಚಲಾಯಿಸುವಂತೆ ರೇವಣ್ಣ ಸೂಚಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ, ಪುರಸಭೆಯಲ್ಲಿ ನಡೆದಿದೆ.

    ಎಂಎಲ್‍ಸಿ ಚುನಾವಣೆಗೆ ಪುರಸಭೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರೇವಣ್ಣ ಅದಾಗಲೇ ಬಂದು ಮತ ಚಲಾಯಿಸಿದ್ದಾರೆ. ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಆಗ ಹೆಚ್‍ಡಿ.ರೇವಣ್ಣ ಏಳು ಆಗಿದೆಯಾ, ಎಂಟು ಆಗಿದೆಯಾ, ಪ್ರಜ್ವಲ್‍ಗೆ ೯ನೇಯವರಾಗಿ ಮತ ಚಲಾಯಿಸಲು ಅವಕಾಶ ಕೊಡಿ ಎಂದು ಸೂಚಿಸಿದ್ದಾರೆ. ನಂತರ   ಪ್ರಜ್ವಲ್ ರೇವಣ್ಣ ಮತ ಚಲಾಯಿಸಿದರು. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್‍ಡಿ.ರೇವಣ್ಣ ಒಂಬತ್ತು ಲಕ್ಕಿ ನಂಬರೋ ಏನೋ ಗೊತ್ತಿಲ್ಲ. ಒಂಬತ್ತನೇ ಮತದಾರನಾಗಿ ವೋಟು ಹಾಕ್ತೀನಿ ಅಂದಿದ್ದರು, ಹಾಕಪ್ಪ ಅಂದೆ ಎಂದು ತಿಳಿಸಿದೆ. ಈ ಬಗ್ಗೆ ನಂತರ ಮಾತನಾಡಿದ ಪ್ರಜ್ವಲ್ ರೇವಣ್ಣ, ಮೊದಲಿನಿಂದಲೂ ಐದು, ಒಂಭತ್ತು ನಮಗೆ ಲಕ್ಕಿ ನಂಬರ್. ನಂಬರ್ ನಂಬೋದು ಪ್ರಶ್ನೆ ಅಲ್ಲಾ. ಆದರೆ ಎಲ್ಲರಿಗೂ ಒಂಭತ್ತು ಒಳ್ಳೆಯ ಸಂಖ್ಯೆ ಅಷ್ಟೇ. ಮೊದಲನೇ ಭಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರುವುದರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕಿದ್ದೇನೆ ಅಷ್ಟೇ. ಐದು ನನ್ನ ಹುಟ್ಟಿದಹಬ್ಬ, ನಾನು ಹುಟ್ಟಿದ ದಿನ ಒಳ್ಳೆಯ ದಿನ ಅಂಥಾ ನಾನು ಭಾವಿಸುತ್ತೇನೆ. ಅದರಲ್ಲಿ ಯಾವ ಮೂಢನಂಬಿಕೆ ಏನಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

  • ವಿಧಾನ ಪರಿಷತ್‌ ಚುನಾವಣೆ- 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ವಿಧಾನ ಪರಿಷತ್‌ ಚುನಾವಣೆ- 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

    ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಚುನಾವಣೆಯಲ್ಲಿ 90 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

    ಬೆಳಗ್ಗೆ 8ರಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆವರೆಗೂ ನಡೆಯಲಿದೆ. ಒಟ್ಟು 98,846 ಮತದಾರರಿದ್ದಾರೆ. ರಾಜ್ಯದಾದ್ಯಂತ 6,073 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಲಿದ್ದಾರೆ. ಇದೇ ಡಿ.14 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

    ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್‌ ಸಭಾಪತಿ ಎಂ.ಕೆ.ಪ್ರಾಣೇಶ್‌ ಸೇರಿದಂತೆ ಅನೇಕ ಪ್ರಮುಖರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕಣದಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.

    ರಾಜ್ಯದಲ್ಲಿ ಕನಿಷ್ಠ 12 ರಿಂದ 15 ಸ್ಥಾನ ಗೆಲ್ಲಲಿದ್ದೇವೆ- ಪ್ರತಾಪಸಿಂಹ

    ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಇಂದು ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲೂ ಒಂದು ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮತ್ತು ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಮತದಾನ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ-ಬೊಮ್ಮಾಯಿ

    ಮತದಾನಕ್ಕೂ ಮುನ್ನ ಶಾಸಕ ಅಪ್ಪಚ್ಚು ರಂಜನ್ ಮತ್ತು ಸಂಸದ ಪ್ರತಾಪಸಿಂಹ ಜೊತೆಗೆ ಮಡಿಕೇರಿ ನಗರಸಭೆ ಬಿಜೆಪಿ ಸದಸ್ಯರು ಕೋಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಎಲ್ಲರೂ ಒಟ್ಟಿಗೆ ಬಂದು ನಗರಸಭೆಯ ಕಾವೇರಿ ಕಲಾಕ್ಷೇತ್ರದಲ್ಲಿ ಇರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

    ಬಳಿಕ ಮಾತನಾಡಿದ ಸಂಸದ ಪ್ರತಾಪಸಿಂಹ, ಕೊಡಗಿನಲ್ಲಿ ಅಷ್ಟೇ ಅಲ್ಲ ಮೈಸೂರಿನಲ್ಲೂ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಕೊಡಗಿನಲ್ಲಿ ಇರುವ 1,329 ಮತಗಳ ಪೈಕಿ 1,000 ಮತಗಳ ಪಡೆದು ನಮ್ಮ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಕನಿಷ್ಠ 12 ರಿಂದ 15 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ: ಲಕ್ಷ್ಮೀ ಹೆಬ್ಬಾಳ್ಕರ್

    ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ, ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

     

    ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10 ರಂದು ನಡೆಯುತ್ತಿದೆ. ಕೆಲವು ಜನರು ಲಕ್ಷ್ಮೀ ಹೆಬ್ಬಾಳ್ಕರ್ ಟೂರ್‌ಗೆ ಕರೆದಿದ್ದಾರೆ ಎಂದು ಹೇಳಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಯಾವ ಜನರನ್ನು ಟೂರ್‌ಗೆ ಕಳಿಸುತ್ತಿಲ್ಲ. ತಾವು ಕೂಡ ಯಾಮಾರಬೇಡಿ. ಇಲ್ಲಿಯೇ ಇದ್ದು, ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟಿರುವ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಮಾಧ್ಯಮಗಳಿಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾವುದೇ ಒತ್ತಡಕ್ಕೆ, ಧಮ್ಕಿಗೆ ತಾವು ಹೆದರುವ ಅವಶ್ಯಕತೆ ಇಲ್ಲ. ನ್ಯಾಯಯುತವಾದ ಚುನಾವಣೆಯನ್ನು ನಾವು ಮಾಡೋಣ. ಎಲ್ಲರೂ ನನಗೆ ಸಹಾಯ, ಸಹಕಾರ, ಆಶೀರ್ವಾದ ಮಾಡಿ. ನಿಮ್ಮ ಜೊತೆಗೆ ಮನೆ ಮಗಳಾಗಿ ಯಾವತ್ತೂ ಇರುತ್ತೇನೆ. ನನ್ನ ತಮ್ಮ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮುಖಂಡರು ತಮ್ಮ ಜೊತೆಗೆ ಯಾವಾಗಲೂ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: UAEಯಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ – ಶನಿವಾರ, ಭಾನುವಾರ ವೀಕೆಂಡ್

  • ನೀವು ನನಗೆ ವೋಟ್ ಹಾಕಲ್ಲ- ಹೆಚ್.ಡಿ.ರೇವಣ್ಣ ತಮಾಷೆ

    ನೀವು ನನಗೆ ವೋಟ್ ಹಾಕಲ್ಲ- ಹೆಚ್.ಡಿ.ರೇವಣ್ಣ ತಮಾಷೆ

    ಹಾಸನ: ಮಳೆ ಹಾನಿ ವೀಕ್ಷಣೆ ವೇಳೆ ಎಲ್ಲಿ ನೀವು ನನಗೆ ವೋಟ್ ಹಾಕಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಹಿಳೆಯೊಬ್ಬರಿಗೆ ತಮಾಷೆ ಮಾಡಿದ ಪ್ರಸಂಗ ಹಾಸನದಲ್ಲಿ ನಡೆದಿದೆ.

    ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಮಳೆಗೆ ಕುಸಿದ ಬಿದ್ದಿದ್ದ ಮನೆಯನ್ನು ನಿನ್ನೆ ರೇವಣ್ಣ ವೀಕ್ಷಣೆ ಮಾಡುತ್ತಿದ್ದರು. ಮನೆ ವೀಕ್ಷಣೆ ನಂತರ ಗ್ರಾಮದ ಸುಧಾ ಅವರಿಗೆ, ಎಲ್ಲಿ ನೀವು ನನಗೆ ವೋಟ್ ಹಾಕಲ್ಲ ಎಂದು ರೇವಣ್ಣ ತಮಾಷೆ ಮಾಡಿದ್ದಾರೆ.  ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

    ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ನಾವು ನಿಮಗೆ ಯಾವಾಗಲೂ ವೋಟ್ ಹಾಕುವುದು ಎಂದು ನಗುತ್ತ ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಎಲ್ಲಿ ಪುಟ್ಟರಾಜಣ್ಣ ಇಲ್ಲಾ ಅಂಥಾ ಹೇಳ್ತಾವ್ನೆ ಎಂದ ರೇವಣ್ಣ ನಕ್ಕು ಸುಮ್ಮನಾಗಿದ್ದಾರೆ. ಈ ವೇಳೆ ಮಾತನಾಡಿದ ರೇವಣ್ಣ ಅವರು, ಯಾರೆಲ್ಲ ಮನೆ, ಬೆಳೆ ಕಳೆದುಕೊಂಡಿದ್ದೀರ ಅವರಿಗೆಲ್ಲ ಶೀಘ್ರವಾಗಿ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.

  • ದುಬೈನಿಂದ ಬಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತಚಲಾಯಿಸಿ ಕನ್ನಡಾಭಿಮಾನ ಮೆರೆದ ಮಹಿಳೆ

    ದುಬೈನಿಂದ ಬಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತಚಲಾಯಿಸಿ ಕನ್ನಡಾಭಿಮಾನ ಮೆರೆದ ಮಹಿಳೆ

    ಹಾಸನ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು, ದುಬೈನಿಂದ ಹಾಸನದ ಬೇಲೂರಿಗೆ ಬಂದು ಮತದಾನ ಮಾಡಿ ಕನ್ನಡಾಭಿಮಾನ ಮೆರೆದಿದ್ದಾರೆ.

    ಮೋನಿಕಾ ದೀಪಕ್ ದುಬೈನಿಂದ ಆಗಮಿಸಿ ಮತದಾನ ಮಾಡಿದ ಗೃಹಿಣಿ. ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಮತ ಚಲಾವಣೆಗೆ ಆಗಮಿಸಿರುವುದಾಗಿ ಹೇಳಿದ ಮೋನಿಕಾ, ನಾನು ಕನ್ನಡ ಸಾಹಿತ್ಯ ಪರಿಷತ್‍ನ ಸದಸ್ಯೆಯಾಗಿರುವುದೇ ದೊಡ್ಡ ಅಭಿಮಾನ ಅಂದಿದ್ದಾರೆ. ಇದನ್ನೂ ಓದಿ: ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆದ ಕೃಷ್ಣರಾಜ್

    ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಕನ್ನಡಕ್ಕೆ ಉತ್ತಮ ಕೆಲಸ ಮಾಡಲಿ. ನಾವು ವಿದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ ಹೆಚ್ಚಿದೆ. ಯಾರೆಲ್ಲ ಸಾಹಿತ್ಯ ಪರಿಷತ್ ಚುನಾವಣೆಗೆ ಮತ ಹೊಂದಿದ್ದೀರೋ ಅವರೆಲ್ಲ ತಪ್ಪದೇ ನಿಮ್ಮ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಒಂದೂವರೆ ವರ್ಷದ ಮಗುವಿನೊಂದಿಗೆ ಬೇಲೂರು ತಾಲೂಕು ಕಚೇರಿಯಲ್ಲಿ ಮತದಾನ ಮಾಡಿದ ಮೋನಿಕಾ ದೀಪಕ್ ಮತದಾನ ಮಾಡಿದ ನಂತರ ದುಬೈಗೆ ವಾಪಸ್ ತೆರಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು