Tag: vote

  • ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ – ಪ್ರತಿಪಕ್ಷಗಳ ಆಕ್ರೋಶ

    ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ – ಪ್ರತಿಪಕ್ಷಗಳ ಆಕ್ರೋಶ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ತೆರವುಗೊಳಿಸಿದ ನಂತರ ಇದೇ ಮೊದಲಬಾರಿಗೆ ಚುನಾವಣೆ ನಡೆಯುತ್ತಿದ್ದು, ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಲ್ಲಿ 370ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗಲಿದೆ. ಇದರಿಂದ ಕಾಶ್ಮೀರೇತರೂ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಅನುವು ಮಾಡಿಕೊಡಲಿದೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    ಜಮ್ಮು ಹಾಗೂ ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್, ಚುನಾವಣೆಗೆ ಮುನ್ನ 20 ಲಕ್ಷಕ್ಕೂ ಅಧಿಕ ಹೊಸ ಮತದಾರರು ಈ ಪ್ರದೇಶದಲ್ಲಿ ನೋಂದಣಿಯಾಗುವ ಸಾಧ್ಯತೆ ಇದೆ. ಇದರಿಂದ ಮತದಾರರ ಸಂಖ್ಯೆ ಶೇ.33ಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಈ ಕೇಂದ್ರಾಡಳಿತ ಪ್ರದೇಶದಲ್ಲಿ 76 ಲಕ್ಷ ಮತದಾರರಿದ್ದಾರೆ ಎಂದು ಹೇಳಿದ್ದಾರೆ.

    370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಈ ಮೊದಲು ಮತ ಹಾಕಲು ಸಾಧ್ಯವಿಲ್ಲದವರೂ ಈಗ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಹಿನ್ನೆಲೆ ಕಾಶ್ಮೀರಿಯಲ್ಲದವರು ಸೇರಿ ಮತದಾರರ ಅಂತಿಮ ಪಟ್ಟಿಯಲ್ಲಿ 20 – 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯಾರಾದರೂ ಅಲ್ಲಿ ಇನ್ಮುಂದೆ ಮತ ಹಾಕಬಹುದಾಗಿದೆ ಎಂದು ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್‌ಪೆಕ್ಟರ್, ಕಾನ್‍ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ

    ಚುನಾವಣಾ ಆಯೋಗದ ಈ ನಡೆಗೆ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, `ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಾತ್ಕಾಲಿಕ ಮತದಾರರನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆಯೇ? ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಾಗ ಇವುಗಳಲ್ಲಿ ಯಾವುದೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

    ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಜೆಪಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವತ್ತ ಗಮನ ಹರಿಸಿದೆ. ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದು ಅಂದರೆ ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ. ಅದಕ್ಕಾಗಿ ಹಿಂಬಾಗಿಲಿನಿಂದ 25 ಲಕ್ಷ ಬಿಜೆಪಿ ಮತದಾರರನ್ನು ತರುವ ಪ್ರಯತ್ನ ಮಾಡುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ತಾಲೀಮು ನಡೆಸಿದ್ದು ಯಾಕೆ?

    ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ತಾಲೀಮು ನಡೆಸಿದ್ದು ಯಾಕೆ?

    ಬೆಂಗಳೂರು: ಈ ಬಾರಿ ರಾಷ್ಟ್ರಪತಿ ಮತದಾನಕ್ಕೆ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿದ್ದು ಒಂದೇ ಒಂದು ಮತವೂ ಅಸಿಂಧುವಾಗದಂತೆ ಎಚ್ಚರಿಕೆ ವಹಿಸಲಾಗಿದೆ.

    ಈ ಮೊದಲು ಮತದಾನ ಪ್ರಕ್ರಿಯೆಯಲ್ಲಿ ಇಂದನ ಸಚಿವ ಸುನೀಲ್ ಕುಮಾರ್ ಶಾಸಕರಾದ ಸಿ ಟಿ ರವಿ, ಸತೀಶ್ ರೆಡ್ಡಿ, ಅಭಯ್ ಪಾಟೀಲ್ ತರಬೇತಿ‌ ಪಡಿದ್ದರು. ತರಬೇತಿ ಪಡೆದ ಈ ಶಾಸಕರು ಭಾನುವಾರ ನಗರದ ಖಾಸಗಿ ಹೋಟೆಲಿನಲ್ಲಿ ಅಣಕು ಮತದಾನದ ತರಬೇತಿ ನೀಡಿದ್ದಾರೆ.

    ಕಳೆದ ಬಾರಿಯ ಚುನಾವಣೆಯಲ್ಲಿ 17 ಮತಗಳು ಅಸಿಂಧುಗೊಂಡಿದ್ದವು. ಈ ಸಲ ಯಾವುದೇ ಲೋಪ‌ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿದೆ. ಈ ಸಂಬಂಧ ಎರಡು‌ ದಿನಗಳಿಂದ ಖಾಸಗಿ‌ ಹೊಟೇಲಿನಲ್ಲಿ ಶಾಸಕರನ್ನು ಜಮಾವಣೆ ಮಾಡಿಕೊಂಡು ಬಿಜೆಪಿ ತಾಲೀಮು ನಡೆಸಿದೆ.  ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ಈ ತಾಲೀಮಿನ ಜೊತೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಬಗ್ಗೆಯೂ ಚರ್ಚಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಲಂಡನ್‌: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್‍ನಲ್ಲಿರುವ ರಿಷಿ ಸುನಾಕ್‍ಗೆ ದಿನಕಳೆದಂತೆ ಬೆಂಬಲ ಹೆಚ್ಚಾಗುತ್ತಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಬಹುತೇಕ ನಾಯಕರು ರಿಶಿ ಸುನಕ್ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ.

    ರಿಷಿ ಸುನಾಕ್ ಚುನಾಯಿತರಾದರೆ ಅವರು ದೇಶಕ್ಕೆ ಒಳ್ಳೆಯ ಪ್ರಧಾನಿ ಆಗಿರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಿನ್ನೆ ಪ್ರಕಟವಾದ ಒಪಿನಿಯನ್ ಪೋಲ್‍ನಲ್ಲಿ ಈ ವಿಚಾರ ಬಯಲಾಗಿದೆ.

    ಪೆನ್ನಿ ಮೊರ್ಡಾಂಟ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಕನ್ಸರ್ವೇಟಿವ್ ಪಕ್ಷದ ನಾಯಕ ಹುದ್ದೆಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಗೆದ್ದವರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ಬೋರಿಸ್‌ ಜಾನ್ಸನ್‌ ವಿರೋಧ:
    ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಜಾನ್ಸನ್‌ ಅವರು ರಿಷಿ ಸುನಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ನ್ನು ಬೇಡ ಎಂದು ಜಾನ್ಸನ್‌ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

    ಜಾನ್ಸನ್ ಅವರಿಗೆ ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ರಿಷಿ ಕಾರಣ ಜಾನ್ಸನ್‌ ದೂಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

    ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

    ಚಂಡೀಗಢ: ಕಾಂಗ್ರೆಸ್ ಪಕ್ಷದಲ್ಲಿ ಕೆಲವು ನಾಯಕರಿಗೆ ಮಾತ್ರ ನಿಯಮಗಳು ಅನ್ವಯವಾಗುತ್ತವೆ. ಇತರರಿಗೆ ವಿನಾಯಿತಿ ಇದೆ ಇದು ಯಾವ ನ್ಯಾಯ ಎಂದು ಹರಿಯಾಣದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಗೊಳಿಸಿದ ಬಳಿಕ ಸಿಡಿದೆದ್ದಿದ್ದಾರೆ.

    ರಾಜ್ಯಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಅದಮ್‍ಪುರ್ ಕ್ಷೇತ್ರದ ಶಾಸಕರಾಗಿರುವ ಕುಲದೀಪ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದರು. ಆ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಮಾಡಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾಗೆ ಕರಾವಳಿ ಸುಂದರಿ ಜೋಡಿ

    ಈ ಬಗ್ಗೆ ಟ್ವಿಟ್ಟರ್ ಮೂಲಕ ತೀರುಗೇಟು ನೀಡಿರುವ ಕುಲದೀಪ್ ಬಿಷ್ಣೋಯಿ, ನಾನು ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದೇನೆ. ಪಕ್ಷದಲ್ಲಿ ಕೆಲವರಿಗೆ ಮಾತ್ರ ನಿಯಮ ಇದೆ. ಈ ಹಿಂದೆಯೂ ಇಂತಹ ಘಟನೆಗಳನ್ನು ನಾನು ನೋಡಿದ್ದೇನೆ. ನಾನು ನೈತಿಕತೆಗೆ ಸರಿಯಾಗಿ ನಡೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

     ಈ ಹಿಂದೆ ಪಕ್ಷದ ಎಲ್ಲ ಸಭೆಗಳಿಂದ ಬಿಷ್ಣೋಯಿ ದೂರವಿದ್ದರು. ಹರಿಯಾಣದ ರಾಜ್ಯಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳ ಪೈಕಿ ಬಿಜೆಪಿಯ ಕೃಷ್ಣಲಾಲ್ ಪನ್ವರ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಜಯ ಗಳಿಸಿದ್ದರು.

  • ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ

    ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ

    ಬೆಂಗಳೂರು: ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ಶಾಸಕ ಹೆಚ್‌ಡಿ ರೇವಣ್ಣ ಅವರ ಮತ ತಿರಸ್ಕೃತವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಅವರ ಮತ ಸಿಂಧು ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ತಿಳಿಸಿದ್ದಾರೆ.

    ರೇವಣ್ಣ ಮತವನ್ನು ಹಾಕಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬ್ಯಾಲೆಟ್ ಪೇಪರ್ ತೋರಿಸಿದ್ದರು. ಜೆಡಿಎಸ್ ಶಾಸಕರಿಗೆ ಮಾತ್ರ ತೋರಿಸಬೇಕಾದ ರೇವಣ್ಣ ಡಿಕೆಶಿಗೆ ತೋರಿಸಿದ್ದಾರೆ ಎಂದು ಬಿಜೆಪಿ ಏಜೆಂಟರು ಕೊಠಡಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರೇವಣ್ಣ ಅವರ ಮತವನ್ನು ತಿರಸ್ಕೃತಗೊಳಿಸಬೇಕೆಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ದೂರಿನನ್ವಯ ಚುನಾವಣಾಧಿಕಾರಿಗಳು ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ರೀತಿಯ ಪರಿಶೀಲನೆ ನಡೆಸಿದ್ದಾರೆ. ರೇವಣ್ಣ ಕೇವಲ ಜೆಡಿಎಸ್ ಏಜೆಂಟರಿಗೆ ತೋರಿಸಿ ಮತ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟರಿಗೆ ತೋರಿಸಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲೂ ಮತ ಅಸಿಂಧು ಆಗುವುದಿಲ್ಲ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಆದೇಶ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಚುನಾವಣಾಧಿಕಾರಿಯ ಆದೇಶ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡುವ ಸಾಧ್ಯತೆಯಿದೆ. ತಮ್ಮ ದೂರನ್ನು ಪರಿಶೀಲಿಸುವಂತೆ ಕೈ ಪಾಳಯದಿಂದ ಪತ್ರ ಬರೆಯುವ ಸಾಧ್ಯತೆಯಿದೆ.

  • ಮುಸ್ಲಿಂ ವೋಟ್ ಬ್ಯಾಂಕ್‍ಗಾಗಿ ದೇಶಭಕ್ತಿಗೆ ತೊಂದರೆ ಕೊಡಬೇಡಿ: ಮುತಾಲಿಕ್

    ಮುಸ್ಲಿಂ ವೋಟ್ ಬ್ಯಾಂಕ್‍ಗಾಗಿ ದೇಶಭಕ್ತಿಗೆ ತೊಂದರೆ ಕೊಡಬೇಡಿ: ಮುತಾಲಿಕ್

    ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ನೀವು ಮುಸ್ಲಿಂ ವೋಟ್ ತೆಗೆದುಕೊಳ್ಳುವ ಸಲುವಾಗಿ ರಾಷ್ಟ್ರೀಯ ದೇಶಭಕ್ತಿಗೆ ತೊಂದರೆ ಕೊಡಬೇಡಿ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವಾಗ ಯಾವಾಗ ಎಲೆಕ್ಷನ್ ಬರುತ್ತೆ ಆಗ ಆರ್‍ಎಸ್‍ಎಸ್‍ನ ಬೈಯುತ್ತಿರುತ್ತಾರೆ. ಮುಸ್ಲಿಂ ವೋಟ್ ಸಲುವಾಗಿ ನೀವು ಆರ್‍ಎಸ್‍ಎಸ್ ಅನ್ನು ಬೈಯತ್ತೀರಿ. ನೀವು ಮುಸ್ಲಿಂ ವೋಟ್ ಸಲುವಾಗಿ ದೇಶಭಕ್ತಿಗೆ ತೊಂದರೆ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೋಮಾಂಸ ತಿನ್ನುವವರ ಜೊತೆ ಬೇಡ, ಹಿಂದೂಗಳು ಹಿಂದೂ ಡ್ರೈವರ್ ಜೊತೆ ದೇವಾಲಯಕ್ಕೆ ಹೋಗಲಿ: ಭಾರತ್ ರಕ್ಷಣ್ ವೇದಿಕೆ

    ನೀವು ಆರ್‍ಎಸ್‍ಎಸ್ ಅನ್ನು ಅಲ್ ಖೈದಾಗೆ ಹೋಲಿಸುತ್ತೀರಿ. ಅಲ್ ಖೈದಾ ಕೈಯಲ್ಲಿ ಬಾಂಬ್ ಹಿಡಿದುಕೊಂಡು ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ಮಾಡುತ್ತಾ ತೀರುಗುವವರು ಅನ್ನೋದು ಗೊತ್ತಿದೆ. ಆರ್‍ಎಸ್‍ಎಸ್ ಎಂದಾದರೂ ಬಾಂಬ್, ಬಂದೂಕು ಹಿಡಿದಿರುವದನ್ನಾ ನೀವು ನೋಡಿದ್ದಿರಾ. ದೇಶದ್ರೋಹಿ ಕೃತ್ಯ ಮಾಡಿದ್ದರ ಬಗ್ಗೆ ಒಂದಾದರು ಉದಾಹರಣೆ ಇದೆಯಾ? ಆರ್‍ಎಸ್‍ಎಸ್‍ನ ಅಲ್ ಖೈದಾಗೆ ಹೋಲಿಸುವುದು ಅತ್ಯಂತ ಖಂಡನೀಯ ಎಂದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಸಿದ್ದರಾಮಯ್ಯ ನೀವು ಅಕ್ಷಮ್ಯ ಅಪರಾಧವನ್ನ ಮಾಡುತ್ತಿದ್ದಿರಿ. ನೀವು ಮುಸ್ಲಿಂ ವೋಟ್ ತೆಗೆದುಕೊಳ್ಳಿ ಬೇಡ ಅನ್ನುವುದಿಲ್ಲ. ಆದರೆ ರಾಷ್ಟ್ರೀಯ ದೇಶ ಭಕ್ತಿ ಹಿನ್ನೆಲೆಗೆ ತೊಂದರೆ ಕೊಡಬೇಡಿ ಎಂದು ವಾಗ್ದಾಳಿ ನಡೆಸಿದರು.

  • ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದ್ರೆ ಓಟ್ ಹಾಕಿ ಕೂಲಿ ಕೊಡಿ: ಪ್ರೀತಂಗೌಡ

    ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದ್ರೆ ಓಟ್ ಹಾಕಿ ಕೂಲಿ ಕೊಡಿ: ಪ್ರೀತಂಗೌಡ

    ಹಾಸನ: ನಾನು ಬದುಕಿರುವವರೆ ಬಿಜೆಪಿಯಲ್ಲೇ ಇರುತ್ತೇನೆ. ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದರೆ ಓಟ್ ಹಾಕಿ ಕೂಲಿ ಕೊಡಿ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

    ಹಾಸನದ ಟಿಪ್ಪು ನಗರದ ಜನರಿಗೆ ಮನೆಗಳ ಹಕ್ಕು ಪತ್ರ ವಿತರಣೆ ಸಂಬಂಧ ಚರ್ಚೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅನೇಕರಲ್ಲಿ ಶಾಸಕ ಪ್ರೀತಂಗೌಡ ಕಾಂಗ್ರೆಸ್‍ಗೆ ಸೇರುತ್ತಾರೆ ಎನ್ನುವ ಗೊಂದಲ ಇದೆ. ಅದಕ್ಕಾಗಿಯೇ ಮುಸಲ್ಮಾನರಿಗೆ ಬಹಳ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲರನ್ನು ಸರಿಮಾಡಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಇದೆ. ಆದರೆ ಯಾವುದೇ ಕಾರಣಕ್ಕೂ ಆ ರೀತಿಯ ಭಾವನೆ ಹೊಂದಿಲ್ಲ. ನಾನು ಇರುವುದನ್ನು ನೇರವಾಗಿ ಹೇಳುತ್ತೇನೆ. ನನಗೆ ಸುಳ್ಳು ಹೇಳಿ ಅಭ್ಯಾಸ ಇಲ್ಲ. ನಾನು ಬದುಕಿರುವವರೆಗೂ ಬಿಜೆಪಿಯಲ್ಲಿಯೇ ಇರುತ್ತೇನೆ. ಅದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ನಾನು ಬಂದಿರುವುದು ಓಟ್ ಕೇಳಲು ಅಲ್ಲ, ರಾಜಕಾರಣದ ಬಗ್ಗೆ ಮಾತನಾಡಲು ಅಲ್ಲ. ನಾನು ಮಾಡಿರುವ ಕೆಲಸಕ್ಕೆ ನಿಮಗೆ ಪ್ರೀತಿ ಬಂದರೆ ಓಟ್ ಹಾಕಿ ಕೂಲಿ ಕೊಡಿ. ಇಲ್ಲ ಶಾಸಕರೇ ನಿಮ್ಮ ಮೇಲೆ ಪ್ರೀತಿ ಇಲ್ಲ. ಓಟ್ ಹಾಕಲ್ಲ ಅಂದರೆ ನನಗೆ ಏನೂ ಬೇಜಾರಿಲ್ಲ. ನಾನು ವಿನಯಪೂರ್ವಕವಾಗಿ ಯಾರು ಬಡವರಿದ್ದಾರೆ, ಅವರಿಗೆ ಸಹಾಯ ಮಾಡಲು ಬಂದಿದ್ದೀನಿ. ನನ್ನ ಎದುರು ದಳದಿಂದ ಕಾಂಗ್ರೆಸ್‍ನಿಂದ ಯಾರು ನಿಲ್ಲುತ್ತಾರೆ ನೋಡಿ. ಎಲ್ಲರನ್ನು ತುಲನೆ ಮಾಡಿ ನಾನು ನಿಮಗೆ ಸಹಾಯ ಮಾಡಿದ್ದರೆ, ನನಗೆ ಮತ ಕೊಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಹರಿ ಸಂಸ್ಥೆ ನಿರ್ಮಿಸಿದ ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ


    preetham gowda, Vote, BJP, Hassan

  • ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಮೇಯರ್ ವಿರುದ್ಧ ಕೇಸ್

    ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಮೇಯರ್ ವಿರುದ್ಧ ಕೇಸ್

    ಲಕ್ನೋ: ಚುನಾವಣಾ ಆಯೋಗವು ಮತದಾನ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದೆ. ಆದರೆ ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಕಾನ್ಪುರ ಮೇಯರ್ ಪ್ರಮೀಳ ಪಾಂಡೆ ವಿರುದ್ಧ ಪ್ರಕರಣ ದಾಖಲಾಗಿದೆ.

    ಉತ್ತರ ಪ್ರದೇಶದಲ್ಲಿ ಫೆ.20 ರಿಂದ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಈ ವೇಳೆ ಮತಚಲಾಯಿಸಿದ ಬಳಿಕ ಪ್ರಮೀಳ ಪಾಂಡೆ ಸೆಲ್ಫಿ ಕ್ಲಿಕ್ಕಿಸಿ ವೀಡಿಯೋ ತೆಗೆದಿದ್ದಾರೆ. ಇದು ಚುನಾವಣೆ ನಿಯಮಗಳ ಉಲ್ಲಂಘನೆಯಾಗಿದ್ದು ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    ಕಾನ್ಪುರ ಮೇಯರ್ ಪ್ರಮೀಳಾ ಪಾಂಡೆ ಅವರು ಇಂದು ಮತಗಟ್ಟೆಯೊಳಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ಲಿಕ್ ಮಾಡಿ ವಿವಾದವನ್ನು ಸೃಷ್ಟಿಸಿದರು. ಮತದಾನದಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಫೋಟೋವನ್ನು ಎಂಎಸ್ ಪಾಂಡೆ ಹಂಚಿಕೊಂಡಿದ್ದಾರೆ. ಶ್ರೀಮತಿ ಪಾಂಡೆ ಅವರು ಕಾನ್ಪುರದ ಹಡ್ಸನ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅವರು ಮತದಾನ ಮಾಡುತ್ತಿರುವಾಗ ವೀಡಿಯೊವನ್ನು ಚಿತ್ರೀಕರಿಸಿದರು ಮತ್ತು ಹಲವಾರು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ.

    ವಿಷಯ ತಿಳಿದು ಜಿಲ್ಲಾಧಿಕಾರಿಗಳು ಆಕೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮೇಯರ್ ಪಾಂಡೆ ಅವರು ಹಡ್ಸನ್ ಶಾಲೆಯ ಮತಗಟ್ಟೆಯೊಳಗೆ ತಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಮತದಾನ ಮಾಡುವಾಗ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಶರ್ಮಾ ಹೇಳಿದ್ದಾರೆ.

    ಉತ್ತರ ಪ್ರದೇಶದ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು ಮೂರನೇ ಹಂತದ ವಿಧಾನಸಭೆ ಚುನಾವಣೆಯಾಗಿದ್ದು, ಏಳು ಸುತ್ತುಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

  • ಗೌಪ್ಯತೆ ಕಾಪಾಡಲು ಕನ್ನಡಕ ಧರಿಸಿ ಮತ ಚಲಾಯಿಸಿದ ಟ್ವಿನ್ಸ್!

    ಚಂಡೀಗಢ: ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಸಯಾಮಿ ಅವಳಿಗಳಾದ ಸೋಹನ್ ಸಿಂಗ್ ಹಾಗೂ ಮೋಹನ್ ಸಿಂಗ್ ಅಮೃತಸರ ಜಿಲ್ಲೆಯ ಮನ್ವಾಲ್ ಪ್ರದೇಶದಲ್ಲಿ ಮತ ಚಲಾಯಿಸಿದ್ದಾರೆ.

    ಸಯಾಮಿ ಅವಳಿಯನ್ನು ಪ್ರತ್ಯೇಕ ಮತದಾರರನ್ನಾಗಿ ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ಚುನಾವಣಾ ಅಧಿಕಾರಿ ಅವರಿಗೆ (ಆರ್‌ಒ) ಮತ ಚಲಾವಣೆಯ ಗೌಪ್ಯತೆ ಕಾಪಾಡಲು ಕನ್ನಡಕಗಳನ್ನು ನೀಡಿದ್ದಾರೆ.

    ಸೋಹನ್ ಹಾಗೂ ಮೋಹನ್ 2021ರಲ್ಲಿ 18 ವರ್ಷಕ್ಕೆ ಕಾಲಿಟ್ಟಿದ್ದು, ಅವರು ಸಯಾಮಿ ಅವಳಿಗಳಾಗಿದ್ದರೂ ಎರಡು ಪ್ರತ್ಯೇಕ ಚುನಾವಣಾ ಗುರುತಿನ ಚೀಟಿ ಪಡೆದಿದ್ದಾರೆ. ಇದು ಅವರಿಬ್ಬರ ಮೊದಲ ಮತದಾನವೂ ಆಗಿದೆ. ಇದನ್ನೂ ಓದಿ: 58 ವರ್ಷದ ಸಮಸ್ಯೆ ಬಗೆಹರಿಸಿದ ಬಸಪ್ಪ – ಪವಾಡ ನೋಡಿ ನಿಬ್ಬೆರಗಾದ ಜನರು

    ಸೋಹನ್ ಹಾಗೂ ಮೋಹನ್ 2003ರ ಜೂನ್ 13ರಂದು ಜನಿಸಿದ್ದು, ಪೋಷಕರು ಅವಳಿ ಮಕ್ಕಳ ಕೈಬಿಟ್ಟಿದ್ದರು. ಹೀಗಾಗಿ ಅಮೃತಸರದ ಅನಾಥಾಶ್ರಮ ಈ ಅವಳಿಗಳನ್ನು ದತ್ತು ತೆಗೆದುಕೊಂಡಿತ್ತು. ಇದೀಗ ಈ ಸಯಾಮಿ ಅವಳಿಗಳು ಮತ ಚಲಾಯಿಸಿರುವುದೇ ವಿಶೇಷ ಪ್ರಕರಣವಾಗಿದೆ. ಇದನ್ನೂ ಓದಿ: ಚೀನಾ-ಭಾರತದ ಸಂಬಂಧ ಬಿಗಡಾಯಿಸುತ್ತಿದೆ: ಜೈಶಂಕರ್

    ಭಾನುವಾರ ಪ್ರಾರಂಭವಾದ ಮತದಾನ ಬೆಳಗ್ಗೆ 8 ಗಂಟೆಯಿAದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

  • ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್

    ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್

    ಲಕ್ನೋ: ಕಾಂಗ್ರೆಸ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮತಕ್ಕಾಗಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ಬಿಜೆಪಿ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಚನ್ನಿ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡುವುದನ್ನು ಖಂಡಿಸುತ್ತೇನೆ. ಪ್ರಿಯಾಂಕಾ ಗಾಂಧಿ ಕೂಡ ಉತ್ತರ ಪ್ರದೇಶಕ್ಕೆ ಸೇರಿದವರು. ಆದ್ದರಿಂದ ಅವರನ್ನು ಬರಲು ಬಿಡಬಾರದು ಎಂದು ವಾಗ್ದಾಳಿ ನಡೆಸಿದ್ದರು.

    ಇದೀಗ ಸಂದರ್ಶನವೊಂದರಲ್ಲಿ ಯೋಗಿ ಆದಿತ್ಯನಾಥ್ ಅವರು ಗಾಂಧಿ ಮತ್ತು ನೆಹರು ಹೆಸರಿನಲ್ಲಿ ದೇಶಕ್ಕೆ ಪದೇ, ಪದೇ ದ್ರೋಹ ಮಾಡಲಾಗುತ್ತಿದೆ. ಜಾತಿವಾದ, ಪ್ರಾದೇಶಿಕತೆ, ಭಾಷಾವಾದ, ಭಯೋತ್ಪಾದನೆ, ನಕ್ಸಲಿಸಂ ಇವೆಲ್ಲವೂ ಭಾರತಕ್ಕೆ ಕಾಂಗ್ರೆಸ್ ನೀಡಿದ ಗಾಯಗಳಾಗಿವೆ ಮತ್ತು ಕಾಂಗ್ರೆಸ್ ಇಂದು ತಾನು ಬಿತ್ತಿದ್ದನ್ನು ಕೊಯ್ಯುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

    ಉತ್ತರ ಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಚರಣ್‍ಜಿತ್ ಸಿಂಗ್ ಚನ್ನಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪಂಜಾಬ್ ಸಿಎಂ ರವಿದಾಸ್ ಜಯಂತಿ ಪ್ರಯುಕ್ತ ವಾರಣಾಸಿಗೆ ಬಂದಿದ್ದರು. ಅವರು ಸಂತ ರವಿದಾಸ್ ಅವರಿಂದ ಸ್ವಲ್ಪ ಸ್ಫೂರ್ತಿ ಪಡೆದಿದ್ದರೆ, ಅಂತಹ ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು